ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 11-12-2022


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 62/2022 ಕಲಂ 279, 304(ಎ) ಐ.ಪಿ.ಸಿ & 187 ಐ.ಎಮ್.ವಿ. ಆಕ್ಟ್: ಇಂದು ದಿನಾಂಕ: 10/12/2022  ರಂದು 10:00 ಎ.ಎಮ್.ಕ್ಕೆ ಫಿಯರ್ಾದಿ ಶ್ರೀ.ದೊಡ್ಡಪ್ಪಗೌಡ ತಂದೆ ಶಿವಣ್ಣಗೌಡ ದಿಡ್ಡಿಮನಿ, ವಯ:55 ವರ್ಷ, ಜಾತಿ:ಲಿಂಗಾಯತ, ಉ||ಒಕ್ಕಲುತನ, ಸಾ||ಅಬ್ಬೆತುಮಕೂರು, ತಾ||ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕಂಪ್ಯೂಟರ್ನಲ್ಲಿ ಟೈಪ್ ಮಾಡಿಸಿದ ದೂರು ಅಜರ್ಿ ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ:10/12/2022 ರಂದು ಬೆಳಗ್ಗೆ 6:30 ಗಂಟೆಯ ಸುಮಾರಿಗೆ ನನ್ನ ಮಗ ಬಾಪೂಗೌಡ ಮತ್ತು ನನ್ನ ಹೆಂಡತಿ ಕಮಲಮ್ಮ ಇಬ್ಬರು ಕೂಡಿಕೊಂಡು ನಮ್ಮ ಮೋಟರ್ ಸೈಕಲ್ ನಂ:ಕೆಎ-33 ಜೆ-1401 ರ ಮೇಲೆ ನನ್ನ ಹೆಂಡತಿಯ ತವರುಮನೆಯಾದ ಎಮ್.ಹೊಸಳ್ಳಿ ಗ್ರಾಮ ಹೋಗಿ ಹಾಲು ತೆಗೆದುಕೊಂಡು ಬರುತ್ತೇವೆ ಎಂದು ಹೇಳಿ ಹೋದರು. ಬೆಳಗ್ಗೆ 7:30 ಗಂಟೆಯ ಸುಮಾರಿಗೆ ಎಮ್.ಹೊಸಳ್ಳಿ ಗ್ರಾಮದ ನಮ್ಮ ಸಂಬಂಧಿಕರಾದ ಮಹೇಶಗೌಡ ತಂದೆ ಸಿದ್ದಲಿಂಗರೆಡ್ಡಿಗೌಡ ಮಾಲೀಪಾಟಿಲ್ ಇವರು ನನಗೆ ಫೋನ್ಮಾಡಿ ತಿಳಿಸಿದ್ದೇನೆಂದರೆ, ಈಗ 7:15 ಎ.ಎಮ್. ಸುಮಾರಿಗೆ ನಾನು ಮತ್ತು ನಮ್ಮೂರಿನ ಭೀಮರೆಡ್ಡಿಗೌಡ ತಂದೆ ಸಾಹೇಬಗೌಡ ಇಬ್ಬರು ಯಾದಗಿರಿಗೆ ಬರುವಾಗ ನವನಂದಿ ಶಾಲೆಯ ಹತ್ತಿರ ನಿಂತಿದ್ದಾಗ ಅದೇ ಸಮಯಕ್ಕೆ ಯಾದಗಿರಿ ಹೊಸಳ್ಳಿ ಕ್ರಾಸ್ ಕಡೆಯಿಂದ ಒಂದು ಮೋಟರ್ ಸೈಕಲ್ ಸವಾರನು ಎಮ್.ಹೊಸಳ್ಳಿ ಕಡೆಗೆ ಬರುತ್ತಿದ್ದಾಗ ಕೆ.ಇ.ಬಿ. ಎಸ್.ಎಸ್.ಎಸ್. ಆಫೀಸ್ ಹತ್ತಿರ ಎಮ್.ಹೊಸಳ್ಳಿ ಕಡೆಯಿಂದ ಯಾದಗಿರಿಗೆ ಹೊರಟಿದ್ದ ಒಂದು ಕ್ರೂಸರ್ ಜೀಪ್ ಚಾಲಕನು ತನ್ನ ವಾಹನವನ್ನು ಅತೀವೇಗದಿಂದ ಮತ್ತು ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ತನ್ನ ಎದುರಿಗೆ ಬರುತ್ತಿದ್ದ ಮೋಟರ್ ಸೈಕಲ್ಗೆ ನೇರವಾಗಿ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಅಪಘಾತದಲ್ಲಿ ಮೋಟರ್ ಸೈಕಲ್ ಸವಾರ ಹಾಗು ಹಿಂಬದಿ ಕುಳಿತಿದ್ದ ಒಬ್ಬ ಮಹಿಳೆ ಗಾಯಗೊಂಡು ಬಿದ್ದಾಗ ನಾವಿಬ್ಬರು ಓಡಿಹೋಗಿ ಹತ್ತಿರ ಹೋಗಿ ನೋಡಲಾಗಿ ಅಪಘಾತದಲ್ಲಿ ಗಾಯಗೊಂಡವರು ನಮ್ಮ ಸಂಬಂಧಿಕರಾದ  ಅಬ್ಬೆತುಮಕೂರು ಗ್ರಾಮದ ಕಮಲಮ್ಮ ಗಂಡ ದೊಡ್ಡಪ್ಪಗೌಡ ದಿಡ್ಡಿಮನಿ ಮತ್ತು ಅಕೆಯ ಮಗನಾದ ಬಾಪೂಗೌಡ ತಂದೆ ದೊಡ್ಡಪ್ಪಗೌಡ ದಿಡ್ಡಿಮನಿ ಇದ್ದು, ಅಪಘಾತಪಡಿಸಿದ ಕ್ರೂಸರ್ ಜೀಪ್ ವಾಹನ ಚಾಲಕನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ನಮಗೆ ನೋಡಿ ವಾಹನದೊಂದಿಗೆ ಓಡಿಹೋದ್ದು, ಆತನಿಗೆ ಮತ್ತು ವಾಹನವನ್ನು ಮತ್ತೆ ನೋಡಿದರೆ ಗುರುತಿಸುತ್ತೇವೆ. ಅಪಘಾತದಲ್ಲಿ ಕಮಲಮ್ಮಳಿಗೆ ಗಂಭೀರಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬಾಪೂಗೌಡನಿಗೆ ಸಹ ಗಂಭೀರ ಗಾಯಗಳಾಗಿದ್ದು, ಅವರಿಬ್ಬರಿಗೆ 108 ಅಂಬುಲೆನ್ಸ್ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ತಿಳಿಸಿದ ಕೂಡಲೇ ನಾನು ಮತ್ತು ನನ್ನ ಮಗನಾದ ಸಾಹೇಬಗೌಡ ಇಬ್ಬರು ಕೂಡಿಕೊಂಡು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತಂದಿದ್ದ ನನ್ನ ಮಗ ಬಾಪೂಗೌಡ ಈತನು ಚಿಕಿತ್ಸೆ ಫಲಕಾರಿಯಾಗದೇ 7:50 ಎ.ಎಮ್.ಕ್ಕೆ ಮೃತಪಟ್ಟಿರುತ್ತಾನೆ ಎಂದು ಗೊತ್ತಾಗಿದ್ದು, ಬಾಪೂಗೌಡನಿಗೆ ನೋಡಲಾಗಿ ಬಲಗಡೆ ತಲೆಗೆ, ಬಲ ಕಪಾಳಕ್ಕೆ ಭಾರಿರಕ್ತಗಾಯಗಳಾಗಿದ್ದು, ಎಡಕಣ್ಣಿ ಗುಪ್ತಗಾಯವಾಗಿದ್ದು, ಬಲಗಡೆ ಎದೆಗೆ, ಎರಡೂ ಕಾಲುಗಳಿಗೆ ಅಲ್ಲಲ್ಲಿ ತರುಚಿದ ಗಾಯಗಳಾಗಿರುತ್ತವೆ. ನನ್ನ ಹೆಂಡತಿ ಮೃತ ಕಮಲಮ್ಮಳಿಗೆ ನೋಡಲಾಗಿ ತಲೆಯ ಹಿಂಭಾಗಕ್ಕೆ ಭಾರಿ ಗುಪ್ತಗಾಯವಾಗಿ ಕಿವಿಗಳಿಂದ ಮತ್ತು ಮೂಗಿನಿಂದ ರಕ್ತಸ್ರಾವವಾಗಿದ್ದು, ಬಲಕೈ ಮೊಳಕೈ ಹತ್ತಿರ ಮತ್ತು ಎಡಕಾಲಿನ ಪಾದದ ಮೇಲೆ ಭಾರಿ ರಕ್ತಗಾಯಗಳಾಗಿರುತ್ತವೆ. ಅಲ್ಲಿಯೇ ಇದ್ದ ಮಹೇಶಗೌಡ ಮತ್ತು ಭೀಮರೆಡ್ಡಿ ಇವರಿಗೆ ವಿಚಾರಿಸಲಾಗಿ ಘಟನೆಯ ಬಗ್ಗೆ ಈ ಮೊದಲು ಫೋನಿನಲ್ಲಿ ಹೇಳಿದಂತೆ ತಿಳಿಸಿದರು. ಕಾರಣ ಇಂದು ದಿನಾಂಕ:10/12/2022 ರಂದು ಬೆಳಗ್ಗೆ 7:15 ಗಂಟೆಯ ಸುಮಾರಿಗೆ ನನ್ನ ಮಗ ಬಾಪೂಗೌಡ ಮತ್ತು ನನ್ನ ಹೆಂಡತಿ ಕಮಲಮ್ಮ ಇಬ್ಬರು ಕೂಡಿಕೊಂಡು ನಮ್ಮ ಮೋಟರ್ ಸೈಕಲ್ ನಂ:ಕೆಎ-33 ಜೆ-1401 ರ ಮೇಲೆ ಯಾದಗಿರಿ-ಎಮ್.ಹೊಸಳ್ಳಿ ರಸ್ತೆಯ ಮೇಲೆ ಎಮ್.ಹೊಸಳ್ಳಿ ಗ್ರಾಮಕ್ಕೆ ಹೋಗುವಾಗ ಯಾದಗಿರಿ ನಗರದ ಕೆ.ಇ.ಬಿ. ಎಮ್.ಎಸ್.ಎಸ್. ಆಫೀಸ್ ಹತ್ತಿರ ಯಾವುದೋ ಕ್ರೂಸರ್ ಜೀಪ್ ವಾಹನದ ಚಾಲಕನು ಎಮ್.ಹೊಸಳ್ಳಿ ಕಡೆಯಿಂದ ತನ್ನ ವಾಹನವನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಮಗನ ಮೋಟರ್ ಸೈಕಲ್ಗೆ ಡಿಕ್ಕಿಹೊಡೆದು ಅಪಘಾತಪಡಿಸಿ ಓಡಿಹೋಗಿದ್ದು, ಅಪಘಾತದಲ್ಲಿ ನನ್ನ ಮಗ ಬಾಪೂಗೌಡ ಮತ್ತು ನನ್ನ ಹೆಂಡತಿ ಕಮಲಮ್ಮ ಇಬ್ಬರು ಭಾರಿರಕ್ತಗಾಯ ಹಾಗು ಗುಪ್ತಗಾಯಗೊಂಡು ಮೃತಪಟ್ಟಿದ್ದು, ಅಪಘಾತಪಡಿಸಿ ಓಡಿಹೋದ ಕ್ರೂಸರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಯಾದಗಿರಿ ಸಂಚಾರ ಠಾಣೆ ಗುನ್ನೆ ನಂಬರ 62/2022 ಕಲಂ: 279, 304(ಎ) ಐ.ಪಿ.ಸಿ & 187 ಐ.ಎಮ್.ವಿ. ಆಕ್ಟ ಅಡಿಯಲ್ಲಿ  ಪ್ರಕರಣ ದಾಖಲು ಮಾಡಿಕೊಂಡು  ತನಿಖೆ ಕೈ ಕೊಂಡೆನು.


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 63/2022  ಕಲಂ 279, 338  ಐಪಿಸಿ: ಇಂದು ದಿನಾಂಕ 10/12/2022 ರಂದು 5-15 ಪಿ.ಎಂ.ಕ್ಕೆ  ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ  ಪೋನ್ ಮೂಲಕ ಆರ್.ಟಿ.ಎ ಎಮ್.ಎಲ್.ಸಿ ಇರುತ್ತದೆ ಅಂತಾ ತಿಳಿಸಿದ್ದರಿಂದ ಎಮ್.ಎಲ್.ಸಿ ವಿಚಾರಣೆಗೆ ಶ್ರೀ ಬಸ್ಸಣ್ಣ ಎಚ್.ಸಿ-43 ರವರಿಗೆ ನೇಮಿಸಿ ಕಳಿಸಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ವಿಚಾರಣೆಯ ನಂತರ, ಗಾಯಾಳುವಿನ ಹೆಂಡತಿಯಾದ ಪಿಯರ್ಾದಿ ಶ್ರೀಮತಿ  ಹೊನ್ನಮ್ಮ ಗಂಡ ಹೊನ್ನಪ್ಪ ಗೌಡಗೇರಿ ವಯ;38 ವರ್ಷ, ಜಾ;ಕುರಬರ, ಉ;ಕೂಲಿ, ಸಾ;ಗೌಡಗೇರಿ, ಹಾ;ವ;ಗಂಜ್ ಏರಿಯಾ, ಯಾದಗಿರಿ, ತಾ;ಜಿ;ಯಾದಗಿರಿ  ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದರ ಅಸಲು ಪ್ರತಿಯನ್ನು ನನಗೆ ಸಾಯಂಕಾಲ 7 ಪಿ.ಎಂ.ಕ್ಕೆ ಠಾಣೆಗೆ ಬಂದು ತಂದು ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಮ್ಮುರಾದ ಗೌಡಗೇರಿಯಿಂದ ಸುಮಾರು 4-5 ವರ್ಷಗಳ ಹಿಂದೆ ಬಿಟ್ಟು ಬಂದು ಯಾದಗಿರಿಯ ಗಂಜ್ ಏರಿಯಾದಲ್ಲಿ ಬಂದು ನನ್ನ ಗಂಡ ಹೊನ್ನಪ್ಪ ವಯ;42 ವರ್ಷ ಹಾಗೂ ನಾನು  ಕೂಲಿ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಇಲ್ಲಿಯೇ ನೆಲಸಿರುತ್ತೇವೆ. ಇಂದು ದಿನಾಂಕ 10/12/2022 ರಂದು ಎಂದಿನಂತೆ ನನ್ನ ಗಂಡನು ತನ್ನ ಮೋಟಾರು ಸೈಕಲ್ ನಂಬರ ಕೆಎ-02, ಜೆ.ಎನ್-4604 ನೇದ್ದನ್ನು ನಡೆಸಿಕೊಂಡು ತನ್ನ ಕೆಲಸಕ್ಕೆ ಹೋಗಿರುತ್ತಾನೆ.  ಹೀಗಿದ್ದು ಇಂದು ದಿನಾಂಕ 10/12/2022 ರಂದು ಸಾಯಂಕಾಲ 4-30 ಪಿ.ಎಂ. ದ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಹತ್ತಿಕುಣಿ ಗ್ರಾಮದ ನಮ್ಮ ಸಂಬಂಧಿಯಾದ  ಹಣಮಂತ ತಂದೆ ಸಾಬಣ್ಣ ರಾಮಚಂದ್ರ ಈತನು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ಇಂದು ಸಾಯಂಕಾಲ  ಸಮಯ ಅಂದಾಜು 04-10 ಪಿ.ಎಂ.ದ ಸುಮಾರಿಗೆ ನನ್ನ ವಯಕ್ತಿಕ ಕೆಲಸದ ಮೇಲೆ ಯಾದಗಿರಿ ನಗರದ ಎಲ್.ಐ ಸಿ ಕಛೇರಿಯ ಮುಂದೆ  ರಸ್ತೆ ಬದಿಯಲ್ಲಿ ನಿಂತಿದ್ದಾಗ ನಾನು ನೋಡು ನೋಡುತ್ತಿದ್ದಂತೆ  ಆಟೋ ನಂಬರ ಕೆಎ-33, ಎ-5631 ನೇದ್ದರ ಚಾಲಕನು ತನ್ನ ಆಟೋವನ್ನು ಯಾದಗಿರಿಯ ಹೊಸ ಬಸ್ ನಿಲ್ದಾಣದ ಕಡೆಯಿಂದ  ಶಾಸ್ತ್ರೀ ವೃತ್ತದ ರಸ್ತೆ ಕಡೆಗೆ ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಆಟೋವನ್ನು ಓಡಿಸಿಕೊಂಡು ಬರುತ್ತಿದ್ದಾಗ ಅದೇ ಸಮಯಕ್ಕೆ ನಿನ್ನ  ಗಂಡನಾದ ಹೊನ್ನಪ್ಪನು ತನ್ನ ಮೊಟಾರು ಸೈಕಲ್ ನಂಬರ ಕೆಎ-02, ಜೆ.ಎನ್-4604 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಶಾಸ್ತ್ರೀ ವೃತ್ತದ ಕಡೆಯಿಂದ ಬರುತ್ತಾ  ಒಮ್ಮೊಲೆ ರಸ್ತೆ ಮಾರ್ಗವನ್ನು ಬದಲಿಸಿ ಬಲಬದಿಯ ರಸ್ತೆ ಕಡೆಗೆ ಆಟೋ ನೇದ್ದಕ್ಕೆ ಅಡ್ಡವಾಗಿ ಹೋದಾಗ ಆಗ ಎರಡು ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿ ಅಪಘಾತ ಆಗಿರುತ್ತವೆ. ನಾನು ಓಡೋಡಿ ಹತ್ತಿರ ಹೋಗಿ ನೋಡಲಾಗಿ ಸದರಿ ಅಪಘಾತದಲ್ಲಿ ನಿನ್ನ ಗಂಡನಿಗೆ ತಲೆಯ ಹಿಂಭಾಗಕ್ಕೆ ಭಾರೀ ರಕ್ತಗಾಯ, ಬಲಮೊಣಕಾಲಿಗೆ ಭಾರೀ ರಕ್ತಗಾಯವಾಗಿರುತ್ತವೆ, ಮತ್ತು ಆಟೋದಲ್ಲಿ ಇಬ್ಬರು ಹುಡುಗರಿಗೆ ವಿಚಾರಿಸಿದ್ದು  ಗಾಲೆಪ್ಪ ತಂದೆ ಭೀಮರಾಯ ದಾಸರ ಸಾ;ಮುಂಡರಗಿ ಹಾಗೂ ಮಣಿಕಂಠ ತಂದೆ ನಿಂಗಪ್ಪ ಕಲಾಲ್ ಸಾ;ಮಳ್ಳಳ್ಳಿ ಇವರುಗಳಿಗೆ ಸಣ್ಣ-ಪುಟ್ಟ ತರಚಿದ ಗಾಯಗಳಾಗಿರುತ್ತವೆ. ನೀವು ಕೂಡಲೇ ಘಟನಾ ಸ್ಥಳಕ್ಕೆ ಬರ್ರೀ ಅಂತಾ ತಿಳಿಸಿದಾಗ ನನಗೆ ಗಾಬರಿಯಾಗಿ ನನ್ನ ಗಂಡನ ಅಣ್ಣನಾದ ಮಲ್ಲಿಕಾಜರ್ುನ ಇವರಿಗೆ ನನಗೆ ಬಂದ ಮಾಹಿತಿಯನ್ನು ತಿಳಿಸಿದಾಗ ನಡೀರಿ ಹೋಗೋಣ ಅಂತಾ ನನಗೆ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನು ಅರೆ ಪ್ರಜ್ಞಾವಸ್ಥೆಯಲ್ಲಿದ್ದು, ಸ್ಥಳದಲ್ಲಿ ಹಾಜರಿದ್ದ ಹಣಮಂತ ಇವರಿಗೆ ವಿಚಾರಿಸಲು ಈ ಮೇಲೆ ಪೋನಿನಲ್ಲಿ ಹೇಳಿದಂತೆ ಘಟನೆ ಜರುಗಿರುತ್ತದೆ. ಆಟೋ ಚಾಲಕನು ಘಟನಾ ಸ್ಥಳದಲ್ಲಿ ಹಾಜರಿದ್ದು ಆತನ ಹೆಸೆರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಾಬಣ್ಣ ತಂದೆ ಬಸ್ಸಪ್ಪ ಪೂಜಾರಿ ಸಾ;ಮರಮಕಲ್ ಅಂತಾ ತಿಳಿಸಿರುತ್ತಾನೆ. ಆಗ ನಾವುಗಳು ನನ್ನ ಗಂಡನಿಗೆ ಉಪಚಾರಕ್ಕಾಗಿ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು  ಸೇರಿಕೆ ಮಾಡಿರುತ್ತೇವೆ. ಆಟೋದಲ್ಲಿದ್ದ ಗಾಯಾಳುಗಳಾದ ಗಾಲೆಪ್ಪ ಮತ್ತು ಮಣಿಕಂಠ ಎಂಬುವರು ತಮಗೆ ಅಷ್ಟೇನು ಗಾಯಗಳು ಆಗದ ಕಾರಣ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಬರುವುದಿಲ್ಲವೆಂದು ತಿಳಿಸಿರುತ್ತಾರೆ. ಆಟೋ ಚಾಲಕ ಸಾಬಣ್ಣನಿಗೆ ಯಾವುದೇ ಗಾಯ, ವಗೈರೆ ಕಂಡು ಬಂದಿರುವುದಿಲ್ಲ. ಹೀಗಿದ್ದು ಇಂದು ದಿನಾಂಕ 10/12/2022 ರಂದು ಸಾಯಂಕಾಲ 4-10 ಪಿ.ಎಂ.ಕ್ಕೆ ಯಾದಗಿರಿ ನಗರದ ಎಲ್.ಐ ಸಿ ಕಛೇರಿಯ ಮುಂದೆ ಮುಖ್ಯ ರಸ್ತೆಯ ಮೇಲೆ ಆಟೋ ನಂಬರ ಕೆಎ-33, ಎ-5631 ನೇದ್ದರ ಚಾಲಕ ಸಾಬಣ್ಣನು ಮತ್ತು ನನ್ನ  ಗಂಡನಾದ ಹೊನ್ನಪ್ಪನು ತನ್ನ ಮೋಟಾರು ಸೈಕಲ್ ನಂ.ಕೆಎ-02, ಜೆ.ಎನ್-4604 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿದ್ದರಿಂದ ಈ ಘಟನೆ ಜರುಗಿದ್ದು, ಅವರಿಬ್ಬರ ಮೇಲೆ ಕಾನೂನಿನ ಸೂಕ್ತ  ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿಯ  ಹೇಳಿಕೆ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ  63/2022 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು  ತನಿಖೆ ಕೈ ಕೊಂಡೆನು.   

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 162/2022 ಕಲಂ 379 ಐಪಿಸಿ: ಇಂದು ದಿನಾಂಕ:10/12/2022 ರಂದು 1.00 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಫಿಯರ್ಾದಿ ಶ್ರೀ ಅಬ್ಬು ತೋರಾಬ್ ತಂದೆ ಅಬ್ದುಲ ಖದೀರ ಸಾ|| ಶಾಂತಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಾನು ಸುಮಾರು 4 ವರ್ಷಗಳಿಂದ ಅಧಾನಿ ಸೋಲಾರ್ ಪ್ಲಾಂಟ್ ಸತ್ಯಂಪೇಠ ನಲ್ಲಿ ಅಸೋಸಿಯೆಟ್ ಇಂಜಿನಿಯರ್ ಅಂತ ಕೆಲಸ ಮಾಡಿಕೊಂಡು ಇರುತ್ತೇನೆ. ಸೋಲಾರ್ ಪ್ಲಾಂಟಿನಲ್ಲಿ ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಆಗಿ ಮೊಹಮ್ಮದ ಮನ್ಸೂರ, ಲಿಂಗರಾಜ ನಾಯಕ ಇವರು ಕೆಲಸ ಮಾಡುತ್ತಾರೆ. ಸೆಕ್ಯುರಿಟಿ ಗಾರ್ಡ ಆಗಿ ಮಹಾದೇವ ತಂದೆ ಅಜ್ಜಪ್ಪ, ರಾಜಶೇಖರ ತಂದೆ ದೊಡ್ಡಪ್ಪ ಇವರು ಕೆಲಸ ಮಾಡುತ್ತಾರೆ. ಹೀಗಿದ್ದು ದಿನಾಂಕ: 27/11/2022 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಮೊಹಮ್ಮದ ಮನ್ಸೂರ ಈತನು ನನಗೆ ಫೋನ್ ಮಾಡಿ ನಾನು ಸೋಲಾರ್ ಪ್ಲಾಂಟಿನಲ್ಲಿ ಸೋಲಾರ್ಗಳಿಗೆ ಅಳವಡಿಸಿದ ಇನವೆರ್ಟರ್ ಚೆಕ್ ಮಾಡುತ್ತಾ ಪ್ಲಾಂಟನಲ್ಲಿ ತಿರುಗಾಡುತ್ತಿರುವಾಗ ಬ್ಲಾಕ್-2 ದಲ್ಲಿ ಹೋದಾಗ ಇನ್ವರ್ಟರ್ ನಂ. 79, 80, 113 ರಲ್ಲಿ ಅಳವಡಿಸಿದ ಡಿಸಿ ಕಾಪರ್ ಕೇಬಲ್ ಕಟ್ಟಾಗಿ ಕಳುವಾಗಿದ್ದು ಕಂಡು ಬಂದಿರುತ್ತದೆ ಅಂತ ಫೋನ್ ಮಾಡಿ ತಿಳಿಸಿದನು. ನಾನು ಕೂಡಲೆ ಸ್ಥಳಕ್ಕೆ ಹೋಗಿ ನೋಡಲಾಗಿ ಈ ಮೇಲಿನಂತೆ ಇನ್ವರ್ಟರಗೆ ಅಳವಡಿಸಿದ ಡಿಸಿ ಕಾಪರ್ ಕೇಬಲ್ ವೈರನ್ನು ಯಾರೋ ವ್ಯಕ್ತಿಗಳು ಕತ್ತರಿಸಿಕೊಂಡು ಅಂದಾಜು 1350 ಮೀಟರ್ ಕೇಬಲ್ ಅ.ಕಿ 51,300=00 ರೂ. ನೇದ್ದನ್ನು ದಿನಾಂಕ: 26/11/2022 ರ ರಾತ್ರಿ 11 ಗಂಟೆಯಿಂದ ದಿನಾಂಕ: 27/11/2022 ರ ಬೆಳಿಗ್ಗೆ 6 ಗಂಟೆಯ ಮದ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ವಿಷಯವನ್ನು ನಮ್ಮ ಮ್ಯಾನೇಜರ ರವರಿಗೆ ತಿಳಿಸಿದ್ದು, ನಂತರ ನೋಡೋಣ ಇರಲಿ ಅಂತ ಹೇಳಿ ನಾನು ಮೇಲೆ ಹೆಡ್ ಆಫೀಸ್ಗೆ ಮಾತನಾಡಿ ನಿಮಗೆ ತಿಳಿಸುತ್ತೇನೆ ಅಂತ ತಿಳಿಸಿದರು. ನಂತರ ನಾವು ಅವರು ನಮಗೆ ಮತ್ತೆ ಫೋನ್ ಮಾಡುತ್ತಾರೆ ಅಂತ ಸುಮ್ಮನಿದ್ದೆವು. ನಂತರ ದಿನಾಂಕ: 05/12/2022 ರಂದು ಬೆಳಿಗ್ಗೆ ನಾನು 7 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ನಮ್ಮ ಎಲೆಕ್ಟ್ರಿಕಲ್ ಟೆಕ್ನಿಷಿಯನ್ ಲಿಂಗರಾಜ ನಾಯಕ ಈತನು ನನಗೆ ಫೋನ್ ಮಾಡಿ ನಾನು ಸೋಲಾರ್ ಪ್ಲಾಂಟಿನಲ್ಲಿ ಸೋಲಾರ್ಗಳಿಗೆ ಅಳವಡಿಸಿದ ಇನವೆರ್ಟರ್ ಚೆಕ್ ಮಾಡುತ್ತಾ ಪ್ಲಾಂಟನಲ್ಲಿ ತಿರುಗಾಡುತ್ತಿರುವಾಗ ಬ್ಲಾಕ್-2 ದಲ್ಲಿ ಹೋದಾಗ ಇನ್ವರ್ಟರ್ ನಂ. 40 ರಲ್ಲಿ ಅಳವಡಿಸಿದ ಡಿಸಿ ಕಾಪರ್ ಕೇಬಲ್ ಕಟ್ಟಾಗಿ ಕಳುವಾಗಿದ್ದು ಕಂಡು ಬಂದಿರುತ್ತದೆ ಅಂತ ಫೋನ್ ಮಾಡಿ ತಿಳಿಸಿದನು. ನಾನು ಕೂಡಲೆ ಸ್ಥಳಕ್ಕೆ ಹೋಗಿ ನೋಡಲಾಗಿ ಈ ಮೇಲಿನಂತೆ ಇನ್ವರ್ಟರಗೆ ಅಳವಡಿಸಿದ ಡಿಸಿ ಕಾಪರ್ ಕೇಬಲ್ ವೈರನ್ನು ಯಾರೋ ವ್ಯಕ್ತಿಗಳು ಕತ್ತರಿಸಿಕೊಂಡು ಅಂದಾಜು 160 ಮೀಟರ್ ಕೇಬಲ್ ಅ.ಕಿ 6,080=00 ರೂ. ನೇದ್ದನ್ನು ದಿನಾಂಕ: 04/12/2022 ರ ರಾತ್ರಿ 11 ಗಂಟೆಯಿಂದ ದಿನಾಂಕ: 05/12/2022 ರ ಬೆಳಿಗ್ಗೆ 6 ಗಂಟೆಯ ಮದ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ವಿಷಯವನ್ನು ನಮ್ಮ ಮ್ಯಾನೇಜರ ರವರಿಗೆ ತಿಳಿಸಿದೆವು. ನಮ್ಮ ಮ್ಯಾನೇಜರ ರವರು ಪದೇ ಪದೇ ಸೋಲಾರ್ ಪ್ಲಾಂಟಿನಲ್ಲಿ ಕಾಪರ್ ವೈರುಗಳು ಕಳ್ಳತನ ಆಗುತ್ತಿದ್ದು, ನಾನು ಮೇಲೆ ಹೆಡ್ ಆಫೀಸ್ಗೆ ಮಾತನಾಡಿ ನಿಮಗೆ ತಿಳಿಸುತ್ತೇನೆ ಅಂತ ತಿಳಿಸಿದರು. ಹೀಗಿದ್ದು ನಮ್ಮ ಮ್ಯಾನೇಜರ ರವರು ಫೋನ್ ಮಾಡಿ ಠಾಣೆಗೆ ಹೋಗಿ ದೂರು ದಾಖಲಿಸಿರಿ ಅಂತ ತಿಳಿಸಿದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ನಮ್ಮ ಸೋಲಾರ್ ಪ್ಲಾಂಟನಲ್ಲಿ ಒಟ್ಟು 1510 ಮೀಟರ್ ಅ.ಕಿ 57380=00 ರೂ ಕಿಮ್ಮತ್ತು ಉಳ್ಳ ಇನ್ವರ್ಟರಗೆ ಅಳವಡಿಸಿದ ಡಿಸಿ ಕಾಪರ್ ಕೇಬಲ್ ವೈರನ್ನು ಯಾರೋ ಕಳ್ಳರು ಈ ಮೇಲಿನಂತೆ ದಿನಾಂಕಗಳ ಮದ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 162/2022 ಕಲಂ: 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 207/2022 ಕಲಂ  379, 420 ಐ.ಪಿ.ಸಿ: ಇಂದು ದಿನಾಂಕ 10/12/2022 ರಂದು ರಾತ್ರಿ 21-30 ಗಂಟೆಗೆ ಫಿಯರ್ಾದಿ ಶ್ರೀ ಬಸವರಾಜ ಬಿರಾದಾರ ಪಾಟೀಲ್ ಸಾಃ ಬಾಪುಗೌಡ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ,  ನಾನು 2018 ನೇ ಸಾಲಿನಲ್ಲಿ ಸುಂದರಂ ಫೈನಾನ್ಸ್ ಶಹಾಪೂರದಲ್ಲಿ ಸಾಲ ಪಡೆದು 10 ಟೈರ್ನ  ಒಂದು ಭಾರತ್  ಬೆಂಜ್ ಟಿಪ್ಪರ್ ನಂಬರ ಕೆಎ-33-ಎ-8522 ನೇದ್ದನ್ನು ಖರೀದಿ ಮಾಡಿದ್ದೆನು. ಖರೀದಿ ಮಾಡಿದಾಗಿನಿಂದ ನನಗೆ ಪರಿಚಯವಿದ್ದ ಬಂದಗಿಸಾಬ ತಂದೆ ಮೌಲಾಲಿ, ವಯಸ್ಸು 32 ವರ್ಷ, ಜಾತಿ ಮುಸ್ಲಿಂ ಉಃ ಡ್ರೈವರ್ ಕೆಲಸ ಸಾಃ ಹುಣಸಿಹಾಳ ತಾಃ ಸಿಂದಗಿ, ಜಿಃ ವಿಜಯಪೂರ ಈತನು ಡ್ರೈವರ್ ಕೆಲಸ ಮಾಡಿಕೊಂಡಿದ್ದನು.
       2021 ನೇ ಸಾಲಿನಲ್ಲಿ ಶಹಾಪೂರ ಪಟ್ಟಣದ ಗಣೇಶ ನಗರದಲ್ಲಿರುವ ರಾಘವೇಂದ್ರ ಕುಲಕಣರ್ಿ ಇವರ ಮನೆಯಲ್ಲಿ ಬಾಡಿಗೆ ಇದ್ದ ಕಾಲಕ್ಕೆ  ದಿನಾಂಕ 08/09/2021 ರಂದು, ಭಾರತ್ ಬೆಂಜ್ ಟಿಪ್ಪರ ನಂಬರ ಕೆಎ-33-ಎ-8522 ನೇದ್ದನ್ನು ಶ್ರೀ ರಾಘವೇಂದ್ರ ಕುಲಕಣರ್ಿ ಇವರ ಮನೆಯ ಮುಂದೆ ನಿಲ್ಲಿಸಿದಾಗ ರಾತ್ರಿ 11-00 ಗಂಟೆಯಿಂದ ದಿನಾಂಕ 09/09/2021 ರಂದು ಬೆಳಗಿನ ಜಾವ 05-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ವ್ಯಕ್ತಿಗಳು ನನ್ನ ಮಾಲೀಕತ್ವದಲ್ಲಿರುವ ಟಿಪ್ಪರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ಮತ್ತು ನನ್ನ ತಂದೆ ಹಾಗೂ ಟಿಪ್ಪರ್ ಚಾಲಕ ರವರೆಲ್ಲರೂ ಸೇರಿ ಟಿಪ್ಪರ್ ಹುಡಕಾಡಿದ್ದು ಸಿಕ್ಕಿರುವುದಿಲ್ಲ. ಜಿ.ಪಿ.ಎಸ್ ಲೋಕೇಷನ್ ಆಧಾರದ ಮೇಲೆ ಪ್ರಯತ್ನ ಮಾಡಿ ಹುಡಕಾಡಲಾಗಿ ಅದು ಬೆಂಗಳೂರ ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿರುವುದಾಗಿ ತಿಳಿದು ಬಂದಿರುತ್ತದೆ. ಆದರೂ ಅಲ್ಲಿಯೂ ಹೋಗಿ ಹುಡಕಾಡಿದರು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲ. ನಂತರ ತಿಳಿಯಲಾಗಿ ನನ್ನ ಹೆಸರಿನಲ್ಲಿದ್ದ ಟಿಪ್ಪರ ನಂ ಕೆಎ-33-ಎ-8522 ನೇದ್ದು ಸಮೀರ ಸವಣೂರ ಎಂಬ ವ್ಯಕ್ತಿಯ ಬಳಿ ಇರುವುದಾಗಿ ತಿಳಿದು ಬಂದಿರುತ್ತದೆ.
     ನನ್ನ 30,00000-00 ರೂಪಾಯಿ ಮೌಲ್ಯದ ಟಿಪ್ಪರನ್ನು ನನಗೆ ಯಾರೋ ನಷ್ಟವನ್ನುಂಟು ಮಾಡಲು ಮೋಸದಿಂದ ಕಳ್ಳತನ ಮಾಡಿಕೊಂಡು ಹೋಗಿದ್ದು, ಇದರಲ್ಲಿ ಸಮೀರ ಮತ್ತು ಇತರರು ಭಾಗಿಯಾಗಿದ್ದ ಬಗ್ಗೆ ಇತ್ತೀಚಿಗೆ ಗೊತ್ತಾಗಿದೆ. ಆದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತಿದ್ದೇನೆ. ಕಾರಣ ನನ್ನ ಟಿಪ್ಪರನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 207/2022 ಕಲಂ  379, 420ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
                                                                                           

 

ಇತ್ತೀಚಿನ ನವೀಕರಣ​ : 11-12-2022 11:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080