ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-08-2021

ಗುರಮಿಠಕಲ ಪೊಲೀಸ್ ಠಾಣೆ
ಗುನ್ನೆ ಸಂಖ್ಯೆ: 130/2021 ಕಲಂ 279, 304(ಎ) ಐಪಿಸಿ : ಪ್ರಕರಣದ ಫಿಯರ್ಾದಿದಾರಳ ಗಂಡನಾದ ಮಹಾದೇವಪ್ಪ ಗುಡ್ಸೆ ಈತನು ಎಂದಿನಿಂತೆ ಇಂದು ದಿನಾಂಕ 11.08.2021 ರಂದು ಬೆಳಿಗ್ಗೆ ತನ್ನ ಮನೆಯ ಸಮೀಪವಿದ್ದ ಜ್ಞಾನೇಶ್ವರ ಮಂದಿರಕ್ಕೆ ಪೂಜೆ ಮಾಡಲು ಹೋಗುತ್ತಿರುತ್ತಾನೆ. ರಾಜ್ಯ ಹೆದ್ದಾರಿ ಸಂಖ್ಯೆ-126 ಮುಧೋಳ-ಎಲಿಗೇರಾ ಮುಖ್ಯ ರಸ್ತೆಯ ಭುಜದ ಮೇಲೆ ಮಹಾದೇವಪ್ಪ ನಡೆದುಕೊಂಡು ಹೋಗುವ ಕಾಲಕ್ಕೆ ಯಾದಗಿರಿ ಕಡೆಯಿಂದ ಮಹೇಂದ್ರ ಬುಲೆರೋ ಪಿಕಪ್ ವಾಹನ ನಂಬರ ಟಿ.ಎಸ್-06-ಯು.ಬಿ-2626 ವಾಹನ ಚಲಾಯಿಸಿಕೊಂಡು ಬಂದ ವಾಹನದ ಚಾಲಕನಾದ ಫಾರೂಖ್ ಈತನು ತನ್ನ ವಾಹನ ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ವಾಹನ ನಿಯಂತ್ರಿಸದೇ ಅನಪುರ ಗ್ರಾಮದ ಅಮೃತಮ್ಮ ಪಾಪಕೊಳು ಇವಳ ಮನೆಯ ಮುಂದಿನ ರಸ್ತೆಯ ಮೇಲೆ ರೋಡಿನ ಭುಜದ ಮೇಲೆ ನಡೆದುಕೊಂಡು ಹೋಗುತ್ತಿರುವ ಮಹಾದೇವಪ್ಪ ಗುಡ್ಸೆ ಈತನಿಗೆ ಇಂದು ದಿನಾಂಕ 11.08.2021 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಡಿಕ್ಕಿಪಡಿಸಿರುತ್ತಾನೆ. ರಸ್ತೆ ಅಪಘಾತ ಕಾಲಕ್ಕೆ ಮಹಾದೇವಪ್ಪ ಗಂಭೀರವಾಗಿ ಗಾಯಗೊಂಡಿರುತ್ತಾನೆ. ಗಾಯಾಳನ್ನು ಉಪಚಾರಕ್ಕೆ ಅಂತಾ ನಾರಾಯಣಪೇಟೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕಾಲಕ್ಕೆ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮಾರ್ಗ ಮಧ್ಯೆ ಮಹಾದೇವಪ್ಪ ರಸ್ತೆ ಅಪಘಾತ ಕಾಲಕ್ಕೆ ಆದ ಗಾಯಗಳ ನೋವನುಭವಿಸಿ ಮೃತಪಟ್ಟಿರುತ್ತಾನೆ ಅಂತಾ ವಗೈರೆ ಫಿಯರ್ಾದಿ.

 

ಕೊಡೇಕಲ್ ಪೊಲೀಸ್ ಠಾಣೆ
ಗುನ್ನೆ ನಂ. 46/2021 ಕಲಂ: 78(3) ಕೆ.ಪಿ ಆಕ್ಟ್ : ಇಂದು ದಿನಾಂಕ:11.08.2021 ರಂದು 2:15 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ತಾವು ದಿನಾಂಕ:11.08.2021 ರಂದು ಬೆಳಿಗ್ಗೆ 10:45 ಎ.ಎಮ್ಕ್ಕೆ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಕಕ್ಕೇರಾ ಉಪ ಠಾಣೆಯ ಸಿಬ್ಬಂದಿಯಾದ ಸಿದ್ರಾಮಪ್ಪ ಪಿ.ಸಿ-210 ರವರು ನನಗೆ ತಿಳಿಸಿದ್ದು ಏನೆಂದರೆ ಕಕ್ಕೇರಾ ಪಟ್ಟಣದ ಶ್ರೀ ಮಹಷರ್ೀ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮುಂಬಯಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಈ-ಮೇಲ್ ಮೂಲಕ ಕಳುಹಿಸಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು ಈ-ಮೇಲ್ ಮುಖಾಂತರ 2:10 ಪಿ.ಎಮ್ಕ್ಕೆ ಠಾಣೆಗೆ ವಸೂಲಾಗಿದ್ದು ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:46/2021 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 101/2021 ಕಲಂ:379 ಐಪಿಸಿ : ಇಂದು ದಿನಾಂಕ:11/08/2021 ರಂದು 5-30 ಪಿಎಮ್ ಕ್ಕೆ ಶ್ರೀ ಶಿವರೆಡ್ಡಪ್ಪ ತಂದೆ ಶಿವಲಿಂಗಪ್ಪ ದೇಸಾಯಿ, ವ:66, ಜಾತಿ: ಲಿಂಗಾಯತರೆಡ್ಡಿ, ಉ:ಒಕ್ಕಲುತನ, ಸಾ:ಕಾಡಂಗೇರಾ (ಬಿ) ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ, ನಮ್ಮ ಕಾಡಂಗೇರಾ (ಬಿ) ಸೀಮಾಂತರದಲ್ಲಿ ನಮ್ಮದೊಂದು ಸಾಹೇಬಗೌಡನ ಪಟ್ಟಿ ಹೊಲವಿರುತ್ತದೆ, ಸದರಿ ಹೊಲದ ರಸ್ತೆ ಪಕ್ಕದಲ್ಲಿ ನೀರಿನ ಮಡುವು (ಕೊಳ) ಇರುತ್ತದೆ. ಸದರಿ ಮಡುವಿಗೆ ಸಬ್ ಮಸರ್ಿಬಲ್ ಮೋಟರಗಳುನ್ನ ಬಿಟ್ಟು ನಮ್ಮ ಹೊಲಕ್ಕೆ ನೀರನ್ನು ಹಾಯಿಸಿಕೊಳ್ಳುತ್ತೇವೆ. ಸುಮಾರು ದಿವಸಗಳ ಹಿಂದೆ ಒಂದು ಸಬ್ ಮಸರ್ಿಬಲ್ ಮೋಟರಅನ್ನು ಬಿಟ್ಟಿದೇವು. ಅದರ ನೀರು ಹೊಲಕ್ಕೆ ಸಾಕು ಆಗದ ಕಾರಣ ಈಗ ಸುಮಾರು ಎರಡು ದಿವಸಗಳ ಹಿಂದೆ ಮತ್ತೊಂದು ಹೊಸ ಸಬ್ ಮಸರ್ಿಬಲ್ ಮೋಟರನ್ನು ತಂದು ಆ ಮಡುವಿನಲ್ಲಿ ಬಿಟ್ಟು ನಮ್ಮ ಹತ್ತಿ ಹೊಲಕ್ಕೆ ನೀರನ್ನು ಹಾಯಿಸುತ್ತಿದ್ದೇವು. ಹೀಗಿದ್ದು ನಿನ್ನೆ ದಿನಾಂಕ: 10/082021 ರಂದು ಸಂಜೆ 7 ಗಂಟೆವರೆಗೆ ನಮ್ಮ ಮೇಲ್ಕಂಡ ಹೊಲ ಪಾಲಿಗೆ ಮಾಡುವ ಹಣಮಂತ್ರಾಯ ಪೂಜಾರಿ ಕ್ಯಾತ್ನಳ ಈತನು ಎರಡು ಸಬ್ ಮಸರ್ಿಬಲ್ ಮೋಟರಗಳನ್ನು ಚಾಲು ಮಾಡಿ ನಮ್ಮ ಹೊಲಕ್ಕೆ ನೀರು ಹಾಯಿಸಿ ಮನೆಗೆ ಬಂದಿರುತ್ತಾನೆ. ಇಂದು ದಿನಾಂಕ: 11/08/2021 ರಂದು ಮುಂಜಾನೆ 6-30 ಗಂಟೆ ಸುಮಾರಿಗೆ ಸದರಿ ಹಣಮಂತ್ರಾಯನು ಪುನ: ನಮ್ಮ ಹೊಲಕ್ಕೆ ಹೋಗಿ ಎರಡು ಮೋಟರಗಳು ಚಾಲು ಆಗಿರುವುದಿಲ್ಲ ಮತ್ತು ನೀರು ಬಂದಿರುವುದಿಲ್ಲ ಆದ್ದರಿಂದ ಅನುಮಾನ ಬಂದು ಎಡರು ಮೋಟರಗಳ ಪೈಪುಗಳುನ್ನು ಎಳೆದು ನೋಡಿದರೆ ಎರಡು ಸಬ್ಮಸರ್ಿಬಲ್ ಮೋಟರಗಳು ಇರುವುದಿಲ್ಲ ಎಂದು ನನಗೆ ಪೋನು ಮಾಡಿ ಹೇಳಿದಾಗ ನಾನು ಹೊಲಕ್ಕೆ ಹೋಗಿ ನೋಡಿದೇನು. ನಾವು ಮಡುವಿನಲ್ಲಿ ಬಿಟ್ಟ್ ಎರಡು ಸಬ್ ಮಸರ್ಿಬಲ್ ಮೋಟರಗಳು ಕಳುವಾಗಿರುತ್ತವೆ. ಹೊಸ ಮೋಟರ ಅ:ಕಿ:28.000/-ರೂ. ಮತ್ತು ಹಳೆ ಮೋಟರ ಅ:ಕಿ:14.000/-ಹೀಗೆ ಎರಡು ಮೋಟರಗಳ ಒಟ್ಟು ಅ:ಕಿ: 42.000/- ರೂಪಾಯಿ ಆಗಬಹುದು ದಿನಾಂಕ: 10/08/2021 ರಂದು 7 ಪಿಎಮ್ ದಿಂದ ದಿನಾಂಕ: 11/08/2021 ರಂದು 6-30 ಎಎಮ್ ಮಧ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಹೊಲದ ಮಡು (ಕೊಳ)ವಿನಲ್ಲಿ ಬಿಟ್ಟ ಎರಡು ಸಬ್ಮಸೀಬಲ್ ಮೋಟರಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರಗಿಸಿ ಕಳುವಾದ ಎರಡು ಮೋಟರಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 101/2021 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 125/2021 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 11-08-2021 ರಂದು ಸಾಯಂಕಾಲ 05-30 ಗಂಟೆಗೆ ಪಿ.ಐ ರವರು ಠಾಣೆಗೆ ಹಾಜರಾಗಿ ಕೂಡ್ಲೂರ ಗ್ರಾಮದ ಬಸಲಿಂಗಪ್ಪ ತಾತನ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 1250=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.125/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 12-08-2021 10:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080