ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-04-2022


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 25/2022 ಕಲಂ. 279 337 338 ಐಪಿಸಿ : ದಿನಾಂಕ:11/04/2022 ರಂದು ಸಾಯಂಕಾಲ 17.45 ಗಂಟೆಗೆ ಫಿರ್ಯಾದಿಯು ತನ್ನ ಗೆಳೆಯನ ಮೋಟಾರ್ ಸೈಕಲ್ ನಂ: ಕೆಎ-33 ಎಲ್-3500 ನೇದ್ದನ್ನು ತೆಗೆದುಕೊಂಡು ಬಲಶೆಟ್ಟಿಹಾಳದಿಂದ ಕಾಮನಟಗಿ ಸೀಮಾಂತರದ ಯಲ್ಲಾಲಿಂಗ್ ಮಠದ ಸಮೀಪ ಇರುವ ತನ್ನ ಕವಳಿ ಬೆಳೆ ಇರುವ ಹೊಲಕ್ಕೆ ಹೋಗಲು ಕಾಮನಟಗಿಯ ದುಗರ್ಾದೆವಿ ಗುಡಿ ದಾಟಿ ಹೊರಟಾಗ, ಎದುರುಗಡೆಯಿಂದ (ಹುಣಸಗಿ ಕಡೆಯಿಂದ) ಕೆ.ಎಸ್.ಆರ್.ಟಿ.ಸಿ ಬಸ್ ಹೊರಟಿದ್ದು, ಅದರ ಹಿಂದೆ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ:ಕೆಎ-34 ಜೆ-234 ನೇದ್ದರ ಮೇಲೆ ಹಿಂದೆ 2ಜನರನ್ನು ಕೂಡಿಸಿಕೊಂಡು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಸ್ಸನ್ನು ಓವರಟೆಕ್ ಮಾಡಿ ಮುಂದೆ ಬಂದು ಫಿರ್ಯಾದಿಯ ಮೋಟಾರ್ ಸೈಕಲ್ಲಗೆ ಜೊರಾಗಿ ಡಿಕ್ಕಿ ಕೊಟ್ಟು ಆರೋಪಿತನು ಸಹ ಮುಂದೆ ಹೋಗಿ ಮೋಟಾರ್ ಸೈಕಲ್ ಸಮೇತ ಮುಂದೆ ಹೋಗಿ ಬಿದ್ದಿದ್ದು, ಆರೋಪಿತನಿಗೆ ಎಡಗಾಲ ತೊಡೆಯಲ್ಲಿ ಭಾರಿ ಒಳಪೆಟ್ಟಾಗಿ ಬಾವು ಬಂದಿದ್ದು, ಎಡಗಾಲ ಮೊಳಕಾಲ ಕೆಳಗಡೆ ಕಾಲು ಮುರಿದು ಎಲುಬು ಹೊರಗೆ ಬಂದಿದ್ದು, ಫಿರ್ಯಾದಿ & ಇನ್ನಿಬ್ಬರಿಗೆ ಸಾದಾ ರಕ್ತಗಾಗಳಾದ ಬಗ್ಗೆ ಅಪರಾಧ.

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 54/2022 ಕಲಂ 279, 337 ಐಪಿಸಿ ಸಂಗಡ 187 ಐಎಮ್ವಿ ಆಕ್ಟ : ಇಂದು ದಿನಾಂಕ:11/04/2022 ರಂದು 7:30 ಪಿ.ಎಂ. ಕ್ಕೆ ಶ್ರೀ ಮಾಳಪ್ಪ ತಂದೆ ಶಿವಣ್ಣ ಹುಲಕಲ್ ವ|| 40 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ಆಲ್ದಾಳ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ದಿನಾಂಕ:07/04/2022 ರಂದು ಮುಂಜಾನೆ 9 ಗಂಟೆಗೆ ನಮ್ಮ ಹೊಲದಲ್ಲಿ ಕವಳಿ ರಾಶಿ ನಡೆದಿದ್ದರಿಂದ ನನ್ನ ಅಣ್ಣ ದುರ್ಗಪ್ಪ ತಂದೆ ಶಿವಣ್ಣ ಹುಲಕಲ್ ವಯಸ್ಸು|| 45 ಮತ್ತು ಅಳಿಯ ಹಣಮಂತ ತಂದೆ ಬುಯ್ಯಣ್ಣ ಪೂಜಾರಿ ವಯಸ್ಸು|| 33 ಇಬ್ಬರು ಕೂಡಿ ನಮ್ಮ ಅಣ್ಣನ ಮೋಟರ ಸೈಕಲ್ ನಂ ಕೆಎ-33 ವೈ-9002 ನೇದ್ದರ ಮೇಲೆ ಹೊಲಕ್ಕೆ ಹೋಗಿದ್ದರು. ನಂತರ ನಾನು ಮತ್ತು ನಿಂಗಪ್ಪ ತಂದೆ ಹೈಯಾಳಪ್ಪ ಕಿಲ್ಲೇದಾರ (ಬಿಜೆವಾಡ) ಇಬ್ಬರು ಕೂಡಿ ಸಾಯಂಕಾಲ 6 ಗಂಟೆ ಸುಮಾರಿಗೆ ನನ್ನ ಮೋಟರ ಸೈಕಲ್ ಮೇಲೆ ನಮ್ಮ ಹೊಲಕ್ಕೆ ಹೋಗಿದ್ದೆವು. ನಂತರ ಹೊಲದಲ್ಲಿ ರಾಶಿ ಮುಗಿಸಿಕೊಂಡು ನಾವೆಲ್ಲರು ಮನೆಗೆ ಬರುವ ಕುರಿತು ನಮ್ಮ ಅಣ್ಣನಾದ ದುರ್ಗಪ್ಪ ಈತನು ತನ್ನ ಮೋಟರ ಸೈಕಲ್ ನಂ ಕೆಎ-33 ವೈ-9002 ನೇದ್ದನ್ನು ಚಲಾಯಿಸುತ್ತಿದ್ದು ಅದರ ಹಿಂದೆ ಅಳಿಯ ಹಣಮಂತ ಈತನು ಕೂತಿದ್ದು, ನೀವು ಮುಂದೆ ಹೋಗಿರಿ ನಾವೂ ನಿಮ್ಮ ಹಿಂದೆ ಬರುತ್ತೇವೆ ಅಂತ ಹೇಳಿ ನನ್ನ ಮೋಟರ ಸೈಕಲ್ನ್ನು ನಾನು ಚಲಾಯಿಸುತ್ತಿದ್ದು, ನನ್ನ ಹಿಂದೆ ನಿಂಗಪ್ಪ ಈತನು ಕುಳಿತುಕೊಂಡಿದ್ದನು. ಹೀಗಿದ್ದು ರಾತ್ರಿ 9 ಗಂಟೆ ಸುಮಾರಿಗೆ ಆಲ್ದಾಳ-ಎಸ್ಡಿ ಗೋನಾಲ ಮುಖ್ಯ ರಸ್ತೆಯ ಭೀಮಸಿಂಗ ಇವರ ಹೊಲದ ಹತ್ತಿರ ನಮ್ಮ ಮುಂದೆ ಹೋಗುತ್ತಿದ್ದ ನಮ್ಮ ಅಣ್ಣನ ಮೋಟರ ಸೈಕಲ್ಗೆ ಎದುರುಗಡೆಯಿಂದ ಒಂದು ಮೋಟರ ಸೈಕಲ್ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಮೋಟರ ಸೈಕಲ್ ನಡೆಸಿಕೊಂಡು ಬಂದು ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಮ್ಮ ಅಣ್ಣ ದುರ್ಗಪ್ಪ ಮತ್ತು ಅಳಿಯ ಹಣಮಂತ ಇಬ್ಬರು ಕೆಳಗೆ ಬಿದ್ದಿದ್ದು, ನಾನು ಮತ್ತು ನಿಂಗಪ್ಪ ಕಿಲ್ಲೇದಾರ ಇಬ್ಬರು ಕೂಡಿ ನಮ್ಮ ಮೋಟರ ಸೈಕಲ್ ಸೈಡಿಗೆ ನಿಲ್ಲಿಸಿ ಅವರ ಹತ್ತಿರ ಹೋಗಿ ನೋಡಲಾಗಿ ನಮ್ಮ ಅಣ್ಣನಿಗೆ ಎಡಗೈ ಹೆಬ್ಬೆರೆಳು ಮತ್ತು ಕಿರುಬೆರಳಿಗೆ ರಕ್ತಗಾಯ, ಎಡಗಾಲಿನ ಮೊಳಕಾಲ ಮೇಲೆ ಮತ್ತು ಕೆಳಗೆ ತರಚಿದ ಗಾಯವಾಗಿರುತ್ತದೆ. ಅಳಿಯ ಹಣಮಂತ ಈತನಿಗೆ ಬಲಗಡೆ ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ. ಡಿಕ್ಕಿಪಡಿಸಿದ ಮೋಟರ ಸೈಕಲ್ ಸವಾರನು ತನ್ನ ಮೋಟರ ಸೈಕಲ್ ದೂರ ನಿಲ್ಲಿಸಿ ನಮ್ಮ ಹತ್ತಿರ ಬಂದಿದ್ದು, ಆತನಿಗೆ ನೋಡಲಾಗಿ ನಮಗೆ ಪರಿಚಯಸ್ಥನಾದ ಮಂಜುನಾಥ ತಂದೆ ದೇವಿಂದ್ರಪ್ಪಗೌಡ ಮಾಲಿಪಾಟೀಲ ಸಾ|| ಎಸ್ಡಿ ಗೋನಾಲ ಈತನಿದ್ದು, ಅಲ್ಲೇ ಸ್ವಲ್ಪ ಹೊತ್ತು ನಿಂತು ಮೋಟರ ಸೈಕಲ್ ಸಮೇತ ಓಡಿ ಹೋದನು. ಕತ್ತಲಾಗಿದ್ದರಿಂದ ಆತನ ಮೋಟರ ಸೈಕಲ್ ನಂಬರ ಗುತರ್ಿಸಲು ಆಗಿರುವದಿಲ್ಲ್ಲ. ನಂತರ ಗಾಯಗೊಂಡ ನಮ್ಮ ಅಣ್ಣನಿಗೆ ಮತ್ತು ಅಳಿಯನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಮೀರಜ್ದ ಜಿ ಎಸ್ ಕುಲಕಣರ್ಿ ಆಸ್ಪತ್ರೆಗೆ ಸೇರಿಕೆ ಮಾಡಿ, ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನಮ್ಮ ಅಣ್ಣನು ಚಲಾಯಿಸುತ್ತಿದ್ದ ಮೋಟರ ಸೈಕಲ್ಗೆ ಎದುರಿನಿಂದ ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿ, ಗಾಯಗೊಳಿಸಿದ ಮಂಜುನಾಥ ತಂದೆ ದೇವಿಂದ್ರಪ್ಪಗೌಡ ಮಾಲಿಪಾಟೀಲ ಸಾ|| ಎಸ್ಡಿ ಗೋನಾಲ ಇತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 54/2022 ಕಲಂ: 279, 337 ಐಪಿಸಿ ಸಂಗಡ 187 ಐಎಮ್ವಿ ಆಕ್ಟ ನೇದ್ದರ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಇತ್ತೀಚಿನ ನವೀಕರಣ​ : 12-04-2022 10:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080