ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-10-2021

ಶೋರಾಪೂರ ಪೊಲೀಸ್ ಠಾಣೆ
155/2021 ಕಲಂ: 498(ಎ), 323, 504, 506 ಸಂಗಡ 34 ಐಪಿಸಿ ಮತ್ತು ಕಲಂ 3, 4 ಡಿ.ಪಿ ಆಕ್ಟ್ 1961 : 09/10/2021 ರಂದು 3-30 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀಮತಿ ಸಾವಿತ್ರಿ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನಗೆ 2015 ನೇ ಸಾಲಿನಲ್ಲಿ ನಮ್ಮೂರಿನ ಭೀಮಣ್ಣ ತಂದೆ ಸಿದ್ದಪ್ಪ ಜಂತಲಯರ ಇವನಿಗೆ ಕೊಟ್ಟು ಮದುವೆ ಮಾಡಬೇಕೆಂದು ನಮ್ಮ ಮನೆಯಲ್ಲಿ ಮಾಡಿದ ಮದುವೆ ನಿಶ್ಚಯ ಕಾಲಕ್ಕೆ ವರನಿಗೆ 4 ತೊಲೆ ಬಂಗಾರ, 50,000/- ರೂ.ಗಳು ಹಣ ಹಾಗೂ ಇನ್ನಿತರೆ ಸುಲಗಿ ಸಾಮಾನುಗಳನ್ನು ಕೊಡಿಸುವಂತೆ ವರನ ಕಡೆಯವರು ಇಟ್ಟ ಬೇಡಿಕೆಯಂತೆ ವರದಕ್ಷಿಣೆ ಕೊಡಲು ಒಪ್ಪಿಕೊಂಡಿದ್ದು ಇರುತ್ತದೆ. ನಂತರ ನನ್ನ ಮದುವೆ ನಿಶ್ಚಯ ಕಾಲಕ್ಕೆ ಮಾತನಾಡಿದ ಪ್ರಕಾರ ನನ್ನ ತಂದೆ-ತಾಯಿಯವರು ಕೂಡಿ ನನ್ನ ಗಂಡನಿಗೆ 4 ತೊಲೆ ಬಂಗಾರ, 50,000/- ರೂ.ಗಳು ಹಣ ಮತ್ತು ಅಂದಾಜು 20,000/- ರೂ.ಗಳು ಕಿಮ್ಮತ್ತಿನ ಗೃಹಪಯೋಗಿ ವಸ್ತುಗಳನ್ನು ಕೊಟ್ಟು, ದಿನಾಂಕಃ 01/05/2015 ರಂದು ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಜೊಟ್ಟಿರುತ್ತಾರೆ. ಮದುವೆ ನಂತರ ಒಂದು ವರ್ಷ ನನ್ನ ಗಂಡನು ನನಗೆ ಚೆನ್ನಾಗಿ ನೋಡಿಕೊಂಡಿರುತ್ತಾನೆ. ನಂತರ ಅಂದರೆ ಕಳೆದ 5 ವರ್ಷಗಳ ಹಿಂದೆ ನನಗೆ ನನ್ನ ಗಂಡನಾದ 1) ಭೀಮಣ್ಣ ತಂದೆ ಸಿದ್ದಪ್ಪ ಜಂತಲಯರ, ಮಾವನಾದ 2) ಸಿದ್ದಪ್ಪ ತಂದೆ ಹಣಮಂತರಾಯ ಜಂತಲಯರ, ಅತ್ತೆಯಾದ 3) ಸಿದ್ದಮ್ಮ ಗಂಡ ಸಿದ್ದಪ್ಪ ಜಂತಲಯರ, ಹಾಗು ಭಾವನಾದ 4) ಈಶ್ವರ ತಂದೆ ಸಿದ್ದಪ್ಪ ಜಂತಲಯರ ಇವರೆಲ್ಲರೂ ನಿನ್ನ ಗಂಡನಿಗೆ ಕಾರ ನಡೆಸಲು ಬರುತ್ತದೆ, ಸ್ವಂತ ಕಾರ ಖರೀದಿಸಿ ಬಾಡಿಗೆಗೆ ತಿರುಗಾಡಿದರೆ ಹೆಚ್ಚು ಗಳಿಸಬಹುದು, ಆದ್ದರಿಂದ ನಿಮ್ಮ ತವರು ಮನೆಯಿಂದ ಹೊಸ ಕಾರ ಖರೀದಿಸಲು 4 ಲಕ್ಷ ರೂಪಾಯಿ ಹಣ ತಗೆದುಕೊಂಡು ಬರುವಂತೆ ಹೇಳಿದರು. ಈ ವಿಷಯವನ್ನು ನಾನು ನನ್ನ ತಂದೆ-ತಾಯಿಯವರಿಗೆ ತಿಳಿಸಿದಾಗ ಅವರು, ಅಷ್ಟೊಂದು ಹಣ ಕೊಡಲು ಆಗುವದಿಲ್ಲ ಅಂತ ಹೇಳಿದ್ದನ್ನು ನನ್ನ ಗಂಡನ ಮನೆಯವರಿಗೆ ತಿಳಿಸಿದಾಗ ಅವರೆಲ್ಲರೂ ಸೇರಿ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲು ಆರಂಭಿಸಿದರು. ಅದನ್ನು ಸಹಿಸಿಕೊಂಡು ಹಾಗೇ ಜೀವನ ಸಾಗಿಸುತ್ತಿದ್ದೇನು. ಆದರೂ ಸಹ ಅವರು ಇನ್ನು 4 ಲಕ್ಷ ರೂಪಾಯಿ ತಂದರೆ ಮನೆಯಲ್ಲಿ ಇರು, ಅಂತ ಹಿಂಸೆ ಕೊಡಲಾರಂಭಿಸಿದರಿಂದ ದಿನಾಂಕ: 03/10/2021 ರಂದು ನನ್ನ ತವರು ಮನೆಗೆ ಬಂದಿರುತ್ತೇನೆ. ದಿನಾಂಕ: 06/10/2021 ರಂದು ಸಾಯಂಕಾಲ 5-30 ಗಂಟೆಗೆ ನನ್ನ ಗಂಡ, ಮಾವ, ಅತ್ತೆ ಹಾಗು ಭಾವ 4 ಜನರು ನಮ್ಮ ತವರು ಮನೆಯ ಹತ್ತಿರ ಬಂದು ಸೂಳೆ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ಕೈಯಿಂದ ತಲೆಗೆ, ಹೊಟ್ಟೆಗೆ, ಬೆನ್ನಿಗೆ ಹೊಡೆಯುತ್ತಿದ್ದಾಗ ನನ್ನ ತಂದೆ-ತಾಯಿ ಹಾಗು ಉದಯಕುಮಾರ ಎಲ್ಲರೂ ಬಂದು ಬಿಡಿಸಿರುತ್ತಾರೆ. ಆಗ ಅವರೆಲ್ಲರೂ 4 ಲಕ್ಷ ರೂಪಾಯಿ ತಗೆದುಕೊಂಡು ಬಂದರೆ ಒಳ್ಳೆಯದು, ಇಲ್ಲದಿದ್ದರೆ ನಿನಗೆ ಖಲಾಸ ಮಾಡಿ ಬೇರೆ ಮದುವೆ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 155/2021 ಕಲಂ. 498(ಎ), 323, 504, 506 ಸಂಗಡ 34 ಐಪಿಸಿ ಮತ್ತು ಕಲಂ 3, 4 ಡಿ.ಪಿ ಆಕ್ಟ್ 1961 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 156/2021 ಕಲಂ: 326, 307 ಸಂಗಡ 34 ಐಪಿಸಿ : ಇಂದು ದಿನಾಂಕಃ 09/10/2021 ರಂದು 6:30 ಪಿಎಮ್ಕ್ಕೆ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ವಿಠಲ ತಂದೆ ಯಮನಪ್ಪ ಹಡಪದ ವಯಾ|| 53 ಜಾ|| ಹಡಪದ ಉ|| ಕ್ಷೌರಿಕ ಸಾ|| ಆಶ್ರಯ ಕಾಲೋನಿ ತಾಳಿಕೋಟಿ ರೋಡ್ ಹುಣಸಗಿ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಮ್ಮ ಅಣ್ಣನಾದ ಸಂಜೀವಪ್ಪ ಈತನು ಸುರಪುರ ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಸುಮಾರು 20 ವರ್ಷಗಳಿಂದ ಕ್ಷೌರಿಕನಾಗಿ ಕೆಲಸ ಮಾಡಿಕೊಂಡಿದ್ದನು. ಈಗ್ಗೆ 2 ವರ್ಷಗಳ ಹಿಂದೆ ಆತನಿಗೆ ವೈಯಸ್ಸಾಗಿ ನಡೆಯಲು ಬಾರದೇ ಇದ್ದುದರಿಂದ ನಾನು ಸುಮಾರು 2 ವರ್ಷಗಳಿಂದ ಹಂದ್ರಾಳ ಗ್ರಾಮದಲ್ಲಿ ವಾರದಲ್ಲಿ 3 ದಿನ ಕ್ಷೌರಿಕ ಕೆಲಸ ಮಾಡಿಕೊಂಡು ಬಂದಿರುತ್ತೇನೆ. ಇನ್ನುಳಿದ ದಿನಗಳಲ್ಲಿ ಹುಣಸಗಿಯಲ್ಲಿಯೇ ಕ್ಷೌರಿಕ ಕೆಲಸ ಮಾಡಿಕೊಂಡಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ: 08/10/2021 ರಂದು ಶುಕ್ರವಾರದಂದು ಬೆಳಿಗ್ಗೆ ನಾನು ಹುಣಸಗಿಯಿಂದ ಹಂದ್ರಾಳ ಗ್ರಾಮಕ್ಕೆ ಬಂದು ಎಂದಿನಂತೆ ಕ್ಷೌರಿಕೆ ಕೆಲಸ ಮುಗಿಸಿ ರಾತ್ರಿ ವೇಳೆಯಲ್ಲಿ ಚಂದ್ರಕಾಂತ ಪಾಟೀಲ ಇವರ ಸೆಡ್ನಲ್ಲಿ ಮಲಗಲು ಹೋಗಿದ್ದೆನು. ಸದರಿ ಸೆಡ್ನ ಬಾಜು ಗೋಪಿರೆಡ್ಡಿ ಇವರ ಅಂಗಡಿಯಿದ್ದು ಅಂಗಡಿಯಲ್ಲಿ ಗೋಪಿರೆಡ್ಡಿ ಇವರು ಮಲಗಿದ್ದರು. ನಾನು ಕೂಡ ಚಂದ್ರಕಾಂತ ಪಾಟೀಲ ಇವರ ಸೆಡ್ಡಿನ ಮುಂದಿನ ಬಿದಿರಿನ ಮಂಚದ ಮೇಲೆ ಮಲಗಿದ್ದಾಗ ರಾತ್ರಿ 11.30 ಗಂಟೆ ಸುಮಾರಿಗೆ ಒಂದು ಮೋಟರ ಸೈಕಲ್ ಮೇಲೆ ಇಬ್ಬರು ವ್ಯಕ್ತಿಗಳು ಬಂದು ನನ್ನ ಹತ್ತಿರ ಮೋಟರ ಸೈಕಲ್ ನಿಲ್ಲಿಸಿದ್ದು, ಆಗ ನಾನು ಯಾರು ನೀವು ಅಂತ ಕೇಳಿದಾಗ ಅವರಲ್ಲಿಯ ಒಬ್ಬ ವ್ಯಕ್ತಿ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಏನೂ ಮಾತಾಡದೇ ನನ್ನ ಸಮೀಪ ಬಂದು ನನ್ನ ಎಡಗೈ ಹಿಡಿದುಕೊಂಡನು ಆಗ ನಾನು ಆತನ ಎದೆಯ ಮೇಲಿನ ಅಂಗಿ ಹಿಡಿದುಕೊಂಡಾಗ ಒಮ್ಮೆಲೆ ತನ್ನಲ್ಲಿದ್ದ ಚಾಕುವಿನಿಂದ ಕೊಲೆ ಮಾಡುವ ಉದ್ದೇಶದಿಂದ ನನ್ನ ಎದೆಯ ಎಡಭಾಗಕ್ಕೆ, ಎಡಗೈ ರಟ್ಟೆಗೆ, ಮೂಗಿನ ಎಡಭಾಗಕ್ಕೆ ಜೋರಾಗಿ ಚುಚ್ಚಿ ಭಾರಿ ರಕ್ತಗಾಯಪಡಿಸಿದನು ಅಲ್ಲದೆ ಎಡಗಾಲ ಮೊಳಕಾಲ ಕೆಳಗೆ ಚಾಕುವಿನಿಂದ ತರಚಿದ ಗಾಯಪಡಿಸಿದನು. ಆಗ ನಾನು ನೆಲಕ್ಕೆ ಬಿದ್ದು ಜೋರಾಗಿ ಚೀರಾಡಲಿಕ್ಕೆ ಹತ್ತಿದಾಗ ಬಾಜು ಅಂಗಡಿಯಲ್ಲಿ ಮಲಗಿದ್ದ ಗೋಪಿರೆಡ್ಡಿ ಈತನು ಬಂದು ನೋಡುವಷ್ಟರಲ್ಲಿ ಆ ಇಬ್ಬರು ದುಷ್ಕಮರ್ಿಗಳು ತಾವು ತೆಗೆದುಕೊಂಡು ಬಂದ ಮೋಟರ ಸೈಕಲ ಸಮೇತ ಪರಾರಿಯಾದರು. ರಾತ್ರಿಯಾಗಿದ್ದರಿಂದ ಇಬ್ಬರು ವ್ಯಕ್ತಿಗಳ ಹೆಸರು ವಿಳಾಸ ಗೊತ್ತಿರುವದಿಲ್ಲ ಮತ್ತು ಅವರು ತಂದ ಮೋಟರ ಸೈಕಲ್ ನಂಬರ ಸಹ ಗೊತ್ತಾಗಿರುವದಿಲ್ಲ. ನಂತರ ಗೋಪಿರೆಡ್ಡಿ ಇವರು ನನ್ನ ಮಗನಾದ ಯಮನಪ್ಪ ಈತನಿಗೆ ಫೋನ್ ಮಾಡಿ ಹಂದ್ರಾಳ ಗ್ರಾಮಕ್ಕೆ ಕರೆಯಿಸಿ ಇಬ್ಬರು ಕೂಡಿ ನನಗೆ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಕರೆದುಕೊಂಡು ಬಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ಹೋಗಿ ಅಲ್ಲಿನ ವೈದ್ಯರ ಸಲಹೆಯಂತೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಯಾರೋ ಇಬ್ಬರು ದುಷ್ಕಮರ್ಿಗಳು ಮೋಟರ ಸೈಕಲ್ ಮೇಲೆ ಬಂದು ಯಾವುದೋ ಉದ್ದೇಶಕ್ಕಾಗಿ ನನಗೆ ಕೊಲೆ ಮಾಡಲು ಪ್ರಯತ್ನಿಸಿ ಚಾಕುವಿನಿಂದ ಚುಚ್ಚಿ ಭಾರಿ ರಕ್ತಗಾಯಪಡಿಸಿ ಓಡಿಹೋಗಿದ್ದು, ಸದರಿ ಇಬ್ಬರು ವ್ಯಕ್ತಿಗಳ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 11.30 ಪಿಎಮ್ಕ್ಕೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 156/2021 ಕಲಂ: 326, 307 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

 

ಕೊಡೇಕಲ್ ಪೊಲೀಸ್ ಠಾಣೆ
ಗುನ್ನೆ ನಂ.62/2021 ಕಲಂ: 323, 504, 506, 498(ಎ) ಐ.ಪಿ.ಸಿ : ಇಂದು ದಿನಾಂಕ :09.10.2021 ರಂದು ಮಧ್ಯಾಹ್ನ 12:00 ಗಂಟೆಗೆ ಪಿರ್ಯಾದಿ ಶ್ರೀಮತಿ ಅನಿತಾ ಗಂಡ ಗುಂಡಪ್ಪ ರಾಠೋಡ ವ||28 ವರ್ಷ ಉ||ಕೂಲಿಕೆಲಸ ಜಾ||ಹಿಂದೂ ಲಂಬಾಣಿ ತಾ||ಹುಣಸಗಿ ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ತಮ್ಮ ಹೇಳಿಕೆಯನ್ನು ಹೇಳಿ ಟೈಪ್ ಮಾಡಿಸಿದ್ದು ಸದರ ಪಿರ್ಯಾದಿಯ ಹೇಳಿಕೆಯ ಸಾರಾಂಶವೆನೆಂದರೆ ನನ್ನ ತವರೂರು ಪರತುನಾಯಕ ತಾಂಡಾ ರಾಜನಕೊಳುರ ಇದ್ದು ನಮ್ಮ ತಂದೆ ತಾಯಿಯವರು ಈಗ ಸುಮಾರು 12 ವರ್ಷಗಳ ಹಿಂದೆ ನನಗೆ ರಾಮಜೀ ರಾಠೋಡ ರವರ ಮಗನಾದ ಗುಂಡಪ್ಪ ರಾಠೋಡ ಇತನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ನಮ್ಮ ಮದುವೆಯು ನಮ್ಮ ಧರ್ಮದ ಸಂಪ್ರದಾಯದಂತೆ ನನ್ನ ಗಂಡನ ಮನೆಯ ಮುಂದೆ ಮದುವೆ ಕಡದರಾಳ ತಾಂಡಾದಲ್ಲಿ ಆಗಿದ್ದು, ಮದುವೆ ಕಾಲಕ್ಕೆ ನಮ್ಮ ತಂದೆ ಸುರೇಶ, ತಾಯಿ ತಾರಾಬಾಯಿ ಹಾಗೂ ನನ್ನ ಅಣ್ಣನಾದ ಅಪ್ಪಾಜಿ ಹಾಗೂ ನನ್ನ ದೊಡ್ಡಪ್ಪನಾದ ನಾರಾಯಣ ತಂದೆ ವಾಚಪ್ಪ ಜಾಧವ, ಕಾಕ ಶಿವಪ್ಪ ವಾಚಪ್ಪ ಜಾಧವ ಹಾಗೂ ನಮ್ಮ ತಾಂಡಾದ ಇತರರು ಹಾಗೂ ಕಡದರಾಳ ತಾಂಡಾದ ನನ್ನ ಗಂಡನ ತಂದೆ ರಾಮಜೀ, ತಾಯಿ ಸುನಾಬಾಯಿ ಹಾಗೂ ಅವರ ಸಂಬಂಧಿಕರ ಸಮಕ್ಷಮದಲ್ಲಿ ಆಗಿದ್ದು, ಮದುವೆಯಾದ ನಂತರ ನಾನು ತವರು ಮನೆಯಿಂದ ಗಂಡನ ಮನೆಗೆ ನಡೆಯಲಿಕ್ಕೆ ಬಂದಿದ್ದು ಆರು-ಏಳು ವರ್ಷಗಳವರೆಗೆ ನನ್ನ ಗಂಡನ ಮನೆಯಲ್ಲಿ ನನಗೆ ನನ್ನ ಗಂಡ, ಅತ್ತೆ, ಮಾವ ರವರು ಒಳ್ಳೆಯ ರೀತಿಯಿಂದ ನಡೆಸಿಕೊಂಡಿದ್ದು ನಮ್ಮ ದಾಂಪತ್ಯದಿಂದ ನನಗೆ ಆಕಾಶ, ವಿಕಾಸ, ಮೌನೇಶ ಅಂತ ಮೂರು ಜನ ಗಂಡು ಮಕ್ಕಳು ಜನಿಸಿದ್ದು ಈಗ ನಾಲ್ಕೈದು ವರ್ಷಗಳಿಂದ ನನ್ನ ಗಂಡನಾದ ಗುಂಡಪ್ಪನು ಯಾವುದೇ ಕೆಲಸಕ್ಕೆ ಹೋಗದೇ ವಿಪರೀತವಾಗಿ ಸೆರೆ ಕುಡಿಯುತ್ತಾ ಸೋಮಾರಿಯಾಗಿ ತಿರುಗಾಡುತ್ತಿದ್ದು ನಾನು ಅವನಿಗೆ ಸೆರೆ ಕುಡಿಯುವದನ್ನು ಬಿಡು ಕೂಲಿಕೆಲಸಕ್ಕೆ ಹೋಗು ಮಕ್ಕಳು ದೊಡ್ಡವರಾಗಿದ್ದಾರೆ ನಾನೊಬ್ಬಳೆ ದುಡಿಯುತ್ತಿರುವದರಿಂದ ಸಂಸಾರ ಮಾಡುವದು ಕಠಿಣವಾಗುತ್ತಿದೆ ಅಂತ ಅಂದರೂ ಕೂಡ ನನ್ನ ಗಂಡನು ಸೆರೆ ಕುಡಿಯುವದನ್ನು ಬಿಡದೇ ನನಗೆ ದಿನಾಲೂ ಸೆರೆ ಕುಡಿಯಲು ಹಣ ಕೊಡು ಅಂತ ಪೀಡಿಸುತ್ತಿದ್ದು ನಾನು ಅವನಿಗೆ ಹಣ ಕೊಡದಿದ್ದಾಗ ನನಗೆ ಹೊಡೆಬಡೆ ಮಾಡುವದು ಮಾಡುತ್ತಾ ಬಂದಿದ್ದು, ನಾನು ನನ್ನ ಅತ್ತೆ ಸನಾಬಾಯಿ, ಮಾವ ರಾಮಜೀ ರವರಿಗೆ ನಿಮ್ಮ ಮಗನಿಗೆ ಸೆರೆ ಕುಡಿಯುವದನ್ನು ಬಿಟ್ಟು ಸರಿಯಾಗಿ ದುಡಿಯಲು ಹೇಳಿರಿ ಅಂತ ಅಂದಾಗ ಅವರೂ ಕೂಡ ನನ್ನ ಗಂಡನಿಗೆ ಎಷ್ಟೇ ಬುದ್ದಿಮಾತು ಹೇಳಿದರೂ ಕೂಡ ನನ್ನ ಗಂಡನು ಸೆರೆ ಕುಡಿಯುವದನ್ನು ಬಿಡದೆ ಇದ್ದು ನಮ್ಮ 2 ಎಕರೆ ಜಮೀನಿನಲ್ಲಿ ಒಂದು ಎಕರೆ ಜಮೀನನ್ನು ಮಾರಾಟ ಮಾಡಿದ್ದು ಅಲ್ಲದೇ ಬೇರೆಯವರ ಕಡೆ ಸೆರೆ ಕುಡಿಯಲು ಸಾಲ ಮಾಡಿದ್ದು ನಾನು ನನ್ನ ಗಂಡನಿಗೆ ಸೆರೆ ಕುಡಿಯುವದನ್ನು ಬಿಡು ಅಂದಾಗಲೆಲ್ಲಾ ಅವನು ನನಗೆ ಸೂಳೆ ನನಗೆ ಸೆರೆ ಕುಡಿಯುವದನ್ನು ಬಿಡು ಅಂತ ಹೇಳುವದಕ್ಕೆ ನೀನು ಯಾರೂ ಅಂತ ಬೈಯುವದು ಹೊಡೆಬಡೆ ಮಾಡುವದು ಮಾಡುತ್ತಾ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ಕೊಡ ಹತ್ತಿದ್ದು ಆಗ ನಾನು ಬೇಸತ್ತು ನನ್ನ ತವರು ಮನೆಗೆ ಹೋಗಿ ಈ ವಿಷಯವನ್ನು ನಮ್ಮ ತಂದೆ ಸುರೇಶ, ತಾಯಿ ತಾರಾಬಾಯಿ ಹಾಗೂ ನನ್ನ ಅಣ್ಣನಾದ ಅಪ್ಪಾಜಿ ಹಾಗೂ ನನ್ನ ದೊಡ್ಡಪ್ಪನಾದ ನಾರಾಯಣ ತಂದೆ ವಾಚಪ್ಪ ಜಾಧವ, ಕಾಕ ಶಿವಪ್ಪ ವಾಚಪ್ಪ ಜಾಧವ ರವರಿಗೆ ತಿಳಿಸಿದ್ದು ಅವರೆಲ್ಲರೂ ಈಗ 15-20 ದಿವಸಗಳ ಹಿಂದೆ ನನ್ನೊಂದಿಗೆ ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಗುಂಡಪ್ಪನಿಗೆ ಅವರ ತಂದೆ ರಾಮಜೀ, ತಾಯಿ ಸುನಾಬಾಯಿ ರವರ ಸಮಕ್ಷಮದಲ್ಲಿ ಸೆರೆ ಕುಡಿಯುವದನ್ನು ಬಿಡು ಹೆಂಡತಿ ಮಕ್ಕಳನ್ನು ಸರಿಯಾಗಿ ನೋಡಿಕೊ ಅಂತ ಬುದ್ದಿಮಾತು ಹೇಳಿ ಹೋಗಿದ್ದು ನಾನು ನನ್ನ ಗಂಡನ ಮನೆಯಲ್ಲಿಯೇ ಉಳಿದುಕೊಂಡಿದ್ದು ನಂತರ ನನ್ನ ಗಂಡನು 2-3 ದಿನ ಸೆರೆ ಕುಡಿಯುವದನ್ನು ಬಿಟ್ಟು ಮತ್ತೆ ನನಗೆ ಮೊದಲಿನಂತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುವದನ್ನು ಮುಂದುವರೆಸಿದ್ದು ನಾನು ಇಂದಲ್ಲ ನಾಳೆ ನನ್ನ ಸಂಸಾರ ಸರಿ ಹೊಂದುತ್ತದೆ ಅಂತ ನನ್ನ ಗಂಡನು ಕೊಡುವ ಕಿರುಕುಳವನ್ನು ತಾಳಿಕೊಂಡು ಗಂಡನ ಮನೆಯಲ್ಲಿಯೇ ಇದ್ದೆನು. ಹೀಗಿದ್ದು ನಿನ್ನೆ ದಿನಾಂಕ 08.10.2021 ರಂದು ಸಾಯಂಕಾಲ 5:00 ಗಂಟೆಯ ಸುಮಾರಿಗೆ ನಾನು ನನ್ನ ಗಂಡನ ಮನೆಯಲ್ಲಿ ನನ್ನ ಮಕ್ಕಳೊಂದಿಗೆ ಇದ್ದಾಗ ನನ್ನ ಗಂಡನಾದ ಗುಂಡಪ್ಪ ತಂದೆ ರಾಮಜೀ ರಾಠೋಡ ಇತನು ಹೊರಗಡೆಯಿಂದ ಮನೆಗೆ ಬಂದವನೇ ನನಗೆ ಏ ಸೂಳಿ ನನಗೆ ಸೆರೆ ಕುಡಿಯಲು ಹಣ ಕೊಡು ಅಂತ ಕೇಳಿದ್ದು ಆಗ ನಾನು ಅವನಿಗೆ ನಾನು ಕೂಲಿನಾಲಿ ಮಾಡಿ ಮಕ್ಕಳನ್ನು ಬದುಕಿಸುವದೇ ಕಠಿಣವಾಗಿದೆ ನಾನು ನಿನಗೆ ಕುಡಿಯಲು ಎಲ್ಲಿಂದ ಹಣ ಕೊಡಲಿ ನನ್ನ ಹತ್ತಿರ ಹಣ ಇಲ್ಲ ಅಂತ ಅಂದಾಗ ನನ್ನ ಗಂಡನು ಸೂಳೆ ನೀನು ನನಗೆ ಕುಡಿಯಲು ಹಣ ಕೊಡು ಅಂದರೆ ಕೊಡುತ್ತಿಲ್ಲ ಇವತ್ತು ನಿನಗೆ ಒಂದು ಗತಿ ಕಾಣಿಸುತ್ತೇನೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಅಂದವನೇ ನನಗೆ ಮನೆಯ ಒಳಗಿನಿಂದ ಧರಧರನೇ ಕೈ ಹಿಡಿದು ಎಳೆದುಕೊಂಡು ಮನೆಯ ಹೊರಗೆ ಬಂದವನೇ ನನ್ನನ್ನು ನೆಲದ ಮೇಲೆ ಕೆಡವಿ ಕಾಲಿನಿಂದ ಸೊಂಟದ ಮೇಲೆ, ಎದೆಯ ಮೇಲೆ ಒದ್ದು ತುಳಿದು ಗುಪ್ತಗಾಯ ಪಡಿಸಿದ್ದು ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತ ಚೀರಾಡಲು ನಮ್ಮ ಮನೆಯ ಪಕ್ಕದಲ್ಲಿ ಮನೆ ಇರುವ ನನ್ನ ಗಂಡನ ಅಣ್ಣನಾದ ಕೃಷ್ಣಪ್ಪ ತಂದೆ ರಾಮಜೀ ರಾಠೋಡ ಹಾಗೂ ಆತನ ಹೆಂಡತಿಯಾದ ಮಾನಿಬಾಯಿ ಗಂಡ ಕೃಷ್ಣಪ್ಪ ರಾಠೋಡ ಮತ್ತು ನನ್ನ ಗಂಡನ ತಂದೆಯಾದ ಮಾವ ರಾಮಜೀ ತಂದೆ ಬೀಲಪ್ಪ ರಾಠೋಡ ಇವರುಗಳು ಬಂದು ನೋಡಿ ನನ್ನ ಗಂಡನು ನನಗೆ ಹೊಡೆಯುವದನ್ನು ಬಿಡಿಸಿದ್ದು ಹೋಗುವಾಗ ನನ್ನ ಗಂಡನು ರಂಡಿ ಇವತ್ತು ನನ್ನ ಕೈಯಲ್ಲಿ ಉಳಿದುಕೊಂಡಿದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವಂತ ಬಿಡುವದಿಲ್ಲ ಯಾರೂ ಬಿಡಿಸುತ್ತಾರೆ ಸೂಳೆ ನೋಡುತ್ತೇನೆ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ನಂತರ ನಾನು ನಿನ್ನೆ ಸಾಯಂಕಾಲ ನನ್ನ ಮಕ್ಕಳೊಂದಿಗೆ ನನ್ನ ತವರೂರಾದ ಪರತುನಾಯಕ ತಾಂಡಾ ರಾಜನಕೊಳುರಕ್ಕೆ ಹೋಗಿ ನಮ್ಮ ತಂದೆ ಸುರೇಶ, ತಾಯಿ ತಾರಾಬಾಯಿ ಹಾಗೂ ನನ್ನ ಅಣ್ಣನಾದ ಅಪ್ಪಾಜಿ ಹಾಗೂ ನನ್ನ ದೊಡ್ಡಪ್ಪನಾದ ನಾರಾಯಣ ತಂದೆ ವಾಚಪ್ಪ ಜಾಧವ, ಕಾಕ ಶಿವಪ್ಪ ವಾಚಪ್ಪ ಜಾಧವ ಇವರಿಗೆ ನನ್ನ ಗಂಡನು ನನಗೆ ಹೊಡೆಬಡೆ ಮಾಡಿದ ವಿಷಯ ತಿಳಿಸಿದ್ದು ಅವರುಗಳು ಈಗ ರಾತ್ರಿಯಾಗುತ್ತಿದೆ ನಾಳೆ ದಿನ ಈ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ನಿನ್ನ ಗಂಡನ ಮೇಲೆ ದೂರು ಕೊಡು ಅಂತ ತಿಳಿಸಿದ್ದು ನಾನು ಈ ದಿವಸ ತಡವಾಗಿ ನನ್ನ ತಾಯಿ ತಾರಾಬಾಯಿಯೊಂದಿಗೆ ಬಂದು ದೂರು ಕೊಡುತ್ತಿದ್ದು ಈ ಘಟನೆಯಲ್ಲಿ ನನಗೆ ಅಷ್ಟೇನೂ ಪೆಟ್ಟಾಗಿರುವದಿಲ್ಲ ಉಪಚಾರಕ್ಕಾಗಿ ದವಾಖಾನೆಗೆ ಹೋಗುವದಿಲ್ಲ. ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ನನ್ನ ಗಂಡ ಗುಂಡಪ್ಪನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕು ಅಂತ ಹೇಳಿ ಟೈಪ್ ಮಾಡಿಸಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.62/2021 ಕಲಂ: 323, 504, 506, 498(ಎ) ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 135/2021 ಕಲಂ 341,323,324,504,506,ಸಂಗಡ 34 ಐ.ಪಿ.ಸಿ.: ಇಂದು ದಿನಾಂಕ 09/10/2021 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಭೀಮಣ್ಣ ತಂದೆ ಶರಣಪ್ಪ ಕೊಟ್ರಕೆ ಸಾಃ ಕಟಗಿಶಹಾಪೂರ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದು, ಸದರಿ ಹೇಳಿಕೆ ಸಾರಾಂಶದ ಏನೆಂದರೆ ದಿನಾಂಕ 06/10/2021 ರಂದು ಸಾಯಂಕಾಲ 5:30 ಸುಮಾರಿಗೆ ನಾನು ಸದರಿ ಕೆರೆಯನ್ನು ಕಾಯಲು ಹೋದಾಗ ಅಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಸದರಿ ಕೆರೆಯಲ್ಲಿ ಕಾನೂನು ಬಾಹಿರವಾಗಿ ಮೀನುಗಳನ್ನು ಹಿಡಿಯಲು ಬಂದಾಗ ನಾನು ಅವರನ್ನು ತಡೆದು ವಿಚಾರಿಸಿದಾಗ ಇದು ಸರಿಯಲ್ಲ ಅಂತಾ ವಿರೋದಿಸಿದಾಗ ಅವರಲ್ಲಿ ಆಗ 1)ಬನ್ನಪ್ಪ ತಂದೆ ಗೋಪಾಲ ಇತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಏ ಸೂಳೇ ಮಗನೇ ನೀನು ನನ್ನ ಜೋತೆಗೆ ಸುಮ್ಮನೆ ತಕರಾರು ಮಾಡುತ್ತಿದ್ದಿ, ಅವಾಚ್ಯವಾಗಿ ಬೈದು, ತನ್ನ ಕೈಯನ್ನು ಮುಷ್ಟಿಮಾಡಿ ಹೊಡೆದಿದ್ದರಿಂದ ಆತನ ಕೈಯಲ್ಲಿನ ಉಂಗುರ ತಾಕಿ ನನ್ನ ಹಣೆಗೆ ಮತ್ತು ಎಡಗಣ್ಣಿನ ಮೇಲೆ ಹೊಡೆದು ರಕ್ತಗಾಯ ಮಾಡಿದನು, 2)ಶರಣಪ್ಪ ತಂದೆ ತಿಪ್ಪಣ ಬಳಿಚಕ್ರ ಸಾ:ಹೊನಗೆರಾ ಇತನು ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು, 3) ಹಣಮಂತ ತಂದೆ ಮರಗಪ್ಪ ಮತ್ತು 4)ಸಾಬಣ್ಣ ತಂದೆ ಬಾಬಣ್ಣ ಸಾ:ಕಟಗಿಶಹಾಪೂರ ಇವರಿಬ್ಬರೂ ಕೂಡಿಕೊಂಡು ಕಣ್ಣಲ್ಲಿ ಕಾರದ ಪುಡಿ ಹಾಕಿ ನನಗೆ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುತ್ತಿದ್ದರು, ಆಗ ನಾನು ಚೀರಾಡುತ್ತಿದ್ದೆನು ಆಗ ನಮ್ಮೂರಿನವರಾದ ಚೇನ್ನಪ್ಪ ತಂದೆ ನರಸಪ್ಪ ಕೊಟ್ರಿಕಿ ವ:40 ಮತ್ತು ದೇವಪ್ಪ ತಂದೆ ಭೀಮಣ್ಣ ನಾಟೆಕಾರ ಇಬ್ಬರೂ ಕೂಡಿಕೊಂಡು ಜಗಳ ನೋಡಿ ಬಿಡಿಸಿರುತ್ತಾರೆ, ಜಗಳ ಬಿಟ್ಟು ಹೋಗುವಾಗ ಇವತ್ತು ಉಳಿದಿದಿ ಸೂಳೇ ಮಗನೇ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಹೋಗಿರುತ್ತಾರೆ, ಈ ಜಗಳವು ದಿನಾಂಕ 06/10/2021 ರಂದು ಸಾಯಂಕಾಲ 7-30 ಗಂಟೆಗೆ ಹೊನಗೆರಾಕ್ಕೆ ಹೊಗುವಾಗ ದಾರಿಯಲ್ಲಿ ಗಾಳಿ ಮರಗಮ್ಮ ದೆವಾಸ್ಥಾನದ ಹತ್ತಿರ ನಡೆದಿರುತ್ತದೆ, ಈ ವಿಷಯದ ಬಗ್ಗೆ ನಾವೆಲ್ಲರೂ ಮನೆಯಲ್ಲಿ ವಿಚಾರಣೆ ಮಾಡಿ ತಡವಾಗಿ ಇಂದು ದಿನಾಂಕ 09/10/2021 ರಂದು ಸಾಯಂಕಾಲ 6-00 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಕೊಟ್ಟಿರುತ್ತಾನೆ ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 135/2021 ಕಲಂ 341,323,324,504,506 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 10-10-2021 10:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080