ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 12-07-2021

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ : 91/2021 ಕಲಂ: 457, 380 ಐಪಿಸಿ : ಇಂದು ದಿನಾಂಕ:11/07/2021 ರಂದು 5-30 ಪಿಎಮ್ ಕ್ಕೆ ಶ್ರೀ ಜಮಾಲಸಾಬ ತಂದೆ ಇಮಾಮಸಾಬ ನಾಯ್ಕೋಡಿ, ವ:26, ಜಾ:ಮುಸ್ಲಿಂ, ಉ:ಮೊಬೈಲ್ ಅಂಗಡಿ ಸಾ:ಗೊಂದೆನೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಗೊಂದೆನೂರು ಕ್ರಾಸನಲ್ಲಿ ಸುಮಾರು ಒಂದು ವರ್ಷದಿಂದ ಮೊಬೈಲ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇನೆ. ನಾನು ಪ್ರತಿ ದಿನ ಬೆಳಗ್ಗೆ 8-30 ಗಂಟೆ ಸುಮಾರಿಗೆ ಅಂಗಡಿ ತೆರೆದು ರಾತ್ರಿ ವರೆಗೆ ವ್ಯಾಪಾರ ಮಾಡಿ, ರಾತ್ರಿ 9 ಗಂಟೆಗೆ ಅಂಗಡಿ ಬಂದ ಮಾಡಿಕೊಂಡು ಮನೆಗೆ ಹೋಗುತ್ತೇನೆ. ಹೀಗಿದ್ದು ಪ್ರತಿ ದಿನದಂತೆ ದಿನಾಂಕ:09/07/2021 ರಂದು ಬೆಳಗ್ಗೆ 8-30 ಗಂಟೆ ಸುಮಾರಿಗೆ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿ ರಾತ್ರಿ 9 ಗಂಟೆ ಸುಮಾರಿಗೆ ಅಂಗಡಿಯನ್ನು ಬಂದ ಮಾಡಿ, ಶಟರ್ ಕೀಲಿ ಹಾಕಿಕೊಂಡು ಮನಗೆ ಹೋಗಿ ಊಟ ಮಾಡಿ ಮಲಗಿಕೊಂಡೆನು. ಮರು ದಿವಸ ದಿನಾಂಕ:10/07/2021 ರಂದು ಬೆಳಗ್ಗೆ 6-30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಗೊಂದೆನೂರು ಕ್ರಾಸನಲ್ಲಿ ಚಿಕನ್ ಅಂಗಡಿ ಇಟ್ಟಿರುವ ಮೋಸಿನ ತಂದೆ ಮಂಜೂರಸಾಬ ಜಮಾದಾರ ಈತನು ನನಗೆ ಫೋನ ಮಾಡಿ ನಿನ್ನ ಮೊಬೈಲ್ ಅಂಗಡಿಯ ಶಟರ್ ಅರ್ಧ ತೆರೆದಿದೆ ಯಾಕೆ ಎಂದು ಹೇಳಿದನು. ಆಗ ಗಾಭರಿಯಾದ ನಾನು ಕೂಡಲೇ ನನ್ನ ಅಂಗಡಿಗೆ ಬಂದು ನೋಡಲಾಗಿ ನನ್ನ ಅಂಗಡಿಯ ಶಟರದ ಬೀಗವನ್ನು ರಾಡಿನಿಂದ ಮೀಟಿ ಶಟರ್ ತೆರೆದಿದ್ದು, ಒಳಗಡೆಯ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿದ್ದವು. ನಾನು ಒಳಗಡೆ ಹೋಗಿ ನೋಡಲಾಗಿ ನನ್ನ ಅಂಗಡಿ ಗಲ್ಲಾದಲ್ಲಿಟ್ಟಿದ್ದ ನಗದು ಹಣ 2000/- ರೂ., 2 ಕೆ.ಡಿ.ಎಮ್ ಕಂಪನಿಯ ಎರಡು ಮೊಬೈಲ್ ಚಾರ್ಜರಗಳು ಅ:ಕಿ:600/- ಮತ್ತು 2 ಪೊಟರ್ೇಬಲ್ ಕಂಪನಿಯ ಬ್ಲೂಟೂತ್ ಸ್ಪೀಕರಗಳು ಅ:ಕಿ:800/- ಕಳುವು ಆಗಿದ್ದವು. ನಾನು ಮತ್ತು ಮೋಸಿನ ಹಾಗೂ ದೇವಪ್ಪ ಬಾಗ್ಲಿ ಮೂರು ಜನ ಕೂಡಿ ಎಲ್ಲಾ ಕಡೆ ಹುಡುಕಾಡಿದೆವು. ಕಾರಣ ಯಾರೋ ಕಳ್ಳರು ದಿನಾಂಕ: 09/07/2021 ರಂದು ರಾತ್ರಿ 9 ಗಂಟೆಯಿಂದ ದಿನಾಂಕ:10/07/2021 ರ ಬೆಳಗಿನ ಜಾವ 6-30 ಗಂಟೆ ಮಧ್ಯದ ಅವಧಿಯಲ್ಲಿ ನನ್ನ ಮೊಬೈಲ್ ಅಂಗಡಿಯ ಶಟರ ಬೀಗವನ್ನು ರಾಡಿನಿಂದ ಮೀಟಿ ಶಟರ್ ಎತ್ತಿ ನಗದು ಹಣ 2000/- ರೂ. ಮತ್ತು 1400/- ಬೆಲೆ ಬಾಳುವ ಎರಡು ಚಾರ್ಜರ ಮತ್ತು ಎರಡು ಬ್ಲೂಟೂತ್ ಸ್ಪೀಕರಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿ ಮತ್ತು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಿ, ನಮ್ಮ ಕಳುವಾದ ನಗದು ಹಣ, ಚಾರ್ಜರ, ಸ್ಪೀಕರ ಇವುಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 91/2021 ಕಲಂ: 457, 380 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ : 98/2021 ಕಲಂ 279, 338 ಐಪಿಸಿ : ದಿನಾಂಕ 10/07/2021 ರಂದು ಸಾಯಂಕಾಲ 7-30 ಗಂಟೆಗೆ ಫಿರ್ಯಾಧಿದಾರನು ಉಟ ತೆಗೆದುಕೊಂಡು ತಮ್ಮೂರಿನಿಂದ ತಾನು ಕೆಲಸ ಮಾಡುವ ಸಿಮೆಂಟ ಕಂಬ ತಯ್ಯಾರು ಮಾಡುವ ಫ್ಯಾಕ್ಟರಿಗೆ ಹೋಗುವ ಕುರಿತು ಯರಗೋಳ-ನಾಲವಾರ ರೋಡಿನ ಮೇಲೆ ಸಿಮೇಟ ಪೋಲ ಫ್ಯಾಕ್ಟರಿಯ ಸಮೀಪ ರೋಡಿನ ಮೇಲೆ ನಡೆದುಕೊಂಡು ಹೋಗುವಾಗ ಹಿಂದುಗಡೆಯಿಂದ ಆರೋಪಿತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಫಿರ್ಯಾಧಿದಾರನಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಫಿರ್ಯಾಧಿಯ ಎಡಗಾಲಿಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ ಮತ್ತು ಹಣೆಗೆ ತರಚಿದ ಗಾಯವಾಗಿರುತ್ತದೆ ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 118/2021 ಕಲಂ. ಮಹಿಳೆ ಕಾಣಿಯಾದ ಬಗ್ಗೆ : ಇಂದು ದಿನಾಂಕ:11-07-2021 ರಂದು 6 ಪಿ.ಎಂ.ಕ್ಕೆ ಠಾಣೆಯ ಎಸ್ ಹೆಚ್ಡಿ ಕರ್ತವ್ಯದಲ್ಲಿದ್ದಾಗ ಶ್ರೀಮತಿ ಅಯ್ಯಮ್ಮ ಗಂ/ ನೀಲಕಂಠ ಪಾಟೀಲ್ ಬೈಚಬಾಳ ವಯಸ್ಸು 58 ವರ್ಷ ಉದ್ಯೋಗ ಮನೆಕೆಲಸ ಜಾತಿ||ಲಿಂಗಾಯತ ಸಾ|| ಸುರಪುರ ಜಿ|| ಯಾದಗಿರ ಇವರು ಠಾಣೆಗೆ ಬಂದು ಒಂದು ಗಣಕೀಕೃತ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ನನಗೆ ನಾಲ್ಕು ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದು ಅದರಲ್ಲಿ ನನ್ನ ಮಗಳಾದ ಕುಮಾರಿ ಸ್ಮೀತಾ ತಂ/ ನೀಲಕಂಠ ಪಾಟೀಲ್ ಈಕೆಯು ನನ್ನ ಪತಿಯು ನಿಧನ ಹೊಂದಿದ ಪ್ರಯುಕ್ತ ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಿ ಶಹಾಪುರ ತಾಲೂಕಾ ಪಂಚಾಯತ ವ್ಯಾಪ್ತಿಯ ಗುಂಡಗುತರ್ಿ ಗ್ರಾಮ ಪಂಚಾಯತಿಯಲ್ಲಿ ಪ್ರಭಾರಿ ಪಂಚಾಯತ ಅಭಿವೃದ್ದಿ ಅಧಿಕಾರಿ (ಪಿ.ಡಿ.ಓ) ಎಂದು ಸುಮಾರು 3-4 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾಳೆ. ಮತ್ತು ಆಕೆಗೆ ಇನ್ನು ಮಧುವೆಯಾಗಿರುವದಿಲ್ಲಾ. ಹಿಗಿದ್ದು ಎಂದಿನಂತೆ ದಿನಾಂಕ 06-07-2021 ರಂದು ಸುರಪುರದ ನಮ್ಮ ಮನೆಯಿಂದ ಬೆಳೆಗ್ಗೆ 9-00 ಘಂಟೆಗೆ ಗುಂಡಗುತರ್ಿ ಗ್ರಾಮ ಪಂಚಾಯತಗೆ ಕರ್ತವ್ಯಕ್ಕೆ ಹೋಗುತ್ತೆನೆ ಅಂತಾ ಹೇಳಿ ಮನೆಯಿಂದ ಹೋದವಳು ಎಂದಿನಂತೆ ಸರಿಯಾದ ಸಮಯಕ್ಕೆ ಅಂದರೆ ಸಾಯಂಕಾಲ 5-6 ಘಂಟೆ ಯಾದರು ಮರಳಿ ಮನೆಗೆ ಬಂದಿರುವದಿಲ್ಲಾ. ನಂತರ ನಾವು ಫೋನ ಮೂಲಕ ಸಂಪಕರ್ಿಸಲು ಪ್ರಯತ್ನಿಸಿದಾಗ ಫೋನ ಸ್ವಿಚ್ಛ ಆಫ್ ಎಂದು ಬಂದಿತು. ನಂತರ ಗಾಬರಿಗೊಂಡು ವಿಚಾರಿಸಲಾಗಿ ಎಲ್ಲಿದ್ದಾಳೆಂದು ಯಾವುದೇ ಮಾಹಿತಿ ಗೊತ್ತಾಗಲಿಲ್ಲಾ. ನಂತರ ಸಂಭಂಧಿಕರ ಊರುಗಳಾದ ಬೈಚಬಾಳ, ಬಳಬಟ್ಟಿ. ಹಾಗೂ ಆಕೆಯ ಸ್ನೇಹಿತೆಯರನ್ನು ವಿಚಾರಿಸಲಾಗಿ ಸ್ಮೀತಾ ನಮ್ಮ ಕಡೆ ಬಂದಿರುವದಿಲ್ಲಾ ಎಂದು ಹೇಳಿದರು.ನಂತರ ಗುಂಡಗುತರ್ಿ ಗ್ರಾಮ ಪಂಚಾಯತಗೆ ಹೋಗಿ ಅಲ್ಲಿಯ ಸಿಬ್ಬಂಧಿಯವರಿಗೆ ವಿಚಾರಿಸಲಾಗಿ ನನ್ನ ಮಗಳು ಸ್ಮೀತಾಳು ಇವತ್ತು ಕರ್ತವ್ಯಕ್ಕೆ ಬಂದಿರುವದಿಲ್ಲ ಅಂತಾ ತಿಳಿಸಿರುತ್ತಾರೆ. ನನ್ನ ಮಗಳಾದ ಸ್ಮೀತಾ ಇವಳಿಗೆ 30 ವರ್ಷ ವಯಸಾಗಿದ್ದು ಮನೆಯಿಂದ ಹೋಗುವಾಗ ಹಳದಿ ಮತ್ತು ಕೆಂಪು ಬಣ್ಣದ ಪಂಜಾಬಿ ಡ್ರೇಸ್ ಧರಿಸಿದ್ದು, ದುಂಡು ಮುಖ ಕೆಂಪನೆ ಬಣ್ಣ ಹೊಂದಿದ್ದು, ಎತ್ತರ 4.9'' ಇದ್ದು, ಕನ್ನಡ ಮತ್ತು ಇಂಗ್ಲಿಷ ಬಾಷೆ ಬಲ್ಲವಳಾಗಿರುತ್ತಾಳೆ. ನಾನೂ ಇಲ್ಲಿಯವರೆಗೆ ನಮ್ಮ ಸಂಬಂದಿಕರಲ್ಲಿ ವಿಚಾರಿಸಿ ಹಾಗೂ ಸ್ಮೀತಾ ಮರಳಿ ಬರುವಳೆಂದು ತಿಳಿದು ಪಿಯರ್ಾದೆ ನೀಡಲು ತಡಮಾಡಿದ್ದು ಇರುತ್ತದೆ.ಆದ್ದರಿಂದ ದಯಾಳುಗಳಾದ ತಾವುಗಳು ನನ್ನ ಮಗಳು ಸ್ಮೀತಾಳನ್ನು ಹುಡುಕಿ ಕೊಡಬೇಕೆಂದು ದಯಾಪರರಲ್ಲಿ ಕಳಕಳಿಯಿಂದ ವಿನಂತಿಸುತ್ತೇನೆ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಮಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ : 73/2021 ಕಲಂ: 323, 324, 504, 506 ಐಪಿಸಿ : ಇಂದು ದಿನಾಂಕ: 11/07/2021 ರಂದು 07.15 ಪಿಎಂ ಕ್ಕೆ ಶ್ರೀ. ಗೋವಿಂದ ತಂದೆ ಪೋಮುನಾಯ್ಕ ಜಾಧವ ವಯಾ:54 ಜಾ: ಲಂಬಾಣಿ ಉ: ಕೂಲಿ ಸಾ: ಹೋಸ್ಕೇರಾ ಬಾಂಗ್ಲಾ ತಾಂಡಾ ತಾ: ಶಹಾಪೂರ ಜಿ:ಯಾದಗಿರಿ. ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದರ ಸಾರಂಶ ಏನಂದರೆ, ನಮ್ಮ ತಮ್ಮನಾದ ಅಜರ್ುನ ತಂದೆ ಪೋಮುನಾಯಕ ಜಾಧವ ವಯಾ: 45 ಜಾ: ಲಂಬಾಣಿ ಉ: ಕೂಲಿ ಸಾ: ಹೋಸ್ಕೇರಾ ಬಾಂಗ್ಲಾ ತಾಂಡಾ ಈತನು ಪ್ರತಿ ನಿತ್ಯ ನಮ್ಮ ತಾಯಿಯವರಿಗೆ ಆಸ್ತಿ ಪಾಲು ಮಾಡಿ ಕೊಡು ಅಂತಾ ಬೈತ್ತಿದ್ದಾನೆ ಅಂತಾ ಗೋತ್ತಾಗಿ ನಾನು ನಿನ್ನೆ ದಿನಾಂಕ: 10/07/2021 ರಂದು ಮದ್ಯಾಹ್ನ 04.00 ಗಂಟೆಯ ಸುಮಾರಿಗೆ ತಾಯಿಗೆ ಯಾಕೆ ಬೈಯುತ್ತಿ ಇದು ಸರಿ ಅಲ್ಲ ನೋಡು ಅಂತಾ ತಿಳುವಳಿಕೆ ಹೇಳಿದ್ದೇನು, ಅದೆ ವಿಷಯದಲ್ಲಿ ನಿನ್ನೆ ರಾತ್ರಿ 09.30 ಪಿಎಂ ಸುಮಾರಿಗೆ ನಾನು ಊಟ ಮಾಡಿ ನಮ್ಮ ಮಾಳಗಿ ಮೇಲೆ ಚಾರ್ಜರ ಲೈಟಿನ ಬೆಳಕಿನಲ್ಲಿ ಕುಳತಿದ್ದಾಗ, ಅಲ್ಲಿಗೆ ಬಂದ ಅಜರ್ುನ ಈತನು ಏನಲೆ ಸೂಳೆ ಮಗನೆ ಅವ್ವಗೆ ಬೈಯ್ದರೆ, ನೀ ಅಡ್ಡ ಬರುತ್ತಿ ಮಗನೆ ನೀನಗೆ ಖಲಾಸ್ ಮಾಡುತ್ತೇನೆ ಅಂತಾ ಬೈಯುತ್ತಿದ್ದಾಗ, ನಾನು ಸೂಳೆ ಮಗನಾದರೆ ನೀ ಯಾರ ಮಗ ಆಗುತ್ತಿ ವಿಚಾರ ಮಾಡಿ ಮಾತಾಡು ಅಂತಾ ಅಂದಾಗ ಅಜರ್ುನ ಈತನು ಸಿಟ್ಟಿಗೆ ಬಂದು ಒಂದು ಬಡಗೆಯಿಂದ ನನ್ನ ಎಡಗೈ ರಟ್ಟೆಗೆ ಹೊಡೆದು ಗುಪ್ತಗಾಯ ಮಾಡಿದ ಆಗ ನಾನು ಸತ್ತೆನೆಪ್ಪೊ ಅಂತಾ ಬಡಿಗೆ ಹಿಡಿದುಕೊಂಡೆನು ಆಗ ಅಲ್ಲೆ ಇದ್ದ ಒಂದು ಇಟ್ಟಂಗಿೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಆಗ ನಾನು ಚೀರಿದ್ದು ಕೇಳಿ ಅಲ್ಲೆ ಇದ್ದ ರೂಪಸಿಂಗ್ ತಂದೆ ಶಂಕರ ಜಾದವ ಮತ್ತು ಸುರೇಶ ತಂದೆ ಬಸ್ಸಪ್ಪ ಜಾಧವ ಸಾ: ಇಬ್ಬರು ಹೋಸ್ಕೇರಾ ಬಾಂಗ್ಲಾ ತಾಂಡಾ ಇವರುಗಳು ನೋಡಿ ಬಿಡಿಸಿಕೊಂಡರು. ಆಗ ಅಜರ್ುನ ಈತನು ಮಗನೆ ಇನ್ನೊಮ್ಮೆ ನನ್ನ ವಿಷಯದಲ್ಲಿ ಮಾತಾಡಿದರೆ ನಿನಗೆ ಖಲಾಸ್ ಮಾಡುತ್ತೇನೆ ಅಂತಾ ಜೀವದ ಭಯ ಹಾಕಿರುತ್ತಾನೆ. ರಾತ್ರಿ ನಾನು ಮನೆಯಲ್ಲಿ ಒಬ್ಬನೆ ಮಲಗಿದೆನು. ನಂತರ ಇಂದು ದಿನಾಂಕ: 11/07/2021 ರಂದು ಬೆಳಿಗ್ಗೆ ನನ್ನ ಹೆಂಡತಿಯಾದ ಶಾಂತಾಬಾಯಿ ಗಂಡ ಗೋವಿಂದ ಜಾಧವ ಮತ್ತು ನಮ್ಮ ಅಳಿಯ ಶೀವಾಜಿ ತಂದೆ ಜಯರಾಮ ಚವ್ಹಾಣ ಸಾ: ಹೋಸ್ಕೇರಾ ಮೇಲಿನ ತಾಂಡಾ ಇವರುಗಳು ನನಗೆ ಶಹಾಪೂರ ಆಸ್ಪತ್ರೆಗೆ ಕರೆದುಕೊಂಡು ಹೊಗಿ ಉಪಚಾರ ಮಾಡಿಸಿರುತ್ತಾರೆ. ನಾವು ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ:11/07/2021 ರಂದು 07.15 ಪಿಎಂ ಕ್ಕೆ ಠಾಣೆಗೆ ಬಂದು ಅಜರ್ಿ ಕೊಟ್ಟಿರುತ್ತೇನೆ. ನನಗೆ ಅವಾಚ್ಯವಾಗಿ ಬೈಯ್ದು ಬಡಿಗೆಯಿಂದ, ಇಟ್ಟಂಗಿಯಿಂದ ಹೊಡೆದು ಎಡಗೈಗೆ ಗುಪ್ತಗಾಯ ಮತ್ತು ತೆಲೆಗೆ ರಕ್ತಗಾಯ ಮಾಡಿ ಜೀವದ ಭಯ ಹಾಕಿರುವ ನನ್ನ ತಮ್ಮನಾದ ಅಜರ್ುನ ತಂದೆ ಪೋಮುನಾಯಕ ಜಾಧವ ವಯಾ: 45 ಜಾ: ಲಂಬಾಣಿ ಉ: ಕೂಲಿ ಸಾ: ಹೋಸ್ಕೇರಾ ಬಾಂಗ್ಲಾ ತಾಂಡಾ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 73/2021 ಕಲಂ: 323, 324, 504, 506 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 12-07-2021 03:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080