ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-06-2022


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 90/2022 ಕಲಂ. 454, 380 ಐಪಿಸಿ : ಇಂದು ದಿನಾಂಕ: 11-06-2022 ರಂದು 3-00 ಪಿ.ಎಮ್.ಕ್ಕೆ ಶ್ರೀಮತಿ ಮಂದಾಕಿನಿ ಗಂಡಚಿದಾನಂದರುದ್ರಸ್ವಾಮಿಮಠ ಸಾ: ರಂಗಂಪೇಟ ಸುರಪೂರತಾಃ ಸುರಪೂರಇವರುಠಾಣೆಗೆ ಹಾಜರಾಗಿಗಣಕೀಕೃತ ಫಿಯರ್ಾದಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ತಿಮ್ಮಾಪೂರದಲ್ಲಿರುವಕನರ್ಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ರಂಗಂಪೇಟಏರಿಯಾದಲ್ಲಿ ನಮ್ಮ ಮನೆ ಇರುತ್ತದೆ. ದಿನಾಂಕ: 23/05/2022 ರಂದು ಮುಂಜಾನೆ 10-00 ಗಂಟೆಗೆ ನಾನು ನಮ್ಮ ಮನೆಯ ಬಾಗಿಲಿಗೆ ಬೀಗ ಹಾಕಿ ಶಾಲೆಗೆ ಹೋಗಿ ಸಾಯಂಕಾಲ ಶಾಲೆ ಬಿಟ್ಟ ಬಳಿಕ 5-00 ಗಂಟೆಗೆ ಮನೆಗೆ ಬಂದು ಮನೆಯ ಬಾಗಿಲು ತೆರೆದು ಒಳಗಡೆ ಹೋಗಿ ನೋಡಲಾಗಿ ಮನೆಯಲ್ಲಿರುವತಿಜೋರಿ ಲಾಕರ್ ಮುರಿದಿದ್ದು ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆಗ ಗಾಬರಿಯಾಗಿ ಪರಿಶೀಲಿಸಲಾಗಿ ತಿಜೋರಿಯಲ್ಲಿಟ್ಟಿದ್ದ 1) 25,000/- ರೂಪಾಯಿ ನಗದು ಹಣ ಮತ್ತು 2) 40 ಗ್ರಾಂ ಬಂಗಾರದ 4 ಬಿಲ್ವರಗಳು (ಕೈಬಳೆ) ಅ||ಕಿ|| 1,80,000/- ರೂ.ಗಳು. 3) 25 ಗ್ರಾಂ ಬಂಗಾರದ ಕೊರಳ ಸರ ಅ||ಕಿ|| 1,12,500/- ರೂ.ಗಳು. 4) 5 ಗ್ರಾಂ ಬಂಗಾರದಎರಡು ಬೆಂಡೋಲಿಗಳು ಅ|| ಕಿ|| 22,500/- ರೂ.ಗಳು. ಹೀಗೆ ಒಟ್ಟು 3,40,000/- ರೂ.ಗಳು ಕಿಮ್ಮತ್ತಿನ ಹಣ ಮತ್ತು ಬಂಗಾರದ ಆಭರಣಗಳು ಕಳ್ಳತನವಾಗಿರುವದು ಗೊತ್ತಾಯಿತು. ಮನೆಯ ಮುಖ್ಯಬಾಗಿಲುಕೊಂಡಿ ಹಾಗು ಬೀಗ ಭದ್ರವಾಗಿದ್ದು, ಕಳ್ಳರು ಮನೆಯಲ್ಲಿ ಹೇಗೆ ಬಂದಿರಬಹುದೆಂದು ನೋಡಲಾಗಿ ನಾನು ಮುಂಜಾನೆಕರ್ತವ್ಯಕ್ಕೆ ಹೋಗುವಾಗ ಅವಸರದಲ್ಲಿ ನಮ್ಮ ಬಚ್ಚಲು ಮನೆಯ ಬಾಗಿಲಿಗೆ ಒಳಗಡೆಯಿಂದ ಮೇಲಿನ ಒಂದೇಕೊಂಡಿ ಹಾಕಿ ಹೋಗಿದ್ದು, ಕಳ್ಳರು ಹೊರಗಿನಿಂದ ಬಚ್ಚಲು ಮನೆಯ ಬಾಗಿಲು ಜೋರಾಗಿದಬ್ಬಿದ್ದರಿಂದ ಒಳಗಿನ ಕೊಂಡಿ ಬೆಂಡಾಗಿ ಬಾಗಿಲು ತೆರೆದಿದ್ದರಿಂದ ಒಳಗಡೆ ಪ್ರವೇಶಿಸಿ ಕಳ್ಳತನ ಮಾಡಿಕೊಂಡು ಹೋಗಿರುವಂತೆಕಂಡು ಬಂದಿತು. ಆಗ ನಾನು ಪಕ್ಕದ ಮನೆಯಲ್ಲಿ ವಾಸವಾಗಿರುವ ನಾಗರತ್ನಗಂಡ ಮಾನಪ್ಪ ಇವಳಿಗೆ ವಿಚಾರಿಸಲಾಗಿ, ಆಕೆ ತಿಳಿಸಿದ್ದೆನೆಂದರೆ, ಮದ್ಯಾಹ್ನಯಾರೋಒಬ್ಬಅಪರಿಚಿತ ವ್ಯಕ್ತಿ ಬಂದು ಮಂದಾಕಿನಿ ಮೇಡಮ್ಇಲ್ಲೆನ್ರಿಅಂತ ಕೇಳಿದಾಗ, ಇಲ್ಲಾ ಶಾಲೆಗೆ ಹೋಗಿದ್ದಾಳೆ ಅಂತ ಹೇಳಿದ್ದು, ನಿವ್ಯಾರುಅಂತ ಕೇಳಿದಾಗ ಮೇಡಮ್ಅವರಿಗೆ ಪರಿಚಯಸ್ಥರು, ಅವರ ಹತ್ತಿರ ಕೆಲಸ ಇತ್ತುಅಂತ ಹೇಳಿ, ಮೊಬೈಲ್ ನಂಬರ ಕೇಳಿದಾಗ ಕೊಟ್ಟಿದ್ದೇನು. ಬಳಿಕ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗಆತನು ಬಹಳ ಹೊತ್ತು ಮನೆಯ ಮುಂದೆ ಕುಳಿತು ಹೋಗಿರುತ್ತಾನೆ. ಬಹುಶಃ ಸದರಿಅಪರಿಚಿತ ವ್ಯಕ್ತಿಯೆ ನಿಮ್ಮ ಮನೆಯಲ್ಲಿ ಕಳ್ಳತನ ಮಾಡಿರಬಹುದೆಂದು ತಿಳಿಸಿರುತ್ತಾಳೆ. ಇಂದುಕಲಬುರಗಿಯಲ್ಲಿರುವನನ್ನ ಮೈದುನ ಸದಾಶಿವ ಇವರು ನಮ್ಮ ಮನೆಗೆ ಬಂದಾಗ ನಾನು ಅವರೊಂದಿಗೆಚಚರ್ೆ ಮಾಡಿತಡವಾಗಿಠಾಣೆಗೆದೂರು ಸಲ್ಲಿಸುತ್ತಿದ್ದೇನೆ. ಕಾರಣ ನಮ್ಮ ಮನೆಯ ಒಳಗಡೆ ಪ್ರವೇಶಿಸಿ ತಿಜೋರಿಯ ಲಾಕರ ಮುರಿದುಅದರಲ್ಲಿಟ್ಟಿದ್ದಒಟ್ಟು 3,40,000/-ರೂ.ಗಳು ಕಿಮ್ಮತ್ತಿನ ಬಂಗಾರದಆಭರಣ ಹಾಗು ಹಣ ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರಿಗೆ ಪತ್ತೆ ಮಾಡಿ ಕಾನೂನು ಪ್ರಕಾರಕ್ರಮಜರುಗಿಸಬೇಕುಅಂತ ವಗೈರೆಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂ: 90/2022 ಕಲಂ: 454, 380 ಐಪಿಸಿ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೆನು.

 


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 101/2022 ಕಲಂ, 454. 457. 380 ಐ.ಪಿ.ಸಿ: ಇಂದು ದಿನಾಂಕ: 11/06/2022 ರಂದು ಸಾಯಂಕಾಲ: 4.30 ಪಿ,ಎಂ ಕ್ಕೆ ಠಾಣೆಗೆ ಪಿರ್ಯಾದಿ ಶ್ರೀ ಪ್ರಮೋದ ತಂದೆ ಕೃಷ್ಣರಾವ ಕುಲಕಣರ್ಿ ವಯ: 49 ಜಾ: ಹಿಂದೂ ಬ್ರಾಹ್ಮಣ ಉ: ಉಪನ್ಯಾಸಕರು ಸರಕಾರಿ ಪ್ರಥಮ ದಜರ್ೆ ಕಾಲೇಜು ಶಹಾಪೂರ ಸಾ: ಜಮಾದಾರ ಓಣಿ ಹುನಗುಂದ ತಾ: ಹುನಗುಂದ ಜಿ: ಬಾಗಲಕೋಟ ಹಾಲಿ ವಸ್ತಿ: ಮನೆ ನಂ: 9/50/59-1 ಬಸವೇಶ್ವರ ನಗರ ಶಹಾಪೂರ ತಾ: ಶಹಾಪೂರ ಜಿ: ಯಾದಗಿರ ರವರು ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ. ನಾನು ಮೇಲ್ಕಂಡ ವಿಳಾಸದಲ್ಲಿ ಈಗ ಸುಮಾರು 12 ವರ್ಷಗಳಿಂದ ಸರಕಾರಿ ಪ್ರಥಮ ದಜರ್ೆ ಕಾಲೇಜು ಶಹಾಪೂರದಲ್ಲಿ ಉಪನ್ಯಾಸಕ ಅಂತ ಕರ್ತವ್ಯ ನಿರ್ವಹಿಸುತ್ತ ಕುಟುಂಬದೊಂದಿಗೆ ವಾಸಿಸುತ್ತಿರುತ್ತೆನೆ.
ಹಿಗಿದ್ದು ದಿನಾಂಕ: 03/06/2022 ರಿಂದ ದಿನಾಂಕ: 04/06/2022 ರ ವರೆಗೆ ನಮ್ಮೂರಾದ ಹುನಗುಂದದಲ್ಲಿ ನಮ್ಮ ಊರಿನ ಹಿರಿಯರು ಶ್ರೀ ಮಂತ್ರಾಲಯ ಕ್ಷೇತ್ರದ ಶ್ರೀಗಳ ಧಾಮರ್ಿಕ ಕಾರ್ಯಕ್ರಮ ಹಮ್ಮಿಕೊಂಡಿರುವ ನಿಮಿತ್ಯ ಆ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವ ನಿಮಿತ್ಯ ನಾವು ಸಹ ಕುಟುಂಬ ಪರಿವಾರದೊಂದಿಗೆ ಅಂದರೆ ನಾನು ಮತ್ತು ನನ್ನ ಶ್ರೀಮತಿ ಪಂಚಾಂಗಂ ಸುಧಾ, ಮಗಳಾದ ವೈಷ್ಣವಿ ಕುಲಕಣರ್ಿ ವಯ: 14 ವರ್ಷ ಹಾಗೂ ಇನ್ನೋಬ್ಬ ಮಗ ವಿಭವ ಕುಲಕಣರ್ಿ ವಯ: 04 ವರ್ಷ ಎಲ್ಲರೂ ಕೂಡಿ ದಿನಾಂಕ: 03/06/2022 ರಂದು ಸಾಯಂಕಾಲ: 7.00 ಪಿ,ಎಂ ಕ್ಕೆ ಶಹಾಪೂರ ನಗರದ ಬಸವೇಶ್ವರ ನಗರದಲ್ಲಿರುವ ನಮ್ಮ ಮನೆಗೆ ಕೀಲಿ ಹಾಕಿ ನಾವೆಲ್ಲರೂ ಹುನಗುಂದಕ್ಕೆ ಹೋಗಿ ಹುನಗುಂದದಲ್ಲಿ ಇದ್ದಾಗ ನನಗೆ ದಿನಾಂಕ: 04/06/2022 ರ ಸಾಯಂಕಾಲ; 6.00 ಪಿ. ಎಂ ಕ್ಕೆ ಶಹಾಪೂರದ ನಮ್ಮ ಮನೆಯ ಪಕ್ಕದ ಮನೆಯವರಾದ ಅಮಿತ ತಂದೆ ಕಾಶಿನಾಥ ಕುಲಕಣರ್ಿ ವಯ: 24 ಜಾ: ಹಿಂದೂ ಬ್ರಾಹಣ ಉ: ಕಾರ ಚಾಲಕ ಸಾ: ಬಸವೇಶ್ವರ ನಗರ ಶಹಾಪೂರ ರವರು ನನಗೆ ಪೋನ ಮಾಡಿ ಹೇಳಿದ್ದೆನೆಂದರೆ ಸರ್ ನಿಮ್ಮ ಮನೆಯ ಹಿಂದಿನ ಬಾಗಿಲು ತೆರೆದಿದೆ ನಿವು ಬಂದಿರಾ ಸರ್ ಶಹಾಪೂರಕ್ಕೆ ಅಂತ ಕೇಳಿದರು. ಆಗ ನಾನು ಇಲ್ಲರಿ ನಾವು ಇನ್ನೂ ಹುನಗುಂದದಲ್ಲಿಯೇ ಇದ್ದೆವೆ ಅಂತ ಹೇಳಿದೆನು. ಆಗ ಅವರು ಬಾಗಿಲು ತೆರೆದಿದೆ ಅಂತ ತಿಳಿಸಿದರು. ನಾನು ಒಮ್ಮೆಲೆ ಗಾಬರಿಯಾಗಿ ಈ ವಿಷಯವನ್ನು ನನ್ನ ಹೆಂಡತಿಗೆ ಹೇಳಿದೆನು. ಆಗ ನನ್ನ ಹೆಂಡತಿ ನಾವು ಶಹಾಪೂರದಿಂದ ಊರಿಗೆ ಬರುವಾಗ ಮನೆಯ ಹಿಂದಿನ ಬಾಗಿಲ ಒಳ ಕೊಂಡಿ ಹಾಕಿ ಬಂದಿದ್ದೆನೆ ಅಂತ ತಿಳಿಸಿದರು. ಆಗ ನಾನು ನಮ್ಮೂರಿನಿಂದ ಕುಟುಂಬ ಸಮೇತ ಮರಳಿ ದಿನಾಂಕ: 05/06/2022 ರಂದು ಮದ್ಯಾಹ್ನ 2.00 ಪಿ,ಎಂ ಸುಮಾರಿಗೆ ಶಹಾಪೂರದ ಬಸವೇಶ್ವರ ನಗರದಲ್ಲಿರುವ ನಮ್ಮ ಮನೆಗೆ ಬಂದು ನೊಡಲಾಗಿ ಮನೆಯ ಮುಖ್ಯ ಬಾಗಿಲು ಕೀಲಿ ಮುರಿದು ಸುಮ್ಮನೆ ಬಾಗಿಲು ಮುಚ್ಚಿ ಕೊಂಡಿ ಹಾಕಿದ ಸ್ಥಿತಿಯಲ್ಲಿ ಬಾಗಿಲು ಇತ್ತು ಅದನ್ನು ನೋಡಿ ನಾನು ಗಾಬರಿಯಾಗಿ ಮನೆಯ ಒಳಗಡೆ ಹೊಗಿ ನೋಡಲಾಗಿ ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು ನಂತರ ಅಲಮಾರ ನೊಡಲಾಗಿ ಅದರ ಬಾಗಿಲು ಸಹ ತೆರೆದಿತ್ತು ಅಲಮಾರದಲ್ಲಿಟ್ಟ 1) 05 ಗ್ರಾಮ ಬಂಗಾರದ ಸಣ್ಣ ಚೈನ ಅ,ಕಿ, 25000.00 ರೂ ಮತ್ತು 02 ಗ್ರಾಮ ಬಂಗಾರದ ಕಿವಿಯ ಓಲೆ ಅ,ಕಿ, 10000.00 ರೂ ಹಾಗೂ 03 ಗ್ರಾಮ ಬಂಗಾರದ ಕಿವಿಯ ಓಲೆ ಅ.ಕಿ. 15000.00 ರೂ ಹಿಗೆ ಒಟ್ಟು 10 ಗ್ರಾಂ ಬಂಗಾರದ ಆಭರಣ ಹಾಗೂ ದೇವರ ಜಗಲಿಯ ಮೇಲೆ ಇಟ್ಟ ಒಂದು ಬೆಳ್ಳಿಯ ತಟ್ಟೆ 500 ಗ್ರಾಮ ತೂಕವುಳ್ಳದ್ದು, ಅ.ಕಿ. 35000.00 ರೂ ಹಿಗೆ ಒಟ್ಟು 85000.00 ರೂಪಾಯಿ ಬೆಲೆ ಬಾಳುವ ಬಂಗಾರ, ಬೆಳ್ಳಿಯ ಸಾಮಾನುಗಳನ್ನು ಯಾರೋ ಕಳ್ಳರು ನಾವು ನಮ್ಮ ಮನೆ ಕೀಲಿ ಹಾಕಿಕೊಂಡು ನಮ್ಮ ಊರಿಗೆ ಹೊದ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ,
ಈ ಬಗ್ಗೆ ನಾವು ನಮ್ಮ ಹಿರಿಯರಲ್ಲಿ ವಿಚಾರ ಮಾಡಿಕೊಂಡು ಇಂದು ದಿನಾಂಕ: 11/06/2022 ರಂದು ತಡವಾಗಿ ಠಾಣೆಗೆ ಹಾಜರಾಗಿ ನಮ್ಮ ಮನೆಯಲ್ಲಿ ಕಳುವಾದ ಬಂಗಾರ, ಬೆಳ್ಳಿಯ ಆಭರಣಗಳ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ತಮ್ಮಲ್ಲಿ ವಿನಂತಿ. ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 101/2022 ಕಲಂ: 454.457.380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.

 
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 39/2022 ಕಲಂ. 409, 419, 420, 463, 468, 471 ಸಂ. 34 ಐ.ಪಿ.ಸಿ: ದಿನಾಂಕ: 14/09/2021 ರಿಂದ ದಿನಾಂಕ: 30/05/2022 ರವರೆಗಿನ ಅವಧಿಯಲ್ಲಿ ಆರೋಪಿತರಾದ ಸರದಾರ ನಾಯಕ್ ಶಾಖಾ ಅಂಚೆ ಪಾಲಕ ಬಳಬಟ್ಟಿ ಹಾಗೂ ತ್ರಿಶೂಲ್ ಸಹಾಯಕ ಶಾಖಾ ಅಂಚೆ ಪಾಲಕ ಬಳಬಟ್ಟಿ ಇಬ್ಬರು ಕೂಡಿ ಸುರಪೂರ ಉಪ-ವಿಭಾಗಕ್ಕೆ ಸಂಬಂಧಪಟ್ಟಂತಹ ಗೋಗಿ ಉಪ-ಅಂಚೆ ಕಛೇರಿ ವ್ಯಾಪ್ತಿಯ ಸದರಿ ತ್ರಿಶೂಲ್ ಮತ್ತು ಇತರೆ 3 ಜನ ಅಂಚೆ ನೌಕರರ, ಕೆಂಭಾವಿ ಉಪ ಅಂಚೆ ಕಛೇರಿ ವ್ಯಾಪ್ತಿಯ 2 ಜನ ಅಂಚೆ ನೌಕರರ ಹಾಗೂ ಕುಂಬಾರ ಪೇಠ ಉಪ-ಅಂಚೆ ಕಛೇರಿ ವ್ಯಾಪ್ತಿಯ ಒಬ್ಬ ಅಂಚೆ ನೌಕರನ ಅಧಿಕೃತ ಯುಸರ್ ಐಡಿ ಹಾಗೂ ಪಾಸ್ವಡರ್್ನ್ನು ಬಳಸಿಕೊಂಡು ಸುಮಾರು 1,27,83,400=00 ರೂ. (ಒಂದು ಕೋಟಿ ಇಪ್ಪತ್ತೇಳು ಲಕ್ಷ ಎಂಬತ್ತು ಮೂರು ಸಾವಿರದ ನಾಲ್ಕು ನೂರು) ರೂಪಾಯಿಗಳ ಮೊತ್ತವನ್ನು ಇಲಾಖೆಗೆ ಮೋಸ ಮಾಡಿ ಹಣವನ್ನು ಲಪಟಾಯಿಸುವ ಉದ್ದೇಶದಿಂದ, ಗೋಗಿ ಗ್ರಾಮದ ಎಂಟು ಜನ ಪರಿಚಯಸ್ಥರ ಹೆಸರಿನಲ್ಲಿ ಮೊಬೈಲ್ ಸಿಮ್ ಕಾಡರ್್ಗಳನ್ನು ಉಪಯೋಗಿಸಿ, ಸದರಿ ನಂಬರ್ಗಳಿಂದ ಲಿಂಕ್ ಮಾಡಿದ ಹೊಸದಾಗಿ ಐ.ಪಿ.ಪಿ.ಬಿ ಅಕೌಂಟ್ಗಳನ್ನು ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಳಬಟ್ಟಿ ಶಾಖಾ ಅಂಚೆ ಕಛೇರಿಯಲ್ಲಿ ತೆರೆದು ಮೋಸದಿಂದ ಹಣ ವಗರ್ಾವಣೆ ಮಾಡಿಕೊಂಡು ಅಂಚೆ ಇಲಾಖೆಗೆ ವಂಚನೆ ಮಾಡಿರುತ್ತಾರೆ ಅಂತಾ ಸಂಕ್ಷಿಪ್ತ ಸಾರಾಂಶವಿರುತ್ತದೆ

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 91/2022 ಕಲಂ 32, 34 ಕನರ್ಾಟಕ ಅಭಕಾರಿ ಕಾಯ್ದೆ 1965: ಇಂದು ದಿನಾಂಕ: 11/06/2022 ರಂದು 5.30 ಪಿ.ಎಂ.ಕ್ಕೆ ಸ.ತ ಪಿರ್ಯಾದಿದಾರರಾದ ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ ರವರು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ನೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:11/06/2022 ರಂದು 5 ಪಿ.ಎಂ.ಕ್ಕೆ ರತ್ತಾಳ ಗ್ರಾಮದ ಅಂಬಿಗರ ಚೌಡಯ್ಯ ಸಮುದಾಯ ಭವನದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಆರೋಪಿತನು ರಟ್ಟಿನ ಬಾಕ್ಸನಲ್ಲಿ ಮದ್ಯವನ್ನು ಸಂಗ್ರಹಿಸಿ ಮದ್ಯ ಮಾರಾಟ ಮಾಡಲು ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿದ್ದು, ಆರೋಪಿತನು ಓಡಿ ಹೊಗಿದ್ದು ರಟ್ಟಿನ ಬಾಕ್ಸನಲ್ಲಿ ಓರಿಜಿನಲ್ ಚೊಯಿಸ್ ಡಿಲಕ್ಸ್ ವಿಸ್ಕಿ 90 ಎಮ್ಎಲ್ನ 105 ಪೌಚುಗಳು ಇದ್ದು, ಪ್ರತಿಯೊಂದಕ್ಕೆ 35=13 ರೂಗಳು, ಹೀಗೆ ಒಟ್ಟು 9450 ಎಮ್.ಎಲ್ನ ಮಧ್ಯವಿದ್ದು ಅದರ ಅ.ಕಿ 3688=00 ರೂ. ಕಿಮ್ಮತ್ತು ಇರುತ್ತದೆ. ಸದರಿ ಮದ್ಯವನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ವರದಿ ನೀಡಿದ್ದು, ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.91/2022 ಕಲಂ: 32, 34 ಕೆ.ಇ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ

 


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 100/2022 ಕಲಂ 504, 353 ಐಪಿಸಿ: ಇಂದು ದಿನಾಂಕ: 11/06/2022 ರಂದು 00.30 ಎ.ಎಂ.ಕ್ಕೆ ಶ್ರೀ ವೆಂಕಟಪ್ಪನಾಯಕ ತಂದೆ ಹಣಮಂತ್ರಾಯ ದೇವಕುಂಟಿ, ಎಎಸ್ಐ ಭೀಮರಾಯನಗುಡಿ ಪೊಲೀಸ್ ಠಾಣೆ ಠಾಣೆಗೆ ಹಾಜರಾಗಿ ಸಲ್ಲಿಸಿದ ಕನ್ನಡದಲ್ಲಿ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ, ನಾನು ಈಗ ಸುಮಾರು 3 ವರ್ಷಗಳಿಂದ ಭೀ.ಗುಡಿ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಅಂತಾ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ನಿನ್ನೆ ದಿನಾಂಕ:10/06/2022 ರಂದು ಸಾಯಂಕಾಲ 5.45 ಪಿ.ಎಮ್.ಕ್ಕೆ ಮಾನ್ಯ ಪಿ.ಎಸ್.ಐ(ಕಾಸು) ರವರ ಮೌಖಿಕ ಆದೇಶದಂತೆ ಠಾಣೆ ಯು.ಡಿ.ಆರ್ ನಂ:05/2022 ಕಲಂ 174 ಸಿಆರ್ಪಿಸಿ ನೇದ್ದನ್ನು ದಾಖಲಿಸಿಕೊಂಡು ನಂತರ ಮುಂದಿನ ತನಿಖೆ ಕುರಿತು ನಮ್ಮ ಠಾಣೆಯ ತನಿಖಾ ಸಹಾಯಕರಾದ ಶ್ರೀ ಜಿಂದಾವಲಿ ಸಿಹೆಚ್ಸಿ-161 ಇವರನ್ನು ಕರೆದುಕೊಂಡು ಜಿಜಿಹೆಚ್ ಶಹಾಪೂರಕ್ಕೆ ಭೇಟಿಕೊಟ್ಟು ಶವ ಮಹಜರ ಪಂಚನಾಮೆ ಕೈಕೊಂಡೆನು. ನಂತರ ಮಾನ್ಯ ವೈದ್ಯಾಧಿಕಾರಿಗಳಿಗೆ ಪಿ.ಎಮ್.ಇ ಕುರಿತು ಕೋರಿಕೆ ಪತ್ರವನ್ನು ಕೊಟ್ಟು ಜಿಜಿಹೆಚ್ ಶಹಾಪುರದ ಆವರಣದಲ್ಲಿ ನಿಂತು ಪ್ರಕರಣದ ಮುಂದಿನ ತನಿಖೆ ಕೈಕೊಳ್ಳುತ್ತಿದ್ದೆನು. ಆಗ ಪರಮೇಶ ತಂದೆ ಗುರಪ್ಪ ಹೊಸಮನಿ ಸಾ:ಯುಕೆಪಿ ಕ್ಯಾಂಪ್ ಭೀ.ಗುಡಿ ಈತನು ನಮ್ಮನ್ನು ನೋಡುತ್ತಾ ನಮ್ಮ ಮುಂದೆ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ತಿರುಗಾಡುತ್ತಿದ್ದನು. ಪಿ.ಎಮ್.ಇ ಮುಗಿಸಿ ಬಂದ ವೈದ್ಯಾಧಿಕಾರಿಗಳು ಜಿಂದಾವಲಿ ಇವರಿಗೆ ಕರೆದು ಆಸ್ಪತ್ರೆಯ ಒಳಗಡೆ ಕರೆದುಕೊಂಡು ಹೋದರು. ಆಗ ನಾನು ಮೃತನ ರಕ್ತ ಸಂಬಂಧಿಕರಿಗೆ ಕರೆದು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಳ್ಳುತ್ತಿರುವಾಗ ರಾತ್ರಿ 8.50 ಗಂಟೆ ಸುಮಾರಿಗೆ ಪರಮೇಶ ಈತನು ನನ್ನ ಹತ್ತಿರ ಬಂದು ನನ್ನ ಮೋಟರ್ ಸೈಕಲ್ ಸಿಗುತ್ತಿಲ್ಲ, ಹುಡುಕಿಕೊಡು ಅಂತಾ ಬಂದು ಕೇಳಿದನು. ಆಗ ನಾನು ಅವನಿಗೆ ಈಗ ನಾನು ಯುಡಿಆರ್ ಪ್ರಕರಣದಲ್ಲಿ ತನಿಖೆ ಕೈಕೊಳ್ಳುತ್ತಿದ್ದೇನೆ ನೀನು ಶಹಾಪೂರ ಪೊಲೀಸ್ ಠಾಣೆಗೆ ಹೋಗು ನಾನು ಭೀ.ಗುಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಅಂತಾ ಹೇಳಿದರೂ ಕೇಳದೆ, ಅವನು ನನಗೆ ನೀನು ಹೋಮ್ಗಾರ್ಡ ಆಗಬೇಕಿತ್ತು, ಎ.ಎಸ್.ಐ ಆಗಲು ನೀನು ನಾಲಾಯಕ್ ಇದ್ದೀಯ, ನೀನೇನು ಸೆಂಟಾ ತನಿಖೆ ಮಾಡುತ್ತಿ ಅಂತಾ ಅಂದನು. ಆಗ ನಾನು ಅವನಿಗೆ ದೊಡ್ಡ ಮನುಷ್ಯ ಅದಿ ಈಗ ಇಲ್ಲಿಂದ ಹೋಗು ಸುಮ್ಮನೆ ಯಾಕೆ ನನ್ನ ಕರ್ತವ್ಯದಲ್ಲಿ ತೊಂದರೆ ಕೊಡುತ್ತಿದ್ದೀಯ ಅಂತಾ ಹೇಳಿದೆನು. ಅಲ್ಲದೇ ಅಲ್ಲೇ ನಿಂತಿದ್ದ ಕಳಸಪ್ಪಗೌಡ ತಂದೆ ಸಿದ್ದಣ್ಣಗೌಡ ಮಾಲಿಪಾಟಿಲ್ ಮತ್ತು ನಾಗಪ್ಪಗೌಡ ತಂದೆ ಸಂಗಪ್ಪಗೌಡ ಪೊಲೀಸ್ ಪಾಟಿಲ್ ಇಬ್ಬರೂ ಸಾ:ಶಕಾಪೂರ ಇವರು ಸಹ ಅವನಿಗೆ ಬುದ್ದಿವಾದ ಹೇಳಿ ಕಳಿಸಿಕೊಡಲು ಪ್ರಯತ್ನಿಸಿದರೂ ಅವನು ನಮ್ಮ ಯಾರ ಮಾತು ಕೇಳದೇ ಉದ್ದೇಶ ಪೂರ್ವಕವಾಗಿ ನನ್ನ ಕರ್ತವ್ಯದಲ್ಲಿ ಅಡೆತಡೆ ಮಾಡಬೇಕು ಎಂಬ ಉದ್ದೇಶದಿಂದ ಪದೇ ಪದೇ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನು. ಅದೇ ಸಮಯಕ್ಕೆ ಜಿಂದಾವಲಿ ಇವರು ಹೊರಗೆ ಬಂದು ಅವರು ಸಹ ಅವನಿಗೆ ಬುದ್ದಿ ಮಾತು ಹೇಳಿ ಕಳಿಸಿಕೊಡಲು ಪ್ರಯತ್ನಿಸಿದರೂ ಕೇಳದೇ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದಾಗ ನಮ್ಮ ಸಿಬ್ಬಂದಿ ಜಿಂದಾವಲಿ, ಸಾರ್ವಜನಿಕರಾದ ಕಳಸಪ್ಪಗೌಡ, ನಾಗಪ್ಪಗೌಡ ಹಾಗೂ ಇತರರು ಕೂಡಿ ಅವನು ನನ್ನ ಮೇಲೆ ಹಲ್ಲೆ ಮಾಡುವುದನ್ನು ತಡೆದರು.
ನಂತರ ನಾನು ಭೀ.ಗುಡಿ ಪೊಲೀಸ್ ಠಾಣೆಗೆ ಹೋಗಿ ಯು.ಡಿ.ಆರ್ ಪ್ರಕರಣದಲ್ಲಿ ತನಿಖೆ ಮುಗಿಸಿಕೊಂಡು ತಡವಾಗಿ ಶಹಾಪೂರ ಠಾಣೆಗೆ ಬಂದು ದೂರು ಸಲ್ಲಿಸಿರುತ್ತೇನೆ. ಕಾರಣ ಮೇಲ್ಕಂಡ ಪರಮೇಶ ತಂದೆ ಗುರಪ್ಪ ಹೊಸಮನಿ ಸಾ: ಯುಕೆಪಿ ಕ್ಯಾಂಪ್ ಭೀ.ಗುಡಿ ಈತನು ಉದ್ದೇಶ ಪೂರ್ವಕವಾಗಿ ನನ್ನ ಪೊಲೀಸ್ ಕರ್ತವ್ಯದಲ್ಲಿ ಅಡೆತಡೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಲು ಮುಂದಾಗಿದ್ದು ಸದರಿಯವನ ವಿರುಧ್ಧ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 100/2022 ಕಲಂ 504, 353 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 102/2022 ಕಲಂ: 279, 337, 338 ಐಪಿಸಿ ಮತ್ತು 187 ಐಎಂವಿ ಯಾಕ್ಟ್: ಇಂದು ದಿನಾಂಕ 11/06/2022 ರಂದು 8.00 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಮಲ್ಲಮ್ಮ ಗಂಡ ರಾಜಶೇಖರ ಕಟ್ಟಿಮನಿ ವ|| 20ವರ್ಷ ಜಾ|| ಮಾದಿಗ ಉ|| ಕೂಲಿ ಸಾ|| ಅಂಕಲಗಾ ತಾ|| ಜೇವಗರ್ಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನೆಂದರೆ, ನನ್ನ ತವರುಮನೆಯು ಹೆಗ್ಗಣದೊಡ್ಡಿ ಗ್ರಾಮವಾಗಿದ್ದು ಗಂಡನ ಮನೆಯು ಜೇವಗರ್ಿ ತಾಲೂಕಿನ ಅಂಕಲಗಾ ಗ್ರಾಮವಾಗಿರುತ್ತದೆ. ನನ್ನ ಗಂಡನಾದ ರಾಜಶೇಖರ ತಂದೆ ಭೀಮಶ್ಯಾ ಕಟ್ಟಿಮನಿ ವ|| 25 ಜಾ|| ಮಾದಿಗ ಉ|| ಅಟೋಚಾಲಕ ಸಾ|| ಅಂಕಲಗಾ ಈತನು ಅಟೋ ಚಲಾಯಿಸಿಕೊಂಡು ಸಂಸಾರ ಸಾಗಿಸುತ್ತಿದ್ದಾನೆ. ನನ್ನ ತವರುಮನೆಯಾದ ಹೆಗ್ಗಣದೊಡ್ಡಿ ಗ್ರಾಮಕ್ಕೆ ಆಗಾಗ್ಗೆ ನಾನು ಮತ್ತು ನನ್ನ ಗಂಡನಾದ ರಾಜಶೇಖರ ಇಬ್ಬರೂ ಕೂಡಿ ನಮ್ಮ ಅಟೋ ನಂ ಕೆಎ 33 9762 ನೇದ್ದರಲ್ಲಿ ಬಂದು ಹೋಗುತ್ತಿದ್ದೆವು. ಹೀಗಿದ್ದು ನಿನ್ನೆ ದಿನಾಂಕ 10/06/2022 ರಂದು 5.00 ಪಿಎಂ ಸುಮಾರಿಗೆ ನಾನು ಮತ್ತು ನನ್ನ ಗಂಡ ಇಬ್ಬರೂ ಕೂಡಿ ನಮ್ಮ ಅಟೋ ನಂ ಕೆಎ 33 9762 ನೇದ್ದರಲ್ಲಿ ಹೆಗ್ಗಣದೊಡ್ಡಿ ಗ್ರಾಮಕ್ಕೆ ಹೋಗುವ ಕುರಿತು ಅಂಕಲಗಾ ಗ್ರಾಮದಿಂದ ಹೊರಟು ಕೆಂಭಾವಿ ಪಟ್ಟಣ ದಾಟಿ ಸುರಪೂರ ರಸ್ತೆಯ ಮೇಲೆ ಹಿರೇಮಠ ಪೆಟ್ರೋಲ್ ಪಂಪ್ ಮುಂದೆ ಹೋಗುತ್ತಿದ್ದಾಗ 7.30 ಪಿಎಂ ಸುಮಾರಿಗೆ ಒಬ್ಬ ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಹಿಂದಕ್ಕೆ ಚಲಾಯಿಸಿಕೊಂಡು ಬಂದು ನಮ್ಮ ಅಟೋಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದನು. ಅಪಘಾತದಿಂದಾಗಿ ನಮ್ಮ ಅಟೋದ ಮುಂದಿನ ಭಾಗ ಜಖಂಗೊಂಡು ಅಟೋ ನಡೆಸುತ್ತಿದ್ದ ನನ್ನ ಗಂಡನಾದ ರಾಜಶೇಖರನಿಗೆ ಎಡಗಾಲಿನ ಮೊಳಕಾಲು ಕೆಳಗೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿ ಕಾಲು ಮುರಿದಿದ್ದು ಇರುತ್ತದೆ. ನನಗೆ ಎಡಗಣ್ಣಿನ ಹತ್ತಿರ ಕಪಾಳಕ್ಕೆ ರಕ್ತಗಾಯ, ಮೂಗಿಗೆ ತರಚಿದ ಗಾಯ ಮತ್ತು ಕಾಲಿಗೆ ಒಳಪೆಟ್ಟು ಗಾಯವಾಗಿದ್ದು ನಾವು ಅಟೋದಿಂದ ಕೆಳಗೆ ಬಿದ್ದುದನ್ನು ನೋಡಿದ ಕೆಂಭಾವಿ ಪಟ್ಟಣದ 3-4 ಜನರು ನಮಗೆ ಎಬ್ಬಿಸಿ 108 ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಕೆಂಭಾವಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನಮಗೆ ಅಪಘಾತ ಮಾಡಿದ ಲಾರಿಯ ನಂಬರ ನೋಡಲಾಗಿ ಕೆಎ 28 ಡಿ 8768 ಇದ್ದು ಲಾರಿಯ ಚಾಲಕನು ಅಪಘಾತ ಮಾಡಿ ಲಾರಿ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ ಅವನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ಅಪಘಾತದಿಂದಾಗಿ ನನಗೆ ತೀವ್ರತರವಾದ ಗಾಯಗಳಾಗದೇ ಕಡಿಮೆ ಪ್ರಮಾಣದ ಗಾಯಗಳಾಗಿದ್ದರಿಂದ ನಾನು ಕೆಂಭಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಆದರೆ ನನ್ನ ಗಂಡನಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದರಿಂದ ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಂದು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ನಾವು ಹೆಗ್ಗಣದೊಡ್ಡಿ ಗ್ರಾಮಕ್ಕೆ ಹೋಗುವ ಕುರಿತು ಕೆಂಭಾವಿ ಸುರಪೂರ ರಸ್ತೆಯ ಮೇಲೆ ಕೆಂಭಾವಿ ಪಟ್ಟಣದ ಹಿರೇಮಠ ಪೆಟ್ರೋಲ್ ಪಂಪ್ ಮುಂದೆ ಹೋಗುತ್ತಿದ್ದಾಗ ನಮ್ಮ ಅಟೋ ನಂ ಕೆಎ 33 9762 ನೇದ್ದಕ್ಕೆ ಲಾರಿ ನಂ ಕೆಎ 28 ಡಿ 8768 ನೇದ್ದರ ಚಾಲಕನು ತನ್ನ ಲಾರಿಯನ್ನು ಹಿಂದಕ್ಕೆ ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿ ಅಪಘಾತ ಮಾಡಿ ಲಾರಿ ಚಾಲಕನು ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಅಪಘಾತ ಮಾಡಿದ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 102/2022 ಕಲಂ 279,337,338 ಐಪಿಸಿ ಮತ್ತು 187 ಐಎಂವಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 72/2022 ಕಲಂ 379 ಐಪಿಸಿ: :- ಫಿಯರ್ಾದಿ ಸಾರಾಂಶವೇನೆಂದರೆ, ನನ್ನ ಹೆಸರಿನ ಮೇಲೆ ಒಂದು ಹಿರೋ ಸ್ಲ್ಪೆಂಡರ್ ಪ್ರೋ ಮೋಟರ್ ಸೈಕಲ್ ಇದ್ದು, ಅದರ ನಂ ಏಂ 33 ಐ 6898, ಇಟಿರಟಿಜ ಓಠ-ಊಂ10ಇಐಅಊಒ49025, ಅಊಂಖಖಖ ಓಔ-ಃಐಊಂ10ಂಖಅಊಒ73006, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 25,000/-ರೂ|| ಗಳು. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು ಪ್ರತಿನಿತ್ಯದಂತೆ ನಾನು ದಿನಾಂಕ 31/05/2022 ರಂದು ಬೆಳಿಗ್ಗೆ ಗೌಂಡಿ ಕೆಲಸ ಮಾಡಲಿಕ್ಕೆ ಯಾದಗಿರಿ ನಗರಕ್ಕೆ ಬಂದು ಗಂಜ್ ಏರಿಯಾದಲ್ಲಿ ಕೆಲಸ ಮುಗಿಸಿಕೊಂಡು ಸಂಜೆ 05-00 ಗಂಟೆಯ ಸುಮಾರಿಗೆ ಯಾದಗಿರಿ ನಗರದ ರೈಲ್ವೆ ಕ್ವಾಟರ್ಸ್ ದಲ್ಲಿ ಇರುವ ನನ್ನ ಅಣ್ಣನಾದ ವಿಜಯಕುಮಾರ ತಂದೆ ಪತ್ತು ಪವ್ಹಾರ ಇವರ ಮನೆಗೆ ಬಂದೆನು. ಸಂಜೆ 05-30 ಗಂಟೆಯ ಸುಮಾರಿಗೆ ನನ್ನ ಅಣ್ಣ ನನ್ನ ಮೋಟರ್ ಸೈಕಲ್ ತೆಗೆದುಕೊಂಡು ರೈಲ್ವೆ ಸ್ಟೇಷನ್ದಲ್ಲಿ ಇರುವ ಎಸ್.ಬಿ.ಐ ಬ್ಯಾಂಕ್ ಎ.ಟಿ.ಎಂಗೆ ಹೋಗಿ ಹಣ ಡ್ರಾ ಮಾಡಿಕೊಂಡು ಬರುತ್ತೇನೆ ಅಂತಾ ನನ್ನ ಮೋಟರ್ ಸೈಕಲ್ ತೆಗೆದುಕೊಂಡು ಹೋದನು. ನಂತರ ನನಗೆ ಪೋನ್ ಮಾಡಿ ನಾನು ಹಣ ಡ್ರಾ ಮಾಡಿಕೊಂಡು ಹೊರಗೆ ಬಂದು ನೋಡಿದಾಗ ರೈಲ್ವೆ ಸ್ಟೇಷನ್ ಮುಂದೆ ನಿಲ್ಲಿಸಿದ ನಮ್ಮ ಮೋಟರ್ ಸೈಕಲ್ ಕಾಣತಾ ಇಲ್ಲಾ ಅಂತಾ ತಿಳಿಸಿದಾಗ ನಾನು ಕೂಡಲೆ ಸ್ಥಳಕ್ಕೆ ಹೋದೆನು. ಇಬ್ಬರು ಕೂಡಿ ಅಲ್ಲಿ ಸುತ್ತಾ ಮುತ್ತಾ ನೋಡಿದರು ಮೋಟರ್ ಸೈಕಲ್ ಕಾಣದೇ ಇದ್ದರಿಂದ ನಮ್ಮ ಗೆಳೆಯರಾದ 1] ದೀಪಕ್ ತಂದೆ ಮಲ್ಲಪ್ಪ ಒಡೆಯರ ಮತ್ತು 2] ಅಶೋಕ ತಂದೆ ತಿಪ್ಪಣ್ಣ ಹತ್ತಿಮನಿ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಅವರು ಕೂಡ ಅಲ್ಲಿಗೆ ಬಂದರು. ಎಲ್ಲರು ಕೂಡಿ ರೈಲ್ವೆ ಸ್ಟೇಷನ್ ಏರಿಯಾ ಹಳೆಯ ಬಸ್ ನಿಲ್ದಾಣ ಏರಿಯಾದಲ್ಲಿ ತಿರುಗಾಡಿ ನೋಡಿದರು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಸದರಿ ಮೋಟರ್ ಸೈಕಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ದಿನಾಂಕ 31/05/2022 ರಂದು ಸಾಯಂಕಾಲ 05-30 ಗಂಟೆಯಿಂದ 05-45 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಯಾದಗಿರಿ ನಗರದ ರೈಲ್ವೆ ಸ್ಟೇಷನ್ ಮುಂದೆ ನಿಲ್ಲಿಸಿ ರೈಲ್ವೆ ಸ್ಟೇಷನ್ದಲ್ಲಿ ಇದ್ದ ಎಸ್.ಬಿ.ಐ ಎ.ಟಿ.ಎಂ ದಲ್ಲಿ ಹಣ ಡ್ರಾ ಮಾಡಿಕೊಂಡು ಬರುವಷ್ಟರಲ್ಲಿ ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮನೆಯಲ್ಲಿ ವಿಚಾರಣೆ ಮಾಡಿ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು ನಮ್ಮ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 72/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಕೊಡೆಕಲ್ಲ ಪೊಲೀಸ್ ಠಾಣೆ:-
ಗುನ್ನೆ ನಂ: 45/2022 87 ಕೆ ಪಿ ಆಕ್ಟ: ಇಂದು ದಿನಾಂಕ: 11.06.2022 ರಂದು ಮುಂಜಾನೆ 11:30 ಗಂಟೆಗೆ ಪಿಎಸ್ಐ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರವನ್ನು ನೀಡಿದ್ದು ಪಿಎಸ್ಐ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶವೆನೆಂದರೆ ಇಂದು ದಿನಾಂಕ:11.06.2022 ರಂದು ಮುಂಜಾನೆ 11:00 ಗಂಟೆಗೆ ಠಾಣೆಯಲ್ಲಿದ್ದಾಗ ನನಗೆ ಕೊಡೆಕಲ್ಲ ಗ್ರಾಮದ ತಾಳಿಕೋಟಿ-ಕೊಡೆಕಲ್ಲ ಮುಖ್ಯ ರಸ್ತೆಯ ಪಕ್ಕದಲ್ಲಿಯ ಅಮರಜ್ಯೋತಿ ಆಸ್ಪತ್ರೆಯ ಹಿಂದಿನ ಕೆನಾಲ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಅಂದರ್ ಬಾಹರ್ ಎಂಬುವ ಇಸ್ಪೇಟ್ ಜೂಜಾಟ ಆಡುತ್ತಿದ್ದು, ಅವರವರಲ್ಲಿ ಹಣವನ್ನು ಪಣಕ್ಕೆ ಕಟ್ಟಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ಹೆಚ್ಸಿ-117 ರವರಿಂದ ಮಾಹಿತಿ ಬಂದಿದ್ದು. ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಇಂದು ಠಾಣೆಗೆ ಭೇಟಿ ನೀಡಿದ್ದ ಮಾನ್ಯ ನ್ಯಾಯಾಧೀಶರು ಜೆಎಮ್ಎಫ್ಸಿ ನ್ಯಾಯಾಲಯ ಸುರಪೂರ ರವರಿಗೆ ಯಾದಿ ಬರೆದು 11:15 ಗಂಟೆಗೆ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಧೀಶರು ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು 11:25 ಗಂಟೆಗೆ ಅನುಮತಿ ನೀಡಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯವು ನೀಡಿದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಡಲಾಗಿದೆ ಅಂತ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:45/2022 ಕಲಂ:87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 102/2022 ಕಲಂ: 341, 323, 504 ಐ.ಪಿ.ಸಿ: ಇಂದು ದಿನಾಂಕ: 11/06/2022 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಜಯದೇವ ಆಸ್ಪತ್ರೆ ಕಲಬುರಗಿಯಿಂದ ಎಮ್.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ, ಆಸ್ಪತ್ರೆಗೆ ಬೇಟಿ ನೀಡಿ ಉಪಚಾರ ಪಡೆಯುತ್ತಿದ್ದ ಗಾಯಾಳು ಪರಮೇಶ್ವರ@ ಪರಮೇಶಿ ತಂದೆ ಗುರಪ್ಪ ಹೊಸಮನಿ ವಯಾ: 33 ಸಾ: ಲಿಂಗೇಶ್ವರ ಗುಡಿ ಹತ್ತಿರ ಭೀ-ಗುಡಿ ರವರು ನೀಡಿದ ಹೇಳಿಕೆ ಸಾರಾಂಶವೆನೆಂದರೆ ನಾನು ನಿನ್ನೆ ದಿನಾಂಕ: 10/06/2022 ರಂದು ಖಾಸಗಿ ಕೆಲಸದ ನಿಮಿತ್ಯವಾಗಿ ಭೀ-ಗುಡಿ ಯಿಂದ ಶಹಾಪೂರಕ್ಕೆ ಸಾಯಾಂಕಾಲ 7-00 ಗಂಟೆ ಸುಮಾರಿಗೆ ಬಂದಿದ್ದೆನು, ನಂತರ ಸುದ್ದಿ ಗೊತ್ತ್ತಾಗಿದ್ದೆನೆಂದರೆ ಭೀ-ಗುಡಿಯ ಬಾಪುಗೌಡ ಸರ್ಕಲ್ ಹತ್ತಿರ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಗೊತ್ತಾಗಿ, ನಾನು ಶಹಾಪೂರ ಸರಕಾರಿ ಆಸ್ಪತ್ರೆಗೆ ಹೋದೆನು, ನಾನು ಯಾರು ಉರುಲು ಹಾಕಿಕೊಂಡಿದ್ದಾರೆ ನಮ್ಮ ಭೀ-ಗುಡಿಯವರು ಅಂತಾ ಕೇಳುತ್ತಾ ಆಸ್ಪತ್ರೆಯ ಮುಂದೆ ನಿಂತಾಗ ಭೀ-ಗುಡಿ ಪೊಲೀಸ್ ಠಾಣೆಯ ಎ.ಎಸ್.ಐ ರವರಾದ ವೆಂಕಟೇಶ ಇವರು ನನ್ನ ಹತ್ತಿರ ಬಂದು ನಿನ್ನದು ಏನು ಕೆಲಸ ಇಲ್ಲಿ, ಇಲ್ಲಿಂದ ಹೋಗು ಅಂತಾ ಅಂದರು, ಆಯಿತು ಹೋಗುತ್ತೇನೆ ಅಂತಾ ಅಂದೆನು ನಂತರ ಅಲ್ಲಿಯೇ ಆಸ್ಪತ್ರೆಯ ಮುಂದೆ ನಿಂತಿದ್ದೆನು, ಆಗ ವೆಂಕಟೇಶ ಎ.ಎಸ್.ಐ ರವರು ಎಷ್ಟು ಸಲ ಹೇಳಬೇಕು ನಿನಗೆ ಹೋಗು ಅಂದಾಗ ನಾನು ಆಸ್ಪತ್ರೆಯಿಂದ ಹೊರಗೆ ಹೋಗುವಾಗ ಎ.ಎ.ಸ್.ಐ ರವರು ನನಗೆ ತಡೆದು ನಿಲ್ಲಿಸಿ ಬೊಸಡಿ ಮಗನೇ ನಿನಗೆ ಎಷ್ಟು ಸಲ ಹೇಳಬೇಕು ಇಲ್ಲಿಂದ ಹೋಗು ಅಂತಾ ಬೈಯುತ್ತಾ ಕೈಯಿಂದ ಕಪಾಳಕ್ಕೆ, ಬಲ ಕಿವಿಯ ಹತ್ತಿರ, ತಲೆಗೆ ಹೊಡೆದು ಒಳಪೆಟ್ಟು ಮಾಡಿದರು, ಅಲ್ಲದೇ ಕಾಲಿನಿಂದ ಬೆನ್ನಿಗೆ, ಟೊಂಕಕ್ಕೆ, ಹೊಟ್ಟೆಗೆ ಒದ್ದು ಒಳಪೆಟ್ಟು ಮಾಡಿರುತ್ತಾರೆ. ನಂತರ ನಾನು ಶಹಪೂರದಲ್ಲಿರುವ ಅಕ್ಕಳಾದ ಸತ್ಯಮ್ಮ ಗಂಡ ಸಾಯಬಣ್ಣ ಬಾವಿಮನಿ ಇವರ ಮನೆಗೆ ಹೋಗಿದ್ದು, ಅವರೊಂದಿಗೆ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿದ್ದು, ನಂತರ ಹೆಚ್ಚಿನ ಉಪಚಾರ ಕುರಿತು ಜಯದೇವ ಆಸ್ಪತ್ರೆ ಕಲಬುರಿಗಿಗೆ ಅಕ್ಕ ಸತ್ಯಮ್ಮ ಇವಳು ರಾತ್ರಿ ವೇಳೆಯಲ್ಲಿ ಸೇರಿಕೆ ಮಾಡಿರುತ್ತಾಳೆ. ಸದರಿ ಘಟನೆ ನಡೆದಾಗ ರಾತ್ರಿ 9-00 ಗಂಟೆ ಆಗಿತ್ತು.
ಕಾರಣ ನಾನು ಶಹಾಪೂರ ಸರಕಾರಿ ಆಸ್ಪತ್ರೆ ಮುಂದೆ ನಿಂತಿದ್ದಾಗ ಭೀ-ಗುಡಿ ಪೊಲೀಸ್ ಠಾಣೆಯ ಎ.ಎಸ್.ಐ ರವರಾದ ವೆಂಕಟೇಶ ಇವರು ನನಗೆ ತಡೆದು ನಿಲ್ಲಿಸಿ ಕೈಯಿಂದ ಕಪಾಳಕ್ಕೆ ತಲೆಗೆ, ಬಲ ಕಿವಿಯ ಹತ್ತಿರ ಹೊಡೆದು ಮತ್ತು ಕಾಲಿನಿಂದ ಬೆನ್ನಿಗೆ, ಟೊಂಟಕ್ಕೆ, ಹೊಟ್ಟೆಗೆ ಒದ್ದು ಒಳಪೆಟ್ಟು ಮಾಡಿದ್ದು, ಸದರಿಯವರ ಮೇಲೆ ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಪಡೆದುಕೊಂಡು ಠಾಣೆಗೆ ರಾತ್ರಿ 9-15 ಗಂಟೆಗೆ ಬಂದು ಗಾಯಾಳು(ಪಿರ್ಯಾದಿ) ಹೇಳಿಕೆ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 102/2022 ಕಲಂ: 341, 323, 504 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 103/2022 ಕಲಂ 15[ಎ],32[3] ಕೆ. ಇ ಯಾಕ್ಟ: ಇಂದು ದಿನಾಂಕ 11.06.2022 ರಂದು 06.20 ಪಿ ಎಮ್ ಕ್ಕೆ ಮಾನ್ಯ ಪಿ ಎಸ್ ಐ ಸಾಹೇಬರಾದ ಶ್ರಿ ವೆಂಕಣ್ಣ ಪಿ ಎಸ್ ಐ [ತನಿಖೆ] ರವರು ಠಾಣೆಗೆ ಹಾಜರಾಗಿ ಕೊಟ್ಟ ವರಧಿ ಏನಂದರೆ , ಇಂದು ದಿನಾಂಕ: 11.06.2022 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ನಾನು ಕರಡಕಲ್ ಗ್ರಾಮದಲ್ಲಿ ಆನಂದ ಪಿಸಿ 43, ಈರಪ್ಪ ಪಿಸಿ 386, ಸಿದ್ದಪ್ಪ ಪಿಸಿ 129 ಹಾಗು ಬಸವರಾಜ ಪಿಸಿ 363 ರವರೊಂದಿಗೆ ಪೆಟ್ರೋಲ್ ಕರ್ತವ್ಯದಲ್ಲಿದ್ದಾಗ ಮಾಹಿತಿ ಬಂದಿದ್ದೇನಂದರೆ ಸದರಿ ಗ್ರಾಮದ ಗ್ರಾಮ ಪಂಚಾಯತಿಯ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದಾನೆಂದು ಮಾಹಿತಿ ಮೇರೆಗೆ ಠಾಣೆಗೆ ಇಬ್ಬರು ಪಂಚರಾದ 1) ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವಯಾ|| 37 ಜಾ|| ಪ.ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಮಕ್ತುಮ ತಂದೆ ಮಾಸುಮಸಾಬ ವಡಕೇರಿ ವಯಾ|| 36 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಬರಮಾಡಿಕೊಂಡು ಅವರಿಗೂ ಮಾಹಿತಿ ತಿಳಿಸಿ ದಾಳಿ ಮಾಡಲು ಸಹಕರಿಸಲು ತಿಳಿಸಿದ್ದು ಅವರು ಒಪ್ಪಿದ್ದರಿಂದ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಜೀಪ ಚಾಲಕ ಪೆದ್ದಪ್ಪಗೌಡ ರವರನ್ನು ಕರೆದುಕೊಂಡು ಸರಕಾರಿ ಜೀಪ ನಂಬರ ಕೆಎ-33 ಜಿ-0228 ನೇದ್ದರಲ್ಲಿ ಠಾಣೆಯಿಂದ 04.15 ಪಿಎಮ್ಕ್ಕೆ ಹೊರಟು 04.45 ಪಿಎಮ್ಕ್ಕೆ ಕರಡಕಲ್ ಗ್ರಾಮದ ಪಂಚಾಯತಿಯ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಸ್ಥಳದಿಂದ ಸುಮಾರು 100 ಅಡಿ ದೂರದಲ್ಲಿ ನಿಂತು ಮದ್ಯ ಮಾರಾಟ ಮಾಡುವದನ್ನು ನೋಡಿ ಖಚಿತಪಡಿಸಿಕೊಂಡು ನಾನು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಹೋಗುತ್ತಿದ್ದಾಗ ನಮ್ಮನ್ನು ನೋಡಿ ಅಲ್ಲಿ ಸೇರಿದ್ದ ಜನರು ಓಡಿ ಹೋದರು. ಮಧ್ಯ ಮಾರಾಟ ಮಾಡುತ್ತಿದ್ದವನು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ನಾನು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿಯನ್ನು ಹಿಡಿದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಮಲ್ಲಣ್ಣ ತಂದೆ ಬೈಲಣ್ಣ ತೋಟದ್ ವಯಾ|| 30 ವರ್ಷ ಜಾ|| ಬೇಡರ ಉ|| ವ್ಯಾಪಾರ ಸಾ|| ಕರಡಕಲ್ ಅಂತ ತಿಳಿಸಿದನು. ನಂತರ ಸದರಿ ಸ್ಥಳದಲ್ಲಿದ್ದ ಒಂದು ಹಳೆಯ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಮಧ್ಯ ತುಂಬಿದ್ದು ಸದರ ಚೀಲದಲ್ಲಿ 180 ಎಮ್ಎಲ್ನ ಎರಡು ಬ್ಯಾಗ್ ಪೈಪರ್ ವಿಸ್ಕಿ ಪೌಚು ಇದ್ದು ಒಟ್ಟು 02 ಪೌಚುಗಳು ಇದ್ದು ಒಂದು ಪೌಚಿನ ಬೆಲೆ 106.23 ರೂ. ಅಂತ ಇದ್ದು ಒಟ್ಟು ಎರಡು ಪೌಚ್ಗಳ ಬೆಲೆ 212.46/- ರೂ ಆಗುತ್ತಿದ್ದು ಅಲ್ಲದೇ 90 ಎಮ್ ಎಲ್ ನ 6 ಓರಿಜಿನಲ್ ಚ್ವಾಯೀಸ್ ಪೌಚಗಳು ಇದ್ದು ಒಂದು ಪೌಚನ ಬೆಲೆ 35.13 ಇದ್ದು ಒಟ್ಟು 06 ಪೌಚಗಳ ಬೆಲೆ 210.78 ರೂ. ಆಗುತ್ತಿದ್ದು ನಂತರ ಸಿಕ್ಕ ವ್ಯಕ್ತಿಗೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ಮಾಡಿಕೊಡಲು ಯಾವುದಾದರು ಅಧಿಕೃತ ಪರವಾನಿಗೆ ಇದೆಯೇ ಎಂದು ವಿಚಾರಿಸಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದನು. ಸದರಿ ಮಧ್ಯ ತುಂಬಿದ ಪೌಚ್ಗಳನ್ನು 04:50 ಪಿಎಮ್ದಿಂದ 05.50 ಪಿಎಮ್ದವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತಪಡಿಸಿಕೊಳ್ಳಲಾಯಿತು ನಂತರ ಮೇಲ್ಕಂಡ ಆರೋಪಿತನೊಂದಿಗೆ 06:20 ಪಿಎಮ್ಕ್ಕೆ ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಕಲಂ: 15(ಎ), 32(3) ಕೆಇ ಆಕ್ಟ ರೀತ್ಯಾ ಕ್ರಮ ಜರುಗಿಸಬೇಕು ಅಂತ ಇದ್ದ ವರಧಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 103/2022 ಕಲಂ 15[ಎ],32[3] ಕೆಇ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 12-06-2022 10:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080