ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-11-2022

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 194/2022 ಕಲಂ: 279, 337, 338 ಐ.ಪಿ.ಸಿ ಸಂಗಡ 187 ಐ.ಎಮ್. ವಿ ಯಾಕ್ಟ: ದಿನಾಂಕ: 8/11/2022 ಎಮ್.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುದಾರರು ಹಿಂದಿಯಲ್ಲಿ ನೀಡಿದ ಹೇಳಿಕೆಯನ್ನು ನಾನು ಕನ್ನಡದಲ್ಲಿ ಅನುವಾದ ಮಾಡಿ ಅವರ ಹೇಳಿಕೆಯನ್ನು ಪಡೆದುಕೊಂಡು ಇದು ದಿನಾಂಕ: 09/11/2022 ರಂದು ಬೆಳಿಗ್ಗೆ 9-30 ಗಂಟೆಗೆ ಠಾಣೆಗೆ ಬಂದು ಸದರಿ ಗಾಯಾಳು ರಾಜಕುಮಾರ ತಂದೆ ಪರಶೂರಾಮ ರಾಜಬರ ವಯಾ: 20 ಉ: ಪಿ.ಓ.ಪಿ ಕೆಲಸ ಜಾ: ಯಾದವ ಸಾ: ಮಹಿಪಿಪ್ರಾ ತಾ: ಜಿ: ಗೊಂಡಾ ರಾಜ್ಯ ಉತ್ತರ ಪ್ರದೇಶ ರವರ ಹೇಳಿಕೆ ಸಾರಾಂಶವೆನೆಂದರೆ, ನಾನು ಸುಮಾರು 5 ವರ್ಷಗಳಿಂದ ಯಾಧಗಿರಿ ಲಾಡೇಜ ಗಲ್ಲಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿರುತ್ತೇನೆ. ನನ್ನಂತಯೇ ನಮ್ಮ ರಾಜ್ಯದ ರಾಜು ತಂದೆ ರಾಮಕೇವಲ್ ವಯಾ: 26 ಜಾತಿ: ಗೌತಮ(ಎಸ್.ಸಿ) ಈತನು ಕೂಡಾ ಲಾಡೇಜ ಗಲ್ಲಿಯಲ್ಲಿಯೇ ವಾಸವಾಗಿರುತ್ತಾನೆ ಇಬ್ಬರೂ ಕೂಡಿ ಹೊಸ ಮನೆಯ ಕಟ್ಟಡದ ಪಿ.ಓ.ಪಿ ಕೆಲಸ ಮಾಡಿಕೊಂಡು ಇರುತ್ತೇವೆ. ಅದರಂತೆ ಯಾದಗಿರಿ ಜಿಲ್ಲೆಯಲ್ಲಿ ಎಲ್ಲಿ ಮನೆ ಪಿ.ಓ.ಪಿ ಕೆಲಸ ಇರುತ್ತದೆ ಅಲ್ಲಿ ಇಬ್ಬರೂ ಹೋಗಿ ಕೆಲಸ ಮಾಡುತ್ತೇವೆ. ಅದರಂತೆ ನಾನು ಮತ್ತು ರಾಜು ಇಬ್ಬರೂ ಸುರಪೂರದಲ್ಲಿಯ ಹೊಸ ಮನೆಯ ಕಟ್ಟಡದ ಪಿ.ಓ.ಪಿ ಕೆಲಸ ಹಿಡಿದಿದ್ದು, ನಾವು ಪ್ರತಿದಿನ ಯಾದಗಿರಿಯಿಂದ ಸುರಪೂರಕ್ಕೆ ಹೋಗಿ ಬರುವುದು ಮಾಡುತ್ತಿದ್ದೆವು. ಹೀಗಿದ್ದು ದಿನಾಂಕ: 07/11/202 ರಂದು ಬೆಳಿಗ್ಗೆ ಸುಮಾರಿಗೆ ಪಿ.ಓ.ಪಿ ಕೆಲಸ ನಿಮಿತ್ಯವಾಗಿ ನಾನು ಮತ್ತು ರಾಜು ಇಬ್ಬರೂ ಸುರಪೂಕ್ಕೆ ಹೋಗಿ ಕೆಲಸ ಮುಗಿಸಿ ವಾಪಸ್ಸು ಯಾದಗಿರಿ ಬರುವ ಕುರಿತು ಮೋಟಾರ ಸೈಕಲ್ ನಂ: ಕೆ.ಎ-36-ಯು-3767 ನೇದ್ದನ್ನು ತೆಗೆದುಕೊಂಡು ರಾಜು ಈತನು ಮೋಟಾರ ಸೈಕಲ್ ಚಲಾಯಿಸುತ್ತಿದ್ದನು ನಾನು ಮೋಟಾರ ಸೈಕಲ ಹಿಂದುಗಡೆ ಕುಳಿತಿದ್ದೆನು. ಇಬ್ಬರೂ ಕೂಡಿ ಹತ್ತಿಗೂಡು ಹತ್ತಿರ ಹಳ್ಳದ ಬ್ರಿಡ್ಜ ಹತ್ತಿರ ಯಾದಗಿರಿ ಕಡೆಗೆ ರಾತ್ರಿ 9-00 ಗಂಟೆ ಸುಮಾರಿಗೆ ಹೋಗುವಾಗ ಎದುರುಗಡೆಯಿಂದ ಯಾವುದು ಒಂದು ಕಾರ ನೇದ್ದರ ಚಾಲಕನು ಅತೀವೇಘ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ್ಗೆ ಡಿಕ್ಕಿ ಪಡಿಸಿ ಕಾರ ಸಮೇತ ಓಡಿ ಹೋಗಿರುತ್ತಾನೆ. ನನಗೆ ಎಡಕಣ್ಣಿನ ಹತ್ತಿರ, ಎಡಕೈ ಮೋಳಕೈಗೆ ಭಾರಿ ಗಾಯ ಆಗಿದ್ದು ಮತ್ತು ತಲೆಗೆ ಒಳಪೆಟ್ಟು ಆಗಿರುತ್ತದೆ. ಅಲ್ಲದೇ ಮೋಟಾರ ಸೈಕಲ್ ಚಲಾಯಿಸುತ್ತಿದ್ದ ರಾಜು ಈತನಿಗೆ ಮೂಗಿಗೆ ರಕ್ತಗಾಯ ತಲೆಗೆ ಒಳಪೆಟ್ಟು ಆಗಿರುತ್ತದೆ. ನಂತರ ಇಬ್ಬರೂ ಕೂಡಿ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಸೇರಿಕೆ ಆಗಿ ನಡೆದ ವಿಷಯವನ್ನು ರಾಜು ಇವರ ತಮ್ಮನಾದ ರಾಜೇಂದ್ರಪ್ರಸಾದ ಇವರಿಗೆ ತಿಳಿಸಿ ಹೆಚ್ಚಿನ ಉಪಚಾರ ಕುರಿತು ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಗೆ ಹೋಗಿ ಸೇರಿಕೆ ಆಗಿರುತ್ತೇವೆ. ಅಂತಾ ಹೇಳಿಕೆ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 194/2022 ಕಲಂ: 279, 337, 338 ಐಪಿಸಿ ಸಂಗಡ 187 ಐ.ಎಮ್.ವಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ:83/2022 323, 341, 324, 325, 427, 504, 506 ಸಂ.34 ಐಪಿಸಿ:ದಿನಾಂಕ:07/11/2022 ರಂದು ಫಿರ್ಯಾದಿಯು ತನ್ನ ಮೋಟಾರ್ ಸೈಕಲ್ಲ ನಂ: ಕೆಎ-33 ಇಸಿ-2800 ನೇದ್ದನ್ನು ತೆಗೆದುಕೊಂಡು ತಮ್ಮೂರಿನ ಸಿದ್ದಪ್ಪ ತಂದೆ ಭೂಮಣ್ಣ ಹಿರೇಕುರುಬರ ಈತನಿಗೆ ಕರೆದುಕೊಂಡು ಕೆಲಸದ ನಿಮಿತ್ಯ ತಾಳಿಕೋಟಿಗೆ ಹೋಗಿ ವಾಪಸು ಸಾಯಂಕಾಲ 6.30 ಗಂಟೆಗೆ ಹುಣಸಗಿಗೆ ಬಂದು ಅಲ್ಲಿಂದ ತಮ್ಮೂರಿಗೆ ಹೋಗಲು ಹೊರಟು ಇಸ್ಲಾಂಪುರ ಕ್ರಾಸ್ ದಾಟಿದ ಮೇಲೆ ಅರಕೇರಾ(ಜೆ) ಸೀಮಾಂತರದ ಕರೆಹಣಿ ಡಿಬ್ಬಿಗೆ ಇರುವ ಪುನಿತ ತಾಬಾದಲ್ಲಿ ಊಟ ಮಾಡುವ ಸಲುವಾಗಿ ಮೋಟಾರ್ ಸೈಕಲ್ಲನ್ನು ನಿಲ್ಲಿಸಿ, ದಾಬಾದಲ್ಲಿ ತಾವು ಹುಣಸಗಿಯಿಂದ ತಂದ ಬಿಯರ್ ಕುಡಿಯುತ್ತಾ ಕುಳಿತಾಗ ಆರೋಪಿತನಾದ ಸೋಮಪ್ಪ ಈತನು ತನ್ನ ಮೋಟಾರ್ ಸೈಕಲ್ ನಂ:ಕೆಎ-33 ಆರ್-5354 ನೇದ್ದನ್ನು ತೆಗೆದುಕೊಂಡು ಬಂದು ದಾಬಾದ ಹತ್ತಿರ ನಿಲ್ಲಿಸಿ ಫಿರ್ಯಾದಿಗೆ ಸರಾಯಿ ಕುಡಿಸು ಅಂತಾ ಅಂದಾಗ, ಫಿರ್ಯಾದಿಯು ನಾನು ತಾಳಿಕೋಟಿಗೆ ಹೋಗಿ ಬಂದಿದ್ದೆನೆ ನನ್ನ ಹತ್ತಿರ ಹಣವಿಲ್ಲ ಅಂತಾ ಅಂದಾಗ, ಆರೋಪಿತನು ತಾನು ತಂದ ಬಿಯರ್ನ್ನು ಫಿರ್ಯಾದಿಗೆ ಕೊಟ್ಟಿದ್ದು, ಫಿರ್ಯಾದಿಯು ಬಿಯರ್ ಕುಡಿದಿದ್ದು, ಮೂರು ಜನರು ಕೂಡಿ ಊಟಮಾಡಿ ಯಡಹಳ್ಳಿಗೆ ಹೋಗಲು ಫಿರ್ಯಾದಿಯ ಮೋಟಾರ್ ಸೈಕಲ್ ಮೇಲೆ ಹೊರಟಿದ್ದು, ಸಿದ್ದಪ್ಪ ತಂದೆ ಭೂಮಣ್ಣ ಈತನು ಮೋಟಾರ್ ಸೈಕಲ್ ಚಲಾಯಿಸುತ್ತಿದ್ದು, ಸೋಮಪ್ಪ ಈತನು ತನ್ನ ಮೋಟಾರ್ ಸೈಕಲ್ ಮೇಲೆ ಹಿಂದುಗಡೆಯಿಂದ ಹೊರಟಿದ್ದು, ಸ್ವಲ್ಪ ಮುಂದೆ ಹೋದ ಮೇಲೆ ಸೋಮಪ್ಪ ಈತನು ಇನ್ನೊಬ್ಬನಿಗೆ ಕರೆದುಕೊಂಡು ಬಂದು ತನ್ನ ಮೋಟಾರ್ ಸೈಕಲ್ಲನ್ನು ಫಿರ್ಯಾದಿಯ ಮೋಟಾರ್ ಸೈಕಲ್ಲಿಗೆ ಅಡ್ಡ ಹಾಕಿ ಫಿರ್ಯಾದಿಯ ತಲೆಗೆ ಬಡಿಗೆಯಿಂದ ಹೊಡೆದಾಗ ಫಿರ್ಯಾದಿ & ಮೋಟಾರ್ ಸೈಕಲ್ ಚಲಾಯಿಸುವ ಸಿದ್ದಪ್ಪ ಇಬ್ಬರೂ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಾಗ, ಸೋಮಪ್ಪ ಈತನು ಫಿರ್ಯಾದಿ ಬಲಗಾಲ ತೊಡೆಯ ಮೇಲೆ ಕಲ್ಲು ಎತ್ತಿ ಹಾಕಿದ್ದು, ಅಲ್ಲದೆ ಮೊಟಾರ್ ಸೈಕಲ್ಲಗಳ ಮೇಲೆ ಕಲ್ಲು ಹಾಕಿ ಆರೋಪಿತನು ಫಿರ್ಯಾದಿಗೆ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನಗೆ ಜಿವಂತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೋದ ಬಗ್ಗೆ ಅಪರಾಧ.

ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: ಗುನ್ನೆ ನಂ 163/2022 ಕಲಂ: 78(3) ಕೆಪಿ ಯಾಕ್ಟ: ಇಂದು ದಿನಾಂಕ 09/11/2022 ರಂದು 6.30 ಪಿಎಂ ಕ್ಕೆ ಶ್ರೀ ವೆಂಕಣ್ಣ ಪಿ.ಎಸ್.ಐ(ತನಿಖೆ) ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ವೆಂಕಣ್ಣ ಪಿ.ಎಸ್.ಐ(ತನಿಖೆ) ಕೆಂಭಾವಿ ಪೊಲೀಸ್ ಠಾಣೆ ಇದ್ದು ವರದಿ ನೀಡುವುದೇನೆಂದರೆ, ನಾನು ಇಂದು ದಿನಾಂಕ 09/11/2022 ರಂದು 4.30 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಫತೇಪೂರ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು, ನಮ್ಮ ಠಾಣೆಯ ಶಿವರಾಜ ಹೆಚ್.ಸಿ 85, ಪ್ರಭುಗೌಡ ಪಿಸಿ 361 ಮತ್ತು ಬಸವರಾಜ ಪಿಸಿ 363 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 4.40 ಪಿಎಂ ಕ್ಕೆ ಹೊರಟು ಫತೇಪೂರ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ 4.55 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 5.00 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ರಾಜು ತಂದೆ ದೇವಪ್ಪ ನಾಟೇಕಾರ ವ|| 28 ಜಾ|| ಕಬ್ಬಲಿಗ ಉ|| ಕೂಲಿ ಸಾ|| ಫತೇಪೂರ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 540/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 5.00 ಪಿಎಂ ದಿಂದ 6.00 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 163/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 11-11-2022 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080