ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-09-2022
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 135/2022 ಕಲಂ. 279, 337, 304(ಎ) ಐಪಿಸಿ ಮತ್ತು 187 ಐ.ಎಮ್.ವಿ.ಆಕ್ಟ್ : ದಿನಾಂಕ:10-09-2022 ರಂದು ರಾತ್ರಿ 9:00 ಗಂಟೆಗೆ ಫಿರ್ಯಾಧಿದಾರ ಶ್ರೀ ಬಸವರಾಜ ತಂದೆ ಯಂಕಪ್ಪ ಎಲ್ಹೇರಿ, ವಯ:35 ವರ್ಷ, ಜಾತಿ:ಕಬ್ಬಲಿಗ, ಉ||ಒಕ್ಕಲುತನ, ಸಾ||ಲಿಂಗೇರಿ ತಾ||ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ಹಾಜರು ಪಡಿಸಿದ್ದು, ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುವುದೇನೆಂದರೆ, ಇಂದು ದಿನಾಂಕ:10/09/2022 ರಂದು ಬೆಳಗ್ಗೆ 10:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ನಿರ್ಮಲಾ, ನನ್ನ ಮಗನಾದ ನಾಗರಾಜ ರವರು ಕೂಡಿಕೊಂಡು ನನ್ನ ಮೋಟರ್ ಸೈಕಲ್ ನಂ: ಕೆಎ-33 ಕ್ಯೂ-5097 ರ ಮೇಲೆ ಲಿಂಗೇರಿ ಸ್ಟೇಶನ್ ಮುಂದುಗಡೆ ಇರುವ ನನ್ನ ಹತ್ತಿ ಹೊಲಕ್ಕೆ ಸದೆ ತೆಗೆಯಲು ಹೋಗಿದ್ದೆವು. ನಂತರ ಸಾಯಂಕಾಲ 6:00 ಗಂಟೆಗೆ ನಮ್ಮ ಹೊಲದಿಂದ ನಾನು ಮತ್ತು ನನ್ನ ಹೆಂಡತಿ, ನನ್ನ ಮಗ ಮೂರು ಜನರು ನನ್ನ ಮೋಟರ್ ಸೈಕಲ್ ಮೇಲೆ ಲಿಂಗೇರಿ ಸ್ಟೇಶನ್-ಕೌಳೂರು ರಸ್ತೆಯ ಮೇಲೆ ನಮ್ಮೂರಿಗೆ ಹೋಗುವಾಗ ಸಾಯಂಕಾಲ 6:10 ಗಂಟೆಯ ಸುಮಾರಿಗೆ ಗಡ್ಡೆಪ್ಪ ಪೂಜಾರಿ ಸಾ||ಶೆಟ್ಟಿಗೇರಾ ಇವರ ಹೊಲದ ಹತ್ತಿರ ನಮ್ಮ ಹಿಂದುಗಡೆಯಿಂದ ಒಂದು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗದಿಂದ ಮತ್ತು ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದು ನನ್ನ ಮೋಟರ್ ಸೈಕಲ್ಗೆ ಹಿಂದುಗಡೆಯಿಂದ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಅಪಘಾತದಲ್ಲಿ ನಾನು ಮತ್ತು ನನ್ನ ಮಗ ನಾಗರಾಜ ಮೋಟರ್ ಸೈಕಲ್ ಸಮೇತ ರಸ್ತೆಯ ಬದಿಯಲ್ಲಿ ಬಿದ್ದಿದ್ದು, ಹಿಂದುಗಡೆ ಕುಳಿತಿದ್ದ ನನ್ನ ಹೆಂಡತಿ ನಿರ್ಮಲಾ ಟ್ರ್ಯಾಕ್ಟರ್ನ ದೊಡ್ಡ ಟೈರ್ ಕೆಳಗಡೆ ಬಿದ್ದಳು. ನಾನು ಎದ್ದು ನೋಡಲಾಗಿ ನನ್ನ ಹೆಂಡತಿ ನಿರ್ಮಲಾ ಇವಳ ಹೊಟ್ಟೆಯ ಮೇಲೆ ಟೈರ್ ಹಾದುಹೋಗಿದ್ದರಿಂದ ಭಾರಿರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ಮೂಗಿನಿಂದ ರಕ್ತಸ್ರಾವವಾಗಿದ್ದು ನೋಡಲಾಗಿ ಮೃತಪಟ್ಟಿದ್ದಳು. ಅಪಘಾತದಲ್ಲಿ ನನಗೆ ಎಡಕಾಲು ಮೊಳಕಾಲಿಗೆ ತರುಚಿದ ಗಾಯವಾಗಿದ್ದು, ನನ್ನ ಮಗ ನಾಗರಾಜನಿಗೆ ಬಲಕೈಮೊಳಕೈಗೆ, ಬಲಕಾಲು ಮೊಳಕಾಲಿಗೆ ತರುಚಿದ ರಕ್ತಗಾಯಗಳಾಗಿರುತ್ತವೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ನಮ್ಮೂರಿನ ದೇವಪ್ಪ ತಂದೆ ಬಸಪ್ಪ ಮಡಿವಾಳ ಮತ್ತು ಚನ್ನಪ್ಪ ತಂದೆ ಬಸಣ್ಣ ಕಾಳಬೆಳಗುಂದಿ ಇವರು ನೋಡಿದರು. ನಮಗೆ ಅಪಘಾತಪಡಿಸಿದ ಟ್ರ್ಯಾಕ್ಟರ್ ಮಹಿಂದ್ರಾ ಕಂಪನಿಯ ಕೆಂಪುಬಣ್ಣದ ಟ್ರ್ಯಾಕ್ಟರ್ ಇದ್ದು. ನಮಗೆ ಅಪಘಾತಪಡಿಸಿದ ನಂತರ ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರ್ ನಿಲ್ಲಿಸದೇ ಟ್ರ್ಯಾಕ್ಟರ್ದೊಂದಿಗೆ ಓಡಿಹೋಗಿರುತ್ತಾನೆ. ಸದರಿ ಟ್ರ್ಯಾಕ್ಟರನ್ನು ಮತ್ತು ಅದರ ಚಾಲಕನಿಗೆ ನೋಡಿದರೆ ಗುರುತಿಸುತ್ತೇನೆ. ಅಪಘಾತದಲ್ಲಿ ಗಾಯಗೊಂಡ ನನಗೆ, ನನ್ನ ಮಗ ನಾಗರಾಜನಿಗೆ ಹಾಗು ಮೃತ ನನ್ನ ಹೆಂಡತಿಗೆ ನಮ್ಮೂರಿನವರಾದ ದೇವಪ್ಪ ಮತ್ತು ಚನ್ನಪ್ಪರವರು ದಾರಿಯಲ್ಲಿ ಹೋಗುತ್ತಿದ್ದ ಒಂದು ಆಟೋರಿಕ್ಷಾದಲ್ಲಿ ಹಾಕಿಕೊಂಡು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಮೃತ ನನ್ನ ಹೆಂಡತಿ ನಿರ್ಮಲಾ ವಯಸ್ಸು 30 ವರ್ಷ ಇವಳ ಶವವನ್ನು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿರುತ್ತೇವೆ.ಇಂದು ದಿನಾಂಕ:10/09/2022 ರಂದು 6:10 ಪಿ.ಎಮ್.ಕ್ಕೆ ಲಿಂಗೇರಿ ಸ್ಟೇಶನ್-ಕೌಳೂರು ರಸ್ತೆಯ ಮೇಲೆ ಗಡ್ಡೆಪ್ಪ ಪೂಜಾರಿ ಸಾ||ಶೆಟ್ಟಿಗೇರಾ ಇವರ ಹೊಲದ ಹತ್ತಿರ ನನ್ನ ಮೋಟರ್ ಸೈಕಲ್ ನಂ: ಕೆಎ-33 ಕ್ಯೂ-5097 ರ ಮೇಲೆ ನಾನು ಮತ್ತು ನನ್ನ ಹೆಂಡತಿ ನಿರ್ಮಲಾ, ನನ್ನ ಮಗ ನಾಗರಾಜ ನಮ್ಮೂರಿಗೆ ಹೋಗುವಾಗ ಹಿಂದುಗಡೆಯಿಂದ ಮಹಿಂದ್ರಾ ಕಂಪನಿಯ ಕೆಂಪುಬಣ್ಣದ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗದಿಂದ ಮತ್ತು ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಮೋಟರ್ ಸೈಕಲ್ಗೆ ಹಿಂದುಗಡೆಯಿಂದ ಡಿಕ್ಕಿಹೊಡೆದು ಅಪಘಾತಪಡಿಸಿ ಓಡಿಹೋಗಿದ್ದು, ಅಪಘಾತದಲ್ಲಿ ಮೋಟರ್ ಸೈಕಲ್ ಹಿಂದುಗಡೆ ಕುಳಿತಿದ್ದ ನನ್ನ ಹೆಂಡತಿ ನಿರ್ಮಲಾ ವಯ:30 ವರ್ಷ ಇವಳು ಭಾರಿರಕ್ತಗಾಯ ಹಾಗು ಗುಪ್ತಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ನನಗೆ ಮತ್ತು ನನ್ನ ಮಗ ನಾಗರಾಜನಿಗೆ ತರುಚಿದ ರಕ್ತಗಾಯಗಳಾಗಿರುತ್ತವೆ. ಕಾರಣ ಅಪಘಾತಪಡಿಸಿ ಓಡಿಹೋದ ಟ್ರ್ಯಾಕ್ಟರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಈ ಅಜರ್ಿಯ ಮೂಲಕ ವಿನಂತಿಸಿಕೊಳ್ಳುತ್ತೇನೆ.ಅಂತಾ ನೀಡಿದ ದೂರು ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.135/2022 ಕಲಂ.279, 337, 304(ಎ) ಐ.ಪಿ.ಸಿ. ಮತ್ತು 187 ಐ.ಎಮ್.ವಿ. ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 134/2022, ಕಲಂ, 323,324, 354, 504.506.ಐ.ಪಿ.ಸಿ: ದಿನಾಂಕ:10-09-2022 ರಂದು ರಾತ್ರಿ 8:00 ಗಂಟೆಗೆ ಠಾಣೆಯಲ್ಲಿರುವಾಗ ದೂರುದಾರರಾದ ಶ್ರಿ ಚಂದ್ರಾಯಗೌಡ ತಂದೆ ಮಲ್ಲಣ್ಣಗೌಡ ಪೊಲೀಸ್ ಪಾಟೀಲ್ ಸಾ|| ಚಾಮನಳ್ಳಿ ಇವರು ಠಾಣೆಗೆ ಹಾಜರಾಗಿ ಒಚಿದು ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ತಂದು ಹಾಜರು ಪಡಿಸಿದ್ದು ಅದರ ಸಾರಂಶವೆನೆಂದರೆ, ನಾನು ಚಂದ್ರಾಯಗೌಡ ತಂದೆ ಮಲ್ಲಣ್ಣಗೌಡ ಪೊಲೀಸ್ ಪಾಟೀಲ್ ವ||32 ವರ್ಷ ಜಾ||ಲಿಂಗಾಯತ ಉ||ಒಕ್ಕಲುತನ ಸಾ|| ಚಾಮನಳ್ಳಿ ತಾ||ಜಿ||ಯಾದಗಿರಿ ಇದ್ದು ನಾನು ಕುಟುಂಬ ಸಮೇತವಾಗಿ ಊರಲ್ಲಿ ಒಕ್ಕಲುತನ ಮಾಡಿಕೊಂಡು ಉಪಜೀವಿಸಿಕೊಂಡಿರುತ್ತೆನೆ. ಹಿಗಿದ್ದು ಇಂದು ದಿನಾಂಕ 10-09-2022 ರಂದು ಸಮಯ ಸಾಯಂಕಾಲ 5:30 ಗಂಟೆಯ ಸುಮಾರಿಗೆ ನಾನು ನನ್ನ ತಾಯಿ ಮಲ್ಲಮ್ಮ ಗಂಡ ಮಲ್ಲಣಗೌಡ ಪೊಲೀಸ್ ಪಾಟಿಲ್ ಇಬ್ಬರು ಮನೆಯಲ್ಲಿರುವಾಗ ನಮ್ಮ ಗ್ರಾಮದ ತಿರುಪತಿ ತಂದೆ ಹಣಮಂತ ನಿಡಗಿ ಇತನು ನಮ್ಮ ಮನೆಗೆ ಬಂದು ಲೇ ಚಂದ್ರಯಗೌಡ ಹೊರಗಡೆ ಬಾರಲೇ ನಿಂದು ಊರಲ್ಲಿ ಬಾಳ ಆಗ್ಯಾದ ಬಾರಲೇ ಇವತ್ತು ನಿಂದ ನಂದಾ ನೋಡೆ ಬೀಡೋಣಾ ಬಾ ಹೆಂಗಸರಂಗ ಯಾಕಾ ಮನೆಯ ಒಳಗಡೆ ಕುಳಿತಿಕೊಂಡಿದಿ ಬಾ ಹೋರಗಡೆ ಅಂತಾ ಅವಾಚ್ಯವಾಗಿ ಬೈದಾಡುತ್ತಾ ಬಂದಾಗ ನಾನು ಹೋರಗಡೆ ಬಂದು ಯಾಕೇ ನೀನು ಈ ತರ ಬೈಯುತ್ತಿ ಏನಾಗ್ಯಾದ ಅಂತಾ ಕೆಳಿದ್ದಕ್ಕೆ ನೀನು ಯಾವ ಸೀಮೆಯ ಗೌಡ ಇದಿಲೇ ನಾವು ಜಗಳ ಮಾಡಿಕೊಂಡರೆ ನಿನು ರಾಜಿ ಸಂದಾನ ಮಾಡಿಸಲು ನಿನು ಯಾರು ಅಂತಾ ಹೇಳಿ ಬೈಯುತ್ತಿದ್ದಾಗ ನಾನು ಈ ಜಗಳ ಮಾಡುವದು ಸರಿ ಅಲ್ಲ ಅಂತಾ ಹೇಳುತ್ತಿರುವಾಗ ನನ್ನ ತೆಕ್ಕಿಗಿ ಬಿದ್ದು ಕೈಯಿಂದ ಕಿವಿ ಪರಚಿ ಗಾಯಗೊಳಿಸಿದ್ದು ತನ್ನ ಬಾಯಿಂದ ನನ್ನ ಎಡಗಡೆ ಕೈ ತೋರಬೆರಳನು ಹಲ್ಲಿನಿಂದ ಕಚ್ಚಿ ರಕ್ತ ಗಾಯಗೋಳಿಸಿದ್ದರಿಂದ ನಾನು ಗಾಯದ ನೋವು ತಾಳಲಾರದೆ ಚಿರಾಡುತ್ತಿರುವಾಗ ನನ್ನ ತಾಯಿ ಮಲ್ಲಮ್ಮ್ಮ ಹೋರಗಡೆ ಬಂದು ಯಾಕೇ ಜಗಳ ಮಾಡಿಕೊಳ್ಳುತ್ತಿ ಅಂತಾ ಕೇಳಿದ್ದಕ್ಕೆ ನಿನು ಯಾರು ಕೇಳಲು, ರಂಡಿ, ಬೊಸಡಿ, ಚಿನಾಲಿ ನಿನ್ನ ಸೀರೆ ಬಿಚ್ಚಿ ಹೊಡೆಯುತ್ತೆನೆ ಅಂತಾ ನಮ್ಮ ತಾಯಿಯ ಸೀರೆ ಹಿಡಿದು ಎಳೆದು ಅವಮಾನವಾಗುವ ರಿತಿಯಲ್ಲಿ ಅವಾಚ್ಯವಾಗಿ ಬೈಯುತ್ತಾ ಈ ಊರಿನಲ್ಲಿ ಸೂಳೇ ಮಕ್ಕಳೆ ನಿಮ್ಮದು ಬಹಳ ಆಗ್ಯಾದ ಇವತ್ತು ನೀಮಗೆ ಒಂದು ಗತಿ ಕಾಣಿಸುತ್ತೆನೆ ಅಂತಾ ಜಗಳವಾಡುತ್ತಿರುವಾಗ ನಮ್ಮೂರಿನ ದೇವಿಂದ್ರಪ್ಪ ಮತ್ತು ಶರಣಪ್ಪ ತಂದೆ ಖಂಡಪ್ಪ ಬಡಿಗೇರ ಇವರು ಬಂದು ಯಾಕೇ ಜಗಳ ಮಾಡಕೊಳ್ಳತ್ತಿ ಅಂತ ಹೇಳಿ ಜಗಳ ಬೀಡಿಸಿಕೊಂಡಿದ್ದು ಇರುತ್ತದೆ. ಜಗಳ ಬಿಟ್ಟು ಹೋಗುವಾಗ ಇವತ್ತು ಉಳದಿರಿ ಇನ್ನೊಂದು ಸಲ ನನ್ನ ಕೈಯಗೆ ಸಿಕ್ಕರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವ ಬೆದರಿಕೆ ಹಾಕಿದ್ದು ಇವರುತ್ತದೆ. ಕಾರಣ ನಮಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಬಾಯಿಯಿಂದ ಕಚ್ಚಿ ಗಾಯಗೋಳಿಸಿ ನಮ್ಮ ತಾಯಿಗೆ ಸೀರೆ ಹಿಡಿದು ಎಳದಾಡಿ ಅವಮಾನಗೋಳಿಸಿ ಜೀವದ ಬೇದರಿಕೆ ಹಾಕಿದವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಕೊಡಿಸಲು ವಿನಂತಿ. ಅಂತಾ ದೂರು ಅಜರ್ಿ ನೀಡಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ,134/2022 ಕಲಂ.323, 324,354,504,506 ಐ.ಪಿ.ಸಿ. ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 153/2022.ಕಲಂ 420 ಸಂ 149 ಐ.ಪಿ.ಸಿ. : ಇಂದು ದಿನಾಂಕ 10.09.2022 ರಂದು 10.45 ಎ ಎಮ್ ಕ್ಕೆ ಮಾನ್ಯ ಪ್ರಧಾನ ಜೆ ಎಮ್ ಎಫ್ ಸಿ ನ್ಯಾಯಾಲಯ ಶಹಾಪೂರದ ಕೋರ್ಟ ಕರ್ತವ್ಯ ನಿರ್ವಹಿಸುವ ಶ್ರೀ ರಾಮಣ್ಣ ಪಿಸಿ 424 ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ಫಿಯರ್ಾದಿ ನಂಬರ 100/2022 ನೇದ್ದು ತಂದು ಹಾಜರು ಪಡಿಸಿದ್ದರ ಸಾರಾಂಶವೇನಂದರೆ ಶಹಾಪೂರ ನಗರದಲ್ಲಿ ರೇವಣಸಿದ್ದೇಶ್ವರ ವಿವಿದಿದ್ದೇಶ ಸಹಕಾರ ಸಂಘ[ ನೊಂದಣಿ ಸಂಖ್ಯೆ 38825/2009-10] ವು ನಗರದ ಬಸವೇಶ್ವರ ವೃತ್ತದ ಹತ್ತಿರ ಇರುವ ಪಡಶೆಟ್ಟಿ ಕಾಂಪ್ಲೆಕ್ಷ ಮಳಿಗೆ ನಂಬರ 1-24/2ಸಿ ರಲ್ಲಿ ತನ್ನ ಕಾರ್ಯ ಚಟುವಳಿಕೆಗಳನ್ನು ನಡೆಸುತ್ತಾ ಬಂದಿದ್ದು ಇರುತ್ತದೆ. ಅದರಂತೆ ಆರೋಪಿ ನಂಬರ 01 ಹಾಗು ಆರೋಪಿ ನಂಬರ 02 ರವರು ಜಂಟಿಯಾಗಿ ಬ್ಯಾಂಕಿನ ವಹಿವಾಟು ನಡೆಸುತ್ತಾ ಚೆಕ್ ಹಾಗು ವಿತರಣೆ ಹಾಗು ಮುದ್ದತ್ತು ಠೇವಣಿ ಪತ್ರಗಳಿಗೆ ಸಹಿ ಮಾಡಿ ಹಣ ಪಡೆದುಕೊಂಡಿದ್ದು ಇರುತ್ತದೆ. ಅದರಲ್ಲಿ ಹಲವು ವರ್ಷದಿಂದ ಫಿಯರ್ಾದಿದಾರರ ಹಾಗು ಸಾಕ್ಷಿದಾರರಾದ ಸಂಗನಬಸಪ್ಪ ತಂದೆ ಸಿದ್ದಲಿಂಗಪ್ಪ, ರಾಜಶೇಖರ ತಂದೆ ನಾಗಪ್ಪ ದೂಳಾ, ಹಾಗು ಸಂತೋಷ ತಂದೆ ಬಸವರಾಜ ಮಾಳಗಿ ಕೂಡಿಕೊಂಡು ಸದರಿ ರೇವಣಸಿದ್ದೇಶ್ವರ ವಿವಿದೋದ್ದೇಶ ಸಹಕಾರ ಸಂಘ ಬ್ಯಾಂಕಿನಲ್ಲಿ ಪಿಗ್ಮಿ ಏಜಂಟರಾಗಿ ಕೆಲಸ ನಿರ್ವಹಿಸುತ್ತಾ ಬಂದಿದ್ದು ಇರುತ್ತದೆ. ಸದರಿ ರೇವಣಸಿದ್ದೇಶ್ವರ ವಿವಿದೊದ್ದೇಶ ಸಹಕಾರ ಸಂಘ ಬ್ಯಾಂಕಿನಲ್ಲಿ éಷೇರುದಾರರು 550 ಜನರು ಇದ್ದು ಸದರಿ ಬ್ಯಾಂಕಿನಲ್ಲಿ ಬಡ ಕೃಷಿ ಕೂಲಿ ಕಾಮರ್ಿಕರು ತರಕಾರಿ ಮಾರಾಟ ಮಾಡಿ ಜೀವನ ನಡೆಸುವ ಮಹಿಳೆಯರು, ಜಮೀನು ಮಾರಾಟ ಮಾಡಿ ಬಂದ ಹಣವನ್ನು ವಿಶ್ವಾಸ ಹಾಗು ನಂಬಿಕೆಯಿಂದ ಮುದ್ದತ್ತು ಠೇವಣಿ ಇಟ್ಟಿರುತ್ತಾರೆ. ಅಲ್ಲದೇ ಸದರಿ ಬ್ಯಾಂಕಿನಲ್ಲಿ ಸಾಕ್ಷಿದಾರರು ಹಾಗು ಫಿಯರ್ಾದಿದಾರರು ಭರವಸೆಯಿಂದ 29 ಕ್ಕೂ ಹೆಚ್ಚು ಜನರು 40.45 ಲಕ್ಷ ಠೇವಣಿ ಇಟ್ಟಿದ್ದಾರೆ. ರೇವಣಸಿದ್ದೇಶ್ವರ ವಿವಿದೊದ್ದೇಶ ಸಹಕಾರ ಸಂಘ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಯು 30.01.2019 ರಂದು ನಡೆದಿದ್ದು ಅದರಂತೆ ಆರೋಪಿಗಳಾದ 03 ರಿಂದ 14 ರವರು ಅವಿರೋದವಾಗಿ ಆಯ್ಕೆಯಾಗಿದ್ದು ಇರುತ್ತದೆ. ಅದರಂತೆ ಬ್ಯಾಂಕಿನ ಆಡಳಿತ ಮಂಡಳಿಯ ಎಲ್ಲಾ ಆಗು ಹೋಗುಗಳಿಗೆ ಜವಬ್ದಾರರು ಆಗಿದ್ದು ಇರುತ್ತದೆ. ಅಲ್ಲದೇ ಬ್ಯಾಂಕಿನ ವಹಿವಾಟು ಅವರ ಗಮನಕ್ಕೆ ತಂದ ನಂತರ ಕಾರ್ಯದಶರ್ಿ ಹಾಗು ಅಧ್ಯಕ್ಷರು ಕೆಲಸ ನಿರ್ವಹಿಸುತ್ತಿದ್ದರು. ಹೀಗಿರುವಾಗ ದಿನಾಂಕ 14.07.2022 ರಂದು ಎಂದಿನಂತೆ ಫಿಯರ್ಾದಿದಾರರು ಹಾಗು ಸಾಕ್ಷಿದಾರರು ತಮ್ಮ ದೈನಂದಿನ ಪಿಗ್ಮಿಯಿಂದ ಸಂಗ್ರಹಿಸಿ ಹಣವನ್ನು ರೇವಣಸಿದ್ದೇಶ್ವರ ವಿವಿದೊದ್ದೇಶ ಸಹಕಾರ ಸಂಘ ಬ್ಯಾಂಕಿಗೆ ಜಮಾ ಮಾಡಬೇಕು ಎಂದು ತೆರಳಿದರೆ ಅಲ್ಲಿ ಅಚ್ಚರಿ ಕಾಯ್ದಿತ್ತು. ಬ್ಯಾಂಕಿಗೆ ಬೀಗವನ್ನು ಹಾಕಿತ್ತು. ಆಗ ಫಿಯರ್ಾದಿ ಹಾಗು ಸಾಕ್ಷಿದಾರರು ಆರೋಪಿಗಳಾದ 01 ಮತ್ತು 02 ಅವರ ಬಗ್ಗೆ ಬೇರೆ ಕಡೆ ವಿಚಾರಣೆ ಮಾಡಿದೆವು. ಹಾಗು ಬ್ಯಾಂಕಿನ ಆಡಳಿತ ಮಂಡಳಿಯ ನಿದರ್ೆಶಕರಾದ ಆರೋಪಿಗಳಾದ 03 ರಿಂದ 14 ನೇದ್ದವರನ್ನು ವಿಚಾರಿಸಿದರೆ ಉಡಾಫೆಯ ಉತ್ತರ ನೀಡಿದ್ದರಿಂದ ಅನುಮಾನ ಶುರುವಾಯಿತು. ಸಾರ್ವಜನಿಕರು ಬ್ಯಾಂಕಿನಲ್ಲಿ ಇಟ್ಟಿದ್ದ ಹಣವನ್ನು ಹಾಗು ಮುದ್ದತ್ತು ಠೇವಣಿ ಹಣವನ್ನು ಅಕ್ರಮವಾಗಿ ಪಡೆದುಕೊಂಡು ವಂಚನೆ ಮಾಡಿ ದುರ್ಬಳಿಕೆ ಮಾಡಿಕೊಡಿದ್ದಾರೆ ಎಂಬುವದು ಫಿಯರ್ಾದಿದಾರರ ವಾದ. ಸದರಿ ರೇವಣಸಿದ್ದೇಶ್ವರ ವಿವಿದೊದ್ದೇಶ ಸಹಕಾರ ಸಂಘ ಬ್ಯಾಂಕಿನ ಆಡಳಿತ ಮಂಡಳಿಯ ನಿಧರ್ೆಶಕರು ಹಾಗು ಕಾರ್ಯದಶರ್ಿ ಹಾಗು ಅಧ್ಯಕ್ಷರು ಸಾರ್ವಜನಿಕರಿಗೆ ವಂಚನೆ ಹಾಗು ಮೋಸ ಮಾಡಿ ಬ್ಯಾಂಕಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ಉಳಿತಾಯ ಖಾತೆಯ ಹಣ ಠೇವಣಿ ಮುದ್ದತ್ತು ಹಣ ಹಾಗು ಉಳಿತಾಯ ಖಾತೆಯ ಮೊತ್ತ ಇನ್ನಿತರ ಬ್ಯಾಂಕಿನ ವಹಿವಾಟಿನ ಹಣವನ್ನು ವಂಚನೆಯಿಂದ ಲಪಟಾಯಿಸಿ ದೋಚಿಕೊಂಡು ಪರಾರಿಯಾದ ಬಗ್ಗೆ ದಿನಾಂಕ 24.07.2022 ರಂದು ಫಿಯರ್ಾದಿದಾರರು ಶಹಾಪೂರ ಠಾಣೆಗೆ ದೂರು ಸಲ್ಲಿಸಲು ತೆರೆಳಿದರೆ ಅಲ್ಲಿಯ ಪೊಲೀಸರು ದೂರು ಸ್ವೀಕರಿಸದೇ ವಾಪಸ್ಸು ಕಳಿಸಿದ್ದು ಇರುತ್ತದೆ. ಇದರಿಂದ ಹತಾಶೆಗೊಂಡ ಫಿಯರ್ಾದಾರ ದಿನಾಂಕ 25.07.2022 ರಮದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗು ಅಧೀಕ್ಷಕರಿಗೂ ಶಹಾಪೂರ ಠಾಣೆಯ ವೃತ್ತ ನಿರೀಕ್ಷಕರಿಗೂ ಲಿಖಿತವಾಗಿ ದೂರು ಸಲ್ಲಿಸಿದ್ದರೂ ಯಾವದೇ ಕ್ರಮ ತೆಗೆದುಕೊಂಡಿಲ್ಲಿ, ಮಾನ್ಯ ನ್ಯಾಯಾಲಯದ ಅವಗಾನೆಗಾಗಿ ಪೊಲೀಸ್ ಮೇಲಾಧಿಕಾರಿಗಳಿಗೆ ಸಲ್ಲಿಸಿದ ದೂರಿನ ಪ್ರತಿಯನ್ನು ದೂರಿನ ಸಂಗಡ ಲಗತ್ತಿಸಿದ್ದು ಇರುತ್ತದೆ ಅಂತ ಇದ್ದ ಖಾಸಗಿ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 153/2022 ಕಲಂ 420 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 154/2022.ಕಲಂ, 143,147,323,324,326,504,506ಸಂ,149. ಐ.ಪಿ.ಸಿ. : ಇಂದು ದಿನಾಂಕ 10/09/2022 ರಂದು 17-00 ಗಂಟೆಗೆ ಪಿಯರ್ಾದಿ ಶ್ರೀಮತಿ, ತಾರಿಬಾಯಿ ಗಂಡ ಚಂದ್ರು ಚವ್ಹಾಣ ವ|| 55 ಜಾ|| ಲಂಬಾಣಿ ಉ|| ಮನೆಕೆಲಸ ಸಾ|| ಇಬ್ರಾಹಿಂಪೂರ ತಾಂಡಾ -9686817454. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ೀ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ. ದಿನಾಂಕ 06/09/2022 ರಂದು ಮದ್ಯಾಹ್ನ ನನ್ನ ಮೋಮ್ಮಗನು ಅಳುತ್ತ ಶಾಲೆಯ ಕಡೆಗೆ ಹೋಗುತ್ತಿರುವಾಗ ಗಂಗಿಬಾಯಿಯು ನನ್ನ ಮೊಮ್ಮಗನಿಗೆ ಏನ ಲೇ ನನ್ನ ಮನೆಯ ಮುಂದೆ ಯಾಕೆ ಅಳುತ್ತಾ ಹೋಗುತ್ತೀ ಅಂತ ಬೈಯುತ್ತಿರುವಾಗ ನಾನು ಸಣ್ಣ ಮಗುವಿದೆ ಯಾಕೋ ಅಳ್ಳುತ್ತಾ ಹೊರಟಿರುತ್ತಾನೆ ಅದಕ್ಕೆ ನೀ ಯಾಕೇ ಬೈಯುತ್ತೀ ಅಂತ ಕೇಳಿದಾಗ ನನಗೂ ಮತ್ತು ಗಂಗಿಬಾಯಿಗೆ ಬಾಯಿ ಮಾತಿನ ತಕರಾರು ಆಗಿದ್ದು ಇರುತ್ತದೆ.
ಹೀಗಿದು ದಿನಾಂಕ 06/09/2022 ರಂದು ರಾತ್ರಿ 7-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡನಾದ ಚಂದ್ರು ತಂದೆ ಉಮ್ಲಾ ಪೂಜಾರಿ ನನ್ನ ಮಗನಾದ ಸಂತೋಷ ತಂದೆ ಚಂದ್ರು ಚವ್ಹಾಣ ನನ್ನ ಸೊಸಿಯಾದ ಜಯಶ್ರೀ ಗಂಡ ಸಂತೋಷ ಚವ್ಹಾಣ ಎಲ್ಲರೂ ನಮ್ಮ ಮನೆಯ ಮುಂದೆ ಮಾತನಾಡುತ್ತಾ ನಿಂತಾಗ ನಮ್ಮ ತಾಂಡಾದವರಾದ 1] ರಘು ತಂದೆ ಭೀಮು ಚವ್ಹಾಣ 2] ರೇವುನಾಯಕ ತಂದೆ ಆವುಜಾ ನಾಯಕ ರಾಠೋಡ 3] ಬಾಸು ತಂದೆ ರೇವುನಾಯಕ ರಾಠೋಡ 4] ಗಂಗಿಬಾಯಿ ಗಂಡ ಭೀಮು ಚವ್ಹಾಣ 5] ರತ್ನಿಬಾಯಿ ಗಂಡ ರೇವುನಾಯಕ ರಾಠೋಡ ಈ ಎಲ್ಲ ಜನರು ಕೂಡಿಕೊಂಡು ಗುಂಪು ಕಟ್ಟಿಕೊಂಡು ನಮ್ಮ ಮನೆಯ ಮುಂದೆ ಬಂದವರೇ ಎಲೇ ತಾರಿಬಾಯಿ ಮದ್ಯಾಹ್ನ ನಮ್ಮ ಜೊತೆ ಜಗಳಾ ಮಾಡಿದ್ದೀ ಈಗ ಬಾರಲೇ ಸೂಳೀ ಅಂತ ಅವಾಚ್ಯವಾಗಿ ಬೈಯುತ್ತಾ ಬಂದರು, ಆಗ ನಾನು ಯಾಕ ಜಗಳ ತೆಗಿತಿನಿ ಗಂಗಿಬಾಯಿನೆ ಜಗಳ ತೆಗೆದಾಳ ಅಂತ ಅಂದಾಗ ಅವರಲ್ಲಿಯ ರಘು ಈತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಎಡಗೈ ಮೊಳಕೈಗೆ ಭಲವಾಗಿ ಹೊಡೆದು ಭಾರೀ ಗುಪ್ತಗಾಯ ಪಡಿಸಿದ್ದು ಇರುತ್ತದೆ. ಮತ್ತು ರೇವುನಾಯಕ ಈತನು ಸಹ ಅಲ್ಲಿಯೇ ಬಿದ್ದ ಬಡಿಗೆಯನ್ನು ತೆಗೆದುಕೊಂಡು ನನಗೆ ತಲೆಯ ಹಿಂಬಾಗಕ್ಕೆ, ಹೊಡೆದು ಗುಪ್ತಗಾಯ ಪಡಿಸಿದನು. ಆಗ ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಳ್ಳಲು ನನ್ನ ಸೊಸಿಯಾದ ಜಯಶ್ರೀ ಇವಳು ಬಂದಾಗ ರೇವುನಾಯಕ ಈತನು ತನ್ನ ಕೈಯಲ್ಲಿದ್ದ ಅದೇ ಬಡಿಗೆಯಿಂದ ಜಯಶ್ರೀಯ ತಲೆಯ ಹಿಂಬಾಗಕ್ಕೆ ಹಾಗು ಬಲಗಾಲ ತೊಡೆಗೆ, ಬೆನ್ನಿಗೆ ಹಾಗು ಎಡರು ಭುಜಕ್ಕೆ ಹೊಡೆದು ಗುಪ್ತಗಾಯ ಮಾಡಿದನು. ನಂತರ ಬಾಸು ಈತನು ಈ ಸೂಳೇಯರ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ಗಂಗಿಬಾಯಿ ಹಾಗು ರತ್ನಿಬಾಯಿ ಇಬ್ಬರೂ ಕೂಡಿ ನನಗೆ ನೆಲಕ್ಕೆ ಹಾಕಿ ಎಳೆದಾಡಿದ್ದರಿಂದ ನನ್ನ ಟೊಂಕಕ್ಕೆ ಗುಪ್ತಗಾಯವಾಗಿದ್ದು ಇರುತ್ತದೆ. ಗಂಗಿ ಬಾಯಿ ತನ್ನ ಕೈಯಿಂದ ನನಗೆ ಕಪಾಲಕ್ಕೆ ಹೊಡೆದಳು. ಆಗ ಅಲ್ಲಿಯೇ ಇದ್ದ ನನ್ನ ಗಂಡ ಚಂದ್ರು ನನ್ನ ಮಗನಾದ ಸಂತೋಷ ಅಲ್ಲೇ ಹೊರಟಿದ್ದ ನಮ್ಮೂರ ಶಿವಪ್ಪ ತಂದೆ ನಿಂಗಪ್ಪ ಮೇಲ್ಗಿರಿ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ನಮಗೆ ಹೊಡೆಯುವದನ್ನು ಬಿಟ್ಟು ಸೂಳೇಯರೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಸದರಿ ಜಗಳವು ನಮ್ಮ ಮನೆಯ ಮುಂದಿನ ಲೈಟಿನ ಬೆಳಕಿನಲ್ಲಿ ಜರುಗಿರುತ್ತದೆ. ಆಗ ನನ್ನ ಗಂಡ ಚಂದ್ರು ಮತ್ತು ನನ್ನ ಮಗ ಸಂತೋಷ ಇಬ್ಬರು ಕೂಡಿ ನನಗೆ ಮತ್ತು ಜಯಶ್ರೀಗೆ ಉಪಚಾರ ಕುರಿತು ಒಂದು ವಾಹನದಲ್ಲಿ ಕರೆದುಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿದ್ದು ಇರುತ್ತದೆ. ನಮಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಒಂದು ಅಬುಲೇನ್ಸದಲ್ಲಿ ನನ್ನ ಗಂಡ ಚಂದ್ರು ಮತ್ತು ನನ್ನ ಮಗ ಸಂತೋಷ ಇಬ್ದರು ಕೂಡಿ ಅಂಬುಲೇನ್ಸದಲ್ಲಿ ನಮಗೆ ಕರೆದುಕೊಂಡು ಹೋಗಿ ಕಲಬುರಗಿಯ ಯುನೈಟೇಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದರಿಂದ ಉಪಚಾರ ಪಡೆದುಕೊಂಡಿರುತ್ತೇವೆ. ನಮಗೆ ಉಪಚಾರ ಅವಶ್ಯಕವಾಗಿದ್ದರಿಂದ ಉಪಚಾದ ಪಡೆದು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ನಾನು ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಕಾರಣ ನಮಗೆ ಅವಾಚ್ಯ ಶಬ್ದಗಳಿಂದ ಬೈದು. ಹೋಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ನಿಡಿದ್ದು ಇರುತ್ತದೆ, ಸದರಿ ದೂರಿನ ಸಾರಾಂಶದ ಮೆಲಿಂದ ಠಾಣೆಯ ಗುನ್ನೆ ನಂ 154/2022 ಕಲಂ 143,147,323,324,326,504,506,ಸಂ,149 ಐ,ಪಿ,ಸಿ, ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಗೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 71/2022 ಕಲಂ. 363 ಐಪಿಸಿ : ದಿ:08/09/2022 ರಂದು ಅಪಹರಣಕ್ಕೊಳಗಾದ ಕು. ವೀಣಾ ಇವಳು ಬೆಳಿಗ್ಗೆ ಶಾಲೆಗೆ ಹೋಗಿ ಕಿವಿ ಬೇನೆಯಾಗುತ್ತಿದೆ ವಾಪಸು ಮನೆಗೆ ಹೋಗುತ್ತೇನೆ ಅಂತಾ ಶಿಕ್ಷಕರಿಗೆ ಹೇಳಿ ವಾಪಸು ಮನೆಗೆ ಬರಲು ಶಾಲೆಯಿಂದ ಹೊರಟಾಗ ಬೆಳಿಗ್ಗೆ 9.00 ಗಂಟೆಯ ನಂತರದ ಅವಧಿಯಲ್ಲಿ ಯಾರೋ ಅಪರಿಚಿತರು ಕು. ವೀಣಾ ಇವಳಿಗೆ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿದ್ದು, ಸದರಿ ಕು.ವೀಣಾ ಇವಳಿಗೆ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವದಿಲ್ಲ. ಎಲ್ಲಾ ಕಡೆ ಹುಡುಕಾಡಿ ಠಾಣೆಗೆ ಬರಲು ತಡವಾಗಿದ್ದು ಇರುತ್ತದೆ. ಕಾರಣ ನನ್ನ ಮಗಳಾದ ಕು.ವೀಣಾ ವ:14 ವರ್ಷ ಇದ್ದು, ಅಪ್ರಾಪ್ತ ವಯಸ್ಸಿನ ನನ್ನ ಮಗಳಿಗೆ ಪತ್ತೆ ಹಚ್ಚಿ ಕಾಯ್ದೆಸಿರಿ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ಲಿಖಿತ ದೂರು ಅಜರ್ಿಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 65/2022 ಕಲಂ:323, 324, 447, 504, 506 (2), ಸಂಗಡ 34 ಐಪಿಸಿ : ಇಂದು ದಿನಾಂಕ:10.09.2022 ರಂದು ಬೆಳಿಗ್ಗೆ 10:00 ಗಂಟೆಗೆ ಠಾಣೆಯ ನ್ಯಾಯಾಲಯ ಕರ್ತವ್ಯ ಮಾಡುವ ಶಿವರಾಜ ಪಿಸಿ-143 ರವರು ಮಾನ್ಯ ನ್ಯಾಯಾಲಯದಿಂದ ಮರಳಿ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರ ರವರ ಖಾಸಗಿ ಫಿಯರ್ಾದಿ ಸಂಖ್ಯೆ: /2022 ನೇದ್ದನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು 156(3) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖಾ ವರದಿಯನ್ನು ಸಲಿಸಲು ಆದೇಶಿಸಿದ್ದು ಸದರಿ ಖಾಸಗಿ ಫಿಯರ್ಾದಿ ನಂ: /2022 ನೇದ್ದರ ಫಿಯರ್ಾದಿದಾರರಾದ ಶ್ರೀ ರಾಮಮೂತರ್ಿ ತಂದೆ ನರಸಿಂಹಮೂತರ್ಿ ಮನ್ನೆ ವ:52 ವರ್ಷ ಉ:ಒಕ್ಕಲುತನ ಜಾ:ಕಮ್ಮಾ ಸಾ:ಕಕ್ಕೇರಾ ತಾ:ಸುರಪೂರ ರವರ ಸದರಿ ಖಾಸಗಿ ಫಿಯರ್ಾದದ ಸಾರಾಂಶವೆನೆಂದರೆ, ನಾನು 20 ವರ್ಷದ ಹಿಂದೆ ಆಂಧ್ರಪ್ರದೇಶದಿಂದ ಕಕ್ಕೇರಾ ಪಟ್ಟಣಕ್ಕೆ ವಲಸೆ ಬಂದು ವಾಸಿಸುತ್ತಿರುತ್ತೇನೆ. ಹೀಗಿದ್ದು 20 ವರ್ಷಗಳ ಹಿಂದೆ ನಾನು ಕಕ್ಕೇರಾ ಪಟ್ಟಣದಲ್ಲಿ ಸವರ್ೆ ನಂ:700/1 ರಲ್ಲಿ 4 ಎಕರೆ 30 ಗುಂಟೆ ಜಮೀನನ್ನು ಖರೀದಿ ಮಾಡಿ ಬೆಳೆ ಬೆಳೆದುಕೊಂಡು ಬಂದಿರುತ್ತೇನೆ. ನನ್ನ ಹೊಲದಲ್ಲಿ ಸುತ್ತಲೂ ಬಿದಿರಿನ ಗಿಡಗಳನ್ನು ಬೆಳೆದಿದ್ದು ಇವುಗಳು ಸುಮಾರು 35 ಅಡಿಗಳಷ್ಟು ಎತ್ತರವಾಗಿ ಬೆಳೆದಿದ್ದು ಇರುತ್ತದೆ. ನನ್ನ ಹೊಲದ ಪಶ್ಚಿಮ ಭಾಗಕ್ಕೆ ಹೊಂದಿ ಪರಮಣ್ಣ ತಂದೆ ಸೋಮಲಿಂಗಪ್ಪ ಹೆಳವರ ರವರ ಹೊಲವಿರುತ್ತದೆ. ದಿನಾಂಕ 06.04.2022 ರಂದು 2:00 ಪಿಎಮ್ಕ್ಕೆ ಸದರಿ ಪರಮಣ್ಣ ಹೆಳವರ ಮತ್ತು ಆತನ ಹೆಂಡತಿ ಮಲ್ಲಮ್ಮ ಗಂಡ ಪರಮಣ್ಣ ಹೆಳವರ ಹಾಗೂ ಅವರ ಮಗನಾದ ಶಿವು ತಂದೆ ಪರಮಣ್ಣ ಹೆಳವರ ಇವರುಗಳು ನಮ್ಮ ಅನುಮತಿಯಿಲ್ಲದೇ ನಮ್ಮ ಹೊಲದಲ್ಲಿ ಅಕ್ರಮವಾಗಿ ಪ್ರವೇಶಿಸಿ ನಮ್ಮ ಹೊಲದಲ್ಲಿ ಬೆಳೆದಿರುವ ಬಿದಿರಿನ ಗಿಡಗಳನ್ನು ಕಡಿಯುತ್ತಿರುವಾಗ ಅದರ ಶಬ್ದ ಕೇಳಿ ನಾನು ಮತ್ತು ನನ್ನ ಮಗನಾದ ಸುರೇಶ ರವರು ಕೂಡಿ ಆರೋಪಿತರು ಬಿದಿರು ಕಡಿಯುತ್ತಿರುವ ಸ್ಥಳಕ್ಕೆ ಹೋಗಿ ಅವರಿಗೆ ಯಾಕೆ ನಮ್ಮ ಬಿದಿರು ಗಿಡಗಳನ್ನು ಕಡಿಯುತ್ತಿದ್ದಿರಿ ಅಂತ ಕೇಳಿದಾಗ ಸದರಿ ಮೂರು ಜನ ಆರೋಪಿಗಳಾದ ಪರಮಣ್ಣ, ಮಲ್ಲಮ್ಮ ಮತ್ತು ಶಿವು ಇವರುಗಳು ನಮಗೆ ನಿಮ್ಮ ಬಿದಿರಿನ ಗಿಡಗಳು ನಮ್ಮ ಹೊಲದಲ್ಲಿ ಬೀಳುತ್ತಿದ್ದು ಇದರಿಂದ ನಮಗೆ ತೊಂದರೆಯಾಗುತ್ತದೆ ಆದ್ದರಿಂದ ಇವುಗಳನ್ನು ಕಡಿಯುತ್ತೇವೆ ಅಂತ ಅಂದಿದ್ದು ಆಗ ಪಿರ್ಯಾದಿ ಮತ್ತು ಅವರ ಮಗ ಸುರೇಶ ರವರು ಅವರಿಗೆ ನೀವುಗಳು ನಮಗೆ ಹೇಳಿದ್ದರೆ ನಾವೇ ಅವುಗಳನ್ನು ಕಡಿಯುತ್ತಿದ್ದೇವು ಅಂತ ಅಂದಾಗ ಶಿವು ಇತನು ಅಲ್ಲಿಯೇ ಇದ್ದ ಬಿದಿರು ಬಡಿಗೆಯನ್ನು ತೆಗೆದುಕೊಂಡು ನನಗೆ ಹೊಡೆಯಲು ಬಂದಾಗ ನನ್ನ ಮಗನಾದ ಸುರೇಶ ಇತನು ಅವನನ್ನು ತಡೆದಿದ್ದು ಇರುತ್ತದೆ. ಆಗ ಮಲ್ಲಮ್ಮ ಇವಳು ತನ್ನ ಕೈಯಲ್ಲಿಯ ಕುಡಗೋಲನ್ನು ತೆಗೆದುಕೊಂಡು ನನಗೆ ಹೊಡೆಯಲು ಬಂದಿದ್ದು ಅದೇ ಸಮಯಕ್ಕೆ ಆರೋಪಿಗಳ ಸಂಬಂಧಿಕರು ಸ್ಥಳಕ್ಕೆ ಬಂದು ಬಿಡಬೇಡಿರಿ ಈ ಆಂಧ್ರ ಸೂಳೆ ಮಕ್ಕಳದು ಸೊಕ್ಕು ಬಾಳ ಆಗಿದೆ ನಮ್ಮ ಗ್ರಾಮಕ್ಕೆ ಬಂದು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ ಅಂತ ಕೂಗಾಡಿದ್ದು ಇರುತ್ತದೆ. ಆಗ ಅಲ್ಲಿಗೆ ಬಂದ ಪರಮಣ್ಣ ತಂದೆ ಸೋಮಲಿಂಗಪ್ಪ ದೊಡಮನಿ ಮತ್ತು ಮೌನೇಶ ತಂದೆ ನಂದಪ್ಪ ಕವಾಸ ಇವರುಗಳು ನಮ್ಮನ್ನು ಜಗಳದಿಂದ ಬಿಡಿಸಿದ್ದು ಆಗ ಸದರಿ ಆರೋಪಿಗಳಾದ ಮಲ್ಲಮ್ಮ, ಪರಮಣ್ಣ ಮತ್ತು ಶಿವು ಇವರುಗಳು ನಿಮ್ಮ ಜೀವ ನಮ್ಮ ಕೈಯಲ್ಲಿದೆ ನೀವು ಏನಾದರೂ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟರೇ ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು ಕಾರಣ ಮೂರು ಜನ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿಯ ಖಾಸಗಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:65/2022 ಕಲಂ:323, 324, 447, 504, 506 (2), ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡೆನು.