Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-05-2022

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ : 68/2022 ಕಲಂ 323, 354, 504, 506 ಸಂ 34 ಐ.ಪಿ.ಸಿ ಮತ್ತು 3(1) (ಡಿ)()(ತಿ) 3(2) (ತಚಿ) ಎಸ್.ಸಿ/ಎಸ್.ಟಿ ಪಿಎ ಎಕ್ಟ್-1989: ಪ್ರಕರಣದ ಪಿರ್ಯಾಧಿಯ ಮತ್ತು ಆಕೆಯ ಸಹೋದರರು ಕೊಂಕಲ್ ಗ್ರಾಮದ ಪೋಲಮ್ಮ ಗುಡಿಯ ಮುಂದೆ ಮತನಾಡುತ್ತಾ ಕುಳಿತ್ತಿದ್ದಾಗ. ಆರೋಪಿತರರು ಬಂದು ದಾಸರ ಮಕ್ಕಳ್ಯಾ ನಾವು ಹೇಳಿದಂತೆ ಕೇಳಿದರೆ ಸರಿ, ಇಲ್ಲದಿದ್ದರೇ ನಮ್ಮೂರಿನಲ್ಲಿ ಹೇಗೆ ಜೀವನ ಸಾಗಿಸುತ್ತಿರಿ ಅಂತಾ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಬೈದು ಪಿರ್ಯಾಧಿಗೆ ಮಾನಭಂಗ ಪಡಿಲು ಪ್ರಯತ್ನಸಿ ಪಿರ್ಯಾಧಿಗೆ ಮತ್ತು ಇತರಿಗೆ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ : 36/2022 ಕಲಂ 379, 420,394 ಐಪಿಸಿ ಮತ್ತು 98 ಕೆ.ಪಿ ಆಕ್ಟ್ ದಿನಾಂಕ:06/05/2022 ರಂದು ಬೆಳಿಗ್ಗೆ 04:30 ಎ.ಎಮ್ಕ್ಕೆ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ ಮಾಳನೂರ ಕಡೆಗೆ ಹೊರಟಾಗ ತಾಳಿಕೋಟಿಯ ಕಡೆಯಿಂದ ಆರೋಪಿ ನಂ:01 ನೇದ್ದವನು ತನ್ನ ಮೋಟಾರ್ ಮೇಲೆ ಮುಖ ಮುಚ್ಚಿಕೊಂಡು ಪೊಲೀಸ ಜೀಪ್ನ್ನು ನೋಡಿ, ತನ್ನ ಮೋಟಾರ ಸೈಕಲ್ನ್ನು ಹೊರಳಿಸಿಕೊಂಡು ಮತ್ತೆ ವಾಪಸ್ಸು ತಾಳಿಕೋಟಿ ಕಡೆಗೆ ಸಂಶಯಾಸ್ಪದವಾಗಿ ಹೊರಟಾಗ ಆತನಿಗೆ ಹಿಡಿದು ವಿಚಾರಿಸಲಾಗಿ ಈಗ್ಗೆ 5 ತಿಂಗಳ ಹಿಂದೆ ದಿ:17/11/2021 ರಂದು ತನ್ನ ಕಾರ್ ನಂ.ಕೆಎ-50 ಎ-6853 ಸೀಪ್ಟ ಬಿಳಿ ಬಣ್ಣದ ಕಾರ್ ತೆಗೆದುಕೊಂಡು ಇನ್ನುಳಿದ ಆರೋಪಿತರಾದ ಶಂಕ್ರೇಪ್ಪ ಮತ್ತು ಅವಿನಾಶ ಸಾ:ತಾಳಿಕೋಟಿ ಹಾಗೂ ಹುಲ್ಲಿಗೇಶ ಮಾದರ ಸಾ:ರಾಜವಾಳ ಎಲ್ಲರೂ ಕೂಡಿಕೊಂಡು ತಾಳಿಕೋಟೆಯಿಂದ ಸರಾಯಿ ಕುಡಿಯವ ಚಟಕ್ಕಾಗಿ ಹಣ ಹೊಂದಿಸುವ ಸಲುವಾಗಿ ಯಾವುದಾದರೂ ಮೋಟಾರ ಸೈಕಲ್ ಕಳತನ ಮಾಡಬೇಕೆಂದು ಕೊಡೆಕಲ್, ಬಲಶೆಟ್ಟಿಹಾಳ, ಕಕ್ಕೇರಾ ಬಂದು ಕಕ್ಕೇರಾದಲ್ಲಿ ಸರಾಯಿ ಕುಡಿದು ಮರಳಿ ಕಕ್ಕೇರಾದಿಂದ- ತಾಳಿಕೋಟಿಯ ಕಡೆಗೆ ಹಳ್ಳಿಶ್ರೀನಿವಾಸಪೂರ ಮಾರ್ಗವಾಗಿ ರಸ್ತೆಯ ಮೇಲೆ ಹೋಗುವಾಗ ಎದುರಿಗೆ ಬಂದ ಮೋಟಾರ್ ಸೈಕಲ್ನ್ನು ನಿಲ್ಲಿಸಿ, ಮೋಟಾರ್ ಸೈಕಲ್ ಸವಾರನಿಗೆ ಕಣ್ಣುಗಳಲ್ಲಿ ಕಾರದ ಪುಡಿ ಹಾಕಿ, ಅವನಿಗೆ ಹೊಡೆಬಡೆ ಮಾಡಿ ಅವನ ಹತ್ತಿರ ಇದ್ದ ಒಂದು ಮೋಬೈಲ್, & ಮೋಟಾರ್ ಸೈಕಲ್ನ್ನು ಕಸಿದುಕೊಂಡು, ತಾಳಿಕೋಟಿಗೆ ಹೋಗಿದ್ದು, ಸದರಿ ಮೋಟರ್ ಸೈಕಲ್ಗೆ ಇರುವ ನಂಬರ್ ಪ್ಲೇಟ್ ತೆಗೆದು ಬೇರೆ ನಂಬರ್ ಹಾಕಿಕೊಂಡು ಉಪಯೋಗಿಸುತ್ತಿರುವುದಾಗಿ ತಿಳಿಸಿದ ಮೇರೆಗೆ ಪಂಚರ ಸಮಕ್ಷಮದಲ್ಲಿ ಮೇಲ್ಕಂಡ ಮೋಟಾರ್ ಸೈಕಲ್ ಮತ್ತು ಮೊಬೈಲ್ನ್ನು ಜಪ್ತಿಪಡಿಸಿಕೊಂಡು ಮೇಲಿನಂತೆ ಗುನ್ನೆಯನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಇಂದು ದಿನಾಂಕ:10/05/2022 ರಂದು ಸಾಯಂಕಾಲ 06.30 ಗಂಟೆಗೆ ಶ್ರೀ.ಸೋಮಣ್ಣ ತಂದೆ ಹೊನ್ನಪ್ಪ ಪುಟ್ಟೆರ್ ವಯ:35 ವರ್ಷ ಜಾತಿ: ಅಂಬಿಗೇರ ಉ:ಎಲೆಕ್ಟ್ರಿಕಲ್ ಕೆಲಸ ಸಾ:ಕಕ್ಕೇರಾ ತಾ:ಸುರಪೂರ ಜಿ:ಯಾದಗಿರಿ ಇತನು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ಕೊಟ್ಟಿದ್ದು ಏನೆಂದರೆ ದಿನಾಂಕ:17/11/2021 ರಂದು ಸಾಯಂಕಾಲ 6 ಗಂಟೆಯವರೆಗೆ ಹುಣಸಗಿ ಪಟ್ಟಣದಲ್ಲಿ ಎಲೆಕ್ಟ್ರೀಕಲ್ ಕೆಲಸ ಮಾಡಿ ವಾಪಸ್ಸು ಕಕ್ಕೇರಾಕ್ಕೆ ಹೋಗುವಾಗ 4 ಜನರು ಸೇರಿಕೊಂಡು ನನಗೆ ಕಣ್ಣಲ್ಲಿ ಕಾರದ ಪುಡಿ ಹಾಕಿ ಕೈಯಿಂದ ಹೊಡೆದು ನನ್ನ ಹತ್ತಿರ ಇದ್ದ ವಿವೋ ಕಂಪನಿಯ ಮೋಬೈಲ ಅ.ಕಿ. 6000 ರೂ. ಒಬ್ಬನು ಹಾಗೂ ನನ್ನ ಮೋ.ಸೈಕಲ್ಲ್ನ್ನು ಮತ್ತೋಬ್ಬ ನನ್ನಿಂದ ಕಸಿದುಕೊಂಡು ಮಗನೆ ನೀನು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟರೇ ಮತ್ತು ಯಾರಿಗಾದರೂ ಹೇಳಿದರೆ ನಿನಗೆ ಜೀವಂತ ಬಿಡುವದಿಲ್ಲಾ ಅಂತಾ ಹೆದರಿಸಿರುವುದಾಗಿ ಅರೋಪಿತರ ವಿರುದ್ಧ ಮುಂದಿನ ಕಾನೂನ ಕ್ರಮ ಕೈಕೊಳ್ಳಬೇಕು ಅಂತಾ ಇತ್ಯಾದಿ ಹೇಳಿಕೆಯನ್ನು ನೀಡಿರುತ್ತಾರೆ. ಸದರಿಯವರ ಹೇಳಿಕೆಯ ಸಾರಾಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ.394 ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳಲು ಪರವಾನಿಗೆ ನೀಡುವ ಕುರಿತು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆನಂ: 69/2022 ಕಲಂ: 341, 323, 504, 506 ಸಂಗಡ 34 ಐಪಿಸಿ ದಿನಾಂಕ 08.05.2022 ರಂದು ಸಂಜೆ 06:00 ಗಂಟೆಯ ಸುಮಾರಿಗೆ ಫಿರ್ಯಾದಿತು ತಮ್ಮೂರಿನಲ್ಲಿ ತನಗೆ ಗುಳಿಗೆ ತೆಗೆದುಕೊಂಡು ತನ್ನ ಮನೆಗೆಯ ಕಡೆಗೆ ಹೋಗುತ್ತಿದ್ದಾಗ ಆರೋಪಿತನಾದ ಜಗಧೀಶ ಇತನು ದೇವಮ್ಮ ಕೊಟ್ರಿಕಿ ಇವರ ಮನೆಯ ಮುಂದೆ ತಡೆದು ನಿಲ್ಲಿಸಿ ಮಾತಾಡಿ ಹಳೆಯ ವೈಶಮ್ಯದಿಂದ ಜಗಳಕ್ಕೆ ಬಿದಿದ್ದು ಅದೇ ವೇಳೆಗೆ ಆರೋಪಿ ಶೇಖಪ್ಪ ಈತನು ಕೂಡ ಅಲ್ಲಿಗೆ ಬಂದಿದ್ದು ಆಗ ಆರೋಪಿತರಿಬ್ಬರು ಕೂಡಿಕೊಂಡು ಫಿರ್ಯಾದಿಗೆ ಕೈಯಿಂದ ಹೊಡೆ-ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫಿರ್ಯಾಧಿದಾರನು ತಡವಾಗಿ ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ಸಲ್ಲಿಸಿದ್ದು ಅದರ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 69/2022 ಕಲಂ: 341, 323, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ : 74/2022 ಕಲಂ 420 ಐಪಿಸಿ ಇಂದು ದಿನಾಂಕ: 10/05/2022 ರಂದು 4 ಪಿಎಮ್ ಕ್ಕೆ ಪಿರ್ಯಾದಿದಾರರಾದ ಶ್ರೀ ನರಸಿಂಹನಾಯಕ (ರಾಜುಗೌಡ) ಶಾಸಕರು ಸುರಪುರ ಮತಕ್ಷೇತ್ರ ರವರು ಠಾಣೆಗೆ ಹಾಜರಾಗಿ ತಮ್ಮ ಲೆಟರ್ ಪ್ಯಾಡ್ದಲ್ಲಿ ಕನ್ನಡದಲ್ಲಿ ಕಂಪ್ಯೂಟರ ಟೈಪ್ ಮಾಡಿಸಿದ ದೂರು ಅರ್ಜಿ ಹಾಜರುಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ:10/05/2022 ರಂದು ಬೆಳಿಗ್ಗೆ ದಿಗ್ವಿಜಯ ನ್ಯೂಸ್ ಚಾನೆಲ್ನಲ್ಲಿ ವರದಿ ಪ್ರಸಾರವಾಗಿದ್ದು, ಅದರಲ್ಲಿ ರೇಖಾ ಎಮ್. ಎನ್ ಎಂಬುವವರು, ನನ್ನ ಹೆಸರನ್ನು ಪ್ರಸ್ತಾಪ ಮಾಡಿ ನನಗೆ ಪರಿಚಯವೆಂದು ಆಡಿಯೋದಲ್ಲಿ ಬೇರೆಯವರೊಂದಿಗೆ ಮಾತನಾಡಿದ್ದು ಹಾಗೂ ಕೆಲವು ವ್ಯಕ್ತಿಗಳಿಂದ ಸರಕಾರಿ ನೌಕರಿ ಕೊಡಿಸುವದಾಗಿ ಹಣ ಪಡೆದುಕೊಂಡು ಮೋಸ ಮಾಡಿರುವ ಬಗ್ಗೆ ತಿಳಿದುಬಂದಿರುತ್ತದೆ. ಅದಕ್ಕಾಗಿ ರೇಖಾ ಎಂಬುವವರು ಮಾತನಾಡುವಾಗ ನನ್ನ ಹೆಸರು ಪ್ರಸ್ತಾಪ ಮಾಡಿದ್ದು ಹಾಗೂ ಜನರಿಗೆ ಸರಕಾರಿ ನೌಕರಿ ಕೊಡಿಸುವದಾಗಿ ಮೋಸ ಮಾಡಿದ್ದರ ಕುರಿತು ಮೀಡಿಯಾದಲ್ಲಿ ಪ್ರಸಾರವಾಗಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಇದರಲ್ಲಿ ಅನ್ಯಾಯಕ್ಕೊಳಗಾದವರಿಗೆ ಸೂಕ್ತ ನ್ಯಾಯ ಕೊಡಿಸಲು ಕೋರಲಾಗಿದೆ ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 74/2022 ಕಲಂ: 420 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 17/2022 ಕಲಂ: 323, 324, 504, 506 ಸಂಗಡ 34 ಐಪಿಸಿ ದಿನಾಂಕ 09/05/2022 ರಂದು ನಮ್ಮೂರ ನಿಂಗಪ್ಪ ಮೇಟಿ ರವರ ಮಗಳ ಮದುವೆಗೆ ಎಣ್ಣಿವಡಗೇರಾ ಗ್ರಾಮಕ್ಕೆ ನಮ್ಮೂರ ವಿಶ್ವನಾಥ ತಂದೆ ಜ್ಯೋತೆಪ್ಪ ಬಿದರಕುಂದಿ ಇವರೊಂದಿಗೆ ಮೋಟರ ಸೈಕಲ್ ಮೇಲೆ ಬಂದಿದ್ದು ಇರುತ್ತದೆ. ಮದ್ಯಾಹ್ನ 2:25 ಗಂಟೆಯ ಸುಮಾರಿಗೆ ನಾನು ಹಾಗೂ ನಮ್ಮೂರ ಗೌಡಪ್ಪ ಮೇಟಿ, ನಿಂಗಪ್ಪ ಕೆಸರಬಾವಿ, ಮಲ್ಲಪ್ಪ ಬಿದರಕುಂದಿ, ವಿಶ್ವನಾಥ ಬಿದರಕುಂದ ಇವರೊಂದಿಗೆ ಎಣ್ಣಿವಡಗೇರಿ ಗ್ರಾಮದ ಸರಕಾರಿ ಶಾಲೆಯಲ್ಲಿ ಊಟ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಯಣ್ಣಿವಡಗೇರಾ ಗ್ರಾಮದ ಶರಣಪ್ಪ ತಂದೆ ಅಮರಪ್ಪ ನೆರಬೆಂಚಿ ಈತನು ನನ್ನ ಹತ್ತಿರ ಬಂದು ಲೇ ಬೋಸುಡಿ ಮಗನೇ ಬಾಗ್ಯಾ ಮೊನ್ನೆ ನನಗೆ ಪೋನ ಹಚ್ಚಿ ನನ್ನ ಹೆಂಡತಿಯನ್ನು ಲವ್ ಮಾಡುತ್ತೇನೆ ಅಂತಾ ಅನ್ನುತ್ತಿಯಾ ಹಲಕಟ್ಟ ಸೂಳೆಮಗನೆ ಅಂತಾ ನನಗೆ ಅವಾಚ್ಯವಾಗಿ ಬೈಯ ಹತ್ತಿದನು, ಆವಾಗ ನಾನು ಪೋನ ಹಚ್ಚಿರುವದಿಲ್ಲ ಅಂತಾ ಅಂದೇನು, ಆವಾಗ ಶರಣಪ್ಪನು ಬೋಸುಡಿ ಮಗನ್ಯಾ ಪೋನ ಹಚ್ಚಿ, ಇಲ್ಲಾ ಅಂತಾ ಸುಳ್ಳು ಬೊಗಳುತ್ತಿಯಾ ಅಂತಾ ಅಂದು ನನ್ನೊಂದಿಗೆ ತಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಕಪಾಳಕ್ಕೆ ಹೊಡೆದು ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ಬಲಗಡೆ ಹಣೆಯ ಮೇಲೆ ಹೊಡೆದು ರಕ್ತಗಾಯಮಾಡಿದ್ದು ಇರುತ್ತದೆ. ನಂತರ ಅಲ್ಲಿಯೇ ಇದ್ದ ಯಣ್ಣಿವಡಗೇರಿ ಗ್ರಾಮದ ಶರಣಪ್ಪನ ಸ್ನೇಹಿತರಾದ ಲಕ್ಷ್ಮಣ್ಣ ತಂದೆ ಬೀಮಣ್ಣ ಮೇಟಿ ಹಾಗೂ ಬಾಲಪ್ಪ ಕಕ್ಕೇರಿ ಇವರು ಅಲ್ಲಿಗೇ ಬಂದು ಬೋಸುಡಿ ಮಗನೇ ನಮ್ಮೂರಿಗೆ ಬಂದು ನಮ್ಮೂರ ಹೆಣ್ಣುಮಗಳಿಗೆ ಅವಾಚ್ಯವಾಗಿ ಮಾತನಾಡುತ್ತಿಯಾ ಅಂತಾ ಅಂದು ಅವರಲ್ಲಿಯ ಲಕ್ಷ್ಮಣ್ಣ ಈತನು ಕೈಯಿಂದ ಎಡಬುಜಕ್ಕು ಹಾಗೂ ಎಡಗಡೆ ಪಕ್ಕಡಿಗೆ ಗುದ್ದಿ ಗುಪ್ತಪೆಟ್ಟು ಪಡಿಸಿದ್ದು ಇರುತ್ತದೆ ಬಾಲಪ್ಪ ಕಕ್ಕೇರಿ ಈತನು ಬೋಸುಡಿ ಮಗನೆ ಇನ್ನೊಮ್ಮ ನಮ್ಮ ಊರ ಕಡೆ ಬಂದರೆ ನೀನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಆಗ ಅಲ್ಲಿಯೇ ಇದ್ದ ನಮ್ಮೂರ ಗೌಡಪ್ಪ ಮೇಟಿ, ನಿಂಗಪ್ಪ ಕೆಸರಬಾವಿ, ಮಲ್ಲಪ್ಪ ಬಿದರಕುಂದಿ, ವಿಶ್ವನಾಥ ಬಿದರಕುಂದಿ ಹಾಗೂ ಎಣ್ಣಿವಡಗೇರಾ ಗ್ರಾಮದ ಯಮನಪ್ಪ ತಂದೆ ಚೆನ್ನಬಸಪ್ಪ ಮೇಟಿ ರವರು ಬಂದು ಜಗಳ ಬಿಡಿಸಿದ್ದು ಇರುತ್ತದೆ ನಂತರ ನಾನು ಉಪಚಾರ ಕುರಿತು ತಾಳಿಕೋಟಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ ಆದ್ದರಿಂದ ನನಗೆ ಹೊಡೆಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಜರ್ಿ ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 18/2022 ಕಲಂ: 323, 354, 504, ಐಪಿಸಿ ಇಂದು ದಿನಾಂಕ 10/05/2022 ರಂದು 12:30 ಪಿ.ಎಂ ಕ್ಕೆ ಪ್ರಕರಣದ ಪಿಯರ್ಾದಿ ಶ್ರೀ ಶರಣಪ್ಪ ತಂದೆ ಅಮರಪ್ಪ ನೆರಬೆಂಚಿ ವ:32 ಉದ್ಯೋಗ :ಒಕ್ಕಲುತನ ಜಾ:ಹಿಂದು ರೆಡ್ಡಿ ಸಾ:ಎಣ್ಣಿವಡಗೇರಾ ತಾ:ಹುಣಸಗಿ ಜಿ:ಯಾದಗೀರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ನನ್ನ ತವರು ಮನೆ ಬೀಳೆಬಾವಿ ಗ್ರಾಮವಿದ್ದು ನನಗೆ ಈಗ ಸುಮಾರು ಒಂದು ವರ್ಷದ ಹಿಂದೆ ಎಣ್ಣಿವಡಗೇರಾ ಗ್ರಾಮದ ಶರಣಪ್ಪ ನೆರಬೆಂಚಿ ಈತನೊಂದಿಗೆ ಮದುವೆಯಾಗಿದ್ದು ಈಗ ನಾನು ನನ್ನ ಗಂಡನ ಮನೆಯಲ್ಲಿ ಇರುತ್ತೇನೆ ದಿನಾಂಕ 04/05/2022 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಗಂಡ ಶರಣಪ್ಪ ರವರ ನಮ್ಮ ಮನೆಯಲ್ಲಿ ಇದ್ದಾಗ ನನ್ನ ಗಂಡನು ನನಗೆ ಬಿಳೆಬಾವಿ ಗ್ರಾಮದ ಬಾಗಪ್ಪ ಈತನು ನಿನಗೆ ಪರಿಚಯವಿರುತ್ತಾನಾ ಅಂತಾ ಕೇಳಿದನು ಆಗ ನಾನು ಇಲ್ಲ ಅಂತಾ ಅಂದೇನು ಆಗ ನಾನು ಮತ್ತು ನನ್ನ ಗಂಡನಿಗೆ ಯಾಕೆ ಈ ರೀತಿ ಕೆಳಿದಿರಿ ಅಂತಾ ಅಂದೇನು ಅದಕ್ಕೆ ನನ್ನ ಗಂಡನು ಬಿಳೆಬಾವಿ ಗ್ರಾಮದ ಬಾಗಪ್ಪ ತಂದೆ ಚೆನ್ನಪ್ಪ ಬರದೇವನಾಳ ಈತನು ತನ್ನ ಮೋಬೈಲ್ ನಂ 9606349280 ನಂಬರದಿಂದ ನನ್ನ ಮೋಬೈಲ್ ನಂ 9731468475 ನಂಬರಗೆ ಪೋನ ಮಾಡಿ ನಾನು ನಿನ್ನ ಹೆಂಡತಿ ಮಲ್ಲಮ್ಮಳನ್ನು ನಮ್ಮೂರಲ್ಲಿ ಇದ್ದಾಗ ನಾನು ಅವಳನ್ನು ಲವ್ ಮಾಡುತ್ತಿದ್ದೇನು ನಾನು ಅವಳನ್ನು ಬಿಡುವದಿಲ್ಲ ಅಂತಾ ಅಂದನು ಅದಕ್ಕೆ ಕೇಳಿದೇನು ಅಂತಾ ಅಂದನು.
ನಿನ್ನೆ ದಿನಾಂಕ 09/05/2022 ರಂದು ನಮ್ಮೂರಲ್ಲಿ ನಮ್ಮ ಗ್ರಾಮದ ಮಲ್ಲಪ್ಪ ಜೆಟ್ಟೆಪ್ಪ ಪೂಜಾರಿ ಇವರ ಮನೆಯಲ್ಲಿ ಅವರ ಮಕ್ಕಳ ಮದುವೆ ಇದ್ದು ಮದುವೆಗೆ ಬಿಳೆಬಾವಿ ಗ್ರಾಮದ ಒಂದು ಹೆಣ್ಣನ್ನು ತಗೆದುಕೊಂಡಿದ್ದು ಮದುವೆಗೆ ಬಿಳೆಬಾವಿ ಗ್ರಾಮದವರು ಬಂದಿದ್ದರು. ಮದುವೆಯು ನಮ್ಮೂರ ಗಂಡಿನ ಮನೆಯ ಮುಂದೆ ನಡೆದಿದ್ದು ಊಟವನ್ನು ನಮ್ಮೂರ ಸರಕಾರಿ ಶಾಲೆಯ ಆವರಣಲ್ಲಿ ಇಟ್ಟಿದ್ದರು. ನಾನು ಹಾಗೂ ಗಂಡ ಶರಣಪ್ಪ ಇಬ್ಬರು ಮದುವೆಗೆ ಹೋಗಿ ಊಟ ಮಾಡಲು ಸರಕಾರಿ ಶಾಲೆಗೆ ಹೋಗಿ ಊಟ ಮಾಡುತ್ತಿದ್ದಾಗ ಬಿಳೆಬಾವಿ ಗ್ರಾಮದ ಬಾಗಪ್ಪ ಬರದೇವನಾಳ ಈತನು ಮದುವೆಗೆ ಬಂದು ಅಲ್ಲಿಯೇ ಊಟ ಮಾಡುತ್ತಿದ್ದನು. ಆಗ ನಾನು ನನ್ನ ಗಂಡ ಶರಣಪ್ಪನಿಗೆ ಬಾಗಪ್ಪನನ್ನು ತೋರಿಸಿ ಇವನೇ ನೋಡು ಮೊನ್ನೆ ನಿಮಗೆ ಪೋನಮಾಡಿದವನು ಅಂತಾ ಅಂದೇನು ಆಗ ನನ್ನ ಗಂಡನು ಬಾಗಪ್ಪನ ಹತ್ತಿರ ಹೋಗಿ ಮೊನ್ನ ನನಗೆ ಪೋನ ಮಾಡಿದವನು ನೀನೆ ಎನಲೆ ಯಾಕೆ ಈ ರೀತಿ ಮಾಡುತ್ತಿ ಅಂತಾ ಕೇಳಿದೇನು, ಆವಗ ಬಾಗಪ್ಪ ಈತನು ನನ್ನ ಗಂಡ ಶರಣಪ್ಪನಿಗೆ ಬೊಸುಡಿ ಮಗನೇ ಹೌದಲೇ ನಿನ್ನ ಹೆಂಡತಿಯನ್ನು ನಾನು ಮೊದಲಿನಿಂದಲು ಪ್ರೀತಿಮಾಡುತ್ತಿದ್ದೇನು ನೀ ಏನ ಶಂಟ ಹರಕತ್ತಿ ನಿಮ್ಮೂರಿಗೆ ಬಂದಿನಿ ನೋಡು ಏನ ಮಾಡುತ್ತಿ ಮಾಡು ಅಂತಾ ಅಂದನು, ಆವಗ ನನ್ನ ಗಂಡ ಶರಣಪ್ಪನು ಯಾಕೆಲೆ ಸರಿಯಾಗ ಮಾತಾಡು ಅಂತಾ ಅಂದಾಗ ನಿನ್ನ ಜೊತೆ ಏನ್ ಸರಿಯಾಗಿ ಮಾತನಾಡುವದು ಅಂತಾ ಅಂದು ನನ್ನ ಗಂಡ ಶರಣಪ್ಪನೊಂದಿಗೆ ತೆಕ್ಕೆಕುಸ್ತಿಗೆ ಬಿದ್ದು ಕೈಯಿಂದ ನನ್ನ ಗಂಡನ ಕಪಾಳಕ್ಕೆ ಹೊಡೆದು ಕಾಲಿನಿಂದ ಸೊಂಟಕ್ಕೆ ಒದ್ದನು ಆಗ ನನ್ನ ಗಂಡನಿಗೆ ಹೊಡೆಯುವದನ್ನು ನೋಡಿ ನಾನು ಬಿಡಿಸಿಕೊಳ್ಳಲು ಹೋದಾಗ ಬಾಗಪ್ಪನು ನನಗೆ ಬೋಸುಡಿ ಸೂಳಿ ನೀನು ಬಿಡಿಸಿಕೊಳ್ಳಲು ಬಂದಿಯಾ ಅಂತಾ ನನಗೆ ಅವಾಚ್ಯವಾಗಿ ಬೈದು ನನ್ನ ಸೀರೆಹಿಡಿದು ಎಳೆದಾಡಿ ಅವಮಾನ ಮಾಡಿದ್ದು ಇರುತ್ತದೆ ಇದನ್ನು ಅಲ್ಲಿಯೇ ಇದ್ದ ನಮ್ಮೂರ ಲಕ್ಷ್ಮಣ್ಣ ತಂದೆ ಬೀಮಣ್ಣ ಮೇಟಿ ಮತ್ತು ಬಾಲಪ್ಪ ಕಕ್ಕೇರಿ, ಮಲ್ಲಪ್ಪ ಮೇಟಿ ಹಾಗೂ ಮದುವೆಗೆ ಊಟಕ್ಕೆ ಬಂದಿದ್ದ ನಮ್ಮೂರಿನ ಇತರೆ ಜನರು ಕೂಡಿ ಜಗಳ ಬಿಡಿಸಿ ಮನೆಗೆ ಕಳುಹಿಸದರು ನಂತರ ನಾನು ಹಾಗೂ ನನ್ನ ಗಂಡ ಶರಣಪ್ಪ ಇಬ್ಬರು ನಮ್ಮ ಮನೆಗೆ ಹೋಗಿ ನಮ್ಮ ಮನೆಯವರೊಂದಿಗೆ ನಿನ್ನೆ ರಾತ್ರಿ ವಿಚಾರ ಮಾಡಿಕೊಂಡು ಇಂದು ಠಾಣೆಗೆ ಬಂದಿರುತ್ತೇವೆ ಈ ಜಗಳದಲ್ಲಿ ನನಗೆ ಅಷ್ಟೇನು ಪೆಟ್ಟಾಗಿರುವದಿಲ್ಲ ನಾನು ಆಸ್ಪತ್ರೆಗೆ ಹೋಗುವದಿಲ್ಲ ಅಂತಾ ಪಿಯರ್ಾದಿ ಕೊಟ್ಟಿದ್ದು ಇರುತ್ತದೆ. ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 18/2022 ಕಲಂ 323,354, 504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 57/2022 ಕಲಂ. 379 ಐಪಿಸಿ ಇಂದು ದಿನಾಂಕ 10.05.2022 ರಂದು ಸಾಯಂಕಾಲ 6.00 ಗಂಟೆಗೆ ವಿನಯಕುಮಾರ ರೆಡ್ಡಿ ತಂದೆ ಭೀಕ್ಷ್ಮಾ ರೆಡ್ಡಿ ಪಿನ್ನಪ್ಪ ರೆಡ್ಡಿ ಭೀಕ್ಷ್ಮಾ ರೆಡ್ಡಿ ಎಲ್ & ಟಿ ಕಂಪನಿಯಲ್ಲಿ ಅಕೌಂಟ್ & ಆಡ್ಮಿನ್ ಸಾ|| ಎಲ್.ಬಿ. ನಗರ ಹೈದ್ರಾಬಾದ ಹಾ|| ವ|| ತಮ್ಮಣ್ಣ ಕಾಂಪ್ಲೇಕ್ಷ ಹೊಸಳ್ಳಿ ಕ್ರಾಸ ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರು ಸಾರಾಂಶವೇನೆಂದೆರ,ೆ ನಮ್ಮ ಕಂಪನಿಯು ಸಂಬ್ರ ವಾಟರ ಟ್ಯಾಂಕಿನಿಂದ ಕಡೇಚೂರವರೆಗೆ 500 ಮೀಟರಗೆ ಒಂದು ಂಡಿ ತಚಿಟತಜ ತಿಣ ಟಣಛಿಜ ತಚಿಟತಜ 150 ಟಟ & 200 ಟಟ ರಂತೆ ಅಳವಡಿಸಿದ ಒಟ್ಟು 13 ಸಟ್ ಂಡಿ ತಚಿಟತಜ ತಿಣ ಟಣಛಿಜ ತಚಿಟತಜ 150 ಟಟ & 200 ಟಟ ಅಳವಡಿಸಿದ್ದು ಇರುತ್ತದೆ. ಸದರಿ ವಾಲ್ಗಳನ್ನು ನಮ್ಮ ಕಂಪನಿಯ ಸೈಟ್ ಇಂಜಿನಿಯರಗಳಾದ ಜನಾರ್ಧನ ರೆಡ್ಡಿ ಇವರು ಚೆಕ ಮಾಡಿ ವರದಿ ನೀಡುತ್ತಾರೆ. ದಿನಾಂಕ 05.04.2022 ರಂದು ಬೆಳಿಗ್ಗೆ 9.00 ಗಂಟೆಗೆ ನಮ್ಮ ಕಂಪನಿಯ ಸೈಟ್ ಇಂಜಿನಿಯರ ಜನಾರ್ಧನ ರೆಡ್ಡಿ ತಂದೆ ನರಸರೆಡ್ಡಿ ಸಾ|| ಮೇದಕ ಇವರು ಪರಿಶೀಲಿಸಿ ಚೆಕ ಮಾಡಲಾಗಿ ಅವುಗಳಲ್ಲಿ ಅಲ್ಲಲ್ಲಿ ಅಳವಡಿಸಿದ ಒಟ್ಟು 13 ಸಟ್ ಂಡಿ ತಚಿಟತಜ ತಿಣ ಟಣಛಿಜ ತಚಿಟತಜ 150 ಟಟ & 200 ಟಟ ಇರುವದಿಲ್ಲ ಅಂತ ತಿಳಿಸಿದ್ದು ಇರುತ್ತದೆ. ನಂತರ ನಾನು ಹೋಗಿ ನೋಡಲಾಗಿ ಅಲ್ಲಲ್ಲಿ ಅಳವಡಿಸಿದ 13 ಸಟ್ ಂಡಿ ತಚಿಟತಜ ತಿಣ ಟಣಛಿಜ ತಚಿಟತಜ 150 ಟಟ & 200 ಟಟ ಇರಲಿಲ್ಲ. ಇವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ., ಪ್ರತಿ ಒಂದು ಸಟ್ ಂಡಿ ತಚಿಟತಜ ತಿಣ ಟಣಛಿಜ ತಚಿಟತಜ 150 ಟಟ & 200 ಟಟ ರೂ. 37,000=00 ರೂ. ಇದ್ದು ಒಟ್ಟು 13 ಸಟ್ ಂಡಿ ತಚಿಟತಜ ತಿಣ ಟಣಛಿಜ ತಚಿಟತಜ 150 ಟಟ & 200 ಟಟ ವಾಲ್ಗಳಿಗೆ ಅಂದಾಜು ಕಿಮ್ಮತ್ತು ಒಟ್ಟು 4,81,000=00 ರೂ. ಮೌಲ್ಯದ ವಾಲ್ ಗಳನ್ನು ಯಾರೋ ಕಳ್ಳರು ದಿನಾಂಕ 01.03.2022 ಸಾಯಂಕಾಲ 4.00 ಗಂಟೆಯಿಂದ ದಿನಾಂಕ 05.04.2022 ವರೆಗಿನ ಬೆಳಿಗ್ಗೆ 9.00 ಗಂಟೆ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ದೂರು ಸಾರಾಂಶ ಇರುತ್ತದೆ.


ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 08/2022 ಕಲಂ. 174 ಸಿಆರ್ಪಿಸಿ ದಿನಾಂಕ: 10-05-2022 ರಂದು ಮಧ್ಯಾಹ್ನ 03-00 ಗಂಟೆಗೆ ಪಿಯರ್ಾಧಿದಾರನು ಠಾಣೆಗ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನಾನು ನಮ್ಮ ತಮ್ಮ ಜುಬಲಪ್ಪ, ಹಾಗೂ ಮರಲಿಂಗಪ್ಪ ಎಲ್ಲರು ಬೆಂಗಳೂರಿಗೆ ದುಡಿಯಲು ಹೋಗಿ ಅಲ್ಲಿ ಕೂಲಿ ಕೆಲಸ ಮಾಡಿಕೊಂಡಿರುತ್ತೆವೆ. ನನ್ನ ತಮ್ಮ ಜುಬಲಪ್ಪನ ಹೆಂಡತಿ ಮೊನಪ್ಪ ಈಕೆಯು ದಿನಾಂಕ: 02-05-2022 ರಂದು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮಗುವನ್ನು ಕರೆದುಕೊಂಡು ಹೋಗಿರುತ್ತಾಳೆ ಇದರಿಂದ ನನ್ನ ತಮ್ಮ ಜುಬಲಪ್ಪ ಈತನು ತನ್ನ ಹೆಂಡತಿ ಕಾಣೆಯಾಗಿರುತ್ತಾಳೆ ಅಂತಾ ಬೆಂಗಳೂರಿನ ಶಂಕರಪೂರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿರುತ್ತಾನೆ, ಅದಕ್ಕೆ ಜುಬಲಪ್ಪನಿಗೆ ಬೆಂಗಳೂರು ಪೊಲಿಸರು ಜುಬಲಪ್ಪನಿಗೆ ಠಾಣೆಯಲ್ಲಿ ವಿಚಾರಣೆ ಮಾಡಿರುತ್ತಾರೆ, ಅಲ್ಲಿಂದ ಊರಿಗೆ ಬರುತ್ತೇನೆ ಅಂತಾ ಹೇಳಿ ಊರ ಕಡೆಗೆ ಬಂದು ಬೆಳಗೇರಾ ಗ್ರಾಮಕ್ಕೆ ಹೋಗಿ ಅಲ್ಲಿ ತನ್ನ ಹೆಂಡತಿ ಕಾಣೆಯಾದರು ಯಾರು ಜವಬ್ದಾರಿ ತೆಗೆದುಕೊಂಡಿಲ್ಲ ಅಂತಾ ಬೇಜಾರಾಗಿ ಇಂದು ಮಧ್ಯಾಹ್ನ 01-00 ಗಂಟೆ ಸುಮಾರಿಗೆ ಬೆವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ತಾವು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾಧಿ ಸಾರಂಶ ಇರುತ್ತದೆ.

Last Updated: 11-05-2022 11:16 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080