Feedback / Suggestions


                                          ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12-05-2021
ಯಾದಗಿರ ನಗರ ಪೊಲೀಸ್ ಠಾಣೆ :- 55/2021 ಕಲಂ: 420 ಐಪಿಸಿ ಕಲಂ. 18(ಸಿ) ಮತ್ತು ಕಲಂ. 7 ಇಸಿ ಆಕ್ಟ-1955 :  ಇಂದು ದಿನಾಂಕ.11/05/2021 ರಂದು 1-00 ಪಿಎಂಕ್ಕೆ ಶ್ರೀ ಸುನೀಲ್ ವ್ಹಿ. ಮೂಲಿಮನಿ ಪಿ.ಐ, ಸಿ.ಇ.ಎನ್. ಅಪರಾದ ಪೊಲೀಸ್ ಠಾಣೆ ಯಾದಗಿರಿ ರವರು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ಕ್ರಮಕಕಾಗಿ ಒಂದು ವರದಿಯನ್ನು ಕೊಟ್ಟಿದ್ದು ಸಾರಾಂಶವೆನೆಂದರೆ, ಈ ಮೂಲಕ ದೂರು ಸಲ್ಲಿಸುವುದೆನೆಂದರೆ, ಇಂದು ದಿನಾಂಕ.11/05/2021 ರಂದು ಯಾದಗಿರಿ ನಗರದ ಜಿಲ್ಲಾ ಸಾರ್ವಜನಿಕ ಸಕರ್ಾರಿ ಆಸ್ಪತ್ರೆ (ಕೋವಿಡ್-19) ರೋಗಿಗಳಿಗೆ ಅತೀ ಅವಶ್ಯಕವಾಗಿರುವ ರೆಮ್ಡಿಸಿವರ್(ಖಜಟಜಜತಡಿ) ಎಂಬ ಚುಚ್ಚುಮದ್ದು (ಇಂಜಕ್ಷನ್ನು) ನಿಗಿದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಯಾರೋ ಮೂರು ಜನರು ತೆಗೆದುಕೊಂಡು ಯಾದಗಿರಿ ಕಡೆಗೆ ಬರುತ್ತಿರುವ ಬಗ್ಗೆ ಖಚಿತ ಭಾತ್ಮೀ ಇದ್ದು, ಮಾನ್ಯ ಎಸ್.ಪಿ.ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ, ದಾಳಿ ಕುರಿತು ನಾನು ಮತ್ತು, ಶ್ರೀಮತಿ ಪುಷ್ಪಾಪ್ರೀಯಾ ಎನ್. ಸಹಾಯಕ ಔಷದ ನಿಯಂತ್ರಕರು ಯಾದಗಿರಿ. ಶ್ರೀ ವಿಜಯಕುಮಾರ ಎಲ್, ಪಿ.ಎಸ್.ಐ ಸಿಇಎನ್ ಪೊಲೀಸ್ ಠಾಣೆ ಹಾಗೂ ಅವರ ಸಿಬ್ಬಂದಿಯವರಾದ ಶ್ರೀ ಗುಂಡಪ್ಪ ಹೆಚ್.ಸಿ.115, ಶ್ರೀ ಈರಣ್ಣ ಹೆಚ್.ಸಿ.141, ಶ್ರೀ ಸೈಯದಲಿ ಹೆಚ್.ಸಿ. 191, ಸಾಬಣ್ಣ ಪಿಸಿ-145, ಮತ್ತು ಜೀಪ ಚಾಲಕ ಶರಣು ಎ.ಎಚ್ಸಿ. 19 ರವರು ಇದ್ದು ಇಬ್ಬರೂ ಪಂಚರನ್ನು ಬರಮಾಡಿಕೊಂಡು ವಿಷಯ ತಿಳಿಸಿ ಬೆಳಿಗ್ಗೆ 10-50 ಎಎಂಕ್ಕೆ ಎಲ್ಲರೂ ಕೂಡಿಕೊಂಡು ಸಕರ್ಾರಿ ವಾಹನ ಸಂ.ಕೆಎ-33-ಜಿ-0065 ಮತ್ತು ಸಿಬ್ಬಂದಿಯವರ ದ್ವೀಚಕ್ರವಾಹನಗಳ ಮೇಲೆ ಅಲ್ಲಿಂದ ಹೋರಟು ಮುದ್ನಾಳ ಕ್ರಾಸ್ ಹತ್ತಿರ 11-00 ಎಎಂಕ್ಕೆ ತಲುಪಿ ಕಾದು ಕುಳಿತು ನೋಡುತ್ತಿರುವಾಗ ಮುದ್ನಾಳ ಜಿಲ್ಲಾ ಸಕರ್ಾರಿ ಆಸ್ಪತ್ರೆ ಕಡೆಯಿಂದ ಮುದ್ನಾಳ ಕ್ರಾಸ್ ಕಡೆಗೆ ಮೂರು ಜನರು ಕೂಡಿಕೊಂಡು ಮೋ.ಸೈಕಲ ಮೇಲೆ ಬರುತ್ತಿರುವಾಗ ಪೊಲೀಸ್ರಿಗೆ ಸಂಶಯ ಬಂದು ಆ ಮೂರು ಜನರನ್ನು 11-10 ಎಎಂ ಸುಮಾರಿಗೆ ಹಿಡಿದು ವಿಚಾರಿಸಲು ಒಬ್ಬೊಬ್ಬರಾಗಿ ತಮ್ಮ ಹೆಸರುಗಳು 1) ಚೀರಂಜೀವಿ ತಂ. ಶರಣಪ್ಪ ಎಡವಲ್ಲಿ ವಃ25 ಜಾಃ ಬುಡ್ಗಜಂಗಮ (ಎಸ್.ಸಿ) ಉಃ ಕೋವಿಡ್ ಆಸ್ಪತ್ರೆಯಲ್ಲಿ ಖಾಸಗಿ ನೌಕರ ಸಾಃ ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ ಅಂತಾ ತಿಳಿಸಿದ್ದು 2) ರವಿಕುಮಾರ ತಂ. ದುರ್ಗಪ್ಪ ಸೀತನೂರ ವಃ22 ಜಾಃ ಜಾಃ ಬುಡ್ಗ ಜಂಗಮ (ಎಸ್.ಸಿ) ಉಃ ಖಾಸಗಿ ಕೆಲಸ ಸಾಃ ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ 3) ಮಲ್ಲಪ್ಪ ತಂ. ಈರಪ್ಪ ವಃ21 ಜಾಃ ಬುಡ್ಗ ಜಂಗಮ (ಎಸ್.ಸಿ) ಉಃ ಗೌಂಡಿಕೆಲಸ ಸಾಃ ಮಾತಾ ಮಾಣಿಕೇಶ್ವರಿ ನಗರ ಯಾದಗಿರಿ. ಅಂತಾ ತಿಳಿಸಿದ್ದು ನಂತರ ಹಾಜರಿದ್ದ ಅಧಿಕಾರಿ ಮತ್ತು ಸಿಬ್ಬಂದಿಯವರ ಕೂಡಿಕೊಂಡು ಅವರಿಗೆ ಅಂಗಶೋಧನೆ ಮಾಡಲಾಗಿ (1) ಚೀರಂಜಿವಿ ತಂ. ಶರಣಪ್ಪ ಈತನ ಹತ್ತಿರ ಕೋವೀಡ್ ರೋಗಿಗಳಿಗೆ ನೀಡುವ ಔಷದ ಚಿ) ಮೈಲಾನ ಕಂಪನಿಯ ರೆಮ್ಡಿಸಿವರ್ (ಖಜಟಜಜತಡಿ) ಫಾರ ಇಂಜಕ್ಷನ್ 100ಎಮ್.ಜಿ,(ಬಿಳಿ ಪೌಡರ) 4800/-ರೂ. ಮತ್ತು ಛ) ಒಂದು ರೆಡ್ಮೀ ಕಂಪನಿಯ ಮೋಬೈಲ್ ಅಂ.ಕಿ. 500/-ರೂ. ಕಿಮ್ಮತ್ತು ಸಿಕ್ಕಿದ್ದು ನಂತರ (2) ರವಿಕುಮಾರ ತಂ. ದುರ್ಗಪ್ಪ ಈತನ ಹತ್ತಿರ ಚಿ) ಜುಬಲಿಯಂಟ ಕಂಪನಿಯ ರೆಮ್ಡಿಸಿವರ್ (ಖಜಟಜಜತಡಿ) ಫಾರ ಇಂಜಕ್ಷನ್ 100ಎಮ್.ಜಿ,(ಬಿಳಿ ಪೌಡರ) 4700/-ರೂ. ಛ) ಒಂದು ರಿಯಲಮಿ ಕಂಪನಿಯ ಮೋಬೈಲ್ ಅಂ.ಕಿ.500/- ರೂ. ಸಿಕ್ಕಿದ್ದು ಮತ್ತು (3) ಮಲ್ಲಪ್ಪ ತಂ. ಈರಪ್ಪ ಈತನ ಹತ್ತಿರ ಒಂದು ರಿಯಲಮಿ ಕಂಪನಿಯ ಒಂದು ಮೋಬೈಲ್ ಅಂಕಿ. 500/-ರೂ. ಸಿಕ್ಕಿದ್ದು ಇರುತ್ತದೆ. ನಂತರ ಅವರ ಬಳಿ ಇದ್ದ ಒಂದು ಸಿಲ್ವರ ಕಲರ ಸ್ಪ್ಲೆಂಡರ ಪ್ಲಸ್ ದ್ವೀ ಚಕ್ರ ವಾಹನ ಸಂ. ಕೆಎ-33-ಯು-4064 ಅಂ.ಕಿ.10000/-ರೂ. ಸಿಕ್ಕಿದ್ದು ಇರುತ್ತದೆ. ಹಾಜರಿದ್ದ ಅಧಿಕಾರಿಗಳು ಈ ಔಷದಿಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ವಿಚಾರಿಸಲು ಚೀರಂಜಿವಿ ಈತನು ತಿಳಿಸಿದ್ದೆನೆಂದರೆ ನಾನು ಸಕರ್ಾರಿ ಆಸ್ಪತ್ರೆಯಲ್ಲಿ ಕೊವೀಡ್-19 ವಿಭಾಗಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕೊವೀಡ್-19 ರೋಗಿಗಳಿಗೆ ನೀಡುವ ಔಷದಿಯನ್ನು ಮೋಸ ವಂಚನೆಯಿಂದ ಯಾರಿಗೂ ಗೊತ್ತಾಗದಂತೆ ತೆಗೆದುಕೊಂಡು ಬಂದಿರುತ್ತೇನೆ ಅಂತಾ ತಿಳಿಸಿದನು.. ನಂತರ ನಾವು ಮೂರು ಜನರನ್ನು ಕೂಡಿಕೊಂಡು ಅತೀ ಅವಶ್ಯಕವಾಗಿರುವ ಈ ಔಷದಿಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಕೋವಿಡ್-19 ರೋಗಿಗಳಿಗೆ 35,000/-ರೂ ದಿಂದ 40,000/-ರೂ ವರೆಗೆ ಹೆಚ್ಚಿನ ಬೆಲೆಗಾಗಿ ಮಾರಾಟ ಮಾಡುವ ಸಲುವಾಗಿ ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಯಿಂದ ತೆಗೆದುಕೊಂಡು ಬರುತ್ತಿರುವುದಾಗಿ ತಿಳಿಸಿದರು. ಬಂದ ಹಣವನ್ನು ಮೂರು ಜನರು ಕೂಡಿಕೊಂಡು ಹಂಚಿಕೊಳ್ಳುತ್ತೇವೆ ಅಂತಾ ತಿಳಿಸಿದರು. ಕಾರಣ ಜಪ್ತಿ ಪಂಚನಾಮೆಯನ್ನು ಪಂಚರ ಸಮಕ್ಷಮ ಇಂದು ದಿನಾಂಕ.11/05/2021 ರಂದು ಬೆಳಿಗ್ಗೆ 11-10 ಗಂಟೆಯಿಂದ 12-40 ಪಿಎಂ ದವರೆಗೆ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಯಾದಗಿರಿ ನಗರ ಪೊಲೀಸ್ ಠಾಣೆಗೆ 1-00 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ನನ್ನ ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.55/2021 ಕಲಂ.420 ಐಪಿಸಿ ಮತ್ತು ಕಲಂ.18(ಸಿ) ಜಡಿಣರ ಚಿಟಿಜ ಛಿಠಟಜಣಛಿ ಚಿಛಿಣ-1940 & ಣಜ ಜಡಿಣರ (ಠಿಡಿಛಿಜ ಛಿಠಟಿಣಡಿಠಟ) ಠಡಿಜಜಡಿ-2013, ಮತ್ತು ಕಲಂ. 7 ಇಸಿ ಆಕ್ಟ-1955 ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 64/2021 ಕಲಂ 87 ಕೆ.ಪಿ ಎಕ್ಟ : ಇಂದು ದಿನಾಂಕ. 11-05-2021 ರಂದು 4 ಪಿ.ಎಮ್ ಕ್ಕೆ ಮಲ್ಹಾರ ಗ್ರಾಮದಲ್ಲಿ ಯಾರೋ ಕೆಲವರು ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಅಂದರ ಬಾಹರ ಎಂಬ ಜೂಜಾಟದಲ್ಲಿ ತೊಡಗಿದ್ದಾರೆೆ ಅಂತಾ ಮಾಹಿತಿ ಬಂದಿದ್ದರಿಂದ ಪಿ.ಎಸ್.ಐ ವಡಗೇರಾ ಠಾಣೆ ಪ್ರಭಾರೆ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಠಾಣೆ ರವರು ಅಲ್ಲಿಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ದಾಳಿ ಮಾಡಿ ಇಬ್ಬರೂ ಆರೋಪಿತರನ್ನು ಹಿಡಿದಿದ್ದು ಇನ್ನೂಳಿದವರೆಲ್ಲರೂ ಓಡಿ ಹೋಗಿದ್ದು, ಆರೋಪಿತರು ಜೂಜಾಟ ಕಣದಲ್ಲಿ ಇಸ್ಪಿಟ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 3200/ರೂ ಹಾಗೂ 52 ಇಸ್ಪಿಟ ಎಲೆಗಳನ್ನು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ

ಕೆಂಭಾವಿ ಪೊಲೀಸ್ ಠಾಣೆ :- 63/2021 ಕಲಂ: 143, 147, 323, 498 (ಎ), 504, 506, 149 ಐಪಿಸಿ : ಇಂದು ದಿ: 11/05/2021 ರಂದು 11.00 ಎಎಮ್ಕ್ಕೆ ಶ್ರೀಮತಿ ಅಕ್ಷತಾ ಗಂಡ ವೀರೇಶ ನಾಟೀಕಾರ ವಯಾ|| 21 ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಕರಡಕಲ್ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಏನೆಂದರೆ, ನನ್ನ ತವರು ಮನೆಯು ಹದನೂರ ಗ್ರಾಮವಾಗಿದ್ದು ಸುಮಾರು ಮೂರು ವರ್ಷಗಳ ಹಿಂದೆ ನನಗೆ ಕರಡಕಲ್ ಗ್ರಾಮದ ವೀರೆಶ ತಂದೆ ತಿಪ್ಪಣ್ಣ ನಾಟೀಕಾರ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನಾನು ಹಾಗೂ ನನ್ನ ಗಂಡ ಸುಮಾರು 1 ವರ್ಷದ ವರೆಗೆ ಚೆನ್ನಾಗಿದ್ದವರು ನಂತರದ ದಿನಗಳಲ್ಲಿ ನೀನು ಚೆನ್ನಾಗಿಲ್ಲ ಕುಳ್ಳಿ ಇದ್ದಿ, ನಿನಗೆ ಯಾವದೇ ಅಡುಗೆ ಮಾಡಲು ಬರುವದಿಲ್ಲ ಅಂತ ನನ್ನ ಗಂಡನಾದ 1] ವೀರೇಶ ತಂದೆ ತಿಪ್ಪಣ್ಣ ನಾಟೀಕಾರ ಹಾಗು ಮಾವನಾದ 2] ತಿಪ್ಪಣ್ಣ ತಂದೆ ಹಣಮಂತ್ರಾಯ ನಾಟೀಕಾರ ಹಾಗು ಅತ್ತೆಯಾದ 3] ಲಕ್ಷ್ಮೀಬಾಯಿ ಗಂಡ ತಿಪ್ಣಣ್ಣ ನಾಟೀಕಾರ, ಮೈದುನನಾದ 4) ಹಣಮಂತ್ರಾಯ ತಂದೆ ತಿಪ್ಪಣ್ಣ ನಾಟೀಕಾರ, ನಾದಿನಿಯಾದ 5) ಲಲಿತಾ ತಂದೆ ತಿಪ್ಪಣ್ಣ ನಾಟೀಕಾರ ಸಾ|| ಎಲ್ಲರೂ ಕರಡಕಲ್ ಈ ಎಲ್ಲಾ ಜನರು ಸೇರಿ ವಿನಾಕಾರಣವಾಗಿ ದಿನಾಲು ನನಗೆ ಮಾನಸಿಕ ಹಾಗು ದೈಹಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದರು. ಸದರ ವಿಷಯವನ್ನು ನಾನು ನನ್ನ ತಾಯಿಯಾದ ಭಾಗಮ್ಮ ಗಂಡ ರಾಯಣ್ಣ ತಳವಾರ ಹಾಗೂ ತಂದೆಯಾದ ರಾಯಣ್ಣ ತಂದೆ ಅಮಾತೆಪ್ಪ ತಳವಾರ ಇವರ ಮುಂದೆ ತಿಳಿಸಿದ್ದು ಇರುತ್ತದೆ. ನಮ್ಮ ತಂದೆ-ತಾಯಿಯವರು ಆಯಿತು ನಾವು ಬಂದು ಹೇಳುತ್ತೇನೆ ಅಂತ ತಿಳಿ ಹೇಳಿದ್ದರು. ಅಲ್ಲದೆ ಸದ್ಯ ನಾನು 7 ತಿಂಗಳ ಗರ್ಭವತಿಯಾಗಿರುತ್ತೇನೆ. ಹೀಗಿದ್ದು ದಿನಾಂಕ 08/04/2021 ರಂದು ನಾನು ನನ್ನ ಗಂಡನ ಮನೆಯಲ್ಲಿದ್ದಾಗ ರಾತ್ರಿ 00.15 ಗಂಟೆಗೆ ನನ್ನ ಗಂಡನಾದ 1] ವೀರೇಶ ತಂದೆ ತಿಪ್ಪಣ್ಣ ನಾಟೀಕಾರ ಹಾಗು ಮಾವನಾದ 2] ತಿಪ್ಪಣ್ಣ ತಂದೆ ಹಣಮಂತ್ರಾಯ ನಾಟೀಕಾರ ಹಾಗು ಅತ್ತೆಯಾದ 3] ಲಕ್ಷ್ಮೀಬಾಯಿ ಗಂಡ ತಿಪ್ಣಣ್ಣ ನಾಟೀಕಾರ, ಮೈದುನನಾದ 4) ಹಣಮಂತ್ರಾಯ ತಂದೆ ತಿಪ್ಪಣ್ಣ ನಾಟೀಕಾರ, ನಾದಿನಿಯಾದ 5) ಲಲಿತಾ ತಂದೆ ತಿಪ್ಪಣ್ಣ ನಾಟೀಕಾರ ಈ ಎಲ್ಲಾ ಜನರು ಸೇರಿ ಈ ಸೂಳೆಯದು ಸೊಕ್ಕುಬಾಳ ಆಗಿದೆ ಅಂತ ಎಲ್ಲರೂ ಕೈಯಿಂದ ಹೊಡೆಬಡೆ ಮಾಡಿ ನನಗೆ ನಮ್ಮ ಮನೆಯಿಂದ ಹೊರಗೆ ಹಾಕಿ ಇನ್ನೊಮ್ಮೆ ನೀನು ನಮ್ಮ ಮನೆ ಕಡೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದ್ದು, ನಂತರ ನಾನು ನಮ್ಮ ತಂದೆಯವರಿಗೆ ಫೋನ್ ಮಾಡಿ ನಡೆದ ವಿಷಯ ತಿಳಿಸಿದ್ದು, ಅವರು ಬಂದು ನನಗೆ ನಮ್ಮ ತವರು ಮನೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ. ಸದ್ಯ ನಾನು ಗರ್ಭವತಿಯಾಗಿದ್ದರಿಂದ ನಮ್ಮ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು, ಕಾರಣ ಮೇಲ್ಕಾಣಿಸಿದ ಎಲ್ಲಾ 05 ಜನರು ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 63/2021 ಕಲಂ: 143, 147, 323, 498ಎ, 504, 506, 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

Last Updated: 12-05-2021 09:35 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080