ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-10-2021
ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 109/2021 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ; 11/10/2021 ರಂದು 6-45 ಪಿಎಮ್ ಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಠಾಣೆ ರವರು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 11/10/2021 ರಂದು 4-40 ಪಿಎಂಕ್ಕೆ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಳ್ಳಿ ಕ್ರಾಸದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮಟಕಾ ಜೂಜಾಟದಲ್ಲಿ ತೊಡಗಿದ್ದು 1/ -ರೂ ಗೆ 80/-ರೂ. ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಮಟ್ಕಾ ಜೂಜಾಟ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 6-30 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಬಂದಿದ್ದು, ಜ್ಞಾಪನ ಪತ್ರ ನೀಡಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 109/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 231/2021 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ್ : ಇಂದು ದಿನಾಂಕ: 11/10/2021 ರಂದು ಬೆಳಿಗ್ಗೆ 9.00 ಎ.ಎಂ.ಕ್ಕೆ ಶ್ರೀ ರವಿಕಿರಣ ತಂ/ ಮಹಾದೇವಪ್ಪ ತಂಗಡಗಿ, ಸಾ|| ಮಮದಾಪುರ, ಶಹಾಪೂರ, ಹಾ.ವ|| ಫಿಲ್ಟರ್ಬೆಡ್ ಶಹಾಪೂರ, ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ನನ್ನ ತಂದೆ-ತಾಯಿಗೆ ನಾವು 4 ಜನ ಮಕ್ಕಳಿದ್ದು, ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಿಕೊಟ್ಟಿದ್ದು, ಅವರು ತಮ್ಮ ತಮ್ಮ ಗಂಡನ ಮನೆಯಲ್ಲಿರುತ್ತಾರೆ. ನನ್ನ ತಾಯಿ ಚಂದಮ್ಮ ಇವರು 5-6 ವರ್ಷಗಳ ಹಿಂದೆ ಮೃತಪಟ್ಟಿದ್ದು, ನನ್ನ ತಾಯಿ ಮೃತಪಟ್ಟಾಗಿನಿಂದ ನನ್ನ ತಂದೆಯವರಾದ ಮಹಾದೇವಪ್ಪ ತಂಗಡಗಿ ರವರು ಮಾನಸಿಕವಾಗಿ ಖಿನ್ನತೆಯಲ್ಲಿರುತ್ತಾರೆ.ಹೀಗಿದ್ದು, ಇಂದು ದಿನಾಂಕ:10/10/2021 ರಂದು ಬೆಳಿಗ್ಗೆ 8.00 ಎ.ಎಂ. ಸುಮಾರಿಗೆ ನನ್ನ ಅಣ್ಣ ಅಂಬ್ರೇಶನು ಹುಣಸಗಿಯಲ್ಲಿ ಸೆಕೆಂಡ್ ಹ್ಯಾಂಡ್ ಮೋಟರ ಸೈಕಲ್ಗಳು ಸಿಗುತ್ತವೆ. ಒಂದು ಮೋಟರ ಸೈಕಲ್ ತರಲು ನಾನು ಮತ್ತು ದೊಡ್ಡಮನ ಮಗ ಶಿವರಾಜ ತಂ/ ಹೊನ್ನಪ್ಪ ಕೋರಬಾರನೊಂದಿಗೆ ಹುಣಸಗಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದನು ಸಾಯಂಕಾಲ 6.30 ಪಿ.ಎಂ. ಸುಮಾರಿಗೆ ನನ್ನ ಅಣ್ಣ ಅಂಬ್ರೇಶನು ನನಗೆ ಫೋನ್ ಮಾಡಿ ನಾವು ಒಂದು ಸೆಕೆಂಡ್ ಹ್ಯಾಂಡ್ ಮೋಟರ ಸೈಕಲ್ ಖರೀದಿ ಮಾಡಿಕೊಂಡು ಶಹಾಪೂರ ಕಡೆಗೆ ಬರುತ್ತಿದ್ದೇವೆ ಅಂತಾ ಹೇಳಿದ್ದನು. ನಾನು ಅಣ್ಣನ ದಾರಿ ನೋಡಿಕೊಂಡು ಮನೆಯಲ್ಲಿದ್ದಾಗ ರಾತ್ರಿ 8.30 ಪಿ.ಎಂ. ಸುಮಾರಿಗೆ ನನಗೆ ಪರಿಚಯವಿದ್ದ ಶಿವಪ್ಪ ತಂ/ ಮಲ್ಲಿಕಾಜರ್ುನ ಮಣಿಗಿರಿ, ಸಾ|| ದಿಗ್ಗಿಬೇಸ್ ಶಹಾಪೂರ, ಇವರು ನನ್ನ ಅಣ್ಣನ ಮೊಬೈಲಿನಿಂದ ನನಗೆ ಫೋನ್ ಮಾಡಿ ನನ್ನ ಕೆಲಸದ ನಿಮಿತ್ಯ ಹತ್ತಿಗೂಡುರ ಗ್ರಾಮಕ್ಕೆ ಬಂದಿದ್ದು, ಕೆಲಸ ಮುಗಿಸಿಕೊಂಡು ಮರಳಿ ಶಹಾಪೂರ ಕಡೆಗೆ ಮೋಟರ್ ಸೈಕಲ್ ಮೇಲೆ ಬರುತಿದ್ದೆನು. ಶಹಾಪೂರ-ಹತ್ತಿಗುಡೂರ ಮುಖ್ಯ ರಸ್ತೆಯಲ್ಲಿ ಹತ್ತಿಗುಡೂರ ಸೀಮಾಂತರದ ಕೆ.ಇ.ಬಿ ಹತ್ತಿರ ಒಬ್ಬ ವ್ಯಕ್ತಿ ಅಪಘಾತವಾಗಿ ಮೋಟರ್ ಸೈಕಲ್ ಸಮೇತ ರೋಡಿನ ಬದಿಗೆ ಬಿದ್ದಿದ್ದನ್ನು ನನ್ನ ಮೋಟರ್ ಸೈಕಲ್ನ ಬೆಳಕಿನಲ್ಲಿ ಮತ್ತು ರೋಡಿನ ಮೇಲೆ ಓಡಾಡುತಿದ್ದ ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಿ ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತದಲ್ಲಿ ರೋಡಿನ ಬದಿಗೆ ಬಿದ್ದಿರುವ ವ್ಯಕ್ತಿ ನಿಮ್ಮ ಅಣ್ಣ ಅಂಬ್ರೇಶ ಇರುತ್ತಾನೆ. ನಿಮ್ಮ ಅಣ್ಣನಿಗೆ ಅಪಘಾತದಲ್ಲಿ ಗಾಯಗಳಾಗಿದ್ದರಿಂದ ಮಾತನಾಡುವ ಸ್ಥಿತಿಯಲ್ಲಿ ಇಲ್ಲಾ. ಸ್ಥಳದಲ್ಲಿ ಒಂದು ಬಿಳಿ ಬಣ್ಣದ ಟಿ.ವಿ.ಎಸ್. ಸ್ಪೋಟ್ಸರ್್ 100 ಇ.ಎಸ್ ಮೋಟರ ಸೈಕಲ್ ಇದ್ದು, ಇದರ ರಜಿಸ್ಟರ್ ನಂ. ಕೆಎ-53 ಇ.ಎಂ-0463 ಅಂತಾ ಇರುತ್ತದೆ. ನಿಮ್ಮ ಅಣ್ಣ ಮೋಟರ್ ಸೈಕಲ್ ಚಲಾಯಿಸಿಕೊಂಡು ಹೋಗುತಿದ್ದಾಗ ಯಾವುದೋ ಒಂದು ವಾಹನ ಚಾಲಕನು ಮೋಟರ್ ಸೈಕಲ್ಗೆ ಅಪಘಾತಪಡಿಸಿ ವಾಹನ ನಿಲ್ಲಿಸದೇ ಹೋದಂತೆ ಕಂಡು ಬರುತ್ತದೆ. ನಾನು 108 ಅಂಬುಲೆನ್ಸಗೆ ಫೋನ್ ಮಾಡಿದ್ದೇನೆ ಅಂತಾ ಹೇಳಿದಾಗ, ನಾನು, ನಮ್ಮ ಚಿಕ್ಕಪ್ಪ ಚಂದ್ರು ತಂ/ ಗದಿಗೆಪ್ಪ ತಂಗಡಗಿ ಇವರಿಗೆ ವಿಷಯ ತಿಳಿಸಿ ಇಬ್ಬರೂ ಕೂಡಿ ಘಟನೆ ಸ್ಥಳಕ್ಕೆ ಹೋಗುವಾಗ ಕನ್ಯಾಕೋಳ್ಳೂರ ಅಗಸಿಯ ಹತಿರ್ತ ಎದರುಗಡೆಯಿಂದ ಒಂದು 108 ಅಂಬ್ಯುಲೈನ್ಸ್ ವಾಹನ ಬಂದಿದ್ದನ್ನು ನೋಡಿ ಇದರಲ್ಲಿಯೇ ಬಂದಿರಬಹುದು ಅಂತ ತಿಳಿದು ಅದನ್ನು ಹಿಂಬಾಲಿಸಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದಾಗ, ರಾತ್ರಿ 8-50 ಗಂಟೆಯ ಸುಮಾರಿಗೆ ಅಂಬುಲೆನ್ಸದಲ್ಲಿ ನನ್ನ ಅಣ್ಣ ಅಂಬ್ರೇಶನು ಇದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ತಪಾಸಣೆ ಮಾಡಿದ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಬರುವದಕ್ಕಿಂತ ಮೊದಲೇ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ನನ್ನ ಅಣ್ಣನಿಗೆ ನೋಡಲಾಗಿ ಮೂಗಿನಿಂದ ರಕ್ತ ಬಂದು, ತಲೆಗೆ ಒಳಪೆಟ್ಟಾದಂತೆ ಕಂಡು ಬಂದಿದ್ದು, ಬೆನ್ನಿನ ಕೆಳಭಾಗದಲ್ಲಿ ತರಚಿದ ಗಾಯವಾಗಿರುತ್ತದೆ. ನಂತರ ನನ್ನ ಅಣ್ಣನ ಜೊತೆ ಹುಣಸಗಿಗೆ ಹೋಗಿದ್ದ ಶಿವರಾಜ ತಂ/ ಹೊನ್ನಪ್ಪ ಕೋರಬಾರ ಈತನಿಗೆ ಫೋನ್ ಮಾಡಿ ವಿಚಾರಿಸಿದಾಗ ನಾವಿಬ್ಬರೂ ಹುಣಸಗಿಗೆ ಹೋಗಿ ಒಂದು ಒಂದು ಟಿ.ವಿ.ಎಸ್. ಸ್ಪೋಟ್ಸರ್್ 100 ಇ.ಎಸ್ ಮೋಟರ ಸೈಕಲ್ ನಂ. ಕೆಎ-53 ಇ.ಎಂ-0463 ಮೋಟರ ಸೈಕಲನ್ನು ಖರೀದಿ ಮಾಡಿಕೊಂಡು 8.00 ಪಿ.ಎಂ.ಕ್ಕೆ ಹತ್ತಿಗುಡೂರ ವರೆಗೆ ಬಂದಾಗ ನಾನು ನಮ್ಮೂರಿಗೆ ಹೋಗಿರುತ್ತೇನೆ. ನಿಮ್ಮ ಅಣ್ಣನು ಶಹಾಪೂರ ಕಡೆಗೆ ಮೋಟರ ಸೈಕಲ್ ನಡೆಸಿಕೊಂಡು ಹೋಗಿರುತ್ತಾನೆ ಅಂತಾ ಹೇಳಿರುತ್ತಾನೆ. ಅಪಘಾತವು ನಿನ್ನೆ ರಾತ್ರಿ 8.10 ಪಿ.ಎಂ. ಇಂದ 8.25 ಪಿ.ಎಂ. ಮಧ್ಯದ ಅವಧಿಯಲ್ಲಿ ಜರುಗಿದಂತೆ ಕಂಡು ಬರುತ್ತದೆ. ನನ್ನ ಅಣ್ಣ ಅಂಬ್ರೇಶ ಈತನಿಗೆ ಉಪಚಾರ ಕುರಿತು ಅಂಬುಲೆನ್ಸದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರುತಿದ್ದಾಗ ಮಾರ್ಗ ಮಧ್ಯದಲ್ಲಿ ವಿಭೂತಿಹಳ್ಳಿ ಗ್ರಾಮದ ಹತ್ತಿರ ರಾತ್ರಿ 8-45 ಗಂಟೆಗೆ ಮೃತ ಪಟ್ಟಿರಬಹುದು. ಈ ಬಗ್ಗೆ ನಮ್ಮ ಹಿರಿಯರೊಂದಿಗೆ ವಿಚಾರಣೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ರಸ್ತೆ ಅಪಘಾತಪಡಿಸಿ ನನ್ನ ಅಣ್ಣನ ಸಾವಿಗೆ ಕಾರಣನಾದ ಯಾವುದೋ ಅಪರಿಚಿತ ವಾಹನವನ್ನು ಪತ್ತೆ ಮಾಡಿ ಸದರಿ ವಾಹನದ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾದಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ. 231/2021 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಂ.ವಿ. ಯಾಕ್ಟ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 157/2021 ಕಲಂ. 143, 147, 323, 324, 448, 504, 506 ಸಂಗಡ 149 ಐಪಿಸಿ : ಇಂದು ದಿನಾಂಕಃ 11/10/2021 ರಂದು 6:00 ಪಿ.ಎಮ್ ಕ್ಕೆ ದೇವನಗೌಡ ತಂದೆ ಹಣಮಂತ್ರಾಯಗೌಡ ಪೊಲೀಸ್ ಪಾಟೀಲ್ ವ|| 43 ವರ್ಷ ಜಾ|| ಬೇಡರ ಉ|| ವಕೀಲ್ ವೃತಿ ಸಾ|| ದೇವರಗೋನಾಲ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುವುದೇನಂದರೆ, ನನಗೆ ಮೂರು ಜನ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಇರುತ್ತಾರೆ. ಶಾಂತಗೌಡ ಪೊಲೀಸ್ ಪಾಟೀಲ್ ಇತನಿಗೂ ನನಗೂ ಹೊಲದ ವಿಷಯದಲ್ಲಿ ಹಳೆ ವೈಮನಸ್ಸು ಇದ್ದರು, ನಾನು ಸುಮ್ಮನೆ ನನ್ನ ಪಾಡಿಗೆ ನಾನು ವಕೀಲ್ ವೃತ್ತಿಯನ್ನು ಮಾಡುತ್ತಿದ್ದೇನು. ಹಿಗಿದ್ದು ದಿನಾಂಕ:03/10/2021 ರಂದು ಮದ್ಯಾಹ್ನ 01:00 ಗಂಟೆಗೆ ನಾನು ನನ್ನ ಮನೆಯಲ್ಲಿ ನ್ಯಾಯಾಲಯಕ್ಕೆ ಸಂಬಂದಿಸಿದ ಕೆಲವು ಪೈಲ್ಗಳನ್ನು ಓದುತ್ತಾ ಕುಳಿತಾಗ, ವಾಡಿಯಿಂದ ಬಂದ ಪ್ರವೀಣಕುಮಾರ ತಂದೆ ಮೊನ್ನಪ್ಪ ಬಡಿಗೇರ, ಶಾಂತಗೌಡ ಹಾಗೂ ಇನ್ನಿತರ 03 ಜನ ಕೂಡಿ ಒಂದು ಬಿಳಿಯ ಬಣ್ಣದ ಮಾರುತಿ ಸ್ವೀಪ್ಟ ಕಾರ್ ನಂ. ಕೆಎ-04 ಎಬಿ-6876 ಇದರಲ್ಲಿ ಬಂದವರೇ, ನನ್ನ ಮನೆಗೆ ಏಕಾ-ಏಕಿ ನುಗ್ಗಿ ನನ್ನ ಅಂಗಿಯನ್ನು ಹಿಡಿದು ದರದರನೇ ಹೊರಗೆ ಎಳೆದುಕೊಂಡು ಬಂದು ನನಗೆ ಪ್ರವೀಣಕುಮಾರ ಇತನು ತನ್ನ ಕಾಲಿನಿಂದ ಒದ್ದನು, ಪ್ರವೀಣಕುಮಾರ ಇತನು ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದನು, ಉಳಿದ ಮೂರು ಜನರು ತಮ್ಮ ಕೈಗಳಿಂದ ನನಗೆ ಸಿಕ್ಕಸಿಕ್ಕಲ್ಲಿ ಹೊಡೆದರು. ನಾನು ಸತ್ತಿನೆಪ್ಪೋ ಅಂತಾ ಕೂಗಾಡುವಾಗ ನನ್ನ ಹೆಂಡತಿಯಾದ ಹುಲಗಮ್ಮ ಇವಳು ಬಿಡಿಸಲು ಬಂದಾಗ ಅವಳಿಗೆ ಪ್ರವೀಣಕುಮಾರ ಇತನು ಜಾಡಿಸಿ ದಬ್ಬಿದಾಗ ಅವಳು ನೆಲಕ್ಕೆ ಬಿದ್ದು ಅವಳ ಬಲಗೈಗೆ ರಕ್ತಗಾಯವಾಗಿರುತ್ತದೆ. ನನ್ನನ್ನು ಈ 05 ಜನರು ಬಲವಂತವಾಗಿ ಎಳೆದುಕೊಂಡು ಕಾರಿನಲ್ಲಿ ಕೂರಿಸಲು ಎಳೆದಾಡುತ್ತಿದ್ದಾಗ ನಾನು ಜೀವ ಭಯದಿಂದ ಅವರಿಂದ ಕೊಸರಿಕೊಂಡು ಮನೆಯ ಒಳಗೆ ಹೊಕ್ಕು ಬಾಗಿಲನ್ನು ಹಾಕಿಕೊಂಡೇನು. ಅವರೆಲ್ಲರೂ ಅರ್ಧ ಗಂಟೆಯವರೆಗೆ ಲೇ ಬೋಸಡಿ ಮನಗೆ, ರಂಡಿ ಮಗನೆ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಬಾಗಿಲಿಗೆ ಒಂದೇ ಸಮನೆ ಒದೆಯ ತೊಡಗಿದರು. ಇದರಿಂದ ನನ್ನ ಮನೆಯ ಬಾಗಿಲಿನ ಚಕ್ಕೆ ಎಗರಿ ಹೋಗಿರುತ್ತದೆ. ಆ 05 ಜನರು ಲೇ ಬೋಸಡಿ, ಸೂಳೆ ಮಗನೆ' ಇವತ್ತು ನಿನ್ನನ್ನು ಖಲಾಸ ಮಾಡಿಯೇ ಇಲ್ಲಿಂದ ಹೊಗುತ್ತೇವೆ, ನೀನು ಗಂಡಸಾಗಿದ್ದರೆ ಹೊರಗೆ ಬಾ ಎನ್ನುತ್ತಾ ಬಾಗಿಲಿಗೆ ಪುನಃ ಒದೆಯ ತೊಡಗಿದರು. ಸುಮಾರು ಅರ್ದ ಗಂಟೆಯ ನಂತರ ಅವರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಲೇ ಸೂಳೆ ಮಗನೆ, ಈವತ್ತು ನೀನು ಉಳಿದುಕೊಂಡಿ, ಇನ್ನೊಮ್ಮೆ ನಿನ್ನನ್ನು ಖಲಾಸ ಮಾಡಿಯೇ ಹೊಗುತ್ತೇವೆ ಅನ್ನುತಿದ್ದರು ಆಗ ನಾನು ಜೀವ ಭಯದಿಂದ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದಾಗ, ಪೊಲೀಸ್ ವಾಹನ ಬಂದ ನಂತರ ಸದರಿಯವರೆಲ್ಲರು ತಪ್ಪಿಸಿಕೊಂಡರು. ನಾನು ಮತ್ತು ನನ್ನ ಹೆಂಡತಿ ಯಾದಗಿರಿ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸೇರ್ಪಡೆಯಾಗಿ ಚಿಕಿತ್ಸೆ ಪಡೆದುಕೊಂಡು ಮತ್ತು ಹೆದರಿಕೊಂಡು ನಂತರ ತಡವಾಗಿ ಬಂದು ದೂರು ಅಜರ್ಿಸಲ್ಲಿಸುತ್ತಿದ್ದೇನೆ. ಆದಕಾರಣ ನನ್ನ ಮನೆಗೆ ನುಗ್ಗಿ ಅವಾಚ್ಯ ಶಬ್ದಳಗಿಂದ ಬೈದು ಹಲ್ಲೆ ಮಾಡಿದ 05 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೆಕೆಂದು ಸಲ್ಲಿಸಿದ ಪಿರ್ಯಾದಿ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 157/2021 ಕಲಂ. 143, 147, 323, 324, 448, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 76/2021 ಕಲಂ 143,147,148,323,324,354,504,506 ಸಂ 149 ಐಪಿಸಿ : ಫಿಯರ್ಾದಿಯ ಮನೆಯ ಮುಂದೆ ಸಿಸಿ ರೋಡಿನ ಮೇಲೆ ಆರೋಪಿ ಮಹಾಂತೇಶತಂದೆ ಕಸನು ಚವ್ಹಾಣಈತನುದನಕರಕಟ್ಟಿತಿಪ್ಪಿಕಸ ಹಾಗೂ ಕಟ್ಟಿಗೆ ಹಾಕಿದ್ದುಇದರಿಂದ ಸಿಸಿ ರೋಡ ಮೇಲಿಂದತಿರುಗಾಡಲುತೊಂದರೆಯಾಗಿದ್ದರಿಂದ ದಿನಾಂಕ:10/10/2021 ರಂದು ಸಾಯಂಕಾಲ ಸಿಸಿ ರೋಡ ಮೇಲಿನ ತಿಪ್ಪಿಕಸ ಹಾಗೂ ಕಟ್ಟಿಗೆಯನ್ನು ತೆಗೆಸಿದ್ದು, ಇಂದು ದಿನಾಂಕ:11/10/2021 ರಂದು ಮುಂಜಾನೆ 8.30 ಗಂಟೆ ಸುಮಾರಿಗೆ ಫಿಯರ್ಾದಿ ತನ್ನ ಮನೆಯ ಮುಂದೆಇದ್ದಾಗಆರೋಪಿತರೆಲ್ಲರೂ ಬಂದು ಕಸ ತೆಗೆದ ವಿಷಯಕ್ಕೆಅವಾಚ್ಯವಾಗಿ ಬೈದುಕಲ್ಲು ಹಾಗು ಬಡಿಗೆಯಿಂದ ಫಿಯರ್ಾದಿಗೆ ಹಾಗು ಅವರಅಣ್ಣತಮ್ಮಂದಿರರಿಗೆ ಹೊಡೆ ಬಡೆ ಮಾಡಿದ್ದು , ಬಿಡಿಸಲು ಬಂದ ಫಿಯರ್ಾದಿಯ ಹೆಂಡತಿಗೆ ಎಳೆದಾಡಿ ಮಾನಭಂಗ ಮಾಡಿಜೀವ ಬೆದರಿಕೆ ಹಾಕಿದ ಬಗ್ಗೆ.
ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ:77/2021 ಕಲಂ 143,147,148,323,324,354,504,506 ಸಂ 149 ಐಪಿಸಿ : ಸಿಸಿ ರೋಡಿನ ಮೇಲೆ ಫಿಯರ್ಾದಿದಾರರುದನಕರಕಟ್ಟಿತಿಪ್ಪಿಕಸ ಹಾಗೂ ಕಟ್ಟಿಗೆ ಹಾಕಿದ್ದುಇದರಿಂದ ಸಿಸಿ ರೋಡ ಮೇಲಿಂದತಿರುಗಾಡಲುತೊಂದರೆಯಾಗಿದ್ದರಿಂದ ದಿನಾಂಕ:10/10/2021 ರಂದು ಸಾಯಂಕಾಲ ಸಿಸಿ ರೋಡ ಮೇಲಿನ ತಿಪ್ಪಿಕಸ ಹಾಗೂ ಕಟ್ಟಿಗೆಯನ್ನುಆರೋಪಿತರು ತೆಗೆಸಿದ್ದು, ಇದೇ ವಿಷಯಕ್ಕೆಇಂದು ದಿನಾಂಕ:11/10/2021 ರಂದು ಮುಂಜಾನೆ 8.30 ಗಂಟೆ ಸುಮಾರಿಗೆಆರೋಪಿತರೆಲ್ಲರೂ ಬಂದುಯಾಕೆ ನಮ್ಮ ಮನೆಯ ಮುಂದಿನ ಕಸ ತೆಗೆದಿದ್ದೀರಿಅಂತಅವಾಚ್ಯವಾಗಿ ಬೈದುಕಲ್ಲು ಹಾಗು ಬಡಿಗೆಯಿಂದ ಫಿಯರ್ಾದಿಗೆ ಹಾಗು ಆತನಅಣ್ಣತಮ್ಮಂದಿರರಿಗೆ ಹೊಡೆ ಬಡೆ ಮಾಡಿದ್ದು , ಬಿಡಿಸಲು ಬಂದ ಫಿಯರ್ಾದಿಯ ಹೆಂಡತಿಗೆ ಎಳೆದಾಡಿ ಮಾನಭಂಗ ಮಾಡಿಜೀವ ಬೆದರಿಕೆ ಹಾಕಿದ ಬಗ್ಗೆ