ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-11-2021

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 57/2021 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 09/11/2021 ರಂದು 10 ಎ.ಎಂ.ದ ಸುಮಾರಿಗೆ ಯಾದಗಿರಿ ನಗರದ ಗಂಜ್ ಕ್ರಾಸ್ ಹತ್ತಿರ ಮುಖ್ಯ ರಸ್ತೆಯ ಬದಿಯಲ್ಲಿ ಈ ಕೇಸಿನ ಪಿಯರ್ಾದಿ ಗಾಯಾಳು ನಡೆದುಕೊಂಡು ಹೊರಟಿದ್ದಾಗ ಯಾವುದೋ ಒಂದು ಮೋಟಾರು ಸೈಕಲ್ ನೇದ್ದರ ಸವಾರನು ತನ್ನ ಮೋಟಾರು ಸೈಕಲನ್ನು ಮುಂಡರಗಿ ಕಡೆಯಿಂದ ಯಾದಗಿರಿ ನಗರದ ಗಾಂಧಿಚೌಕ್ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಪಿಯರ್ಾದಿಯವರಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಪಿಯರ್ಾದಿಗೆ ಬಲಸೊಂಟದ ಹತ್ತಿರ, ಬಲ ಭುಜಕ್ಕೆ ಭಾರೀ ಒಳಪೆಟ್ಟಾಗಿದ್ದು ಹಾಗೂ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯವಾಗಿದ್ದು ಅಲ್ಲದೇ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ.. ಈ ಘಟನೆಗೆ ಕಾರಣನಾದ ಮೋಟಾರು ಸೈಕಲ್ ಸವಾರನು ಗಾಯಾಳುವಿಗೆ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಅಲ್ಲಿಂದ ಮೋಟಾರು ಸೈಕಲ್ ಸಮೇತ ಓಡಿ ಹೋಗಿದ್ದು ಆತನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಬಗ್ಗೆ ತಡವಾಗಿ ನೀಡಿದ ಪಿಯರ್ಾದಿ ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

 


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 163/2021 ಕಲಂ: 341,354,504,506 ಐಪಿಸಿ : ಇಂದು ದಿನಾಂಕ 09.11.2021 ರಂದು 9 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ದೇವಮ್ಮ ಗಂಡ ನಿಂಗಪ್ಪ ಹೊಟ್ಟಿ ವ|| 25 ಜಾ|| ಕುರಬರ ಉ|| ಕೂಲಿಕೆಲಸ ಸಾ|| ಮಾಳಹಳ್ಳಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ದೂರು ಅಜರ್ಿ ಏನಂದರೆ ನಮ್ಮೂರ ನಮ್ಮ ಜನಾಂಗದವನಾದ ರೇವಣಸಿದ್ದಪ್ಪ ತಂದೆ ಮುದಿನಿಂಗಪ್ಪ ನರಿಬೆಂಚಿ ಈತನು ಆಗಾಗ ನನ್ನ ಹಿಂದೆ ಬರುವದು ದಿಟ್ಟಿಸಿ ನೋಡುವದು ಮಾಡುತ್ತಿದ್ದನು.ಹೀಗಿದ್ದು ನಿನ್ನೆ ದಿನಾಂಕ 08.11.2021 ರಂದು ಸಾಯಂಕಾಲ 6.30 ಗಂಟೆಯ ಸುಮಾರಿಗೆ ನಮ್ಮೂರಲ್ಲಿರುವ ಸಾರ್ವಜನಿಕ ಸಂಡಾಸ ರೂಮ ಕಡೆಗೆ ಹೋಗುವ ಕುರಿತು ನಿಂಗನಗೌಡ ಇವರ ಮನೆಯ ಹತ್ತಿರ ಹಾದು ರೋಡಿನಲ್ಲಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ನಮ್ಮೂರ ನಮ್ಮ ಜನಾಂಗದ ರೇವಣಸಿದ್ದಪ್ಪ ತಂದೆ ಮುದಿನಿಂಗಪ್ಪ ನರಿಬೆಂಚಿ ಈತನು ಏಕಾಏಕಿ ನನ್ನ ಹತ್ತರ ಬಂದವನೇ ನನಗೆ ತಡೆದು ನಿಲ್ಲಿಸಿ ಏನಲೇ ಸೂಳಿ ನಿನ್ನ ಸೊಕ್ಕು ಬಹಾಳ ಆಗಿದೆ ಅಂತ ಬೈಯುತ್ತಾ ನನಗೆ ಮಾನಭಂಗ ಮಾಡುವ ಉದ್ದೇಶದಿಂದ ನನ್ನ ಸೀರೆ ಹಿಡಿದು ಎಳೆದಾಡುತ್ತಾ ಮಾನಭಂಗ ಮಾಡಲು ಪ್ರಯತ್ನಿಸುತ್ತಿದ್ದಾಗ ನಾನು ಜೋರಾಗಿ ಚೀರಾಡಲಿಕ್ಕೆ ಹತ್ತಿದಾಗ ನಾನು ಚೀರಾಡುವದನ್ನು ಕಂಡು ಅಲ್ಲಿಯೇ ಹೊರಟಿದ್ದ ಮಲಕಮ್ಮ ಗಂಡ ಸೋಮರಾಯ ಗೋಡ್ಯಾಳ ಹಾಗು ಕಾಳಮ್ಮ ಗಂಡ ಕಾಮರಾಯ ಅಮ್ಮಾಕೋಳ ಇವರು ಬಂದಿದ್ದು ಸದರಿಯವರು ಬರುವದನ್ನು ನೋಡಿ ರೇವಣಸಿದ್ದಪ್ಪ ಈತನು ನನಗೆ ಬಿಟ್ಟು ಸೂಳೇ ಈ ವಿಷಯ ಮನೆಯಲ್ಲಿ ಹೇಳಿದರೆ ನಿನ್ನ ಜೀವ ಸಹಿತ ಬಿಡುವದಿಲ್ಲಅಂತ ಜೀವದ ಭಯ ಹಾಕಿ ಓಡಿ ಹೋದನು. ನಂತರ ನಾನು ನೇರವಾಗಿ ಮನೆಗೆ ಹೋಗಿ ಮನೆಯಲ್ಲಿ ನನ್ನ ಗಂಡ ಹಾಗು ಮಾವನವರಾದ ಸಿದ್ದಪ್ಪ ಇವರಿಗೆ ವಿಷಯ ತಿಳಿಸಿ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನಗೆ ಮಾನಭಂಗ ಮಾಡಲು ಪ್ರಯತ್ನಿಸಿ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿದ ರೇವಣಸಿದ್ದಪ್ಪ ತಂದೆ ಮುದಿನಿಂಗಪ್ಪ ನರಿಬೆಂಚಿ ಸಾ|| ಮಾಳಹಳ್ಳಿ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 163/2021 ಕಲಂ 341,354,504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 10-11-2021 10:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080