ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-11-2021

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 151/2021 ಕಲಂ. 143,147,341,323,324,504, 506.ಸಂಗಡ 149.ಐ.ಪಿ.ಸಿ ಕಾಯ್ದೆ : ಇಂದು ದಿನಾಂಕ 11/11/2021 ರಂದು ಠಾಣೆಯಲ್ಲಿರುವಾಗ ಸಮಯ ಸಾಯಂಕಾಲ 5:00 ಗಂಟೆಗೆ ಯಾದಗಿರ ಜಿಲ್ಲಾ ಸಕರ್ಾರಿ ಆಸ್ಪತ್ರೆಯಿಂದ ಒಂದು ಎಮ್.ಎಲ್.ಸಿ. ವಸುಲಾಗಿದ್ದು ಇರುತ್ತದೆ,ಅದರ ಪ್ರಕಾರ ಆಸ್ಪತ್ರೆಗೆ ಹೊಗಿ ಅಲ್ಲಿ ಉಪಚಾರ ಪಡೆದುಕೊಳ್ಳುತ್ತಿದ್ದ ಶ್ರೀ ಸಾಬಯ್ಯ ತಂದೆ ಮಸ್ತೆಪ್ಪ ಬಳಿಚಕ್ರ ಸಾ:ವರ್ಕನಳ್ಳಿ ಇತನು ನೀಡಿದ ಒಂದು ಕಂಪ್ಯೂಟರ್ನಲ್ಲಿ ಟೈಪ್ ಮಾಡಿದ ಅಜರ್ಿಯನ್ನು ನೀಡಿದ್ದು ಅದನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 11/11/2021 ರಂದು ಮುಂಜಾನೆ 10-30 ರ ಸುಮಾರಿಗೆ ನಮ್ಮೂರಿನ ವಾಲ್ಮಿಕಿ ಚೌಕಿನಲ್ಲಿ ನಾನು ಮತ್ತು ನನ್ನ ತಮ್ಮನಾದ ಶರಣಪ್ಪ ತಂದೆ ಮಸ್ಥೆಪ್ಪ ಬಳಿಚಕ್ರ ಪ್ರಸ್ತುತ ವರ್ಕನಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿದ್ದು ಗ್ರಾಮದ ಜನರ ಸಮಸ್ಯೆಗಳ ಬಗ್ಗೆ ವಿಚಾರಿಸುವ ಸಮಯದಲ್ಲಿ ಅದೇ ಗ್ರಾಮದವರಾದ 1) ಅಂಜನೇಯ ತಂದೆ ಭೀಮರಾಯ ವಣಕುಣಿ,2) ಸಾಬಯ್ಯ ತಂದೆ ರಾಮಯ್ಯ ಕಲ್ಯಾಣಿ ,3) ಕಾಶಪ್ಪ ತಂದೆ ಹಣಮಂತ 4) ಸಾಬರೆಡ್ಡಿ ತಂದೆ ಭೀಮರಾಯ ವಣಕುಣಕಿ 5) ತಿಪ್ಪಣ್ಣ ತಂದೆ ನಾಗಪ್ಪ ಕಲ್ಯಾಣಿ 6) ಸಿದ್ದಲಿಂಗಪ್ಪ ತಂದೆ ಸಾಬಯ್ಯ ರಾಯನೊರ ಎಲ್ಲರೂ ಸಾ:ವರ್ಕನಳ್ಳಿ 7) ಗೋಪಾಲ ತಂದೆ ಲೊಕ್ಯಾ ರಾಠೋಡ ಸಾ: ವರ್ಕನಳ್ಳಿ ತಾಂಡ ಇವರೆಲ್ಲರೂ ಕೂಡಿಕೊಂಡು ಒಮ್ಮಿಂದೊಮ್ಮೆಲೆ ಬಂದು ನನ್ನ ತಮ್ಮನ ಮೇಲೆ ಎರಗಿ ಅವನಿಗೆ ಅವಾಚ್ಯ ಶಬ್ದಗಳಿಂದ ಬೈದು ಅಂಜನೇಯ ಈತನು ನನ್ನ ತಮ್ಮನಿಗೆ ಬಡಿಗೆಯಿಂದ ಹೊಡೆಯಲು ಬಂದಾಗ ಅಲ್ಲಿಯೇ ಇದ್ ನಾನು ಬಿಡಿಸಲು ಹೋದಾಗ ನನ್ನ ತಲೆಗೆ ಬಡಿದು ರಕ್ತಗಾಯವಾಗಿರುತ್ತದೆ.ಕಾಶಪ್ಪ ಮತ್ತು ಸಾಬಯ್ಯ ಇವರು ಎಲ್ಲರ ಕೈಯಲ್ಲಿ ಬಡಿಗೆ ಚಾಕು ಹಿಡಿದುಕೊಂಡು ಬಂದು ನಿನ್ನ ಇವತ್ತು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ.ಆ ಸಂದರ್ಭದಲ್ಲಿ ನ್ನ ತಲೆಯಿಂದ ರಕ್ತ ಸುರಿಯುವುದನ್ನು ನೋಡಿ ಓಡಿ ಹೋಗಿರುತ್ತಾರೆ ಸದರಿಯವರು ರಾಜಕೀಯ ಉದ್ದೇಶದಿಂದ ಈ ಕೃತ್ಯ ಮಾಡಿದ್ದು ಇರುತ್ತದೆ.ಈ ಮೊದಲು 2-3 ಬಾರಿ ಇದೇ ರೀತಿ ಮಾಡಿರುತ್ತಾರೆ.ನಾನು ಯಾವುದೆ ದೂರು ಸಲ್ಲಿಸಿರುವುದಿಲ್ಲ.ಆದರೆ ಈ ಬಾರಿ ನಮಗೆ ಜೀವ ಬೆದರಿಕೆ ಹಾಕಿ ಹೊಡೆದಿರುದರಿಂದ ನಮಗೆ ಜೀವ ಭಯ ಇರುತ್ತದೆ. ಆದ ಕಾರಣ ದಯಾಳುಗಳಾದ ತಾವುಗಳು ಸದರಿ ನನ್ನ ತಮ್ಮನ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವ ಬೇದರಿಕೆ ಹಾಕಿದ 1) ಅಂಜನೇಯ ತಂದೆ ಭೀಮರಾಯ ವಣಕುಣಿ,2) ಸಾಬಯ್ಯ ತಂದೆ ರಾಮಯ್ಯ ಕಲ್ಯಾಣಿ ,3) ಕಾಶಪ್ಪ ತಂದೆ ಹಣಮಂತ 4) ಸಾಬರೆಡ್ಡಿ ತಂದೆ ಭೀಮರಾಯ ವಣಕುಣಕಿ 5) ತಿಪ್ಪಣ್ಣ ತಂದೆ ನಾಗಪ್ಪ ಕಲ್ಯಾಣಿ 6) ಸಿದ್ದಲಿಂಗಪ್ಪ ತಂದೆ ಸಾಬಯ್ಯ ರಾಯನೊರ ಎಲ್ಲರೂ ಸಾ:ವರ್ಕನಳ್ಳಿ 7) ಗೋಪಾಲ ತಂದೆ ಲೊಕ್ಯಾ ರಾಠೋಡ ಸಾ: ವರ್ಕನಳ್ಳಿ ತಾಂಡ ಇವರ ವಿರುದ್ದ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಿ ನನಗೆ ನ್ಯಾಯ ಕೊಡಿಸಬೇಕೆಂದು ಬೇಡಿಕೊಳ್ಳುತ್ತೇನೆ.ನಂತರ ಸಾಯಂಕಾಲ5:30 ಗಂಟೆಗೆ ಮರಳಿ ಠಾಣೆಗೆ ಬಂದು ಅಜರ್ಿಯ ಸಾರಾಂಶದ ಮೇಲೆ ಠಾಣಾ ಗುನ್ನೆ ನಂ. 151/2021 ಕಲಂ. 143,147,341,323,324,504,506.ಸಂಗಡ 149.ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 152/2021 ಕಲಂ:143, 147, 341, 323, 504 ಸಂ. 149 ಐ.ಪಿ.ಸಿ. : ದಿನಾಂಕ 11/11/2021 ರಂದು ಸಾಯಂಕಾಲ 6:45-00 ಗಂಟೆ ಸುಮಾರಿಗೆ ಫಿರ್ಯಾಧಿದಾರನು ಠಾಣೆಗೆ ಬಂದು ಅಜರ್ಿ ನೀಡಿದ ಸಾರಾಂಶವೇನೆಂದರೆ ಈ ಮೂಲಕ ನಾನು ತಮ್ಮಲ್ಲಿ ನಾವುಗಳು 1) ಅಂಜಪ್ಪ ತಂದೆ ಭೀಮರಾಯ ಒಣಕುಣಿ 2) ರಾಜಪ್ಪ ತಂದೆ ಹಣಮಯ್ಯ ರಾಯಣ್ಣನೋರ್ 3) ಸಾಬಣ್ಣ ತಂದೆ ರಾಮಯ್ಯ ಕಲ್ಯಾಣಿ 4) ತಿಪ್ಪಯ್ಯ ತಂದೆ ನಾಗಪ್ಪ ಕಲ್ಯಾಣಿ ಸಾ|| ವರ್ಕನಳ್ಳಿ ತಾ|| ಜಿ|| ಯಾದಗಿರಿ ಇದ್ದು, ವಿನಂತಿ ಮಾಡುವದೆನೆಂದರೆ ವರ್ಕನಳ್ಳಿ ಗ್ರಾಮ ಪಂಚಾಯತಿನಲ್ಲಿ 14 & 15ನೇ ಹಣಕಾಸು, ಉದ್ಯೋಗ ಖಾತ್ರಿ ಯೋಜನೆಯಡಿ, ಕರವಸೂಲಾತಿ 2021-22 ನೇ ಸಾಲಿನಲ್ಲಿ ಆದ ಅವ್ಯವಹಾರದ ಬಗ್ಗೆ ಜಿಲ್ಲಾ ಪಂಚಾಯತಿ ಸಿ.ಇ.ಒ. ಇ.ಒ. ತಾ. ಪಂ. ರವರಿಗೆ ದೂರು ನೀಡಲಾಗಿತ್ತು, ಯಾವದೇ ಕ್ರಮ ಕೈಗೊಳ್ಳದೆ ಇದ್ದಾಗ ಇಂದು ದಿನಾಂಕ:- 11-11-2021 ರಂದು ಬೆಳ್ಳಿಗ್ಗೆ 10:30ಕ್ಕೆ ನ್ಯೂಸ್ 18 ವರದಿಗಾರರು ಗ್ರಾಮಕ್ಕೆ ಬಂದು ಕಾಮಗಾರಿಗಲ ಬಗ್ಗೆ ವಿಚಾರಣೆ ಮಾಡುವ ಸಮಯದಲ್ಲಿ, ಹಾಗೂ ವರ್ಕನಳ್ಳಿ ಗ್ರಾಮದ ಮೈಲಾಪುರ ಮುಖ್ಯ ರಸ್ತೆಯಲ್ಲಿ ಶಾಸಕರ ಅನುದಾನದಲ್ಲಿ ಕೊರೆದಿದ್ದ ಬೊರ್ವೆಲ್ ಖುಲ್ಲಾ ಇಟ್ಟಿದ್ದು, ಇದು ಊರಿನ ಮದ್ಯೆ ಇದ್ದು ಚಿಕ್ಕ ಮಕ್ಕಳಿಗೆ ಜೀವ ಅಪಾಯವಾಗುವ ಸಂಬವವಿದೆ. ವಿಡಿಯೊ ಮಾಡುವಾಗ 1) ಸಾಬಯ್ಯ ತಂದೆ ಮಸ್ತೆಪ್ಪ ಬಳಿಚಕ್ರ 2)ಶರಣಪ್ಪ ತಂದೆ ಮಸ್ತೆಪ್ಪ ಬಳಿಚಕ್ರ ಹಾಲಿ ಗ್ರಾ.ಪಂ. ಅದ್ಯಕ್ಷರು 3)ದೇವಪ್ಪ ತಂದೆ ಮಲ್ಲಯ್ಯ 4) ದೆವರಾಜ ತಂದೆ ಹಣಮಂತ 5)ಗಿರಿಮಲ್ಲಣ್ಣ ತಂದೆ ಹೊನ್ನಪ್ಪ ಗೌಡ ಗ್ರಾ.ಪಂ. ಪಿಡಿಒ ವರ್ಕನಳ್ಳಿ ಇವರುಗಳು ಮಾದ್ಯಮದವರಿಗೆ ವಿಡಿಯೋ ಮಾಡುವದನ್ನು ಅಡ್ಡಿಪಡಿಸಿ, ನಮ್ಮ ಮೇಲೆ ಹಲ್ಲೆ ಮಾಡಲು ಬಂದು, ಲೇ ಕಳ್ಳ ಸುಳೆ ಮಕ್ಕಳೆ ಏನು ಮಾಡಿ ಏನು ಮಾಡ್ತಿರಲ್ಲೆ ಎಂದು ನಮಗೆ ಹೊಡೆಯಲು ಬಂದರು, ತಮಗೆ ತಾವೇ ಕಲ್ಲು ತೆಗೆದುಕೊಂಡು ಅವರೇ ಸ್ವಯಂ ಗಾಯಗೊಂಡು ದುರುದ್ದೆಶದಿಂದ ಎಮ್.ಎಲ್.ಸಿ. ಮಾಡಿಸಿರುತ್ತಾರೆ, ನಾವು ಯಾರೂ ಕೂಡ ಅವರಿಗೆ ಮುಟ್ಟದೇ ಇದ್ದರೂ ಮತ್ತು ಅವರೇ ನಾವು ಇದ್ದ ಜಾಗಕ್ಕೆ ನಮಗೆ ಹೊಡೆದು, ಮಾದ್ಯಮದವರಿಗೆ ಬೈದು, ಅಡ್ಡಪಡಿಸಿದ್ದಲ್ಲದೇ ನಮ್ಮ ಮೇಲೆಯೇ ಹಲ್ಲೆ ಮಾಡಿ ಹೊಗಿರುತ್ತಾರೆ, ನಮ್ಮ ಮೇಲೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನಾವು ಕೂಡ ಆಸ್ಪತ್ರೇಯಲ್ಲಿ ಎಮ್.ಎಲ್.ಸಿ. ಮಾಡಿಸಿದ್ದು ,ಕಾರಣ ತಾವುಗಳು ದಯಮಾಡಿ ಈ ಬಗ್ಗೆ ತನಿಖೆ ನಡೆಸಿ, ಹಲ್ಲೆ ಮಾಡಿದವರ ಮತ್ತು ಮಾದ್ಯಮದವರಿಗೂ ಅಡ್ಡಿಪಡಿಸಿದ ಮೇಲ್ಕಂಡ 05 ಜನರ ಮೇಲೆ ಕಾನೂನು ಕ್ರಮ ಜರುಗಿಸಿ ಎಫ್.ಐ.ಆರ್. ಹಾಕಿ ಬಂದಿಸಿ ನಮಗೆ ನ್ಯಾಯ ಒದಗಿಸಿ ಕೊಡಬೆಕೆಂದು ಈ ಮೂಲಕ ವಿನಂತಿಸುತ್ತೆವೆ ಅಂತಾ ಅಜರ್ಿ ನಿಡಿದ ಸಾರಾಂಶದ ಮೇಲೆ ಠಾಣೆ ಗುನ್ನೆ ನಂ 152/2021 ಕಲಂ 143, 147, 341, 323, 504 ಸಂ. 149 ಐ.ಪಿ.ಸಿ. ನೆದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ, 166/2021 ಕಲಂ: 379 ಐ.ಪಿ.ಸಿ : ಇಂದು ದಿನಾಂಕ 11.11.2021 ರಂದು 06.30 ಪಿ ಎಮ್ ಕ್ಕೆ ಫಿಯಾದಿ ಅಜರ್ಿದಾರರಾದ ಶ್ರೀ ಇಜಾಜ್ ಹುಸೇನ್ ತಂದೆ ಖಾಜಾಹುಸೇನ್ ವಡಕೇರಿ ವಯಾ|| 33 ಜಾ|| ಮುಸ್ಲೀಂ ಉ|| ವ್ಯಾಪಾರ ಸಾ|| ಕೆಂಭಾವಿ ತಾ|| ಸುರಪುರ ತಮ್ಮಲ್ಲಿ ಬರೆದುಕೊಡುವ ಫಿಯರ್ಾದಿ ಅಜರ್ಿ ಏನಂದರೆ ನನ್ನದೊಂದು ಹಿರೋ ಕಂಪನಿಯ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ ಕೆಎ-33.ಡಬ್ಲೂ 6168 ಕಪ್ಪು ಬಣ್ಣದ ಮೋಟರ್ ಸೈಕಲ್ ಇದ್ದು ಸದರಿ ಮೋಟಾರ ಸೈಕಲ ಮಾಡಲ್ 2018 ನೇದ್ದು ಇದ್ದು ಸದರಿ ಮೋಟಾರ ಸೈಕಲನ್ನು ದಿನಾಲು ನಾನೇ ನಡೆಸಿಕೊಂಡು ಇರುತ್ತೇನೆ. ಅದನ್ನು ಪ್ರತಿದಿನ ರಾತ್ರಿ ವೇಳೆಯಲ್ಲಿ ಬೃಂದಾವನ ದಾಬಾದ ಪಕ್ಕದಲ್ಲಿ ನಮ್ಮ ಮನೆಯ ಮುಂದೆ ನಿಲ್ಲಿಸುತ್ತಿದ್ದೆನು. ಹೀಗಿದ್ದು ದಿನಾಂಕ 02.07.2021 ರಂದು ರಾತ್ರಿ 9 ಗಂಟೆಗೆ ಸದರಿ ಮೋಟರ ಸೈಕಲನ್ನು ಎಂದಿನಂತೆ ನಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದೆವು. ನಂತರ ಮರುದಿನ ದಿನಾಂಕ: 03.07.2021 ರಂದು ಬೆಳಿಗ್ಗೆ 6.00 ಗಂಟೆಗೆ ನಮ್ಮ ಮನೆಯ ಮುಂದೆ ಬಂದು ನೋಡಲಾಗಿ ನನ್ನ ಮೋಟರ್ ಸೈಕಲ ನಾನು ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ. ನಂತರ ನಾನು ಗಾಬರಿಯಾಗಿ ಕೆಂಭಾವಿ ಪಟ್ಟಣದ ತುಂಬೆಲ್ಲಾ ಕಡೆ ಹುಡುಕಾಡಲಾಗಿ ಸದರಿ ನನ್ನ ಮೋಟರ ಸೈಕಲ್ ಸಿಗಲಿಲ್ಲ. ನಂತರ ನಾನು ಕೆಂಭಾವಿ ಪಟ್ಟಣದ ಸುತ್ತಲಿನ ಗ್ರಾಮಗಳಲ್ಲಿ ನನ್ನ ಮೋಟರ್ ಸೈಕಲ್ ಹುಡುಕಾಡಲಾಗಿ ಎಲ್ಲಿಯೂ ಸಿಗಲಿಲ್ಲವಾದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ದಿನಾಂಕ 02.07.2021 ರಂದು ರಾತ್ರಿ 9.00 ಗಂಟೆಯಿಂದ ದಿ: 03.07.2021 ರ ಬೆಳಗಿನ ಜಾವ 6 ಗಂಟೆಯ ಮದ್ಯದ ಅವಧಿಯಲ್ಲಿ ನಮ್ಮ ಮನೆಯ ಮುಂದೆ ನಿಲ್ಲಿಸಿದ ನನ್ನ ಮೋಟರ ಸೈಕಲ ಅಂದಾಜು ಕಿಮ್ಮತ್ತು 45,000/- ರೂ. ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಸದರಿ ಕಳ್ಳರನ್ನು ಪತ್ತೆಮಾಡಿ ಕಾನೂನು ಪ್ರಕಾರ ಕ್ರಮಕೈಕೊಳ್ಳಬೇಕು ಅಂತ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಸದ ಮೇಲಿಂದ ಠಾಣಾ ಗುನ್ನೆ ನಂಬರ 166/2021 ಕಲಂ 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಯಾದಗಿರಿ ನಗರ ಪೊಲೀಸ ಠಾಣೆ
ಗುನ್ನೆ ನಂ: 119/2021 ಕಲಂ. 87 ಕೆ.ಪಿ ಎಕ್ಟ್ : ಇಂದು ದಿನಾಂಕ.11/11/2021 ರಂದು 3-40 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುಂದಿನ ಕ್ರಮಕ್ಕಾಗಿ ಒಂದು ಜ್ಞಾಪನಾ ಪತ್ರವನ್ನು ಒಪ್ಪಿಸಿದ್ದು ಸಾರಾಂಶವೆನಂದರೆ, ಇಂದು ದಿನಾಂಕ.11/11/2021 ರಂದು 1-20 ಪಿಎಮ್ ಕ್ಕೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಶಾಂತಿನರದ ಹೋರವಲಯದಲ್ಲಿ ಬರುವ ಮಾರವಾಡಿ ಬಾವಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ನಾನು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಸ್ಥಳಕೆ ಹೋಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 07 ಜನರನ್ನು 2-20 ಪಿಎಮ್ ಕ್ಕೆ ಹಿಡಿದು ವಿಚಾರಿಸಲು 1) ಆನಂದ ತಂದೆ ದೇವಿಂದ್ರಪ್ಪ ಮ್ಯಾಗೇರಿ ವ;26 ಜಾ; ಮಾದಿಗ ಉ; ಕೂಲಿಕೆಲಸ ಸಾ; ಲಾಡ್ಲಾಪೂರ ತಾ; ಚಿತ್ತಾಪೂರ ಹಾ.ವ; ಅಂಬೇಡ್ಕರ ನಗರ ಯಾದಗಿರಿ 2) ಮಂಜುನಾಥ ತಂದೆ ಬಸವರಾಜ ಬಾವುರ ವ;27 ಜಾ; ಕಬ್ಬಲಿಗ ಉ; ಕೂಲಿಕೆಲಸ ಸಾ; ಕೋಲಿವಾಡ ಯಾದಗಿರಿ 3) ವಿನೋದ ತಂದೆ ರಾಜಪ್ಪ ಒಡೆನೊರ ವ;58 ಜಾ; ಮಾದಿಗ ಉ; ಕೂಲಿಕೆಲಸ ಸಾ; ರಾಜೀವಗಾಂಧಿನಗರ ಯಾದಗಿರಿ 4) ಸದಾಶಿವ ತಂದೆ ಮಲ್ಲಿಕಾಜರ್ುನ ಮಂದರಾಳ ವ;27 ಜಾ; ಹೊಲೆಯ ಉ; ಕೂಲಿಕೆಲಸ ಸಾ; ಕೋಟಗಾರವಾಡ ಯಾದಗಿರಿ 5) ಅರುಣಕುಮಾರ ತಂದೆ ಬಸವರಾಜ ಶಂಕ್ರಪ್ಪನೊರ ವ;31 ಜಾ; ಬೇಡರು ಉ; ಕೂಲಿಕೆಲಸ ಸಾ; ಹತ್ತಿಕುಣಿ ತಾ; ಜಿ; ಯಾದಗಿರಿ 6) ದೇವಪ್ಪ ತಂದೆ ಬಸ್ಸಣ್ಣ ಕಡ್ಡಿ ವ;55 ಜಾ; ಕಬ್ಬಲಿಗ ಉ; ಒಕ್ಕಲುತನ ಸಾ; ಹನುಮಾನ ನಗರ ಯಾದಗಿರಿ 7) ಭೀಮಾಶಂಕರ ತಂದೆ ಆಂಜನೇಯ ಭೋವಿ ವ;28 ಜಾ; ಭೋವಿ ಉ; ಕೂಲಿಕೆಲಸ ಸಾ; ಬಂಡಿಗೆರಾ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವರಿಂದ ನಗದು ಹಣ 12050/-ರೂ. ಮತ್ತು 52 ಇಸ್ಪೀಟ್ ಎಲೆಗಳು ಜಪ್ತಿಪಡಿಸಿಕೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ 3-40 ಪಿಎಮ ಕ್ಕೆ ಬಂದು ಆರೋಪಿ ಮತ್ತು ಮುದ್ದೆಮಾಲು ಹಾಗೂ ಜಪ್ತಿಪಂಚನಾಮೆಯ ಸಮೇತ ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಅಂತಾ ಕೊಟ್ಟ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.119/2021 ಕಲಂ.87 ಕೆಪಿ ಆ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ವಡಗೇರಾ ಪೊಲೀಸ ಠಾಣೆ
ಗುನ್ನೆ ನಂ: 131/2021 ಕಲಂ: 379 ಐಪಿಸಿ : ದಿನಾಂಕ:11/11/2021 ರಂದು 5-45 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ನಾನು ಸಿದರಾಯ ಬಳೂಗರ್ಿ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ಇದ್ದು, ಸರಕಾರಿ ತಫರ್ೆಯಿಂದ ಸಲ್ಲಿಸುವ ದೂರುಯೇನಂದರೆ ಇಂದು ದಿನಾಂಕ:11/11/2021 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಅನಕಸೂಗೂರು ಸೀಮಾಂತರದ ಹಳ್ಳದಲ್ಲಿ ಯಾರೋ ಕೆಲವರು ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರಿಂದ ನಾನು ಮತ್ತು ನನ್ನ ಸಂಗಡ ಮಹೇಂದ್ರ ಪಿಸಿ 254 ವಡಗೇರಾ ಠಾಣೆ ಮತ್ತು ರಾಘವೇಂದ್ರರಡ್ಡಿ ಪಿಸಿ 255 ಯಾದಗಿರಿ ವೃತ್ತ ಕಛೇರಿ ರವರಿಗೆ ಕರೆದುಕೊಂಡು ಸರಕಾರಿ ಜೀಪ ನಂ. ಕೆಎ 33 ಜಿ 0240 ನೇದ್ದರಲ್ಲಿ ಹೊರಟು 4-30 ಪಿಎಮ್ ಸುಮಾರಿಗೆ ಅನಕಸೂಗೂರು ಸೀಮಾಂತರದ ಹಳ್ಳದ ದಂಡೆಯಲ್ಲಿ ಒಂದು ನೀಲಿ ಬಣ್ಣದ ಸ್ವರಾಜ್ ಟ್ರ್ಯಾಕ್ಟರನ್ನು ನಿಲ್ಲಿಸಿ, ಅದರಲ್ಲಿ ಹಳ್ಳದಿಂದ ಮರಳನ್ನು ತುಂಬುತ್ತಿದ್ದದ್ದನ್ನು ನೋಡಿ ನಾವು ಸ್ವಲ್ಪ ದೂರಲದಲ್ಲಿ ಜೀಪ್ ನಿಲ್ಲಿಸಿ, ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರದಲ್ಲಿ ಮರಳು ತುಂಬುವುದನ್ನು ಬಿಟ್ಟು ಓಡಿ ಹೋದನು. ಸದರಿ ಟ್ರ್ಯಾಕ್ಟರ ಚಾಲಕನಿಗೆ ನಾವು ನೋಡಿದಲ್ಲಿ ಗುರುತಿಸುತ್ತೇವೆ. ಸದರಿ ಟ್ರ್ಯಾಕ್ಟರ ನಂಬರ ನೋಡಲಾಗಿ ನಂಬರ್ ಇರಲಿಲ್ಲ. ಟ್ರ್ಯಾಲಿಗೆ ಕೂಡಾ ನಂಬರ ಇಲ್ಲ. ಟ್ರ್ಯಾಕ್ಟರ ಚಾಸ್ಸಿ ನಂ. ಘಂಖಿಓ31419004114 ಇರುತ್ತದೆ. ಸದರಿ ಟ್ರ್ಯಾಕ್ಟರದಲ್ಲಿ ಸುಮಾರು 8-10 ಪುಟ್ಟಿ ಮರಳು ತುಂಬಿದ್ದು, ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರೂ ಅಕ್ರಮವಾಗಿ ಮತ್ತು ಕಳ್ಳತನದಿಂದ ಸರಕಾರಕ್ಕೆ ಯಾವುದೇ ರಾಜಧನ ಪಾವತಿಸದೆ ಮರಳು ಸಾಗಾಣಿಕೆ ಮಾಡಲು ಪ್ರಯತ್ನಿಸುತ್ತಿದ್ದು, ಕಾರಣ ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು 5-45 ಪಿಎಮ್ ಕ್ಕೆ ಟ್ರ್ಯಾಕ್ಟರನ್ನು ಬೇರೊಬ್ಬ ಚಾಲಕನ ಸಹಾಯದಿಂದ ಚಲಾಯಿಸಿಕೊಂಡು ಠಾಣೆಗೆ ಬಂದು ನಿಮಗೆ ದೂರು ನೀಡುತ್ತಿದ್ದು, ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 131/2021 ಕಲಂ: 379, 511 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

 

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂಬರ 237/2021 ಕಲಂ 78 (3) ಕೆ.ಪಿ ಆಕ್ಟ್ . : ಇಂದು ದಿನಾಂಕ 11/11/2021 ರಂದು, ಮಧ್ಯಾಹ್ನ 14-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶ್ರೀನಿವಾಸ್ ವಿ. ಅಲ್ಲಾಪೂರ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿದರ ಸಾರಾಂಶವೆನೆಂದರೆ, ಇಂದು ದಿನಾಂಕ 11/11/2021 ರಂದು, ಮಧ್ಯಾಹ್ನ 12-00 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ, ಆರೋಪಿತನು ಶಹಾಪೂರ ಪಟ್ಟಣದ ಗಾಂಧಿ ಚೌಕ ಓಣಿಯ ಈಶ್ವರ ದೇವಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆದುಕೊಳ್ಳುತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯವರು ಸರಕಾರಿ ಜೀಪ್ ನಂ ಕೆಎ-33-ಜಿ-0316 ರಲ್ಲಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಧ್ಯಾಹ್ನ 13-00 ಗಂಟೆಗೆ ದಾಳಿ ಮಾಡಿ ಆರೋಪಿ ದೇವಿಂದ್ರಪ್ಪ ತಂದೆ ಅಮರಪ್ಪ ಹಡಪದ, ವಯಸ್ಸು 40 ವರ್ಷ ಜಾತಿ ಹಡಪದ, ಉಃ ಮಟಕಾ ನಂಬರ ಬರೆದುಕೊಳ್ಳುವುದು, ಸಾಃ ಶಳ್ಳಗಿ ಹಾಲಿವಸತಿ, ಮಣಿಗಿರಿ ಓಣಿ ಶಹಾಪೂರ ಈತನ್ನು ಹಿಡಿದು ಅವನ ಹತ್ತಿರವಿದ್ದ ನಗದು ಹಣ 1200-00 ರೂಪಾಯಿ. 2) ಒಂದು ಬಾಲ್ ಪೆನ್. ಅಂ.ಕಿ 00-00 3) ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಅಂ.ಕಿ 00-00. ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಆರೋಪಿತನ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿರ್ಯಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 237/2021 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 12-11-2021 12:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080