ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 10-12-2022


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ:136/2022 ಕಲಂ 279, 337, 338, 304(ಎ) ಐಪಿಸಿ: :- ಇಂದು ದಿನಾಂಕ:09/12/2022 ರಂದು 07:30 ಎ.ಎಮ್ ಕ್ಕೆ ಶ್ರೀ.ಇಸ್ಮಾಯಿಲ್ ತಂದೆ ಹಜರತ್ ಅಲಿ ಜೆಮಶೇರಿ, ವಯಸ್ಸು 28 ವರ್ಷ, ಜಾತಿ:ಮುಸ್ಲಿಂ, ಉ||ಖಾಸಗಿ ಕೆಲಸ, ಸಾ||ನಾಯ್ಕಲ್ ತಾ||ವಡಗೇರಾ ಇವರ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪೂಟರ್ ಟೈಪ ಮಾಡಿ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮ ತಂದೆತಾಯಿಗೆ ನಾವು ಮೂರು ಜನ ಅಣ್ಣತಮ್ಮಂದಿರಿರುತ್ತೇವೆ. ನಮ್ಮ ಅಣ್ಣನಾದ ಖಾಜಾಭಾಯಿ ವಯಸ್ಸು 36 ವರ್ಷ ಈತನು ಯಾದಗಿರಿಯಲ್ಲಿ ಆಟೋ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದು, ಪ್ರತಿ ದಿನ ಯಾದಗಿರಿಗೆ ಕೆಲಸಕ್ಕೆ ಹೋಗಿಬರುವುದು ಮಾಡುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ:08/12/2022 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ಶಬ್ಬೀರ್ ತಂದೆ ಇಮಾಮಸಾಬ ಗಡ್ಡೆ ಈತನು ನನಗೆ ಫೋನ್ಮಾಡಿ ಹೇಳಿದ್ದೇನೆಂದರೆ, ಯಾದಗಿರಿ-ಶಹಾಪೂರ ಮುಖ್ಯ ರಸ್ತೆಯ ಮೇಲೆ ನಾಯ್ಕಲ್ ಬೈಪಾಸ್ ರಸ್ತೆಯ ಚಟ್ನಳ್ಳಿ ಕ್ರಾಸ್ ಹತ್ತಿರ ನಿಮ್ಮಣ್ಣನಿಗೆ ಟಿಪ್ಪರ್ ಅಪಘಾತವಾಗಿದೆ ಎಂದು ಹೇಳಿದಾಗ ನಾನು ಮತ್ತು ನಮ್ಮ ತಂದೆ ಹಜರತಅಲಿ ಹಾಗು ನನ್ನ ಅತ್ತಿಗೆ ಹಲಿಮಾ ಕೂಡಿಕೊಂಡು ತಕ್ಷಣ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮಣ್ಣ ಖಾಜಾಭಾಯಿ ಮತ್ತು ಮಹೆಬೂಬ ತಂದೆ ಅಬ್ಬಾಸಅಲಿ ಇಬ್ಬರು ಮೋಟರ್ ಸೈಕಲ್ ಸಮೇತ ಟಿಪ್ಪರ್ ಕೆಳಗಡೆ ಸಿಕ್ಕಿಬಿದ್ದಿದ್ದರು. ನಾವು ಅವರಿಬ್ಬರಿಗೆ ಹೊರಗಡೆ ತೆಗೆದು ನೋಡಲಾಗಿ ನಮ್ಮಣ್ಣ ಖಾಜಾಭಾಯಿ ಈತನಿಗೆ ಎಡಗಡೆ ತಲೆಗೆ ರಕ್ತಗಾಯ, ಬಲಕೈ ಮುಂಗೈಗೆ ರಕ್ತಗಾಯ, ಎಡಕಾಲು ಮೊಳಕಾಲು ಕೆಳಕಡೆಯಿಂದ ಪಾದದವರೆಗೆ ಭಾರಿರಕ್ತ ಹಾಗು ಗುಪ್ತಗಾಯವಾಗಿದ್ದು, ಎಡಪಕ್ಕೆಗೆ ಗುಪ್ತಗಾಯವಾಗಿದ್ದು, ಅರೆಪ್ರಜ್ಞೆ ಸ್ಥಿತಿಯಲ್ಲಿದ್ದನು. ಮಹೆಬೂಬನಿಗೆ ಬಲಕೈಗೆ ಭಾರಿರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು, ಎಡಕಾಲಿಗೆ ತರುಚಿದ ಗಾಯವಾಗಿರುತ್ತದೆ. ಅಪಘಾತಪಡಿಸಿದ ಟಿಪ್ಪರ್ ನೋಡಲಾಗಿ ಅದರ ನಂ:ಕೆಎ-32 ಡಿ-2560 ಇದ್ದು, ಅಲ್ಲಿಯೇ ಇದ್ದ ಟಿಪ್ಪರ್ ವಾಹನದ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಶ್ರೀಕಾಂತ ತಂದೆ ಹಣಮಂತ ಸುಲಗೆಮಿ, ಸಾ||ಬೆಡಕಪಲ್ಲಿ, ತಾ||ಚಿಂಚೋಳಿ ಎಂದು ತಿಳಿಸಿದನು. ಅಪಘಾತದ ಬಗ್ಗೆ ಅಲ್ಲಿಯೇ ಇದ್ದ ಶಬ್ಬೀರ ಇವರಿಗೆ ವಿಚಾರಿಸಲಾಗಿ ತಿಳಿಸಿದ್ದೇನೆಂದರೆ, ನಾನು 8:30 ಪಿ.ಎಮ್. ಸುಮಾರಿಗೆ ಸಂಡಾಸಕ್ಕೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಹೆಬೂಬ ಮತ್ತು ನಿಮ್ಮಣ್ಣ ಖಾಜಾಭಾಯಿ ಇಬ್ಬರು ಕೂಡಿ ಮೋಟರ್ ಸೈಕಲ್ ನಂ: ಕೆಎ-33 ಡಬ್ಲು-3605 ರ ಮೇಲೆ ಯಾದಗಿರಿಯಿಂದ ನಾಯ್ಕಲಗೆ ಬರುತ್ತಿದ್ದಾಗ ಮಹೆಬೂಬನು ಮೋಟರ್ ಸೈಕಲ್ ನಡೆಸುತ್ತಿದ್ದು, ಖಾಜಾಭಾಯಿ ಹಿಂದುಗಡೆ ಕುಳಿತು ಹೊರಟಿದ್ದರು. ಅದೇ ವೇಳೆಗೆ ಶಹಾಪೂರ ಕಡೆಯಿಂದ ಟಿಪ್ಪರ್ ನಂ:ಕೆಎ-32 ಡಿ-2560 ರ ಚಾಲಕನು ತನ್ನ ಟಿಪ್ಪರನ್ನು ಅತೀವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮಹೆಬೂಬ ಮತ್ತು ಖಾಜಾಭಾಯಿ ಹೊರಟ ಮೋಟರ್ ಸೈಕಲ್ಗೆ ಡಿಕ್ಕಿಹೊಡೆದಿದ್ದರಿಂದ ಅಪಘಾತವಾಗಿದ್ದು, ಅಪಘಾತದಲ್ಲಿ ಖಾಜಾಭಾಯಿ ಮತ್ತು ಮಹೆಬೂಬ ಇಬ್ಬರು ಮೋಟರ್ ಸೈಕಲ್ ಸಮೇತ ಟಿಪ್ಪರ್ ಕೆಳಗಡೆ ಸಿಕ್ಕಿಬಿದ್ದರು. ಆಗ ನಾನು ಮತ್ತು ಅಬ್ದುಲ್ ಖದೀರ್ ತಂದೆ ಅಬ್ದುಲ ನಬಿ, ಭೀಮರಾಯ ತಂದೆ ಚಂದಪ್ಪ ಸುಂಗಲಕರ್ ರವರು ಘಟನೆಯನ್ನು ನೋಡಿದ್ದು, ನಾನು ನಿನಗೆ ಫೋನ್ಮಾಡಿ ಹೇಳಿರುತ್ತೇನೆ ಎಂದು ತಿಳಿಸಿದರು. ನಂತರ ಗಾಯಗೊಂಡ ನನ್ನ ಅಣ್ಣ ಖಾಜಾಭಾಯಿ ಮತ್ತು ಮಹೆಬೂಬನಿಗೆ 108 ಅಂಬುಲೆನ್ಸ್ ವಾಹನದಲ್ಲಿ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಇಬ್ಬರಿಗೆ ಕಲಬುರಗಿಗೆ ಕರೆದುಕೊಂಡು ಹೋಗುವಾಗ ಕಲಬುರಗಿ ಸಮೀಪ ಮಾರ್ಗ ಮಧ್ಯದಲ್ಲಿ ಇಂದು ದಿನಾಂಕ:09/12/2022 ರಂದು 00:30 ಗಂಟೆಯ ಸುಮಾರಿಗೆ ನಮ್ಮಣ್ಣ ಖಾಜಾಭಾಯಿ ಮೃತಪಟ್ಟನು. ಮೃತ ನನ್ನ ಅಣ್ಣನ ಶವವನ್ನು ಮರಳಿ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿರುತ್ತೇವೆ. ಗಾಯಾಳು ಮಹೆಬೂಬನಿಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ಕಾರಣ ಟಿಪ್ಪರ್ ನಂ:ಕೆಎ-32 ಡಿ-2560 ರ ಚಾಲಕ ಶ್ರೀಕಾಂತ ತಂದೆ ಹಣಮಂತ ಸುಲಗೆಮಿ, ಸಾ||ಬೆಡಕಪಲ್ಲಿ, ತಾ||ಚಿಂಚೋಳಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 136/2022 ಕಲಂ:279, 337, 338, 304(ಎ) ಐ.ಪಿ.ಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 161/2022 ಕಲಂ: 279, 337, 338 ಐಪಿಸಿ: ಇಂದು ದಿ: 09/12/2022 ರಂದು 6-00 ಪಿ.ಎಮ್ಕ್ಕೆ ಪಿರ್ಯಾದಿ ಶ್ರೀ ಶಾಂತಗೌಡ ತಂದೆ ಅಡಿವೆಪ್ಪಗೌಡ ಮಾಡಬಾಳ ವ|| 45 ವರ್ಷ ಜಾ|| ಲಿಂಗಾಯತರೆಡ್ಡಿ ಉ|| ಒಕ್ಕಲುನ ಸಾ|| ಎಸ್.ಡಿ ಗೋನಾಲ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಿನ್ನೆ ದಿನಾಂಕ: 08/12/2022 ರಂದು ನಾನು ಮತ್ತು ಶಾಂತಗೌಡ ತಂದೆ ಮಲ್ಲನಗೌಡ ಮಾಲಿಪಾಟೀಲ್ ಇಬ್ಬರು ಕೂಡಿ ಊರಿನಿಂದ ಕೆಲಸದ ನಿಮಿತ್ಯ ನಮ್ಮ ಮೋಟರ ಸೈಕಲ್ ಮೇಲೆ ಸುರಪುರಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೋಗುತ್ತಿರುವಾಗ 2-30 ಪಿಎಮ್ ಸುಮಾರಿಗೆ ನಮ್ಮ ಮುಂದೆ ನಮ್ಮ ದೊಡ್ಡಪ್ಪನ ಮಗನಾದ ಸಿದ್ದನಗೌಡ ತಂದೆ ಬಸಲಿಂಗಪ್ಪ ಮಾಡಬಾಳ ಮತ್ತು ಸಿದ್ದನಗೌಡ ತಂದೆ ಭೀಮನಗೌಡ ಪೊಲಿಸ್ ಪಾಟೀಲ ಸಾ|| ಮಂಗಿಹಾಳ ಇವರಿಬ್ಬರು ತಮ್ಮ ಮೋಟರ ಸೈಕಲ್ ನಂ. ಕೆಎ-33 ಎಸ್-1221 ನೇದ್ದರ ಮೇಲೆ ಸುರಪುರ- ಲಿಂಗಸುಗುರು ಮುಖ್ಯ ರಸ್ತೆಯ ಕವಡಿಮಟ್ಟಿ ಪೆಟ್ರೋಲ್ ಪಂಪ್ ಹತ್ತಿರ ಹೋಗುತ್ತಿದ್ದಾಗ ನಾವು ಅವರಿಗೆ ಮಾತಾಡಿಸಲು ನಮ್ಮ ಮೋಟರ ಸೈಕಲ್ ನಿಲ್ಲಿಸಿದ್ದು ಅವರೂ ತಮ್ಮ ಮೋಟರ ಸೈಕಲ್ ನಿಲ್ಲಿಸಿದರು. ಆಗ ನಾವು ಎಲ್ಲರು ರೋಡಿನ ಬದಿಗೆ ಮಾತಾಡುತ್ತಾ ನಿಂತಿದ್ದೆವು. ಹೀಗಿದ್ದು 3-00 ಪಿಎಮ್ ಸುಮಾರಿಗೆ ದೇವಾಪುರ ಕಡೆಯಿಂದ ಒಂದು ಐಷರ್ ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಎಡಬದಿಗೆ ನಿಂತಿದ್ದ ಸಿದ್ದನಗೌಡ ತಂದೆ ಬಸಲಿಂಗಪ್ಪ ಮಾಡಬಾಳ ಮತ್ತು ಸಿದ್ದನಗೌಡ ತಂದೆ ಬೀಮನಗೌಡ ಪೊಲೀಸ್ ಪಾಟೀಲ ಇಬ್ಬರಿಗೂ ಜೋರಾಗಿ ಡಿಕ್ಕಿಪಡಿಸಿದ್ದರಿಂದ ಇಬ್ಬರೂ ರೋಡಿನ ಬದಿಗೆ ಬಿದ್ದರು. ನಾವು ಅವರಿಗೆ ನೊಡಲಾಗಿ ಸಿದ್ದನಗೌಡ ತಂದೆ ಬಸಲಿಂಗಪ್ಪ ಈತನಿಗೆ ಬಲಗೈ ಮೊಳಕೈಗೆ ತರಚಿದ ಗಾಯ, ಬಲಗಾಲ ಮೊಳಕಾಲ ಹತ್ತಿರ ಮುರಿದಂತಾಗಿ ರಕ್ತಗಾಯವಾಗಿರುತ್ತದೆ. ಬಲಗಾಲ ಪಾದದ ಮೇಲೆ ಬಾರಿ ರಕ್ತಗಾಯವಾಗಿರುತ್ತದೆ. ಸಿದ್ದನಗೌಡ ಪೊಲೀಸ್ ಪಾಟೀಲ ಇವರಿಗೆ ಬಲಗೈ ಮೊಳಕೈಗೆ ಮುರಿದಂತಾಗಿ ರಕ್ತಗಾಯ, ಬಲಗಡೆ ಸೊಂಟಕ್ಕೆ ಮುರಿದಂತಾಗಿ ಗುಪ್ತಗಾಯ, ಬಲಗಾಲ ಮೊಳಕಾಲ ಕೆಳಗೆ ಬಾರಿ ರಕ್ತಗಾಯ, ಬಲಗಾಲ ಪಾದದ ಮೇಲೆ ರಕ್ತಗಾಯವಾಗಿರುತ್ತದೆ. ನಂತರ ಸ್ವಲ್ಪ ಮುಂದೆ ಹೋಗಿ ನಿಂತಿದ್ದ ಐಷರ್ ಲಾರಿ ನಂಬರ ನೋಡಲಾಗಿ ಕೆಎ-19 ಎಎ-2787 ಅಂತ ಇದ್ದು ಅದರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ವಿಠಲ ತಂದೆ ಹಣಮಂತ್ರಾಯ ಪೊಲೀಸ್ ಬಿರಾದಾರ ಸಾ|| ರಾಮ ಮಂದಿರ ಕಲಬುರಗಿ ಅಂತ ತಿಳಿಸಿದನು. ನಂತರ ಗಾಯಗೊಂದ ಇಬ್ಬರಿಗೂ ನಾವು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಸುರಪುರಕ್ಕೆ ಕರೆದುಕೊಂಡು ಬಂದು ಉಪಚಾರ ಕುರಿತು ಸೇರಿಕೆ ಮಾಡಿದ್ದು, ವೈದ್ಯರು ಹೆಚ್ಚಿನ ಉಪಚಾರ ಕುರಿತು ಮುಂದಕ್ಕೆ ಹೋಗಲು ತಿಳಿಸಿದ್ದರಿಂದ ಕಲಬುರಗಿಯ ಕುರಾಳ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ತಡವಾಗಿ ಬಂದು ಈ ದೂರು ನೀಡಿದ್ದು ಇರುತ್ತದೆ. ಕಾರಣ ಐಷರ್ ಲಾರಿ ನಂ. ಕೆಎ-19 ಎಎ-2787 ನೇದ್ದರ ಚಾಲಕನಾದ ವಿಠಲ ತಂದೆ ಹಣಮಂತ್ರಾಯ ಪೊಲೀಸ್ ಬಿರಾದಾರ ಸಾ|| ರಾಮ ಮಂದಿರ ಕಲಬುರಗಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.161/2022 ಕಲಂ:279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 92/2022 ಕಲಂ 279, 337, 338 ಐ.ಪಿ.ಸಿ: ದಿನಾಂಕ: 08/07/2022 ರಂದು 09.30 ಎ.ಎಮ್. ಸುಮಾರಿಗೆ ಗಾಯಾಳುಗಳೆಲ್ಲರೂ ಕೂಡಿ ಮಡ್ನಾಳ ಗ್ರಾಮದಿಂದಆರೋಪಿತನಅಟೋಟಂಟಂ ನಂ:ಕೆಎ-33, ಎ-5909 ನೇದ್ದರಲ್ಲಿ ಕುಳಿತು ಇಂಗಳಗಿ ಸೀಮಾಂತರದಲ್ಲಿನ ಭೀಮರಾಯರಾಕಂಗೇರಾಇವರ ಹೊಲಕ್ಕೆ ಹತ್ತಿ ಬಿಡಿಸಲು ಕೂಲಿ ಕೆಲಸಕ್ಕೆ ಹೊರಟಾಗಇಂಗಳಗಿ ಸೀಮಾಂತರದಲ್ಲಿನ ಮಡ್ನಾಳ-ಇಂಗಳಗಿ ರೋಡಿನ ಮೇಲೆ ಮೈಲಾರಪ್ಪಕಂದಕೂರಈತನ ಹೊಲದ ಹತ್ತಿರರೋಡಿನ ಮೇಲೆ ಆರೋಪಿತನುತನ್ನಅಟೋವನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿದ್ದರಿಂದ ಅಟೋ ಚಾಲಕನ ನಿಯಂತ್ರಣತಪ್ಪಿರಸ್ತೆಯಎಡಭಾಗದಲ್ಲಿ ಪಲ್ಟಿಯಾಗಿಅಪಘಾತವಾಗಿದ್ದರಿಂದ ಸದರಿಅಪಘಾತದಲ್ಲಿ ಗಾಯಾಳುಗಳಿಗೆ ಭಾರಿ ಮತ್ತು ಸಾದಾ ಗುಪ್ತಗಾಯಗಳಾಗಿದ್ದು ಕಾರಣ ಸದರಿಆರೋಪಿತನ ವಿರುಧ್ಧ ಕಾನೂನು ಕ್ರಮಜರುಗಿಸಲು ವಿನಂತಿಅಂತಾ ಫಿಯರ್ಾದಿ.    

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ: 206/2022 ಕಲಂ379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್: ಇಂದು ದಿನಾಂಕ 09/12/2022 ರಂದು 1430 ಗಂಟೆಗೆ ಶ್ರೀ ಚೆನ್ನಯ್ಯ ಹಿರೇಮಠ ಪಿ.ಐ. ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಕೊಟ್ಟ ವರಧಿ ಏನಂದರೆ ಇಂದು ದಿನಾಂಕ 09/12/2022 ರಂದು 1300 ಗಂಟೆಯ ಸುಮಾರಿಗೆ ಬಸವೇಶ್ವರ ವೃತ್ತದಲ್ಲಿ ಟ್ರಾಪಿಕ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಂದ ಮಾತ್ಮಿ ಏನಂದರೆ  ಹೈಯಾಳ [ಬಿ] ಗ್ರಾಮದ ನದಿಯಿಂದ ಟ್ರ್ಯಾಕ್ಟರದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದು ತಾವೂ ಕೂಡಲೇ ಬರಬೇಕು ತಡವಾದರೆ ತಪ್ಪಿಸಿಕೊಳ್ಳುವ ಸಾದ್ಯತೆ ಇರುತ್ತದೆ ಅಂತ ಬಾತ್ಮಿ ಬಂದ ಮೇರೆಗೆ ನಾನು ಹಾಗು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರಾದ ಶಿವಲಿಂಗಪ್ಪ ಹೆಚ್ ಸಿ 185, ನಿಂಗಪ್ಪ ಪಿಸಿ 284, ಶಿವುಕುಮಾರ ಪಿಸಿ 323, ರಾಮಚಂದ್ರ ಪಿಸಿ 266 ಹಾಗು ನಮ್ಮ ಜೀಪ ಚಾಲಕ ರುದ್ರಗೌಡ ಎಪಿಸಿ 34 ರವರನ್ನು ಕರೆದುಕೊಂಡು ನಮ್ಮ ಸರಕಾರಿ ಜೀಪ್. ನಂ. ಕೆಎ-33 ಜಿ-0316 ನೇದ್ದರಲ್ಲಿ ಠಾಣೆಯಿಂದ 1.30 ಪಿ ಎಮ್ ಕ್ಕೆ ಹೊರಟು ಹೈಯಾಳ [ಬಿ] ಗ್ರಾಮದ ನದಿಯ ಹತ್ತಿರ ಜಾಲಿಗಿಡಗಳ ಮರೆಯಲ್ಲಿ ನಿಂತು ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿರುವ ಟ್ರ್ಯಾಕ್ಟರಗಳು ಬರುವದನ್ನು ನೋಡುತ್ತಾ ನಿಂತಾಗ, 1400 ಗಂಟೆಗೆ ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬಂದಿದ್ದು ಆಗ ನಾವೂ ಸದರಿ ಟ್ರ್ಯಾಕ್ಟರನ್ನು ಬರುವದನ್ನು ನೋಡಿ ರೋಡಿಗೆ ಬಂದಾಗ ನಮ್ಮನ್ನು ನೋಡಿದ ಟ್ರ್ಯಾಕ್ಟರ ಚಾಲಕನು ದೂರದಿಂದಲೇ ತನ್ನ ಟ್ರ್ಯಾಕ್ಟರನ್ನು ರೋಡಿನ ಪಕ್ಕದಲ್ಲಿ ನಿಲ್ಲಿಸಿ ಓಡಿಹೋಗಿದ್ದು ಸದರಿ ಟ್ರ್ಯಾಕ್ಟರ ಚಾಲಕನನ್ನು ನೋಡಿದಲ್ಲಿ ನಾವು ಗುರುತಿಸುತ್ತೇವೆ. ಮತ್ತು ಸದರಿ ಟ್ರ್ಯಾಕ್ಟರ ನಿಲ್ಲಿಸಿದ ಸ್ಥಳದಲ್ಲಿ ಹಾಗು ಸುತ್ತಮುತ್ತಲಿನಲ್ಲಿ ಯಾವದೇ ಜನರು ಕಾಣದೇ ಇದ್ದುದರಿಂದ, ನಂತರ ನಾನು ಸದರಿ ಟ್ರ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಅದಕ್ಕೆ ನಂಬರ ಇರಲಿಲ್ಲ ಹಾಗು ಟ್ರಾಲಿಗೂ ಸಹ ಯಾವದೇ ನಂಬರ ಇರಲಿಲ್ಲ. ನಂತರ ಸ್ವರಾಜ್ಯ ಟ್ರ್ಯಾಕ್ಟರ ಇಂಜಿನ ನಂಬರ ನೋಡಲಾಗಿ 42.3001/ಖಙಓ37118 ಅಂತ ಇದ್ದು, ಅದರ  ಚೆಸ್ಸಿ ನಂಬರ ನೋಡಲಾಗಿ ಘಖಅಓ92954905534 ಅಂತ ಇತ್ತು. ಟ್ರಾಲಿಗೆ ಯಾವದೇ ನಂಬರ ಇರಲಿಲ್ಲ. ಸದರಿ ಟ್ರ್ಯಾಕ್ಟರ ಚಾಲಕನು ಯಾವದೇ ದಾಖಲಾತಿಗಳು ಇಲ್ಲದೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದು, ನಮ್ಮನ್ನು ನೋಡಿ ಓಡಿ ಹೋಗಿರುವದು ದೃಡಪಟ್ಟಿದ್ದು ಅಲ್ಲದೇ ಸದರಿಯವನು ಸರಕಾರಕ್ಕೆ ಯಾವದೇ ರಾಜಧನ [ರಾಯಲ್ಟಿ] ಕಟ್ಟದೇ ಇರುವದರಿಂದ ತನ್ನ ಮರಳು ತುಂಬಿದ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು, ಸದರಿ ಟ್ರ್ಯಾಕ್ಟರದಲ್ಲಿ ಅಂದಾಜು 1500/- ರೂ ಕಿಮ್ಮತಿನ ಮರಳು ಇದ್ದು ಚಾಲನು ಸರಕಾರದಿಂದ ಯಾವದೇ ಮರಳು ಸಾಗಾಣಿಕೆ ಪರವಾನಗಿ ಪತ್ರ ಪಡೆಯದೇ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ದೃಡಪಟ್ಟಿದ್ದು, ನಂತರ ಮರಳು ತುಂಬಿದ ಟ್ರ್ಯಾಕ್ಟರನ್ನು ನಮ್ಮ ಸಿಬ್ಬಂದಿಯಾದ ರಾಮಚಂದ್ರ ಪಿಸಿ266 ರವರ ಸಹಾಯದಿಂದ ಮರಳಿ ಠಾಣೆಗೆ 02.45 ಗಂಟೆಗೆ ತೆಗೆದುಕೊಂಡು ಬಂದು, ಮರಳು ತುಂಬಿದ ಟ್ರ್ಯಾಕ್ಟರ ಹಾಗು ಅದರ ಚಾಲಕ ಮತ್ತು ಮಾಲೀಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಸಿಬೇಕು ಅಂತ  ಈ ಒಂದು ವರದಿಯನ್ನು ತಯ್ಯಾರಿಸಿ, ಮುಂದಿನ ಕ್ರಮ ಕೈಕೊಳ್ಳಲು ಸ||ತ|| ಫಿಯರ್ಾದಿದಾರರಾಗಿ ವರದಿ  ಸಲ್ಲಿಸಿದ್ದು ಸದರಿ ವರಧಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 206/2022 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

ಇತ್ತೀಚಿನ ನವೀಕರಣ​ : 10-12-2022 10:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080