ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-08-2022

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 140/2022 ಕಲಂ: 279, 337, 304(ಎ) ಐ.ಪಿ.ಸಿ ಸಂಗಡ ಕಲಂ 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ 10/08/2022 ರಂದು ಸಾಯಂಕಾಲ 5.15 ಪಿ.ಎಂ.ಕ್ಕೆ ಶ್ರೀ ಮರೆಪ್ಪ ತಂ/ ಅಂಬಣ್ಣ ಸಾಲಿಮನಿ, ಸಾ|| ಫಿಲ್ಟರ್ಬೆಡ್ ಶಹಾಪೂರ, ತಾ|| ಶಹಾಪೂರ ರವರು ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ ನಮ್ಮ ತಂದೆ-ತಾಯಿಗೆ ನಾವು 4 ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ನನ್ನ ಅಣ್ಣ ಮಲ್ಲಿಕಾಜರ್ುನ ತಂ/ ಅಂಬಣ್ಣ ಸಾಲಿಮನಿ, ವ|| 22 ವರ್ಷ, ಜಾ|| ಕಬ್ಬಲಿಗ, ಉ|| ಕೂಲಿಕೆಲಸ, ಸಾ|| ಫಿಲ್ಟರ್ ಬೆಡ್, ಶಹಾಪೂರ, ತಾ|| ಶಹಾಪೂರ, ಈತನು ಕೂಲಿಕೆಲಸ ಮಾಡಿಕೊಂಡಿರುತ್ತಾನೆ. ಹೀಗಿದ್ದು, ಇಂದು ದಿನಾಂಕ: 10/08/2022 ರಂದು ಬೆಳಿಗ್ಗೆ ರಾಮಗಿರಿ ಮಠದ ಹತ್ತಿರ ಕೂಲಿ ಕೆಲಸ ಇದೆ ಅಂತಾ ಹೇಳಿ ಹೋಗಿದ್ದನು. ಸಾಯಂಕಾಲ 3.45 ಪಿ.ಎಂ. ಸುಮಾರಿಗೆ ನಮ್ಮ ಓಣಿಯ ರಾಘವೇಂದ್ರ ತಂದೆ ಮುದೆಪ್ಪ ನಾಯ್ಕೋಡಿ, ಸಾ|| ಫಿಲ್ಟರ್ ಬೆಡ್ ಶಹಾಪೂರ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ಇಂದು ಬೆಳಿಗ್ಗೆ ನಾನು ಮತ್ತು ನಿನ್ನ ಅಣ್ಣ ಮಲ್ಲಿಕಾಜರ್ುನ ಇಬ್ಬರೂ ಕೂಡಿಕೊಂಡು ಶಹಾಪೂರ ನಗರದ ರಾಮಗಿರಿ ಮಠದ ಹತ್ತಿರದ ಗಟ್ಟಿನ ಲೇ-ಔಟ್ನಲ್ಲಿ ಕೂಲಿಕೆಲಸ ಮಾಡಲು ಹೋಗಿದ್ದಾಗ, ಮಧ್ಯಾಹ್ನ 3.30 ಪಿ.ಎಂ. ಸುಮಾರಿಗೆ ಒಂದು ಟ್ರಾಕ್ಟರ್ ಚಾಲಕನು ತನ್ನ ಟ್ರಾಕ್ಟರನಲ್ಲಿ ವಿಧ್ಯುತ್ ಕಂಬಗಳನ್ನು ಲೋಡ್ ಮಾಡಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಲೇ-ಔಟಿನ ರಸ್ತೆಯ ಪಕ್ಕದಲ್ಲಿ ನಿಂತಿದ್ದ ನಿನ್ನ ಅಣ್ಣನಿಗೆ ಮತ್ತು ನನಗೆ ಡಿಕ್ಕಿಪಡಿಸಿದ ಪರಿಣಾಮ ಅಪಘಾತದಲ್ಲಿ ನಿನ್ನ ಅಣ್ಣ ಮಲ್ಲಿಕಾಜರ್ುನನ ತಲೆಯ ಹಿಂದೆ ಭಾರೀ ರಕ್ತಗಾಯವಾಗಿ ಮಾಂಸಖಂಡ ಹೊರಗಡೆ ಬಂದಿರುತ್ತದೆ, ಮುಖ ಜಜ್ಜಿದಂತಾಗಿ ಎಡಹುಬ್ಬಿನ ಮೇಲೆ ಭಾರೀ ರಕ್ತಗಾಯವಾಗಿರುತ್ತದೆ, ಮೂಗು, ಬಾಯಿ ಮತ್ತು ಗದ್ದಕ್ಕೆ ಕಟ್ಟಾದ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ನನಗೆ ಎಡ ಸೊಂಟಕ್ಕೆ ಒಳಪೆಟ್ಟಾಗಿರುತ್ತದೆ. ಅಪಘಾತ ಪಡಿಸಿದ ಟ್ರಾಕ್ಟರ್ ಇಂಜಿನ್ ನಂ. ಕೆಎ-33 ಟಿಎ-5215 ಮತ್ತು ಟ್ರಾಲಿ ನಂ. ಕೆಎ-32 ಟಿ-7078 ಅಂತಾ ಇದ್ದು, ಇಲ್ಲಿಯೇ ಇದ್ದ ಟ್ರಾಕ್ಟರ್ ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಅಮರೇಶ ತಂ/ ತಿಪ್ಪಣ್ಣ ಸಾ|| ನಗನೂರ, ತಾ|| ಸುರಪುರ ಅಂತಾ ಹೇಳಿ ಟ್ರಾಕ್ಟರ್ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಹೇಳಿದ ಕೂಡಲೆ ನಾನು ಮತ್ತು ನನ್ನ ಹಿರಿಯ ಅಣ್ಣ ವೆಂಕಟೇಶ ಸಾಲಿಮನಿ, ನನ್ನ ತಂದೆ ಅಂಬಣ್ಣ ಸಾಲಿಮನಿ 3 ಜನರು ಕೂಡಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣ ಮಲ್ಲಿಕಾಜರ್ುನನಿಗೆ ಮೇಲ್ಕಾಣಿಸಿದಂತೆ ಬಾರೀ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಕಾರಣ ಅಪಘಾತಪಡಿಸಿ ತನ್ನ ಟ್ರಾಕ್ಟರ್ ಬಿಟ್ಟು ಓಡಿ ಹೋದ ಟ್ರಾಕ್ಟರ್ ಇಂಜಿನ್ ನಂ. ಕೆಎ-33 ಟಿಎ-5215 ಮತ್ತು ಟ್ರಾಲಿ ನಂ. ಕೆಎ-32 ಟಿ-7078 ನೇದ್ದರ ಚಾಲಕ ಅಮರೇಶ ತಂ/ ತಿಪ್ಪಣ್ಣ ಸಾ|| ನಗನೂರ, ತಾ|| ಸುರಪುರ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತ ಕೊಟ್ಟ ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 140/2022 ಕಲಂ 279, 337, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 57/2022 ಕಲಂ 143, 147, 148, 323, 324, 307, 504, 506 ಸಂ 149 ಐಪಿಸಿ : ಇಂದು ದಿನಾಂಕ 10/08/2022 ರಂದು 01.30 ಪಿಎಮ್ ಕ್ಕೆ ಅಜರ್ಿದಾರರಾದ ಶೀ ಜಟ್ಟೆಪ್ಪ ತಂದೆ ಭಾಗಪ್ಪ ದೊಡಮನಿ, ಸಾ:ಯಕ್ಕಿಗಡ್ಡಿ ಮಹಲ್ ರೋಜಾ ತಾ:ಶಹಾಪೂರ ಇವರು ಒಂದು ಅಜರ್ಿಯನ್ನು ಹಾಜರಪಡಿಸಿದ್ದು ಅದರ ಸಆರಾಂಶವೇನೆಂದರೆ, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಮ್ಮ ಊರಿನಲ್ಲಿ ಮೊಹರಂ ಹಬ್ಬದ ಪ್ರಯುಕ್ತ ರಾತ್ರಿ ದೇವರ ಮೆರವಣಿಗೆ ಹಾಗು ಅಲೈ ಕುಳಿತ ಇರುತ್ತದೆ. ನಾನು ಮತ್ತು ನನ್ನ ಕುಟುಂಬದವರೊಡನೆ ದೇವರು ನೋಡಲು ಹೋಗಿದ್ದೇವು. ಆದರೆ ನಮ್ಮ ಊರಿನವರಾದ ನಮ್ಮ ದೂರದ ಸಂಬಂಧಿಕರಾದ ಯಲ್ಲಪ್ಪ ತಂದೆ ಭೀಮಣ್ಣ ಜುಲರ್ೆ ಹಾಗು ನಮ್ಮ ಮದ್ಯ ಹಳೆಯ ದ್ವೇಷ ಎಂದರೆ ಕೌಟುಂಬಿಕ ಕಲಹ ನನ್ನ ಮಗಳನ್ನು ಯಲ್ಲಪ್ಪನ ತಮ್ಮನಿಗೆ ಊರಿನ ಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದೇವು. ಆದರೆ ಯಲ್ಲಪ್ಪನ ತಮ್ಮನಿಗೆ ಬೇರೆ ಹೆಣ್ಣಿನ ಜೊತೆ ಅನೈತಿಕ ಸಂಬಂಧ ಇರುವ ವಿಷಯ ನಮಗೆ ಗೊತ್ತಿರಲಿಲ್ಲ. ಆದರೆ ಮದುವೆಯಾದ ನಂತರ ನನ್ನ ಮಗಳಿಗೆ ತೊಂದರೆಕೊಡಲು ಸುರು ಮಾಡಿದಾಗ ಹಲವು ಬಾರಿ ನಾವು ತಿಳಿ ಹೇಳಿಕಳಿಸಿದ್ದೇವು. 02 ವರ್ಷದ ಹಿಂದೆ ಅವನು ಬೇರೆ ಮದುವೆಯಾದನು. ಆ ಮದುವೆಯ ಮುಂದಾಳತ್ವವನ್ನು ಯಲ್ಲಪ್ಪನೇ ವಹಿಸಿಕೊಂಡಿದ್ದ. ಆ ಸಮಯದಲ್ಲಿ ಯಲ್ಲಪ್ಪನ ಮತ್ತು ನಮ್ಮ ಕುಟುಂಬದ ಮದ್ಯ ಜಗಳವಾಗಿತ್ತು. ಅವರಿಗೂ ಮತ್ತು ನಮಗೂ ಮಾರಾಮಾರಿ ಜಗಳ ಸಮಯದಲ್ಲಿ ಸಣ್ಣಪುಟ್ಟಗಾಯಗಳಾಗಿದ್ದವು. ಊರಿನ ಪ್ರಮುಖರೆಲ್ಲರೂ ಸೇರಿ ನಮ್ಮಿಬ್ಬರ ಮದ್ಯ ಸಂಧಾನ ಮಾಡಿರುತ್ತಾರೆ. ಅದನ್ನು ಮರೆತು ನಾವು ನಮ್ಮ ಮಗಳಿಗೆ ಬೆರೆ ಕಡೆ ಕೊಟ್ಟು ಮದುವೆ ಮಾಡಿರುತ್ತೇವೆ. ಇದ್ಯಾವದನ್ನೂ ನಾವು ಮನಸ್ಸಿನಲ್ಲಿ ಇಟ್ಟುಕೊಂಡಿರಲಿಲ್ಲ. ಆದರೆ ಯಲ್ಲಪ್ಪನ ಕುಟುಂಬದವರು ಈ ದ್ವೇಷ ಮರೆತಿರಲಿಲ್ಲ. ಅಗಾಗ ನಮ್ಮಜೊತೆ ಸಣ್ಣಪುಟ್ಟ ಜಗಳವಾಡುತ್ತಿದ್ದರು. ಆದರೆ ಯಲ್ಲಪ್ಪನ ಕುಟುಂಬಸ್ಥರು ನಮ್ಮ ಕುಟುಂಬದವರನ್ನು ಮುಗಿಸಲು ಸಂಚು ರೂಪಿಸಿದ್ದರು. ಹೀಗಿದ್ದು ದಿನಾಂಕ 06/08/2022 ರಂದು ಸಮಯ ರಾತ್ರಿ 03 ಗಂಟೆ ಸುಮಾರಿಗೆ ನಾನು ಅಲೈ ಆಡಲು ಹೋದಾಗ ಯಲ್ಲಪ್ಪ ನನ್ನ ಕಾಲು ತುಳಿದು ಲೇ ಜಟ್ಟ್ಯಾ ಇವತ್ತು ನಿನ್ನ ಕಥೆ ಮುಗಿತು ಮಗನೆ , ನಿಮ್ಮೆಲ್ಲರನ್ನು ಮುಗಿಸಲು ನಾವು ಬಹಳ ದಿನದಿಂದ ಕಾಯುತ್ತಿದ್ದೇವು. ಆದರೆ ಆ ಸಮಯ ಇಂದು ಕೂಡಿ ಬಂದಿದೆ ಎಂದು ತನ್ನ ಕೈಯಲ್ಲಿದ್ದ ಚೂಪಾದ ರಾಡಿನಿಂದ ನನ್ನ ಹೊಟ್ಟೆಗೆ ಚುಚ್ಚಲು ಬಂದಾಗ ನಾನು ನನ್ನ ಪ್ರಾಣ ಉಳಿಸಿಕೊಳ್ಳಲು ಓಡಲು ಪ್ರಯತ್ನಿಸಿದಾಗ ನನ್ನ ಹಿಂಬದಿಯಿಂದ ನನ್ನ ಬಲಭಾಗದ ತಲೆಗೆ ಅದೇ ರಾಡಿನಿಂದ ಹೊಡೆದಿರುತ್ತಾನೆ. ಹೊಡೆದ ಏಟಿಗೆ ನಾನು ನೆಲಕ್ಕೆ ಬಿದ್ದಾಗ ಅಲ್ಲಿಯೇ ಇದ್ದ ನನ್ನ ಮಗ ಸಾಯಬಣ್ಣ ಈತನು ಅಪ್ಪಾ ಅಂತ ಓಡಿ ಬಂದ. ಅದೇ ಸಮಯಕ್ಕೆ ಯಲ್ಲಪ್ಪ ತನ್ನ ಎಲ್ಲಾ ಪರಿವಾರಕ್ಕೆ ಕೂಗಿ ಕುತೆ ಹೊಡೆದು ಲೇ ಇವತ್ತು ಜಟ್ಟ್ಯಾನ ಕುಟುಂಬದವರಿಗೆ ಯಾರಿಗೂ ಉಳಿಸಬ್ಯಾಡ್ರಿ ಅಂದು ಕೂಗಿದಾಗ ಯಲ್ಲಪ್ಪನ ಎಲ್ಲ ಪರಿವಾರದವರದ 1) ಭಾಗಪ್ಪ ತಂದೆ ಯಲ್ಲಪ್ಪ ಜುಲರ್ೆ, 2) ಶರಣಪ್ಪ ತಂದೆ ಯಲ್ಲಪ್ಪ ಜುಲರ್ೆ, 3) ಶಿವಲಿಂಗಪ್ಪ ತಂದೆ ಭೀಮಣ್ಣ ಜುಲರ್ೆ, 4) ಯಂಕಪ್ಪ ತಂದೆ ಶಿವಲಿಂಗಪ್ಪ ಜುಲರ್ೆ, 5)ಅನೀಲ ತಂದೆ ಶಿವಲಿಂಗಪ್ಪ ಜುಲರ್ೆ, 6) ಬಸವರಾಜ ತಂದೆ ಭೀಮಣ್ಣ ಜುಲರ್ೆ, 7) ತೋಟಪ್ಪ ತಂದೆ ಭೀಮಣ್ಣ ಜುಲರ್ೆ, 8) ಅಯ್ಯಮ್ಮ ಗಂಡ ಯಲ್ಲಪ್ಪ ಜುಲರ್ೆ 9) ಯಲ್ಲಮ್ಮ ಗಂಡ ಬಸವರಾಜ ಜುಲರ್ೆ ಎಲ್ಲರೂ ಜಮಾಯಿಸಿ ಕೆಳಗೆ ಬಿದ್ದಿದ್ದ ನನಗೆ ತುಳಿಯುತ್ತಿದ್ದಾಗ ನನ್ನನ್ನು ಎತ್ತಿಕೊಳ್ಳಲು ಬಂದ ನನ್ನ ಮಗ ಸಾಯಬಣ್ಣ ಈತನಿಗೆ ಯಲ್ಲಪ್ಪನ ಮಗ ಭಾಗಪ್ಪ ಈತನು ತನ್ನ ತಂದೆಯ ಕೈಯಲ್ಲಿನ ರಾಡು ತೆಗೆದುಕೊಂಡು ಜೋರಾಗಿ ನನ್ನ ಮಗನ ತಲೆಗೆ ಹೊಡೆದಾಗ ನನ್ನ ಮಗನಿಗೆ ತಲೆಗೆ ಭಾರಿ ಒಳಪೆಟ್ಟಾಗಿ ನೆಲಕ್ಕೆ ಬಿದ್ದ. ನನ್ನ ಮತ್ತೊಬ್ಬ ಮಗ ವಿಶ್ವರಾಧ್ಯನು ಜಗಳ ಬಿಡಿಸಲು ಬಂದಾಗ ಯಲ್ಲಪ್ಪನ ಮಗ ಶರಣಪ್ಪ ಈತನು ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲಿನಿಂದ ವಿಶ್ವರಾಧ್ಯನ ಹಣೆಗೆ ಹೊಡೆದ. ನಾವು ಮೂರು ಜನ ನೆಲಕ್ಕೆ ಬಿದ್ದಾಗ ಬಿಡಿಸಲು ಬಂದ ನನ್ನ ಹೆಂಡತಿಗೂ ಸಹ ಯಲ್ಲಪ್ಪನ ಕುಟುಂಬಸ್ಥರು ಒಟ್ಟು 10 ಜನ ಹೊಡೆದಿರುತ್ತಾರೆ. ಅದೇ ಸಮಯಕ್ಕೆ ಅಲ್ಲಿ ನೆರದಿದ್ದ ಸಾಯಬಣ್ಣ ತಂದೆ ಹೊನ್ನಪ್ಪ ಹಾಗು ಹೊನ್ನಪ್ಪ ತಂದೆ ಸಾಯಬಣ್ಣ ಇವರು ಜಗಳ ಬಿಡಿಸಿದರು. ಆಗ ಆರೋಪಿತರೆಲ್ಲರೂ ಮಕ್ಕಳ್ಯಾ ಇವತ್ತು ಉಳಿದಿರಿ ಇನ್ನೊಮ್ಮೆ ಸಿಕ್ಕರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿದರು. ಜಗಳ ಬಿಡಿಸಿದವರು ನಮಗೆ ಒಂದು ಖಾಸಗಿ ಅಟೋದಲ್ಲಿ ಹಾಕಿಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಸಿದರು. ಆದರೆ ನನ್ನ ಮಗ ಸಾಯಬಣ್ಣನಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಕೋಮಾದಲ್ಲಿ ಇರುತ್ತಾನೆ ಇದನ್ನು ಅರಿತ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ನಮಗೆ ಕಲಬುಗರ್ಿಯ ಯುನೈಟೆಡ್ ಆಸ್ಪತ್ರೆಗೆ ಕಳಿಸಿದರು. ನಾನು ಮತ್ತು ನನ್ನ ಇಬ್ಬರು ಮಕ್ಕಳು ಸೇರಿ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಕೆಯಾಗಿರುತ್ತೇವೆ. ಸಾಯಬಣ್ಣ ಈತನಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಆತನಿಗೆ ಆಪರೇಶನ್ ಮಾಡಿಸಬೇಕೆಂದು ಅಲ್ಲಿನ ವೈದ್ಯರು ತಿಳಿಸಿದ್ದರಿಂದ ನಾನು ಮತ್ತು ನನ್ನ ಮಗ ವಿಶ್ವರಾಧ್ಯ ಉಪಚಾರ ಪಡೆದುಕೊಂಡು ಸ್ವಲ್ಪ ಆರಾಮವಾಗಿದ್ದರಿಂದ ವಿಶ್ವರಾಧ್ಯನಿಗೆ ಸಾಯಬಣ್ಣ ಈತನ ಜೊತೆ ಅಲ್ಲಿಯೇ ಬಿಟ್ಟು ಆಪರೇಶನ್ ಕುರಿತು ಹಣ ಹೊಂದಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿಯನ್ನು ನೀಡಿರುತ್ತೇನೆ. ಕಾರಣ ಹಳೆ ವೈಶಮ್ಯದಿಂದ ನನಗೆ ಮತ್ತು ನನ್ನ ಮಕ್ಕಳಿಗೆ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಒದಗಿಸಲು ವಿನಂತಿ ಅಂತ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 57/2022 ಕಲಂ 143, 147, 148, 323, 324, 307, 504, 506 ಸಂ 149 ಐಪಿಸಿ ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 11-08-2022 10:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080