ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-05-2022


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ, 78/2022 ಕಲಂ: 143, 147, 341, 323, 504,506 ಸಂಗಡ 149 ಐಪಿಸಿ : ಇಂದು ದಿನಾಂಕ 11.05.2022 ರಂದು 10.00 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಚಂದಪ್ಪಗೌಡ ತಂದೆ ಮಾಣಿಕರಡ್ಡೆಪ್ಪಗೌಡ ಮಾಲಿ ಪಾಟೀಲ ವ|| 33 ಜಾ|| ರಡ್ಡಿ ಉ|| ಒಕ್ಕಲುತನ ಸಾ|| ಮುದನೂರ [ಕೆ] ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ, ನಮ್ಮ ತಂದೆ ತಾಯಿಗೆ ನಾವು ಒಟ್ಟು ಮೂರು ಜನ ಅಣ್ಣ ತಮ್ಮಂದಿರಿದ್ದು ಅವರಲ್ಲಿಯ ನನ್ನ ಅಣ್ಣನಾದ ಶಾಂತಗೌಡ ತಂದೆ ಮಾಣಿಕರಡ್ಡೆಪ್ಪಗೌಡ ಮಾಲಿಪಾಟೀಲ ಇವರು ದಿನಾಂಕ 08.10.2021 ರಂದು ಅಕಾಲಿಕವಾಗಿ ಮೃತಪಟ್ಟಿರುತ್ತಾರೆ. ನಾವೂ ಮೂರು ಜನರ ಮದ್ಯ ಒಟ್ಟು 40 ಎಕರೆ ಹೊಲವಿದ್ದು ಸದರಿ ಹೊಲವನ್ನು ಒಟ್ಟಾಗಿ ನಾನೇ ಉಳಿಮೆ ಮಾಡಿಕೊಂಡು ಬರುತ್ತಿದ್ದು ಸದ್ಯ ಒಟ್ಟು ಹೊಲ ನನ್ನ ಕಬ್ಜಾದಲ್ಲಿದ್ದು ಆದರೆ ನನ್ನ ಅಣ್ಣನ ಹೆಂಡತಿಯಾದ ವೀಣಾ ಇವಳು ತನ್ನ ಗಂಡನ ಆಸ್ತಿ ನನಗೆ ಕೊಡಬೇಕು ಅಂತ ದಿನಾಲು ನಮ್ಮ ಜೊತೆ ತಕರಾರು ಮಾಡುತ್ತಾ ಬಂದಿದ್ದು ಅದಕ್ಕೆ ನಾನು ನನ್ನ ಎರಡು ಜನ ಅಕ್ಕಂದಿರು ಹಾಗು ಒಬ್ಬಳು ತಂಗಿ ಇದ್ದು ಅವರೂ ಸಹ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದು ಅಲ್ಲದೇ ಈ ಆಸ್ತಿ ಸವರ್ೆ ನಂಬರ 117,135 ಹಾಗು 56 ಹೊಲಗಳ ವಿಷಯದಲ್ಲಿ ನಮ್ಮ ತಂದೆಯ ಸಹೋದರಿ ಇವರು ದಾವೆ ಹೂಡಿದ್ದು ಕೋಟರ್ಿನಲ್ಲಿ ಇತ್ಯರ್ಥವಾದ ನಂತರ ನಿನ್ನ ಪಾಲಿಗೆ ಬಂದ ಆಸ್ತಿ ತೆಗೆದುಕೋ ಅಂತ ಅಂದಿದ್ದು ಆದರೂ ಸಹ ನನ್ನ ಅಣ್ಣನ ಹೆಂಡತಿಯಾದ ವೀಣಾ ಇವರು ನಮ್ಮ ಮೇಲೆ ಹಗೆತನ ಸಾದಿಸುತ್ತಿದ್ದರು. ಹೀಗಿದ್ದು ನಿನ್ನೆ ದಿನಾಂಕ 24.04.2022 ರಂದು 1.00 ಪಿಎಮ್ ಸುಮಾರಿಗೆ ನಾನು ಮುದನೂರ(ಕೆ) ಸೀಮಾಂತರದ ನಮ್ಮ ಹೊಲದ ಹತ್ತಿರ ದಾರಿಯ ಮೇಲೆ ಹೋಗುತ್ತಿದ್ದಾಗ ನಮ್ಮ ಅಣ್ಣನ ಹೆಂಡತಿಯಾದ 1] ವೀಣಾ ಗಂಡ ಶಾಂತಗೌಡ ಮಾಲಿ ಪಾಟೀಲ ಹಾಗು ಅವಳ ಸಂಬಂದಿಕರಾದ ಕೋಡ್ಲಾ ಗ್ರಾಮದ 2] ಶರಣರಡ್ಡಿ ತಂದೆ ಸುಭಾಶ್ಚಂದ್ರರಡ್ಡಿ ಆರುಕೋಟಿ 3] ರಾಚರಡ್ಡಿ ತಂದೆ ಸುಭಾಶ್ಚಂದ್ರರಡ್ಡಿ ಆರುಕೋಟಿ 4] ನಾಗಮ್ಮ ತಂದೆ ಸುಭಾಶ್ಚಂದ್ರರಡ್ಡಿ ಆರುಕೋಟಿ 5] ಸುಜಾತಾ @ಬನ್ನಮ್ಮ ಗಂಡ ಸಿದರಡ್ಡಿ ನರಸಾಗೋಳ 6] ಸುಭಾಶ್ಚಂದ್ರರಡ್ಡಿ ಆರುಕೋಟಿ 7] ಶಿವಶರಣಮ್ಮ ಗಂಡ ಸುಭಾಶ್ಚಂದ್ರರಡ್ಡಿ ಆರುಕೋಟಿ ಈ ಎಲ್ಲಾ ಜನರು ಗುಂಪು ಕಟ್ಟಿಕೊಂಡು ಬಂದವರೇ ನನಗೆ ತಡೆದು ನಿಲ್ಲಿಸಿ ಏನಲೇ ಸೂಳಿ ಮಗನೇ ನನ್ನ ಗಂಡನ ಆಸ್ತಿ ಕೊಡುವದಿಲ್ಲಾ, ನೀನು ಹೇಗೆ ಕೊಡುವದಿಲ್ಲ ನೋಡಿಕೊಳ್ಳುತ್ತೇವೆ ಅಂತ ಅನ್ನುತ್ತಿದ್ದಾಗ ನಾನು ಎಲ್ಲರ ಪಾಲು ಆದ ನಂತರ ನೊಡೋಣ ಅಂತ ಅಂದಾಗ ಎಲ್ಲರೂ ಕೂಡಿ ಈ ಸೂಳೆಯ ಮಗನ ಸೊಕ್ಕು ಬಹಾಳ ಆಗಿದೆ ಅಂತ ಬೈಯುತ್ತಾ ನನಗೆ ಕೈಯಿಂದ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಗುಡಿಯ ಹತ್ತಿರ ಇದ್ದ ನಮ್ಮೂರ ಮಲ್ಲಿಕಾಜರ್ುನ ತಂದೆ ನಿಂಗರಡ್ಡೆಪ್ಪ ಯಡಹಳ್ಳಿ, ಪರಶುರಾಮ ತಂದೆ ಸುಭಾಶ ಕಟ್ಟಿಮನಿ ಹಾಗು ಈರಣ್ಣ ತಂದೆ ಚೆನ್ನಪ್ಪ ಚೌದ್ರಿ ಇವರು ಬಂದು ಬಿಡಿಸಿಕೊಂಡಿದ್ದು ಇರುತ್ತದೆ. ನಂತರ ಎಲ್ಲರೂ ನನಗೆ ಹೊಡೆಯುವದನ್ನು ಬಿಟ್ಟು ಸೂಳೇ ಮಗನೇ ನನಗೆ ಆಸ್ತಿ ಕೊಟ್ಟರೆ ಸರಿ ಇಲ್ಲದಿದ್ದರೆ ನಿನ್ನ ಹಾಗು ನಿನ್ನ ತಮ್ಮನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಈ ವಿಷಯದಲ್ಲಿ ನಾನು ನೇರವಾಗಿ ನಮ್ಮ ಮನೆಗೆ ಹೋಗಿ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ ಎಲ್ಲಾ ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 78/2022 ಕಲಂ 143, 147, 323, 504, 506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 42/2022 ಕಲಂ 279, 338 ಐ.ಪಿ.ಸಿ : ದಿನಾಂಕ:10/05/2022 ರಂದು 3 ಎ.ಎಮ್. ಸುಮಾರಿಗೆಆರೋಪಿತನುತನ್ನಅಟೋಟಂಟಂ ನಂ:ಕೆಎ-33, 6255 ನೇದ್ದರಲ್ಲಿ ಮಲ್ಲಪ್ಪ ಮತ್ತುಯಮನಪ್ಪಇವರೊಂದಿಗೆಅವರತರಕಾರಿ ಲೋಡ ಮಾಡಿಕೊಂಡು ಶಹಾಪೂರಕಡೆಗೆ ಹುಲಕಲ್ ಸೀಮಾಂತರ ಗುರುಲಿಂಗೇಶ್ವರ ವೇ ಬ್ರಿಜ್ ಹತ್ತಿರ ಶಹಾಪೂರ-ಜೇವಗರ್ಿ ಮುಖ್ಯರಸ್ತೆಯ ಮೇಲೆ ಹೋಗುತ್ತಿದ್ದಾಗಆರೋಪಿತನುತನ್ನಅಟೋಟಂಟಂನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿದ್ದರಿಂದ ಅಟೋ ಚಾಲಕನ ನಿಯಂತ್ರಣತಪ್ಪಿಅಟೋ ಸ್ಕಿಡ್ ಆಗಿ ಪಲ್ಟಿಯಾಗಿಅಪಘಾತಕ್ಕೀಡಾಗಿದ್ದು, ಅಪಘಾತದಲ್ಲಿಅಟೋ ಚಾಲಕ ಆರೋಪಿತನ ಹೊಟ್ಟೆ, ಎದೆ, ತಲೆಗೆ ಭಾರಿ ಒಳಪೆಟ್ಟಾಗಿದ್ದು, ಬಲಗೈ ರಟ್ಟೆಗೆ ಭಾರಿರಕ್ತಗಾಯವಾಗಿ ಎಲುಬು ಮುರಿದಿರುತ್ತದೆ. ಮಲ್ಲಪ್ಪ ಮತ್ತುಯಮನಪ್ಪಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕಾರಣಆರೋಪಿತನ ವಿರುಧ್ಧ ಕಾನೂನು ಕ್ರಮಜರುಗಿಸಲು ವಿನಂತಿಅಂತಾ ಫಿಯರ್ಾದಿ ಇರುತ್ತದೆ.

ಗೋಗಿ ಪೊಲೀಸ್ ಠಾಣೆ:-
31/2022 ಕಲಂ: 279, 338 ಐಪಿಸಿ : ಇಂದು ದಿನಾಂಕ: 11/05/2022 ರಂದು 06.30 ಪಿ.ಎಮ್ ಕ್ಕೆ ಶ್ರೀ. ಬಡೇಸಾ ತಂದೆ ಹಣಮಂತ್ರಾಯ ಹಡಪದ ವಯಾ:38 ಉ: ಕ್ಷೌರಿಕ ಜಾ: ಹಡಪದ ಸಾ: ಗೋಗಿ (ಕೆ) ತಾ: ಶಹಾಪೂರ ಜಿ: ಯಾದಗಿರಿ ಇವರು ಒಂದು ಅಜರ್ಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ:29/04/2022 ರಂದು ಸಾಯಂಕಾಲ ನಾನು ನಮ್ಮ ಹೊಲದಲ್ಲಿ ಇದ್ದಾಗ ನಮ್ಮ ಅಣ್ಣತಮ್ಮಕಿಯ ನಮ್ಮ ತಮ್ಮನಾದ ಶಿವಪ್ಪ ತಂದೆ ಮಹಾದೇವಪ್ಪ ಹಡಪದ ಈತನು ಪೋನ ಮಾಡಿ ತಿಳಿಸಿದ್ದೇನಂದರೆ, ನಾನು ಮತ್ತು ನಮ್ಮ ಅಣ್ಣನಾದ ಶೇಖಪ್ಪ ತಂದೆ ಮಹಾದೇವಪ್ಪ ಇಬ್ಬರು 05.30 ಪಿಎಮ್ ಸುಮಾರಿಗೆ ಶಹಾಪೂರ ಸಿಂದಗಿ ಮೇನ್ ರೋಡಿನ ಗೋಗಿ ಕೆ ಗ್ರಾಮದಲ್ಲಿನ ಸರಕಾರಿ ಕಾಲೇಜಿನ ಹತ್ತಿರ ನಿಂತಾಗ ರೋಡಿನಲ್ಲಿ ಚಿಕ್ಕಮ್ಮ ಅಂದರೆ ನಿಮ್ಮ ತಾಯಿಯಾದ ಮಡಿವಾಳಮ್ಮ ಗಂಡ ಹಣಮಂತ್ರಾಯ ಹಡಪದ ವಯಾ:62 ವರ್ಷ ಉ: ಮನೆಗೆಲಸ ಜಾ; ಹಡಪದ ಸಾ: ಗೋಗಿ ಕೆ ಇವರು ನಡೆದುಕೊಂಡು ನಿಮ್ಮ ಹಳೆ ಮನೆಯಿಂದ ಬಸವೇಶ್ವರ ನಗರದಲ್ಲಿನ ಹೊಸ ಮನೆಗೆ ಹೋಗುವಾಗ ಗೋಗಿ ಕೆ ಬಸ್ ನಿಲ್ದಾಣದ ಕಡೆಯಿಂದ ಶಹಾಪೂರ ಕಡೆಗೆ ಬರುತ್ತಿದ್ದ ಒಂದು ಸ್ಕೂಟಿ ಚಾಲಕನು ತನ್ನ ಸ್ಕೂಟಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಮ್ಮ ತಾಯಿಯಾದ ಮಡಿವಾಳಮ್ಮ ಇವರಿಗೆ ಡಿಕ್ಕಿ ಪಡೆಸಿ ಅಪಘಾತ ಮಾಡಿದ್ದು ಅದರಿಂದ ನಿಮ್ಮ ತಾಯಿಯವರಿಗೆ ಬಲಗೈ ಮುಂಗೈ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಎದೆಗೆ ಭಾರಿ ಗುಪ್ತ ಪೆಟ್ಟಾಗಿರುತ್ತದೆ. ಅಪಘಾತ ಮಾಡಿದ ಸ್ಕೂಟಿ ನಂ: ಕೆಎ-36-ಇ.ಎಕ್ಸ-7716 ಅಂತಾ ಇರುತ್ತದೆ. ಅಪಘಾತ ಮಾಡಿದ ಚಾಲಕನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ಆದರ್ಶ ತಂದೆ ವಿಶ್ವನಾಥ ಜಿಂದೆ ವಯಾ:27 ವರ್ಷ ಉ: ಡ್ರೈವರ ಜಾ: ಸ್ವಖೂಳ ಸಾಳೆ ಸಾ: ಗೋಗಿ ಪೇಠ ಅಂತಾ ತಿಳಿಸಿರುತ್ತಾನೆ. ಆಸ್ಪತ್ರೆಗೆ ಹೋಗಬೇಕು ನೀನು ಕೂಡಲೆ ಸ್ಥಳಕ್ಕೆ ಬಾ ಅಂತಾ ತಿಳಿಸಿದನು. ಆಗ ನಾನು ನಮ್ಮೂರಿನ ಸರಕಾರಿ ಕಾಲೇಜಿನ ಮುಂದೆ ರೋಡಿನಲ್ಲಿ ಅಪಘಾತ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ತಾಯಿಯವರಿಗೆ ಭಾರಿ ಗಾಯಗಳಾಗಿದ್ದವು, ಸ್ಕೂಟಿ ನಂ: ಕೆಎ-36-ಇ.ಎಕ್ಸ-7716 ನೇದ್ದು ಸ್ಥಳದಲ್ಲಿ ಇತ್ತು. ಸ್ಕೂಟಿ ಚಾಲಕ ಆದರ್ಶ ಜಿಂದೆ ಮತ್ತು ನಾನು ಹಾಗೂ ನಮ್ಮ ತಮ್ಮಂದಿರಾದ ಶಿವಪ್ಪ ಮತ್ತು ಶೇಖಪ್ಪ ಎಲ್ಲರೂ ಕೂಡಿ ನಮ್ಮ ತಾಯಿ ಮಡಿವಾಳಮ್ಮ ಇವರಿಗೆ ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ನಮಗೆ ಕಾನೂನಿನ ತಿಳುವಳಿಕೆ ಇಲ್ಲದರಿಂದ ಮತ್ತು ನನ್ನ ತಾಯಿಯವರಿಗೆ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ ಅವರಿಗೆ ಆಪರೇಷೇನ್ ಮಾಡಿದ ನಂತರ ತಡವಾಗಿ ಇಂದು ದಿನಾಂಕ:11/05/2022 ರಂದು ಠಾಣೆಗೆ ಬಂದು ಈ ಅಜರ್ಿ ನೀಡಿದ್ದು ಇರುತ್ತದೆ.
ಕಾರಣ ಸ್ಕೂಟಿ ನಂ: ಕೆಎ-36-ಇ.ಎಕ್ಸ-7716 ನೇದ್ದರ ಚಾಲಕ ಆದರ್ಶ ತಂದೆ ವಿಶ್ವನಾಥ ಜಿಂದೆ ಈತನು ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಮಾಡಿದ್ದರಿಂದ ನಮ್ಮ ತಾಯಿಯವರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿವೆ ಸದರಿ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 31/2022 ಕಲಂ: 279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 70/2022 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 11.05.2022 ರಂದು ಸಾಯಂಕಾಲ 5.30 ಗಂಟೆಗೆ ಗುರುಮಠಕಲ್ ಪಟ್ಟಣದ ಚೆಪೆಟ್ಲಾ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೂರು ಜನ ವ್ಯಕ್ತಿಗಳು ಕಾರಿನಲ್ಲಿ ಕುಳಿತು ಮಟಕಾ ಅಂಕಿ-ಸಂಖ್ಯೆ ಭಾತ್ಮಿಯ ಮೆರೆಗೆ ಪಿಐ ಸಾಹೇಬರು ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ದಿನಾಂಕ:11.05.2022 ರಂದು 4.00 ಪಿಮ್ ಕ್ಕೆ ಕ್ಕೆ ದಾಳಿ ಮಾಡಿ ಮೂರು ಜನ ಆರೋಪಿರನ್ನು ಹಿಡಿದು ಅವರ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತರೊಂದಿಗೆ 5.30 ಪಿಎಮ್ ಕ್ಕೆ ಎಎಮ್ ಕ್ಕೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಭೀಮರಾಯ ಪಿಎಸ್ಐ ಗುರುಮಠಕಲ್ ಠಾಣೆ ಗುನ್ನೆ ನಂಬರ 70/2022 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 25/2022 ಕಲಂ 279, 337, 338 ಐಪಿಸಿ : ಇಂದು ದಿನಾಂಕ 11/05/2022 ರಂದು ಸಮಯ 12-30 ಪಿ.ಎಂ.ಕ್ಕೆ ಕಲಬರುಗಿಯ ಮಣೂರ ಆಸ್ಪತ್ರೆಯಿಂದ ರಸ್ತೆ ಅಪಘಾತದ ಬಗ್ಗೆ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮಾಡಿ ಮಾಹಿತಿ ತಿಳಿಸಿದ್ದರಿಂದ ವಿಚಾರಣೆ ಕುರಿತು ಶ್ರೀ ಚಂದ್ರಶೇಖರ ಎಚ್.ಸಿ-04 ರವರಿಗೆ ನೇಮಿಸಿ ಕಳಿಸಿದ್ದು, ಸದರಿಯವರು ಕಲಬರುಗಿಯ ಮಣೂರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ವಿಚಾರಿಸಿದ್ದು, ಗಾಯಾಳು ಪಿಯರ್ಾದಿ ಶ್ರೀ ಸಾಬಣ್ಣ ತಂದೆ ಬಸಣ್ಣ ಕವಲ್ದಾರ್ ವಯ;48 ವರ್ಷ, ಜಾ;ಬೇಡರು(ಎಸ್.ಟಿ), ಉ;ಕೂಲಿ ಕೆಲಸ, ಸಾ;ಹಿರೇ ಅಗಸಿ ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಾನು ಮತ್ತು ನನ್ನ ಕುಟುಂಬದವರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೇ ತಾತ್ಕಾಲಿಕ ವಾಸವಾಗಿದ್ದು, ನಮ್ಮ ಸಂಬಂಧಿಕರ ಮದುವೆ ಇದ್ದ ಕಾರಣ 4-5 ದಿವಸಗಳ ಹಿಂದೆ ಯಾದಗಿರಿಗೆ ಬಂದಿರುತ್ತೇವೆ. ಹೀಗಿದ್ದು ಇಂದು ದಿನಾಂಕ 11/05/2022 ರಂದು ಬೆಳಿಗ್ಗೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಸೈದಾಪುರ ನಮ್ಮ ಸಂಬಂಧಿ ತಾಯಪ್ಪ ತಂದೆ ಮರೆಪ್ಪ ಸಾ; ಇಂದಿರಾ ನಗರ, ಸೈದಾಪುರ ಈತನು ನಮ್ಮ ಮನೆಗೆ ಬಂದು ತನ್ನ ತಮ್ಮ ಮೋಹನಕುಮಾರ ಈತನ ಮದುವೆ ಕಾರ್ಯಕ್ರಮ ಇದ್ದ ಕಾರಣ ನಮಗೆ ಬರುವಂತೆ ಹೇಳಿ ಲಗ್ನಪತ್ರಿಕೆ ಕೊಟ್ಟಿದ್ದು ಇರುತ್ತದೆ. ನಂತರ ಹತ್ತಿಕುಣಿಯಲ್ಲಿರುವ ನಮ್ಮ ಸಂಬಂಧಿಕರಿಗೆ ಲಗ್ನ ಪತ್ರ ಕೊಟ್ಟು ಬರೋಣ ನೀವು ನನ್ನ ಸಂಗಡ ಬರ್ರೀ ಅಂದಾಗ ನಡೀ ಹೋಗಿ ಬರೋಣ ಅಂತಾ ಆತನು ತಂದಿದ್ದ ಮೋಟಾರು ಸೈಕಲ್ ನಂಬರ ಕೆಎ 33, ಎಕ್ಸ್-0250 ನೇದ್ದರ ಮೇಲೆ ಯಾದಗಿರಿಯಿಂದ ಹತ್ತಿಕುಣಿಗೆ ಹೋಗಿ ಅಲ್ಲಿ ನಮ್ಮ ಸಂಬಂಧಿಕರಿಗೆ ಲಗ್ನ ಪತ್ರಿಕೆಗಳನ್ನು ಕೊಟ್ಟು ಮರಳಿ ಯಾದಗಿರಿಗೆ ಬರುತ್ತಿದ್ದಾಗ ಮೋಟಾರು ಸೈಕಲನ್ನು ತಾಯಪ್ಪ ಈತನೇ ನಡೆಸಿಕೊಂಡು ಹೊರಟಿದ್ದಾಗ ಮಾರ್ಗ ಮದ್ಯೆ ಬಂದಳ್ಳಿ ಕೆರೆ ಒಡ್ಡು ಹತ್ತಿರ ನಾವು ನೋಡು ನೋಡುತ್ತಿದ್ದಂತೆ ಯಾದಗಿರಿ ಕಡೆಯಿಂದ ಬಂದಳ್ಳಿ ಕಡೆಗೆ ಹೊರಟಿದ್ದ ಒಬ್ಬ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಮೋಟಾರು ಸೈಕಲ್ ನೇದ್ದಕ್ಕೆ ಟ್ರ್ಯಾಕ್ಟರ್ನ ಮುಂದಿನ ಬಲಗಡೆ ಟೈರಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ. ಆಗ ನಾವಿಬ್ಬರು ಮೊಟಾರು ಸೈಕಲ್ ಸಮೇತ ರಸ್ತೆ ಬದಿಗೆ ಬಿದ್ದಾಗ ಸದರಿ ಅಪಘಾತದಲ್ಲಿ ನನಗೆ ಎಡಗೈ ಮತ್ತು ಬಲಗೈ ಭುಜಕ್ಕೆ ಗುಪ್ತಗಾಯ ಹಾಗೂ ಎಡಕಪಾಳಕ್ಕೆ, ಬಲಗಣ್ಣಿನ ಮೇಲೆ ತರಚಿದ ರಕ್ತಗಾಯವಾಗಿರುತ್ತವೆ, ಮೋಟಾರು ಸೈಕಲ್ ನಡೆಸುತ್ತಿದ್ದ ತಾಯಪ್ಪನಿಗೆ ನೋಡಲು ತಲೆಗೆ ಭಾರೀ ಗುಪ್ತಗಾಯ, ಹಣೆಗೆ, ಮೂಗಿಗೆ, ಬಲಗಣ್ಣಿಗೆ ರಕ್ತಗಾಯ ಮತ್ತು ಎಡಗಾಲಿನ ಮೊಣಕಾಲಿನ ಕೆಳಗೆ ರಕ್ತಗಾಯಗಳಾಗಿದ್ದು ಇರುತ್ತವೆ. ಈ ಘಟನೆಯು ಇಂದು ದಿನಾಂಕ 11/05/2022 ರಂದು ಬೆಳಿಗ್ಗೆ 9 ಎ.ಎಂ.ದ ಸುಮಾರಿಗೆ ಜರುಗಿದ್ದು, ನಮಗೆ ಅಪಘಾತಪಡಿಸಿದ ಟ್ರ್ಯಾಕ್ಟರ್ ನಂಬರ ನೋಡಲಾಗಿ ಹೊಸದು ಇದ್ದು, ಅದರ ನೊಂದಣಿ ಆಗಿರುವುದಿಲ್ಲ, ಅದರ ಇಂಜಿನ್ ನಂಬರ 39.1358/ಎಸ್.ಇ.ಡಿ/03679 ಮತ್ತು ಚೆಸ್ಸಿ ನಂ. ಎಮ್.ಬಿ.ಎನ್.ಎ.ಪಿ.49 ಎ.ಬಿ.ಎನ್.ಟಿ.ಡಿ.07211 ನೇದ್ದು ಹಾಗೂ ಟ್ರ್ಯಾಕ್ಟರ್ ಟ್ಯಾಲಿ ನಂ. ಕೆಎ-06, ಟಿಎ-3961 ನೇದ್ದು ಇರುತ್ತದೆ. ಟ್ರ್ಯಾಕ್ಟರ್ ಚಾಲಕ ಘಟನಾ ಸ್ಥಳದಲ್ಲಿ ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ವೆಂಕಟೇಶ ತಂದೆ ಶಿವಪ್ಪ ಬೊಳೇರ ಸಾ;ಹತ್ತಿಕುಣಿ ಅಂತಾ ತಿಳಿಸಿರುತ್ತಾನೆ. ಘಟನಾ ಸ್ಥಳಕ್ಕೆ ಅಂಬುಲೆನ್ಸ್ ಬಂದಾಗ ಅಲ್ಲಿದ್ದ ಜನರು ನಮಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕಳಿಸಿರುತ್ತಾರೆ. ಆಗ ನಾನು ಈ ಘಟನೆ ಬಗ್ಗೆ ನನ್ನ ಹೆಂಡತಿಗೆ ಮತ್ತು ತಾಯಪ್ಪನ ಅಣ್ಣನಾದ ಯಲ್ಲಪ್ಪ ತಂದೆ ಮರೆಪ್ಪ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದು ಇರುತ್ತದೆ. ಸ್ವಲ್ಪ ಸಮಯದ ನಂತರ ನನ್ನ ಹೆಂಡತಿ ಮರೆಮ್ಮ ಹಾಗೂ ತಾಯಪ್ಪನ ಅಣ್ಣ ಯಲ್ಲಪ್ಪ ಹಾಗೂ ಸಿದ್ದೇಶ ತಂದೆ ಕುಮಲಯ್ಯ ಹಾಲಗೇರಿ ಸಾ;ಮಲ್ಹಾರ ಇವರುಗಳು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನಮಗೆ ವಿಚಾರಿಸಿರುತ್ತಾರೆ. ಯಾದಗಿರಿಯ ಸಕರ್ಾರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ಕೂಡಲೇ ಕಲಬುರಗಿ ಆಸ್ಪತ್ರೆಗೆ ಹೋಗಲು ತಿಳಿಸಿದ ನಮಗೆ ಕಲಬುರಗಿಯ ಮಣೂರ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ. ಹೀಗಿದ್ದು ಇಂದು ದಿನಾಂಕ 11/05/2022 ರಂದು ಬೆಳಿಗ್ಗೆ 9 ಎ.ಎಂ.ಕ್ಕೆ ಯಾದಗಿರಿ-ಸೇಡಂ ಮುಖ್ಯ ರಸ್ತೆಯ ಬಂದಳ್ಳಿ ಕೆರೆ ಒಡ್ಡು ಹತ್ತಿರ ನಾವು ಕುಳಿತುಕೊಂಡು ಹೊರಟಿದ್ದ ಮೊಟಾರು ಸೈಕಲ್ ನಂಬರ ಕೆಎ-33, ಎಕ್ಸ್-0250 ನೇದ್ದಕ್ಕೆ, ಟ್ರ್ಯಾಕ್ಟರ್ ನಂಬರ ನೊಂದಣಿ ಇಲ್ಲದ್ದು, ಅದರ ಇಂಜಿನ್ ನಂಬರ 39.1358/ಎಸ್.ಇ.ಡಿ/03679 ಮತ್ತು ಚೆಸ್ಸಿ ನಂ. ಎಮ್.ಬಿ.ಎನ್.ಎ.ಪಿ.49 ಎ.ಬಿ.ಎನ್.ಟಿ.ಡಿ.07211 ನೇದ್ದು ಹಾಗೂ ಟ್ರ್ಯಾಕ್ಟರ್ ಟ್ಯಾಲಿ ನಂ. ಕೆಎ-06, ಟಿಎ-3961 ನೇದ್ದರ ಚಾಲಕ ವೆಂಕಟೇಶ ಈತನು ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ ಇಂದು ದಿನಾಂಕ 11/05/2022 ರಂದು 9-15 ಪಿ.ಎಂ.ಕ್ಕೆ ಬಂದು ಪಿಯರ್ಾದಿಯ ಹೇಳಿಕೆಯ ಮೂಲ ಪ್ರತಿಯನ್ನು ಹಾಜರುಪಡಿಸಿದ್ದು, ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 25/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಇತ್ತೀಚಿನ ನವೀಕರಣ​ : 12-05-2022 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080