ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-12-2021

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 185/2021 ಕಲಂ: 160 ಐಪಿಸಿ : ಇಂದು ದಿನಾಂಕ:10/12/2021 ರಂದು 2 ಪಿ.ಎಂಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಚಿತ್ರಶೇಖರ್ ಪಿ.ಎಸ್.ಐ (ಕಾ.ಸು) ಸುರಪುರ ಪೊಲೀಸ್ ಠಾಣೆರವರು ಠಾಣೆಗೆ ಬಂದು ವರದಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ:09/12/2021 ರಂದು ರಾತ್ರಿ 7:30 ಪಿಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಮುಷ್ಠಳ್ಳಿ ಗ್ರಾಮದಲ್ಲಿ ಬಾಬುಜಗಜೀವನರಾವ್ ವೃತ್ತ ನಿಮರ್ಿಸುವ ವಿಷಯವಾಗಿ ಮೊದಲಿನಿಂದಲೂ ಮಾದಿಗ ಮತ್ತು ಹೊಲೆಯ ಜನಾಂಗದವರ ನಡುವೆ ತಕರಾರು ನಡೆದಿದ್ದು, ಇಂದು ಅದೇ ವಿಷಯವಾಗಿ ಎರಡೂ ಜನಾಂಗದವರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ಹಾಗೆ ಜಗಳ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ, ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶ್ರೀ ಸಾಯಬಣ್ಣ ಹೆಚ್ಸಿ-170, ಶ್ರೀ ಹೊನ್ನಪ್ಪ ಸಿಪಿಸಿ-427 ರವರನ್ನು ಕರೆದುಕೊಂಡು ಸುರಪುರ ಠಾಣೆಯ ಸರಕಾರಿ ಜೀಪ್ನಲ್ಲಿ ಠಾಣೆಯಿಂದ 7:45 ಪಿಎಮ್ಕ್ಕೆ ಹೊರಟು, 8:15 ಪಿಎಮ್ಕ್ಕೆ ಮುಷ್ಠಳ್ಳಿ ಗ್ರಾಮದ ಮರೆಮ್ಮ ದೇವಿಯ ಗುಡಿ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ನೋಡಲಾಗಿ, ಅಲ್ಲಿ ಎರಡೂ ಜನಾಂಗದವರು ಬಾಬುಜಗಜೀವನರಾವ್ ವೃತ್ತ ನಿಮರ್ಿಸುವ ವಿಷಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ಹಾಗೆ ಸುಮಾರು 10-15 ಜನರು ತಮ್ಮ ತಮ್ಮಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾಗ ನಮ್ಮ ಜೀಪನ್ನು ನೋಡಿ ಎಲ್ಲರು ಅಲ್ಲಿಂದ ಓಡಿ ಹೋದರು. ನಾನು ವಿಧಾನ ಪರಿಷತ್ ಚುನಾವಣೆಯ ನಿಮಿತ್ಯ ಬಂದೋಬಸ್ತ ಕರ್ತವ್ಯದಲ್ಲಿದ್ದುದರಿಂದ ಇಂದು ದಿನಾಂಕ: 10/12/2021 ರಂದು ಮದ್ಯಾಹ್ನ 2 ಗಂಟೆಗೆ ಈ ವರದಿ ಸಲ್ಲಿಸಿರುತ್ತೇನೆ. ಕಾರಣ ಸದರಿ 10-15 ಜನರ ವಿರುದ್ದ ಕಲಂ: 160 ಐಪಿಸಿ ಪ್ರಕಾರ ಕಾನೂನು ಕ್ರಮ ಜರುಗಿಸುವ ಕುರಿತು ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ್ 185/2021 ಕಲಂ 160 ಐಪಿಸಿ ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

 

ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ: 67/2021 ಕಲಂ: 379 ಐಪಿಸಿ : ಇಂದು ದಿನಾಂಕ 10/12/2021 ರಂದು 08:00 ಎ.ಎಂ ಕ್ಕೆ ಶ್ರೀ ಬೋಜಪ್ಪ ತಂದೆ ಬೀಕಪ್ಪ ರಾಠೋಡ ವ:60 ವರ್ಷ ಉ:ಒಕ್ಕಲುತ ಜಾ:ಹಿಂದು ಲಂಬಾಣಿ ಸಾ: ನಾರಾಯಣಪೂರ ಐಬಿ ತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರು ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ನಮ್ಮದು ನಾರಾಯಣಪೂರ ಗ್ರಾಮದಲ್ಲಿ ಗೋಪಾಲ ಕೃಷ್ಣಾ ಅಂತಾ ಒಂದು ಟೆಂಟಹೌಸ ಅಂಗಡಿಇದ್ದು ನಾವು ನಮ್ಮ ಟೆಂಟಿನ ಸಮಾನುಗಳನ್ನು ತಗೆದುಕೊಂಡು ಹೋಗುವ ಸಲುವಾಗಿ ಈಗ ಸುಮಾರು 5 ತಿಂಗಳುಗಳ ಹಿಂದೆ ಒಂದು ಅಶೋಕಾ ಲೈಲ್ಯಾಂಡ ಕಂಪನಿಯ ದೊಸ್ತ ಆರ್.ಎಲ್ ಎಸ್ ವಾಹನವನ್ನು ಖರಿದಿ ಮಾಡಿದ್ದು ಅದರ ನೊಂದಣಿ ಸಂಖ್ಯ ಕೆ.ಎ. 33 ಬಿ-2681 ಇರುತ್ತದೆ. ಈ ಗಾಡಿಯನ್ನು ದಿನಾಲು ನನ್ನ ಮಗನಾದ ಹೊನ್ನಪ್ಪನು ನಡಿಸುತ್ತಿದ್ದನು. ನಾವು ನಮ್ಮ ಗಾಡಿಯನ್ನು ದಿನಾಲು ನಮ್ಮ ಟೆಂಟ ಹೌಸ ಮುಂದೆ ನಿಲ್ಲಿಸುತ್ತಿದ್ದೇವು. ಎಂದಿನಂತೆ ನನ್ನ ಮಗ ಹೊನ್ನಪ್ಪನು ನಿನ್ನೆ ದಿನಾಂಕ 09/12/2021 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ನಮ್ಮ ಅಶೋಕಾ ಲೈಲ್ಯಾಂಡ ಕಂಪನಿಯ ದೊಸ್ತ ಆರ್.ಎಲ್ ಎಸ್ ವಾಹನ ನೊಂದಣಿ ಸಂಖ್ಯ ಕೆ.ಎ. 33 ಬಿ-2681 ನೇದ್ದನ್ನು ನಾರಾಯಣಪೂರದ ನಮ್ಮ ಗೋಪಾಲ ಕೃಷ್ಣಾ ಟೆಂಟಹೌಸ ಮುಂದಿನ ಜಾಗದಲ್ಲಿ ನಿಲ್ಲಿಸಿ ಮನೆಗೆ ಊಟಕ್ಕೆ ಬಂದಿದ್ದು ಇರುತ್ತದೆ. ನಂತರ ನನ್ನ ಮಗ ಹೊನ್ನಪ್ಪನು ರಾತ್ರಿ ಊಟ ಮಗಿಸಿಕೊಂಡು ಮಲಗಿಕೊಳ್ಳಲು ಅಂಗಡಿಗೆ ಹೋಗಿ ನಂತರ ರಾತ್ರಿ 10:30 ಪಿ.ಎಂ ಸುಮಾರಿಗೆ ನನ್ನ ಮಗ ಹೊನ್ನಪ್ಪನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ತಾನು ನಮ್ಮ ಅಂಗಡಿಯ ಮುಂದೆ ನಿಲ್ಲಿಸಿದ ಅಶೋಕಾ ಲೈಲ್ಯಾಂಡ ಕಂಪನಿಯ ದೊಸ್ತ ಆರ್.ಎಲ್ ಎಸ್ ವಾಹನ ನೊಂದಣಿ ಸಂಖ್ಯ ಕೆ.ಎ. 33 ಬಿ-2681 ನೇದ್ದು ನಮ್ಮ ಅಂಗಡಿಯ ಮುಂದೆ ಇರುವದಿಲ್ಲ ಅಂತಾ ತಿಳಿಸಿದನು ನಂತರ ನಾನು ಕೂಡಲೇ ನಮ್ಮ ಅಂಗಡಿಯ ಮುಂದೆ ಹೋಗಿ ನೊಡಿದ್ದು ಅಲ್ಲಿ ನಮ್ಮ ಅಂಗಡಿಯ ಮುಂದೆ ನಮ್ಮ ಗಾಡಿ ಇರಲಿಲ್ಲ ನಂತರ ನಾವು ನಮ್ಮ ಗಾಡಿಯನ್ನು ಇಲ್ಲೆ ಯಾರದಾರು ತಗೆದುಕೊಂಡು ಹೋಗಿರಬಹುದು ಅಂತಾ ತಿಳಿದುಕೊಂಡು ಹುಡುಕಾಡಿದ್ದು ನಮ್ಮ ಗಾಡಿಯು ಸಿಕ್ಕಿರುವದಿಲ್ಲ. ಆದ್ದರಿಂದ ನಮ್ಮ ಅಶೋಕಾ ಲೈಲ್ಯಾಂಡ ಕಂಪನಿಯ ದೊಸ್ತ ಆರ್.ಎಲ್ ಎಸ್ ವಾಹನ ನೊಂದಣಿ ಸಂಖ್ಯ ಕೆ.ಎ. 33 ಬಿ-2681 ನೇದ್ದನ್ನು ನಿನ್ನೆ ದಿನಾಂಕ 09/12/2021 ರಂದು ರಾತ್ರಿ 9:00 ಪಿ.ಎಂ ದಿಂದ 10:30 ಪಿ.ಎಂ ದ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ನನ್ನ ಗಾಡಿಯ ಬೆಲೆ ಅಂದಾಜು 4,50,000/- ರೂ ಇದ್ದು ಕಾರಣ ಕಳೆದುಹೋದ ನನ್ನ ಗಾಡಿಯನ್ನು ಹುಡುಕಿಕೊಡಲು ಮಾನ್ಯರಲ್ಲಿ ವಿನಂತಿ. ನೀಡಿದ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.67/2021 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 11-12-2021 11:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080