ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-10-2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 136/2021 ಕಲಂ.143,147, 420,423,504,506 ಸಂ 149 ಐ.ಪಿ.ಸಿ : ಇಂದು ದಿನಾಂಕ: 10/10/2021 ರಂದು 07.30 ಪಿ.ಎಮ್ ಸುಮಾರಿಗೆ ಫೀರ್ಯಾಧಿ ಶ್ರೀ ಚಂದ್ರಶೇಖರ ತಂದೆ ಬಸಣ್ಣ ಅಲ್ಲಿಪೂರ ವ:43 ಜಾ:ಕಬ್ಬಲಿಗಾ ಉ:ಖಾಸಗಿ ಕೆಲಸ ಸಾ:ಅಚೋಲಾ ಹಾ:ವ:ಉರಳಿ ಕಾಂಚನ ಪೂನಾ ಇವರು ಠಾಣೆ ಬಂದು ಸಲ್ಲಿಸಿದ ದೂರಿನ ಸಾರಾಂಶ ಏನೆಂದರೆ .ನನ್ನ ಸ್ವಂತ ಊರಾದ ಅಚೊಲಾ ಇರುತ್ತದೆ.ನಾನು ಸುಮಾರು ಒಂದುವರೆ ವರ್ಷ ಕೆಲಸಕ್ಕಾಗಿ ದುಬಾಯಿಗೆ ಹೋಗಿ 15/06/2020 ರಂದು ಕೊರಾನದ ಕಾಯಿಲೆ ಕಾರಣಕ್ಕಾಗಿ ಹಿಂದುರುಗಿ ಪುನಾಗೆ ಬಂದು ಕೆಲಸಕ್ಕೆ ಸೇರಿದ್ದು ಇರುತ್ತದೆ. ಹೀಗೆ ಇರುವಾಗ ನನ್ನ ತಾಯಿಯವರಾದ ಸಂಗಮ್ಮ ಗಂಡ ಬಸಣ್ಣ ಅಚೊಲಾ ಇವರು ನನಗೆ ತಿಳಿಸಿದ್ದೆನೆಂದರೆ ಅಚೊಲಾ ಗ್ರಾಮದಲ್ಲಿರುವ ನನ್ನ ತಾಯಿಯ ತಂಗಿಯಾದ ಅಕ್ಕನಾಗಮ್ಮ ಗಂಡ ಭೀಮರಾಯ ಹಾಗೂ ಆಕೆಯ ಗಂಡನಾದ ಭೀಮರಾಯ ಮತ್ತು ಆಕೆಯ ಮಕ್ಕಳು ನನಗೆ ಫೊನ್ ಮಾಡಿ ಸದ್ಯ ಹಣದ ಅವಶ್ಯಕತೆ ಇದ್ದು ಅದಕ್ಕಾಗಿ ನಾವು ನಮ್ಮ ಹೊಲವನ್ನು ಮಾರಾಟ ಕುರಿತು ನಮ್ಮೂರಿನ ಜನರಿಗೆ ವಿಚಾರಿಸಲಾಗಿ ಯಾರು ನಮ್ಮ ಹೊಲವನ್ನ ಖರಿದಿ ಮಾಡಲು ತಯಾರಿಲ್ಲದ ಕಾರಣ ನೀವು ದಯಾಮಾಡಿ ನಮ್ಮ ಹೊಲವನ್ನು ಖರಿದಿ ಮಾಡಿ ಸಾಹಯಮಾಡಬೇಕೆಂದು ಕೊರಿಕೊಂಡಾಗ ನಾನು ಸದರಿ ಹೊಲದ ಮೆಲೆ ಯಾವುದೆ ರಿತಿಯಾದ ಕೊಟರ್್ ಕಛೆರಿ ತಂಟೆ ತಕರಾರು ಸಾಲ ಇದೆಯಾ ಅಂತಾ ವಿಚಾರಿಸಲಾಗಿ ಸದರಿಯವರು ಅಕ್ಕನಾಗಮ್ಮ ನನ್ನ ಹೆಸರಿನಲ್ಲಿ ಹೊಲವಿದ್ದು ಆ ಹೊಲದ ಮೆಲೆ ಯಾವುದೆ ಬ್ಯಾಂಕಿನ ಸಾಲ ಅಥವಾ ಯಾವುದೇ ಕೇಸ್ ಇರುವುದಿಲ್ಲ ಅಂತಾ ತೀಳಿಸಿದರು ಆಗ ನಾನು ಮತ್ತು ನಿಮ್ಮ ಅಣ್ಣನಾದ ಗಣೇಶ ಮತ್ತು ನಿಮ್ಮ ತಂದೆಯೊಂದಿಗೆ ಚಚರ್ಿಸಿ ಅಚೊಲಕ್ಕೆ ಬಂದು ದಿನಾಂಕ:14/06/2019 ರಂದು ನಾವು ಮನೆಯಲ್ಲಿದ್ದಾಗ ಈ ಮೆಲ್ಕಾಣಿಸಿದ ಎಲ್ಲರೂ ನಮ್ಮ ಮನೆಗೆ ಬಂದು ಕೈಯಿಂದ ಬರೆದ ಒಂದು ನೂರು ರೂಪಾಯಿಯ ಬೇಲೆಯ ಸ್ಟ್ಯಾಂಪ್ನ್ನು ತೊರಿಸಿದ್ದು ನಮಗೆ ಕನ್ನಡ ಓದಲು ಬರೆಯಲು ಬರದೆ ಇದ್ದರಿಂದ ನಾವು ಅವರಿಗೆ ಈ ಸ್ಟ್ಯಾಂಪ್ನಲ್ಲಿ ಏನು ಬರೆದಿದೆ ಅಂತಾ ಕೇಳಲಾಗಿ ಸದರಿ ಅಕ್ಕನಾಗಮ್ಮ ನನ್ನ ಹೆಸರಿನ್ನಲಿರುವ ಜಮಿನು ಸವರ್ೇ ನಂ.21 ಬಟಾ 1 ಒಂದು ಅಂತಾ ಇರುತ್ತದೆ ಮತ್ತು ಹೊಲದ ಮೇಲೆ ಯಾವುದೆ ಸಾಲ ಮತ್ತು ಕೊಟರ್್ ಕೆಸ ಇರುವುದಿಲ್ಲ ನೀವು ನಮಗೆ 7,20,000/ ಹಣ ಕೊಟ್ಟಲ್ಲಿ ಸದರಿ ಜಮೀನನ್ನು ಒಂದು ತಿಂಗಳಲ್ಲಿ ಹೊಲವನ್ನು ನಿಮ್ಮ ಹೆಸರಿಗೆ ನೊಂದಣಿ ಮಾಡಿಸುತ್ತೆವೆ ಅಂತಾ ತೀಳಿಸಿರುತ್ತಾರೆ. ಅದರಂತೆ ನಾವು ಅವರಿಗೆ 7,20,000/- ರೂ ಹಣ ನೀಡಿದ್ದು ಇರುತ್ತದೆ. ನಂತರ ಒಂದು ತಿಂಗಳು ಆದ್ದರೂ ನಮ್ಮ ತಾಯಿ ಹೆಸರಿನಲ್ಲಿ ನೋಂದಣಿ ಮಾಡಿಸದೇ ಇದ್ದರಿಂದ ನಾನು ಅಚ್ಚೋಲಾ ಗ್ರಾಮಕ್ಕೆ ಬಂದು ಖರೀದಿ ಪ್ರಮಾಣ ಪತ್ರ (ಬಾಂಡ) ಸದರಿ ಹೋಲದ ಪಹಣಿ ಪರೀಶಿಲಿಸಲಾಗಿ ಕಂಡು ಬಂದಿದೆನೆಂದರೆ ಸದರಿ ಖರೀಧಿ ಕರಾರು ಪತ್ರದಲ್ಲಿ ಸವರ್ೆ ನಂ.21 ಬಟಾ 2 ಎಂದು ಮಾಡಿ ನನ್ನ ತಾಯಿಯ ಜಮೀನಿನ ಸವರ್ೆ ನಂಬರ ಬರೆದಿರುತ್ತಾರೆ. ನಂತರ ಊರಿಗೆ ಬಂದೂ ನನ್ನ ತಾಯಿಯ ಮತ್ತು ಅಕ್ಕನಾಗಮ್ಮಳ ಹೊಲದ ಪಹಣಿ ತೆಗೆದು ನೊಡಿದಾಗ ಅದರಲ್ಲಿ ಸವರ್ೆನಂ.21 ಬಟಾ 2 ನನ್ನ ತಾಯಿಯ ಹೆಸರಿನಲ್ಲಿದ್ದು ಸವರ್ೆ ನಂ.21 ಬಟಾ 1 ಅಕ್ಕನಾಗಮ್ಮಳ ಹೆಸರಿನಲ್ಲಿದ್ದದ್ದು ಗೊತ್ತಾಯಿತು ಮತ್ತು ಊರಿನಲ್ಲಿ ಜನರಲ್ಲಿ ವಿಚಾರಿಸಲಾಗಿ ಸದರಿ ಜಮೀನಿನ ಸವರ್ೆ ನಂ.21 ಬಟಾ 1 ರ ಸದರಿ ಜಮೀನಿನ ಮೆಲೆ ಒ.ಎಸ್.ನಂ.86/2020 ರ ನ್ಯಾಯಾಲಯ ವಿಚಾರಣೆ ಹಂತದಲ್ಲಿ ಇರುವದರಿಂದ ಯಾರಿಗೂ ಮಾರಾಟ ಮಾಡದ ಹಾಗೆ ತಡೆ ಆದೇಶ ಇರುತ್ತದೆ. ನ್ಯಾಯಾಲಯದ ಆದೇಶವನ್ನು ಮುಚ್ಚಿಟ್ಟು ಕನ್ನಡ ಬರದ ನನ್ನ ತಾಯಿಗೆ ಮೊಸ ಮಾಡಿ ಅವರಿಂದ 7,20,000/- ಹಣ ಪಡೆದಿರುತ್ತಾರೆ ಸದರಿ ಜಮೀನಿನ ಮೇಲೆ 7,50,000/-ರೂಪಾಯಿಗಳನ್ನು ಕನರ್ಾಟಕ ಬ್ಯಾಂಕ ಯಾದಗಿರಿಯಿಂದ ಸಾಲವಾಗಿ ಪಡೆದಿರುತ್ತಾರೆ.ಹೀಗೆ ಮೊಸ ಮಾಡಿ ನನ್ನ ತಾಯಿಯಿಂದ ಹಣ ಪಡೆದು ಮೊಸದಿಂದ ಸುಳ್ಳು ಸವರ್ೆನಂ.ಬರೆದು ಮತ್ತು ಬ್ಯಾಂಕಿನಲ್ಲಿ ಪಡೆದ ಸಾಲದ ವಿಷಯ ಮುಚ್ಚಿಟ್ಟು ನ್ಯಾಯಾಲಯದ ಆದೇಶವನ್ನು ಮುಚ್ಚಿಟ್ಟು ಜಮೀನಿನ ಮಾರಾಟ ಕರಾರು ಪತ್ರ ಬರೆದಿರುವ ವಿಷಯ ಗೊತ್ತಾಗಿ ನಾನು ನಿನ್ನೆ ದಿನಾಂಕ:09/10/2021 ರಂದು ಸಮಯ ಸಾಯಂಕಾಲ 6:30 ಗಂಟೆಗೆ ಅಚೊಲಾ ಗ್ರಾಮಕ್ಕೆ ಬಂದು ಸದರಿ ವ್ಯಕ್ತಿಗಳಾದ 1) ಅಕ್ಕನಾಗಮ್ಮ ಗಂಡ ಭೀಮರಾಯ ಹಾಗೂ 2) ಭೀಮರಾಯಶಾಸ್ತ್ರೀ 03)ಹಣಮಂತ ತಂದೆ ಭೀಮರಾಯ 04)ಭಾಗಣ್ಣ ತಂದೆ ಭೀಮರಾಯ 05)ಮೌನೇಶ ತಂದೆ ಭೀಮರಾಯ 06)ಚಂದಪ್ಪ ತಂದೆ ಭೀಮರಾಯ ನಮ್ಮ ತಾಯಿಗೆ ಯಾಕೆ ಮೊಸಮಾಡಿ ಹಣವನ್ನು ಪಡೆದಿರುತ್ತಿರಿಯಂದು ಕೇಳಿದಾಗ ಮೆಲ್ಕಾಣಿಸಿದ ಎಲ್ಲರೂ ನನ್ನ ಮೈಮೆಲೆ ಬಿದ್ದು ನನಗೆ ಎಳದಾಡಿ ಅವಾಚ್ಯ ಶಬ್ದಗಳಿಂದ ನಿಂದನೆಮಾಡಿದ್ದು ನಾನು ಪೊಲೀಸ್ ಕೆಸ್ ಮಾಡುತ್ತೆನೆ ಅಂತಾ ಹೇಳಿದರೆ ಅವರು ನನಗೆ ಯಾವ ಪೊಲೀಸ್ ಏನು ಮಾಡಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮೆಲೆ ಹಲ್ಲೆ ಮಾಡಿದ್ದು ಅಲ್ಲದೆ ಜಿವ ಬೆದರಿಕೆ ಹಾಕಿರುತ್ತಾರೆೆ ಇದನ್ನು ನೊಡಿದ ಅಲ್ಲಿಯೇ ಇದ್ದಂತಃ ಗ್ರಾಮಸ್ಥರಾದ 1) ಕಾಮಣ್ಣ ತಂದೆ ಸಂಗಣ್ಣ 2)ಮರೆಪ್ಪ ತಂದೆ ದೊಡ್ಡಸಾಬಣ್ಣ ಅಲ್ಲಿಪೂರ ಸಾ: ಇಬ್ಬರೂ ಅಚೊಲಾ ಇವರುಗಳು ಬಂದು ಜಗಳವನ್ನು ಬಿಡಿಸಿರುತ್ತಾರೆ. ಕಾರಣ ಮೇಲ್ಕಾಣಿಸಿದ ಆರು ಜನರು ನಮ್ಮ ತಾಯಿಗೇ ಮೋಸಮಾಡಿ ನನಗೆ ಜೀವ ಬೇದರಿಕೆ ಹಾಕಿ ನನ್ನ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ಲಿಖಿತ ಹೇಳಿಕೆ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 136/2021 ಕಲಂ.143,147,420,423,504,506 ಸಂ 149 ಐ.ಪಿ.ಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 11-10-2021 09:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080