ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-01-2023ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ : 03/2023 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ 10/01/2023 ರಂದು 1:00 ಪಿ.ಎಂಕ್ಕೆ ಶ್ರೀ ಸುನಿಲ್ ಮೂಲಿಮನಿ ಸಿ.ಪಿ.ಐ ಯಾದಗಿರಿ ವೃತ್ತ ಕಛೇರಿ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 10/01/2023 ರಂದು 10:45 ಎ.ಎಂಕ್ಕೆ ನಾನು ಯಾದಗಿರಿ ವೃತ್ತ ಕಛೇರಿಯಲ್ಲಿರುವಾಗ ಯಾದಗಿರಿ ನಗರದ  ಸ್ಟೇಷನ್ ಏರಿಯಾದ ಸಿದ್ದೇಶ್ವರ ಲಾಡ್ಜ್ ಕ್ರಾಸಿನಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 11:30 ಎ.ಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಆತನ ಹೆಸರು 1) ಭೀಮು ತಂದೆ ಚಂದ್ರಕಾಂತ್ ಚವ್ಹಾಣ್ ವ; 27 ಜಾ; ಲಮಾಣಿ ಉ; ಹೊಟೆಲ್ ಕೆಲಸ, ಸಾ; ಲಾಡೆಜ್ ಗಲ್ಲಿ ಯಾದಗಿರಿ ಅಂತಾ ತಿಳಿಸಿದ್ದು ನಂತರ ಸದರಿಯವರಿಗೆ ಅಂಗಶೋಧನೆ ಮಾಡಲಾಗಿ ಅವರ ಹತ್ತಿರ 1) ನಗದು ಹಣ 630-00 ರೂ. 2) ಒಂದು ಮಟಕಾ ಅಂಕಿ ಬರೆದ ಚೀಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 10/01/2023 ರಂದು 11:30 ಎ.ಎಂ ದಿಂದ 12:30 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪ್ಟಾಟ್ದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿ ಪಂಚನಾಮೆಯನ್ನು ಮುಗಿಸಿಕೊಂಡು 1:00 ಪಿಎಂಕ್ಕೆ ಠಾಣೆಗೆ ಬಂದು ಆರೋಪಿತನ ವಿರುದ್ಧ ಕ್ರಮ ಕೈಗೊಳ್ಳುವಂತೆ ನೀಡಿದ ಜ್ಞಾಪನಾ ಪತ್ರದ ಅಧಾರದ ಮೇಲಿಂದ ಠಾಣೆ ಗುನ್ನೆ ನಂ. 03/2023 ಕಲಂ. 78(3) ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 07/2023 ಕಲಂ: 379 ಐಪಿಸಿ: ಜೋಳದಡಗಿ  ಗ್ರಾಮದ ಸೀಮಾಂತರದಲ್ಲಿ ಬರುವ ಪಟ್ಟಾ ಜಮೀನು ಸವರ್ೇ ನಂ. 11/2 ರಲ್ಲಿ ಅಂದಾಜು ಪ್ರಮಾಣ 68 ಮೆಟ್ರಿಕ್ ಟನ್ ರಷ್ಟು ಪ್ರಮಾಣದ ಮರಳನ್ನು ಮಾರಾಟದ ಉದ್ದೇಶದಿಂದ ಗೋನಾಳ ಗ್ರಾಮದ ಕೃಷ್ಣಾ ನದಿಯಿಂದ ಸಕರ್ಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಕಳ್ಳತನ ಮಾಡಿ ಸಂಗ್ರಹಿಸಿದ್ದು ಕಂಡುಬಂದಿರುತ್ತದೆ. ಇದರ ರಾಜಧನ ಮೊತ್ತವು ರೂ. 5,440/- ಆಗಿರುತ್ತದೆ.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 04/2023 ಕಲಂ 498(ಎ), 323, 504, 506 ಸಂಗಡ 34 ಐಪಿಸಿ: ಇಂದು ದಿನಾಂಕ 10.01.2023 ರಂದು ಮಧ್ಯಾಹ್ನ 2 ಗಂಟೆಗೆ ಅನ್ನಮ್ಮ ಗಂಡ ಗೌತಮ ಕೊರೆಬಾನ, ವ|| 22 ವರ್ಷ, ಜಾ|| ಹೊಲೆಯ, ಉ|| ಮನೆಕೆಲಸ, ಸಾ|| ಬದ್ದೇಪಲ್ಲಿ ಗ್ರಾಮ, ಹಾ||ವ|| ದಂತಾಪೂರ ಗ್ರಾಮ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿರುತ್ತಾರೆ. ದೂರಿನ ಸಾರಾಂಶವೇನೆಂದರೆ, ಫಿಯರ್ಾದಿದಾರಳಿಗೆ ಅವಳ ಗಂಡ ಹಾಗೂ ಅವರ ಮನೆಯವರು 2022 ನೇ ಸಾಲಿನ ಎಪ್ರೀಲ್ ತಿಂಗಳ 2ನೇ ವಾರದಿಂದ ಜೂನ ತಿಂಗಳ ಕೊನೆಯ ವಾರದ ಮಧ್ಯದಲ್ಲಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಮನೆಯಿಂದ ಹೊರದೊಬ್ಬಿರುತ್ತಾರೆ ಅಂತಾ ವಗೈರೆ ಆಪಾದನೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 09/2023 ಕಲಂ: 420 ಸಂಗಡ 34 ಐ.ಪಿ.ಸಿ (ನ್ಯಾಯಾಲಯದ ಉಲ್ಲೇಖಿತ ಗುನ್ನೆ): ಮಾನ್ಯ ನ್ಯಾಯಾಲದಿಂದ ವಸೂಲಾದ ಖಾಸಗಿ ದಾವೆ ನಂ: 147/2022 ನೇದ್ದನ್ನು ನ್ಯಾಯಾಲಯದ ಕರ್ತವ್ಯ ಸಿಬ್ಬಂದಿಯಾದ  ಶ್ರೀ ರಾಮಣ್ಣ ಪಿ.ಸಿ-424 ರವರು ತಂದು ಠಾಣೆಗೆ ಹಾಜರು ಪಡಿಸಿದ್ದನ್ನು ಇಂದು ದಿನಾಂಕ: 10/01/2023 ರಂದು 01-00 ಪಿ.ಎಮ್ ಕ್ಕೆ ಸ್ವಿಕರಿಸಿಕೊಂಡು, ಸದರಿ ಪ್ರಕರಣದ ಪಿರ್ಯಾದಿದಾರರಾದ ಶ್ರೀ ಬುದ್ದಘೋಷ ದೇವೆಂದ್ರ ತಂದೆ ಬೈಲಪ್ಪ ಹೆಗ್ಗಡೆ ವಯಾ: 61 ವರ್ಷ ಉ:ನಿವೃತ್ತ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಸಾ: ಶಹಾಪೂರ ರವರು ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ ಅಜರ್ಿ ಸಾರಾಂಶವೆನಂದರೆ, ಪಿರ್ಯಾದಿದಾರನು ಶಹಾಪೂರ ನಗರದ ನಿವಾಸಿತನಾಗಿದ್ದು, ನಗರಸಭೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿ ಸಾಮಾಜಿಕ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಾ ಉಪಜೀವಿಸುತ್ತಿದ್ದಾರೆ. ಆರೋಪಿ ನಂಬರ 1 ಅವರು ಶಹಾಪೂರ ತಹಶೀಲ ಕಛೇರಿಯಲ್ಲಿ ತಹಸಿಲ್ದಾರ ಆಗಿ(2018) ರಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿರುತ್ತಾರೆ. ಆರೊಪಿ ನಂ: 02 ಅವರು ಶಹಾಪೂರ ತಾಲುಕಿನ ಗೋಗಿ ಹೊಬಳಿ ವ್ಯಾಪ್ತಿಯಲ್ಲಿ(2018) ರಲ್ಲಿ ಪ್ರಭಾರಿ ಕಂದಾಯ ನರೀಕ್ಷಕರಾಗಿ ಸೇವೆ ಸಲ್ಲಿಸಿ ಈಗ ಶಹಾಪೂರ ತಾಲೂಕಿನ ದಿಗ್ಗಿ ಬುದನೂರ ಗ್ರಾಮ ಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಪಿರ್ಯಾದಿದಾರನು ಹೇಳುವುದೆನೆಂದರೆ ಶಹಾಪೂರ ನಗರದ ತಹಸಿಲ್ದಾರರ ಕಛೇರಿಯಲ್ಲಿ ಗೋಗಿ(ಪಿ) ಗ್ರಾಮ ವ್ಯಾಪ್ತಿಯಲ್ಲಿ ಆರೊಪಿ 1&2 ಅವರು ಸರಕಾರಕ್ಕೆ ವಂಚನೆ ಹಾಗೂ ಮೋಸ ಮಾಡಿ ದಿನಾಂಕ: 1-9-2018 ರಂದು ಶಹಾಪೂರ ತಾಲೂಕಿನ ಗೋಗಿ(ಪಿ) ಗ್ರಾಮದ ನಿವಾಸಿ ಆರೋಪಿ ನಂ: 03 ಅವರು ಮಗಳು ಅನನ್ನ ಅವರಿಗೆ ಪರಿಶಿಷ್ಟ ಜಾತಿ ಅಲ್ಲದಿದ್ದರು ಸಹ(ಬೇಡ ಜಂಗಮ) ಪರಶಿಷ್ಟ ಜಾತಿಗೆ ಸೇರಿರುತ್ತಾರೆ ಎಂದು ಪ್ರಮಾಣ ಪತ್ರ ನೀಡಿದ್ದು ಇರುತ್ತದೆ.ಪಿರ್ಯಾದಿದಾರನು ಹೇಳುವುದೆನೆಂದರೆ, ವಿತರಿಸಲಾದ ಎಸ್.ಸಿ ಪ್ರಮಾಣ ಪತ್ರವು ಜೀವತಾವಧಿಗೆ ಅಸ್ತಿತ್ವದಲ್ಲಿರುತ್ತದೆ ಎಂದು ನೀಡಲಾಗಿರುವ ಪ್ರಮಾಣ ಪತ್ರದಲ್ಲಿ ಆರೊಪಿ ನಂ:01 ಅವರು ದೃಡಿಕರಿಸಿದ್ದು ಇರುತ್ತದೆ. ಪಿರ್ಯಾದಿದಾರನು ಹೇಳುವುದದೆನೆಂದರೆ ಆರೋಪಿಗಳಾದ 1&2 ಅವರು ಸರಕಾರಕ್ಕೆ ಮೋಸ ಹಾಗು ವಂಚನೆ ಮಾಡಿರುತ್ತಾರೆ. ಅಲ್ಲದೇ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಎಸ್.ಸಿ ಪ್ರಮಾಣ ಪತ್ರವನ್ನು ಆರೊಪಿ ನಂ:03 ಅವರು ತಮ್ಮ ಪುತ್ರಿ ಅನನ್ಯ ಹೆಸರಿನಲ್ಲಿ ಪಡೆದುಕೊಂಡಿರುವುದು ವಂಚನೆಯಾಗಿದೆ. ಪಿರ್ಯಾದಿದಾರನು ಹೇಳುವುದೆನೆಂದರೆ ಇದಕ್ಕೆ ನೇರ ಹೊಣೆ ಕಂದಾಯ ಇಲಾಖೆ ಆರೊಪಿಗಳಾದ 1&2 ಅವರು ಶಾಮೀಲಾಗಿ ಹಾಗೂ ವಂಚನೆಯಿಂದ ಎಸ್.ಸಿ ಪ್ರಮಾಣ ಪತ್ರವನ್ನು ಮೋಸದಿಂದ ಆರೋಪಿ ನಂ: 03 ಅವರು ತನ್ನ ಮಗಳ ಹೆಸರಿನಲ್ಲಿ ವಿತರಿಸಿದ್ದಾರೆ ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿರ್ಯಾದಿ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ; 09/2023  ಕಲಂ:420 ಸಂಗಡ 34 ಐ.ಪಿ.ಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.                                                                   


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 05/2023 ಕಲಂ: 409 ಐ.ಪಿ.ಸಿ: ಇಂದು ದಿನಾಂಕ: 10-01-2023 ರಂದು ಅಜರ್ಿದಾರರಾದ ಶ್ರೀ. ಸೈಯದ್ ಉಮೇರ ಅಹೆಮದ್ ತಂದೆ ಸೈಯದ್ ಶಬ್ಬೀರ ಅಹೇಮದ್ ವಯಾ:32 ವರ್ಷ ಉ: ಜಿಲ್ಲಾ ವಕ್ಫ್ ಅಧಿಕಾರಿಗಳು ಯಾದಗಿರಿ ಜಿಲ್ಲೆ, ಜಾ: ಮುಸ್ಲಿಂ ಸಾ:ಲಿಂಗಸೂಗೂರ ತಾ:ಲಿಂಗಸೂಗೂರ ಜಿ:ರಾಯಚೂರ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿ ನೀಡಿದ್ದು ಸದರಿ ಅಜರ್ಿ ಸಾರಂಶವೇನಂದರೆ, ಯಾದಗಿರಿ ಜಿಲ್ಲಾ ಶಹಾಪೂರ ತಾಲೂಕಿನ ಉಮರದೊಡ್ಡಿ ಗ್ರಾಮದ ಹಜರತ್-ಎ-ಉಮರದೊಡ್ಡಿ ಶಾಹ ಸಾಹಿಬ್ ಮಸ್ಜಿದ್ ಮತ್ತು ದಗರ್ಾ ವಕ್ಫ್ ಸಂಸ್ಥೆಯು ಕನರ್ಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿ ಸಂಖ್ಯೆ ಏಖಃಂ/ಖಇಉ/35/ಙಆಉ/2016-17 ದಿನಾಂಕ 01/06/2017 ರನ್ವಯ ಅಧಿಸೂಚಿತ ವಕ್ಫ್ ಸಂಸ್ಥೆಯಾಗಿರುತ್ತದೆ. ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ವತಿಯಿಂದ ಸದರಿ ಸಂಸ್ಥೆಗೆ ರೂ 04 ಲಕ್ಷ ಅನುದಾನ ಕಂಪೌಂಡ ಗೋಡೆ ನಿಮರ್ಾಣ ಮಾಡಲು ಸರಕಾರದ ಆದೇಶ ಸಂ: ಒಘಆ/28/ಘಉಂ/2017 ದಿನಾಂಕ 28/08/2017 ನೇದ್ದರ ಕ್ರಮ ಸಂಖ್ಯೆ 41 ರ ಅನ್ವಯ ರೂ 04 ಲಕ್ಷ ಅನುದಾನ ಮಂಜೂರಾಗಿ ದಿನಾಂಕ 19/05/2018 ರಂದು ಹಜರತ್-ಎ-ಉಮರದೊಡ್ಡಿ ಶಾಹ ಸಾಹಿಬ್ ಮಸ್ಜಿದ್ ಮತ್ತು ದಗರ್ಾ ವಕ್ಫ್ ಸಂಸ್ಥೆಯ ಹೆಸರಿನಲ್ಲಿ ಇರುವ ಡಿಸಿಸಿ ಬ್ಯಾಂಕ ಶಹಾಪೂರ ಶಾಖೆಯ ಬ್ಯಾಂಕ ಖಾತೆ ನಂ: 198001839888 ನೇದ್ದರ ಖಾತೆಗೆ ಜಮಾ ಆಗಿರುತ್ತದೆ. ಸದರಿ ಸಂಸ್ಥೆಗೆ ಶ್ರೀ. ಮೊಹಮ್ಮದ ಅಲೀಮುದ್ದೀನ ತಂದೆ ಮೊಹಮ್ಮದ ಜಿಲಾನಿ ರವರು ಅಧ್ಯಕ್ಷರಾಗಿರುತ್ತಾರೆ. ಸದರಿಯವರು ಸಕರ್ಾರಿ ಅನುದಾನವನ್ನು ಪಡೆದುಕೊಳ್ಳುವಾಗ ಮೊಹಮ್ಮದ ಅಲೀಮುದ್ದೀನ ಇವರು ಕಂಪೌಂಡ ಗೋಡೆ ಕಟ್ಟುತ್ತೇನೆ ಮತ್ತು ತಪ್ಪಿದಲ್ಲಿ ಹಣವನ್ನು ಮರಳಿ ಸರಕಾರಕ್ಕೆ ಮರು ಸಂದಾಯ ಮಾಡುತ್ತೇನೆ ಅಂತಾ ಇಂಡಿಮಿನಿಟಿ ಬಾಂಡ್ ಬರೆದುಕೊಟ್ಟಿದ್ದು ಇರುತ್ತದೆ. ನಂತರದಲ್ಲಿ ಸದರಿ ಮೊಹಮ್ಮದ ಅಲೀಮುದ್ದೀನ ಇವರು ಬ್ಯಾಂಕ ಖಾತೆ ನಂ: 198001839888 ನೇದ್ದರ ದಿನಾಂಕ:24/05/2018 ರಿಂದ 17/07/2018 ರ ವರೆಗೆ 3,99,000/- ರೂ ಗಳನ್ನು ಸದರಿಯವರು ಸ್ವಂತಕ್ಕೆ ಉಪಯೋಗಿಸಿಕೊಂಡು ಸರಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ. ಅಂತಾ ಫಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 05/2023 ಕಲಂ: 409 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

ಇತ್ತೀಚಿನ ನವೀಕರಣ​ : 11-01-2023 10:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080