ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-10-2022

 

 

ಹುಣಸಗಿವ ಪೊಲೀಸ್ ಠಾಣೆ:-

ಗುನ್ನೆ ನಂ: 76/2022 ಕಲಂ:323, 498(ಎ), 504, 506 ಸಂ. 34 ಐಪಿಸಿ ಹಾಗೂ 3 &4 ಡಿ.ಪಿ ಕಾಯ್ದೆ: ಫಿರ್ಯಾಧಿಯ ಮದುವೆ ಆರೋಪಿ ವಂಶಿ ಈತನೊಂದಿಗೆ ದಿನಾಂಕ:27/04/2018 ರಂದು ಆಗಿದ್ದು, ಮದುವೆ ನಿಶ್ಚಯ ಕಾಲಕ್ಕೆ ಸಾಕ್ಷಿದಾರರ ಸಮಕ್ಷಮದಲ್ಲಿ ಆರೋಪಿ ವಂಶಿ ಈತನು 40 ತೊಲೆ ಬಂಗಾರ ವರದಕ್ಷಿಣೆಯಾಗಿ ಕೇಳಿದ್ದು, ಆದರೆ ಫಿರ್ಯಾದಿಯ ತಾಯಿ ತಂದೆಯವರಯ 30 ತೊಲೆ ಬಂಗಾರ ಕೊಡುತ್ತೇವೆ ಅಂತಾ ಮಾತನಾಡಿದ್ದು, ಮದುವೆ ಸಮಯದಲ್ಲಿ ಕೊಟ್ಟಿದ್ದು ಇರುತ್ತದೆ. ಫಿರ್ಯಾದಿಗೆ ಆರೋಪಿ ವಂಶಿ ಈತನು ಮದುವೆ ನಂತರ ತಮ್ಮೂರಿಗೆ ಕರೆದುಕೊಂಡು ಹೋಗಿ 4 ವರ್ಷಗಳವರೆಗೆ ಗಂಡ ಹೆಂಡತಿ ಅನೋನ್ಯವಾಗಿದ್ದು, ಅವರಿಗೆ 3 ವರ್ಷದ ಹೆಣ್ಣು ಮಗು ಇರುತ್ತದೆ. ಈಗೆ ಸುಮಾರು 10 ದಿವಸಗಳ ಹಿಂದೆ ಆರೋಪಿ ವಂಶಿ ಈತನು ಫಿರ್ಯಾಧಿಗೆ ನಿನ್ನ ತವರು ಮನೆಯವರು ಇನ್ನೂ 10 ತೊಲೆ ಬಂಗಾರ ವರದಕ್ಷಿಣೆಯಾಗಿ ಕೊಡಬೇಕು ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಕಿರುಕುಳ ನಿಡಿದ್ದು, ಫಿರ್ಯಾದಿಯು ಮದುವೆ ನಿಶ್ಚಯ ಸಮಯದಲ್ಲಿ ಮಾತನಾಡಿದಂತೆ ಮದುವೆ ಕಾಲಕ್ಕೆ ಕೊಟ್ಟಿದ್ದಾರೆ ಅಂತಾ ಅಂದಾಗ ಆರೋಪಿ ನಂ:1 ರಿಂದ 3 ರವರು ನೇದ್ದವರು ನಿನ್ನ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬರದಿದ್ದರೇ ನಿನಗೆ ಖಲಾಸ್ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದರಿಂದ ಫಿರ್ಯಾದಿಯು ತನ್ನ ತಂದೆ ತಾಯಿಗೆ ಪೋನ್ ಮಾಡಿ ಕರೆಯಿಸಿಕೊಂಡು ತವರು ಮನೆಗೆ ಬಂದಿದ್ದು ಇರುತ್ತದೆ. ಇಂದು ದಿನಾಂಕ:11/10/2022 ರಂದು ಫಿರ್ಯಾಧಿಯು ಬಲಶೆಟ್ಟಿಹಾಳ ಗ್ರಾಮದ ಹತ್ತಿರ ಇರುವ ಅಲಮೇಶ್ವರ ಕ್ಯಾಂಪ್ ದ ತನ್ನ ತಂದೆ ತಾಯಿ ಮನೆಯಲ್ಲಿ ಇದ್ದಾಗ, ಆರೋಪಿತರು ಅಲ್ಲಿಗೆ ಮದ್ಯಾಹ್ನ 12.00 ಗಂಟೆಗೆ ಬಂದವರು ಫಿರ್ಯಾದಿಗೆ ಆರೋಪಿ ನಂ:1 ನೇದ್ದವನು ಎನಲೇ ಬೋಸುಡಿ ನಿನ್ನ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಅಂದರೇ ನಿನ್ನ ತಂದೆಯ ಮನೆಯಲ್ಲಿ ಇದ್ದಿಯಾ ಅಂತಾ ಕೈಯಿಂದ ಫಿರ್ಯಾದಿಗೆ ಎಡಕಪಾಳಕ್ಕೆ ಹೊಡೆದಾಗ ಫಿರ್ಯಾಧಿಯು ಚಿರ್ಯಾಡುತ್ತಿದ್ದಾಗ ಅವಳ ಅತ್ತೆಯಾದ ಜಯಲಕ್ಷ್ಮಿ ಇವಳು ಈ ಸೂಳಿಗೆ ಬಿಡುವದು ಬೇಡ ಅಂತಾ ಫಿರ್ಯಾದಿಯ ಕೂದಲು ಹಿಡಿದು ಜಗ್ಗಾಡುತ್ತಿದ್ದಾಗ ಅವಳ ಮಾವನಾದ ಚಂದರರಾವ್ ಅರವಪಲ್ಲಿ ಈತನು ಫಿರ್ಯಾದಿಗೆ ನಿನ್ನ ತಂದೆಯು ನಿನಗೆ ಬಿಟ್ಟ ಹೊಲವನ್ನು ಮಾರಾಟಮಾಡಿಕೊಂಡು ಬರದಿದ್ದರೇ ನಿನಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದಾಗ ಫಿರ್ಯಾದಿಯ ತಂದೆ ತಾಯಿಯವರು ಜಗಳ ಬಿಡಿಸಿದ್ದು ಇರುತ್ತದೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಕ್ರಮ ಕೈಕೊಂಡಿದ್ದು ಇರುತ್ತದೆ.

 

ವಡಗೇರಾ ಪೊಲೀಸ್ ಠಾಣೆ:-

ಗುನ್ನೆ ನಂ: 119/2022 ಕಲಂ 279, 304(ಎ) ಐಪಿಸಿ:ದಿನಾಂಕ:11/10/2022 ರಂದು ಮಧ್ಯಾಹ್ನ 1.20 ಪಿಎಮ್ ಕ್ಕೆ ಶ್ರೀಮತಿ ಮರೆಮ್ಮ ಗಂಡ ಹಣಮಂತ ನಾಟೇಕಾರ ವಯಾಃ 28ವರ್ಷ ಜಾತಿಃ ಹೊಲೆಯ (ಎಸ್.ಸಿ) ಉಃ ಕೂಲಿ ಕೆಲಸ ಸಾಃ ವಡಗೇರಾ ತಾಃ ವಡಗೆರಾ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪೂಟರದಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಶ್ರೀಮತಿ ಮರೆಮ್ಮ ಗಂಡ ಹಣಮಂತ ನಾಟೇಕಾರ ವಯಾಃ 28ವರ್ಷ ಜಾತಿಃ ಹೊಲೆಯ (ಎಸ್.ಸಿ) ಉಃ ಕೂಲಿ ಕೆಲಸ ಸಾಃ ವಡಗೇರಾ ತಾಃ ವಡಗೆರಾ ಇದ್ದು, ತಮ್ಮಲ್ಲಿ ಸಲ್ಲಿಸುವ ದೂರು ಅಜರ್ಿ ಏನೆಂದರೆ, ನಾನು ಹೊಲಮನೆ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಇರುತ್ತೇನೆ. ನನಗೆ ವಡಗೇರಾ ಪಟ್ಟಣದ ಹಣಮಂತ ನಾಟೇಕಾರ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ನಮಗೆ 7 ವರ್ಷದ ಭಾಗ್ಯಶ್ರೀ ಅಂತಾ ಒಬ್ಬ ಮಗಳು ಮತ್ತು 4 ವರ್ಷದ ಮಲ್ಲಿಕಾಜರ್ುನ ಅಂತಾ ಒಬ್ಬ ಮಗ ಇರುತ್ತಾನೆ. ನನ್ನ ಗಂಡನು ಸುಮಾರು ದಿನಗಳ ಹಿಂದೆ ಹೊಟ್ಟೆಪಾಡಿಗೆ ದುಡಿಯಲೆಂದು ಬೆಂಗಳೂರಿಗೆ ಹೋಗಿರುತ್ತಾನೆ. ನನ್ನ ಗಂಡ ಬೆಂಗಳೂರಿಗೆ ದುಡಿಯಲು ಹೋಗಿದ್ದರಿಂದ ನಾನು ನನ್ನ ಮಕ್ಕಳೊಂದಿಗೆ ತವರು ಮನೆಯಲ್ಲಿದ್ದು, ನಮ್ಮ ಹೊಲಮನೆ ನೋಡಿಕೊಂಡಿರುತ್ತೇನೆ. ನಮ್ಮ ಹೊಲ ಯಾದಗಿರಿ-ವಡಗೇರಾ ಮೇನ್ ರೋಡಿಗೆ ಆದಿಬಸವಣ್ಣ ಗುಡಿ ಹತ್ತಿರ ರೋಡಿಗೆ ಅಂಟಿಕೊಂಡು ಇರುತ್ತದೆ. ಸದರಿ ಹೊಲದಲ್ಲಿ ನಾವು ಹತ್ತಿ ಬೆಳೆ ಹಾಕಿದ್ದರಿಂದ ಹತ್ತಿ ಬಿಡಿಸಲು ಇಂದು ದಿನಾಂಕ 11.10.2022 ರಂದು ಬೆಳಿಗ್ಗೆ ನಾನು ಮತ್ತು ನನ್ನ ತಂದೆಯಾದ ಭೀಮಶಪ್ಪ ನಾಟೇಕಾರ, ಹಾಗೂ ನನ್ನ ತಾಯಿಯಾದ ಹಣಮಂತಿ ನಾಟೇಕಾರ ಕೂಡಿ ನನ್ನ 4 ವರ್ಷದ ಮಗ ಮಲ್ಲಿಕಾಜರ್ುನ ಈತನನ್ನು ಸಂಗಡ ಕರೆದುಕೊಂಡು ನಮ್ಮೂರಿನಿಂದ ಒಂದು ಖಾಸಗಿ ಅಟೋದಲ್ಲಿ ನಮ್ಮ ಹತ್ತಿ ಹೊಲಕ್ಕೆ ಬಂದೆವು. ಇಂದು ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಸದರಿ ಅಟೋದಿಂದ ನಮ್ಮ ಹೊಲದ ಹತ್ತಿರ ಇಳಿದು ಅಟೋ ಚಾಲಕನಿಗೆ ಹಣ ಕೊಟ್ಟು ಅಟೋ ಮುಂದೆ ಯಾದಗಿರಿ ಕಡೆಗೆ ಹೋದ ನಂತರ ನಾವು ನಮ್ಮ ಹೊಲಕ್ಕೆ ಹೋಗಬೇಕೆಂದು ರಸ್ತೆ ದಾಟುತ್ತಿದ್ದಾಗ ನಮ್ಮ ಹಿಂದಿನಿಂದ ಬರುತ್ತಿದ್ದ ನನ್ನ ಮಗನಾದ ಮಲ್ಲಿಕಾಜರ್ುನನಿಗೆ ಏಕದಮ್ಮ ನಮ್ಮೂರಿನ ಸುರೇಶ ತಂದೆ ತಾಯಪ್ಪ ಮುಸ್ತಜೀರ ಈತನು ತನ್ನ ಟಾಟಾ ಮ್ಯಾಜಿಕ ವಾಹನವನ್ನು ವಡಗೇರಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡು ದಾಟುತ್ತಿದ್ದ ನನ್ನ ಮಗನಿಗೆ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದ ನನ್ನ ಮಗನು ರೋಡಿನ ಮೇಲೆ ಅಂಗಾತಾಗಿ ದಪ್ಪನೆ ಬಿದ್ದನು. ರೋಡಿನ ಮೇಲೆ ಬಿದ್ದ ನನ್ನ ಮಗನಿಗೆ ನೋಡಿದಾಗ ನನ್ನ ಮಗನ ಎಡ ತೆಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು, ಎಡ ಕಿವಿಯ ಹಿಂಬಾಗಕ್ಕೆ ಭಾರಿ ರಕ್ತಗಾಯವಾಗಿದ್ದು, ಹಣೆಗೆ ತರಚಿದ ರಕ್ತಗಾಯವಾಗಿದ್ದು, ಬಲ ಕೈ ಮೊಳಕೈ ಹತ್ತಿರ ಮುರಿದಿದ್ದು, ಬಲ ಮೊಳಕಾಲು ಹತ್ತಿರ ರಕ್ತಗಾಯಗಳಾಗಿ ಮುರಿದಿತ್ತು, ಅಪಘಾತಪಡಿಸಿದ ಟಾಟಾ ಮ್ಯಾಜಿಕ ಚಾಲಕನು ತನ್ನ ವಾಹನವನ್ನು ಸ್ವಲ್ಪ ಮುಂದೆ ಹೋಗಿ ರೋಡಿನ ಪಕ್ಕದಲ್ಲಿ ನಿಲ್ಲಿಸಿದನು. ಸದರಿ ವಾಹನದ ನಂಬರ ನೋಡಲಾಗಿ ಕೆಎ-33-ಎ-9225 ನೆದ್ದು ಅಂತಾ ಇತ್ತು. ನಮ್ಮ ಹೊಲದ ಹತ್ತಿರ ಕೆಲಸ ಮಾಡುತ್ತಿದ್ದ ಬಸವರಾಜ ತಂದೆ ದೇವಿಂದ್ರಪ್ಪ ನಾಟೇಕಾರ ಹಾಗೂ ಯಾದಗಿರಿ-ವಡಗೇರಾ ಕಡೆಗೆ ಹೋಗಿ ಬರುತ್ತಿದ್ದ ನಮ್ಮೂರಿನವರಾದ, ಮಹಾದೇವಪ್ಪ ತಂದೆ ಸಿದ್ದಪ್ಪ ಗೋನಾಲ, ಕೃಷ್ಣಾಪ್ಪ ತಂದೆ ಅಂಬಲಪ್ಪ ಹಾಗೂ ಇತರರು ಅಪಘಾತವನ್ನು ನೋಡಿದ್ದು, ಸದರಿ ಅಪಘಾತದಲ್ಲಿ ಗಾಯಗೊಂಡ ನನ್ನ ಮಗನಿಗೆ ಉಪಚಾರ ಕುರಿತು ಅವರು ಒಂದು ಮೋಟರ ಸೈಕಲ ಮೇಲೆ ವಡಗೇರಾ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ನಂತರ ನನ್ನ ಮಗನು ಆಸ್ಪತ್ರೆಯಲಿ ಉಪಚಾರ ಪಡೆಯುತ್ತಾ ತನಗಾದ ಭಾರಿಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 11.05 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಕಾರಣ ಸದರಿ ಟಾಟಾ ಮ್ಯಾಜಿಕ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿಪಡಿಸಿದ್ದರಿಂದ ಭಾರಿ ಗಾಯಗಳಾಗಿ ಮೃತಪಟ್ಟಿರುತ್ತಾನೆ. ಕಾರಣ ಸದರಿ ಟಾಟಾ ಮ್ಯಾಜಿಕ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 119/2022 ಕಲಂ: 279, 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-

ಗುನ್ನೆ ನಂ: 41/2022 ಕಲಂ 279, 337, 338, 283, ಐ.ಪಿ.ಸಿ & 187 ಐ.ಎಮ್.ವಿ. ಆಕ್ಟ್

(ಇಂದು ದಿನಾಂಕ 11/10/2022 ರಂದು ಕಲಂ 304(ಎ) ಐಪಿಸಿ ಅಳವಡಿಸಿಕೊಂಡಿದ್ದು ಇರುತ್ತದೆ.) : ದಿನಾಂಕ:05/10/2022 ರಂದು 09:00 ಎ.ಎಮ್.ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಸ್ವೀಕೃತವಾದ ಆರ್,ಟಿ.ಎ ಎಮ್.ಎಲ್.ಸಿ. ಮಾಹಿತಿ ಮೇರೆಗೆ ನಾನು ಆಸ್ಪತ್ರೆಗೆ ಭೇಟಿಕೊಟ್ಟಿದ್ದು, ಅಪಘಾತದಲ್ಲಿ ಗಾಯಗೊಂಡ ಮುದುಕಪ್ಪ ತಂದೆ ಮಾನಯ್ಯ ಟಣಕೇದಾರ, ವಯ:23 ವರ್ಷ, ಜಾತಿ:ಎಸ್.ಟಿ(ಬೇಡರು), ಉ||ವಿದ್ಯಾಥರ್ಿ,, ಸಾ||ಕನರ್ಾಳ, ತಾ||ಶೋರಾಪೂರ, ಜಿ||ಯಾದಗಿರಿ ಇವರು ಹೇಳಿಕೆ ನೀಡಿದ್ದೇನೆಂದರೆ, ನಿನ್ನೆ ದಿನಾಂಕ:04/10/2022 ರಂದು ನಾನು ಮತ್ತು ನನ್ನ ಗೆಳೆಯರಾದ 1)ಮಹೇಶ ತಂದೆ ಮಲ್ಲಯ್ಯ ಪೂಜಾರಿ, 2)ರಾಮಚಂದ್ರ ತಂದೆ ಯಂಕಣ್ಣ ಅಂಬಿಗೇರ್, 3)ಸಂದೀಪ ತಂದೆ ರಂಗಪ್ಪ ಚೌಡೇಶ್ವರಾಳ, 4)ಬಾಬು ತಂದೆ ಬಂದೇಸಾಬ ಪಿಂಜಾರ್, 5)ಭಾಗೇಶ ತಂದೆ ಯಲ್ಲಪ್ಪ ಬಿರಾದಾರ, 6)ಆಂಜನೇಯ ತಂದೆ ಕನಕಪ್ಪ ನಾಗೊಂಡ, 7)ಸಾಬಯ್ಯ ತಂದೆ ಹಣಮಂತ್ರಾಯ, 8)ದೇವಿಂದ್ರಪ್ಪ ತಂದೆ ತಿಮ್ಮಪ್ಪ, 9)ಭೀಮರಾಯ ತಂದೆ ರಂಗಪ್ಪ, 10)ತಿಮ್ಮಯ್ಯ ತಂದೆ ಹಣಮಂತ್ರಾಯ, 11)ಸಂತೋಷ ತಂದೆ ರಂಗಪ್ಪ, 12)ವಿಷ್ಣು ತಂದೆ ರಾಮಪ್ಪ, 13)ವೀರೇಶ ತಂದೆ ಭೀಮಪ್ಪ, 14)ರಾಜು ತಂದೆ ರಾಮಪ್ಪ, 15)ಸಂಜೀವಪ್ಪ ತಂದೆ ರಾಮಯ್ಯ, 16)ನಾಗರಾಜ ತಂದೆ ಬಸವರಾಜ, 17)ಆಂಜನೇಯ ತಂದೆ ಗೋಪಾಲ, 18)ಹಣಮಗೌಡ ತಂದೆ ರಾಮಯ್ಯ, 19)ಹಣಮಂತ್ರಾಯ ತಂದೆ ಗೋಪಾಲ ಹಾಗು ಇತರರು ಕೂಡಿಕೊಂಡು ನಮ್ಮೂರಿನ ಭೀಮಯ್ಯ ತಂದೆ ಹಣಮಪ್ಪ ಕಟ್ಟಿಗೋಳ ಈತನ ಬೊಲೆರೋ ಪಿಕಪ್ ವಾಹನ ನಂೆಎ-33 ಬಿ-3268 ರಲ್ಲಿ ನಮ್ಮೂರಿನಿಂದ ನಾಲವಾರ ಸಮೀಪದ ಅಣ್ಣಿಕೇರಿ ಗ್ರಾಮಕ್ಕೆ ಕಬಡ್ಡಿ ಟೂರ್ನಮೆಂಟ್ಗೆ ಹೋಗಿದ್ದೆವು. ನಿನ್ನೆ ರಾತ್ರಿ ಕಬಡ್ಡಿ ಟೂರ್ನಮೆಂಟ್ದಲ್ಲಿ ಭಾಗವಹಿಸಿ ಇಂದು ದಿನಾಂಕ:05/10/2022 ರಂದು ಬೆಳಗಿನ ಜಾವ 04:00 ಗಂಟೆ ಸುಮಾರಿಗೆ ಅಣ್ಣಿಕೇರಿಯಿಂದ ಯಾದಗಿರಿ ಮಾರ್ಗವಾಗಿ ಕನರ್ಾಳಕ್ಕೆ ಭೀಮಯ್ಯನ ವಾಹನದಲ್ಲಿ ಹೋಗುತ್ತಿದ್ದೆವು. ಮಾರ್ಗಮಧ್ಯ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಆರ್ಯಭಟ್ಟ ಶಾಲೆಯ ಸಮೀಪ ರಸ್ತೆಯ ಬದಿಯಲ್ಲಿರುವ ಹೊಟೆಲ್ ಹತ್ತಿರ ನಮ್ಮ ವಾಹನ ಚಾಲಕನಾದ ಭೀಮಯ್ಯನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಿದ್ದಾಗ ಡ್ರೈವರ್ ಸೀಟ್ ಪಕ್ಕದಲ್ಲಿ ಕುಳಿತಿದ್ದ ನಾನು ಆಂಜನೇಯ ಇಬ್ಬರು ವಾಹನವನ್ನು ನಿಧಾನವಾಗಿ ನಡೆಸು ಎಂದು ಭೀಮಯ್ಯನಿಗೆ ಹೇಳಿದರೂ ಕೇಳದೇ ಅದೇ ವೇಗದಲ್ಲಿ ವಾಹನವನ್ನು ನಡೆಸುತ್ತಾ ಹೋಗುವಾಗ ಬೆಳಗ್ಗೆ 05:00 ಗಂಟೆ ಸುಮಾರಿಗೆ ಒಬ್ಬ ಲಾರಿ ಚಾಲಕನು ತನ್ನ ವಾಹನವನ್ನು ಸಂಚಾರ ನಿಯಮಗಳನ್ನು ಪಾಲಿಸದೇ ಪಾಕರ್ಿಂಗ್ ಲೈಟ್ಗಳನ್ನು ಹಾಕದೇ ಮಾನವಜೀವಕ್ಕೆ ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆಯ ಮೇಲೆ ನಿಲ್ಲಿಸಿದ್ದ ವಾಹನವನ್ನು ನೋಡಿ ಒಮ್ಮೆಲೆ ಕಟ್ ಹೊಡೆದಿದ್ದರಿಂದ ನಾವು ಕುಳಿತ ವಾಹನಕ್ಕೆ ಎಡಗಡೆ ಬಡಿದು ಅಪಘಾತವಾಗಿದ್ದು, ಹಿಂದುಗಡೆ ಕುಳತಿದ್ದವರೆಲ್ಲರು ವಾಹನದಿಂದ ಸಿಡಿದು ರಸ್ತೆಯ ಮೇಲೆ ಬಿದ್ದರು. ಅಪಘಾತದಲ್ಲಿ ನನಗೆ ಎಡಕಾಲಿನ ಮೊಳಕಾಲಿನ ಮೇಲೆ ಭಾರಿ ಗುಪ್ತಗಾಯವಾಗಿದ್ದು, ಆಂಜನೇಯನಿಗೆ ಬಲಕಾಲಿನ ತೊಡೆಗೆ ಗುಪ್ತಗಾಯವಾಗಿರುತ್ತದೆ. ನಾವು ವಾಹನದಿಂದ ಕೆಳಗೆ ಇಳಿದು ನೋಡಲಾಗಿ ಬೊಲೆರೋ ಪಿಕಪ್ನ ಹಿಂದಿನ ಎಡಗಡೆ ಪಾಟಕ್ ಮುರಿದಿದ್ದು, ವಾಹನದಲ್ಲಿ ಹಿಂದುಗಡೆ ಕುಳಿತಿದ್ದವರೆಲ್ಲರು ರಸ್ತೆಯ ಮೇಲೆ ಬಿದ್ದಿದ್ದು, ಅವರಿಗೆಲ್ಲಾ ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದವು. ರಸ್ತೆಯ ಮೇಲೆ ನಿಲ್ಲಿಸಿದ್ದ ಅಶೋಕ ಲೇಲ್ಯಾಂಡ್ ಲಾರಿ ನಂ:ಜಿಜೆ-18 ಬಿಟಿ-6722 ಇದ್ದು, ಅದರ ಚಾಲಕನು ನಮ್ಮನ್ನು ನೋಡಿ ಅಲ್ಲಿಂದ ಓಡಿಹೋಗಿದ್ದು, ಆತನಿಗೆ ನೋಡಿದರೆ ಗುರುತಿಸುತ್ತೇವೆ. ಆಗ ಕೂಡಲೇ ನಾವು ಮತ್ತು ಅಪಘಾತವನ್ನು ನೋಡಿ ರಸ್ತೆಯ ಮೇಲೆ ಹೋಗುತ್ತಿದ್ದವರು ಕೂಡಿಕೊಂಡು ಗಾಯಗೊಂಡವರೆಲ್ಲರನ್ನು ಅಪಘಾತಕ್ಕೀಡಾದ ನಮ್ಮ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇವೆ. ಅಪಘಾತದ ವಿಷಯವನ್ನು ನಮ್ಮ ಸಂಬಂಧಿಕ ಶಿವರಾಜ ತಂದೆ ಹಣಮಂತ ಬಿರಾದಾರ ಇವರಿಗೆ ಫೋನ್ಮಾಡಿ ತಿಳಿಸಿದ್ದು, ನಂತರ ಬಂದು ಅವರು ವಿಚಾರಿಸಿರುತ್ತಾರೆ. ಅಪಘಾತದಲ್ಲಿ ಭಾರಿಗಾಯಗೊಂಡಿದ್ದ ಸಾಬಯ್ಯ, ದೇವಿಂದ್ರಪ್ಪ, ಭೀಮರಾಯ, ತಿಮ್ಮಯ್ಯ, ಸಂತೋಷ, ವಿಷ್ಣು, ವೀರೇಶ, ರಾಜು, ಸಂಜೀವಪ್ಪ, ನಾಗರಾಜ, ಆಂಜನೇಯ ತಂದೆ ಗೋಪಾಲ, ಹಣಮಗೌಡ, ಹಣಮಂತ್ರಾಯ ಇವರಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕಳುಹಿಸಿರುತ್ತಾರೆ. ಕಾರಣ ಅಪಘಾತಕ್ಕೆ ಕಾರಣವಾದ ಬೊಲೆರೋ ಪಿಕಪ್ ವಾಹನ ನಂೆಎ-33 ಬಿ-3268 ಮತ್ತು ಅಶೋಕ ಲೇಲ್ಯಾಂಡ್ ಲಾರಿ ನಂ:ಜಿಜೆ-18 ಬಿಟಿ-6722 ರ ಚಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆಯನ್ನು ಲ್ಯಾಪ್ಟಾಪ್ನಲ್ಲಿ ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಫಿಯರ್ಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸದರಿ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಹಣಮಂತ್ರಾಯ ತಂದೆ ಗೋಪಾಲ @ ಭೀಮಶೆಪ್ಪ ಬಡರಾಯರ ವಯ;20 ವರ್ಷ, ಉ;ವಿದ್ಯಾಥರ್ಿ, ಜಾ;ಬೇಡರು(ಎಸ್.ಟಿ), ಸಾ;ಕನರ್ಾಳ, ತಾ;ಸುರಪುರ ಈತನು ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಕೆಯಾಗಿದ್ದು, ದಿನಾಂಕ 05/10/2022 ರಿಂದ ಇಲ್ಲಿಯವರೆಗೆ ಉಪಚಾರ ಹೊಂದುತ್ತಾ ಇಂದು ದಿನಾಂಕ 11/10/2022 ರ ಬೆಳಿಗ್ಗೆ ಸಮಯ 04;44 ಎ.ಎಂ.ಕ್ಕೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಬಗ್ಗೆ ಪುರವಣಿ ಹೇಳಿಕೆ ಸಾರಾಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಗುರುಮಠಕಲ್ ಪೊಲೀಸ್ ಠಾಣೆ:-

ಗುನ್ನೆ ನಂ: 149/2022 ಕಲಂ: ಕಲಂ. 3 & 7 ಇ.ಸಿ.ಎಕ್ಟ-1955: ಇಂದು ದಿನಾಂಕಃ 11.10.2022 ರಂದು 11 ಎ.ಎಮ ಕ್ಕೆ ಫಿಯರ್ಾದಿ ಶ್ರೀಮತಿ ವನಜಾಕ್ಷಿ ಗಂಡ ಅಶೋಕ ಕುಮಾರ ಬೆಂಡಿಗೇರಿ, ವಯಾ|| 48 ವರ್ಷ, ಹುದ್ದೆ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗುರುಮಠಕಲ್, ಸಾ|| ಹುಸೇನಿ ಆಲಂ ಏರಿಯಾ, ಗಾಂಧಿಚೌಕ ಯಾದಗಿರ ಇವರು ಠಾಣೆಗೆ ಹಾಜರಾಗಿ ನೀಡಿದ ಫಿಯರ್ಾದಿ ಅಜರ್ಿಯ ಸಾರಾಂಶವೆನೆಂದರೆ, ದಿನಾಂಕಃ 28.09.2022 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಮೋತಿಲಾಲ ಪುಟಪಾಕ ತಾಂಡಾ (ದೂರವಾಣಿ ಸಂಖ್ಯೆ:9945263777) ಎಂಬುವವರು ಅಂಗನವಾಡಿ ಕೇಂದ್ರಗಳಿಗೆ ಹಂಚಿಕೆಯಾದ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂದು ದೂರವಾಣಿ ಮೂಲಕ ತಿಳಿಸಿ, ನಂತರ ಸಾಮಾಜಿಕ ಜಾಲ (ಘಚಿಣಂಠಿಠಿ) ಮೂಲಕ ವಿಡಿಯೋ ತುಣುಕನ್ನು ಕಳುಹಿಸುತ್ತಾರೆ, ಸದರಿ ವಿಡಿಯೋ ತುಣುಕನ್ನು ಪರಿಶೀಲಿಸಲಾಗಿ, ಕನರ್ಾಟಕ ಸರಕಾರ ದಿಂದ ಲೆಬಲ್ ಹೊಂದಿರುವ ಆಹಾರ ಪಾಕೇಟಗಳಿದ್ದು, ಅದರಲ್ಲಿ ಹಾಲಿನ ಪುಡಿ, ಶೇಂಗಾ, ಬೆಲ್ಲಾ ಮತ್ತು ಅಕ್ಕಿ ಆಹಾರ ಪದಾರ್ಥಗಳು ಟಂ ಟಂ ಆಟೋ ಸಂಖ್ಯೆ:ಖಿಖ06ಗಂ4171 ಮೂಲಕ ಸಾಗಿಸುತ್ತಿರುವುದು ಕಂಡುಬಂದಿರುತ್ತದೆ. ಪ್ರಯುಕ್ತ ಈ ಬಗ್ಗೆ ದಿನಾಂಕಃ29.09.2022 ರಂದು ಪುಟಪಾಕ ತಾಂಡಾ-1 ನೇ ಮತ್ತು 2 ನೇ ಅಂಗನವಾಡಿ ಕೇಂದ್ರಗಳಲ್ಲಿ ಪರಿಶೀಲಿಸಲಾಗಿ ಸದರಿ ಅಂಗನವಾಡಿ ಕೇಂದ್ರಗಳಲ್ಲಿ ಕೇಂದ್ರಕ್ಕೆ ಹಂಚಿಕೆಯಾದ ಪ್ರಮಾಣದಲ್ಲಿ ಆಹಾರ ಪದಾರ್ಥಗಳು ಇರುತ್ತವೆ ಹಾಗೂ ಈ ಬಗ್ಗೆ ಗುರುಮಠಕಲ್ ಶಿಶು ಅಭಿವೃದ್ಧಿ ಯೋಜನೆಯ 274-ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕತರ್ೆಯರು ಆಹಾರ ಸರಬರಾಜುದಾರರಿಂದ ಸರಿಯಾದ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ಪಡೆದಿರುವ ದೃಢಿಕರಣ ಸಲ್ಲಿಸಿರುತ್ತಾರೆ. ಪ್ರಯುಕ್ತ ಟಂ-ಟಂನಲ್ಲಿ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟಂ-ಟಂ ಆಟೋ ಸಂಖ್ಯೆ-ಖಿಖ06ಗಂ4171 ಚಾಲಕನ್ನು ತನಿಖೆಗೆ ಒಳಪಡಿಸಿ, ಸದರಿ ಅಕ್ರಮಕ್ಕೆ ಕಾರಣರಾದವರ ಮೇಲೆ ಸೂಕ್ತ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಕೋರಲಾಗಿದೆ ಅಂತಾ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಗುರುಮಠಕಲ್ ಠಾಣೆ ಗುನ್ನೆ ನಂಬರಃ 149/2022 ಕಲಂ: 3 & 7 ಇ.ಸಿ.ಎಕ್ಟ-1955 ಕ್ರಮ ಕೈಕೊಂಡೆನು

 

ಗುರುಮಠಕಲ್ ಪೊಲೀಸ್ ಠಾಣೆ:-

ಗುನ್ನೆ ನಂ: 150/2022 ಕಲಂ: 448, 323, 504, 506 ಸಂಗಡ 34 ಐಪಿಸಿ:ದಿನಾಂಕ 05.10.2022 ರಂದು ಮಧ್ಯಾಹ್ನ 2:30 ಗಂಟೆಯ ಸುಮರಿಗೆ ಪೀರ್ಯಾದಿಯು ತನ್ನ ಮನ್ನೆಯಲ್ಲಿದ್ದಾಗ ಆರೋಪಿತರು ಫೀರ್ಯಾದಿಯ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಆಕೆಯೊಂದಿಗೆ ಜಗಳ ಮಾಡಿ ಅವಾಚ್ಯ ಶಬ್ದಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ತನ್ನ ಸಂಬಂದಿಕರೊಂದಿಗೆ ವಿಚಾರ ಮಾಡಿದ ನಂತರ ತಡವಾಗಿ ಇಂದು ದಿನಾಂಕ 11.10.2022 ರಂದು ಠಾಣೆಗೆ ಬಂದು ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 150/2022 ಕಲಂ: 448, 323, 504, 506 ಸಂಗಡ 34 ಐಪಿಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

 

ಸೈದಾಪೂರ ಪೊಲೀಸ್ ಠಾಣೆ:-

ಗುನ್ನೆ ನಂ: 114/2022 ಕಲಂ 279, 337, 338 ಐಪಿಸಿ: ಇಂದು ದಿನಾಂಕ 11.10.2022 ರಂದು ಮಧ್ಯಾಹ್ನ 3.30 ಗಂಟೆಗೆ ಪ್ರವೀಣಕುಮಾರ ತಂದೆ ಬಸವರಾಜಪ್ಪ ಮಾಮಿಡಿ, ವ|| 26 ವರ್ಷ, ಜಾ|| ಕುರುವಿನಶೆಟ್ಟಿ ಲಿಂಗಾಯತ, ಉ|| ಸಾಫ್ಟವೇರ್ ಇಂಜಿನಿಯರ್, ಸಾ|| ಬಿಡಿಕಿಕಟ್ಟಾ ಗುರುಮಠಕಲ್ ತಾ||ಜಿ|| ಯಾದಗಿರಿ ಇವರು ಠಾಣೆಗೆ ಬಂದು ಲಿಖಿತ ದೂರು ನೀಡಿರುತ್ತಾರೆ. ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 10.10.2022 ರಂದು ತನ್ನ ಕಾರ್ ವಾಹನ ಸಂಖ್ಯೆ ಕೆಎ-33-ಎನ್-0250 ವಾಹನದಲ್ಲಿ ಫಿಯರ್ಾದಿ ಹಾಗೂ ಆತನ ಸ್ನೇಹಿತರು ರಾಯಚೂರುದಿಂದ ಗುರುಮಠಕಲ್ಗೆ ಹೋಗುವ ಕಾಲಕ್ಕೆ ಮಾರ್ಗಮಧ್ಯ ಕರಿಬೆಟ್ಟ ಸಮೀಪ ರಸ್ತೆಯ ಮೇಲೆ ಕಾರ್ ವಾಹನದ ಚಾಲಕನಾದ ಆಕಾಶ ಸ್ಥಾವರಮಠ ಈತನು ವಾಹನ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ರಾತ್ರಿ 9.50 ಗಂಟೆ ಸುಮಾರಿಗೆ ಅಪಘಾತಕ್ಕೀಡು ಮಾಡಿರುತ್ತಾನೆ. ರಸ್ತೆ ಅಪಘಾತ ದುರ್ಘಟನೆಯಲ್ಲಿ ಕಾರ್ ಚಾಲಕ ಮತ್ತು ಅಜಯಕುಮಾರನಿಗೆ ಗಾಯಗಳಾಗಿರುತ್ತವೆ ಅಂತಾ ವಗೈರೆ ಆಪಾದನೆ.

 

ಶಹಾಪೂರ ಪೊಲೀಸ್ ಠಾಣೆ:-

ಗುನ್ನೆ ನಂ: 172/2022 ಕಲಂ: 279, 337, 338 ಐ.ಪಿ.ಸಿ: ಇಂದು ದಿನಾಂಕ:11/10/2022 ರಂದು 7-30 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಅಬ್ದುಲ್ ವಾಹಿದ ತಂದೆ ಅಬ್ದುಲ ಖಾದರ ವಯಾ: 47 ಜಾತಿ: ಮುಸ್ಲಿಂ ಉ: ಚಾಲಕ ಸಾ: ಅಫ್ಜಲ್ಖಾನ ಮಜೀದ ಹತ್ತಿರ ದಿಗ್ಗಿ ಬೇಸ್ ಶಹಾಪೂರ ರವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ, ಹೀಗಿದ್ದು ದಿನಾಂಕ:24/09/2022 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನನ್ನ ಮಗನಾದ ಅಬ್ದುಲ್ ಸಮೀರ ತಂದೆ ಅಬ್ದುಲ ವಾಹಿದ ವಯಾ: 19 ಈತನು ತನ್ನ ಸಂಗಡ ಎಮ್.ಡಿ ಅಲ್ತಾಪ್ ಹುಸೇನ ತಂದೆ ಎಮ್.ಡಿ ಹಬೀಬ್ ಚೌದ್ರಿ ವಯಾ: 31 ಸಾ: ಚೌದ್ರಿ ಮೊಹಲ್ಲಾ ದಿಗ್ಗಿ ಬೇಸ್ ಶಹಾಪೂರ ಇತನೊಂದಿಗೆ ನಮ್ಮ ಬಜಾಜ ಪ್ಲಾಟಿನಮ್ ಮೋಟಾರ ಸೈಕಲ್ ನಂ: ಕೆ.ಎ.33/ಇ.ಬಿ-4378 ನೇದ್ದನ್ನು ತೆಗೆದುಕೊಂಡು ಖಾಸಗಿ ಕೆಲಸದ ನಿಮಿತ್ಯವಾಗಿ ಯಾದಗಿರಿಗೆ ಹೋದರು. ನಂತರ ರಾತ್ರಿ 10.30 ಗಂಟೆಗೆ ಮಗನಾದ ಅಬ್ದುಲ್ ಸಮೀರ ಈತನು ಪೋನ ಮಾಡಿ ತಿಳಿಸಿದ್ದೆನೆಂದರೆ, ನಾನು ಮತ್ತು ಎಮ್.ಡಿ ಅಲ್ತಾಪ್ ಹುಸೇನ ತಂದೆ ಹಮೀದ ಚೌದ್ರಿ ಇಬ್ಬರೂ ಕೂಡಿ ಇಂದು ರಾತ್ರಿ 8-30 ಗಂಟೆ ಸುಮಾರಿಗೆ ನಮ್ಮ ಮೋಟಾರ ಸೈಕಲ್ ಮೇಲೆ ಯಾದಗಿರಿಯಿಂದ ಶಹಾಪೂರಕ್ಕೆ ಬರುವ ಕುರಿತು ದೋರನಳ್ಳಿ ಸಮೀಪದ ಹಳ್ಳದ ಬ್ರಿಡ್ಜ ಮೇಲೆ ಮೋಟಾರ ಸೈಕಲ್ನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದ ಎಮ್.ಡಿ ಅಲ್ತಾಪ್ ತಂದೆ ಹಮೀದ ಚೌದ್ರಿ ಬರುವಾಗ, ಎದುರುಗಡೆಯಿಂದ ಒಂದು ಲಾರಿ ಬರುತ್ತಿದ್ದು, ಆ ಲಾರಿ ಪೋಕಸ್ ಲೈಟಿನ ಬೆಳಕು ಎಮ್.ಡಿ ಅಲ್ತಾಪ್ ತಂದೆ ಹಮೀದ ಚೌದ್ರಿ ಈತನ ಕಣ್ಣಿಗೆ ಬಿದ್ದಿದ್ದರಿಂದ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಮೋಟಾರ ಸೈಕಲ್ನ್ನು ರಸ್ತೆ ಪಕ್ಕದಲ್ಲಿದ್ದ ಹಳ್ಳದ ಬ್ರಿಡ್ಜಗೆ ಡಿಕ್ಕಿ ಪಡಿಸಿರುತ್ತಾನೆ. ಇಬ್ಬರೂ ರಸ್ತೆ ಮೇಲೆ ಮೋಟಾರ ಸೈಕಲ್ ಸಮೇತ ಬಿದ್ದಿದ್ದು, ನನಗೆ ಎಡಕಾಲು ಮೋಳಕಾಲಿಗೆ ಹಾಗೂ ಎಡಕಾಲು ತೋಡೆಗೆ ಭಾರಿ ಗುಪ್ತಗಾಯ ಆಗಿ ಮುರಿದಂತಾಗಿರುತ್ತದೆ, ಮೋಟಾರ ಸೈಕಲ್ ಚಲಾಯಿಸುತ್ತಿದ್ದ ಎಮ್.ಡಿ ಅಲ್ತಾಪ್ ಹುಸೇನ ತಂದೆ ಹಮೀದ ಚೌದ್ರಿ ವಯಾ: 31 ಈತನಿಗೆ ಎಡಕೈ ಮೋಳಕೈಗೆ ಎಡಕಾಲು ಮೋಳಕಾಲಿಗೆ, ತಲೆಗೆ ತರಚಿದ ರಕ್ತಗಾಯ ಆಗಿರುತ್ತದೆ. ನಂತರ ಇಬ್ಬರೂ ಕೂಡಿ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಆಗಿರುತ್ತೆವೆ ಅಂತಾ ತಿಳಿಸಿದ ಕೂಡಲೇ ನಾನು ತಮ್ಮನಾದ ಅಬ್ದುಲ್ ರಸೀದ ತಂದೆ ಅಬ್ದುಲ್ ಖಾದರ ವಯಾ: 38 ಇಬ್ಬರೂ ಕೂಡಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಮೇಲೆ ಹೇಳಿದಂತೆ ಇಬ್ಬರಿಗೆ ಗಾಯಗಳು ಆಗಿರುತ್ತವೆ. ಮೋಟಾರ ಸೈಕಲ್ ಚಾಲಕನಾದ ಎಮ್.ಡಿ ಅಲ್ತಾಪ್ ಹುಸೇನ ತಂದೆ ಎಮ್.ಡಿ ಹಬೀಬ್ ಚೌದ್ರಿ ಈತನಿಗೆ ಅಷ್ಟೇನು ಗಾಯಗಳು ಆಗಿರುವುದಿಲ್ಲ. ನಂತರ ನನ್ನ ಮಗನಿಗೆ ಹೆಚ್ಚಿನ ಉಪಚಾರ ಕುರಿತು ಮಹಾರಾಷ್ಟ್ರ ರಾಜ್ಯದ ಮಿರಾಜಿನ ಜಿ.ಎಸ್. ಕುಲಕಣರ್ಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ನನ್ನ ಮಗನಿಗೆ ಎಡಕಾಲು ಮೋಳಕಾಲಿಗೆ ಆಫರೇಷನ ಮಾಡಿಸಿರುತ್ತೇನೆ. ನನಗೆ ಕಾನೂನು ಅರಿವು ಇಲ್ಲದ ಕಾರಣ ಮತ್ತು ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿರುತ್ತೇನೆ. ನಮ್ಮ ಬಜಾಜ ಪ್ಲಾಟಿನಮ್ ಮೋಟಾರ ಸೈಕಲ್ ನಂ: ಕೆ.ಎ.33/ಇ.ಬಿ-4378 ನೇದ್ದರ ಚಾಲಕನಾದ ಎಮ್.ಡಿ ಅಲ್ತಾಪ್ ಹುಸೇನ ತಂದೆ ಎಮ್.ಡಿ ಹಬೀಬ್ ಚೌದ್ರಿ ಸಾ: ಚೌದ್ರಿ ಮೊಹಲ್ಲಾ ದಿಗ್ಗಿ ಬೇಸ್ ಶಹಾಪೂರ ಈತನು ಯಾದಗಿರಿದಿಂದ ದೋರನಳ್ಳಿ ಹಳ್ಳದ ಬ್ರಿಡ್ಜ ಮೇಲೆ ಬರುವಾಗ ಎದುರುಗಡೆಯಿಂದ ಬರುತ್ತಿರುವ ಲಾರಿಯ ಲೈಟಿನ ಬೆಳಕು ಮೋಟಾರ ಸೈಕಲ್ ಚಾಲಕನ ಕಣ್ಣಿಗೆ ಬಿದ್ದಿದ್ದರಿಂದ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಹಳ್ಳದ ಬ್ರಿಡ್ಜಗೆ ಡಿಕ್ಕಿ ಪಡಿಸಿ ಭಾರೀ ಮತ್ತು ಸಾದಾ ಗಾಯಗಳು ಮಾಡಿದ್ದು, ಸದರಿ ಮೋಟಾರ ಸೈಕಲ ಚಾಲಕನ ಮೇಲೆ ಕಾನೂನ ಕ್ರಮ ಜರುಗಸಲು ಮಾನ್ಯರವರಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 172/2022 ಕಲಂ: 279, 337, 338 ಐಪಿಸಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.

 

ಇತ್ತೀಚಿನ ನವೀಕರಣ​ : 12-10-2022 12:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080