ಅಭಿಪ್ರಾಯ / ಸಲಹೆಗಳು

                                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12-06-2021

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 67/2021 ಕಲಂ: 323,324,504.506 ಸಂ.34 ಐಪಿಸಿ: ಇಂದು ದಿನಾಂಕ; 11/06/2021 ರಂದು 6-30 ಪಿಎಮ್ ಕ್ಕೆ ಪಿರ್ಯಾಧಿ ನರಸಯ್ಯ ತಂದೆ ಶಿವಯ್ಯ ಗುತ್ತೆದಾರ ವ;28 ಜಾ; ಈಡಿಗ ಉ; ಹೋಟೇಲ್ ವ್ಯಾಪಾರ ಸಾ; ಪೊಲೀಸ ಸ್ಟೇಷನ್ ಹತ್ತಿರ ರಟಗಲ್ ತಾ; ಚಿಂಚೋಳಿ ಹಾ.ವ; ಮಿನಿ ವಿಧಾನಸೌಧ ಮುಂದುಗಡೆ ತುಳುಜಾ ಭವಾನಿ ಹೊಟೇಲ್ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ, ಸುಮಾರು 07 ವರ್ಷಗಳ ಹಿಂದೆ ನಾನು, ನನ್ನ ಹೆಂಡತಿ ಲಕ್ಷ್ಮೀಯೊಂದಿಗೆ ಯಾದಗಿರಿಗೆ ಬಂದಿದ್ದು ಹಿಗ್ಗೆ 04 ವರ್ಷಗಳಿಂದ ಯಾದಗಿರಿಯ ಜಿಲ್ಲಾಧಿಕಾರಿಗಳ ಕಾಯರ್ಾಲಯದ ಮುಂದುಗಡೆ ತುಳುಜಾ ಭವಾನಿ ಅಂತಾ ಒಂದು ಹೊಟೇಲ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು ಅಲ್ಲೇ ವಾಸವಾಗಿರುತ್ತೇವೆ. ಹಿಗೀದ್ದು ನಿನ್ನೆ ದಿನಾಂಕ; 10/06/2021 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಾನು ಸಂಗಡ ನನ್ನ ಹೆಂಡತಿ ಲಕ್ಷ್ಮೀ ಮತ್ತು ನಮ್ಮ ಅಣ್ಣನ ಮಗ ನಾಗಯ್ಯ ಇವರೊಂದಿಗೆ ನಮ್ಮ ಹೊಟೇಲದಲ್ಲಿರುವಾಗ ಆಗಾಗ ನಮ್ಮ ಹೊಟೇಲಗೆ ಊಟಕ್ಕೆಂದು ಬರುತ್ತಿದ್ದ ನನಗೆ ಪರಿಚಯಸ್ಥನಾದ ಉದಯಕುಮಾರ ನಮ್ಮ ಹೊಟೇಲಗೆ ಬಂದು ನಮಗೆ ಊಟ ಬೇಕು ಪಾರ್ಸಲ ಮಾಡುವಂತೆ ಕೇಳಿದನು. ಉದಯಕುಮಾರ ಸಂಗಡ ಇನ್ನೊಬ್ಬ ವ್ಯಕ್ತಿ ಇದ್ದನು. ನಾನು ಆಯಿತು ಸ್ವಲ್ಪ ಹೊತ್ತು ತಡೆಯಿರಿ ಊಟ ರೆಡಿ ಮಾಡಿ ನಿಮಗೆ ಪಾಸರ್ೆಲ್ ಮಾಡಿಕೊಡುತ್ತೇನೆ ಅಂತಾ ಹೇಳಿ ಊಟ ರೆಡಿ ಮಾಡುತ್ತಿದ್ದಾಗ ಸ್ವಲ್ಪ ಸಮಯದ ನಂತರ ಹೊಟೇಲ ಹೊರಗಡೆ ನಿಂತಿದ್ದ ಉದಯಕುಮಾರ ಈತನು ನನಗೆ ಹೊರಗಡೆ ಕರೆದು ಊಟ ರೆಡಿ ಆಯಿತಾ, ಊಟ ರೆಡಿ ಮಾಡಲು ಎಷ್ಟು ಹೊತ್ತು ಬೇಕು ನಿನಗೆ ಅಂತಾ ಕೇಳಿದರು. ಆಗ ನಾನು ಆಯಿತು ಇನ್ನು ಸ್ವಲ್ಪ ತಡೆಯಿರಿ ಊಟ ರೆಡಿ ಮಾಡಿ ಪಾಸರ್ೆಲ ಕೊಡುತ್ತೇನೆ ಅಂತಾ ಅಂದಾಗ ಆಗ ಅವರು ಲೇ ಸೂಳೆ ಮಗನೇ ನೀನು ಏನು ಊಟ ರೆಡಿ ಮಾಡುತ್ತೀಯಾ, ಊಟ ರೆಡಿ ಮಾಡಲಿಕ್ಕೆ ನಿನಗೆ ಎಷ್ಟು ಸಮಯ ಬೇಕು, ನಿನಗೆ ಇತ್ತಿಚೆಗೆ ಬಹಳ ಸೊಕ್ಕು ಬಂದಿದೆ ಅಂತಾ ಅವಾಚ್ಯವಾಗಿ ಬೈದರು. ಆಗ ನಾನು ಯಾಕೆ ಬೈಯುತ್ತೀರಿ ಊಟ ಪಾಸರ್ೆಲ ಕೊಡುತ್ತೇನೆ ಅಂತಾ ಅಂದಾಗ, ಏನು ಊಟ ಕೊಡುತ್ತೀಯಾ ಮಗನೇ ಆಗಿನಿಂದ ಇದೇ ಹೇಳುತ್ತೀಯಾ ಅಂತಾ ಉದಯಕುಮಾರ ಈತನು ಇವತ್ತು ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಕೈಯಿಂದ ಮುಖದ ಮೇಲೆ ಎರಡು ಕಣ್ಣಿಗೆ, ತುಟಿಗೆ, ಗುದ್ದಿದನು. ಉದಯಕುಮಾರ ಈತನ ಸಂಗಡ ಇದ್ದ ವ್ಯಕ್ತಿಯು ಕೈಯಿಂದ ನನ್ನ ಹೊಟ್ಟೆ, ಬೆನ್ನಿಗೆ, ಪಕ್ಕಡಿ ಅಲ್ಲಲ್ಲಿ ಗುದ್ದಿದನು. ಅಷ್ಟರಲ್ಲಿ ಹೊಟೇಲದಲ್ಲಿ ಇದ್ದ ನನ್ನ ಹೆಂಡತಿ ಲಕ್ಷ್ಮೀ ಮತ್ತು ನನ್ನ ಅಣ್ಣನ ಮಗ ನಾಗಯ್ಯ ಇವರು ಹೊರಗಡೆ ಬಂದು ಜಗಳ ಬಿಡಿಸಿದ್ದು ಆಗ ಅವರು ಮಗನೇ ನೀನು ನಮಗೆ ಊಟ ಕೊಟ್ಟಿಲ್ಲ ಈಗ ಉಳಿದುಕೊಂಡೆ ಮುಂದೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಒದರಾಡುತ್ತಾ ಅಲ್ಲಿಂದ ಹೊರಟು ಹೋದರು. ನಿನ್ನೆ ರಾತ್ರಿಯಾಗಿದ್ದರಿಂದ ಇಂದು ದಿನಾಂಕ;11/06/2021 ರಂದು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಕುರಿತು ಸೇರಿಕೆಯಾಗಿದ್ದು ಉಪಚಾರ ಪಡೆಯುವ ಕಾಲಕ್ಕೆ ಯಾದಗಿರಿ ನಗರ ಠಾಣೆ ಪೊಲೀಸರು ನನಗೆ ವಿಚಾರಿಸಿದ್ದು ಆಗ ನಾನು, ಪೊಲೀಸರಿಗೆ ಈಗ ನನ್ನದು ಯಾವುದೇ ದೂರು ಇರುವುದಿಲ್ಲ. ನಾನು ಮನೆಯಲ್ಲಿ ವಿಚಾರಿಸಿ ನಂತರ ನಾವು ಠಾಣೆಗೆ ಬಂದು ದೂರು ಸಲ್ಲಿಸುತ್ತೇನೆ ಅಂತಾ ತಿಳಿಸಿದ್ದು ಈಗ ಇಂದು ದಿನಾಂಕ; 11/06/2021 ರಂದು ನಾನು ಠಾಣೆಗೆ ಬಂದು ದೂರು ನೀಡುತ್ತಿದ್ದು ನನಗೆ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ಈ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ನೀಡಿದ್ದು, ಸದರಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.67/2021 ಕಲಂ.323, 324, 504, 506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ.:84/2021 ಕಲಂ 323,324,355,504,506 ಸಂ 34 ಐ.ಪಿ.ಸಿ: ದಿನಾಂಕ 11/06/2021 ರಂದು ಬೆಳಗ್ಗೆ 01-30 ಎ.ಎಮ ದಿಂದ 01-50 ಎ.ಎಮ ಅವಧಿಯಲ್ಲಿ ಫಿರ್ಯಾಧೀದಾರರು ಕೆ.ಎಸ.ಆರ.ಟಿ.ಸಿ ವರ್ಕಶಾಪದಲ್ಲಿ ರಾತ್ರಿ ಗಸ್ತು ಚಕ್ಕಿಂಗ ಕರ್ತವ್ಯದ ಮೇಲಿದ್ದಾಗ ಆರೋಪಿತರು ಕರ್ತವ್ಯದ ಮೇಲೆ ಇರದೇ ಮಲಗಿಕೊಂಡಿದ್ದಕ್ಕೆ ಮೊಬೈಲದಲ್ಲಿ ಪೋಟೋ ತೆಗೆದಿದ್ದಕ್ಕೆ ಆರೋಪಿತರು ಒಮ್ಮಿಂದ ಒಮ್ಮಲೇ ಹಿಂದುಗಡೆಯಿಂದ ಬಂದು ಅವಾಚ್ಯ ಶಬ್ಹಗಳಿಂದ ಬೈದು ಜೀವದ ಭಯ ಹಾಕಿ ಬೈದು ಚಪ್ಪಲಿ, ಬಿಡಿಂಗ್ ರಬ್ಬರ ದಿಂದ ಹೊಡೆದು ಗುಪ್ತಗಾಯ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು ಇರುತ್ತದೆ.


ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ:32/2021 ಕಲಂ 279 ಐಪಿಸಿ : ಇಂದು ದಿನಾಂಕ 11/06/2021 ರಂದು 11-45 ಎ.ಎಂ.ಕ್ಕೆ ಶ್ರೀ ರಾಮಸ್ವರೂಪ್ ತಂದೆ ಗಯಾಪ್ರಸಾದ್ ನಿಸಾದ್ ವಯ;37 ವರ್ಷ, ಜಾ;ನಿಸ್ಸಾದ್, ಉ; ಡಿಸಿಎಂ ಗೂಡ್ಸ್ ವಾಹನ ನಂ. ಎಮ್.ಎಚ್-45, 1395 ನೇದ್ದರ ಮಾಲೀಕ, ಸಾ;ಗಂಜ್ ಏರಿಯಾ ಯಾದಗಿರಿ ರವರು ಠಾಣೆಗೆ ಖುದ್ದಾಗಿ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಪಿಯರ್ಾದಿ ದೂರನ್ನು ನೀಡಿದ್ದು, ಪಿಯರ್ಾದಿ ದೂರಿನ ಸಾರಾಂಶವೇನೆಂದರೆ ನನಗೆ ಸೇರಿದ ಡಿಸಿಎಂ ಗೂಡ್ಸ್ ವಾಹನ ನಂ. ಎಮ್.ಎಚ್-45, 1395 ನೇದ್ದರಲ್ಲಿ ನಿನ್ನೆ ರಾತ್ರಿ ಯಾದಗಿರಿಯ ಗಂಜ್ ಹತ್ತಿರ ಪ್ಲಾಸ್ಟಿಕ್ ಸ್ಕ್ರಾಪ್ ಲೋಡ್ ಮಾಡಿದ್ದು ಇರುತ್ತದೆ. ಇಂದು ದಿನಾಂಕ 11/06/2021 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಯಾದಗಿರಿಯಿಂದ ಕಲಬುರಗಿಗೆ ಹೋಗುವ ಸಲುವಾಗಿ ನಮ್ಮ ವಾಹನದ ಚಾಲಕ ರಾಜು ತಂದೆ ಮಲ್ಲೇಶ್ ಕೊಂಡಲ್ ಸಾ;ಹೊಸಳ್ಳಿ ಕೆ, ತಾ;ಜಿ;ಯಾದಗಿರಿ ಈತನು ಬಂದಾಗ ನಾವಿಬ್ಬರು ವಾಹನವನ್ನು ಯಾದಗಿರಿ ಗಂಜ್ನಿಂದ ಕಲಬುರಗಿಗೆ ಹೊರಟೆವು ವಾಹನವನ್ನು ರಾಜು ಈತನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯೆ ಯಾದಗಿರಿ ನಗರದ ಹೊಸ ಕೇಂದ್ರ ಬಸ್ ನಿಲ್ದಾಣದ ಹತ್ತಿರ ರಾಜು ಈತನು ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ರಸ್ತೆ ಮೇಲೆ ಹಠಾತ್ತನೆ ಜಾನುವಾರುಗಳು ಬಂದಾಗ ಚಾಲಕನು ವಾಹನದ ಮೇಲಿನ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಒಮ್ಮೊಲೆ ವಾಹನಕ್ಕೆ ಬ್ರೇಕ್ ಹಾಕಿದಾಗ ವಾಹನವು ಸ್ಕಿಡ್ಡಾಗಿ ರಸ್ತೆಯ ಡಿವೇಡರ್ಗೆ ಡಿಕ್ಕಿಯುಂಟಾಗಿ ಬಲಕ್ಕೆ ಪಲ್ಟಿಯಾಗಿದ್ದು ಇರುತ್ತದೆ, ಈ ಅಪಘಾತದಲ್ಲಿ ವಾಹನದಲ್ಲಿದ್ದ ನನಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ ವಾಹನದ ಚಾಲಕನಿಗೆ ನೋಡಲು ಎಡಗೈಗೆ ಸಣ್ಣ-ಪುಟ್ಟ ತರಚಿದ ಗಾಯಗಳಾಗಿದ್ದು ಆಸ್ಪತ್ರೆಗೆ ಹೋಗೊಣ ನಡೀ ಅಂದಾಗ ಚಾಲಕ ರಾಜು ಈತನು ಆಸ್ಪತ್ರೆಗೆ ಬೇಡ ಅಂತಾ ತಿಳಿಸಿರುತ್ತಾನೆ. ಡಿವೇಡರ್ ಮೇಲಿನ ನಗರ ಸಭೆಯ ವಿದ್ಯುತ್ ಕಂಬಕ್ಕೆ ತಗುಲಿ ಸಣ್ಣ ಪುಟ್ಟ ಹಾನಿಯಾಗಿದ್ದು ಈ ಬಗ್ಗೆ ನಾನು ರಿಪೇರಿ ಮಾಡಿಕೊಡುವುದಾಗಿ ನಗರಸಭೆಯ ಪೌರಾಯುಕ್ತರಿಗೆ ಖುದ್ದಾಗಿ ಬೇಟಿ ಮಾಡಿರುತ್ತೇನೆ. ನನ್ನ ವಾಹನವು ಕೂಡ ಅಪಘಾತದಲ್ಲಿ ಡ್ಯಾಮೇಜ್ ಆಗಿರುತ್ತದೆ. ಈ ಅಪಘಾತವು ಇಂದು ದಿನಾಂಕ 11/06/2021 ರಂದು ಬೆಳಿಗ್ಗೆ 5 ಎ.ಎಂ.ಕ್ಕೆ ಜರುಗಿರುತ್ತದೆ. ಈ ಘಟನೆ ಬಗ್ಗೆ ನಾನು ನನ್ನ ಸ್ನೇಹಿತರಾದ ಶ್ರೀ ತಾಜುದ್ದೀನ್ ತಂದೆ ಜಲಾಲ್ ಸಾಬ ತೊರಿ ಸಾ;ಯಾದಗಿರಿ ಮತ್ತು ನಮ್ಮಲ್ಲಿ ಕೆಲಸ ಮಾಡುವ ಕುಲದೀಪ್ ತಂದೆ ರಾಮಲಕನ್ ನಿಸ್ಸಾದ ಸಾ;ಯಾದಗಿರಿ ಇವರಿಗೆ ಪೋನ್ ಮಾಡಿ ತಿಳಿಸಿರುತ್ತೇನೆ. ಸ್ವಲ್ಪ ಸಮಯದ ನಂತರ ಇವರಿಬ್ಬರು ಘಟನಾ ಸ್ಥಳಕ್ಕೆ ಬಂದು ನೋಡಿ ನನಗೆ ವಿಚಾರಿಸಿರುತ್ತಾರೆ ಈ ಘಟನೆ ಬಗ್ಗೆ ನಾನು ನಮ್ಮ ಹಿರಿಯರಲ್ಲಿ ಕೇಳಿಕೊಂಡು ತಡವಾಗಿ ಠಾಣೆಗೆ ಹಾಜರಾಗಿ ಈ ದೂರನ್ನು ಕನ್ನಡದಲ್ಲಿ ಗಣಕೀಕೃತ ಮಾಡಿಸಿ ಕೊಡುತ್ತಿದ್ದು ನನಗೆ ಸೇರಿದ ಡಿಸಿಎಂ ಗೂಡ್ಸ್ ವಾಹನ ನಂ. ಎಮ್.ಎಚ್-45, 1395 ನೇದ್ದರ ಚಾಲಕ ರಾಜು ಈತನ ಅತೀವೇಗ ಮತ್ತು ಅಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ್ದರಿಂದ ಈ ಘಟನೆ ಜರುಗಿದ್ದು ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 32/2021 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತೆನಿಖೆ ಕೈಗೊಡೇನು.


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂಬರ : 85/2021 ಕಲಂ:143 147 148 341 323 324 354 355 504 506 ಸಂ 149 ಐಪಿಸಿ : ಇಂದು ದಿನಾಂಕ:11.06.2021 ರಂದು 11:00 ಎಎಮಕ್ಕೆ ಶ್ರೀಮತಿ ರಾಮುಲಮ್ಮ ಗಂಡ ಶಿವಪ್ಪ ಸಾ|| ಮಡೇಪಲ್ಲಿ ತಾ|| ಗುರುಮಠಕಲ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ ಪಿರ್ಯಾಧಿ ಅಜರ್ಿಯ ಸಾರಾಂಶವೆನೆಂದರೆ ದಿನಾಂಕ:10.06.2021 ರಂದು ಸಾಯಂಕಾಲ 5.00 ಎಎಮ್ ಕ್ಕೆ ತಮ್ಮ ದೊಡ್ಡಿಯಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಮನೆಯ ಕಡೆಗೆ ಹೋಗುತ್ತಿರುವಾಗ ಚಂಡ್ರಕಿ ಗ್ರಾಮದ ಬಸವಂತರೆಡ್ಡಿ ಇವರ ಮನೆಯ ಹತ್ತಿರ ರಸ್ತೆಯ ಮೇಲೆ ಆರೋಪಿರೆಲ್ಲರೂ ಪಿರ್ಯಾಧಿಗೆ ಆರೋಪಿತರೆಲ್ಲರೂ ಆಕ್ರಮಕೋಟ ರಚಿಸಿಕೊಂಡು ಪಿರ್ಯಾಧಿ ಮತ್ತು ಇತರರಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಮಾನಬಂಗ ಪಡಿಸಲು ಪ್ರಯತ್ನಿಸಿ. ಚಪ್ಪಲಿಯಿಂದ ಬಡಿಗೆಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾಧಿಯ ಸಾರಾಂಶದ ಮೇಲಿಂದ ಶ್ರೀಮತಿ ಗಂಗಮ್ಮ ಪಿಎಸ್ಐ (ಅ.ವಿ) ರವರು ಪ್ರಕರಣ ದಾಖಲಿಸಿಕೊಂಡು ತೆನಿಖೆ ಕೈಗೊಡೇನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 86/2021 ಕಲಂ 279, 337, 338 ಐಪಿಸಿ ಸಂ 187 ಐಎಮ್ ವಿ ಎಕ್ಟ್ : ಇಂದು ದಿನಾಂಕ 11.06.2021 ರಂದು ಸಾಯಂಕಾಲ 5.00 ಗಂಟೆಗೆ ಪಿರ್ಯಾಧಿ ಸಾಬಣ್ಣ ತಂದೆ ನರಸಿಂಗಪ್ಪ ನಕ್ಕಾ ಸಾ|\ಯಡಪಲ್ಲಿ ಪಿರ್ಯಾಧಿ ಸಾರಾಂಶವೆಂದರೆ ಪಿರ್ಯಾಧಿಯು ದಿನಾಂಕ:11.06.2021 ರಂದು ಬೆಳೆಗ್ಗೆ 8.00 ಎಎಮ್ ಕ್ಕೆ ತನ್ನ ಮೋಟರ್ ಸೈಕಲ್ ನಂ ಕೆಎ-33 ಎಕ್ಸ್ -9810 ನೇದ್ದರ ಮೇಲೆ ಅನ್ನಪೂರದಿಂದ ಮಿನ್ನಾಶಪೂರಕ್ಕೆ ಹೋಗುತ್ತಿರುವಾಗ ಎದರುಗಡೆಯಿಂದ ಕಾರ್ ನಂ ಎಪಿ-21 ಬಿಹೆಚ್-3789 ನೇದ್ದರ ಚಲಕನು ತನ್ನ ಕಾರನ್ನು ಅತಿವೇಗ, ಅಲಕ್ಷತನದಿಂದ ಅನ್ನಪೂರ ಗ್ರಾಮದ ಗೋಪಾಳರೆಡ್ಡಿ ರವರ ಮನೆಯ ಮುಂದೆ ರಸ್ತೆಯ ಮೇಲೆ ಅಫಘಾತ ಪಡಿಸಿ ಭಾರಿ ಮತ್ತು ಸಾದಾ ಸ್ವರೂಪದ ಗಾಯ ಪಡಿಸಿ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಪಿರ್ಯಾಧಿ ಯ ಸಾರಾಂಶದ ಮೆಲಿಂದ ಹಪೀಜ್ ಹೆಚ್ಸಿ-31 ರವರು ಪ್ರಕಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 90/2021 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 11-06-2021 ರಂದು ಮದ್ಯಾಹ್ನ 01-35 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದುಪ್ಪಲ್ಲಿ ಗ್ರಾಮದ ಶಿವರಾಜ ಹೊಟಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 720=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.90/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 91/2021 ಕಲಂ 379 ಐಪಿಸಿ : ಇಂದು ದಿನಾಂಕ: 11-06-2021 ರಂದು 05-00 ಪಿ.ಎಮ್ ಕ್ಕೆ ಶ್ರಿ ಭೀಮರಾಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಛಲೇರಿ ಹಳ್ಳದಲ್ಲಿ ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಟ್ರ್ಯಾಕ್ಟರಗಳ ಅ|| ಕಿ|| 700000=00 ಮತ್ತು 5 ಕ್ಯೂಬಿಕ್ ನರಳಿನ ಅ|| ಕಿ|| 7500=00 ಇದ್ದು ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.91/2021 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 128/2021 ಕಲಂ 143, 147, 323, 324, 504, 506 ಸಂಗಡ 149 ಐ.ಪಿ.ಸಿ. : ಇಂದು ದಿನಾಂಕ: 11-06-2021 ರಂದು 2:30 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಭಾಗಪ್ಪ ತಂದೆ ಮಹಾದೇವಪ್ಪ ಗುಡಳ್ಳಿ ವಯ: 40 ವರ್ಷ ಜಾ: ಕುರುಬ ಉ: ಒಕ್ಕಲುತನ ಸಾ: ಸಗರ ಬಿ ತಾ: ಶಹಾಪುರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ ನಿನ್ನೆ ದಿನಾಂಕ: 10-06-2021 ರಂದು ಮುಂಜಾನೆ 7:30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಅಳಿಯನಾದ ಭಾಗಪ್ಪ ತಂದೆ ಮಲ್ಲಪ್ಪ ಕರೆನೋರ ಇಬ್ಬರೂ ಕೂಡಿ ಬಹಿದರ್ೆಸೆಗೆ ಹೋಗಿದ್ದೆವು ಮರಳಿ ಬರುವಾಗ ದಾರಿಯಲ್ಲಿ ನಮ್ಮೂರ ಶೇಖಶಾವಲಿ ದಗರ್ಾದ ಆವರಣದಲ್ಲಿ ಬೋರವೆಲ್ ಇದ್ದು ಅದರಲ್ಲಿ ನೀರು ತೆಗೆದುಕೊಂಡು ಕೈಕಾಲು ತೊಳೆಯಲು ಹೋಗಿದ್ದೆವು. ಅದೇ ಸಮಯಕ್ಕೆ ಆ ದಗರ್ಾಕ್ಕೆ ಸಂಭಂದಿಸಿದವರಾದ 1) ಸೈಯದ ಜಹಿರುದ್ದೀನ ತಂದೆ ಸೈಯದ ಸಿಬಗತ್ ಉಲ್ಲಾ ಖಾದ್ರಿ, ಅವರ 2) ತಮ್ಮನಾದ ಸೈಯದ ಚಾಂದ್ಪೀರ ಖಾದ್ರಿ ಮತ್ತು 3) ಸೈಯದ ಯುಸೂಪ್ ಖಾದರಿ ಸಾ: ಸಗರ ಬಿ ಹಾಲಿವಸತಿ ಕಲಬುರಗಿ ಈ ಮೂರು ಜನರು ಮತ್ತು ಅವರೊಡನೆ ಇನ್ನು ಇಬರನ್ನು ಕರೆದುಕೊಂಡು ಅಲ್ಲಿಗೆ ಬಂದರು. ನಾವು ಬೋರವೆಲ್ ಹೊಡೆದು ನೀರು ತೆಗದುಕೊಳ್ಳುತ್ತಿದ್ದಾಗ ಅವರಲ್ಲಿಯ ಸೈಯದ ಜಹಿರುದ್ದೀನ ಖಾದ್ರಿ ಇವರು ನಮಗೆ ಏ ಸೂಳೆ ಮಕ್ಕಳೆ ಇಲ್ಲಿ ಏನು ಮಾಡುತ್ತಿದ್ದೀರಾ ನೀವು ಸಾರಾಯಿ ಕುಡಿಯಲು ಬಂದಿದ್ದೀರಾ ಇದೇ ಸ್ಥಳ ಬೇಕೆನು ದಿನಾ ಇಲ್ಲೇ ಸಾರಾಯಿ ಕುಡಿಯುತ್ತೀರಿ. ಎಂದು ಮೈಮೇಲೆ ಬಂದರು ಆಗ ನಾನು ನನ್ನ ಅಳಿಯನಾದ ಭಾಗಪ್ಪ ತಂದೆ ಮಲ್ಲಪ್ಪ ಇಬ್ಬರೂ ಅವರಿಗೆ ಸಮಾಧಾನದಿಂದ ಮಾತನಾಡಿರಿ ನಾವು ಬಹಿದರ್ೆಸೆಗೆ ಹೋಗಿ ಮರಳಿ ಮನೆಗೆ ಹೋಗುವಾಗ ಕೈಕಾಲು ತೊಳೆದುಕೊಳ್ಳುತ್ತಿದ್ದೇವೆ. ಇಲ್ಲಿ ಸಾರಾಯಿ ಕುಡಿಯುತ್ತಿಲ್ಲ ಎಂದು ಹೇಳಿದರೂ ಅವರು ಕೇಳದೇ ಅವರು 5 ಜನರೂ ಕೂಡಿ ಅಲ್ಲೇ ಬಿದ್ದಿದ್ದ ಕಲ್ಲುಗಳನ್ನು ತೆಗದುಕೊಂಡು ನಮಗೆ ಹೊಡೆಯತೊಡಗಿದರು. ಅದರಿಂದ ಕಲ್ಲುಗಳು ನಮಗೆ ಬಡಿದು ನನ್ನ ತಲೆಯ ಹಿಂದೆ ಮತ್ತು ಹಣೆಯ ಮೇಲೆ ರಕ್ತಗಾಯ ವಾಗಿದ್ದು ನಮ್ಮ ಅಳಿಯ ಭಾಗಪ್ಪ ತಂದೆ ಮಲ್ಲಪ್ಪ ಇವರಿಗೆ ಬಲಗೈ ಹೆಬ್ಬೆರಳಿಗೆ ರಕ್ತಗಾಯವಾಗಿದ್ದು ಇದೆ ಆಗ ಜಗಳ ನಡೆದಾಗ ನಮ್ಮ ಇನ್ನೊಬ್ಬ ಅಳಿಯನಾದ ಶರಣಪ್ಪ ತಂದೆ ನಿಂಗಪ್ಪ ಹದ್ದಿ ಈತನು ಬಿಡಿಸಲು ಬಂದಾಗ ಆತನಿಗೆ ಸೈಯದ ಚಾಂದ್ಪೀರ ಖಾದಿ ಈತನು ಕಲ್ಲು ತೆಗೆದುಕೊಂಡು ಆತನ ಮೊಳಕಾಲ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. ಇನ್ನು ಉಳಿದ ಮೂವರು ಕೂಡಾ ನಮ್ಮ ಮೇಲೆ ಕಲ್ಲಿನಿಂದ ಹೊಡೆದು ಅದರಿಂದ ನಮಗೆ ಅಲ್ಲಲ್ಲಿ ತರಚಿದ ಗಾಯವಾಗಿವೆ. ಆಗ ಜಗಳದ ಶಬ್ದ ಕೇಳಿ ನಮ್ಮೂರ ಮಹಾದೇಪ್ಪ ತಂದೆ ಶರಣಪ್ಪ ಹಾದಿಮನಿ ಈತನು ಬಂದು ಜಗಳ ಬಿಡಿಸಿಕೊಂಡಿರುತ್ತಾನೆ. ಆಗ ಅವರಲ್ಲಿಯ ಸೈಯದ ಜಹಿರುದ್ದೀನ ಖಾದ್ರಿ ಈತನು ಮಕ್ಕಳೇ ಈಗ ಉಳಿದಿದ್ದೀರಿ ಇನ್ನೊಮ್ಮ ನಮ್ಮ ದಗರ್ಾದ ಹತ್ತಿರ ಬಂದರೆ ನಿಮ್ಮ ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಗಾಯಗೊಂಡ ನಾವು ಮೂರು ಜನರು ಶಹಾಪುರದ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆದುಕೊಂಡಿರುತ್ತೇವೆ. ನಾವು ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ: 11-06-2021 ರಂದು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ. ಕಾರಣ ನಿನ್ನೆ ದಿನಾಂಕ: 10-06-2021 ರಂದು ಮುಂಜಾನೆ 7:30 ಗಂಟೆ ಸುಮಾರಿಗೆ ನಮ್ಮೂರ ಶೇಖಶಾವಲಿ ದಗರ್ಾದ ಆವರಣದಲ್ಲಿನ ಬೊರವೆಲ್ ದಲ್ಲಿ ನೀರು ತೆದುಕೊಳ್ಳಲು ಹೋದಾಗ ಸೈಯದ ಜಹಿರುದ್ದೀನ ಖಾದ್ರಿ ಇವರು ತನ್ನೊಡನೆ ತನ್ನ ತಮ್ಮಂದಿರು ಮತ್ತು ಇನ್ನೂ ಇಬ್ಬರನ್ನು ಕರೆದುಕೊಂಡು ಅಕ್ರಮ ಕೂಟ ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಇದ್ದ ಕಲ್ಲು ತೆಗದುಕೊಂಡು ನಮಗೆ ಹೊಡೆದು ಗಾಯ ಮಾಡಿ ಜೀವದ ಬೆದರಿಕೆ ಹಾಕಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 128/2021 ಕಲಂ. 143, 147, 323, 324, 504, 506 ಸಂಗಡ 149 ಐ.ಪಿ.ಸಿ. ಅಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 129/2021 ಕಲಂ 279 337 ಐ.ಪಿ.ಸಿ : ಇಂದು ದಿನಾಂಕ: 11/06/2021 ರಂದು ರಾತ್ರಿ 20-30 ಗಂಟೆಗೆ ಫಿರ್ಯಾದಿ ಶ್ರೀ ಅಯ್ಯಣ್ಣ ತಂದೆ ಪ್ರಭುಗೌಡ ಮೇಲಿನ ಮನಿ ವಯಸ್ಸು 29 ವರ್ಷ ಜಾತಿ ಲಿಂಗಾಯತ ರಡ್ಡಿ ಉಃ ಒಕ್ಕಲುತನ ಸಾಃ ಲಕಣಾಪೂರ ತಾಃ ಜೇವಗರ್ಿ ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ 11/06/2021 ರಂದು ಬೀಜ ಮತ್ತು ರಸಗೊಬ್ಬರ ಖರೀದಿ ಮಾಡಲು ಕಾರ್ ನಂಬರ ಕೆಎ-32-ಪಿ-8154 ನೇದ್ದರಲ್ಲಿ ಮುಂಜಾನೆ 11-25 ಗಂಟೆಗೆ ಶಹಾಪೂರ ಪಟ್ಟಣದ ಒಳಗೆ ಪ್ರವೇಸಿಸುತಿದ್ದಂತೆ ಸ್ವರಾಜ್ ಟ್ರ್ಯಾಕ್ಟರ್ ಶೋ ರೂಮ ಎದರುಗಡೆ ಒಂದು ಆಟೋ ನಂಬರ ಕೆಎ 33-ಎ-5001 ನೆದ್ದರ ಚಾಲಕನು ನನ್ನ ಕಾರಿಗೆ ತಪ್ಪು ದಾರಿಯಲ್ಲಿ ಚಲಾಯಿಸಿಕೊಂಡು ಬಂದು, ಡಿಕ್ಕಿ ಹೊಡೆದು ನನಗೆ ಮತ್ತು ನನ್ನ ಸಂಗಡಿಗೆರಿಗೆ ದೈಹಿಕವಾಗಿ ಹಾನಿ ಮಾಡಿದ್ದಲ್ಲದೆ ನನ್ನ ಕಾರು ಕೆಎ-32-ಪಿ-8154 ನ್ನು ನಿಧಾನವಾಗಿ ನನ್ನ ಪಥದಲ್ಲಿ ಚಲಿಸುತಿದ್ದಾಗ ಡಿಕ್ಕಿ ಹೊಡೆದು ನನ್ನ ಕಾರನ್ನು ಸಂಪೂರ್ಣವಾಗಿ ಜಖಂಗೊಳಿಸಿರುತ್ತಾರೆ. ನಾನು ಶಹಾಪೂರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಘಟನೆ ಕುರಿತು ಶಹಾಪೂರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ವಿವರವಾಗಿ ತಿಳಿಸಿರುತ್ತೇನೆ.ಮಾನ್ಯರೇ, ನನ್ನ ಚಿಕಿತ್ಸಾವೆಚ್ಚ ಮತ್ತು ನನ್ನ ಕಾರಿನ ದುರಸ್ಥಿ ವೆಚ್ಚವನ್ನು ತಪ್ಪಿತಸ್ಥ ಆಟೋ ರೀಕ್ಷಾ ನಂಬರ ಕೆಎ-33-ಎ-5001 ನೇದ್ದರ ಚಾಲಕ/ಮಾಲಿಕರಿಂದ ಭರಿಸಿಕೊಡಬೇಕೆಂದು ಮತ್ತು ತಪ್ಪಿತಸ್ಥ ಆಟೋ ರೀಕ್ಷಾ ಚಾಲಕ/ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 129/2021 ಕಲಂ 279, 337 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ : 35/2021 78 (3) ಕೆ.ಪಿ ಯಾಕ್ಟ : ದಿನಾಂಕ:11/06/2021 ರಂದು 16:00 ಪಿ.ಎಮ್ ಕ್ಕೆ, ಶ್ರೀ.ಬಾಪುಗೌಡ ಪಿಎಸ್ಐ ಹುಣಸಗಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು ಏನೆಂದರೆ, ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:35/2021 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದ ನಂತರ ಪಿಎಸ್ಐ(ಕಾ.ಸು) ಹುಣಸಗಿ ಪೊಲೀಸ್ ಠಾಣೆ ರವರು ಸಾಯಂಕಾಲ 18:10 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 1140/- ರೂ.ಗಳು, 2 ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು ಇರುತ್ತದೆ. ಆರೋಪಿತ ಹೆಸರು 1) ಹುಸೇನಬಾಷ ತಂದೆ ಖಾಜಾಸಾಬ ನದಾಪ್ ವಯಾ-55ವರ್ಷ, ಜಾತಿ:ಪಿಂಜಾರ ಉ:ಮಟಕಾ ಬರೆಯುವುದು ಸಾ:ಚನ್ನೂರ ತಾ:ಹುಣಸಗಿ ಜಿ:ಯಾದಗಿರ ಅಂತಾ ಇರುತ್ತಾನೆ.


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ:79/2021 ಕಲಂ: 279,3337,338 ಐ.ಪಿ.ಸಿ : ನಿನ್ನೆ ದಿನಾಂಕ 10.06.2021 ರಂದು ಕಲಬುರಗಿ ಆದರ್ಶ ಆಸ್ಪತ್ರೆಯಿಂದ ಎಮ್ ಎಲ್ ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪರಶುರಾಮ ತಂದೆ ಹಣಮಂತ್ರಾಯ ಕಡಿಮನಿ ಸಾ|| ಪರಸನಳ್ಳಿ ಇವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ಹೀಗಿದ್ದು ದಿನಾಂಕ: 09.06.2021 ರಂದು ಮುಂಜಾನೆ 10 ಗಂಟೆಗೆ ನಾನು ಹಾಗು ಭೀಮಣ್ಣ ತಂದೆ ಹಳ್ಳೆಪ್ಪ ಡಂಬಳ ಇಬ್ಬರೂ ಕೂಡಿಕೊಂಡು ಮೋಟರ ಸೈಕಲ ನಂಬರ ಕೆಎ-33 ಡಬ್ಲ್ಯೂ- 0721 ನೇದ್ದರಲ್ಲಿ ಹುಣಸಗಿಗೆ ಹೋಗಿ ಮರಳಿ ಕೆಂಭಾವಿಗೆ ಬರುವ ಕುರಿತು ಕೆಂಭಾವಿ ಠಾಣಾ ವ್ಯಾಪ್ತಿಯ ಹುಣಸಗಿ ಕೆಂಭಾವಿ ರಸ್ತೆಯ ಮುದನೂರ ಕ್ರಾಸ ಹತ್ತಿರ ಬರುತ್ತಿದ್ದಾಗ ಅಂದಾಜು ಮದ್ಯಾಹ್ನ 1 ಗಂಟೆಗೆ ಸದರ ಕ್ರಾಸಿನಲ್ಲಿ ಒಂದು ಎಮ್ಮೆ ಅಡ್ಡ ಬಂದಿದ್ದು ಅಲ್ಲದೇ ಅದೇ ವೇಳೆಗೆ ನಮ್ಮ ಮೋಟರ ಸೈಕಲ ಚಾಲಕನಾದ ಭೀಮಣ್ಣ ತಂದೆ ಹಳ್ಳೆಪ್ಪ ಡಂಬಳ ಸಾ|| ಪರಸನಳ್ಳಿ ಈತನು ತನ್ನ ಮೋಟರ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಒಮ್ಮಲೇ ಬಲಭಾಗಕ್ಕೆ ಕಟ್ ಮಾಡಿದಾಗ ನಾವಿಬ್ಬರೂ ಮೋಟರ ಸೈಕಲ ಸಮೇತ ಕೆಳಗೆ ಬಿದ್ದಿದ್ದು ಸದರಿ ಅಪಘಾತದಲ್ಲಿ ನನಗೆ ಎಡಗಾಲ ಮೊಳಕಾಲಿಗೆ ಹಾಗು ಎಡಗೈಗೆ ಭಾರೀ ರಕ್ತಗಾಯವಾಗಿ ಕಾಲು ಹಾಗು ಕೈ ಎರಡು ಮುರಿದಂತಾಗಿದ್ದು, ಅಲ್ಲದೇ ಟೊಂಕಕ್ಕೆ ಗುಪ್ತಗಾಯವಾಗಿದ್ದು ಇರುತ್ತದೆ. ನಮ್ಮ ಮೋಟರ ಸೈಕಲ ಚಾಲಕನಾದ ಭೀಮಣ್ಣ ಡಂಬಳ ಈತನಿಗೆ ಯಾವದೇ ಗಾಯ ವಗೈರೆ ಆಗಿರುವದಿಲ್ಲ. ನಂತರ ಸದರ ಭೀಮಣ್ಣ ಈತನು ನಮ್ಮ ಮನೆಗೆ ಪೋನ ಮಾಡಿ ತಿಳಿಸಿ ನನಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಆದರ್ಶ ಆಸ್ಪತ್ರೆ ಕಲಬುಗರ್ಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಸದರಿ ಅಪಘಾತಕ್ಕೆ ಮೋಟರ ಸೈಕಲ ನಂಬರ ಕೆಎ-33 ಡಬ್ಲ್ಯೂ- 0721 ನೇದ್ದರ ಚಾಲಕ ಭೀಮಣ್ಣ ತಂದೆ ಹಳ್ಳೆಪ್ಪ ಡಂಬಳ ಸಾ|| ಪರಸನಳ್ಳಿ ಈತನ ತನ ಅತಿವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ವಿವರವಾದ ಹೇಳಿಕೆಯನ್ನು ಇಂದು ದಿನಾಂಕ 11.06.2021 ರಂದು 10 ಎಎಮ್ ಕ್ಕೆ ಠಾಣೆಯ ನೀಲಪ್ಪ ಹೆಚ್ ಸಿ 147 ರವರು ಠಾಣೆಗೆ ತಂದು ಹಾಜರಪಡಿಸಿದ್ದು ಸದರ ಹೇಳಿಕೆ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 79/2021 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ: 44/2021 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ 11/06/2021 ರಂದು 6:30 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 5:00 ಪಿ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪೂರ ಗ್ರಾಮದ ವಾಲ್ಮಿಕ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 44/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 8:20 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 3200/-ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.ಕನಕು ತಂ/ಕಾಶಿನಾಥ ದಲಬಂಜರ ವ:48 ವರ್ಷ ಉ:ಒಕ್ಕಲುತನ ಜಾ:ಹಿಂದು-ಕ್ಷತ್ರಿಯ ಸಾ:ಕೊಡೆಕಲ್

ಇತ್ತೀಚಿನ ನವೀಕರಣ​ : 12-06-2021 10:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080