Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-06-2022


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 95/2022 ಕಲಂ 379 ಐ.ಪಿ.ಸಿ: ಇಂದು ದಿನಾಂಕ10.06.2022 ರಂದು ಬೆಳಿಗ್ಗೆ 10.30 ಗಂಟೆಗೆ ರಾಯಚೂರು ರೈಲ್ವೆ ಪೊಲೀಸ್ ಠಾಣೆ ಗುನ್ನೆ ನಂ:25/2022 ಕಲಂ 379 ಐಪಿಸಿ ನೇದ್ದು ಸರಹದ್ದಿನ ಆದಾರದ ಮೇಲೆ ಮಾನ್ಯ ಜೆಎಮ್ಎಫ್ಸಿ-3 ನೇ ನ್ಯಾಯಾಲಯ ಇವರ ಆದೇಶದಂತೆ ಅಂಚೆ ಮೂಲಕ ವಸೂಲಾಗಿದ್ದು. ಅದರಲ್ಲಿ ಪಿರ್ಯಾಧಿಯು ದಿನಾಂಕ13.05.2022 ರಂದು ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಯಾದಗಿರಿಗೆ ಬರುವ ಕುರಿತು ರೈಲ್ವೆ ಗಾಡಿ ಸಂಖ್ಯೆ 12627. ಕನರ್ಾಟಕ ಎಕ್ಸಪ್ರೇಸ್ ನೇದ್ದರ ಡಿ-2 ಕೋಚ ಬರ್ತ ನಂಬರ 81,82,83,84,85 ರಲ್ಲಿ ಬೆಂಗಳೂರಿನಿಂದ ಯಾದಗಿರಿವರೆಗೆ ಬರುವಾಗ ತಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ ಕಾಲಂ ನಮ 10 ರಲ್ಲಿ ನಮೂದಿಸಿ ಬಂಗಾರದ ಒಡುವೆಗಳನ್ನು ಪ್ರಯಾಣದ ಮಧ್ಯದಲ್ಲಿ ದಿ|| 13.05.2022 ರಂದು 10.30 ಗಂಟೆಗೆ ನೋಡಿಕೊಂಡಿದ್ದು. ನಂತರ ಪ್ರಯಾಣ ಮುಂದುವರಿಸಿ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಅಟೋ ಮತ್ತು ಬಸ್ಸಿನಲ್ಲಿ ಪ್ರಯಾಣ ಮಾಡಿ ಕಾಕಲವಾರ ಗ್ರಾಮದಲ್ಲಿ ತಮ್ಮ ವ್ಯಾನಿಟಿ ಬ್ಯಾಗನ್ನು ನೋಡಿಕೊಂಡಿದ್ದು. ಸದರಿ ಬಂಗಾರದ ಒಡುವೆಗಳು ಕಳುವಾಗಿದ್ದು ಗೊತ್ತಾಗಿ ತನ್ನ ಒಡುವೆಗಳನ್ನು ಪತ್ತೆ ಮಾಡಿಕೊಡಲು ರಾಯಚೂರ ರೈಲ್ವೆ ಪೊಲೀಸ್ ನಲ್ಲಿ ಪಿರ್ಯಾಧಿ ಸಲ್ಲಿಸಿದ್ದು ಇರುತ್ತದೆ.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 32/2022 ಕಲಂ 279, 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್: ಇಂದು ದಿನಾಂಕ 10/06/2022 ರಂದು ಮದ್ಯರಾತ್ರಿ 2 ಎ.ಎಂ. ದಿಂದ 3 ಎ.ಎಂ.ದ ನಡುವಿನ ಅವಧಿಯಲ್ಲಿ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಎಸ್.ಎಲ್.ಟಿ ಹೊಟೆಲ್ ಹತ್ತಿರ ಒಬ್ಬ ಅಪರಿಚಿತ ಹೆಂಗಸು ವಯ ಅಂದಾಜು 60 ರಿಂದ 65 ವರ್ಷ ಇವಳಿಗೆ ಯಾವುದೊ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಹೋಗುತ್ತಾ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಅಪಘಾತದಲ್ಲಿ ಅಪರಿಚಿತ ಹೆಂಗಸಿಗೆ ತಲೆಗೆ, ಬಲಗಾಲಿಗೆ ಭಾರೀ ರಕ್ತಗಾಯವಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತ ಪಡಿಸಿದ ವಾಹನ ಚಾಲಕನು ಸ್ಥಳದಿಂದ ತನ್ನ ವಾಹನದೊಂದಿಗೆ ಪರಾರಿಯಾಗಿದ್ದು ಇರುತ್ತದೆ. ಮೃತಳ ವಾರಸುದಾರರು ಯಾರು ಇಲ್ಲದ ಕಾರಣ ಶ್ರೀ ಮಲ್ಲಿಕಾಜರ್ುನ ತಂದೆ ಬಸಲಿಂಗಪ್ಪ ಈಟೆ ವಯ;35 ವರ್ಷ, ಜಾ;ಪ.ಜಾತಿ, ಉ;ಸಮಾಜ ಸೇವೆ (ಆಟೋ ಚಾಲಕ), ಸಾ;ಅಂಬೇಡ್ಕರ್ ನಗರ ಯಾದಗಿರಿ ರವರು ಈ ಘಟನೆ ಬಗ್ಗೆ ಫಿಯರ್ಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.32/2022 ಕಲಂ 279, 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೆದ್ದರಲ್ಲಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 69/2022 ಕಲಂ 379 ಐಪಿಸಿ : ಇಂದು ದಿನಾಂಕ 10.06.2022 ರಂದು ಸಾಯಂಕಾಲ 7 ಗಂಟೆಗೆ ಕಿರಣ.ಡಿ.ಆರ್. ಭೂವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಯಾದಗಿರಿ ಜಿಲ್ಲೆ ಇವರು ಠಾಣೆಗೆ ಹಾಜರಾಗಿ ದೂರು ಹಾಗೂ ಜಪ್ತಿಪಂಚನಾಮೆಯನ್ನು ಹಾಜರಪಡಿಸಿ ನೈಸಗರ್ಿಕ ಖನಿಜವಾದ ಮರಳನ್ನು ಆರೋಪಿತನು ಸರಕಾರಕ್ಕೆ ರಾಜಧನ ಪಾವತಿಸಿದೆ ಕಡೇಚೂರ ಗ್ರಾಮ ಸೀಮಾಂತರದ ಕೆ.ಐ.ಡಿ.ಎ.ಬಿ ಪ್ರದೇಶದ ಪ್ಲಾಟ್ ಸಂಖ್ಯೆ 277, 278 ರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದು, ಸದರಿ ಆರೋಪಿತನ ಮೇಲೆ ಸೂಕ್ರ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 88/2022 ಕಲಂ: 143, 147, 148, 323, 324, 326, 307, 504, 506 ಸಂಗಡ 149 ಐಪಿಸಿ: ಇಂದು ದಿನಾಂಕಃ 10/06/2022 ರಂದು 10-30 ಎ.ಎಮ್ ಕ್ಕೆ ಠಾಣೆಯಲ್ಲಿರುವಾಗ ಸರಕಾರಿಆಸ್ಪತ್ರೆ ಸುರಪುರದಿಂದ ಎಮ್.ಎಲ್.ಸಿ. ಇದೆಅಂತಾ ಪೋನ್ ಬಂದ ಮೇರೆಗೆ ನಾನು ಸರಕಾರಿಆಸ್ಪತ್ರೆಗೆ 10-40 ಎ.ಎಮ್. ಕ್ಕೆ ಭೇಟಿ ನೀಡಿಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುದಾರನಾದ ಶ್ರೀ ಹುಲಗಪ್ಪತಂದೆತಿಪ್ಪಯ್ಯ ಪೂಜಾರಿ ಸಾ|| ಭೊವಿಗಲ್ಲಿ ಸುರಪೂರಇವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 11:45 ಎ.ಎಮ್ಮ ಕ್ಕೆ ಬಂದಿದ್ದು, ಸದರಿ ಪಿಯರ್ಾದಿ ಹೇಳಿಕೆಯ ಸಾರಾಂಶವೆನೆಂದರೆ, ನನಗೆ ಒಟ್ಟುಐದುಜನ ಮಕ್ಕಳಿದ್ದು, ಅವರಲ್ಲಿ ನಾಲ್ಕು ಜನಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳಿರುತ್ತಾಳೆ. ನಾನು ನಮ್ಮಓಣಿಯಲ್ಲಿರುವ ಹುಲಗಮ್ಮದೇವಿಯಗುಡಿಯ ಪೂಜಾರಿಕೆ ಕೆಲಸ ಮಾಡಿಕೊಂಡಿರುತ್ತೇನೆ. ಹುಲಿಗೆಮ್ಮಗುಡಿಯ ಹತ್ತಿರ ನಮ್ಮ ಮನೆ ಇರುತ್ತದೆ. ನನ್ನದೊಡ್ಡ ಮಗನಾದತಿಪ್ಪಯ್ಯಈತನುಎರಡು ದಿನಗಳ ಹಿಂದೆ ನಮ್ಮ ಮನೆಯ ಮುಂದಿನ ನಮ್ಮಕಿರಾಣಿಅಂಗಡಿ ಮುಂದೆ ಬಜಿ ಬಂಡಿಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದನು. ನಮ್ಮ ಮನೆಯ ಪಕ್ಕದಖುಲ್ಲಾಜಾಗದಲ್ಲಿ ನಾವು ಕಟ್ಟಿಗೆ ಹಾಕಿದ್ದೆವು. ಈ ವಿಷಯವಾಗಿಯಂಕಪ್ಪ ಬಿಳಗಲ್ಲಿ ಈತನುತಕರಾರು ಮಾಡಿದ್ದನು. ಆದರೂ ನಾವು ಸುಮ್ಮನೇಇದ್ದೇವು. ಹೀಗಿದ್ದುಇಂದು ದಿನಾಂಕ: 10/06/2022 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಾನು, ನನ್ನ ಹೆಂಡತಿಯಲ್ಲಮ್ಮ, ನನ್ನ ಮಗ ವೆಂಕಟೇಶ ಹಾಗೂ ನಮ್ಮತಮ್ಮ ಪರಶುರಾಮತಂದೆ ಭೀಮರಾಯಎಲ್ಲರು ನಮ್ಮ ಮನೆಯ ಮುಂದೆಇದ್ದಾಗ ನಮ್ಮಓಣಿಯ ನಮ್ಮಜನಾಂಗದವರೇಆದ 1) ಯಂಕಪ್ಪತಂದೆರಾಯಪ್ಪ ಬಿಳಗಲ್ಲಿ 2) ಪೃಥ್ವಿರಾಜತಂದೆಯಂಕಪ್ಪ ಬಿಳಗಲ್ಲಿ 3) ಪವನಕುಮಾರತಂದೆ ಮುದಕಪ್ಪ 4) ನಾಗರಾಜತಂದೆಯಂಕಪ್ಪ ಬಿಳಗಲ್ಲಿ 5) ಹಣಮಂತತಂದೆರಾಮಣ್ಣ 6) ವೆಂಕಟೇಶತಂದೆರಾಮಣ್ಣ 7) ಶಿವಮ್ಮ ಗಂಡ ಮುದಕಪ್ಪ 8) ಹುಲಗಮ್ಮಗಂಡಯಂಕಪ್ಪ ಬಿಳಗಲ್ಲಿ 9) ದೇವಮ್ಮಗಂಡ ಲಕ್ಷ್ಮಣ ಅಸ್ಕಿ 10) ಮಂಜಮ್ಮಗಂಡಯಂಕಪ್ಪ 11) ಹುಲಗವ್ವತಂದೆಯಲ್ಲಪ್ಪ 12) ತಾಯಮ್ಮಗಂಡ ಹಣಮಂತಇವರೆಲ್ಲರುಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿಕಲ್ಲು, ಬಡಿಗೆ, ರಾಡು, ಕಾರದ ಪುಡಿ ಹಿಡಿದುಕೊಂಡು ಬಂದವರೇಅವರಲ್ಲಿಯಯಂಕಪ್ಪತಂದೆರಾಯಪ್ಪಈತನು ಏನಲೇ ಸೂಳೆ ಮಕ್ಕಳೆ ಭಜಿ ವ್ಯಾಪಾರ ಮಾಡುತ್ತಿರೇನಲೇ ನಿಮ್ಮ ಸೊಕ್ಕು ಬಾಳ ಆಗಿದೆ ನಮ್ಮ ಮಾವನ ಮನೆಯ ಹತ್ತಿರ ಏಕೆ ಕಟ್ಟಿಗೆ ಹಾಕಿರಿ ಸೂಳೆ ಮಕ್ಕಳೇ ಅಂತಅವಾಚ್ಯಾವಾಗಿ ಬೈಯುತ್ತಿದ್ದಾಗ ನಾನು ಯಾಕೆ ಸುಮ್ಮನೆ ಈ ರೀತಿ ಬೈಯುತ್ತೀರಿ. ನಮ್ಮಅಂಗಡಿ ಮುಂದೆ ಬಜಿ ವ್ಯಾಪಾರ ಮಾಡುತ್ತಿದ್ದಿವಿ ಹಾಗೂ ನಮ್ಮ ಮನೆ ಪಕ್ಕದಲ್ಲಿಕಟ್ಟಿಗೆ ಹಾಕಿದರೆತಪ್ಪೇನುಅಂತಅಂದಾಗಅವರಲ್ಲಿಯಯಂಕಪ್ಪನುತನ್ನಕೈಯಲ್ಲಿದ್ದರಾಡಿನಿಂದ ನನ್ನತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿದನು, ಅಲ್ಲದೆಅದೇರಾಡಿನಿಂದ ಬಲ ಹುಬ್ಬಿನ ಮೇಲೆ ಹೊಡೆದುರಕ್ತಗಾಯ ಮಾಡಿದನು. ಪೃಥ್ವಿರಾಜಈತನುತನ್ನಕೈಯಲ್ಲಿದ್ದ ಬಡಿಗೆಯಿಂದ ನನ್ನ ಸೊಂಟಕ್ಕೆ ಹೊಡೆದುಗುಪ್ತಪೆಟ್ಟು ಮಾಡಿದ್ದಲ್ಲದೆ, ಅದೇ ಬಡಿಗೆಯಿಂದ ಬಲಗೈ ಮುಷ್ಠಿ ಹತ್ತಿರ ಹೊಡೆದು ರಕ್ತಗಾಯಪಡಿಸಿದನು. ನನ್ನತಮ್ಮ ಪರಶುರಾಮಈತನಿಗೆ ಪವನಕುಮಾರಈತನು ಈ ಸೂಳೆಮಗನಿಗೆ ಇವತ್ತ ಖಲಾಸ ಮಾಡಿಯೇತೀರುತ್ತೇನೆಅಂತಅನ್ನುತ್ತಾ ಕೊಲೆ ಮಾಡುವಉದ್ದೇಶದಿಂದತನ್ನಕೈಯಲ್ಲಿದ್ದರಾಡಿನಿಂದತಲೆಯ ಮೇಲೆ ಎರಡು-ಮೂರು ಬಾರಿ ಹೊಡೆದು ಭಾರಿ ರಕ್ತಗಾಯಪಡಿಸಿದನು. ನಾಗರಾಜಈತನು ಬಡಿಗೆಯಿಂದ ಪರಶುರಾಮನ ಬಲಭುಜಕ್ಕೆ ಮತ್ತು ಬಲಗಡೆ ಸೊಂಟಕ್ಕೆ ಹೊಡೆದು ಗುಪ್ತಗಾಯಪಡಿಸಿದನು. ನನ್ನ ಮಗ ವೆಂಕಟೇಶಈತನಿಗೆ ಹಣಮಂತಈತನುತನ್ನಕೈಯಲ್ಲಿದ್ದ ಬಡಿಗೆಯಿಂದತಲೆಗೆ ಹೊಡೆದು ಗುಪ್ತಪೆಟ್ಟುಪಡಿಸಿದ್ದು ಮತ್ತು ವೆಂಕಟೇಶತಂದೆರಾಮಣ್ಣಈತನುಕೈಯಿಂದ ಬೆನ್ನಿಗೆ ಹೊಡೆದುಗುಪ್ತಗಾಯ ಮಾಡಿದನು. ನನ್ನ ಹೆಂಡತಿಯಲ್ಲಮ್ಮ ಇವಳಿಗೆ ಶಿವಮ್ಮ ಈಕೆಯುತನ್ನಕೈಯಲ್ಲಿದ್ದಕಲ್ಲಿನಿಂದಎಡಗಣ್ಣಿನ ಹುಬ್ಬಿನ ಮೇಲೆ ಹೊಡೆದು ರಕ್ತಗಾಯಪಡಿಸಿದಳು ಮತ್ತು ಹುಲಗಮ್ಮಗಂಡಯಂಕಪ್ಪ ಬಿಳಗಲ್ಲಿ ಇವಳು ಕಲ್ಲಿನಿಂದ ಬಲಗಡೆ ಹಣೆಗೆ ಹೊಡೆದುಗುಪ್ತಪೆಟ್ಟು ಮಾಡಿದಳು, ದೇವಮ್ಮ ಇವಳು ಬಡಿಗೆಯಿಂದ ಮೂಗಿಗೆ ಮತ್ತುತಲೆಯೆ ಮೇಲೆ ಹೊಡೆದುಗುಪ್ತಪೆಟ್ಟು ಮಾಡಿದಳು, ಅಲ್ಲದೆ ಮಂಜಮ್ಮ ಇವಳು ಜೋರಾಗಿ ನೆಲಕ್ಕೆ ದಬ್ಬಿಸಿಕೊಟ್ಟಾಗ ಹುಲಗವ್ವತಂದೆಯಲ್ಲಪ್ಪ ಹಾಗೂ ತಾಯಮ್ಮಇಬ್ಬರೂ ಕಾಲಿನಿಂದಒದೆಯುತ್ತಿದ್ದಾಗಅಲ್ಲಿಯೇಗುಡಿಯ ಹತ್ತಿರಇದ್ದ ನನ್ನ ಮಗ ತಿಪ್ಪಯ್ಯತಂದೆ ಹುಲಗಪ್ಪ ಪೂಜಾರಿ, ಹಣಮಂತ್ರಾಯತಂದೆದೇವಿಂದ್ರಪ್ಪ ಮೇಟಿಗೌಡ, ಭೀಮಣ್ಣತಂದೆದುರ್ಗಪ್ಪ ಮೇದಾರಗಲ್ಲಿ, ಶ್ರೀನಿವಾಸ ತಂದೆ ಹೇಮಣ್ಣಯಾದವಇವರು ಬಂದು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಅವರು ಹೊಡೆಯುವದನ್ನು ಬಿಟ್ಟುಇವತ್ತು ಉಳದಿರಿ ಸೂಳೇ ಮಕ್ಕಳೆ ಇನ್ನೊಮ್ಮೊ ನಮ್ಮತಂಟೆಗೆ ಬಂದರೆಜೀವ ಹೊಡೆಯದೇ ಬಿಡುವದಿಲ್ಲ ಅಂತಾಜೀವದ ಬೇದರಿಕೆ ಹಾಕಿ ಹೋದರು. ನಂತರಘಟನೆಯಲ್ಲಿಗಾಯಗೊಂಡ ನಾನು, ನನ್ನ ಹೆಂಡತಿಯಲ್ಲಮ್ಮ, ಮಗ ವೆಂಕಟೇಶ ಮತ್ತುತಮ್ಮ ಪರಶುರಾಮ ನಾಲ್ಕೂ ಜನರುಒಂದು ಖಾಸಗಿ ವಾಹನದಲ್ಲಿಉಪಚಾರಕುರಿತು ಸುರಪೂರ ಸರಕಾರಿಆಸ್ಪತ್ರೆಗೆ ಸೇರಿಕೆಯಾಗಿಉಪಚಾರ ಪಡೆದುಕೊಳುತ್ತಿದ್ದೇವೆ. ಕಾರಣ ನಮಗೆ ಕೊಲೆ ಮಾಡುವಉದ್ದೇಶದಿಂದ ಮಾರಣಾಂತಿಕ ಹಲ್ಲೆ ಮಾಡಿ, ಹೊಡೆಬಡೆ ಮಾಡಿಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 12 ಜನರ ಮೇಲೆ ಸೂಕ್ತ ಕಾನೂನು ಕ್ರಮಜರುಗಿಸಬೇಕು ವಿನಂತಿಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 89/2022 ಕಲಂ: 143, 147, 148, 323, 324, 326, 307, 504, 506 ಸಂಗಡ 149 ಐಪಿಸಿ: ಇಂದು ದಿನಾಂಕಃ 10/06/2022 ರಂದು 07-00 ಪಿಎಮ್ ಕ್ಕೆ ಠಾಣೆಯಲ್ಲಿರುವಾಗ ಶ್ರೀ ಸಾಬಣಗೌಡ ತಂದೆ ವೆಂಕಟೇಶ ಸಿಂದನೂರ ವಯಸ್ಸು:33 ವರ್ಷ ಉ: ಕೂಲಿಕೆಲಸ ಜಾತಿ: ಬೇಡರ ಸಾ: ಭೋವಿಗಲ್ಲಿ ಸುರಪುರ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಮ್ಮ ಓಣಿಯಲ್ಲಿ ಹುಲಗಮ್ಮ ದೇವಿಯ ಗುಡಿ ಇದ್ದು ಸದರಿ ಗುಡಿಯ ವಿಷಯದಲ್ಲಿ ತಕರಾರು ಆಗಿ ಎರಡು ಭಾಗವಾಗಿ ಎರಡೂ ಕಡೆ ಪೂಜೆ ಮಾಡುತ್ತಾ ಬಂದಿದ್ದು ಇರುತ್ತದೆ. ಒಂದು ಗುಡಿಯ ಪೂಜಾರಿಕೆ ನಮ್ಮ ದೊಡ್ಡಪ್ಪನ ಮಗನಾದ ಹಣಮಂತ ತಂದೆ ರಾಮಣ್ಣ ಹುಲಗಮ್ಮಗುಡಿಯವರ ಇವರು ಮಾಡುತ್ತಿದ್ದು, ಇನ್ನೊಂದು ಗುಡಿಯ ಪೂಜಾರಿಕೆ ನಮ್ಮ ಓಣಿಯ ಹುಲಗಪ್ಪ ತಂದೆ ಭೀಮಣ್ಣ ಇವರು ಮಾಡುತ್ತಾ ಬಂದಿದ್ದು ಇರುತ್ತದೆ. ಎರಡೂ ಗುಡಿಗಳ ಮದ್ಯ ಕಂಪೌಂಡ ಇರುತ್ತದೆ. ಸದರಿ ಹುಲಗಪ್ಪ ತಂದೆ ಭೀಮಣ್ಣ ಇವರು ತಮ್ಮ ಗುಡಿಯಲ್ಲಿನ ಕಸವನ್ನು ನಮ್ಮ ಗುಡಿಯ ಕಡೆ ಚೆಲ್ಲುವದು, ನೀರು ಚೆಲ್ಲುವದು ಮಾಡುತ್ತಾ ಬಂದಿದ್ದರಿಂದ ನಾವು ಈ ರೀತಿ ಯಾಕೆ ಮಾಡುತ್ತೀರಿ ಅಂತ ಕೇಳಿದಾಗ, ಮುಂದೆ ಈ ರೀತಿ ಮಾಡುವದಿಲ್ಲ ಅಂತ ಹೇಳಿದ್ದರು. ಆದರೂ ಕೂಡ ಮತ್ತೆ ಮತ್ತೆ ಕಸ ಚೆಲ್ಲುವದು, ನೀರು ಚೆಲ್ಲುವದು ಮಾಡುತ್ತಾ ಬಂದಿದ್ದರಿಂದ ನಾವು ಮುಂದೆ ಸರಿ ಹೋಗಬಹುದು ಅಂತ ಸುಮ್ಮನಿದ್ದೆವು. ಅಲ್ಲದೆ ಈಗ 3 ದಿನಗಳ ಹಿಂದೆ ನಮ್ಮ ಗುಡಿಯ ಮುಂದೆ ಭಜಿ ಬಂಡಿ ಇಟ್ಟು ವ್ಯಾಪಾರ ಮಾಡುತ್ತಿದ್ದರಿಂದ ಗುಡಿಯ ಆವರಣದಲ್ಲಿಯೆ ಕಸ ಹಾಕುತ್ತಿದ್ದರಿಂದ ಹುಲಗಪ್ಪನಿಗೆ ಮತ್ತು ಅವರ ಮನೆಯವರಿಗೆ ಹೋಗಿ ಕೇಳಿದರಾಯಿತು ಅಂತ ಸುಮ್ಮನಿದ್ದೆವು. ಹೀಗಿದ್ದು ಇಂದು ದಿನಾಂಕ: 10/06/2022 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ನಾನು, ನಮ್ಮ ಮಾವನಾದ ಯಂಕಪ್ಪ ತಂದೆ ರಾಯಪ್ಪ ಬಿಳಗಲ್ಲಿ ಹಾಗೂ ಆತನ ಮಕ್ಕಳಾದ ನಾಗರಾಜ, ಪೃಥ್ವಿ ಹಾಗೂ ನಮ್ಮ ದೊಡ್ಡಪ್ಪನ ಮಕ್ಕಳಾದ ವೆಂಕಟೇಶ ತಂದೆ ರಾಮಣ್ಣ, ಹಣಮಂತ ತಂದೆ ರಾಮಣ್ಣ ಮತ್ತು ಅಣ್ಣನ ಮಗನಾದ ಪವನ ತಂದೆ ಮುದಕಪ್ಪ ಎಲ್ಲರು ಕೂಡಿ ಹುಲಗಮ್ಮ ಗುಡಿಯ ಮುಂದೆ ಬಿದ್ದ ಕಸವನ್ನು ಸ್ವಚ್ಚ ಮಾಡುತ್ತಿದ್ದಾಗ ನಮ್ಮ ಓಣಿಯ ನಮ್ಮ ಜನಾಂಗದವರೇ ಆದ 1) ಹುಲಗಪ್ಪ ತಂದೆ ಭೀಮಣ್ಣ 2) ಪರಶುರಾಮ ತಂದೆ ಭೀಮಣ್ಣ 3) ತಿಪ್ಪಣ್ಣ ತಂದೆ ಹುಲಗಪ್ಪ 4) ಸಾಯಬಣ್ಣ ತಂದೆ ಹುಲಗಪ್ಪ 5) ಯಂಕಪ್ಪ ತಂದೆ ಹುಲಗಪ್ಪ 6) ಅಪ್ಪು ತಂದೆ ಹುಲಗಪ್ಪ 7) ಯಲ್ಲಮ್ಮ ಗಂಡ ಹುಲಗಪ್ಪ 8) ಜಯಮ್ಮ ಗಂಡ ಪರಶುರಾಮ 9) ಗೀತಾ ಗಂಡ ತಿಪ್ಪಣ್ಣ 10) ಪಾರ್ವತಿ ಗಂಡ ಸಾಯಬಣ್ಣ 11) ಚಂದಮ್ಮ ತಂದೆ ಪರಶುರಾಮ 12) ಭಾಗ್ಯ ತಂದೆ ಹುಲಗಪ್ಪ ಸಾ|| ಭೋವಿಗಲ್ಲಿ ಇವರೆಲ್ಲರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ, ರಾಡು, ಕಲ್ಲುಗಳನ್ನು ಹಿಡಿದುಕೊಂಡು ಬಂದವರೇ ಅವರಲ್ಲಿಯ ಹುಲಗಪ್ಪ ತಂದೆ ಭೀಮಣ್ಣ ಈತನು ಏ ಸೂಳೆ ಮಕ್ಕಳೆ ಇಲ್ಲೇನು ಸ್ವಚ್ಚ ಮಾಡುತ್ತೀರಿ ಅಂತ ಬೈಯುತ್ತಿದ್ದಾಗ ನಮ್ಮ ಮಾವನಾದ ಯಂಕಪ್ಪ ಈತನು ಯಾಕೆ ಬೈಯುತ್ತೀ ನೀವೆ ನಮ್ಮ ಗುಡಿಯ ಕಡೆ ಕಸ ಚೆಲ್ಲುವದು, ಹೊಲಸು ಮಾಡುವದು ಮಾಡುವದಲ್ಲದೆ ಮತ್ತೆ ಭಜಿ ಬಂಡಿ ಇಟ್ಟು ಗುಡಿಯ ಮುಂದೆ, ಗುಡಿಯ ಆವರಣದಲ್ಲಿ ಹೊಲಸು ಮಾಡುತ್ತಿದ್ದೀರಿ ಅಂತ ಅಂದಾಗ, ಹುಲಗಪ್ಪನು ಈ ಜಾಗ ಸಹಿತ ನಾವೇ ಕಬ್ಜೆ ಮಾಡಕೊತೀವಿ ನೀವ್ಯಾರು ಕೇಳಲಿಕ್ಕೆ ಸೂಳೆ ಮಕ್ಕಳೆ ಅಂತ ಅವಾಚ್ಯವಾಗಿ ಬೈಯುತ್ತಾ ಹುಲಗಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನಮ್ಮ ಮಾವ ಯಂಕಪ್ಪನ ಎಡಗಡೆ ಭುಜಕ್ಕೆ ಹೊಡೆದು ಗುಪ್ತಗಾಯ ಮಾಡಿದನು ಆಗ ಬಿಡಿಸಲು ಬಂದ ನಾಗರಾಜ ಈತನಿಗೆ ಪರಶುರಾಮ ಈತನು ಈ ಸೂಳೆಮಗನ ಜೀವ ತೆಗೆದೆ ಬಿಡೋಣ ಅಂತ ಅನ್ನುತ್ತ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ರಾಡಿನಿಂದ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು, ತಿಪ್ಪಣ್ಣ ಈತನು ಬಡಿಗೆಯಿಂದ ಬಲಭುಜಕ್ಕೆ ಮತ್ತು ಬಲಗಾಲ ಮೊಳಕಾಲು ಬಲಚಪ್ಪೆ ಹೊಡೆದು ಗುಪ್ತಗಾಯಪಡಿಸಿದನು. ಪವನ ಈತನಿಗೆ ಸಾಯಬಣ್ಣ ಈತನು ಕಲ್ಲಿನಿಂದ ಬಲಗಡೆ ಹಣೆಯ ಮೇಲೆ ಮತ್ತು ಎಡಗಾಲ ತೊಡೆಗೆ ಹೊಡೆದು ಗುಪ್ತಗಾಯಪಡಿಸಿದನು. ಪೃಥ್ವಿ ಈತನಿಗೆ ಯಂಕಪ್ಪ ಈತನು ಕಲ್ಲಿನಿಂದ ಎಡಗಾಲ ಹೆಬ್ಬೆರಳಿಗೆ ಹೊಡೆದು ಗುಪ್ತಗಾಯಪಡಿಸಿದನು. ವೆಂಕಟೇಶ ಈತನಿಗೆ ಅಪ್ಪು ಈತನು ಕೈಯಿಂದ ಎದೆಗೆ ಹೊಡೆದು, ಕಾಲಿನಿಂದ ಎಡಗಾಲ ಮೊಳಕಾಲಿಗೆ ಹೊಡೆದು ಗುಪ್ತಪೆಟ್ಟು ಮಾಡಿದನು. ಹಣಮಂತ ಈತನಿಗೆ ಯಲ್ಲಮ್ಮ ಇವಳು ಕೈಯಿಂದ ಬೆನ್ನಿಗೆ ಹೊಡೆದು ಗುಪ್ತಪೆಟ್ಟು ಮಾಡಿದಳು. ಆಗ ಅಲ್ಲಿಯೇ ಮನೆಯಲ್ಲಿದ್ದ ಶಿವಮ್ಮ ಗಂಡ ಮುದಕಪ್ಪ, ತಾಯಮ್ಮ ಗಂಡ ಹಣಮಂತ, ಹುಲಿಗೆಮ್ಮ ಗಂಡ ಯಂಕೋಬ, ಮಂಜುಳಾ ಗಂಡ ವೆಂಕಟೇಶ ಇವರು ಬಂದು ಜಗಳ ಬಿಡಿಸುತ್ತಿದ್ದಾಗ ಶಿವಮ್ಮ ಇವಳಿಗೆ ಜಯಮ್ಮ ಇವಳು ಕಲ್ಲಿನಿಂದ ಬೆನ್ನಿಗೆ ಹೊಡೆದು ಗುಪ್ತಗಾಯಗೊಳಿಸಿದಳು ಮತ್ತು ಭಾಗ್ಯ ಇವಳು ಕಾಲಿನಿಂದ ಬಲಗಾಲ ತೊಡೆಯ ಹತ್ತಿರ ಒದ್ದಳು. ತಾಯಮ್ಮ ಇವಳಿಗೆ ಗೀತಾ ಇವಳು ಕೈಯಿಂದ ಬೆನ್ನಿಗೆ ಹೊಡೆದು ಗುಪ್ತಪೆಟ್ಟು ಮಾಡಿದಳು. ಮಂಜುಳಾ ಇವಳಿಗೆ ಪಾರ್ವತಿ ಇವಳು ಬಡಿಗೆಯಿಂದ ತಲೆಯ ಮೇಲೆ ಹೊಡೆದು ಗುಪ್ತಪೆಟ್ಟು ಮಾಡಿದಳು. ಹುಲಗಮ್ಮ ಇವಳಿಗೆ ಚಂದಮ್ಮ ಇವಳು ಕೈಯಿಂದ ಎದೆಗೆ ಗುದ್ದಿ ಗುಪ್ತಪೆಟ್ಟು ಮಾಡಿದಳು. ಆಗ ಅಲ್ಲಿಯೇ ಇದ್ದ ನಾನು ಮತ್ತು ಕಟ್ಟಿಗೆ ಅಡ್ಡದ ಹತ್ತಿರ ಇದ್ದ ಹಣಮಂತ ತಂದೆ ನಾಗಪ್ಪ ಬಿಚಗತ್ತಿ ಸಾ|| ಸುರಪುರ, ಭೀಮಣ್ಣ ತಂದೆ ಯಂಕಪ್ಪ ಓಕಳಿ ಸಾ|| ಪಾಳದಕೇರಿ ಸುರಪುರ, ಸೋಪಿಸಾಬ್ ತಂದೆ ಶರಮುದ್ದೀನ್ ಪಠಾಣ ಸಾ|| ಭೋವಿಗಲ್ಲಿ ಸುರಪುರ ಮತ್ತು ಗೌಡಪ್ಪ ತಂದೆ ಭೀಮಣ್ಣ ಬಿಚಗತಕೇರಿ ಸಾ|| ಹಳೆ ಬಸ್ ನಿಲ್ದಾಣ ಸುರಪುರ ಎಲ್ಲರು ಕೂಡಿ ಹೊಡೆಯುವದನ್ನು ನೋಡಿ ಬಿಡಿಸಿಕೊಂಡೆವು. ಆಗ ಅವರು ಹೊಡೆಯುವದನ್ನು ಬಿಟ್ಟು ಇವತ್ತು ಉಳದಿರಿ ಸೂಳೇ ಮಕ್ಕಳೆ ಇನ್ನೊಮ್ಮೊ ನಮ್ಮ ತಂಟೆಗೆ ಬಂದರೆ ಜೀವ ತೆಗೆಯದೇ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಂತರ ಘಟನೆಯಲ್ಲಿ ಗಾಯಗೊಂಡ ಎಲ್ಲರಿಗೂ ಖಾಸಗಿ ವಾಹನಗಳಲ್ಲಿ ಉಪಚಾರ ಕುರಿತು ಸುರಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಉಪಚಾರ ಪಡಿಸಿದ್ದು, ನಾಗರಾಜ ಈತನಿಗೆ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿ ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 12 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 101/2022 ಕಲಂ: 341, 323, 324, 326, 504, 506 ಸಂ 34 ಐಪಿಸಿ: ಇಂದು ದಿನಾಂಕ 10.06.2022 ರಂದು 8.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಮಲ್ಲಮ್ಮ ಗಂಡ ಶರಣಪ್ಪ ನಗನೂರ ವ|| 50ವರ್ಷ ಜಾ|| ಹಿಂದೂ ಮಾದರ ಉ|| ಕೂಲಿಕೆಲಸ ಸಾ|| ಪರಸನಳ್ಳಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಏನಂದರೆ ಈ ಮೊದಲು ನಮಗೆ ಒಂದು ಗಂಗಾಕಲ್ಯಾಣ ಯೋಜನೆಯಲ್ಲಿ ಒಂದು ಬಾವಿ ಆಗಿದ್ದು ಅವರು ನೀರು ಕೊಡದೇ ಇರುವದರಿಂದ ಅಷ್ಟಕ್ಕೆ ಬಿಟ್ಟು ಈ ಸಲ ಸಹ ಒಂದು ಗಂಗಾಕಲ್ಯಾಣ ಯೋಜನೆಯಲ್ಲಿ ಒಂದು ಬಾವಿ ನನ್ನ ಗಂಡನಾದ ಶರಣಪ್ಪ ತಂದೆ ಮುತ್ತಪ್ಪ ನಗನೂರ ವ|| 58 ಈತನ ಹೆಸರಿನಲ್ಲಿ ಆಗಿದ್ದು ಭಾವಿ ತೋಡಲು ಜಾಗವಿಲ್ಲದ ಕಾರಣ ನಮ್ಮೂರ ಗದ್ದೆಪ್ಪ ಪೂಜಾರಿ ಇವರು ತಮ್ಮ ಹೊಲದಲ್ಲಿ ಬಾವಿ ಮಾಡಿಕೊಂಡು ನೀರು ನಿಮ್ಮ ಹೊಲಕ್ಕೆ ತೆಗೆದುಕೊಳ್ಳಿರಿ ಅಂತ ಹೇಳಿದ್ದಕ್ಕೆ ನನ್ನ ಗಂಡನು ನಮ್ಮೂರ ಕುರುಬ ಜನಾಂಗದ ಗದ್ದೆಪ್ಪ ತಂದೆ ಸಾಯಬಣ್ಣ ನಾಯ್ಕೋಡಿ ಇವರ ಹೊಲದಲ್ಲಿ ಒಂದು ಬಾವಿ ತೋಡುತ್ತಿದ್ದೆವು ನಾವು ಬಾವಿ ತೋಡುವದನ್ನು ಸಹಿಸದ ನಮ್ಮೂರ ನಮ್ಮ ಜನಾಂಗದ ಕೆಲವು ಜನರು ನನ್ನ ಗಂಡನ ಮೇಲೆ ಹಗೆತನ ಸಾದಿಸುತ್ತಿದ್ದರು. ಹೀಗಿದ್ದು ನಿನ್ನೆ ದಿನಾಂಕ 09.06.2022 ರಂದು ನನ್ನ ಗಂಡನು ಕೆಂಭಾವಿಯಲ್ಲಿ ಕೆಲಸವಿದೆ ಅಂತ ಕೆಂಭಾವಿಗೆ ಹೋದಾಗ ರಾತ್ರಿ 10.30 ಗಂಟೆಯ ಸುಮಾರಿಗೆ ನನ್ನ ಗಂಡನು ನನಗೆ ಪೋನ ಮಾಡಿ ತಾನು ಕೆಂಭಾವಿ ಪಟ್ಟಣದ ಹಳೆಯ ಬಸ್ ನಿಲ್ದಾಣದ ಹತ್ತಿರ ಇರುವ ಗುಂಬಜ್ ಪಕ್ಕದಲ್ಲಿ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ನಮ್ಮೂರ ನಮ್ಮ ಜನಾಂಗದ 1] ಸಿದ್ದಪ್ಪ ತಂದೆ ಹಳ್ಳೆಪ್ಪ ಕರಕಳ್ಳಿ 2] ಭೀಮಪ್ಪ ತಂದೆ ಹಳ್ಳೆಪ್ಪ ಡಂಬಳ 3] ಪರಸಪ್ಪ ತಂದೆ ಜೆಟ್ಟೆಪ್ಪ ಹೊಸಮನಿ 4] ದೇವಪ್ಪ ತಂದೆ ಹಳ್ಳೆಪ್ಪ ಪಂಚಮ ಈ ನಾಲ್ಕು ಜನರು ನನ್ನ ಗಂಡನಿಗೆ ತಡೆದು ನಿಲ್ಲಿಸಿ ಸೂಳೇ ಮಗನೇ ನೀನು ಬಾವಿ ತೋಡಿಸುವದರಿಂದ ನಮ್ಮ ಹೊಲಕ್ಕೆ ಬಸಿ ನೀರು ಬರುತ್ತದೆ ಬಾವಿ ತೋಡಿಸಬೇಡ ಅಂತ ಹೇಳಿದರೂ, ನಮ್ಮ ಮಾತು ಕೇಳದೇ ಬಾವಿ ತೋಡುಸುತ್ತೀಯಾ ಸೂಳೇ ಮಗನೇ ಅಂತ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಯುತ್ತಾ, ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅವರಲ್ಲಿಯ ಪರಸಪ್ಪ ಹೊಸಮನಿ ಈತನು ಅಲ್ಲಿಯೇ ಬಿದ್ದ ಕಲ್ಲಿನಿಂದ ಹಣೆಗೆ ಹಾಗು ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಮತ್ತು ಭೀಮಪ್ಪ ಡಂಬಳ ಈತನು ಅಲ್ಲಿಯೇ ಬಿದ್ದ ಬಡಿಗೆಯನ್ನು ತೆಗೆದುಕೊಂಡು ಬೆನ್ನಿಗೆ ಹೊಟ್ಟೆಗೆ ಹಾಗು ಎಡಗೈ ಮಣಿಕಟ್ಟಿನ ಹತ್ತಿರ ಹೊಡೆದು ಭಾರೀ ಒಳಪೆಟ್ಟು ಮಾಡಿದ್ದು ಎಡಗೈ ಮಣಿಕಟ್ಟಿನ ಹತ್ತಿರ ಕೈ ಮುರಿದಂತಾಗಿರುತ್ತದೆ, ಅಲ್ಲದೇ ಅವರಲ್ಲಿ ಸಿದ್ದಪ್ಪ ಹಾಗು ದೇವಪ್ಪ ಇವರು ಈ ಸೂಳೇ ಮಗನಿಗೆ ಬಿಡಬ್ಯಾಡಿರಿ ಖಲಾಸ ಮಾಡಿರಿ ಅಂತ ಕಾಲಿನಿಂದ ಮನಸ್ಸಿಗೆ ಬಂದ ಹಾಗೆ ಒದ್ದಿರುತ್ತಾರೆ. ನಂತರ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಖಾನಾವಳಿಯಲ್ಲಿದ್ದ ಮಗ ಹಳ್ಳೆಪ್ಪ, ಹಾಗು ಆತನ ಜೊತೆಯಲ್ಲಿದ್ದ ದೇವಪ್ಪ ಪೂಜಾರಿ ಮತ್ತು ಮಾಳಪ್ಪ ರೋಜಾ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡಿರುತ್ತಾರೆ. ಅಲ್ಲದೇ ಸದರಿಯವರು ಮಗನೇ ಹೊಲದಲ್ಲಿ ಬಾವು ತೋಡಿದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿರುತ್ತಾರೆ ಕಾರಣ ಉಪಚಾರ ಕುರಿತು ನಾನು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ಸೇರಿಕೆಯಾಗಿರುತ್ತೇನೆ ಅಂತ ತಿಳಿಸಿದಾಗ ಕೂಡಲೇ ನಾನು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ನೋಡಿ ವಿಚಾರಿಸಿ ನನ್ನ ಗಂಡನಿಗೆ ಎಡಗೈ ಮಣಿಕಟ್ಟಿನ ಹತ್ತಿರ ಕೈ ಮುರಿದಂತಾಗಿ ಬಹಾಳ ತ್ರಾಸ ಆಗುತ್ತಿದ್ದರಿಂದ ಅವರನ್ನು ನಾನು ಹಾಗು ನನ್ನ ಮಗ ಇಬ್ಬರೂ ಕೂಡಿಕೊಂಡು ಹೆಚ್ಚಿನ ಉಪಚಾರ ಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ 5 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 101/2022 ಕಲಂ 341,323,324,326,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 11-06-2022 10:17 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080