ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-10-2022 

 

ಯಾದಗಿರಿವ ಮಹಿಳಾ ಪೊಲೀಸ್ ಠಾಣೆ:-

ಗುನ್ನೆ ನಂ: 150/2022 ಕಲಂ. ಮಹಿಳೆ ಕಾಣೆ: : ದಿನಾಂಕ: 09-10-2022 ರಂದು ಮಧ್ಯಾಹ್ನ 12-30 ಗಂಟೆಗೆ ಪಿಯಾರ್?ಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನಿಡಿದ ಸಾರಂಶವೆನೆಂದರೆ ನನ್ನ ಮಗಳು ಮಮತಾ ಈಕೆಯು ದಿನಾಂಕ: 06-10-2022 ರಂದು ಸಾಯಂಕಾಲ 05-00 ಗಂಟೆ ಸುಮಾರಿಗೆ ಮನೆಯಿಂದ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ನಂತರ ಮನೆಗೆ ಬಂದಿರುವದಿಲ್ಲ ಸುತ್ತ ಮುತ್ತ ಮನೆಯವರಿಗೆ ಮತ್ತು ಬೀಗರು ನೆಂಟರ ಊರುಗಳಿಗೆ ಪೊನ್ ಮಾಡಿ ವಿಚಾರಿಸಲಾಗಿ ಎಲ್ಲಿ ಇರುವದಿಲ್ಲ ನಂತರ ಯಾದಗಿರಿ ನಾಲ್ವಾರ ಕಡೆ ಹುಡುಕಾಡಿದರು ನನ್ನ ಮಗಳು ಎಲ್ಲಿ ಸಿಕ್ಕಿರುವದಿಲ್ಲ ನನ್ನ ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಬೇಕು ಅಂತಾ ಪಿಯರ್ಾಧಿ. ಸಾರಂಶ.

 

ಕೆಂಭಾವಿ ಪೊಲೀಸ ಠಾಣೆ:-

ಗುನ್ನೆ ನಂ: 154/2022 ಕಲಂ: 323, 324, 498(ಎ), 504, 506 ಸಂ 34 ಐಪಿಸಿ: ಇಂದು ದಿನಾಂಕ 09/10/2022 ರಂದು 8.00 ಪಿ.ಎಮ್ ಕ್ಕೆ ಸಕರ್ಾರಿ ಆಸ್ಪತ್ರೆ ಕೆಂಭಾವಿಯಿಂದ ದೂರವಾಣಿ ಮೂಲಕ ಎಂ.ಎಲ್.ಸಿ ವಸೂಲಾದ ಮೇರೆಗೆ ಸಕರ್ಾರಿ ಆಸ್ಪತ್ರೆ ಕೆಂಭಾವಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುದಾರರಾದ ಕವಿತಾ ಗಂಡ ಅಶೋಕಕುಮಾರ ಜಾಧವ ವ|| 32ವರ್ಷ ಜಾ|| ಲಂಬಾಣಿ ಉ|| ಮನೆಗೆಲಸ ಸಾ|| ಏವೂರ ದೊಡ್ಡ ತಾಂಡಾ ತಾ|| ಸುರಪೂರ ಇವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 9.00 ಪಿಎಂ ಕ್ಕೆ ಬಂದಿದ್ದು, ಸದರಿ ಹೇಳಿಕೆಯ ಸಾರಾಂಶವೇನೆಂದರೆ, ನನ್ನ ತವರುಮನೆಯು ಯಡ್ರಾಮಿ ತಾಂಡಾ ಇದ್ದು ನಮ್ಮ ತಂದೆ ತಾಯಿಯರು 10ವರ್ಷಗಳ ಹಿಂದೆ ಏವೂರ ದೊಡ್ಡ ತಾಂಡಾದ ಅಶೋಕಕುಮಾರ ತಂದೆ ಕಿಶನ್ ಜಾಧವ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆಯಾದ ಬಳಿ 2ವರ್ಷ ನನ್ನ ಗಂಡನು ನನ್ನೊಂದಿಗೆ ಚನ್ನಾಗಿ ಇದ್ದು ಅನ್ಯೋನ್ಯವಾಗಿ ಸಂಸಾರ ಸಾಗಿಸಿದ್ದು, ನನಗೆ 9ವರ್ಷದ ಕೀತರ್ಿ ಎಂಬುವ ಒಂದು ಹೆಣ್ಣು ಇರುತ್ತದೆ. ಹೀಗಿದ್ದು ನನ್ನ ಗಂಡನು ತನ್ನ ತಂದೆಯ ಮಾತು ಕೇಳಿ 8 ವರ್ಷಗಳ ಹಿಂದಿನಿಂದ ನನ್ನೊಂದಿಗೆ ಜಗಳ ಮಾಡುವುದು, ಮನೆ ಬಿಟ್ಟು ಹೋಗು ಅನ್ನುವುದು ಮಾಡುತ್ತಿದ್ದುದರಿಂದ ನಾನೇ ಅವರಿಂದ ದೂರ ಇದ್ದರಾಯಿತು ಅಂತಾ ನನ್ನ ಮಗಳಿಗೆ ಕರೆದುಕೊಂಡು ಕೂಲಿ ಕೆಲಸ ಮಾಡುತ್ತಾ ಏವೂರ ದೊಡ್ಡ ತಾಂಡಾದಲ್ಲಿ ವಾಸವಾಗಿ ಉಪಜೀವಿಸುತ್ತಿದ್ದೇನೆ. ನನ್ನ ಗಂಡನಾದ ಅಶೋಕಕುಮಾರ ಈತನು ಯಾದಗಿರಿಯಲ್ಲಿ ಒಂದು ಕಾಲೇಜು ಮಾಡಿ ಕಾಲೇಜಿನ ಪ್ರಿನ್ಸಿಪಾಲನಾಗಿ ಕೆಲಸ ಮಾಡುತ್ತಾ ಯಾದಗಿರಿಯಲ್ಲಿ ವಾಸವಾಗಿರುತ್ತಾನೆ. ನಾನು ನನ್ನ ಗಂಡನಿಗೆ ಆಸ್ತಿಯಲ್ಲಿ ಪಾಲು ಕೊಡು ಅಥವಾ ಜೀವನಾಧಾರಕ್ಕೆ ಹಣ ಕೊಡು ಅಂತಾ ಕೇಳಿದ ವಿಷಯದಲ್ಲಿ ಅನೇಕ ಸಲ ನ್ಯಾಯ ಪಂಚಾಯತಿ ಮಾಡಿದರೂ ನನ್ನ ಗಂಡನಾದ ಅಶೋಕಕುಮಾರ ಮತ್ತು ಅವರ ತಂದೆಯಾದ ಕಿಶನ್ ತಂದೆ ಥಾವರು ಜಾಧವ ಇಬ್ಬರೂ ಕೂಡಿ ಅವಳು ಎಲ್ಲಿಗಾದರೂ ಹೋಗಲಿ ಅವಳಿಗೆ ಯಾವುದೇ ಆಸ್ತಿ, ಹಣ ಕೊಡುವುದಿಲ್ಲ ಅಂತಾ ನನ್ನೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ಇಂದು ದಿನಾಂಕ 09/10/2022 ರಂದು ನಾನು ಅಜರ್ಿ ವಿಚಾರಣೆ ಕುರಿತು ಕೆಂಭಾವಿ ಪೊಲೀಸ್ ಠಾಣೆಗೆ ಬಂದು ವಾಪಸ್ ಏವೂರ ದೊಡ್ಡ ತಾಂಡಾಕ್ಕೆ ಹೋಗುವಾಗ 5.00 ಪಿಎಂ ಸುಮಾರಿಗೆ ಏವೂರ ದೊಡ್ಡ ತಾಂಡಾದ ಕ್ರಾಸಿನಲ್ಲಿ ಮನೆಗೆ ಹೋಗುವ ಕುರಿತು ನಿಂತಿದ್ದಾಗ ಅಲ್ಲಿಗೆ ನನ್ನ ಗಂಡನ ತಂದೆಯಾದ ಕಿಶನ್ ತಂದೆ ಥಾವರು ಜಾಧವ ಮತ್ತು ನನ್ನ ಗಂಡನಾದ ಅಶೋಕಕುಮಾರ ತಂದೆ ಕಿಶನ್ ಜಾಧವ ಇವರಿಬ್ಬರೂ ಕೈಯಲ್ಲಿ ಬಡಿಗೆ ಹಿಡಿದುಕೊಂಡು ನನ್ನ ಹತ್ತಿರ ಬಂದವರೇ ಏನಲೇ ಕವಿತಾ ನಿನಗೆ ಸೊಕ್ಕು ಜಾಸ್ತಿಯಾಗಿದೆನಾ ನೀನು ನಮ್ಮ ವಿರುದ್ದ ಅಜರ್ಿ ಕೊಡುತ್ತಿಯಾ, ಕೋಟರ್ಿನಲ್ಲಿ ಮೆಂಟೇನೆನ್ಸ್ ಕೇಸು ಹಾಕಿದ್ದಿಯಾ ಅಂದರೆ ನಿನಗೆ ಸೊಕ್ಕು ಬಹಳ ಬಂದಿದೆ ಅನ್ನುತ್ತಾ ಅಶೋಕಕುಮಾರ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದ್ದು ಮತ್ತು ಅದೇ ಬಡಿಗೆಯಿಂದ ನನ್ನ ಹಲ್ಲಿಗೆ ಹೊಡೆದು ರಕ್ತಗಾಯ ಮಾಡಿದ್ದು, ಕಿಶನ್ ಜಾಧವ ಈತನು ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಹಣೆಗೆ ಹೊಡೆದು ಗಾಯಗೊಳಿಸಿದ್ದು ಅಲ್ಲದೇ ನನ್ನ ಹೊಟ್ಟೆಗೆ ಕಾಲಿನಿಂದ ಒದ್ದು ಗುಪ್ತಗಾಯ ಮಾಡಿದನು, ಅವರಿಬ್ಬರೂ ನನಗೆ ಹೊಡೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಸತ್ತೆನೆಪ್ಪೋ ಅಂತಾ ಚೀರುತ್ತಿದ್ದಾಗ ಅಲ್ಲಿಯೇ ದಾರಿಯ ಮೇಲೆ ಹೋಗುತ್ತಿದ್ದ ಬದ್ದು ತಂದೆ ಭೀಮು ಚವ್ಹಾಣ ಮತ್ತು ತಿರುಪತಿ ತಂದೆ ಬದ್ದು ಚವ್ಹಾಣ ಇವರು ಬಂದು ಜಗಳ ಬಿಡಿಸಿಕೊಂಡು ಅಂಬುಲೆನ್ಸ್ ಕರೆಯಿಸಿ ಅಂಬುಲೆನ್ಸನಲ್ಲಿ ಸರಕಾರಿ ಆಸ್ಪತ್ರೆ ಕೆಂಭಾವಿಗೆ ತಂದು ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತಾರೆ. ಆದ್ದರಿಂದ ನನಗೆ ಮೆಂಟೇನೆನ್ಸ್ ಕೇಸು ಹಾಕಿದ ವಿಷಯದಲ್ಲಿ ಮತ್ತು ನನಗೆ ನ್ಯಾಯ ಕೊಡಿಸಬೇಕು ಅಂತಾ ಅಜರ್ಿ ನೀಡಿದ್ದು ಈ ವಿಷಯದಲ್ಲಿ ಮತ್ತು ನನಗೆ ತಮ್ಮ ಆಸ್ತಿಯಲ್ಲಿ ಯಾವುದೇ ಪಾಲು ಕೊಡಬಾರದು ಅಂತಾ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದು ನನ್ನ ಗಂಡನಾದ ಅಶೋಕಕುಮಾರ ಮತ್ತು ನನ್ನ ಮಾವನಾದ ಕಿಶನ್ ಜಾಧವ ಇವರು ಜಗಳ ತೆಗೆದು ನನಗೆ ಅವಾಚ್ಯವಾಗಿ ಬೈದು ಕೈಯಿಂದ, ಕಲ್ಲಿನಿಂದ ಹಾಗೂ ಬಡಿಗೆಯಿಂದ ಹೊಡೆದು, ಕಾಲಿನಿಂದ ಒದ್ದು ಗಾಯಗೊಳಿಸಿದ್ದು ಕಾರಣ ನನ್ನ ಗಂಡ ಹಾಗೂ ಮಾವನ ಮೇಲೆ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆಯ ಗುನ್ನೆ ನಂ 154/2022 ಕಲಂ 323, 324, 498(ಎ), 504, 506 ಸಂ. 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ಇತ್ತೀಚಿನ ನವೀಕರಣ​ : 10-10-2022 11:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080