ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-10-2022

 

 

ಯಾದಗಿರಿ ನಗರ ಪೊಲೀಸ್ ಠಾಣೆ:-

ಗುನ್ನೆ ನಂ: 110/2022 ಕಲಂ 380 ಐಪಿಸಿ: ಇಂದು ದಿನಾಂಕ 08/10/2022 ರಂದು ಸಾಯಂಕಾಲ 05-30 ಗಂಟೆಯ ಸುಮಾರಿಗೆ ಫಿಯರ್ಾದಿ ಶ್ರೀಮತಿ ಪ್ರಾಂಜಲಿ ಚಿಪ್ಪಾರ ಗಂಡ ಶರಣಬಸವ ಗುತ್ತೆದಾರ ವಯಾ 29 ವರ್ಷ, ಜಾ|| ಪ.ಜಾತಿ ಉ|| ಮನೆ ಕೆಲಸ ಸಾ|| ಅಕ್ಕ ಮಹಾದೇವಿ ಕಾಲೋನಿ ಹೈಕೋಟರ್್ ಹತ್ತಿರ ಕಲಬುರಗಿ ಇವರು ಠಾಣೆಗೆ ಬಂದು ಒಂದು ಗಣಕೀಕರಿಸಿದ ದೂರು ನೀಡಿದ್ದರ ಸಾರಾಂಶವೇನೆಂದರೆ, ನನ್ನ ತವರು ಮನೆ ಯಾದಗಿರಿ ಹಾಗೂ ನನ್ನ ಗಂಡನ ಮನೆ ಕಲಬುರಗಿ ಇರುತ್ತದೆ. ಹೀಗಿದ್ದು, ದಸರ ಹಬ್ಬದ ಪ್ರಯುಕ್ತ ನಾನು ಹಾಗೂ ನನ್ನ ಗಂಡ, ಮಕ್ಕಳೊಂದಿಗೆ ದಿನಾಂಕ 01/10/2022 ರಂದು ಸಾಯಂಕಾಲ 06-00 ಗಂಟೆಯ ಸುಮಾರಿಗೆ ನಾನು ಯಾದಗಿರಿಗೆ ಬಂದೆನು. ನಂತರ ನನ್ನ ಮೈ ಮೇಲಿನ ಹಾಗೂ ಮನೆಯಲ್ಲಿಯ ಇತರ ಬಂಗಾರದ ಆಭರಣಗಳನ್ನು ಒಂದು ಪ್ಲಾಸಿಕ್ ಡಬ್ಬಾದಲ್ಲಿ ಹಾಕಿ ಅದನ್ನು ನನ್ನ ವೆನಿಟಿ ಬ್ಯಾಗದಲ್ಲಿ ಇಟ್ಟು ನನ್ನ ತಂದೆಯಾದ ಚಿಪ್ಪಾರ ರವರ ಡುಬ್ಲೆಕ್ಸ್ ಮನೆಯ ಬೆಡ್ ರೂಮಿನ ಟೇಬಲ್ ಮೇಲೆ ಇಟ್ಟಿದ್ದೆನು. ನಂತರ ದಿನಾಂಕ 03/10/2022 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ನನ್ನ ವೆನಿಟಿ ಬ್ಯಾಗದಲ್ಲಿ ಇದ್ದ ಬಂಗಾರದ ಆಭರಣಗಳನ್ನು ನೋಡಿ ಮನೆಯಲ್ಲಿ ಮಲಗಿಕೊಂಡೆನು. ದಿನಾಂಕ 04/10/2022 ರಂದು ಬೆಳಿಗ್ಗೆ ಆಯುಧಪೂಜೆ ಇದ್ದ ಕಾರಣ ನಾವೆಲ್ಲರೂ ನಮ್ಮ ವಾಹನಗಳಿಗೆ ಪೂಜೆ ಮಾಡುವ ಕಾರ್ಯದಲ್ಲಿ ಮನೆ ಹೊರಗಡೆ ಇದ್ದೆವು. ಪೂಜೆಯಾದ ನಂತರ ನಾನು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಖಚರ್ಿಗೆಂದು ಹಣ ತೆಗೆದುಕೊಳ್ಳಲು ನನ್ನ ವೆನಿಟಿ ಬ್ಯಾಗ್ ನೋಡಿದಾಗ ಅದರಲ್ಲಿ ಇದ್ದ ನನ್ನ ಬಂಗಾರದ ಆಭರಣಗಳಾದ 1] 50 ಗ್ರಾಂ. ಬಂಗಾರದ 4 ಬಳೆಗಳು, ಅ.ಕಿ 1,80,000/- ರೂ|| ಗಳು, 2] 20 ಗ್ರಾಂ. ಬಂಗಾರದ ಒಂದು ನೆಕ್ಲೆಸ್, ಅ.ಕಿ 90,000/- ರೂ|| ಗಳು, 3] 10 ಗ್ರಾಂ. ಬಂಗಾರದ ಒಂದು ಜೊತೆ ಕಿವಿಯೊಲೆಗಳು, ಅ.ಕಿ 45,000/- ರೂ|| ಗಳು, 4] 10 ಗ್ರಾಂ. ಬಂಗಾರದ ಒಂದು ಸುತ್ತುಂಗರ, ಅ.ಕಿ 45,000/- ರೂ|| ಗಳು, 5] ತಲಾ 5 ಗ್ರಾಂ. ಬಂಗಾರದ 02 ಸುತ್ತುಂಗರ, ಅ.ಕಿ 45,000/- ರೂ|| ಗಳು, 6] ಮಗುವಿನ, 20 ಗ್ರಾಂ. ಬಂಗಾರದ ಒಂದು ಚೈನ್, ಅ.ಕಿ 90,000/-ರೂ|| ಗಳು, 7] ಮಗುವಿನ, 10 ಗ್ರಾಂ. ಬಂಗಾರದ ಒಂದು ಬ್ರಾಸ್ಲೈಟ್, ಅ.ಕಿ 45,000/-ರೂ|| ಗಳು ಮತ್ತು 8] 15 ಗ್ರಾಂ. ಬಂಗಾರದ ಕರಮಣಿಯ ತಾಳಿ ಸರ, ಅ.ಕಿ 67,500/-ರೂ|| ಗಳು, ಹೀಗೆ ಒಟ್ಟು 6,52,500/- ರೂ|| ಕಿಮ್ಮತ್ತಿನ, 145 ಗ್ರಾಂ. ಬಂಗಾರದ ಆಭರಣಗಳು ಇರಲಿಲ್ಲ. ನಂತರ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಿಗಲಿಲ್ಲ. ನಮ್ಮ ಮನೆಯಲ್ಲಿ ನಾವು ಮನೆಯವರು ಹಾಗೂ ಕಳೆದ 05 ವರ್ಷಗಳಿಂದ ನಮ್ಮ ಮನೆ ಕೆಲಸ ಮಾಡುವ ಅಯ್ಯಮ್ಮ ಗಂಡ ಸಾಬಣ್ಣ ಕುರುಬರು ಸಾ|| ನಾಯ್ಕಲ್ ಇವರು ಮಾತ್ರ ಇದ್ದೆವು. ನಾವು ಆಯುಧ ಪೂಜೆಯ ದಿವಸ ಪೂಜಾ ಕಾರ್ಯಕ್ರಮದಲ್ಲಿ ತೊಡಗಿದಾಗ ಮನೆ ಕೆಲಸ ಮಾಡುವ ಅಯ್ಯಮ್ಮ ಮಾತ್ರ ಮನೆ ಬಾಗಿಲು ಹಾಕಿಕೊಂಡು ಮನೆ ಸ್ವಚ್ಚ ಮಾಡುತ್ತಿದ್ದಳು. ಆಕೆಯ ಮೇಲೆ ನಮಗೆ ಬಲವಾಗಿ ಅನುಮಾನ ಬಂದಿದ್ದು, ಈ ಬಂಗಾರದ ಆಭರಣಗಳು ಆಕೆಯೇ ಕಳ್ಳತನ ಮಾಡಿರುತ್ತಾಳೆ ಅಂತಾ ನಮಗೆ ಸಂಶಯ ಇರುತ್ತದೆ. ಮನೆಯಲ್ಲಿ ವಿಚಾರಣೆ ಮಾಡಿ ಇಂದು ತಡವಾಗಿ ದೂರು ನೀಡುತಿದ್ದು ಈ ಬಗ್ಗೆ ತಾವು ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲೆ ಠಾಣೆ ಗುನ್ನೆ ನಂ 110/2022 ಕಲಂ 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-

ಗುನ್ನೆ ನಂ: 44/2022 ಕಲಂ 279, 338, ಐ.ಪಿ.ಸಿ: ಇಂದು ದಿನಾಂಕ: 10/10/2022 ರಂದು 6 ಎ.ಎಮ್.ಕ್ಕೆ ಕಲಬುರಗಿಯ ಶ್ರೀ ಬಸವೇಶ್ವರ ಆಸ್ಪತ್ರೆಯಿಂದ ಸ್ವೀಕೃತವಾದ ಆರ್,ಟಿ.ಎ ಎಮ್.ಎಲ್.ಸಿ. ಮಾಹಿತಿ ಮೇರೆಗೆ ಶ್ರೀ ಶೇಕ್ ಹಜರತ್ ಎಚ್.ಸಿ-142 ರವರಿಗೆ ವಿಚಾರಣೆಗಾಗಿ ನೇಮಿಸಿ ಕಳಿಸಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿಕೊಟ್ಟಿದ್ದು, ಅಪಘಾತದಲ್ಲಿ ಗಾಯಗೊಂಡ ಗಾಯಾಳು ವಿಚಾರಣೆ ನಂತರ ಗಾಯಾಳು ಪಿಯರ್ಾದಿಯು ಗಾಯದ ಬಾಧೆಯಲ್ಲಿರುವುದರಿಂದ ಗಾಯಾಳುವಿನ ಮಗನಾದ ಪಿಯರ್ಾದಿ ಶ್ರೀ ವಿಶಾಲ್ ತಂದೆ ಬಸವರಾಜ ಅಣಿಕೇರಿ ವಯ;20 ವರ್ಷ, ಉ;ವಿದ್ಯಾಥರ್ಿ, ಜಾ;ಲಿಂಗಾಯತ್, ಸಾ;ವಾಡಿ, ತಾ;ಚಿತ್ತಾಪುರ, ಜಿ;ಕಲಬುರಗಿ ಇವರು ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ಫಿಯರ್ಾದಿಯನ್ನು ಕೊಟ್ಟಿದ್ದನ್ನು ಪಡೆದುಕೊಂಡು, ಮರಳಿ ಯಾದಗಿರಿ ಸಂಚಾರ ಪೊಲೀಸ್ ಠಾಣೆಗೆ 11-45 ಎ.ಎಂ.ಕ್ಕೆ ಬಂದು ಫಿಯರ್ಾದಿಯ ಅಸಲು ಹೇಳಿಕೆಯನ್ನು ಹಾಜರುಪಡಿಸಿದ್ದು, ಪಿಯರ್ಾದಿ ಹೇಳಿಕೆ ಸಾರಾಂಶವೇನೆಂದರೆ ನಾನು ವಿದ್ಯಾಬ್ಯಾಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನನ್ನ ತಂದೆಯಾದ ಬಸವರಾಜ ವಯ;52 ವರ್ಷ ಯಾದಗಿರಿಯ ಶಶಿ ಸುಪರ್ ಬಜಾರ್ ಶಾಪನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ದಿನಾಲು ವಾಡಿಯಿಂದ ಯಾದಗಿರಿಗೆ ಹೋಗಿ ಬರುವುದು ಮಾಡುತ್ತಾರೆ. ಹೀಗಿದ್ದು ದಿನಾಂಕ 07/10/2022 ರಂದು ಬೆಳಿಗ್ಗೆ ಸುಮಾರಿಗೆ ನನ್ನ ತಂದೆಯವರು ಎಂದಿನಂತೆ ವಾಡಿಯಿಂದ ಯಾದಗಿರಿಗೆ ತಮ್ಮ ಕೆಲಸಕ್ಕೆ ಹೋಗಿದ್ದು ಇರುತ್ತದೆ. ಅದೇ ದಿನ ರಾತ್ರಿ 10-30 ಪಿ.ಎಂ.ಕ್ಕೆ ನನ್ನ ತಂದೆಯ ಪೋನ್ನಿಂದ ನನ್ನ ಮೊಬೈಲ್ ನಂಬರಿಗೆ ವೆಂಕಟೇಶ ತಂದೆ ಸುಬಾಷ್ ರಾಠೋಡ ಸಾ;ವೆಂಕಟೇಶನಗರ ತಾಂಡ ಎಂಬುವರು ಕರೆ ಮಾಡಿ ತಿಳಿಸಿದ್ದೇನೆಂದರೆ ನಾನು ಯಾದಗಿರಿಯಿಂದ ನಮ್ಮ ವೆಂಕಟೇಶ ನಗರತಾಂಡಾಕ್ಕೆ ಮೋಠಾರು ಸೈಕಲ್ ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ-ವಾಡಿ ಅಲ್ಲಿಪುರ ಗ್ರಾಮದ ಸರಕಾರಿ ಹೈಸ್ಕೂಲ್ ಹತ್ತಿರ ಮುಖ್ಯ ರಸ್ತೆಯ ಮೇಲೆ ರಸ್ತೆ ಅಪಘಾತವಾಗಿದ್ದು ಕಂಡು ನನ್ನ ಮೊಟಾರು ಸೈಕಲ್ ನಿಲ್ಲಿಸಿ ನೋಡಲು ಸದರಿ ಅಪಘಾತದಲ್ಲಿ ಗಾಯಗೊಂಡ ವ್ಯಕಿಗೆ ವಿಚಾರಿಸಲಾಗಿ ತಾವು ಬಸವರಾಜ ತಂದೆ ವೀರಬಸಪ್ಪ ಅಣಿಕೇರಿ ಸಾ;ವಾಡಿ ಅಂತಾ ತಿಳಿಸಿದ್ದು ಅವರಿಗೆ ಘಟನೆ ಬಗ್ಗೆ ವಿಚಾರಿಸಿದಾಗ ಅವರು ತಿಳಿಸಿದ್ದೇನೆಂದರೆ ತಾವು ವಾಡಿಗೆ ಹೋಗಬೇಕೆಂದು ವಾಹನಕ್ಕಾಗಿ ಈ ಸ್ಥಳದಲ್ಲಿ ಕಾಯುತ್ತಾ ನಿಂತಿದ್ದಾಗ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲ್ ನೇದ್ದನ್ನು ಯಾದಗಿರಿ ಕಡೆಯಿಂದ ವಾಡಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ನನಗೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ, ಸದರಿ ಅಪಘಾತದಲ್ಲಿ ನನ್ನ ಎಡಗೈ ರಟ್ಟೆಗೆ, ಮೊಣಕೈಗೆ ಭಾರೀ ಗುಪ್ತಗಾಯವಾಗಿ ಮುರಿದಿರುತ್ತದೆ ನನಗೆ ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರನು ನನಗೆ ಡಿಕ್ಕಿ ಹೊಡೆದ ರಭಸಕ್ಕೆ ಮೋಟಾರು ಸೈಕಲ್ ಸಮೇತ ಬಿದ್ದಿದ್ದು ಆತನಿಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು, ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಿದ್ದಪ್ಪ ತಂದೆ ಸಾಬಣ್ಣ ಮುಂಡರಗಿ ಸಾ;ಹತ್ತಿಕುಣಿ ಅಂತಾ ತಿಳಿಸಿದ್ದು, ಆತನ ಮೋಟಾರು ಸೈಕಲ್ ನಂಬರ ಲೈಟಿನ ಬೆಳಕಿನಲ್ಲಿ ನೋಡಲಾಗಿ ನಂಬರ ಕೆಎ-33, ಇಬಿ-8811 ನೇದ್ದು ಇರುತ್ತದೆ. ಈ ಘಟನೆಯು ಈಗಷ್ಠೆ ರಾತ್ರಿ 10 ಪಿ.ಎಂ.ದ ಸುಮಾರಿಗೆ ಜರುಗಿರುತ್ತದೆ ಅಂತಾ ತಿಳಿಸಿರುತ್ತಾರೆ. ನಾನು ನೋಡಲಾಗಿ ಮೋಟಾರು ಸೈಕಲ್ ಸವಾರನಿಗೆ ಕೂಡ ಅಲ್ಲಲ್ಲಿ ತರಚಿದ ರಕ್ತಗಾಯ ಆಗಿರುತ್ತವೆ. ಆತನ ಮೋಟಾರು ಸೈಕಲ್ ನಂಬರ ಕೆಎ-33, ಇಬಿ-8811 ಘಟನಾ ಸ್ಥಳದಲ್ಲಿಯೇ ಇರುತ್ತದೆ ಆದ್ದರಿಂದ ನೀವು ಕೂಡಲೇ ಘಟನಾ ಸ್ಥಳಕ್ಕೆ ಬರ್ರೀ ಅಂದಾಗ ನಾನು ನನಗೆ ಬಂದ ವಿಷಯವನ್ನು ನನ್ನ ಸ್ನೇಹಿತನಾದ ಮುಸ್ತಫಾ ತಂದೆ ನಿಜಮಾಪಟೇಲ್ ಸಾ;ವಾಡಿ ಈತನಿಗೆ ಪೋನ್ ಮಾಡಿ ತಿಳಿಸಿ ನಡೀ ಘಟನಾ ಸ್ಥಳಕ್ಕೆ ಹೋಗೋಣ ಅಂದಾಗ ಆಯ್ತು ನಾನು ಬರ್ತೀನಿ ಬಾ ಅಂತಾ ಹೇಳಿದಾಗ ಇಬ್ಬರು ಸೇರಿಕೊಂಡು ಒಂದು ಖಾಸಗಿ ಆಟೋದಲ್ಲಿ ಅಲ್ಲಿಪುರ ಹೈಸ್ಕೂಲ್ ಶಾಲೆ ಹತ್ತಿರ ಬಂದು ನೋಡಲಾಗಿ ನನ್ನ ತಂದೆಗೆ ನೋಡಲಾಗಿ ನನಗೆ ಈ ಮೇಲೆ ವೆಂಕಟೇಶ ಇವರು ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಘಟನಾ ಸ್ತಳದಲ್ಲಿ ವೆಂಕಟೇಶ ಹಾಗೂ ಮೋಟಾರು ಸೈಕಲ್ ಸವಾರ ಸಿದ್ದಪ್ಪ ಇವರು ಹಾಜರಿದ್ದರು. ನಮ್ಮ ಆಟೋದಲ್ಲಿ ನನ್ನ ತಂದೆಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತೇವೆ. ಯಾದಗಿರಿ ಸಕರ್ಾರಿ ಆಸ್ಪತ್ರೆಯ ವೈದ್ಯರು ನನ್ನ ತಂದೆಗೆ ಉಪಚಾರ ನೀಡಿದ ನಂತರ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ಕರೆದುಕೊಂಡು ಹೋಗಲು ಸೂಚಿಸಿದ ಮೇರೆಗೆ ನಾನು ಆಸ್ಪತ್ರೆಗೆ ವಿಚಾರಣೆಗೆ ಬಂದಿದ್ದ ಯಾದಗಿರಿ ಸಂಚಾರಿ ಪೊಲೀಸರಿಗೆ ಘಟನೆಯ ವಿವರವಾದ ಮಾಹಿತಿ ಕೊಟ್ಟಿದ್ದು, ಸದ್ಯ ಈ ಘಟನೆ ಬಗ್ಗೆ ಕೇಸು ಮಾಡಬೇಡಿರಿ ನಮ್ಮ ಮನೆಯಲ್ಲಿ ಹಿರಿಯರೊಂದಿಗೆ ವಿಚಾರಿಸಿ ನಂತರ ಕೇಸು ದಾಖಲು ಮಾಡುತ್ತೇನೆ ಅಂತಾ ತಿಳಿಸಿರುತ್ತೇನೆ. ಹೀಗಿದ್ದು ದಿನಾಂಕ 08/10/2022 ರಂದು ನನ್ನ ತಂದೆಗೆ ಕಲಬುರಗಿಯ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಶ್ರೀ ಬಸವೆಶ್ವರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಇಂದು ದಿನಾಂಕ 10/10/2022 ರಂದು ನಮ್ಮ ಮನೆಯವರು ಈ ಘಟನೆ ಬಗ್ಗೆ ದೂರು ನೀಡಲು ತಿಳಿಸಿದ್ದರಿಂದ ಮತ್ತೆ ಎಮ್.ಎಲ್.ಸಿ ಮಾಡಿಸಿದ್ದು, ಇಂದು ತಡವಾಗಿ ದೂರು ನೀಡುತ್ತಿದ್ದು, ನನ್ನ ತಂದೆಗೆ ದಿನಾಂಕ 07/10/2022 ರಂದು ರಾತ್ರಿ 10 ಪಿ.ಎಂ.ಕ್ಕೆ ಅಪಘಾತಪಡಿಸಿ ಮೋಟಾರು ಸೈಕಲ್ ನಂ.ಕೆಎ-33, ಇಬಿ-8811 ನೇದ್ದರ ಸವಾರ ಸಿದ್ದಪ್ಪ ಈತನ ಮೇಲೆ ಕಾನೂನಿನ ಸೂಕ್ತ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 44/2022 ಕಲಂ: 279, 338 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 

 

ಶಹಾಪೂರ ಪೊಲೀಸ್ ಠಾಣೆ:-

ಗುನ್ನೆ ನಂ: 171/2022 ಕಲಂ ಕಲಂ 78 (3) ಕೆ.ಪಿ ಆಕ್ಟ್ : ಇಂದು ದಿನಾಂಕ 10/10/2022 ರಂದು, ರಾತ್ರಿ 20-45 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ರಾಹುಲ್ ಪವಾಡೆ ಶಹಾಪೂರ ಪೊಲೀಸ್ ಠಾಣೆ ಇವರು, ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿದರ ಸಾರಾಂಶವೆನೆಂದರೆ, ಇಂದು ದಿನಾಂಕ 10/10/2022 ರಂದು, ಸಾಯಂಕಾಲ 17-45 ಗಂಟೆಗೆ ಠಾಣೆಯಲ್ಲಿದ್ದಾಗ, ಶಹಾಪೂರ ಪಟ್ಟಣದ ಗಾಂಧಿ ಚೌಕ ಏರಿಯಾದಲ್ಲಿ, ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆದುಕೊಳ್ಳುತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ, ಫಿರ್ಯಾದಿಯವರು ಸರಕಾರಿ ಜೀಪ್ ನಂ ಕೆಎ-33-ಜಿ-0316 ರಲ್ಲಿ ಸಿಬ್ಬಂದಿಯವರಾದ ಶ್ರೀ ನಾರಾಯಣ ಹೆಚ್.ಸಿ 49, ಬಾಬು ಹೆಚ್.ಸಿ 162, ಭಾಗಣ್ಣ ಪಿ.ಸಿ 194, ಮಂಜುನಾಥ ಪಿ.ಸಿ 73, ಭೀಮನಗೌಡ ಪಿ.ಸಿ 402, ಸಿದ್ರಾಮಯ್ಯ ಪಿ.ಸಿ 258 ಹಾಗೂ ಜೀಪ್ ಚಾಲಕ ರುದ್ರಗೌಡ ಎ.ಪಿ.ಸಿ 34 ಮತ್ತು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ದಾಳಿ ಮಾಡಿ ಆರೋಪಿ ಮಹ್ಮದ ಹುಸೇನ್ ತಂದೆ ಚಾಂದಪಾಶಾ ವಯಸ್ಸು 25 ವರ್ಷ, ಜಾತಿ ಮುಸ್ಲಿಂ , ಉಃ ಮಟಕಾ ನಂಬರ ಬರೆದುಕೊಳ್ಳುವುದು. ಸಾಃ ಕಾಗಜಗರ ಮೊಹಲ್ಲಾ ಶಹಾಪೂರ ಈತನಿಗೆ ಹಿಡಿದು ಅವನ ಹತ್ತಿರವಿದ್ದ ನಗದು ಹಣ 8100-00 ರೂಪಾಯಿ. 2) ಒಂದು ಬಾಲ್ ಪೆನ್. ಅಂ.ಕಿ 00-00 3) ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಅಂ.ಕಿ 00-00. ನೇದ್ದವುಗಳನ್ನು ಸಾಯಂಕಾಲ 18-30 ಗಂಟೆಯಿಂದ 19-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 171/2022 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಇತ್ತೀಚಿನ ನವೀಕರಣ​ : 15-11-2022 10:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080