ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-08-2022

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 141/2022 ಕಲಂ ಮಹಿಳೆ ಕಾಣೆ : ಇಂದು ದಿನಾಂಕ 11/08/2022 ರಂದು 6.30 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀ ಶ್ರೀ ಶರಣಯ್ಯ ತಂ. ಲಕ್ಕಪ್ಪ ಗುತ್ತೇದಾರ ವ|| 52 ವರ್ಷ ಜಾ|| ಇಳಿಗ ಉ|| ವ್ಯವಸಾಯ ಸಾ|| ಇಬ್ರಾಹಿಂಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನಗೆ ಭೀಮಯ್ಯ ಎನ್ನುವ ಒಬ್ಬ ಮಗ ಮತ್ತು 4 ಜನ ಹೆಣ್ಣು ಮಕ್ಕಳಿದ್ದು ನನ್ನ 3ನೇ ಮಗಳಾದ ಶಿಲ್ಪಾ ಇವಳಿಗೆ ಯಾದಗಿರಿ ಜಿಲ್ಲೆಯ ಪಗಲಾಪೂರ ಗ್ರಾಮದ ನಾಗರಾಜ ತಂ. ದಂಡಯ್ಯ ಗುತ್ತೇದಾರ ಇವರಿಗೆ ಸುಮಾರು 6 ವರ್ಷಗಳಿಂದ ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ ಹೀಗಿದ್ದು ಈಗ ಸುಮಾರು ಒಂದು ತಿಂಗಳ ಹಿಂದೆ ನನ್ನ ಮಗಳು ನನ್ನ ತವರು ಮನಗೆ ಬಂದು ಇಲ್ಲೆ ಇದ್ದಳು ಹೀಗಿದ್ದು ನಿನ್ನೆ ದಿನಾಂಕ 10/08/2022 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಅನಂತಮ್ಮ ಮನೆಯಲ್ಲಿ ಇದ್ದಾಗ ಸಂಡಾಸಕ್ಕೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದಳು 11.00 ಗಂಟೆಯಾದರೂ ಮನೆಗೆ ಬರದೇ ಇದ್ದಾಗ ನಾನು ನನ್ನ ಮಗನಾದ ಭೀಮಯ್ಯನಿಗೆ ತಿಳಿಸಲಾಗಿ ಯಾರ ಮನೆಗಾದರೂ ಹೋಗಿರ ಬಹುದು ಎಂದು ಬರುತ್ತಾಳೆ ಅಲ್ಲೆ ನೋಡಿ ಎಂದನು ನಂತರ ಸಾಯಂಕಾಲ ಆದರೂ ಬರದೇ ಇದ್ದಾಗ ನನ್ನ ಮಗಳನ್ನು ನಮ್ಮ ಸಂಬಂದಿಕರು ಇರುವ ಮನೆಗಳಲ್ಲಿ ವಿಚಾರಿಸಿ ನಂತರ ಅವಳ ಗಂನೆ ಮನೆಗೆ ಪೋನ ಮಾಡಿ ಕೇಳಲಾಗಿ ಅಲ್ಲಯೂ ಬಂದಿರುವದಿಲ್ಲ ಎಂದು ಅವಳ ಗಂಡನಾದ ನಾಗರಾಜ ಈತನು ತಿಳಿಸಿದನು ನಂತರ ಎಲ್ಲರೂ ಸೇರಿ ನನ್ನ ನಮ್ಮ ಸಂಬಂದಿಕರು ಇರುವ ಊರುಗಳಲ್ಲಿ ಹಾಗೂ ಶಹಾಪೂರ ಯಾದಗಿರಿ ಬಸ್ ನಿಲ್ದಾಣಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ನನ್ನ ಮಗಳು ಸಿಗಲಿಲ್ಲ. ಕಾರಣ ನನ್ನ ಮಗಳಾದ ಶ್ರೀಮತಿ ಶಿಲ್ಪಾ ಗಂ. ನಾಗರಾಜ ಗುತ್ತೇದಾರ ವ|| 24 ವರ್ಷ ಜಾ|| ಇಳಿಗ ಉ|| ಮನೆಕೆಲಸ ಸಾ|| ಪಗಲಾಪೂರ ತಾ|| ಯಾದಗಿರ ಹಾ|| ವ|| ಇಬ್ರಾಹಿಂಪೂರ ತಾ|| ಶಹಾಪೂರ ಜಿ|| ಯಾದಗಿರ ಇವಳು ಇಬ್ರಾಹಿಂಪೂರದ ನಮ್ಮ ಹೋದವಳು ಇನ್ನು ಮನೆಗೆ ಬರದೆ ಕಾಣೆಯಾಗಿದ್ದು ಅವನು ನಮ್ಮ ಸಂಬಂದಿಕರು ಇರುವ ಊರುಗಳಲ್ಲಿ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ಪಿಯರ್ಾದಿ ನೀಡುತ್ತಿದ್ದು ಕಾಣೆಯಾದ ನನ್ನ ಮಗಳ ಮೇಲೆ ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿ.
ಕಾಣೆಯಾದ ನನ್ನ ಮಗ ಚಹರೆ ಪಟ್ಟಿ ಈ ಕೇಳಗಿನಂತಿರುತ್ತವೆ.
ಹೆಸರು ಃ- ಶ್ರೀಮತಿ ಶಿಲ್ಪಾ ಗಂ. ನಾಗರಾಜ ಗುತ್ತೇದಾರ
ಬಣ್ಣ ಃ- ಕಪ್ಪು ಬಣ್ಣ ತೆಳ್ಳನೆ ದೇಹ
ಎತ್ತರ ಃ- 4.8 ಫೀಟ್ ಇದ್ದು.
ಭಾಷೆ ಃ- ಕನ್ನಡ
ಧರಿಸಿದ ಬಟ್ಟೆ ಃ- ನಾಶಿ ಬಣ್ಣದ ಸೀರೆ ಮತ್ತು ಬ್ಲೌಜ ಹಾಕಿದ್ದು ಇರುತ್ತದೆ.
ಸದರಿ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ವಿನಂತಿ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 141/2022 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 12-08-2022 12:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080