ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-09-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 104/2022 ಕಲಂ; 420 ಐಪಿಸಿ : ಇಂದು ದಿನಾಂಕ 11/09/2022 ರಂದು 05.00 ಪಿಎಮ್ಕ್ಕೆ ಫಿಯರ್ಾದಿಯಾದ ಶ್ರೀಮತಿ ಸುರೇಖಾ ಗಂಡ ವಿಜಯಕುಮಾರ ಬಸರೆಡ್ಡಿ ವ: 32 ಜಾತಿ: ಲಿಂಗಾಯಿತರೆಡ್ಡಿ ಉ: ಮನೆಕೆಲಸ ಸಾ:ಅಲ್ಲಿಪೂರ ಹಾ:ವ: ಮಾತಾಮಾಣಿಕೇಶ್ವರಿ ನಗರ ಯಾದಗಿರಿ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ ಅಜರ್ಿಯ ಸಾರಾಂಶವೇನಂದರೆ, ಸಿದ್ದಲಿಂಗರೆಡ್ಡಿ ತಂದೆ ತಿಪ್ಪಾರೆಡ್ಡಿ ಪೊಲೀಸ್ ಪಾಟೀಲ್ ಸಾ: ಕಟಗಿಶಹಾಪೂರ ತಾ:ಜಿ: ಯಾದಗಿರಿ ಇವರು ಯಾದಗಿರಿಯಲ್ಲಿ ಬಯಲು ಹಣಮಂತ ದೇವಸ್ಥಾನದ ಹತ್ತಿರ ಇರುವ ಸುಮಾರು 02 ಪ್ಲಾಟುಗಳನ್ನು ತೋರಿಸಿ ಪ್ಲಾಟ ಕೊಡುತ್ತೇನೆ ಅಂತಾ ಹೇಳಿ ಮತ್ತು ಕಲಬುರಗಿ ತಾಲೂಕಿನ ಕುಸನೂರ ಗ್ರಾಮ ಪಂಚಾಯಿತಿ ಕಾರ್ಯಲಯ ವ್ಯಾಪ್ತಿಯಲ್ಲಿ ಬರುವ ಕುಸನೂರು ಗ್ರಾಮದ ಸವರ್ೆ ನಂಬರ 7/8 ರ ಪ್ಲಾಟ ನಂಬರ 14 ವಿಸ್ತೀರ್ಣ 30 ಥ 40 = 1200 ಚ. ಅಡಿ ಪ್ಲಾಟಗಳನ್ನು ಕೊಡುತ್ತೇನೆಂದು ದಾಖಲಾತಿಗಳನ್ನು ನೀಡಿ ಒಂದು ವರ್ಷದ ಅವಧಿ ಹೇಳಿ ಪ್ಲಾಟಗಳನ್ನು ಕೊಡುತ್ತೇನೆ ಎಂದು ವಂಚಿಸಿ ಮೋಸ ಮಾಡಿ ಯಾವುದೇ ಪ್ಲಾಟಗಳನ್ನು ಹಾಗೂ ಹಣವನ್ನು ನೀಡದೆ ಮೋಸ ಮಾಡಿ ತಲೆಮರಿಸಿಕೊಂಡಿರುತ್ತಾನೆ. ಸದರಿ ಹಣವನ್ನು ನನ್ನ ಹತ್ತಿರ ಒಟ್ಟು 14.00.000/- ( ಹದಿನಾಲ್ಕು ಲಕ್ಷ) ರೂಗಳು 1) ಎಕ್ಸಿಸ್ ಬ್ಯಾಂಕ್ ಯಾದಗಿರಿ ಶಾಖೆಯಿಂದ 1 ಚೆಕ್ ನಂಬರ 15646 ದಿನಾಂಕ 28/08/2020 ರಂದು ರೂ. 3,00,000/- ( ಮೂರು ಲಕ್ಷಗಳು ) ಮತ್ತು 2) ಚೆಕ್ ನಂಬರ 15644 ರೂ. 5,00,000/- (ಐದು ಲಕ್ಷ ರೂಗಳು) ಮತ್ತು ನಗದಾಗಿ 6,00,000/- ( ಆರು ಲಕ್ಷ ರೂಗಳು) ಹೀಗೆ ಒಟ್ಟು 14,00,000/- (ಹದಿನಾಲ್ಕು ಲಕ್ಷ ) ರೂಗಳನ್ನು ಪಡೆದುಕೊಂಡು ವಂಚಿಸಿರುತ್ತಾರೆ. ಆದ ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳತ್ತೇನೆ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 104/2022 ಕಲಂ. 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 108/2022 ಕಲಂ:143, 147, 504, 341, 323, 506 ಸಂ 149 ಐಪಿಸಿ : ದಿನಾಂಕ:11/09/2022 ರಂದು 4-30 ಪಿಎಮ್ ಕ್ಕೆ ಶ್ರೀ ಭೀಮಪ್ಪ ತಂದೆ ಹಣಮಂತ ನಾಟೇಕಾರ, ವ:45 ವರ್ಷ, ಜಾ:ಹೊಲೆಯ (ಎಸ್.ಸಿ), ಉ:ಒಕ್ಕಲುತನ ಸಾ:ಬಿಳ್ಹಾರ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ಮನೆ ಮುಂದೆ ರಸ್ತೆ ಪಕ್ಕದಲ್ಲಿ ನಾಲಿ (ಡ್ರೇನ) ಇರುತ್ತದೆ. ಅದರ ಮೂಲಕ ಬಚ್ಚಲು ನೀರು ಹೊರಗಡೆ ಹೋಗುತ್ತದೆ. ಆದರೆ ನಮ್ಮ ಜಾತಿಯ ಮರೆಪ್ಪ ತಂದೆ ಬಸಪ್ಪ ವಡಗೇರಿ ಸಾ:ಬಿಳ್ಹಾರ ಈತನು ಈಗ ಸುಮಾರು 8-10 ದಿನಗಳ ಹಿಂದೆ ನಮ್ಮ ಮನೆ ಮುಂದಿನ ನಾಲಿ (ಡ್ರೇನ) ಅನ್ನು ಕೆಡಿಸಿಬಿಟ್ಟಿದ್ದನು. ಹೀಗಾಗಿ ನಾಲಿಯಲ್ಲಿ ಹೋಗುವ ನೀರು ನಮ್ಮ ಮನೆ ಮುಂದೆ ನಿಂತು ಗಲೀಜು ಆಗಿತ್ತು. ಆಗ ನಾವು ಸದರಿ ಮರೆಪ್ಪನಿಗೆ ನಾಲಿ (ಡ್ರೇನ) ಯಾಕೆ ಕೆಡಿಸಿದಿ ನೀರು ನಿಂತು ಮನೆ ಮುಂದೆ ಗಲೀಜು ಆಗಿದೆ ಎಂದು ಹೇಳಿದಾಗ ಅವನು ನಾನು ನಾಲಿ (ಡ್ರೇನ) ಕೆಡಿಸಿದ್ದೇನೆ ನೀವು ಏನು ಮಾಡುತ್ತಿರಿ ಮಾಡಿ ಬೋಸುಡಿ ಮಕ್ಕಳೆ ಎಂದು ನಮ್ಮೊಂದಿಗೆ ಜಗಳಕ್ಕೆ ಬರುತ್ತಿದ್ದನು. ಆಗ ನಾವು ಅಷ್ಟಕ್ಕೆ ಸುಮ್ಮನಾಗಿಬಿಟ್ಟೆವು. ಹೀಗಿದ್ದು ಮೊನ್ನೆ ದಿನಾಂಕ:09/09/2022 ರಂದು ಸಾಯಂಕಾಲ 6-45 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಿಂದ ಹೊರಗಡೆ ಹೋಗುತ್ತಿದ್ದಾಗ 1) ಮರೆಪ್ಪ ತಂದೆ ಬಸಪ್ಪ ವಡಗೇರಿ ಸಾ:ಬಿಳ್ಹಾರ, 2) ಸಿದ್ದಪ್ಪ ತಂದೆ ಬಸಪ್ಪ ವಡಗೇರಿ ಸಾ:ಬಿಳ್ಹಾರ, 3) ಮಂಜುನಾಥ ತಂದೆ ಸಿದ್ದಪ್ಪ ಸಾ:ಬೇನಕನಹಳ್ಳಿ, 4) ಮಲ್ಲಪ್ಪ ತಂದೆ ಸಿದ್ದಪ್ಪ ಸಾ:ಬೆನಕನಹಳ್ಳಿ, 5) ಮರೆಮ್ಮ ಗಂಡ ಬಸಪ್ಪ ವಡಗೇರಿ ಸಾ:ಬಿಳ್ಹಾರ, 6) ದೇವಮ್ಮ ಗಂಡ ಹಣಮಂತ ಸಾ:ಮದರಕಲ್, 7) ಮರೆಮ್ಮ ಗಂಡ ಮರಿಲಿಂಗ ಸಾ:ನಾಯ್ಕಲ್ ಮತ್ತು 8) ಮಲ್ಲಮ್ಮ ಗಂಡ ರಮೇಶ ಸಾ:ಗಾಜರಕೋಟ ಇವರೆಲ್ಲರೂ ಸೇರಿ ಅಕ್ರಮಕೂಟ ಕಟ್ಟಿಕೊಂಡು ನಮ್ಮ ಮನೆ ಮುಂದೆ ಬಂದವರೆ ನನಗೆ ತಡೆದು ನಿಲ್ಲಿಸಿ, ಭೊಸುಡಿ ಮಗನೆ ನಾಲಿ (ಡ್ರೇನ) ಯಾಕೆ ಕಿತ್ತಿರುವಿ ಎಂದು ನಮ್ಮ ಬಸಪ್ಪನಿಗೆ ಕೇಳುತ್ತಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಸೂಳೆ ಮಗನೆ ಎಂದು ಅವಾಚ್ಯ ಬೈದು ಜಗಳ ತೆಗೆದವರೆ ಮರೆಮ್ಮ ಗಂಡ ಬಸಪ್ಪ, ಮಲ್ಲಪ್ಪ ತಂದೆ ಸಿದ್ದಪ್ಪ ಮತ್ತು ದೇವಮ್ಮ ಗಂಡ ಹಣಮಂತ ಈ ಮೂರು ಜನ ಬಂದು ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ಮರೆಪ್ಪ ತಂದೆ ಬಸಪ್ಪ ಮತ್ತು ಸಿದ್ದಪ್ಪ ತಂದೆ ಬಸಪ್ಪ ಇಬ್ಬರೂ ಬಂದು ಕೈ ಮುಷ್ಟಿ ಮಾಡಿ ನನ್ನ ಎದೆ ಮತ್ತು ಹೊಟ್ಟೆಗೆ ಜೋರಾಗಿ ಗುದ್ದಿ ಒಳಪೆಟ್ಟು ಮಾಡಿದರು. ಮಂಜುನಾಥನು ಬಂದು ನನ್ನ ಬಲಗೈ ಹಿಡಿದು ಒಡ್ಡು ಮುರಿದು ಒಳಪೆಟ್ಟು ಮಾಡಿದನು. ಜಗಳ ಬಿಡಿಸಲು ಬಂದ ನನ್ನ ಹೆಂಡತಿ ತಿಪ್ಪಮ್ಮ ಗಂಡ ಭೀಮಪ್ಪ ಇವಳಿಗೆ ಮರೆಮ್ಮ ಗಂಡ ಮರಿಲಿಂಗ ಮತ್ತು ಮಲ್ಲಮ್ಮ ಗಂಡ ರಮೇಶ ಇಬ್ಬರೂ ಸೇರಿ ತಲೆ ಮೇಲಿನ ಕೂದಲು ಹಿಡಿದು ಕೆಳಗೆ ಬಗ್ಗಿಸಿ, ಕೈ ಮುಷ್ಟಿ ಮಾಡಿ ಬೆನ್ನಿಗೆ ಗುದ್ದಿ ಒಳಪೆಟ್ಟು ಮಾಡಿದರು. ಆಗ ಜಗಳವನ್ನು ಅಲ್ಲಿಯೇ ಇದ್ದ ನನ್ನ ಮಗಳಾದ ದೇವಮ್ಮ ತಂದೆ ಭಿಮಪ್ಪ ಮತ್ತು ಅಕ್ಕಪಕ್ಕದವರಾದ ಶಶಿಕಲಾ ತಂದೆ ತಿಪ್ಪಣ್ಣ, ರಂಗಪ್ಪ ತಂದೆ ಶಿವಪ್ಪ ನಾಟೇಕಾರ ಇವರೆಲ್ಲರೂ ಬಂದು ಜಗಳ ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಂದು ಸಲ ನಾಲಿ (ಡ್ರೇನ) ವಿಷಯಕ್ಕೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ನಾವು ನಮ್ಮ ಹಿರಿಯರ ಸಮಕ್ಷಮ ಕೂಡಿಸಿಕೊಂಡು ರಾಜಿ ಸಂಧಾನ ಮಾಡಿಕೊಂಡರಾಯಿತು ಎಂದು ನಮ್ಮ ಹಿರಿಯರಿಗೆ ಹೇಳಿದರೆ ಅವರ ಹತ್ತಿರ ಕರೆಸಿದರೆ ಅವರು ಬರಲಿಲ್ಲ. ಆಗ ನಮ್ಮ ಹಿರಿಯರು ನೀವು ಠಾಣೆಗೆ ಹೋಗಿ ದೂರು ಕೊಡಿ ಎಂದು ಹೇಳಿದ್ದರಿಂದ ನಾವು ಈಗ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನಾಲಿ (ಡ್ರೇನ) ಯಾಕೆ ಕೆಡಿಸಿದಿ ಎಂದು ಕೇಳಿದ್ದಕ್ಕೆ ಜಗಳ ತೆಗೆದು ನನಗೆ ತಡೆದು ನಿಲ್ಲಿಸಿ, ನನಗೆ ಮತ್ತು ನನ್ನ ಹೆಂಡತಿಗೆ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿಂನತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 108/2022 ಕಲಂ:143, 147, 504, 341, 323, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ.140/2022 ಕಲಂ: 143, 147, 148, 448, 353, 354, 30.7, 504, 506 ಸಂಗಡ 149 ಐಪಿಸಿ. : ಇಂದು ದಿನಾಂಕ 11.09.2022 ರಂದು ಸಮಯ ಮಧ್ಯಾಹ್ನ 2:30 ಗಂಟೆಗೆ ಸಿ.ಎಮ್.ಪಟ್ಟೇದಾರ ಸಾ||ಯಾದಗಿರಿ ಎಂಬುವವರು ಠಾಣೆಗೆ ಹಾಜರಾಗಿ ತಮ್ಮಮಗಳಾದ ಶ್ರೀಮತಿ ನಿವೇದಿತ ಪಟ್ಟೇದಾರ ಮುಖ್ಯೊಪಧ್ಯಾಯರು ಸರಕಾರಿ ಪ್ರೌಢ ಶಾಲೆ[ಆರ್.ಎಮ್.ಎಸ್.ಎ] ಅರಕೇರಾ(ಕೆ) ಎಂಬುವವರು ತಮ್ಮ ಸಹೋದ್ಯೊಗಿಯಾದ ಶ್ರೀಮತಿ ಶೈಲಜಾ ಗಣಿತ ಶಿಕ್ಷಕಿ ಎಂಬುವವರು ತಮ್ಮ ಬಂಧುಗಳ ಗುಂಪಿನೊಂದಿಗೆ ಮುಖ್ಯಗುರುಗಳ ಚೇಂಬರದಲ್ಲಿ ಬಂದು ಗಲಾಟೆ ಮಾಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿ ಕಚೇರಿ ಕೆಲಸಕ್ಕೆ ಅಡ್ಡಿ ಪಡಿಸಿ, ತನಗೆ ಎಳೆದಾಡಿದ್ದು ಅಲ್ಲದೇ ಕುತ್ತಿಗೆಗೆ ಹಗ್ಗ ಹಾಕಿ ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಆಪಾದಿಸಿದ ಒಂದು ಲಿಖಿತ ದೂರು ಅಜರ್ಿಯನ್ನು ತಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 140/2022 ಕಲಂ: 143, 147, 148, 448, 353, 354, 307, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂಬರ 138/2022 ಕಲಂ 143, 147, 323, 324, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 11/09/2022 ರಂದು 11.00 ಎಎಮ್ ಕ್ಕೆ ಠಾಣೆಯ ಕಾಳಪ್ಪ ಎ.ಎಸ್.ಐ ರವರು ಕಲಬುರಗಿ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಪಡೆದುಕೊಂಡು ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುವಾದ ಮಲ್ಲಪ್ಪ ತಂದೆ ಭೀಮಣ್ಣ ಬಡಿಗೇರ ವ|| 49ವರ್ಷ ಜಾ|| ಹೊಲೆಯ ಉ|| ಕೂಲಿ ಸಾ|| ರಾಂಪೂರ ಈತನಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡು ಬಂದು ನೀಡಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, ನಾನು ಮಲ್ಲಪ್ಪ ತಂದೆ ಭೀಮಣ್ಣ ಬಡಿಗೇರ ಸಾ|| ರಾಂಪೂರ ಇದ್ದು ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದೇನೆ. ನಮಗೂ ಮತ್ತು ನಮ್ಮ ಮನೆಯ ಪಕ್ಕದ ಮನೆಯ ನಮ್ಮ ಜಾತಿಯ ಯಲ್ಲಮ್ಮ ಗಂಡ ಬಸಪ್ಪ ಚಲುವಾದಿ ಇವರಿಗೂ ಜಾಗದ ವಿಷಯದಲ್ಲಿ ಬಹಳ ದಿನಗಳ ಹಿಂದಿನಿಂದ ಜಗಳ ನಡೆದಿದ್ದು ಇರುತ್ತದೆ. ಹೀಗಿದ್ದು ದಿನಾಂಕ 08/09/2022 ರಂದು 4.30 ಪಿಎಂ ಸುಮಾರಿಗೆ ನಮ್ಮೂರಿನ ನಮ್ಮ ಜನಾಂಗದ ಲಕ್ಷ್ಮೀಬಾಯಿ ಎಂಬುವವಳು ತೀರಿಕೊಂಡಿದ್ದು ಅವಳ ಶವ ಸಂಸ್ಕಾರ ಮಾಡಲು ನಮ್ಮ ಗ್ರಾಮದ ಸ.ನಂ 16 ರಲ್ಲಿ ಹೋದಾಗ ಶವ ಹೂಳುವ ಕುಣಿಯ ಹತ್ತಿರ ನಾನು ನಿಂತು ಕುಣಿಯಲ್ಲಿ ಮಣ್ಣು ಹಾಕುತ್ತಿರುವಾಗ ನನ್ನ ಹಿಂದೆ 1) ಬಸಪ್ಪ ತಂದೆ ಚಂದ್ರಪ್ಪ ಸಾ|| ನಾವದಗಿ ಈತನು ಬಂದು ಎಲೇ ಬೋಸಡಿ ಮಗನೇ ನಮ್ಮ ಅಕ್ಕನ ಮನೆಯ ಕಟ್ಟಡ ನಿಲ್ಲಿಸಿದ್ದಿಯಾ ಸೂಳೆ ಮಗನೇ ಅಂದವನೇ ನನಗೆ ಅಲ್ಲಿಯೇ ಬಿದ್ದಿದ್ದ ಕೊಡಲಿಯ ಕಾವನ್ನು ತೆಗೆದುಕೊಂಡು ಕೊಡಲಿಯ ಕಾವಿನಿಂದ ಬೆನ್ನಿಗೆ ಹೊಡೆದನು. ಆಗ ನಾನು ತಿರುಗಿ ನೋಡಿ ನನಗೆ ಯಾಕೆ ಹೊಡೆಯುತ್ತಿರುವಿ ಅಂತಾ ಕೇಳಿದಾಗ ಬಸಪ್ಪನೊಂದಿಗೆ ಬಂದಿದ್ದ 2) ಪರಶುರಾಮ ತಂದೆ ಚಂದ್ರಪ್ಪ ಸಾ|| ನಾವದಗಿ, 3) ಸುಮಿತ್ರವ್ವ ಗಂಡ ಪರಶುರಾಮ ಸಾ|| ನಾವದಗಿ, 4) ಬಸಪ್ಪ ತಾಯಿ ಲಕ್ಷ್ಮೀಬಾಯಿ ಚಲುವಾದಿ ಸಾ|| ರಾಂಪೂರ, 5) ಯಲ್ಲವ್ವ ಗಂಡ ಬಸಪ್ಪ ಚಲುವಾದಿ ಸಾ|| ರಾಂಪೂರ, 6) ಲಕ್ಷ್ಮಣ ತಂದೆ ನಿಂಗಪ್ಪ ಹೊಸಮನಿ ಸಾ|| ರಾಂಪೂರ, 7) ಮರಿಲಿಂಗವ್ವ ಗಂಡ ಲಕ್ಷ್ಮಣ ಹೊಸಮನಿ ಸಾ|| ರಾಂಪೂರ, 8) ಸಿದ್ದಪ್ಪ ತಂದೆ ಮಲ್ಲಪ್ಪ ಚಲುವಾದಿ ಸಾ|| ರಾಂಪೂರ, 9) ರೇಣುಕಮ್ಮ ಗಂಡ ಸಿದ್ದಪ್ಪ ಚಲುವಾದಿ ಸಾ|| ರಾಂಪೂರ, 10) ಭೀಮಪ್ಪ ತಂದೆ ಹಣಮಂತ ಬಾಚಿಮಟ್ಟಿ ಸಾ|| ರಾಂಪೂರ, 11) ಗಂಗವ್ವ ಗಂಡ ಚಿದಾನಂದ ಸಾ|| ಶೆಳ್ಳಗಿ 12) ಮಲ್ಲವ್ವ ಗಂಡ ಮಲ್ಲಪ್ಪ ಹರಿಜನ ಸಾ|| ಹತ್ತಿಗುಡೂರ ಇವರೆಲ್ಲರೂ ಕೂಡಿ ಬಂದು ನನ್ನೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆಯುತ್ತಿದ್ದಾಗ ಅಲ್ಲಿಯೇ ಇದ್ದ ನಿಂಗಪ್ಪ ತಂದೆ ಶಿವಪ್ಪ ಬಡಿಗೇರ ಸಾ|| ಮುದನೂರ, ಮುದಕಪ್ಪ ತಂದೆ ನಿಂಗಪ್ಪ ಸಾ|| ಚಿಂಚೋಳಿ ಇವರು ಬಂದು ಜಗಳ ಬಿಡಿಸಿಕೊಂಡರು. ಆಗ ಅವರು ನನಗೆ ಹೊಡೆಯುವುದನ್ನು ಬಿಟ್ಟು ಇದೊಂದು ಸಲ ಬಿಟ್ಟೀವಿ ಮಗನೇ ಇನ್ನೊಮ್ಮೆ ನಮ್ಮ ಅಕ್ಕಳಾದ ಯಲ್ಲವ್ವನ ತಂಟೆಗೆ ಹೋದರೆ ನಿನಗೆ ಜೀವ ಸಹಿತ ಹೊಡೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಬಸಪ್ಪನು ಕೊಡಲಿಯ ಕಾವಿನಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದ್ದರಿಂದ ಕೆಂಭಾವಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ. ನನಗೆ ಜಾಗದ ವಿಷಯದಲ್ಲಿ ಜಗಳ ತೆಗೆದು ಅವಾಚ್ಯವಾಗಿ ಬೈದು, ಕೈಯಿಂದ, ಕೊಡಲಿಯ ಕಾವಿನಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದವರ ಮೇಲೆ ಕ್ರಮ ಜರುಗಿಸಬೇಕು ಅಂತ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂಬರ 138/2022 ಕಲಂ 143, 147, 323, 324, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಇತ್ತೀಚಿನ ನವೀಕರಣ​ : 12-09-2022 11:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080