ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-08-2021

ಗುರಮಿಠಕಲ ಪೊಲೀಸ್ ಠಾಣೆ
ಗುನ್ನೆ ಸಂಖ್ಯೆ: 128/2021 ಕಲಂ 498(ಎ), 323, 506, 109 ಸಂಗಡ 149 ಐಪಿಸಿ ಮತ್ತು 3, 4 ಡಿಪಿ ಆಕ್ಟ್ -1961 : ಪ್ರಕರಣದ ಫಿಯರ್ಾದಿದಾರಳಿಗೆ ಅವಳ ಗಂಡ ಮತ್ತು ಅವರ ಮನೆಯವರು ತವರು ಮನೆಯಿಂದ ಹಣ, ಮೋಟಾರ್ ಸೈಕಲ್, ಬಂಗಾರದ ಆಭರಣಗಳು ವರದಕ್ಷಿಣೆ ತರುವಂತೆ ಕಿರುಕುಳ ನೀಡಿರುತ್ತಾರೆ. ಅಲ್ಲದೆ ದಿನಾಂಕ 15.05.2021 ರಂದು ಫಿಯರ್ಾದಿದಾರಳಿಗೆ ಗಂಡ ಹೊಡೆಬಡೆ ಮಾಡಿರುತ್ತಾನೆ. ತವರು ಮನೆಗೆ ಕರೆದುಕೊಂಡು ಹೋಗುವರೆಂದು ಇಲ್ಲಿಯವರೆಗೆ ತಡೆದರೂ ಸಹ ಗಂಡ ಕರೆದುಕೊಂಡು ಹೋಗಲಿಲ್ಲ ಮತ್ತು ಪ್ರಕರಣದ ಆಪಾದಿತರ ಸಂಖ್ಯೆ 5 ರಿಂದ 7 ರವರು ಕುಮ್ಮುಕ ನೀಡಿರುತ್ತಾರೆ ಅಂತಾ ವಗೈರೆ ದೂರು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 129/2021 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 10.08.2021 ರಂದು ಸಂಜೆ 05:00 ಗಂಟೆಗೆ ಗುರುಮಠಕಲ್ ಪಟ್ಟಣದ ನಾನಾಪೂರ ಏರಿಯಾದ ನಾಸರಜಂಗ ದಗರ್ಾದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ. ಐ ರವರು ಠಾಣೆ ಎನ್.ಸಿ. ನಂಬರ 22/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಹೆಚ್.ಸಿ-214 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ಸಂಜೆ 07:00 ಗಂಟೆಗೆ ತಂದು ಪಿ.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ಸಂಜೆ 07:30 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವರ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 2530/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಇಂದು ದಿನಾಂಕ 10.08.2021 ರಂದು ಸಮಯ ರಾತ್ರಿ 08:50 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 129/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

 

ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 41/2021 ಕಲಂ 279, 283, 337, 338 ಐಪಿಸಿ : ಇಂದು ದಿನಾಂಕ 10/08/2021 ರಂದು ಬೆಳಿಗ್ಗೆ ಸಮಯ 11-30 ಎ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೆಡಿಕಲ್ ಕಾಲೇಜು ಕ್ರಾಸ್ ಹತ್ತಿರ, ಈ ಕೇಸಿನ ಪಿಯರ್ಾದಿಯವರ ಗಂಡನಾದ ಗಾಯಾಳು ತಾಯಪ್ಪ ವಯ;26 ವರ್ಷ, ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಜೆ-6288 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ವಾಡಿ ಕಡೆಯಿಂದ ಯಾದಗಿರಿ ಕಡೆಗೆ ಬರುವಾಗ ಅದೇ ಸಮಯಕ್ಕೆ ರಸ್ತೆ ಮೇಲೆ ಕ್ರೂಜರ್ ಜೀಪ್ ನಂಬರ ಕೆಎ-28, ಎಮ್-5932 ನೇದ್ದನ್ನು ಚಾಲಕನು ತನ್ನ ವಾಹನಕ್ಕೆ ಯಾವುದೇ ಇಂಡಿಕೇಟರ್ಗಳನ್ನು ಹಾಕದೇ ಮತ್ತು ಸಿಗ್ನಲಗಳನ್ನು ಹಾಕದೇ ವಾಹನಗಳ ಸಂಚಾರಕ್ಕೆ ಮತ್ತು ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ಯಾದಗಿರಿ ಕಡೆಗೆ ಹೋಗುವ ರಸ್ತೆಗೆ ಮುಖ ಮಾಡಿ ರಸ್ತೆಯ ಮೇಲೆ ನಿಲ್ಲಿಸಿದ್ದು, ಅದೇ ಕ್ರೂಜರ್ ವಾಹನಕ್ಕೆ ಮೋಟಾರು ಸೈಕಲನ್ನು ಕ್ರೂಜರ್ ವಾಹನದ ಹಿಂಭಾಗಕ್ಕೆ ಹೋಗಿ ಜೋರಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿರುತ್ತಾನೆ. ಸದರಿ ಅಪಘಾತದಲ್ಲಿ ಪಿಯರ್ಾದಿ ಮಗ ದಿನಕರ್ ಈತನಿಗೆ ಹಣೆಗೆ ಗುಪ್ತಗಾಯವಾಗಿ ಉಬ್ಬಿಕೊಂಡು ಬಂದಿದ್ದು, ಮೂಗಿನಿಂದ ರಕ್ತ ಬಂದಿರುತ್ತದೆ. ಮೊಟಾರು ಸೈಕಲ್ ನಡೆಸುತ್ತಿದ್ದ ತಾಯಪ್ಪ ಈತನ ಕುತ್ತಿಗೆಗೆ ಹಾಗೂ ಎಡಗಾಲಿನ ಮೊಣಕಾಲಿಗೆ ರಕ್ತಗಾಯವಾಗಿರುತ್ತದೆ ಹಾಗೂ ಎದಗೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ ಮೊಟಾರು ಸೈಕಲ್ ಸವಾರ ಹಾಗೂ ಜೀಪ್ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 41/2021 ಕಲಂ 279, 283, 337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 


ಸೈದಾಪೂರ ಪೊಲೀಸ್ ಠಾಣೆ
124/2021 ಕಲಂ 32,34 ಕೆ,ಇ ಯಾಕ್ಟ್ ಮತ್ತು 284 ಐಪಿಸಿ : ದಿನಾಂಕ: 10-08-2021 ರಂದು ಮದ್ಯಾಹ್ನ 12-30 ಗಂಟೆಗೆ ಶ್ರೀ ವಿಜಯಕುಮಾರ ಪಿ..ಐ ರವರು ಠಾಣೆಗೆ ಹಾಜರಾಗಿ ಸೈದಾಪೂರ ಗ್ರಾಮದಲ್ಲಿ 12 ಲೀಟರ ಸೇಂಧಿ ಜಪ್ತಿ ಮಾಡಿಕೊಂಡು ಬಂದು ಜ್ಞಾಪನ ಪತ್ರದೊಂದಿಗೆ ಸೇಂಧಿ ಜಪ್ತಿಪಂಚನಾಮೆ ಮತ್ತು ಸೇಂಧಿಯನ್ನು ಹಾಗೂ ಆರೋಪಿತನನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 124/2021 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಶಹಾಪೂರ ಪೊಲೀಸ ಠಾಣೆ
ಗುನ್ನೆ 183/2021 ಕಲಂ379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ : ಇಂದು ದಿನಾಂಕ 10/08/2021 ರಂದು 5-00 ಎ.ಎಂ. ಸರಕಾರಿ ತಫರ್ೇ ಫಿಯರ್ಾದಿ ಶ್ರೀ ವೆಂಕಟೇಶ ಪೊಲೀಸ್ ಉಪ-ಅಧೀಕ್ಷಕರು, ಸುರಪೂರ ಉಪ ವಿಭಾಗ ರವರು, ಒಂದು ಮರಳು ತುಂಬಿದ ಟಿಪ್ಪರ ವಾಹನ ನಂ ಕೆಎ-32 ಡಿ-5599 ಮತ್ತು ಸದರಿ ಟಿಪ್ಪರನ ಒಬ್ಬ ಚಾಲಕನನ್ನು ಹಾಜರಪಡಿಸಿ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಫಿಯರ್ಾದಿಯವರು ನಿನ್ನೆ ದಿನಾಂಕ: 09/08/2021 ರಂದು ಸುರಪೂರ ಸಬ್ ಡಿವಿಜನ್ ಎನ್.ಆರ್.ಸಿ. ಮತ್ತು ಅಕ್ರಮ ಮರಳು ತಡೆಗಟ್ಟುವ ಕರ್ತವ್ಯ ಕುರಿತು ಸಂಗಡ ಶ್ರೀ ಉಮಾಕಾಂತ ಹೆಚ್.ಸಿ-192, ಶ್ರೀ ಮಂಜುನಾಥ ಪಿಸಿ-73 ಶ್ರೀ ಶಾಂತಪ್ಪ ಪಿ.ಸಿ.91 ಮತ್ತು ಸರಕಾರಿ ಜೀಪ್.ನಂ. ಕೆಎ-33 ಜಿ-0253 ನೇದ್ದರ ಚಾಲಕ ಚಂದಪ್ಪಗೌಡ ಎ.ಪಿ.ಸಿ-143 ರವರನ್ನು ಕರೆದುಕೊಂಡು ರಾತ್ರಿ 11.00 ಪಿ.ಎಂ.ಕ್ಕೆ ಸುರಪುರದಿಂದ ಹೊರಟು ಪೇಟ್ರೋಲಿಂಗ ಮಾಡುತ್ತ ದೇವದುರ್ಗ-ಶಹಾಪೂರ ಮುಖ್ಯ ರಸ್ತೆ ಮೇಲೆ ಎಂ. ಕೊಳ್ಳೂರ ಗ್ರಾಮದಲ್ಲಿನ ಮರ್ಕಲ್ ಕ್ರಾಸ್ ಹತ್ತಿರ ಇಂದು ದಿನಾಂಕ 10/08/2021 ರಂದು ಬೆಳಿಗೆ 2-00 ಗಂಟೆಗೆ ಇದ್ದಾಗ ದೇವದುರ್ಗ ಕಡೆಯಿಂದ ಮರಳು ಲೋಡ್ ಮಾಡಿದ ಒಂದು ಟಿಪ್ಪರ ಹೊರಟಿದ್ದನ್ನು ನೋಡಿ ಸದರಿ ಟಿಪ್ಪರನ್ನು ಕೈ ಮಾಡಿ ನಿಲ್ಲಿಸಿ ನೋಡಲಾಗಿ ಒಂದು ಬೀಳಿ ಮತ್ತು ಬೂದಿ ಬಣ್ಣದ ಅಶೋಕ ಲೈಲ್ಯಾಂಡ ಕಂಪನಿಯ ಟಿಪ್ಪರ ಇದ್ದು, ಸದರಿ ಟಿಪ್ಪರ ನಂಬರ ನೋಡಲಾಗಿ ಕೆಎ-32 ಡಿ-5599 ಅಂತಾ ಇದ್ದು, ಸದರಿ ಟಿಪ್ಪರನ ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಲಕ್ಷ್ಮೀ ನಾರಾಯಣ ತಂದೆ ಬಸನಗೌಡ ಮಾಲಿ ಪಾಟೀಲ್ ವ|| 35 ಜಾ|| ಬೇಡರ ಉ|| ಚಾಲಕ ಸಾ|| ರಾಯನಪಾಳ್ಯ ತಾ|| ಹುಣಸಿಗಿ ಜಿ|| ಯಾದಗಿರಿ ಅಂತಾ ಹೇಳಿದನು, ಸದರಿ ಟಿಪ್ಪರ ಚಾಲಕನಿಗೆ ಮರಳನ್ನು ಟಿಪ್ಪರನಲ್ಲಿ ಲೋಡ ಮಾಡಿ ಸಾಗಿಸುತ್ತಿರುವ ಬಗ್ಗೆ ಸರಕಾರದಿಂದ ಪಡೆದ ಅನುಮತಿ ಪತ್ರ ಹಾಜರಪಡಿಸಲು ಹೇಳಿದಾಗ ತನ್ನ ಹತ್ತಿರ ಯಾವುದೇ ಅನುಮತಿ ಪತ್ರ ಇರುವುದಿಲ್ಲ ನಮ್ಮ ಟಿಪ್ಪರ ಮಾಲೀಕರಾದ ಕಲ್ಯಾಣಿ ಸಾ|| ಕಲಬುರಗಿ ಇವರು ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಯಾವದೆ ಕಾಗದ ಪತ್ರ ಇಲ್ಲದೆ ಹಾಗೆಯೇ ಕಲಬುರಗಿಗೆ ತಗೆದುಕೊಂಡು ಹೋಗಿ ಮಾರಾಟ ಮಾಡಲು ತಿಳಿಸಿರುತ್ತಾನೆ ಅಂತಾ ಹೇಳಿದನು. ಸದರಿ ಟಿಪ್ಪರ ನಂ. ಕೆಎ-32 ಡಿ-5599 ನೇದ್ದರ ಅ.ಕಿ|| 10 ಲಕ್ಷ ರೂಪಾಯಿ, ಸದರಿ ಟಿಪ್ಪರನಲ್ಲಿ ಅಂದಾಜು 16 ಕ್ಯೂಬಿಕ್ ಮೀಟರ್ ನಷ್ಟು ಮರಳು ಇದ್ದು, ಅಂದಾಜು ಕಿಮ್ಮತ್ತು 12,000=00 ರೂಪಾಯಿ ಮೌಲ್ಯದ ಮರಳನ್ನು ಸರಕಾರ ಅನುಮತಿ ಪತ್ರ ಪಡೆಯದೆ, ಅಕ್ರಮವಾಗಿ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಟಿಪ್ಪರ ಚಾಲಕ ಮತ್ತು ಮಾಲಿಕ ಇವರು ಸೇರಿ ಸದರಿ ಟಿಪ್ಪರನಲ್ಲಿ ಮರಳು ಲೊಡ ಮಾಡಿಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದು ಖಚಿತವಾಗಿದ್ದರಿಂದ ಸದರಿ ಮರಳು ತುಂಬಿದ ಟಿಪ್ಪರ ಚಾಲಕನಿಗೆ ವಶಕ್ಕೆ ತೆಗೆದುಕೊಂಡು ಸದರಿ ಟಿಪ್ಪರ ಚಾಲಕನ ಸಹಾಯದಿಂದ ಟಿಪ್ಪರನ್ನು ಬೆಳಗ್ಗೆ 4-00 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಗೆ ಬಂದು, ಮರಳು ತುಂಬಿದ ಟಿಪ್ಪರನ್ನು ಮತ್ತು ಒಬ್ಬ ಆರೋಪಿತನನ್ನು ಹಾಜರ ಪಡಿಸಿ ಟಿಪ್ಪರ ಚಾಲಕ ಮತ್ತು ಮಾಲಿಕ ಇವರ ವಿರುದ್ದ ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಕ್ರಮ ಕೈಕೊಳ್ಳುವಂತೆ ಬೆಳಗ್ಗೆ 5-00 ಗಂಟೆಗೆ ಸರಕಾರದ ಪರವಾಗಿ ಫಿಯರ್ಾದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 183/2021 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.

 

ಗೋಗಿ ಪೊಲೀಸ ಠಾಣೆ
79/2021 ಕಲಂ, 420, 504, 506 ಸಂ: 34 ಐಪಿಸಿ: ಇಂದು ದಿನಾಂಕ: 10/08/2021 ರಂದು 07.30 ಪಿಎಂ ಕ್ಕೆ ಗೋಗಿ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುವ ನಾಗಪ್ಪ ಸಿಪಿಸಿ-167 ರವರು ಕೋರ್ಟ ಕರ್ತವ್ಯ ಮುಗಿಸಿಕೊಂಡು ಮರಳಿ ಠಾಣೆಗೆ ಬಂದು ಮಾನ್ಯ ನ್ಯಾಯಾಲಯದಿಂದ ವಸೂಲಾದ ಒಂದು ಖಾಸಗಿ ಪಿಯರ್ಾದಿ ಸಂ: 79/2021 ನೇದ್ದನ್ನು ತಂದು ಹಾಜರ ಪಡೆಸಿದ್ದು, ಸದರಿ ಖಾಸಗಿ ಪಿಯರ್ಾದಿ ಸಾರಂಶ ಏನಂದರೆ, ಆರೋಪಿ ನಂಬರ 1 ಅವರು 21/06/2017 ರಂದು ಗೋಗಿ ಕೆ ಗ್ರಾಮದ ಅಂಗನವಾಡಿ ಸಹಾಯಕಿ ಹುದ್ದೇಗೆ ಅಜರ್ಿ ಸಲ್ಲಿಸಿದ್ದಾಗ ನಕಲಿ ದಾಖಲೆಗಳನ್ನು ಸೃಷ್ಠಿಸಿ ನೇಮಕಾತಿಗಾಗಿ ಸುಳ್ಳು ಮಾಹಿತಿ ನೀಡಿ ಆಯ್ಕೆಯಾಗಿದ್ದು ಆರೋಪಿ ನಂಬರ 2 ಅವರು ಆರೋಪಿ ನಂಬರ 1 ಅವರ ಜೋತೆ ನಕಲಿ ದಾಖಲೆಗಳನ್ನು ನೀಡಲು ಸಹಕಾರ ಕೊಟ್ಟು ಅದರಂತೆ ದಿನಾಂಕ: 21/09/2020 ರಂದು ಆರೋಪಿ ನಂಬರ 01 ಅವರು ಗೋಗಿ (ಕೆ) ಗ್ರಾಮದ ಅಂಗನವಾಡಿ ಸಹಾಯಕಿ ಹುದ್ದೆಗೆ ನೇಮಕವಾಗಲು ಅಂತಿಮ ಆಯ್ಕೆ ಪಟ್ಟಿಗೆ ಸಹಕಾರ ನಿಡಿದ್ದಾರೆ ಮತ್ತು ದಿನಾಂಕ: 20/06/2021 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಫಿರ್ಯಾಧಿದಾರನ ಮನೆಯ ಮುಂದೆ ಸಾಕ್ಷಿದಾರರಾದ ಮಂಜುನಾಥ ತಂದೆ ವೀರೇಶ ಹಾಗು ರೇಣುಕಾ ಗಂಡ ಮರೆಪ್ಪ ಅವರ ಜೋತೆ ಮಾತನಾಡುತ್ತಾ ಕುಳಿತಿದ್ದಾಗ ಅಲ್ಲಿಗೆ ನಿಂಗಮ್ಮ ಹಾಗೂ ಶಿಶು ಅಭೀವೃಧ್ದಿ ಯೋಜನಾಧಿಕಾರಿ ಗುರುರಾಜ ಅವರು ಆಗಮಿಸಿ 'ಲೇ ಬೋಸಡಿ ಮಗನೆ ಎಷ್ಟು ಸೊಕ್ಕು ನಿನಗೆ ನಮ್ಮ ಮೇಲೆ ದೂರು ಕೊಡುತ್ತಿಯಾ ಮಗನೆ ಸಂಗ್ಯಾ ವಂಚನೆ ಮಾಡಿ ಅಂಗನವಾಡಿ ಸಹಾಯಕ ಹುದ್ದೇ ಪಡೆದರೆ ನಿನ್ನದು ಏನು ಕುಂಡಿ ಕಡಿತದ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆಯಲು ಇಬ್ಬರು ಪ್ರಯತ್ನಿಸಿದರು. ಆಗ ಸಾಕ್ಷಿದಾರರು ಇಬ್ಬರನ್ನು ಸಮಾದಾನಪಡಿಸಿ ಜಗಳ ಬಿಡಿಸಿದರು. ನೋಡು ಇವರು ಬಂದು ಜಗಳ ಬಿಡಿಸ್ಯಾರ ಅಂತ ನಿನ್ನ ಜೀವ ಉಳಿದಾದ ಇಲ್ಲಾ ಅಂದರೆ ಪೆಟ್ರೋಲ್ ಹಾಕಿ ಸುಟ್ಟು ಬಿಡ್ತಿವಿ ಎಂದು ಜೀವ ಬೆದರಿಕೆ ಹಾಕಿ ಹೋದರು ಅಂತಾ ಫಿಯಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 79/2021 ಕಲಂ: 420, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 11-08-2021 10:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080