ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-02-2022


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 22/2022 ಕಲಂ:279, 338 ಐಪಿಸಿ : ಇಂದು ದಿನಾಂಕ:10/02/2022 ರಂದು 10-30 ಎಎಮ್ ಕ್ಕೆ ಕಲಬುರಗಿ ಕಾಮರೆಡ್ಡಿ ಖಾಸಗಿ ಆಸ್ಪತ್ರೆಯಲ್ಲಿ ಆರ್.ಟಿ.ಎ ಎಮ್.ಎಲ್.ಸಿ ಇದೆ ಅಂತಾ ನಿಸ್ತಂತು ಮೂಲಕ ಮಾಹಿತಿ ಬಂದಿದ್ದು, ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು ನಮ್ಮ ಠಾಣೆಯ ಹೆಚ್.ಸಿ 79 ರವರಿಗೆ ಕಳುಹಿಸಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ, ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಗಾಯಾಳು ಸಂಬಂಧಿಕರಿಗೆ ವಿಚಾರಿಸಿದಾಗ ಗಾಯಾಳು ಕು:ಸುಮಲತಾ ಇವಳ ತಾಯಿಯಾದ ಪಾರ್ವತಿ ಗಂಡ ಬಸವರಾಜ ಕಂದಕೂರು, ವ:30, ಜಾ:ಮಾದಿಗ, (ಎಸ್.ಸಿ), ಉ:ಕೂಲಿ ಸಾ:ವಡಗೇರಾ ಜಿ:ಯಾದಗಿರಿ ಇವರು ಗಣಕೀಕೃತ ದೂರನ್ನು ಹಾಜರಪಡಿಸಿದ್ದನ್ನು 2-30 ಪಿಎಮ್ ಕ್ಕೆ ಸ್ವಿಕೃತ ಮಾಡಿಕೊಂಡು 6-30 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಹಾಜರಪಡಿಸಿರುತ್ತಾರೆ. ಸದರಿ ದೂರಿನ ಸಾರಾಂಶವೇನಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಗಂಡ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನಗೆ ಮೂರು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ:09/02/2022 ರಂದು ಸಾಯಂಕಾಲ ನನ್ನ ಮಗಳಾದ ಕು:ಸುಮಲತಾ ವ:03 ವರ್ಷ ಇವಳು ನಮ್ಮ ಬಾಜು ಮನೆ ಮುಂದೆ ಕೆಂಚಮ್ಮನ ಗುಡಿ ಹತ್ತಿರ ಆಟ ಆಡುತ್ತಿದ್ದಳು. ನಾನು ನೀರು ತುಂಬಿಕೊಂಡು ಬಂದರಾಯಿತು ಅಂತಾ ಸಾರ್ವಜನಿಕ ನಳಕ್ಕೆ ಹೋಗಿ ಕೊಡದಲ್ಲಿ ನೀರು ತುಂಬಿಕೊಂಡು ಮರಳಿ ಮನೆಗೆ ಬರುತ್ತಿದ್ದಾಗ 5-20 ಪಿಎಮ್ ಸುಮಾರಿಗೆ ಅಲ್ಲಿಯೇ ಆಟ ಆಡುತ್ತಿದ್ದ ನನ್ನ ಮಗಳು ಸುಮಲತಾ ನನಗೆ ನೋಡಿ ನನ್ನ ಕಡೆ ಬರುತ್ತಿದ್ದಳು. ಆಗ ವಡಗೇರಾ ಮೇನ ರೋಡಿನಿಂದ ಊರೋಳಗೆ ಹೋಗುವ ರಸ್ತೆ ಮೇಲೆ ಕೆಂಚಮ್ಮನ ಗುಡಿ ಹತ್ತಿರ ಮಹಿಂದ್ರಾ ಜಿತು ಗೂಡ್ಸ ಗಾಡಿ ನಂ. ಕೆಎ 33 ಬಿ 3068 ನೇದ್ದನ್ನು ಅದರ ಚಾಲಕ ಸೈಯದ ಬಾಷಾ ತಂದೆ ಮಹಿಬೂಬಸಾಬ ಸಾ:ವಡಗೇರಾ ಈತನು ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನನ್ನ ಮಗಳಾದ ಕು:ಸುಮಲತಾ ಇವಳಿಗೆ ಅಪಘಾತಪಡಿಸಿದ್ದರಿಂದ ನನ್ನ ಮಗಳ ಎಡಗಾಲಿನ ಪಾದದ ಮೇಲ್ಭಾಗದಲ್ಲಿ ವಾಹನದ ಮುಂದಿನ ಟೈರ ಹಾಯ್ದು ಭಾರಿ ಹರಿದ ರಕ್ತಗಾಯವಾಯಿತು. ಸೊಂಟಕ್ಕೆ ತರಚಿದ ಗಾಯವಾಯಿತು. ಆಗ ಅಲ್ಲಿಯೇ ಇದ್ದ ನಮ್ಮ ಸಂಬಂಧಿಕರಾದ ಶಂಕ್ರೆಪ್ಪ ತಂದೆ ಹಂಪಣ್ಣ ಕಂದಕೂರು, ಮಂಜುನಾಥ ತಂದೆ ದೇವಪ್ಪ ಕಂದಕೂರು ಮತ್ತು ಮಲ್ಲಪ್ಪ ತಂದೆ ಮರೆಪ್ಪ ಹಲಗಿ ಇವರುಗಳು ನೋಡಿರುತ್ತಾರೆ. ನಂತರ ನಾವು ನನ್ನ ಮಗಳಿಗೆ ಅಲ್ಲಿಂದ ಉಪಚಾರ ಕುರಿತು ಕಲಬುರಗಿಯ ಕಾಮರೆಡ್ಡಿ ಖಾಸಗಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಇಲ್ಲಿನ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿರುತ್ತಾರೆ. ಕಾರಣ ಸದರಿ ಮಹಿಂದ್ರಾ ಜಿತು ಗೂಡ್ಸ ವಾಹನದ ಚಾಲಕ ಸೈಯದ ಬಾಷಾ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 22/2022 ಕಲಂ: 279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 33/2022 ಕಲಂ: 143, 147, 323, 324, 504, 506 ಸಂ 149 ಐಪಿಸಿ : ಇಂದು ದಿನಾಂಕ 10.02.2022 ರಂದು 06.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಭೀಮಪ್ಪ ತಂದೆ ಮಾನಪ್ಪ ತೋಟದ ವ|| 28ವರ್ಷ ಜಾ|| ಹಿಂದೂ ಹೊಲೆಯ ಉ|| ಕೂಲಿ ಸಾ|| ಅಗ್ನಿ ತಾ|| ಹುಣಸಗಿ ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಮ್ಮ ಮನೆ ಹಾಗು ಮರಳಪ್ಪ ತಂದೆ ಮದ್ದಪ್ಪ ಮುಖ್ಯಾಳ ಇವರ ಮನೆ ಆಜು ಬಾಜು ಇದ್ದು ಸದರಿಯವರ ಮನೆಯ ನೀರು ನಮ್ಮ ಮನೆಯ ಮುಂದೆ ಬರುತ್ತಿದ್ದು ಈ ವಿಷಯದಲ್ಲಿ ಸದರಿಯವರಿಗೆ ಸುಮಾರು ಸಲ ನಮ್ಮ ಮನೆಯ ಮುಂದೆ ನೀರು ಬಿಡಬ್ಯಾಡ ಅಂತ ಹೇಳಿದರು ಹಾಗೇಯೇ ಬಿಡುತ್ತಿದ್ದರು ಈ ವಿಷಯದಲ್ಲಿ ಸದರಿಯವರು ನಮ್ಮ ಜೊತೆ ತಕರಾರು ಮಾಡಿ ಹಗೆತನ ಸಾಧಿಸುತ್ತಿದ್ದರು. ಹೀಗಿದ್ದು ಇಂದು ದಿನಾಂಕ 10.02.2022 ರಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ನಾನು ನಮ್ಮ ಪಕ್ಕದ ಮನೆಯ ಮರಳಪ್ಪ ತಂದೆ ಮದ್ದಪ್ಪ ಮುಖ್ಯಾಳ ಇವರಿಗೆ ನೀರು ಬಿಡಬ್ಯಾಡಿರಿ ಅಂತ ಹೇಳಿದಾಗ ನಮ್ಮ ಜನಾಂಗದ 1] ಮರಳಪ್ಪ ತಂದೆ ಮದ್ದಪ್ಪ ಮುಖ್ಯಾಳ 2] ಜಗಪ್ಪ ತಂದೆ ಮರಳಪ್ಪ ಮುಖ್ಯಾಳ 3] ಮುತ್ತಪ್ಪ ತಂದೆ ಮರಳಪ್ಪ ಮುಖ್ಯಾಳ 4] ಮದೂ ತಂದೆ ಮರಳಪ್ಪ ಮುಖ್ಯಾಳ 5] ಶಿವಬಾಯಿ ಗಂಡ ಮರಳಪ್ಪ ಮುಖ್ಯಾಳ 6] ಲಲಿತಾ ತಂದೆ ಮರಳಪ್ಪ ಮುಖ್ಯಾಳ 7] ಬಸಪ್ಪ ತಂದೆ ತಿಪ್ಪಣ್ಣ ವಡಗೇರಾ 8] ಗಂಗಪ್ಪ ತಂದೆ ತಿಪ್ಪಣ್ಣ ವಡಗೇರಾ ಈ ಎಲ್ಲಾ ಜನರು ಗುಂಪು ಕಟ್ಟಿಕೊಂಡು ನಮ್ಮ ಅಂಗಳದಲ್ಲಿ ಬಂದವರೇ ಏನಲೇ ಸೂಳೇ ಮಗನೇ ಭೀಮ್ಯಾ ನಿನ್ನ ಸೊಕ್ಕು ಬಹಾಳ ಆಗಿದೆ ನಮ್ಮ ಮನೆಯ ನೀರು ಬಿಡಬ್ಯಾಡ ಅಂತ ಅಂದರೇ ನಾವು ಎಲ್ಲಿ ಬಿಡಬೇಕು ಅಂತ ಅನ್ನುತ್ತಾ ಎಲ್ಲರೂ ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಏಕೇ ಸುಮ್ಮನೆ ಬೈಯುತ್ತೀದ್ದಿರೀ ಅಂತ ಕೇಳಿದಾಗ ಎಲ್ಲರೂ ಕೂಡಿ ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅವರಲ್ಲಿಯ ಮರಳಪ್ಪ ಈತನು ಅಲ್ಲಿಯೇ ಬಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ಹಾಗು ಜಗಪ್ಪ ಈತನು ಅಲ್ಲಿಯೇ ಬಿದ್ದ ಬಡಿಗೆಯಿಂದ ನನ್ನ ಬಲಗೈಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ನಮ್ಮ ತಂದೆ ಮಾನಪ್ಪ ಹಾಗು ತಾಯಿಯಾದ ಗಂಗಮ್ಮ ಇವರು ಬಿಡಿಸಿಕೊಳ್ಳಲು ಬಂದಾಗ ಅವರಿಗೂ ಸಹ ಎಲ್ಲರೂ ಕೂಡಿ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ನಂತರ ನಾವೆಲ್ಲರೂ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಭೀಮಪ್ಪ ತಂದೆ ಮರೆಪ್ಪ ಕಕ್ಕಸಗೇರಾ ಇವರು ಬಂದು ಬಿಡಿಸಿಕೊಂಡಿದ್ದು ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿದ್ದು ಇರುತ್ತದೆ. ಕಾರಣ ಈ ಮೇಲೆ ಕಾಣಿಸಿದ 08 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 33/2022 ಕಲಂ 143,147,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಕಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 23/2022 ಕಲಂ: 78(3) ಕೆ.ಪಿ.ಆಕ್ಟ್ 1963 : ದಿನಾಂಕ:10/02/2022 ರಂದು 7-45 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:10/02/2022 ರಂದು ಸಮಯ ಸಾಯಂಕಾಲ 4-30 ಗಂಟೆ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರಾದ ಪಿಸಿ 254, ವೇಣುಗೋಪಾಲ ಪಿಸಿ 36 ವಡಗೇರಾ ಠಾಣೆ ಮತ್ತು ಪ್ರಭುಗೌಡ ಪಿಸಿ 361 ಡಿ.ಎಸ್.ಪಿ ಕಾರ್ಯಲಯ ಯಾದಗಿರಿ ಎಲ್ಲರೂ ವಡಗೇರಾ ಠಾಣೆಯಲ್ಲಿದ್ದಾಗ ಮಾನ್ಯ ಡಿ.ಎಸ್.ಪಿ ಸಾಹೇರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ನಾಯ್ಕಲ್ ಗ್ರಾಮದ ಬಾದಲ್ ಸಿಮೇಂಟ್ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದರಿಂದ ವಡಗೇರಾ ಠಾಣೆಯಿಂದ ಸಮಯ 4-40 ಪಿಎಮ್ ಕ್ಕೆ ಹೊರಟು ಸಮಯ 5-25 ಪಿಎಮ್ ಸುಮಾರಿಗೆ ನಾಯ್ಕಲ್ ಗ್ರಾಮ ತಲುಪಿ ಕಲಂದರ್ ಗ್ಯಾರೇಜ್ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೋಡಲಾಗಿ ಬಾದಲ್ ಸಿಮೇಂಟ್ ಅಂಗಡಿ ಮುಂದಗಡೆ ಸಾರ್ವಜನಿಕ ಕಟ್ಟೆ ಮೇಲೆ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಆಡಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 5-30 ಪಿಎಮ್ ಕ್ಕೆ ನಾವು ಅವನ ಮೇಲೆ ದಾಳಿ ಮಾಡಿ ಹಿಡಿಯಲು ಹೊದಾಗ ಅವನು ಮಟ್ಕಾ ಬರೆದುಕೊಳ್ಳುತ್ತಿದ್ದ ಚೀಟಿ, ಪೆನ್ ಮತ್ತು ಹಣವನ್ನು ಅಲ್ಲಿಯೇ ಬಿಸಾಕಿ ನಮ್ಮಿಂದ ಕೊಸರಿಕೊಂಡು ಓಡಿ ಹೋದನು. ಸದರಿಯವನು ಮಟ್ಕಾ ಬರೆದುಕೊಳ್ಳುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಕಟ್ಟೆ ಮೇಲೆ ಮಟ್ಕಾ ನಂಬರಗಳನ್ನು ಬರೆದ ಒಂದು ಚೀಟಿ, ಒಂದು ಬಾಲ್ ಪೆನ ಮತ್ತು ನಗದು ಹಣ 1070/- ದೊರೆತ್ತಿದ್ದು, ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಾಬಕ್ಕೆ ಪಡೆದುಕೊಂಡೆನು. ಅಲ್ಲಿಯೇ ಇದ್ದ ಪೊಲೀಸ್ ಬಾತ್ಮಿದಾರರಿಗೆ ಮಟ್ಕಾ ಬರೆದುಕೊಳ್ಳುತ್ತಿದ್ದವನ ಹೆಸರು ವಿಳಾಸ ವಿಚಾರಿಸಲಾಗಿ ಅಬ್ದುಲ ಬಾಷ ತಂದೆ ಖಾಜಾಸಾಬ ಭಾರಪೇಟ ವಯಾಃ 32 ವರ್ಷ ಜಾತಿಃ ಮುಸ್ಲಿಂ ಉಃ ವ್ಯಾಪಾರ ಸಾಃ ನಾಯ್ಕಲ್ ತಾಃ ವಡಗೇರಾ ಅಂತಾ ತಿಳಿಸಿದರು. ಸದರಿ ಮುದ್ದೆಮಾಲನ್ನು ವಶಕ್ಕೆ ಪಡೆದುಕೊಂಡು ಜಪ್ತಿ ಪಂಚನಾಮೆ ಜರುಗಿಸಿ, ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ಮೇಲ್ಕಂಡ ಮುದ್ದೆಮಾಲನ್ನು ಹಾಜರುಪಡಿಸಿದ್ದು ಇರುತ್ತದೆ. ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 23/2022 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 06/2022 ಕಲಂ 279, 338 ಐಪಿಸಿ : ಇಂದು ದಿನಾಂಕ 10/02/2022 ರಂದು ಬೆಳಿಗ್ಗೆ 6 ಎ.ಎಂ.ಕ್ಕೆ ಈ ಕೇಸಿನ ಪಿಯರ್ಾದಿ ಗಾಯಾಳು ಗುರುಸ್ವಾಮಿ ಇವರು ಆಟೋ ನಂಬರ ಕೆಎ-33, ಬಿ-0635 ನೇದ್ದರಲ್ಲಿ ಮಸ್ಕನಳ್ಳಿಯಿಂದ ಯಾದಗಿರಿಗೆ ಬರುವಾಗ ಮಾರ್ಗ ಮದ್ಯೆ ಹೊಸ ಬಸ್ ನಿಲ್ದಾಣದ ಹತ್ತಿರದ ಚಿರಂಜೀವಿ ಶಾಲೆಯ ಮುಂಭಾಗದ ರಸ್ತೆ ಮೇಲೆ ಆಟೋ ಚಾಲಕ ಭೀಮರಾಯ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಮಾಡಿ ರಸ್ತೆ ಮೇಲೆ ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಗಾಯಾಳುವಿಗೆ ಬಲಕಪಾಳಕ್ಕೆ, ಎಡಗಾಲಿನ ಪಾದದ ಮೇಲೆ, ಹಣೆಗೆ ಭಾರೀ ರಕ್ತಗಾಯ ಮತ್ತು ಎದೆಯ ಎಡಭಾಗದ ಪಕ್ಕೆಲುಬಿಗೆ, ಬೆನ್ನಿಗೆ, ತಲೆಗೆ ಭಾರೀ ಒಳಪೆಟ್ಟಾಗಿರುತ್ತವೆ, ಅಪಘಾತಪಡಿಸಿದ ಆಟೋ ನಂಬರ ಕೆಎ-33, ಬಿ-0635 ನೇದ್ದರ ಚಾಲಕ ಭೀಮರಾಯನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಈ ಘಟನೆ ಬಗ್ಗೆ ಮನೆಯ ಹಿರಿಯರಲ್ಲಿ ವಿಚಾರಿಸಿ ತಡವಾಗಿ ನೀಡಿದ ಪಿಯರ್ಾದಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 06/2022 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 07/2022 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 10/02/2022 ರಂದು ಸಾಯಂಕಾಲ 6-30 ಪಿ.ಎಂ.ಕ್ಕೆ ಈ ಕೇಸಿನ ಪಿಯರ್ಾದಿ ಗಾಯಾಳು ಹುಸೇನಪ್ಪ ಇವರು ತಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಎಸ್-8831 ನೇದ್ದರ ಮೇಲೆ ತಾನು ಮತ್ತು ತನ್ನ ಹೆಂಡತಿ ನೀಲಮ್ಮ ಈಕೆಗೆ ಹಿಂಬದಿ ಸೀಟಿನಲ್ಲಿ ಕೂಡಿಸಿಕೊಂಡು ರಾಮಸಮುದ್ರ ಗ್ರಾಮದಿಂದ ಯಾದಗಿರಿಗೆ ಬರುತ್ತಿದ್ದಾಗ ಮಾರ್ಗ ಮದ್ಯೆ ಮುಂಡರಗಿ ಗ್ರಾಮದ ಬಾದಲ್ ಕಾಟನ್ ಮಿಲ್ ಹತ್ತಿರ ಮುಖ್ಯ ರಸ್ತೆ ಮೇಲೆ ಆಟೋ ಟಂ.ಟಂ ನಂಬರ ಕೆಎ-33, 5522 ನೇದ್ದರ ಚಾಲಕನು ಪಿಯರ್ಾದಿಯ ಹಿಂದೆ ಬರುತ್ತಾ ಆಟೋವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಪಿಯರ್ಾದಿಯ ಮೋಟಾರು ಸೈಕಲ್ ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಗಾಯಾಳು ಹುಸೇನಪ್ಪ ಮತ್ತು ಆತನ ಹೆಂಡತಿ ನೀಲಮ್ಮಳೀಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯ ಆಗಿದ್ದು, ಈ ಅಪಘಾತವನ್ನು ಕಂಡು ಅದೇ ರಸ್ತೆ ಮಾರ್ಗವಾಗಿ ಹೊರಟಿದ್ದ ಗಾಯಾಳು ನೀಲಮ್ಮ ಗಂಡ ತಿಮ್ಮಪ್ಪ ಮತ್ತು ಸಣ್ಣವೀರ ತಂದೆ ಬೀಮರಾಯ ಇವರು ಗಾಯಾಳುವಿಗೆ ವಿಚಾರಿಸಲು ಹೋಗಿ ನಿಂತಿದ್ದಾಗ ಅದೇ ಸಮಯಕ್ಕೆ ಒಬ್ಬ ಮೋಟಾರು ಸೈಕಲ್ ನಂಬರ ಕೆಎ-33, ವಾಯ್-2633 ನೇದ್ದರ ಸವಾರನು ಕೂಡ ತನ್ನ ಮೋಟಾರು ಸೈಕಲನ್ನು ರಾಮಸಮುದ್ರ ಕಡೆಯಿಂದ ಮುಂಡರಗಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ನಿಂತಿದ್ದವರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಭಾರೀ ರಕ್ತಗಾಯ ಮತ್ತು ಗುಪ್ತಗಾಯ ಆಗಿರುತ್ತವೆ ಈ ಅಪಘಾತದ ನಂತರ ಆಟೋ ಚಾಲಕ ಮತ್ತು ಮೊಟಾರು ಸೈಕಲ್ ಸವಾರನು ತಮ್ಮ ತಮ್ಮ ವಾಹನಗಳನ್ನು ಘಟನಾ ಸ್ಥಳದಲ್ಲಿ ಬಿಟ್ಟು ಪರಾರಿ ಆಗಿರುತ್ತಾರೆ. ಈ ಬಗ್ಗೆ ಆಟೋ ಚಾಲಕನ ಮತ್ತು ಮೋಟಾರು ಸೈಕಲ್ ಸವಾರನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 07/2022 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.


ಕೊಡೇಕಲ ಪೊಲೀಸ್ ಠಾಣೆ:-
ಗುನ್ನೆ ನಂ: 16/2022 ಕಲಂ:143, 147, 148, 323, 324, 504, 506, 354 ಸಂಗಡ 149 ಐಪಿಸಿ : ಇಂದು ದಿನಾಂಕ:10.02.2022 ರಂದು ರಾತ್ರಿ 10:30 ಗಂಟೆಗೆ ಪಿಯರ್ಾದಿ ಶ್ರೀಮತಿ ಸಾಬವ್ವ ಗಂಡ ಕೃಷ್ಣಪ್ಪಗೌಡ ಪೊಲೀಸ್ ಪಾಟೀಲ ವ:68 ವರ್ಷ ಉ:ಮನೆಗೆಲಸ ಜಾ:ಹಿಂದೂ ಬೇಡರ ಸಾ:ಬೈಲಕುಂಟಿ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಪಿಯರ್ಾದಿ ಅಜರ್ಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶ ಏನೆಂದರೆ, ತಾನು ಬೈಲಕುಂಟಿ ಗ್ರಾಮದಲ್ಲಿ ಮಕ್ಕಳ & ಮೊಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದು ದಿನಾಂಕ:09.02.2022 ರಂದು 1) ಸಣ್ಣಬಸನಗೌಡ ತಂದೆ ಅಮರಪ್ಪಗೌಡ ಪೊಲೀಸ್ ಪಾಟೀಲ ಸಾ:ಬೈಲಕುಂಟಿ 2) ಶ್ರೀದೇವಿ ಗಂಡ ಸಣ್ಣಬಸನಗೌಡ ಪೊಲೀಸ್ ಪಾಟೀಲ ಸಾ:ಬೈಲಕುಂಟಿ 3) ದ್ಯಾಮವ್ವ ಗಂಡ ಬಾಲನಗೌಡ ಪೊಲೀಸ್ ಪಾಟೀಲ ಸಾ:ಹಾಲಭಾವಿ ತಾ:ಲಿಂಗಸ್ಗೂರ 4) ಬಸಮ್ಮ ಗಂಡ ದೊಡ್ಡಹಣಮಪ್ಪ ಅಗಸಿಮನಿ ಸಾ:ಹಾಲಭಾವಿ 5) ಲಂಕೆಮ್ಮ ಗಂಡ ಹಣಮಪ್ಪ ಸಾ:ಗುಡಗುಂಟಿ ತಾ:ಲಿಂಗಸ್ಗೂರ 6) ಸಣ್ಣಹಣಮಪ್ಪ ತಂದೆ ಯಲ್ಲಪ್ಪ ಸಾ:ಹಾಲಭಾವಿ ತಾ:ಲಿಂಗಸ್ಗೂರ 7) ದೊಡ್ಡಹಣಮಪ್ಪ ತಂದೆ ಯಲ್ಲಪ್ಪ ಸಾ:ಹಾಲಭಾವಿ ತಾ:ಲಿಂಗಸ್ಗೂರ 8) ಹಣಮಪ್ಪ ತಂದೆ ಬಾಲಪ್ಪ ಸಾ:ಹಾಲಭಾವಿ ತಾ:ಲಿಂಗಸ್ಗೂರ ಇವರೆಲ್ಲರೂ ಕೂಡಿಕೊಂಡು ನಾನು ಮನೆಯಲ್ಲಿದ್ದಾಗ ಬೆಳಿಗ್ಗೆ 06:00 ಗಂಟೆಯ ಸುಮಾರಿಗೆ ಕೈಯಲ್ಲಿ ಬಡಿಗೆ, ಕಲ್ಲುಗಳನ್ನು ಹಿಡಿದುಕೊಂಡು ನಮ್ಮ ಮನೆಯ ಮುಂದೆ ಬಂದು ಲೇ ಸಾಬವ್ವ ಬೋಸುಡಿ ನಿಂದು, ನಿನ್ನ ಮಕ್ಕಳದ್ದು ಬಾಳ ಆಗಿದೆ ಇವತ್ತು ನಿಂದು, ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಅವಾಚ್ಛ ಶಬ್ಧಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದರು. ಆಗ ನಾನು ಹೀಗೇಕೆ ಬಾಯಿಗೆ ಬಂದಂಗ ಮಾತನಾಡುತ್ತೀಯಾ ನಾವೆನು ನಿನಗೆ ಮಾಡಿದ್ದೇವೆ ಎಂದು ಅನ್ನುತ್ತಿರುವಾಗಲೇ ಅವರಲ್ಲಿಯ ಕ್ರ.ಸಂ. 1) ಸಣ್ಣ ಬಸನಗೌಡ ತಂದೆ ಅಮರಪ್ಪಗೌಡ ಪೊಲೀಸ್ ಪಾಟೀಲ ಈತನು ನನ್ನ ಸೀರೆ ಹಿಡಿದು ಎಳೆದಾಡಿ ನನ್ನ ಕಪಾಳಕ್ಕೆ ಹೊಡೆದನು. ಆಗ ನಾನೇನು ತಪ್ಪು ಮಾಡಿದ್ದೇನೆ ಏಕೆ ಹೊಡೆಯತ್ತೀರಿ ಎಂದು ಕೇಳಿದಾಗ ಸದರಿ ಸಣ್ಣಬಸನಗೌಡ ತಂದೆ ಅಮರಪ್ಪಗೌಡ ಈತನು ಲೇ ಸೂಳಿ ನಿನ್ನ ಮಕ್ಕಳ ಸೊಕ್ಕು ಬಾಳ ಆಗ್ಯಾದ ನಿನಗೆ ಹೊಡೆದರೆ ಅವರಿಗೆ ಬುದ್ದಿ ಬರ್ತದ ಎಂದು ಅವಾಚ್ಛ ಶಬ್ಧಗಳಿಂದ ಬೈದು ಕೈಯಿಂದ ಹೊಡೆದನು. ಆಗ ಅವರಲ್ಲಿದ್ದ ಕ್ರ.ಸಂ. 2 ರಿಂದ 6 ನೇ ಆರೋಪಿತರು ನನ್ನ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಯತ್ನಿಸಿ ಅವಾಚ್ಛ ಶಬ್ಧಗಳಿಂದ ಬೈದು ಹಲ್ಲೆ ಮಾಡಿದರು. ಆಗ ನಾನು ಪ್ರಾಣ ಭಯದಿಂದ ಬಿಡಿರಿ ಎಂದು ಚೀರಾಡುತ್ತಿರುವಾಗ, ನನ್ನ ಮಾತನ್ನು ಕೇಳದೇ ಕ್ರ.ಸಂ.6 ನೇ ಸಣ್ಣಹಣಮಪ್ಪ ತಂದೆ ಯಲ್ಲಪ್ಪ ಈತನು ತನ್ನ ಕೈಯಲ್ಲಿರುವ ಬಡಿಗೆಯಿಂದ ನನ್ನ ಡುಬ್ಬಕ್ಕೆ ಹೊಡೆದನು. ನಾನು ನೋವು ತಾಳಲಾರದೇ ಅಳುವುದು, ಚೀರಾಡುವುದು ಮಾಡಿದಾಗ ಅದೇ ಸಮಯಕ್ಕೆ ಅಲ್ಲಿಯೇ ಇದ್ದ 1) ಜಯಶ್ರೀ ಗಂಡ ಹಣಮಗೌಡ ಪೊಲೀಸ್ ಪಾಟೀಲ ಸಾ:ಬೈಲಕುಂಟಿ 2) ಮದನಪ್ಪ ತಂದೆ ಹಣಮಂತ್ರಾಯ ಸಾಲೋಡಗಿ ಸಾ:ಬೈಲಕುಂಟಿ ಇವರು ಬಂದು ಜಗಳ ಬಿಡಿಸಿದರು. ಇಲ್ಲವಾದರೆ ಇವರು ನನ್ನ ಪ್ರಾಣ ತೆಗೆಯುವ ಉದ್ದೇಶ ಅವರದ್ದಾಗಿತ್ತು. ಇವರು ಹೋಗುವಾಗ ಲೇ ಬೊಸುಡಿ ಇಂದು ನಿನ್ನ ಜೀವ ಉಳಿಸಿಕೊಂಡಿದೀ ಮುಂದೆ ನಿನ್ನ ಮತ್ತು ನಿನ್ನ ಮಕ್ಕಳ ಜೀವ ನಮ್ಮ ಕೈಯ್ಯಾಗದಲೇ ಸೂಳೀ ನೀನೇನಾದರ ಪೊಲೀಸ್ ಗೀಲೀಸ್ ಅಂತಾ ಹೋದ್ರ ನಿನಗ ಮತ್ತು ನಿನ್ನ ಮಕ್ಕಳನ್ನು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಸುಟ್ಟು ಬಿಡ್ತೀವಿ ರಂಡಿ ಅಂತಾ ಕೂಗಾಡುತ್ತಾ ಹೋದರು. ಇದರಿಂದ ನಾನು ಮಾನಸಿಕ ಮತ್ತು ದೈಹಿಕವಾಗಿ ತುಂಬಾ ನೊಂದುಕೊಂಡಿದ್ದೇನೆ. ಆದ್ದರಿಂದ ದಯಾಳುಗಳಾದ ತಾವು ಸದರಿ ಮೇಲ್ಕಂಡ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ರಕ್ಷಣೆ ಒದಗಿಸಬೇಕೆಂದು ಮಾನ್ಯರಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಒಂದು ವೇಳೆ ನನ್ನ ದೂರಿಗೆ ಸರಿಯಾಗಿ ಸ್ಪಂದಿಸದೇ ಇದ್ದರೆ ನನ್ನ ಹಾಗೂ ನನ್ನ ಕುಟುಂಬದವರಿಗೆ ಪ್ರಾಣಹಾನಿಯುಂಟಾಗುವ ಸಾಧ್ಯತೆಗಳು ಹೆಚ್ಚು ಇವೆ. ಒಂದು ವೇಳೆ ನನ್ನ ಕುಟುಂಬದವರಿಗೆ ಏನಾದರೂ ಪ್ರಾಣ ಹಾನಿಯುಂಟಾದರೆ ಅದಕ್ಕೆ ಸದರಿ ಆರೋಪಿಗಳೆ ನೇರ ಹೊಣೆಗಾರರಾಗಿತ್ತಾರೆ. ಈ ಘಟನೆಯನ್ನು ನನಗೆ ಅಷ್ಟೇನು ಪೆಟ್ಟಾಗಿರುವುದಿಲ್ಲ. ಉಪಚಾರಕ್ಕಾಗಿ ದವಾಖಾನೆಗೆ ಹೋಗುವುದಿಲ್ಲ. ನಾನು ಈ ಬಗ್ಗೆ ಹಿರಿಯರೊಂದಿಗೆ ಮತ್ತು ಮನೆಯಲ್ಲಿ ವಿಚಾರಮಾಡಿ ಬಂದಿದ್ದರಿಂದ ದೂರು ಕೊಡಲು ತಡವಾಗಿರುತ್ತದೆ ಅಂತಾ ಪಿಯರ್ಾದಿಯ ದೂರಿನ ಸಾರಾಂಶದ

ಇತ್ತೀಚಿನ ನವೀಕರಣ​ : 11-02-2022 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080