Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-12-2021

ಯಾದಗಿರಿ ನಗರ ಪೊಲೀಸ ಠಾಣೆ
ಗುನ್ನೆ ನಂ:128/2021 ಕಲಂ: 143, 147, 323, 324, 504, 506 ಸಂ.149 ಐಪಿಸಿ : ಇಂದು ದಿನಾಂಕ; 11/12/2021 ರಂದು 9-30 ಎಎಮ್ ಕ್ಕೆ ಜಿಜಿಹೆಚ್ ಯಾದಗಿರಿಯಿಂದ ಗಾಯಾಳು ಕಿರಣ ಇವಳ ಕರೆಯ ಮೇರೆಗೆ 9-45 ಎಎಮ್ ಕ್ಕೆ ಆಸ್ಪತ್ರೆಗೆ ಭೆಟಿ ನೀಡಿ ಉಪಚಾರ ಹೊಂದುತ್ತಿದ್ದ ಗಾಯಾಳು ಪಿರ್ಯಾಧಿ ಕಿರಣ ತಂದೆ ಮಲ್ಲಪ್ಪ ಕೋಳಿ ಸಾ: ಹೊಸಳ್ಳಿ ಕ್ರಾಸ ಯಾದಗಿರಿ ಇವಳ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಾನು ಈ ಮೇಲಿನ ವಿಳಾಸದವಳಿದ್ದು ಮಂಗಳಮುಖಿ ಆಗಿದ್ದರಿಂದ ಯಾದಗಿರಿ ನಗರದಲ್ಲಿ ಹೊಟ್ಟೆಪಾಡಿಗಾಗಿ ನಾನು ಅಲ್ಲಲ್ಲಿ ಭಿಕ್ಷಾಟನೆ ಮಾಡಿಕೊಂಡು ಯಾದಗಿರಿಯ ಹೊಸಳ್ಳಿ ಕ್ರಾಸದ ಪಿಲ್ಟರಬೆಡ್ ಹಿಂದುಗಡೆ ಬಾಡಿಗೆ ಮನೆ ಮಾಡಿಕೊಂಡು ಇರುತ್ತೇನೆ. ಹಿಗೀದ್ದು ನಿನ್ನೆ ದಿನಾಂಕ; 10/12/2021 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಯಾದಗಿರಿ ನಗರದ ಮುದ್ನಾಳ ಪೆಟ್ರೋಲ ಬಂಕ್ ಹತ್ತಿರ ನಾನು ಭಿಕ್ಷಾಟನೆ ಮಾಡಿಕೊಂಡು ತಿರುಗಾಡುತ್ತಿರುವಾಗ ನಮ್ಮ ಜನಾಂಗದ ಮಾಯಾ ಇವರ ಕಡೆಯವರು ನನ್ನೊಂದಿಗೆ ಬಾಯಿ ತಕರಾರು ಮಾಡಿದ್ದು ಇರುತ್ತದೆ. ನಂತರ ನಾನು ನಿನ್ನೆ ರಾತ್ರಿ 8-30 ಗಂಟೆ ಸುಮಾರಿಗೆ ಮನೆಯಲ್ಲಿರುವಾಗ ಮಾಯಾ ಮತ್ತು ಅವರ ಕಡೆಯವರಾದ ಚಿನ್ನು, ಪ್ರಿಯಾ, ಚಿನ್ನು ರಾಠೋಡ, ಮಲ್ಲು, ಲಲ್ಲಿ, ದೀಪಾ, ಹಸೀನಾ ಇವರೆಲ್ಲರೂ ಗುಂಪು ಕಟ್ಟಿಕೊಂಡು ಬಂದವರೇ ಮನೆಯ ಮುಂದೆ ಚಿರಾಡುತ್ತಾ ಲೇ ಕಿರಣ ಕೆಳಗೆ ಬಾರಲೇ ಅಂತಾ ಬೈದಾಡುತ್ತಾ ಮನೆಯ ಮುಮದೆ ಬಂದು ಅವರೆಲ್ಲೆರೂ ನಾವು ಯಾದಗಿರಿಯಲ್ಲಿ ಯಾವಾಗ ಬೇಕಾದರೂ ಭಿಕ್ಷಾಟನೆ ಮಾಡುತ್ತೇವೆ ನೀನೇನು ಕೇಳುತ್ತೀ ಅಂತಾ ಅಂದವರೇ ಮಾಯಾ ಇವಳು ನನ್ನ ಮಮರ್ಾಂಗಕ್ಕೆ ಜಾಡಿಸಿ ಕಾಲಿನಿಂದ ಒದ್ದಳು. ಚಿನ್ನು ಇವಳು ಕಲ್ಲಿನಿಂದ ನನ್ನ ಹಣೆಗೆ ಹೊಡೆದು ರಕ್ತಗಾಯ ಮಾಡಿದಳು. ಪ್ರೀಯಾ ಇವಳು ಬೆನ್ನಿಗೆ, ಎಡರಟ್ಟೆಗೆ ಕೈಯಿಂದ ಚುರಿದಳು. ಚಿನ್ನು ರಾಠೋಡ ಇವಳು ಕಾಲಿನಿಂದ ಜಾಡಿಸಿ ಹೊಟ್ಟೆಗೆ ಒದ್ದಿರುತ್ತಾಳೆ. ಆಗ ನಾನು ಚಿರಾಡುತ್ತಿರುವಾಗ ಜಗಳದ ಸಪ್ಪಳ ಕೇಳಿ ಸುನೀತಾ ತಂದೆ ಭೀಮರಾಯ ಮಡಿವಾಳ ಇವಳು ಜಗಳ ಬಿಡಿಸಲು ಬಂದಾಗ ಮಲ್ಲು, ಲಲ್ಲಿ, ದೀಪಾ, ಹಸೀನಾ ಇವರು ಸುನೀತಾಳಿಗೆ ಲೇ ಚಿನಾಲಿ ನಿನೇನು ಜಗಳ ಬಿಡಿಸಲು ಬರುತ್ತೀಯಾ ಅಂತಾ ಬೈದು ಕೈಯಿಂದ ತಳ್ಳಿ, ನನಗೆ ನೆಲ್ಲಕ್ಕೆ ಹಾಕಿ ಇವತ್ತು ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಕೈಯಿಂದ ಹೊಡೆದು ಕಾಲಿನಿಂದ ಮನಬಂದಂತೆ ಒದ್ದರು. ಆಗ ಜಗಳವನ್ನು ಸುನೀತಾ ಮತ್ತು ಮನೆಯ ಮಾಲೀಕಳಾದ ಗಂಗಮ್ಮ ಇವರು ಜಗಳ ಬಿಡಿಸಿದ್ದು ಇರುತ್ತದೆ. ನಂತರ ನನಗೆ ಉಪಚಾರ ಕುರಿತು ಸುನೀತಾ ಇವಳು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಆಗ ವಿಷಯ ತಿಳಿದು ಮಲ್ಲಮ್ಮ ತಂದೆ ಹುಸನಪ್ಪ ಹೊಸ್ಮನಿ, ಗೀತಾ ತಂದೆ ಮಲ್ಲಪ್ಪ ನಾಯ್ಕೋಡಿ ರವರು ಆಸ್ಪತ್ರೆಗೆ ಬಂದಾಗ ಈ ಮೇಲಿನಂತೆ ವಿಷಯ ತಿಳಿಸಿದೆನು. ನಂತರ ಪೊಲೀಸರು ಬಂದು ನನಗೆ ವಿಚಾರಿಸಿದ್ದು ಆಗ ನಾನು ಈಗ ಸದ್ಯ ನನ್ನದು ಯಾವುದೇ ದೂರು, ಪಿರ್ಯಾಧಿ ಇರುವುದಿಲ್ಲ ನಮ್ಮ ಸಮಾಜದ ಹಿರಿಯರಿಗೆ ವಿಷಯ ತಿಳಿಸಿ ಅವರೊಂದಿಗೆ ಮಾತಾಡಿಕೊಂಡು ನಂತರ ದೂರು ಸಲ್ಲಿಸುತ್ತೇನೆ ಅಂತಾ ತಿಳಿಸಿದ್ದೆನು. ಈಗ ಹಿರಿಯರೊಂದಿಗೆ ವಿಚಾರಿಸಿ ತಮಗೆ ಆಸ್ಪತ್ರೆಗೆ ಬರಮಾಡಿಕೊಂಡು ಹೇಳಿಕೆ ನೀಡಿದ್ದು ನನಗೆ ಮೈಕೈ ನೋವು ಆಗಿದ್ದರಿಂದ ಸಹಿ ಮಾಡಲು ಆಗದೇ ಇದ್ದುದರಿಂದ ಹೆಬ್ಬರಳಿನ ಸಹಿ ಮಾಡಿರುತ್ತೇನೆ. ನನಗೆ ಹೊಡೆ ಬಡೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು 11-00 ಎಎಮ್ ಕ್ಕೆ ಮರಳಿ ಠಾಣೆಗೆ ಬಂದು ಪಿರ್ಯಾಧಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.128/2021 ಕಲಂ.143, 147, 323, 324, 504, 506 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ 129/2021 ಕಲಂ 457, 380 ಐಪಿಸಿ : ಯರ್ಾಧಿ ಸಾರಾಂಶವೇನೆಂದರೆ, ನಾನು ಯಾದಗಿರಿ ನಗರದ ಲೋಕಾಯುಕ್ತ ಆಫೀಸ್ ಹತ್ತಿರ ಅಮರೇಶ್ವರ ಪಟರ್ಿಲೈಜರ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಇರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ 10/12/2021 ರಂದು ಕೂಡ ಅಂಗಡಿ ತೆಗೆದು ವ್ಯಾಪಾರ ಮಾಡಿಕೊಂಡು ನಾನು ಹಾಗೂ ನಮ್ಮಲ್ಲಿ ಕೆಲಸ ಮಾಡುವ ಮಲ್ಲಿಕಾಜರ್ುನ ತಂದೆ ಚನ್ನಪ್ಪ ಗುಲದಿನ್ನಿ ಇಬ್ಬರು ಕೂಡಿ ನಿನ್ನೆ ರಾತ್ರಿ 08-00 ಗಂಟೆಗೆ ಅಂಗಡಿಯ ಶೆಟ್ಟರ ಕೀಲಿ ಹಾಕಿಕೊಂಡು ಬಂದಿರುತ್ತೇವೆ. ನಂತರ ಪ್ರತಿ ನಿತ್ಯದಂತೆ ಇಂದು ದಿನಾಂಕ 11/12/2021 ರಂದು ಬೆಳಿಗ್ಗೆ 08-00 ಗಂಟೆಗೆ ನಾನು ಹಾಗೂ ಮಲ್ಲಿಕಾಜರ್ುನ ತಂದೆ ಚನ್ನಪ್ಪ ಗುಲದಿನ್ನಿ ಇಬ್ಬರು ಕೂಡಿ ನಮ್ಮ ಅಂಗಡಿ ತೆಗೆಯಲು ಹೋದಾಗ ನಮ್ಮ ಅಂಗಡಿ ಶೆಟ್ಟರ ಮಧ್ಯಭಾಗದಲ್ಲಿ ಬೆಂಡ್ ಆಗಿದ್ದು ಕಂಡು ಬಂತು. ನಾವು ಗಾಬರಿಯಾಗಿ ಲಾಕ್ ತೆಗೆದು ಒಳಗೆ ಹೋಗಿ ನೋಡಿದಾಗ, ಕೌಂಟರದ ಗಲ್ಲೆ ಮುರಿದು ಅದರಲ್ಲಿ ಇದ್ದ ಸುಮಾರು 17,900/- ರೂ|| ಕಳ್ಳತನವಾಗಿದ್ದವು. ಕಾರಣ ದಿನಾಂಕ 10/12/2021 ರಂದು ರಾತ್ರಿ 08-00 ಗಂಟೆಯಿಂದ ಇಂದು ದಿನಾಂಕ 11/12/2021 ರಂದು ಬೆಳಿಗ್ಗೆ 08-00 ಗಂಟೆಯ ಅವಧಿಯಲ್ಲಿ ಲಾಕ್ ಮಾಡಿಕೊಂಡು ಬಂದ ನಮ್ಮ ಅಮರೇಶ್ವರ ಪಟರ್ಿಲೈಜರ್ ಅಂಗಡಿ ಶೆಟ್ಟರ ಬೆಂಡ್ ಮಾಡಿ, ಕೌಂಟರದ ಗಲ್ಲೆ ಮುರಿದು ಅದರಲ್ಲಿ ಇದ್ದ ನಗದು ಹಣ 17,900/-ರೂಪಾಯಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮನೆಯಲ್ಲಿ ವಿಚಾರಣೆ ಮಾಡಿ ಈಗ ಠಾಣೆಗೆ ಬಂದು ದೂರು ನೀಡುತ್ತಿದ್ದು, ನಮ್ಮ ಅಂಗಡಿ ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 129/2021 ಕಲಂ 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಯಾದಗರಿ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ : 161/2021 ಕಲಂ: ಕಲಂ 131 ಪ್ರಜಾ ಪ್ರತಿನಿಧಿ ಕಾಯ್ದೆ 1951&1989. : ಮಾನ್ಯರವರಲ್ಲಿ ಮೇಲ್ಕಂಡ ವಿಷಯದಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ ಇಂದು ದಿನಾಂಕ 11.12.2021 ರಂದು ಮದ್ಯಾಹ್ನ 12-30 ಗಂಟೆಗೆ ಶ್ರೀ ಹಣಮಂತ ಕೆ ಮತಗಟ್ಟೆ ಅಧಿಕಾರಿಗಳು ಇವರು ಠಾಣೆಗೆ ಬಂದು ಲಿಖಿತ ಅಜರ್ಿ ಹಾಜರಪಡಿಸಿದ್ದೆನೆಂದರೆ, ರಾಮಸಮುದ್ರ ಗ್ರಾಮ ಪಂಚಾಯತಿ ಮತಗಟ್ಟೆ ಸಂಖ್ಯೆ-294 ರಲ್ಲಿ ಕಲಬುರಗಿ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆ-2021 ರ ಹಿನ್ನೇಲೆಯಲ್ಲಿ ದಿನಾಂಕ 10.12.2021 ರಂದು ಯಾದಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮತದಾನ ನಡೆಯುವ ಕೇಂದ್ರಗಳ ಸುತ್ತಮುತ್ತಲು ಯಾವುದೇ ಅಹಿತಕರ ಘಟನೆಗಳು ನಡೆದಯಂತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ 200 ಮೀಟರ ಸುತ್ತವರೆದ ಪ್ರದೇಶ ವ್ಯಾಪ್ತಿಯಲ್ಲಿ ದಂಡ ಪ್ರಕಿಯೆ ಸಂಹಿತೆ 1973 ರ ಕಲಂ 144 ರನ್ವಯ ನಿಷೇಧಾಜ್ಞೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂಖ್ಯೆ/ಕಂ/ದಂಡ/25/2021-22 ದಿನಾಂಕ 07.12.2021 ರ ಮೂಲಕ ಆದೇಶ ಜಾರಿಗೊಳಿಸಿರುತ್ತಾರೆ.ಸದರಿ ಚುನಾವಣೆಯಲ್ಲಿ ದಿನಾಂಕ 09.12.2021ರ ಮೂಲಕ ಶ್ರೀ ಹಣಮಂತ ಕೆ ಆ ನನ್ನನು ಯಾದಗಿರಿ ತಾಲ್ಲೂಕಿನ ಭಾಗ ಸಂಖ್ಯೆ 294 ರ ರಾಮಸಮುದ್ರ ಮತಗಟ್ಟೆ ಕೇಂದ್ರಕ್ಕೆ ಮತಗಟ್ಟೆ ಅಧಿಕಾರಿಯನ್ನಾಗಿ ನೇಮಿಸಲಾಗಿರುತ್ತದೆ. ಅದರಂತೆ ರಾಮಸಮುದ್ರ ಗ್ರಾಮ ಪಂಚಾಯಿತಿ ಕಾರ್ಯಲಯದ ಮತಗಟ್ಟೆಯಲ್ಲಿ ( ಕಲಬುರಗಿ ವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆ-2021) ದಿನಾಂಕ:10.12.2021 ರಂದು ಮತದಾನ ನಡೆಯುತಿದ್ದು ಸದರಿ ಮತದಾನ ಕೇಂದ್ರದ ಪಕ್ಕದಲ್ಲಿ ನೀಷಾಧಾಜ್ಞೆಯ ಪ್ರದೇಶದಲ್ಲಿ ಖಾಸಿಂಸಾಬ್ ತಂದೆ ಮಹಮ್ಮದ್ ಖಾಜಾ ಇವರು ಬಟ್ಟೆ ಅಂಗಡಿ ತೆರೆದುಕೊಂಡು ಈ ಕುರಿತು ಮಾಧ್ಯಮಗಳಲಲಿ ಭಿತರವಾಗಿರುತ್ತದೆ(ಅದರ ಸೀಡಿ ಪ್ರತಿ ಲಗತ್ತಿಸಿದೆ) ಕಾರಣ ಸದರಿ ಮತದಾನ ಕೇಂದ್ರಸಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿರುತ್ತದೆ ಪ್ರಯುಕ್ತ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಈ ಮೂಲಕ ವಿನಂತಿಸುತ್ತೆನೆ.ಸದರಿ ಘಟನೆ ಬಗ್ಗೆ ತಹಸಿಲ್ದಾರ ಮತ್ತು ಸಹಾಯಕ ಆಯುಕ್ತರ ಜೋತೆಗೆ ಚಚರ್ಿಸಿ ಈ ಪತ್ರ ಸಲ್ಲಿಸಲಾಗಿರುತ್ತದೆ ಅಂತಾ ಹಣಮಂತ. ಕೆ. ಮತಗಟ್ಟೆ ಅಧಿಕಾರಿಗಳು ಇವರು ಗಣಕಯಂತ್ರದಲ್ಲಿ ಟೈಪ್ ಮಾಡಿದ ಅಜರ್ಿ ತಂದು ಹಾಜರಪಡಿಸಿದ್ದು, ಸದರಿ ಅಜರ್ಿಯ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ 161/2021 ಕಲಂ 131 ಪ್ರಜಾ ಪ್ರತಿನಿಧಿ ಕಾಯ್ದೆಯ 1951 & 1989 ಅಡಿಯಲ್ಲಿ ಪ್ರಕರಣ ದಾಖಲಾಗಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 

 

ಸೈದಾಪೂರ ಪೊಲೀಸ ಠಾಣೆ
176/2021 ಕಲಂ 279, 338 ಐಪಿಸಿ : ಇಂದು ದಿನಾಂಕ 11.12.2021 ರಂದು ಸಾಯಂಕಾಲ 7.45 ಗಂಟೆಗೆ ಶ್ರೀ ಮೋಹನರೆಡ್ಡಿಸ ಸಿ.ಹೆಚ್.ಸಿ-151 ಸೈದಾಪುರ ಠಾಣೆ ರವರು ಬಾಲಂಕು ಆಸ್ಪತ್ರೆ ರಾಯಚೂರುದಿಂದ ಆರ್.ಟಿ.ಎ ಎಂ.ಎಲ್.ಸಿ ಮತ್ತು ಗಾಯಾಳುದಾರ ಖಾಸಿಂ ತಂದೆ ಮಹ್ಮದ ಹುಸೇನ ಮುಲ್ಲಾ, ವಯಾ|| 30 ವರ್ಷ, ಜಾ|| ಮುಸ್ಲಿಂ, ಉ|| ಒಕ್ಕಲುತನ, ಸಾ|| ಮುನಗಲ್ ಗ್ರಾಮ ಈತನ ಹೇಳಿಕೆ ತಂದು ಹಾಜರುಪಡಿಸಿದರು. ದೂರಿನ ಸಾರಾಂಶವೇನೆಂದರೆ, ಈ ವರ್ಷ ನಾವು ನಮ್ಮ ಜಮೀನಿನಲ್ಲಿ ಹತ್ತಿ ಫಸಲು ಬೆಳೆದಿದ್ದರಿಂದ ಹತ್ತಿ ಬಿಡಸಲು ಕೂಲಿ ಜನರನ್ನು ಮಾತನಾಡಿಕೊಂಡು ಬರಲು ನಾನು ಮತ್ತು ನಮ್ಮೂರಿನ ಭೀಮಪ್ಪ ತಂದೆ ಕರೆಪ್ಪ ಇಬ್ಬರೂ ಕೂಡಿ ಕಡೇಚೂರು ಗ್ರಾಮದ ನಮ್ಮ ಸಂಬಂಧಿಯೊಬ್ಬರ ಆಟೋದಲ್ಲಿ ನಮ್ಮೂರಿನಿಂದ ಕಡೇಚೂರು ಗ್ರಾಮಕ್ಕೆ ನಿನ್ನೆ ಮಧ್ಯಾಹ್ನ ಹೋಗಿದ್ದೆವು. ಕಡೇಚೂರುದಲ್ಲಿ ಕೂಲಿ ಜನರಿಗೆ ಮಾತನಾಡಿಸಿ ಮರಳಿ ಮುನಗಲ್ ಗ್ರಾಮಕ್ಕೆ ಹೋಗುವ ಕಾಲಕ್ಕೆ ಮಾರ್ಗಮಧ್ಯ ನಿನ್ನೆ ದಿನಾಂಕ 10.12.2021 ರಂದು ಸಾಯಂಕಾಲ 5.30 ಗಂಟೆ ಸುಮಾರಿಗೆ ಆಟೋ ಚಾಲಕನಾದ ಭೀಮಪ್ಪ ತಂದೆ ಕರೆಪ್ಪ ಮುನಗಲ್ ಗ್ರಾಮ ಈತನು ಆಟೋ ವಾಹನ ಸಂಖ್ಯೆ ಕೆಎ-33-ಬಿ-1042 ವಾಹನ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ವಾಹನ ನಿಯಂತ್ರಿಸದೆ ರಾಯಚೂರು-ಯಾದಗಿರಿ ರಾಷ್ಟ್ರೀಯ ಹೆದ್ದಾರಿ-150 ರ ರಾಚನಳ್ಳಿ ಕ್ರಾಸ್ ಹತ್ತಿರ ಆಟೋ ಪಲ್ಟಿ ಮಾಡಿದ. ಆಟೋದ ಮಧ್ಯದ ಸೀಟಿನಲ್ಲಿ ಕುಂತ ನಾನು ಅಪಘಾತ ಕಾಲಕ್ಕೆ ರೋಡಿನ ಮೇಲೆ ಬಿದ್ದಾಗ ನನ್ನ ಮೇಲೆ ಆಟೋ ಬಿದ್ದಿದ್ದರಿಂದ ನನಗೆ ತೆಲೆಗೆ, ಎದೆಗೆ, ಹೊಟ್ಟೆಗೆ ಪೆಟ್ಟುಗಳಾಗಿವೆ. ಆಟೋ ಚಾಲಕನಾದ ಭೀಮಪ್ಪನಿಗೆ ಗಾಯಗಳು ಆಗಿಲ್ಲ. ನಂತರ ನಾನು ನನ್ನ ತಮ್ಮನಿಗೆ ಫೋನ್ಮಾಡಿ ವಿಷಯ ತಿಳಿಸಿದ್ದರಿಂದ ನನ್ನತಮ್ಮ ಹಾಗೂ ನಮ್ಮ ಮನೆಯವರು ಸ್ಥಳಕ್ಕೆ ಬಂದು ನನ್ನನ್ನು ಉಪಚಾರ ಕುರಿತು ಇಲ್ಲಿಗೆ ಅಂದರೆ ಬಾಲಂಕು ಆಸ್ಪತ್ರೆ ರಾಯಚೂರಕ್ಕೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಆಪಾದನೆ.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 177/2021 ಕಲಂ: 323,324,504,506 &34 ಐಪಿಸಿ : ಇಂದು ದಿನಾಂಕ 11.12.2021 ರಂದು 01.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮಹ್ಮದ್ ಗೌಸ್ ತಂದೆ ಇಸ್ಮಾಯಿಲ್ ಮುಲ್ಲಾ ವಯಾ|| 69 ಜಾ|| ಮುಸ್ಲೀಂ ಉ|| ಕೂಲಿಕೆಲಸ ಸಾ|| ಯಾಳಗಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನಮಗೂ ಹಾಗು ನಮ್ಮ ಜನಾಂಗದ ಅಲಿಶೇಹರ್ ಮುಲ್ಲಾ ಇವರ ಮದ್ಯ ಹೊಲದ ವಿಷಯದಲ್ಲಿ ಸುಮಾರು ದಿನಗಳಿಂದ ತಕರಾರು ನಡೆದು ಸದರಿ ಹೊಲ ಅವರ ಹೆಸರಿಗೆ ಆಗಿದ್ದು, ಆದರೂ ಸಹ ಸದರಿಯವರು ನಮ್ಮ ಮೇಲೆ ಹಗೆತನ ಸಾಧಿಸುತ್ತಿದ್ದರು. ಹೀಗಿದ್ದು ನಿನ್ನೆ ದಿನಾಂಕ 09.12.2021 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಾನು ಹಾಗು ನನ್ನ ಮಕ್ಕಳಾದ ಅಕುಲ್ ಮೋಬಿನ್ ಮುಲ್ಲಾ ಮತ್ತು ರಿಯಾಜ ಮುಲ್ಲಾ ನಾವು ಮೂರು ಜನರು ನಮ್ಮೂರ ಬಸ್ಸ ನಿಲ್ದಾಣದಲ್ಲಿ ಮಾತನಾಡುತ್ತಾ ನಿಂತಾಗ ಅದೇ ಸಮಯಕ್ಕೆ ನಮ್ಮೂರ ನಮ್ಮ ಜನಾಂಗದ 1] ಅಲಿಶೇರ್ ತಂದೆ ಇಸ್ಮಾಯಿಲ್ ಮುಲ್ಲಾ 2] ಅಜೀಮ್ ತಂದೆ ಅಲಿಶೇರ್ ಮುಲ್ಲಾ ಈ ಎರಡು ಜನರು ಏಕಾಏಕೀ ನಮ್ಮಲ್ಲಿಗೆ ಬಂದವರೇ ಏನಲೇ ಸೂಳೇ ಮಕ್ಕಳೇ ನಮ್ಮ ಬಗ್ಗೆ ಬೇರೆಯವರ ಮುಂದೆ ಹಿಯಾಳಿಸಿ ಮಾತನಾಡುತ್ತೀರಿ ಅಂತ ಬೈಯುತ್ತಿದ್ದಾಗ ನಾನು ಯಾರ ಮುಂದೆ ಏನು ಮಾತನಾಡಿದ್ದೀವಿ ಅಂತ ಕೇಳಿದಾಗ ಎರಡು ಜನರು ಈ ಸೂಳೇ ಮಕ್ಕಳ ಸೊಕ್ಕು ಬಹಾಳ ಆಗಿದೆ ಅಂತ ನಾವು ಮೂರು ಜನರಿಗೆ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ಅಜೀಮ್ ಮುಲ್ಲಾ ಈತನು ಅಲ್ಲಿಯೇ ಬಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಎಡಗಾಲ ಮೊಳಕಾಲ ಹಿಂದೆ ಹೊಡೆದು ತರಚಿದ ಗಾಯಪಡಿಸಿದ್ದು ಅಲ್ಲದೇ ಅದೇ ಕಟ್ಟಿಗೆಯಿಂದ ಕುತ್ತಿಗೆ ಹಿಂಬಾಗಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ನಂತರ ಅದೆ ಕಟ್ಟಿಗೆಯಿಂದ ಮಗ ಅಕುಲ್ ಮೋಬಿನ್ ಈತನಿಗೂ ಸಹ ತಲೆಗೆ, ಬಲಹುಬ್ಬಿನ ಹತ್ತಿರ ಹಾಗು ಬಲಗೈ ಕಿರುಬೆರಳಿಗೆ ಹೊಡೆದು ರಕ್ತಗಾಯ ಪಡಿಸಿದನು. ಅಷ್ಟರಲ್ಲಿ ಅಲಿಶೇರ ಈತನು ಅಲ್ಲಿಯೇ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಮಗ ರಿಯಾಜ ಈತನ ಬಲಕಿವಿಯ ಹಿಂದೆ ಹೊಡೆದು ತರಚಿದ ರಕ್ತಗಾಯ ಪಡಿಸಿದನು. ನಂತರ ನಾವು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ರುದ್ರಗೌಡ ತಂದೆ ಯಮನಪ್ಪಗೌಡ ಅಮಲಿಹಾಳ ಹಾಗು ನಮ್ಮ ಅಳಿಯ ಇಸ್ಮಾಯಿಲ್ ತಂದೆ ಅಬ್ದುಲ್ ರಸೂಲ ಉಸ್ತಾದ್ ಇವರು ಬಂದು ಬಿಡಿಸಿಕೊಂಡರು. ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೆ ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಕಾರಣ ವಿನಾಕಾರಣವಾಗಿ ನಮ್ಮೊಂದಿಗೆ ಜಗಳಾ ತೆಗೆದು ಅವಾಚ್ಯವಾಗಿ ಬೈಯ್ದು ಕೈಯಿಂದ, ಕಲ್ಲಿನಿಂದ ಹಾಗು ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ ಮೇಲ್ಕಾಣಿಸಿದ ಎರಡು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 177/2021 ಕಲಂ 323,324,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 12-12-2021 01:10 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080