ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-11-2022
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 122/2022 ಕಲಂ 279, 337, 338 ಐಪಿಸಿ: ಇಂದು ದಿನಾಂಕ 11.11.2022 ರಂದು ಬೆಳಿಗ್ಗೆ 10.00 ಗಂಟೆಗೆ ಸಾಗರ ತಂದೆ ಆಂಜನೇಯ ಕಾವಲಿ ವಯ|| 23ವರ್ಷ, ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಸೈದಾಪೂರ ತಾ||ಜಿ|| ಯಾದಗಿರಿ ಇವರು ಠಾಣೆಗೆ ಬಂದು ಹಾಜರಪಡಿಸಿದ ಗಣಕೀಕೃತ ದೂರು ಅಜರ್ಿ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 09.11.2022 ರಂದು ಸಾಯಂಕಾಲ ವೇಳೆಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ಭೀಮಣ್ಣ ತಂದೆ ಬಸವರಾಜ ಇವರು ನನಗೆ ಫೋನ ಮಾಡಿ ಸೈದಾಪೂರ ಐ.ಬಿ ಹತ್ತಿರ ನನ್ನ ತಂದೆಗೆ ಮೋಟಾರ ಸೈಕಲ ಡಿಕ್ಕಿಯಾಗಿ ಆಕ್ಸಿಡೆಂಟ್ ಆದ ಬಗ್ಗೆ ಸುದ್ದಿ ತಿಳಿಸಿದ್ದು, ಕೂಡಲೇ ಮನೆಯವರೆಲ್ಲರೂ ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ಮೋಟಾರ ಸೈಕಲ ಡಿಕ್ಕಿಯಾಗಿದ್ದರಿಂದ ನನ್ನ ತಂದೆಗೆ ಎಡಗಾಲಿನಮೊಳಕಾಳಿಗೆ ಭಾರಿ ರಕ್ತಗಾಯವಾಗಿದ್ದು, ಎಡಕಾಲಿನ ಪಾದಕ್ಕೆ ರಕ್ತಗಾಯ ಮತ್ತು ಬಲಗಾಲಿನ ಬೆರಳುಗಳಿಗೆ ತೆರಚಿದ ರಕ್ತಗಾಯವಾಗಿದ್ದು ಕಂಡುಬಂದಿದ್ದು, ಸದರಿ ಅಪಘಾತ ಹೇಗಾಯಿತು ಅಂತ ನನ್ನ ತಂದೆಗೆ ವಿಚಾರಿಸಲಾಗಿ ನಮ್ಮೂರಿನ ಪವನಕುಮಾರ ತಂದೆ ಹಣಮಂತ ಇವನು ಸಾಯಂಕಾಲ 6-10 ಗಂಟೆ ಸುಮಾರಿಗೆ ತನ್ನ ಮೋಟಾರ ಸೈಕಲ ನಂಬರ ಕೆ.ಎ-33, ಎಕ್ಷ-0856 ನೇದ್ದನ್ನು ಅಂಬಿಗರ ಚೌಡಯ್ಯ ವೃತ್ತದ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಐ.ಬಿ ಎದುರು ಡಾಂಬರ ರೋಡಿನ ಮೇಲೆ ಮನೆ ಕಡೆಗೆ ಹೊರಟಿದ್ದ ತನಗೆ ಜೋರಾಗಿ ಡಿಕ್ಕಿಪಡಿಸಿರುತ್ತಾನೆ ಅಂತ ತಿಳಿಸಿದನು. ನಂತರ ನಾನು ಮತ್ತು ನಮ್ಮ ಮನೆಯವರೆಲ್ಲರೂ ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಸೈದಾಪೂರಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ಕೂಡಲೇ ರಾಯಚೂರಗೆ ಕರೆದುಕೊಂಡು ಹೋಗಿ ಬೆಟ್ಟದೂರು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ಕಾರಣ ನನ್ನ ತಂದೆಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಮಾಡಿಸಿದ್ದರಿಂದ ಇಂದು ತಡವಾಗಿ ಠಾಣೆಗೆ ಬಂದಿದ್ದು, ಸೈದಾಪೂರ ಐಬಿ ಎದುರು ಅತೀವೇಗ ಮತ್ತು ಅಲಕ್ಷತನದಿಂದ ಮೋಟಾರ ಸೈಕಲ ಓಡಿಸಿಕೊಂಡು ಬಂದು ನಡೆದುಕೊಂಡು ಹೊರಟಿದ್ದ ನನ್ನ ತಂದೆಗೆ ಡಿಕ್ಕಿಪಡಿಸಿ ಅಪಘಾತಪಡಿಸಿದ ಮೋಟಾರ ಸೈಕಲ ಸವಾರನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ. ಅಂತಾ ಆಪಾದನೆ.
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 162/2022 ಕಲಂ: 143, 147, 148, 448, 323, 324, 504, 506ಸಂಗಡ 149 ಐಪಿಸಿ: ಈ ಮೊದಲು ಕಳೆದ 3 ವರ್ಷಗಳ ಹಿಂದೆ ಫಿರ್ಯಾದಿಯ ಗಂಡನಾದ ಮಲ್ಲಪ್ಪ ಗಂಗಣೋರ ಎಂಬಾತನು ಆರೋಪಿತನಾದ ಶರಣಪ್ಪ ಗಾಡೆ ಎಂಬಾತನಿಂದ 40,000/- ರೂ ಗಳನ್ನು ಪಡೆದುಕೊಂಡಿದ್ದು ಆ ಹಣವನ್ನು 6 ತಿಂಗಳಲ್ಲಿ ಕೊಡುವುದಾಗಿ ಹೇಳಿದರು ಸಹ ಕೇಳದೇ ಆರೋಪತರೆಲ್ಲಾರು ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು, ಫಿರ್ಯಾದಿಯ ಮನೆಗೆ ಹೋಗಿ ಅವಾಚ್ಯ ಶಬ್ದಗಳಿಂದ ಬೈದು ಅವರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಜಗಳ ತೆಗೆದು ಮನೆಯೊಳಗಿನಿಂದ ಹೊರಗಡೆ ಕರೆದುಕೊಂಡು ಬಂದು ಕೈಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫೀರ್ಯಾದಿಯು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 162/2022 ಕಲಂ: 143, 147, 148, 448, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 163/2022 ಕಲಂ: 143,147,323,504,506 ಸಂ.149 ಐಪಿಸಿ:ನಾವು ಕೊಟ್ಟ ಕೈಗಡ ಹಣ ನಮಗೆ ವಾಪಸ್ಸು ಕೊಡರಿ ಅಂತಾ ಕೇಳಿದ್ದಕ್ಕೆ ಈ ಪ್ರಕರಣದಲ್ಲಿ ಆರೋಪಿತರೆಲ್ಲರೂ ಕೂಡಿ ಒಂದು ಗುಂಪುವನ್ನು ಕಟ್ಟಿಕೊಂಡು ಬಂದು ಫಿಯರ್ಾದಿ ಜೊತೆ ಜಗಳ ತೆಗೆದು ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುವ ಬಗ್ಗೆ ದೂರು.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 84/2022 ಕಲಂ: 143, 147, 323, 324, 355, 341, 504, 506 ಸಂ.149 ಐಪಿಸಿ:ದಿನಾಂಕ:10/11/2022 ರಂದು ಬೆಳಿಗ್ಗೆ 10.30 ಗಂಟೆಗೆ ಹೆಬ್ಬಾಳ(ಕೆ) ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಮ್.ಸಿ ಅದ್ಯಕ್ಷ ಚುನಾವನೆ ಇದ್ದುದರಿಂದು ಫಿರ್ಯಾದಿಯು ಅಲ್ಲಿಗೆ ಹೋಗಿ ಪಾಲಕರು ದೂರದ ಬೆಂಗಳೂರದಲ್ಲಿದ್ದು, ಅವರು ಬಂದ ನಂತರ ಚುನಾವಣೆ ಮಾಡಿರಿ ಅಂತಾ ಚುನಾವಣೆ ಮುಂದೂಡಿಸಿದ್ದು, ದಿನಾಂಕ:14/11/2022 ರಂದು ಚುನಾವಣೆ ದಿನಾಂಕ ನಿಗಧಿಪಡಿಸಿ ಚುನಾವಣೆ ರದ್ದುಪಡಿಸಿದ್ದು, ನಂತರ ಫಿರ್ಯಾದಿಯು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ಹೆಬ್ಬಾಳ(ಕೆ) ಗ್ರಾಮದ ಪಾದಗಟ್ಟೆಯ ಹತ್ತಿರ ಕುಳಿತಾಗ ಆರೋಪಿತರೆಲ್ಲರೂ ಕೂಡಿ ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿಯ ಹತ್ತಿರ ಹೋಗಿ ಅವನಿಗೆ ತಡೆದು ಸ್ಕುಟಯಿಂದ ಗುದ್ದಿಸಿ, ಕೈಯಿಂದ, ಕಲ್ಲಿನಿಂದ, ಚಪ್ಪಲಿಯಿಂದ ರಾಡಿನಿಂದ ಹೊಡೆದು ಗುಪ್ತಗಾಯಪಡಿಸಿದ್ದು, & ರಕ್ತಗಾಯಪಡಿಸಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕುತ್ತಾ ಆರೋಪಿತರು ಹೋಗಿದ್ದು, ನಂತರ ಆರೋಪಿತರ ಮನೆಯ ಹತ್ತಿರ ರಸ್ತೆಯ ಮೇಲೆ ಫಿರ್ಯಾದಿಯ ಅಣ್ಣ & ಅವರ ಮಾವ ಕೂಡಿ ಹೊರಟಾಗ, ಅವರೊಂದಿಗೂ ಸಹ ಆರೋಪಿತರು ಜಗಳ ತೆಗೆದು ಸ್ಕೂಟರನಿಂದ ಗುದ್ದಿ ಕೈಯಿಂದ, ಕಟ್ಟಿಗೆಯಿಂದ, ಚಪ್ಪಲಿಯಿಂದ & ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿದ್ದು, ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.