ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-01-2022

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 4/2022 ಕಲಂ.279,338 ಐ.ಪಿ.ಸಿ.ಮತ್ತು 187 ಐ.ಎಮ್.ವಿ.ಕಾಯ್ದೆ. : ಇಂದು ದಿನಾಂಕ 10/01/2022 ರಂದು ಬೆಳಗ್ಗೆ 10-30 ಗಂಟೆಗೆ ಫಿರ್ಯಾಧಿದಾರಳಾದ ಶ್ರೀಮತಿ ರೇಣುಕ ಗಂಡ ಕಾಶಪ್ಪ ತಳವಾರ ವಯಾಃ30 ವರ್ಷ ಜಾಃ ಕಬ್ಬಲಿಗ ಉಃ ಮನೆ ಕೆಲಸ ಸಾಃ ಬಾಚವಾರ. ಇವರ ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದನೆಂದರೆ ನಿನ್ನೆ ದಿನಾಂಕ 09/01/2022 ರಂದು ಮುಂಜಾನೆ 8:00 ಗಂಟೆಯ ಸುಮಾರಿಗೆ ನನ್ನ ಗಂಡನಾದ ಕಾಶಪ್ಪ ತಂದೆ ಸಾಬಣ್ಣ ತಳವಾರ ಸಾ: ಬಾಚವಾರ ಮತ್ತು ಇತರರಾದ ರಾಮು ತಂದೆ ದೇವಿಂದ್ರಪ್ಪ, ಪರಶುರಾಮ ತಂದೆ ಸಾಬಣ್ಣ, ಮಲ್ಲಿಕಾಜರ್ುನ ತಂದೆ ದೇವಿಂದ್ರಪ್ಪ ಸಾ: ಎಲ್ಲರು ಬಾಚವಾರ ಗ್ರಾಮದವರು ಎಲ್ಲರು ಸೇರಿ ನಮ್ಮೂರಿನ ಮರೆಪ್ಪ ತಂದೆ ಯಲ್ಲಪ್ಪ ಚಿಂಚರ ಸಾ:ಬಾಚವಾರ ಇವರ ಹೊಲಕ್ಕೆ ತೊಗರಿ ಬಡಿಯಲು ಮುಂಜಾನೆ ಹೋಗಿದ್ದರು ಮತ್ತೆ ಕೆಲಸ ಮುಗಿಸಿಕೊಂಡು 4 ಜನರು ಸೇರಿ ಮರಳಿ ರಾತ್ರಿ 9:00 ಗಂಟೆಯ ಸುಮಾರಿಗೆ ಮನೆ ಕಡೆಗೆ ಯಾಗಪುರ ರಸ್ತೆಯ ಕಡೆಯಿಂದ ಬಾಚವಾರ ಕಡೆಗೆ ರಸ್ತೆಯ ಎಡಗಡೆಯಿಂದ ನಡೆದುಕೊಂಡು ಬರುತ್ತಿರುವಾಗ ಬಾಚವಾರ ಕಡೆಯಿಂದ ಒಂದು ಮೋಟರ ಸೈಕಲ ಸವಾರನು ನಂಬರ ಇಲ್ಲದ ವಾಹನವನ್ನು ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ರಸ್ತೆಯ ಎಡಭಾಗದ ಕಡೆ ನಡೆದುಕೊಂಡು ಹೋಗುತ್ತಿರುವ ನನ್ನ ಗಂಡನಿಗೆ ಡಿಕ್ಕಿ ಪಡಿಸಿ ಮೋಟರ ಸೈಕಲನು ಅಲ್ಲೆ ಬಿಟ್ಟು ಓಡಿ ಹೋದನು ಮೊಟರ ಸೈಕಲ್ ಚೆಸ್ಸಿ ನಂ,ಒಃಐಊಂಘ125ಒ5927176 ಸದರಿ ಮೋಟರ ಸೈಕಲ ಸವಾರನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಡಿಕ್ಕಿ ಪಡಿಸಿದ ರಭಸಕ್ಕೆ ನನ್ನ ಗಂಡನು ರಸ್ತೆಯ ಎಡಭಾಗಕ್ಕೆ ಪುಟಿದು ಬಿದ್ದನು.ಸದರಿ ಅಪಘಾತದ ಪರಿಣಾಮದಿಂದಾಗಿ ಈ ರಿತಿಯಾದ ಗಾಯಗಳು ಆಗಿರುತ್ತವೆ.ಎಡಗಾಲಿನ ಮೋಣಕಾಲಿನ ಕೆಳಗೆ ಎಲುಬು ಮುರಿದಂತೆಯಾಗಿದ್ದು,ಬಲಬಾಗದ ಕೀವಿಯಲ್ಲಿ ರಕ್ತಸೊರುತ್ತಿದ್ದ ಭಾರಿ ಗಾಯ,ಬಲಬಾಗದ ಭುಜಕ್ಕೆ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ,ಎಡಗಡೆ ಗದ್ದಕ್ಕೆ ರಕ್ತಗಾಯವಾಗಿರುತ್ತದೆ.ಸದರಿ ಗಾಯಗಳಿಂದ ನರಳಾಡುತ್ತಿರುವಾಗ ನನ್ನ ಗಂಡನ ಸಂಗಡ ಕೂಲಿ ಕೆಲಸಕ್ಕೆ ಹೊಗಿದ್ದ, ರಾಮು ತಂದೆ ದೇವಿಂದ್ರಪ್ಪ, ಪರಶುರಾಮ ತಂದೆ ಸಾಬಣ್ಣ, ಮಲ್ಲಿಕಾಜರ್ುನ ತಂದೆ ದೇವಿಂದ್ರಪ್ಪ ಸಾ: ಎಲ್ಲರು ಬಾಚವಾರ ಇವರು ನನ್ನ ಗಂಡನ ತಮ್ಮನಾದ ಶಶಿಕುಮಾರ ತಂದೆ ಸಾಬಣ್ಣ ತಳವಾರ ಇತನಿಗೆ ಪೊನ್ ಕರೆ ಮೂಲಕ ತಿಳಿಸಿದ್ದರಿಂದ ತಕ್ಷಣ ಸ್ಥಳಕ್ಕೆ ಬಂದು ಒಂದು ಖಾಸಗಿ ವಾಹನದಲ್ಲಿ ಹಾಕಿ ಕೊಂಡು ಬಂದು ಚಿಕಿತ್ಸೆಗಾಗಿ ಯಾದಗಿರ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ವಿಷಯದ ಬಗ್ಗೆ ನಾವು ನಮ್ಮ ಹಿರಿಯರ ಜೊತೆಗೆ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ.10-01-2022 ರಂದು ಬೆಳಗ್ಗೆ 10-30 ಗಂಟೆಗೆ ಠಾಣೆಗೆ ಬಂದಿದ್ದು. ಸದರಿ ಅಪಘಾತ ಮಾಡಿದ ಚಾಲಕರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ.ಅಂತಾ ಹೇಳಿಕೆ ನೀಡಿದ್ದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 04/2022 ಕಲಂ 279, 338 ಐಪಿಸಿ ಮತ್ತು 187 ಐ.ಎಮ್.ವಿ.ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 03/2022 ಕಲಂ:9,10,11 ಬಾಲ್ಯ ವಿವಾಹ ನಿಷೇದ ಕಾಯ್ದೆ-2006 : ಇಂದು ದಿನಾಂಕ 10.01.2022 ರಂದು ಸಂಜೆ 4:00 ಗಂಟೆಗೆ ಪ್ರಕರಣದ ಫೀರ್ಯಾದಿದಾರರು ಈ ಮೊದಲು ದಿನಾಂಕ 29.05.2021 ರಂದು ಮಕ್ಕಳ ಸಹಾಯವಾಣಿ ಸಂಖ್ಯೆ 1098 ನೇದ್ದಕ್ಕೆ ದಿನಾಂಕ 30.05.2021 ರಂದು ಯಲ್ಹೇರಿ ಸಿಮಾಂತರದ ಆಶಾಪೂರ ಆಂಜನೇಯ ದೇವಸ್ಥಾನದಲ್ಲಿ ಭೀಮರಾಯ ಯಂಕಟರಾಯನೋರ ಎಂಬಾತನ ಬಾಲ್ಯ ವಿವಾಹವು ನೊಂದ ಬಾಲಕಿ ಕುಮಾರಿ. ಕಾವೇರಿಯೊಂದಿಗೆ ನಡೆಯಲಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಹೋಗಿ ಕಾನೂನಿನ ಅರಿವು ನೀಡಿದ್ದರು ಸಹ ಅದನ್ನು ಲೇಕಿಸದೇ ಈ ಮೇಲ್ಕಂಡ ಎಲ್ಲಾ ಆರೋಪಿತರು ಬಾಲ್ಯ ವಿವಾಹ ನೇರವೇರಿಸಿದ್ದು ಆ ಬಗ್ಗೆ ಪುನಃ ಮಾಹಿತಿ ಬಂದ ಮೇರೆಗೆ ಸ್ಥಾನಿಕ ವಿಚಾರಣೆ ಮಾಡಿದ ನಂತರ ಇಂದು ದಿನಾಂಕ 10.01.2022 ರಂದು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ: 03/2022 ಕಲಂ:9,10,11 ಬಾಲ್ಯ ವಿವಾಹ ನಿಷೇದ ಕಾಯ್ದೆ-2006 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 04/2022 ಕಲಂ: 379 ಐಪಿಸಿ : ದಿನಾಂಕ:10/01/2022 ರಂದು 11:45 ಪಿಎಮ್ ಕ್ಕೆ ಪ್ರಕಾಶ ಆರ್. ಯಾತನೂರು ಪಿ.ಐ ಡಿ.ಎಸ್.ಬಿ ಜಿಲ್ಲಾ ಪೊಲೀಸ್ ಕಛೇರಿ ಯಾದಗಿರಿ ರವರು ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ:10/01/2022 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ಕಛೇರಿಯಲ್ಲಿದ್ದಾಗ ಮಾನ್ಯ ಪೊಲೀಸ್ ಅಧೀಕ್ಷಕರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ಖಚಿತ ಬಾತ್ಮಿ ಬಂದಿದ್ದೆನಂದರೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಡೆಬೆಂಬಳ್ಳಿ ಸಮೀಪ ಕೃಷ್ಣಾ ನದಿಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ಬಂದಿದ್ದರಿಂದ ನಮ್ಮ ಸಿಬ್ಬಂದಿಯವರಾಧ ಮಹ್ಮದ ಗೌಸ ಹೆಚ್.ಸಿ 112, ಸಾಯಬಣ್ಣ ಹೆಚ್.ಸಿ 81 ಹಾಗೂ ಜೀಪ ಚಾಲಕ ಚಂದ್ರಶೇಖರ ಎ.ಆರ್.ಎಸ್.ಐ ರವರಿಗೆ ಕರೆಸಿಕೊಂಡು ಅಕ್ರಮ ಮರಳು ಸಾಗಾಣಿಕೆ ಮಾಹಿತಿ ತಿಳಿಸಿ, ನಾನು ಸದರಿ ಮೇಲ್ಕಂಡ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನಂ. ಕೆಎ 33 ಜಿ 100 ನೇದ್ದರಲ್ಲಿ ಯಾದಗಿರಿಯಿಂದ 9:00 ಗಂಟೆ ಸುಮಾರಿಗೆ ಹೊರಟು 10:30 ಪಿಎಮ್ ಸುಮಾರಿಗೆ ಹತ್ತಿಗೂಡುರು-ಸಂಗಮ ಮೇನ ರೋಡ ಕದರಾಪೂರ ಕ್ರಾಸ ಸಮೀಪ ಹೋಗಿ ನಿಂತುಕೊಂಡಾಗ ಗೋನಾಲ-ಶಿವಪೂರ ಕೃಷ್ಣಾ ನದಿ ಕಡೆಯಿಂದ ಒಂದು ಟಿಪ್ಪರ ಮರಳು ತುಂಬಿಕೊಂಡು ಬರುವುದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಸದರಿ ಟಿಪ್ಪರ ನಿಲ್ಲಿಸಿ, ಚಾಲಕನಿಗೆ ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಶ್ರೀಶೈಲ್ ತಂದೆ ಪೀರಪ್ಪ ವ:32, ಜಾ:ಮಾದಿಗ, ಉ:ಡ್ರೈವರ ಸಾ:ವಾಡಿ ತಾ:ಚಿತ್ತಾಪೂರ ಎಂದು ಹೇಳಿದನು. ಟಿಪ್ಪರ ಮಾಲಿಕನ ಹೆಸರು ಕೇಳಿದರೆ ಗಾಡಿ ಯಾರ ಹೆಸರಿನಲ್ಲಿ ನೊಂದಣಿ ಇದೆ ನನಗೆ ಗೊತ್ತಿಲ್ಲ. ಪಂಡಿತ ರಾಠೋಡ ಸಾ:ಮುದ್ನಾಳ ಇವರು ನನಗೆ ಮರಳು ತರಲು ಕಳುಹಿಸಿರುತ್ತಾರೆ ಎಂದು ಹೇಳಿದನು. ಟಿಪ್ಪರ ನಂಬರ ನೋಡಲಾಗಿ ನಂ. ಕೆಎ 33 ಬಿ 2511 ಇರುತ್ತದೆ. ಸದರಿ ಟಿಪ್ಪರ ಮರಳು ತುಂಬಿದ್ದು, ಇದರ ಚಾಲಕ ಶ್ರೀಶೈಲ್ ಮತ್ತು ಟಿಪ್ಪರ ಮಾಲಿಕ ಇವರು ಅಕ್ರಮವಾಗಿ ಮತ್ತು ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಮರಳು ಸಾಗಾಣಿಕೆ ಮಾಡುತ್ತಿದ್ದು, ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು 11:45 ಪಿಎಮ್ ಕ್ಕೆ ಟಿಪ್ಪರ ಮತ್ತು ಟಿಪ್ಪರ ಚಾಲಕ ಶ್ರೀಶೈಲನೊಂದಿಗೆ ಠಾಣೆಗೆ ಬಂದು ನಿಮಗೆ ದೂರು ನೀಡುತ್ತಿದ್ದು, ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 04/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 11-01-2022 11:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080