Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11-07-2021

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ : 90/2021 ಕಲಂ: 341, 504, 323, 506 ಸಂ 34 ಐಪಿಸಿ : ದಿನಾಂಕ:10/07/2021 ರಂದು 1-45 ಪಿಎಮ್ ಕ್ಕೆ ಶ್ರೀಮತಿ ನಾಗಮ್ಮ ಗಂಡ ಪರ್ವತರೆಡ್ಡಿ ಯಲ್ಹೇರಿ, ವ:65, ಜಾ:ಲಿಂಗಾಯತ, ಉ:ಹೊಲಮನೆ ಕೆಲಸ ಸಾ:ಗೋಡಿಹಾಳ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನಮ್ಮ ಮತ್ತು ನಮ್ಮ ಬಾಜು ಮನೆಯವರ ಮಧ್ಯ ಸುಮಾರು 3 ಫಿಟ್ ಅಗಲದ ಹಳೆ ಗೋಡೆಯಿತ್ತು. ಆ ಹಳೆ ಗೋಡೆಯನ್ನು ಅವರು ತೆರವುಗೊಳಿಸಿ, ಅವರ ಕಡೆ ಹೊಸ ಗೋಡೆ ಕಟ್ಟಿಕೊಂಡಿರುತ್ತಾರೆ. ನಾವು ಕೂಡಾ ನಮ್ಮ ಕಡೆ ಎರಡು ಪಿಲ್ಲರ ಕಂಬಗಳನ್ನು ಹಾಕಿ ಕಟ್ಟಿಕೊಳ್ಳುತ್ತೇವೆ ಎಂದು ಪಿಲ್ಲರ ಹಾಕಲು ಹೋಗಿದ್ದಕ್ಕೆ ಅವರು ನಾವು ನಿಮಗೆ ಪಿಲ್ಲರ ಕಂಬ ಹಾಕಲು ಬಿಡುವುದಿಲ್ಲ ಎಂದು ತಕರಾರು ಮಾಡಿ ಕೆಲಸವನ್ನು ನಿಲ್ಲಿಸಿರುತ್ತಾರೆ. ಆಗ ನಾವು ಹಿರಿಯರ ಸಮಕ್ಷಮ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೊಣ ಎಂದು ಸುಮ್ಮನಾಗಿದ್ದೆವು. ಹೀಗಿದ್ದು ದಿನಾಂಕ:07/07/2021 ರಂದು ನನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಕೆಲಸದ ಪ್ರಯುಕ್ತ ಬೇರೆ ಊರಿಗೆ ಹೋಗಿದ್ದರು. ಮನೆಯಲ್ಲಿ ನಾನೊಬ್ಬಳೆ ಇದ್ದೆ. ಅಂದು ಬೆಳಗ್ಗೆ 8-30 ಗಂಟೆ ಸುಮಾರಿಗೆ ನಾನು ನಮ್ಮ ಮನೆ ಮುಂದಿನ ಕಸ ಬೊಳೆದು ಕಸವನ್ನು ತಿಪ್ಪಿಗೆ ಹಾಕಿ ಮರಳಿ ನಮ್ಮ ಮನೆಗೆ ಬರುತ್ತಿದ್ದಾಗ ನಮ್ಮ ಮನೆ ಅಂಗಳದಲ್ಲಿ 1) ದೇವರೆಡ್ಡಿ ತಂದೆ ಮಲ್ಲಣ್ಣ ಮಾಲಿಪಾಟಿಲ್, 2) ಸಂತೋಷ ತಂದೆ ಮಲ್ಲಣ್ಣ ಮಾಲಿಪಾಟಿಲ್, 3) ಮಹೇಶ್ವರಿ ತಂದೆ ಮಲ್ಲಣ್ಣ ಮಾಲಿಪಾಟಿಲ್ ಮತ್ತು 4) ಮಲ್ಲಮ್ಮ ಗಂಡ ಮಲ್ಲಣ್ಣ ಮಾಲಿಪಾಟಿಲ್ ಎಲ್ಲರೂ ಸಾ:ಗೋಡಿಹಾಳ ಇವರೆಲ್ಲರೂ ಸೇರಿಕೊಂಡು ಏಕೊದ್ದೇಶದಿಂದ ಬಂದವರೆ ದೇವರೆಡ್ಡಿ ಮತ್ತು ಸಂತೋಷ ಇಬ್ಬರೂ ನನಗೆ ಈ ಮುದಿ ಸೂಳಿ ತನ್ನ ಮಕ್ಕಳು, ಮೊಮ್ಮಕ್ಕಳಿಗೆ ನಮ್ಮ ಜಾಗದಲ್ಲಿ ಪಿಲ್ಲರ ಕಂಬ ಹಾಕರಿ ಎಂದು ಹೇಳುತ್ತಿದ್ದಾಳೆ ಇವಳ ಸೊಕ್ಕು ಜಾಸ್ತಿಯಾಗಿದೆ ಎಂದು ಎಂದು ಅವಾಚ್ಯ ಬೈದು ತಡೆದು ನಿಲ್ಲಿಸಿದರು. ಆಗ ಮಹೇಶ್ವರಿ ಮತ್ತು ಮಲ್ಲಮ್ಮ ಇಬ್ಬರೂ ಬಂದು ನನಗೆ ಈ ಸೂಳಿಯದು ಸೊಕ್ಕು ಜಾಸ್ತಿಯಾಗಿದೆ ಇವಳಿಗೆ ಇವತ್ತು ಒಂದು ಗತಿ ಕಾಣಿಸೋಣ ಎಂದು ಕೈಯಿಂದ ಮುಷ್ಠಿ ಮಾಡಿ ಎದೆ, ಪಕ್ಕೆ ಮತ್ತು ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದರು. ಆಗ ಜಗಳವನ್ನು ಅಲ್ಲಿಯೇ ಇದ್ದ ಶರಣಪ್ಪ ತಂದೆ ಪರ್ವತರೆಡ್ಡಿ ದದ್ದಲ, ವಿಶ್ವನಾಥರೆಡ್ಡಿ ತಂದೆ ಶರಣಗೌಡ ರಾಮನಾಳ ಇಬ್ಬರೂ ಬಂದು ಜಗಳ ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿದಿ ಮುದಿ ಸೂಳಿ ಇನ್ನೊಂದು ಸಲ ಸಿಕ್ಕರೆ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವಭಯ ಹಾಕಿ ಹೊದರು. ನನ್ನ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ವಿಚಾರ ಮಾಡಿ, ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಗೋಡೆ ಕಟ್ಟುವ ವಿಷಯದಲ್ಲಿ ಜಗಳ ತೆಗೆದು ನನಗೆ ಅವಾಚ್ಯ ಬೈದು ತಡೆದು ನಿಲ್ಲಿಸಿ, ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನನಗೆ ಕೇವಲ ಕೈಯಿಂದ ಹೊಡೆದಿದ್ದು, ಅಂತಹ ಪೆಟ್ಟುಗಳಾಗದ ಕಾರಣ ನಾನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಕೊಟ್ಟ ಅಜರ್ಿ ನಿಜವಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 90/2021 ಕಲಂ:504, 341, 323, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 154/2021 ಕಲಂ 78 (3) ಕೆಪಿ ಆಕ್ಟ್ : ಇಂದು ದಿನಾಂಕ: 10-07-2021 ರಂದು 4:30 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಚೆನ್ನಯ್ಯ ಎಸ್. ಹಿರೇಮಠ ಪಿ.ಐ ಶಹಾಪುರ ರವರು ಒಂದು ಜಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಹಾಜರು ಪಡಿಸಿದ್ದು ಅದರ ಸಾರಾಂಶವೇನಂದರೆ, ಇಂದು ದಿನಾಂಕ: 10-07-2021 ರಂದು 3:30 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ರಸ್ತಾಪುರ ಗ್ರಾಮದ ಯಾರೋ ಒಬ್ಬ ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಖಚಿತ ಬಂದಿದ್ದು ಸದರಿ ಅಪರಾಧವು ಅಸಂಜ್ಞೇಯವಾಗಿದ್ದರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 39/2021 ನೇದ್ದನ್ನು ದಾಖಲಿಸಿದ್ದು ಇದೆ ಮತ್ತು ಕಲಂ 78(3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ದಾಳಿಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಕೊಡೆದುಕೊಂಡು ಪರವಾನಿಗೆ ಪತ್ರ ಈ ಕೂಡಾ ಲಗತ್ತಿಸಿದ್ದು ಇದೆ ಆದ್ದರಿಂದ ಸದರಿ ಮಟಕಾ ಜೂಜಾಟ ನಡೆಸುವ ವ್ಯಕ್ತಿಯ ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತರ ಮೇಲೆ ಕಲಂ. 78 (3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 154/2021 ಕಲಂ 78 (3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.. ನಂತರ ದಾಳಿಗೆ ಹೋಗಿ ದಾಳಿಮಾಡಿ ಒಬ್ಬಬ್ಬಾರೋಪಿ 3250/- ನಗದು ಹಣ, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಅ.ಕಿ.00 ಗಳನ್ನು ವಶಪಡಿಸಿಕೊಂಡು ಬಂದು ಜಪ್ತಿ ಪಂಚನಾಮೆಯೊಂದಿಗೆ ವರದಿ ನೀಡಿದ್ದು ಇದೆ.

 

ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ. 46/2021 ಕಲಂ: ಮಹಿಳೆ ಕಾಣೆಯಾದ ಬಗ್ಗೆ : ದಿನಾಂಕ: 10/07/2021 ರಂದು 5:00 ಪಿ.ಎಂ ಕ್ಕೆ ಪ್ರಕರಣದ ಬಸಣ್ಣ ತಂದೆ ಗದ್ದೆಪ್ಪ ಪೊಲೀಸ್ ಪಾಟೀಲ್ ವ:55 ವರ್ಷ ಉ:ಒಕ್ಕಲುತನ ಜಾ:ಹಿಂದು ವಾಲ್ಮಿಕಿ ಸಾ:ಯರಕಿಹಾಳ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ತಂದು ಹಾಜರು ಪಡಿಸಿದ್ದು ಪಿಯರ್ಾದಿ ಅಜರ್ಿಯ ಸಂಕ್ಷಿಪ್ತ ಸಾರಾಂಶವೆನೆಂದರೆ ಪಿಯರ್ಾದಿದಾರರ ಮಗಳು ಯಲ್ಲಮ್ಮ ವ:20 ವರ್ಷ ಈತಳು ದಿನಾಂಕ 07/07/2021 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ತನ್ನ ತವರು ಮನೆ ಯರಕಿಹಾಳ ಗ್ರಾಮದ ತನ್ನ ತವರು ಮನೆಯಲ್ಲಿ ತನ್ನ ಗಂಡನೊಂದಿಗೆ ಮಲಗಿಕೊಂಡಾಗ ದಿನಾಂಕ: 07/07/2021 ರಂದು ರಾತ್ರಿ 9:00 ಪಿ.ಎಂ ದಿಂದ ದಿನಾಂಕ 08/07/2021 ರಂದು ಮುಂಜಾನೆ 5:30 ಎ.ಎಂ ದ ಮದ್ಯದ ಅವಧಿಯಲ್ಲಿ ಎಲ್ಲಿಗೋ ಹೋಗಿ ಇಲ್ಲಿಯವರಗೆ ಮರಳಿ ಬರದೆ ಕಾಣೆಯಾಗಿರುತ್ತಾ ಅಂತಾ ಪಿಯರ್ಾದಿಯ ಸಂಕ್ಷಿಪ್ತ ಸಾರಾಂಶವಿರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ-155/2021 ಕಲಂ 323, 498(ಎ), 354, 504, 506 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ.ಯಾಕ್ಟ : ಇಂದು ದಿನಾಂಕ: 10/07/2021 ರಂದು 6.00 ಪಿ.ಎಂ.ಕ್ಕೆ ಪ್ರಕರಣದ ಫಿಯರ್ಾದಿ ಶ್ರೀಮತಿ ಶ್ರೀದೇವಿ ಗಂ/ ಶಾಂತಪ್ಪ ಮಂಗಂಡಿ, ಸಾ|| ಶಿರವಾಳ, ತಾ|| ಶಹಾಪೂರ, ಜಿ|| ಯಾದಗಿರಿ, ಹಾ.ವ|| ವಿಭೂತಿಹಳ್ಳಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದರ ಸಾರಾಂಶವೇನೆಂದರೆ, 2015 ನೇ ಎಪ್ರಿಲ್ ತಿಂಗಳಲ್ಲಿ ಫಿಯರ್ಾದಿಯ ಸೋದರತ್ತೆ ತಾಯಮ್ಮ ಗಂ/ ದೇವಪ್ಪ ಮಂಗಂಡಿ ಸಾ|| ಶಿರವಾಳ ಇವರ ಮಗನಾದ ಶಾಂತಪ್ಪ ತಂ/ ದೇವಪ್ಪ ಮಂಗಂಡಿ ಇವರೊಂದಿಗೆ ಶಿರವಾಳ ಗ್ರಾಮದ ವರನ ಮನೆಯ ಮುಂದೆ ತನ್ನ ಮದುವೆ ಜರುಗಿರುತ್ತದೆ. ಮದುವೆ ಸಮಯದಲ್ಲಿ ತನ್ನ ತಾಯಿ ಯಲ್ಲಮ್ಮ ಗಂ/ ಶರಬಣ್ಣ ತೆಪ್ಪೆದಾರ, ಸೋದರ ಮಾವ ಸಾಹೇಬಗೌಡ ತಂ/ ಮಲ್ಲಪ್ಪ ಪೂಜಾರಿ, ಅಣ್ಣ ಪರಮಾನಂದ ತಂ/ ಶರಬಣ್ಣ ತೆಪ್ಪೆದಾರ, ತಂಗಿ ಕವಿತಾ ಗಂ/ ಮಾಳಪ್ಪ ಮಂಗಂಡಿ, ತಮ್ಮ ಜನಾಂಗದ ಸಾಬಪ್ಪ ತಂ/ ನಿಂಗಪ್ಪ ಕುರಿ ಹಾಗೂ ಇತರರು ಮತ್ತು ಮದುಮಗನ ಸಂಬಂಧಿಕರು ಮದುವೆಯಲ್ಲಿ ಹಾಜರ ಇದ್ದರು. ಮದುವೆ ಕಾಲಕ್ಕೆ ವರನಿಗೆ 2 ತೊಲೆ ಬಂಗಾರ ಮತ್ತು 50,000=00 ರೂ. ಹಣ ಹಾಗೂ ಗೃಹಬಳಕೆಯ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾದ ಒಂದು ವರ್ಷದ ವರೆಗೆ ತಾನು ಮತ್ತು ತನ್ನ ಗಂಡ ಇಬ್ಬರೂ ಅನ್ಯೋನ್ಯವಾಗಿದ್ದು, ತನಗೆ ಸಂತಾನಭಾಗ್ಯವಾಗಿರುವುದಿಲ್ಲ. ನಂತರದ ದಿನದಲ್ಲಿ ತನಗೆ ಮಕ್ಕಳಾಗದ ಕಾರಣವನ್ನು ಮುಂದೆ ಮಾಡಿಕೊಂಡು ತನ್ನ ಗಂಡ ಮತ್ತು ಅತ್ತೆ, ಮಾವ, ಭಾವಂದಿರು, ಮೈದುನ ರವರೆಲ್ಲರೂ ಸೇರಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಇಂದು ಸರಿ ಹೋಗಬಹುದು, ನಾಳೆ ಸರಿ ಹೋಗಬಹುದು ಅಂತಾ ತಾನು ಸಹಿಸಿಕೊಂಡು ಇದ್ದರೂ ಎಲ್ಲರೂ ದಿನಾಲೂ ತನಗೆ ಕಿರಕುಳ ನೀಡುವುದನ್ನು ಮುಂದುವರೆಸಿದ್ದರು. ಈ ಬಗ್ಗೆ ತಾನು ತನ್ನ ತವರು ಮನೆಗೆ ಬಂದಿದ್ದಾಗ ವಿಷಯವನ್ನು ತನ್ನ ತಾಯಿ, ಅಣ್ಣನವರಿಗೆ ಹೇಳಿದಾಗ ಅವರೂ ಕೂಡಾ ಇಂದಲ್ಲಾ ನಾಳೆ ಎಲ್ಲಾ ಸರಿಹೋಗುತ್ತದೆ ಅಂತಾ ಹೇಳಿ ಸಮಾಧಾನ ಮಾಡಿ ತನಗೆ ಗಂಡನ ಮನೆಗೆ ಕಳುಹಿಸಿದ್ದು, ಹಲವು ಬಾರಿ ಗ್ರಾಮದ ಹಿರಿಯರು ಆರೋಪಿತರಿಗೆ ಬುದ್ದಿ ಹೇಳಿದರೂ ಫಿಯರ್ಾದಿಗೆ ಕಿರುವುಕುಳ ನೀಡುವುದು ಮುಂದುವರೆಸಿ ಈ ವರ್ಷದ ಜೂನ್ ತಿಂಗಳ 15 ನೇ ತಾರೀಕಿನಂದು ತನಗೆ ಹೊಡೆಬಡೆ ಮಾಡಿ ತವರು ಮನೆಗೆ ಕಳುಹಿಸಿದ್ದು, ನಂತರ ದಿನಾಂಕ: 10/07/2021 ರಂದು 10.30 ಎ.ಎಂ. ಸುಮಾರಿಗೆ ಫಿಯರ್ಾದಿ ಮತ್ತು ಫಿಯರ್ಾದಿ ತಾಯಿ ಯಲ್ಲಮ್ಮ ಇಬ್ಬರೂ ಮನೆಯಲ್ಲಿ ಇದ್ದಾಗ ಫಿಯರ್ಾದಿಯ ಗಂಡ ಶಾಂತಪ್ಪ ಮತ್ತು ಮೈದುನ ಸೋಮಪ್ಪ ಮಂಗಂಡಿ ವಿಭೂತಿಹಳ್ಳಿಗೆ ಹೋಗಿ ಫಿಯರ್ಾದಿಗೆ ಮತ್ತು ಫಿಯರ್ಾದಿ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಓಡಿ ಹೋಗಿದ್ದು, ಫಿಯರ್ಾದಿ ಮತ್ತು ಫಿಯರ್ಾದಿಯ ತಾಯಿ ಇಬ್ಬರು ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದಕೊಂಡು ಠಾಣೆಗೆ ಹಾಜರಾಗಿ ತನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳಕೊಟ್ಟು ಹೊಡೆಬಡಿ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ವರದಕ್ಷಿಣೆ ಕಿರುಕುಳ ನೀಡಿದ ತನ್ನ ಗಂಡ ಶಾಂತಪ್ಪ ಮಂಗಂಡಿ ಮತ್ತು ಅವರ ಕುಟುಂಬದವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-155/2021 ಕಲಂ 323, 498(ಎ), 354, 504, 506 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ.ಯಾಕ್ಟ ನೇದ್ದರಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ, 94/2021 ಕಲಂ: 87 ಕೆಪಿ ಆಕ್ಟ : ಇಂದು ದಿನಾಂಕ: 10.07.2021 ರಂದು ತಿಪನಟಗಿ ಗ್ರಾಮದ ಹನುಮಾನ ದೇವರ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0228 ನೇದ್ದರಲ್ಲಿ ಸದರ ಸ್ಥಳಕ್ಕೆ ಹೋಗಿ ಹನುಮಾನ ದೇವರ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 17.00 ಪಿಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 1) ಹಣಮಂತ್ರಾಯ ತಂದೆ ಸಣ್ಣ ಮಹಾದೇವಪ್ಪ ಹೊಟ್ಟಿ ವ:26 ಜಾ: ಕಬ್ಬಲಿಗ ಉ:ಚಾಲಕ ಸಾ: ತಿಪನಟಗಿ 2) ಬಸವರಾಜ ತಂದೆ ಮಲ್ಲಪ್ಪ ಹೊಟ್ಟಿ ವ:28 ಜಾ:ಕಬ್ಬಲಿಗ ಉ:ಒಕ್ಕಲುತನ ಸಾ:ತಿಪನಟಗಿ 02 ಜನ ಆರೋಪಿತರು ಸಿಕ್ಕಿದ್ದು ಮತ್ತು 03 ಜನ ಆರೋಪಿತರು ಓಡಿ ಹೋಗಿದ್ದು ಅವರ ಹೆಸರು ವಿಳಾಸ ತಿಳಿಯಲಾಗಿ 3)ಮರೆಪ್ಪ ತಂದೆ ದೇವಿಂದ್ರಪ್ಪ ಬೋಯಿ ವ:35 ಜಾ:ಬೇಡರು ಉ:ಚಾಲಕ ಸಾ:ತಿಪನಟಗಿ 4)ಬಸವರಾಜ ತಂದೆ ಮಾನಪ್ಪ ಬೋಯಿ ವ:30 ಜಾ:ಕಬ್ಬಲಿಗ ಉ:ಒಕ್ಕಲುತನ ಸಾ:ತಿಪನಟಗಿ 5)ದೇವಿಂದ್ರಪ್ಪ ತಂದೆ ಹಣಮಂತ್ರಾಯ ಅಕ್ಕಿ ವ:58 ಜಾ:ಕಬ್ಬಲಿಗ ಸಾ:ತಿಪನಟಗಿ ಒಟ್ಟು 05 ಜನ ಆರೋಪಿತರಿದ್ದು. ಮತ್ತು ಒಟ್ಟು 890/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು & 1 ಬರಕಾ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 17.00 ಪಿ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 18.00 ಗಂಟೆಗೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 94/2021 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 104/2021 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 10.07.2021 ರಂದು ರಾತ್ರಿ 08:30 ಗಂಟೆಗೆ ಅರಕೆರ (ಕೆ) ಗ್ರಾಮದ ಬಸ್ನಿಲ್ದಾಣದ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ. ಐ ರವರು ಠಾಣೆ ಎನ್.ಸಿ. ನಂಬರ 18/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಹೆಚ್.ಸಿ-214 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ರಾತ್ರಿ 10:15 ಗಂಟೆಗೆ ತಂದು ಪಿ.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ರಾತ್ರಿ 11:00 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವರ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 1470/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಇಂದು ದಿನಾಂಕ 11.07.2021 ರಂದು ಸಮಯ ರಾತ್ರಿ 12:25 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 104/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

Last Updated: 12-07-2021 03:02 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080