ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-12-2021

ಯಾದಗಿರಿ ನಗರ ಪೊಲೀಸ ಠಾಣೆ
ಗುನ್ನೆ ನಂ: 127/2021 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ; 09/12/2021 ರಂದು 6-45 ಪಿಎಮ್ ಕ್ಕೆ ಶ್ರೀ ಬಾಪುಗೌಡ ಪಾಟೀಲ ಪಿ.ಐ ಸಿ.ಇ.ಎನ್ ಪೊಲೀಸ ಠಾಣೆ ರವರು ಒಬ್ಬ ಆರೋಪಿ, ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿಪಂಚನಾಮೆಯನ್ನು ಮತ್ತು ಮುಂದಿನ ಕ್ರಮಕ್ಕಾಗಿ ಒಂದು ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 09/12/2021 ರಂದು 5:00 ಪಿ.ಎಮ್. ಸುಮಾರಿಗೆ ನಾನು ಯಾದಗಿರಿ ನಗರದ ಕನಕ ಕ್ರಾಸ ಹತ್ತಿರವಿದ್ದಾಗ ಯಾದಗಿರಿ ನಗರದ ಡಿಗ್ರಿ ಕಾಲೇಜ ಕ್ರಾಸ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಬರೆದುಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಅಬ್ದುಲ ಬಾಷಾ ಪಿಸಿ-237 ರವರ ಮೂಲಕ ಇಬ್ಬರು ಪಂಚರನ್ನು ಬರಮಾಡಿಕೊಂಡು, ಪಂಚರು, ನಾನು ಮತ್ತು ಶ್ರೀ ಚಂದ್ರಶೇಖರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ಸಾಯಂಕಾಲ 5:40 ಪಿ.ಎಮ್.ಕ್ಕೆ ದಾಳಿ ಕೈಗೊಂಡು ಮಟಕಾ ಜೂಜಾಟ ಚೀಟಿ ಬರೆದುಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಗಾಲಿಬಸಾಬ ತಂದೆ ಖಾಸೀಸಾಬ ಕೋರಬಾನೊರ ವ;26 ಜಾ: ಮುಸ್ಲಿಂ ಉ; ಕೂಲಿಕೆಲಸ ಸಾ; ವರ್ಕನಳ್ಳಿ ತಾ; ಜಿ; ಯಾದಗಿರಿ ಅಂತ ತಿಳಿಸಿದ್ದು ಸದರಿಯವನ ಹತ್ತಿರ ಇದ್ದ ಒಟ್ಟು 1)ನಗದು ಹಣ 540/- ರೂ 2) ಒಂದು ಮಟಕಾ ಅಂಕಿಗಳ ಚೀಟಿ 3)ಒಂದು ಬಾಲ್ಪೆನ್ ದೊರೆತಿದ್ದು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು 5-40 ಪಿಎಂದಿಂದ 6-30 ಪಿಎಂ ದವರೆಗೆ ಮುಗಿಸಿದ್ದು ನಂತರ ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ 6-45 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ಒಪ್ಪಿಸಿ ಸದರಿ ಆರೋಪಿತನ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.127/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 188/2021 ಕಲಂ: 457, 380 ಐಪಿಸಿ : ನಿನ್ನೆ ದಿನಾಂಕ 08.12.2021 ರಂದು ರಾತ್ರಿ 9:30 ಗಂಟೆಯಿಂದ ಇಂದು ದಿನಾಂಕ 09.12.2021 ರಂದು ಬೆಳಿಗ್ಗೆ 6:00 ಗಂಟೆಯ ನಡುವೆ ಗುರುಮಠಕಲ್ ಪಟ್ಟಣದ ರಾಘವೇಂದ್ರ ಫೋಟೋ ಸ್ಟೂಡಿಯೋ ಹಾಗೂ ಗಾಯತ್ರಿ ಫೋಟೋ ಸ್ಟೂಡಿಯೊಗಳಲ್ಲಿದ್ದ ಒಟ್ಟು 06 ಕ್ಯಾಮೇರಾ ಸೇಟ್ಗಳು , 02 ಫ್ಲಾಶ್ ಲೈಟ್ಗಳು, ಹಾಗೂ ನಗದು ಹಣ ಸೇರಿ ಒಟ್ಟು 1 ಲಕ್ಷದ 30 ಸಾವಿರ ರೂಪಾಯಿಯ ಮೌಲ್ಯದ ವಸ್ತುಗಳನ್ನು ಯಾರೋ ಅಪರಿಚಿತರು ಎರಡೂ ಫೋಟೋ ಸ್ಟೂಡಿಯೋಗಳ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ಆ ಬಗ್ಗೆ ಫಿರ್ಯಾದಿದಾರರು ನೀಡಿದ ದೂರಿನ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂಬರ 188/2021 ಕಲಂ: 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂಬರ 247/2021 ಕಲಂ 457, 380 .ಐ.ಪಿ.ಸಿ. : ಇಂದು ದಿನಾಂಕ:09-12-2021 ರಂದು 6:00 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಧೀರು ಜಾದವ ತಂದೆ ಜಯರಾಮ ಜಾದವ ವಯ: 28 ವರ್ಷ ಜಾ: ಲಂಬಾಣಿ ಉ: ವ್ಯಾಪಾರ ಸಾ: ಏವೂರ ತಾಂಡಾ ಬಿ ತಾ: ಸುರಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ , ನಾನು ಶಹಾಪುರ ನಗರದಲ್ಲಿ, ವಿಜಯ ಬ್ಯಾಂಕ್ ಎದುರುಗಡೆ ಲಕ್ಷ್ಮೀ ಬಾರ ಪಕ್ಕದಲ್ಲಿ ಒಂದು ಕಾಮಾ ಕಾಂಪ್ಲೆಕ್ಸದಲ್ಲಿ ಒಂದು ಅಂಗಡಿಯನ್ನು ಬಾಡಿಗೆ ಪಡೆದು ವಿನಾಯಕ ಬೇಕರಿ ಎಂಬ ಹೆಸರಿನಲ್ಲಿ ಬೇಕರಿ ಇಟ್ಟುಕೊಂಡು ಉಪಜೀವಿಸುತ್ತೇನೆ. ನಾನು ಶಹಾಪುರದ ಬಾಪುಗೌಡ ನಗರದಲ್ಲಿ ಬಾಡಿಗೆ ಮನೆ ಮಾಡಿ ವಾಸವಾಗಿದ್ದೇನೆ. ದಿನಾಲು ಬೇಕರಿಯನ್ನು ಮುಂಜಾನೆ 6:30 ಗಂಟೆಗೆ ತೆರೆದು ರಾತ್ರಿ 10:30 ಗಂಟೆಯ ವರೆಗೆ ವ್ಯಾಪಾರ ಮಾಡಿ ಅಂಗಡಿ ಬಂದ ಮಾಡಿಕೊಂಡು ಹೋಗುತ್ತೇನೆ. ಅದರಂತೆ ದಿನಾಂಕ: 22-11-2021 ರಂದು ರಾತ್ರಿ 10:30 ಗಂಟೆಗೆ ಅಂಗಡಿ ಬಂದ್ ಮಾಡಿಕೊಂಡು ಹೋಗಿದ್ದೆನು. ಅಂಗಡಿಯಲ್ಲಿ ವ್ಯಾಪಾರವಾದ ಹಣ ತೆಗದುಕೊಂಡು ಉಳಿದ 3500/- ರೂ. ಹಣವನ್ನು ಅಂಗಡಿಯ ಗಲ್ಲಾದಲ್ಲಿ ಇಟ್ಟು ಹೋಗಿದ್ದೆನು. ನಂತರ ನಾನು ಮಾರನೇ ದಿನ ಅಂದರೆ ದಿನಾಂಕ: 23-11-2021 ರಂದು ಮುಂಜಾನೆ 6:30 ಗಂಟೆಗೆ ಯಥಾ ಪ್ರಕಾರ ನಾನು ಅಂಗಡಿ ತೆರೆಯಲು ಬಂದಾಗ ಮೇಲಿನ ಭಾಗದ ಟೀನ ನಗ್ಗಿ ಪೊಳ್ಳು ಬಿದ್ದಿದ್ದು ನಾನು ಸಂಶಯ ಬಂದು ಅಂಗಡಿ ತೆರೆದು ನೋಡಲಾಗಿ ನನ್ನ ಗಲ್ಲಾದಲ್ಲಿ ಇಟ್ಟ 3500/- ರೂ. ಇರಲಿಲ್ಲ ಯಾರೋ ಕಳ್ಳಲು ರಾತ್ರಿವೇಳೆಯಲ್ಲಿ ನನ್ನ ಬೇಕರಿಯ ಸೆಟ್ರಸ್ ಮೇಲಿನಿಂದ ಮುರಿದು ಒಳಗೆ ಹೋಗಿ ಗಲ್ಲಾದಲ್ಲಿದ್ದ 3500/-ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇತ್ತು ನಾನು ಸದರಿ ವಿಷಯವನ್ನು ನಮ್ಮ ತಮ್ಮನಾದ ಭಾಗಣ್ಣ ತಂದೆ ಜಯರಾಮ ಜಾದವ ರವರಿಗೆ ವಿಷಯ ತಿಳಿಸಿ ಕರೆಯಿಸಿಕೊಂಡು ಪರಿಶೀಲನೆ ಮಾಡಿದ್ದು ಮತ್ತೆ ಯಾವುದೆ ವಸ್ತು ಹೋಗಿರಲಿಲ್ಲ. ನಾನು ನಮ್ಮ ಅಣ್ಣ ಇಬ್ಬರು ನಮ್ಮ ಖಾಸಗಿ ಕೆಲಸದ ನಿಮಿತ್ಯ ನಮ್ಮ ಸ್ವಂತ ಊರಿಗೆ ಹೋಗಿ ಇಂದು ಮರಳಿ ಬಂದಿದ್ದು ಇರುತ್ತದೆ ಆದ್ದರಿಂದ ಇಂದು ದಿನಾಂಕ: 09-12-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ದಿನಾಂಕ: 22-11-2021 ರಂದು 10:30 ಪಿ.ಎಮ್.ದಿಂದ ದಿನಾಂಕ: 23-11-2021 ರಮದು ಮುಂಜಾನೆ 6:30 ಪಿ.ಎಮ್.ದ ಮದ್ಯದ ಅವಧಿಯಲ್ಲಿ ಯಾರೋ ಕಳ್ಳಲು ನನ್ನ ಬೇಕರಿ ಅಂಗಡಿಯ ಸೆಟ್ರಸ್ ಮುರಿದು ಒಳಗಿದ್ದ 3500/- ರೂ. ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಸದ ಮೇಲಿಂದ ಠಣೆ ಗುನ್ನೆ ನಂ. 247/2021 ಕಲಂ. 457, 380 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಸಿಕೊಂಡು ತನಿಖೆ ಕೈಗೊಡೆನು.

 

 

ಕೊಡೇಕಲ್ ಪೊಲೀಸ ಠಾಣೆ
ಗುನ್ನೆ ನಂ : 74/2021 ಕಲಂ: 279, 337, 338, 304(ಎ) ಐಪಿಸಿ : ಇಂದು ದಿನಾಂಕ:09.12.2021 ರಂದು 4:30 ಪಿಎಮ್ಕ್ಕೆ ಬಸೆಟ್ಟೆಪ್ಪ ಪಿಸಿ-110 ರವರು ಸುರಪೂರ ಸರಕಾರಿ ಆಸ್ಪತ್ರೆಯಿಂದ ಪಿಯರ್ಾದಿ ಯಮನಪ್ಪ ತಂದೆ ದಾವಲಮಲೀಕ ಭಜಂತ್ರಿ ವ:28 ಜಾ:ಕೊರಮ ಉ:ಬೆಳ್ಳುಳ್ಳಿ ವ್ಯಾಪಾರ ಸಾ:ಕಾಮನಟಗಿ ತಾ:ಹುಣಸಗಿ ಜಿ:ಯಾದಗಿರಿ ಇವರು ಪಿಎಸ್ಐ ಸಾಹೇಬರ ಸಮಕ್ಷಮ ನೀಡಿದ ಪಿಯರ್ಾದಿ ಹೇಳಿಕೆಯನ್ನು ಹಾಜರಪಡಿಸಿದ್ದು ಸದರಿ ಪಿಯರ್ಾದಿ ಸಾರಾಂಶ ಏನೆಂದರೆ, ಪ್ರತಿ ದಿವಸದಂತೆ ಇಂದು ದಿನಾಂಕ:09.12.2021 ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ ಬೆಳ್ಳುಳ್ಳಿ ವ್ಯಾಪಾರ ಮಾಡುವ ಕುರಿತು ನಮ್ಮ ಆಟೋ ನಂ:ಕೆಎ-33 5860 ನೇದ್ದರಲ್ಲಿ ನಾನು ಮತ್ತು ನನ್ನ ಅಣ್ಣನಾದ ಮಲ್ಲಪ್ಪ ತಂದೆ ಭಾಗಪ್ಪ ಬಜಂತ್ರಿ, ಅಳಿಯನಾದ ನಿಂಗರಾಜ ತಂದೆ ರಮೇಶ ಬಜಂತ್ರಿ, ನನ್ನ ತಮ್ಮನ ಹೆಂಡತಿಯಾದ ರೇಖಾ ಗಂಡ ಸೋಮಣ್ಣ ಬಜಂತ್ರಿ, ನನ್ನ ಹೆಂಡತಿಯಾದ ಅನಿತಮ್ಮ ವ:22 ವರ್ಷ ಎಲ್ಲರೂ ಕೂಡಿಕೊಂಡು ನನ್ನ ತಮ್ಮನಾದ ಸೋಮಣ್ಣ ಭಜಂತ್ರಿ ಈತನು ಚಲಾಯಿಸುತ್ತಿದ್ದ ಆಟೋದಲ್ಲಿ ಕುಳಿತು ಕಾಮನಟಗಿಯಿಂದ ಹೊಂಬಳಕಲ್, ಬೈಲಕುಂಟಿ, ರಾಜವಾಳ ಗ್ರಾಮಗಳಿಗೆ ಹೋಗಿ ಬೆಳ್ಳುಳ್ಳಿ ವ್ಯಾಪಾರ ಮಾಡಿಕೊಂಡು ಮರಳಿ ನಮ್ಮೂರಿಗೆ ಬರುವ ಕುರಿತು ಬೊಮ್ಮಗುಡ್ಡ ಮೇಲಿಂದ ರಾಜನಕೋಳೂರ ಕಡೆಗೆ ಬರುವಾಗ ಹೆಚ್.ಸಿ ಪಾಟೀಲ ಇವರ ನಿಂಬೆ ತೋಟದ ಸಮೀಪ ಬೆಳಿಗ್ಗೆ 11:30 ಗಂಟೆಯ ಸುಮಾರಿಗೆ ಬರುತ್ತಿದ್ದಾಗ ನನ್ನ ತಮ್ಮ ಸೋಮಣ್ಣನು ಆಟೋವನ್ನು ಅತೀ ವೇಗವಾಗಿ ನಡೆಸಿಕೊಂಡು ಬರುವಾಗ ರೋಡಿನ ಎಡಭಾಗದಿಂದ ಒಂದು ಬೆಕ್ಕಿನ ಬೆನ್ನು ಹತ್ತಿ ಒಂದು ನಾಯಿ ಅಡ್ಡ ಬಂದಿದ್ದರಿಂದ ನನ್ನ ತಮ್ಮ ಸೋಮಣ್ಣನು ಒಮ್ಮೆಲೇ ರೋಡಿನ ಬಲಭಾಗಕ್ಕೆ ಕಟ್ ಹೊಡೆದು ಆಟೋವನ್ನು ಪಲ್ಟಿ ಮಾಡಿದಾಗ ಆಟೋದಲ್ಲಿ ಕುಳಿತ ನಾವೆಲ್ಲರೂ ಕೆಳಗೆ ರೋಡಿನ ಮೇಲೆ ಬಿದ್ದಿದ್ದು ನನ್ನ ಬಲತೊಡೆಗೆ ಸ್ವಲ್ಪ ಒಳಪೆಟ್ಟಾಗಿದ್ದು, ತಮ್ಮ ಸೋಮಣ್ಣನಿಗೆ ಯಾವುದೇ ಗಾಯವಾಗಿರಲಿಲ್ಲ. ನನ್ನ ಹೆಂಡತಿ ಅನಿತಮ್ಮಳಿಗೆ ನೋಡಲು ತಲೆಯ ಹಿಂಬಾಗಕ್ಕೆ ಭಾರೀ ರಕ್ತಗಾಯ, ಎಡಗಡೆ ಮೆಲಕಿಗೆ, ಬಲಗಡೆ ಮೆಲಕಿಗೆ, ಹಣೆಗೆ, ಎಡಗೈ ಮೊಳಗೈ, ಬಲಗೈ ಮೊಳಕೈಗೆ ತರಚಿದ ರಕ್ತ ಗಾಯ, ಬಲಗಡೆ ಬುಜದ ಮೇಲೆ, ಬಲಗಡೆ ಟೊಂಕಕ್ಕೆ ಭಾರೀ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ರೇಖಾಳ ಬಲಗೈಗೆ ತರಚಿದ ಗಾಯ ಮಲ್ಲಪ್ಪನ ತಲೆಗೆ ಭಾರೀ ರಕ್ತಗಾಯ, ನಿಂಗರಾಜ ಈತನ ತಲೆಗೆ ಭಾರೀ ರಕ್ತಗಾಯವಾಗಿದ್ದು ಆಗ ನಾನು 108 ವಾಹನಕ್ಕೆ ಕರೆ ಮಾಡಿದ್ದು, ಸ್ವಲ್ಪ ಸಮಯಬಿಟ್ಟು 108 ವಾಹನ ಸ್ಥಳಕ್ಕೆ ಬಂದಾಗ ನಾನು ಮತ್ತು ನನ್ನ ತಮ್ಮ ಸೋಮಣ್ಣ ಇಬ್ಬರೂ ಕೂಡಿಕೊಂಡು ಎಲ್ಲಾ ಗಾಯಾಳುದಾರರಿಗೆ 108 ವಾಹನದಲ್ಲಿ ಕರೆದುಕೊಂಡು ರಾಜನಕೋಳೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಉಪಚಾರ ಕೊಡಿಸಿದ್ದು, ನಂತರ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಎಲ್ಲಾ ಗಾಯಾಳುದಾರರಿಗೆ ಹೆಚ್ಚಿನ ಉಪಚಾರ ಕುರಿತು 108 ವಾಹನದಲ್ಲಿ ಸುರಪೂರ ಸರಕಾರಿ ಆಸ್ಪತ್ರೆಗೆ 1:20 ಗಂಟೆಗೆ ಬಂದಾಗ ವೈದ್ಯರು ನನ್ನ ಹೆಂಡತಿ ಅನಿತಮ್ಮಳಿಗೆ ನೋಡಿ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. ಕಾರಣ ಸೋಮಣ್ಣ ತಂದೆ ದಾವಲಮಲೀಕ ಭಜಂತ್ರಿ ಈತನು ಆಟೋವನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಕಟ್ ಹೊಡೆದು ಪಲ್ಟಿ ಮಾಡಿ ಅಪಘಾತ ಪಡಿಸಿದವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಪಿಯರ್ಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 10-12-2021 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080