ಅಭಿಪ್ರಾಯ / ಸಲಹೆಗಳು

                                                                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 12-12-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: ಗುನ್ನೆ ನಂ.172/2022 ಕಲಂ: 457, 380 ಐಪಿಸಿ : ದಿನಾಂಕಃ 09/12/2022 ರಂದು ರಾತ್ರಿ 11 ಗಂಟೆಯಿಂದ ದಿನಾಂಕಃ 10/12/2022 ರಂದು ಬೆಳಗಿನ ಜಾವಾ 06:00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಚಪೇಟ್ಲಾ ಗ್ರಾಮದಲ್ಲಿರುವ ಫಿಯರ್ಾದಿಯ ಮನೆಯ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು, ಮನೆಯೊಳಗೆ ಪ್ರವೇಶ ಮಾಡಿ ಕಬ್ಬಿಣದ ಅಲಮಾರಿಯಲ್ಲಿಟ್ಟಿದ್ದ 1] 10 ಗ್ರಾಂ ಬಂಗಾರದ ಉಂಗುರ ಅಂ.ಕಿ. 50,000/- ರೂ. 2] 5 ಗ್ರಾಂ ಬಂಗಾರದ ಮಾಟಿನ ಅ.ಕಿ. 25,000/- ರೂ, 3] 5 ಗ್ರಾಂ ಬಂಗಾರದ ಕಿವಿಯೋಳೆ ಅಂ.ಕಿ. 25,000/- ರೂ, 4] 250 ಗ್ರಾಂ ಬೆಳ್ಳಿಯ ಆಭರಣಗಳು ಅಂ.ಕಿ. 12,500/- ರೂ. ಹಾಗೂ ನಗದು ಹಣ 12,500/- ರೂ. ಹೀಗೆ ಒಟ್ಟು 1,25,000/- ರೂ ಮೌಲ್ಯದ ಬಂಗಾರ, ಬೆಳ್ಳಿಯ ಆಭರಣಗಳು ಹಾಗೂ ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ ಠಾಣೆ ಗುನ್ನೆ ನಂ. 172/2022 ಕಲಂ. 457, 380 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
                    
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 170/2022 ಕಲಂ 323, 324, 354, 504, 506 ಸಂ. 34 ಐಪಿಸಿ : ದಿನಾಂಕ: 11-12-2022 ರಂದು ರಾತ್ರಿ 07-00 ಜಿಲ್ಲಾ ಸರಕಾರಿ ಆಸ್ಪತ್ರೆಗೆ ಯಾದಗಿರಿಯಿಂದ ಎಮ್.ಎಲ್ ಸಿ ಇದೆ ಅಂತಾ ತಿಳಿಸಿದ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದ್ದು ದೂರು ನೀಡಿದ ಸಾರಂಸವೆನೆಂದರೆ ದಿನಾಂಕ: 10-12-2022 ರಂದು ರಾತ್ರಿ 08-00 ಗಂಟೆಗೆ ನಾನು ನನ್ನ ಮಗಳು ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರು ಕೂಡಿ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ ಸೀರೆ ಹಿಡಿದು ಎಳದಾಡಿ ಮಾನ ಭಂಗ ಮಾಡಲು ಪ್ರಯತ್ನ ಮಾಡಿ ಮನ ಬಂದಂತೆ ಹೊಡೆದು ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.


ಶೋರಾಪೂರ  ಪೊಲೀಸ್ ಠಾಣೆ:-
ಗುನ್ನೆ ನಂ: 163/2022 ಕಲಂ: 279, 337, 338 ಐಪಿಸಿ : ಇಂದು ದಿ: 11/12/2022 ರಂದು 01-30 ಪಿ.ಎಮ್. ಕ್ಕೆ ಪಿರ್ಯಾದಿ ಕು|| ಸುಮೈಯ್ಯಾಬೇಗಂ ತಂದೆ ಮಹ್ಮದ್ ಮಹೆಬೂಬ್ ಜಕಾತಿ ವ|| 27 ವರ್ಷ ಜಾ|| ಮಸ್ಲಿಂ ಉ|| ಅತಿಥಿ ಶಿಕ್ಷಕರು ಸಾ|| ದೂಳಪೇಠ ಮೊಹಲ್ಲಾ ರಂಗಂಪೇಠ, ಸುರಪೂರ ಇವರು ಠಾಣೆಗೆ ಬಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ದೂರು ಅಜರ್ಿ ನೀಡಿದ್ದು, ಸದರಿ ದೂರು ಸಾರಾಂಶವೆನೆಂದರೆ, ನಮ್ಮ ತಂದೆ-ತಾಯಿಯವರಿಗೆ ನಾವು ಇಬ್ಬರು ಮಕ್ಕಳಿದ್ದು ನಾನು ಹಿರಿಯವಳಿದ್ದು, ಇನ್ನೊಬ್ಬನು ನನ್ನ ತಮ್ಮ ಮಹ್ಮದ್ ಸೋಹಿಲ್ ವ|| 24 ವರ್ಷ ಇರುತ್ತಾನೆ. ನಾನು ಸುರಪೂರದ ದರಬಾರ ಉದರ್ು ಮಾಧ್ಯಮ ಶಾಲೆಯಲ್ಲಿ ಅತಿಥಿ ಶಿಕ್ಷಕಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ತಮ್ಮ ಸೊಹೇಲ್ ಈತನು ಎಮ್.ಎ. ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ: 10/12/2022 ರಂದು ಬೆಳಿಗ್ಗೆ 7:45 ಗಂಟೆ ಸುಮಾರಿಗೆ ನಾನು ಎಂದಿನಂತೆ ಅತಿಥಿ ಶಿಕ್ಷಕ ಕರ್ತವ್ಯಕ್ಕೆಂದು ಮನೆಯಿಂದ ರಂಗಂಪೇಠದ ಆಟೋಸ್ಟ್ಯಾಂಡ್ಗೆ ಬಂದು ಅಲ್ಲಿಂದ ಒಂದು ಆಟೋ ನಂ. ಕೆಎ-33. ಎ-5004 ನೇದ್ದರಲ್ಲಿ ಕುಳಿತುಕೊಂಡು ಸುರಪುರ ಕಡೆಗೆ ಹೊರೆಟೆನು. ನಾನು ಕುಳಿತುಕೊಂಡ ಆಟೋ ಸುರಪುರ-ರಂಗಂಪೇಠ ಮುಖ್ಯ ರಸ್ತೆಯ ಮದನ್ಷಾ ದಗರ್ಾ ಹತ್ತಿರ ಬೆಳಿಗ್ಗೆ 7:50 ಗಂಟೆ ಸುಮಾರಿಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಅಂದರೆ ಸುರಪೂರ ಬಸ್ ನಿಲ್ದಾಣದ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಆಟೋಕ್ಕೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ಆಟೋದಲ್ಲಿದ್ದ ನಾನು ಮತ್ತು ಆಟೋ ಚಾಲಕ ಮಹ್ಮದ್ ಯೂಸುಫ್ ಇಬ್ಬರು ಕೆಳಗೆ ಬಿದ್ದೆವು. ಆಗ ಅದೆ ರಸ್ತೆಯ ಮುಖಾಂತರ ಬೈಕ್ ಮೇಲೆ ಹೋಗುತ್ತಿದ್ದ ನಮ್ಮ ಶಾಲೆ ಮುಖ್ಯ ಗುರುಗಳಾದ ಜಾಕೀರ ಸಾಬ್ ಹಾಗೂ ಅವರ ಪತ್ನಿ ನೂರ್ಜಾನ್ ಬೇಗಂ ಇವರು ನಮಗೆ ಎಬ್ಬಿಸಿದ್ದು, ನನಗೆ ಬಲಗಡೆ ಹಣೆಗೆ ರಕ್ತಗಾಯವಾಗಿದ್ದು, ಗದ್ದಕ್ಕೆ ತರಚಿದ ರಕ್ತಗಾಯ, ಎಡಗೈಗೆ ಮತ್ತು ಬಲಗಡೆ ಎದೆಗೆ ಒಳಪೆಟ್ಟಾಗಿರುತ್ತದೆ. ಆಟೋ ಚಾಲಕನಾದ ಮಹ್ಮದ್ ಯೂಸುಫ್ ತಂದೆ ಚೆನ್ನುಮಿಯ್ಯಾ ತಂಬಾಕೆವಾಲೆ ಈತನಿಗೆ ಬಲಗೈಗೆ ಭಾರಿ ಪೆಟ್ಟಾಗಿದ್ದು ಮುರಿದಂತಾಗಿರುತ್ತದೆ. ಮತ್ತು ಅವನ ಎಡಗಡೆ ಕಣ್ಣಿಗೆ, ಎಡಗಾಲಿಗೆ ಒಳಪೆಟ್ಟಾಗಿರುತ್ತದೆ. ಅಪಘಾತಪಡಿಸಿದ ಬಸ್ ಸ್ಥಳದಲ್ಲೇ ಇದ್ದು, ಅದರ ನಂ. ಕೆಎ-33. ಎಫ್-0349 ಅಂತಾ ಇದ್ದು, ಅದರ ಚಾಕಲನ ಹೆಸರು ರಾಘವೇಂದ್ರ ತಂದೆ ಲಕ್ಷ್ಮಣ ಸಾ|| ಬೊಮ್ಮನಳ್ಳಿ ತಾ|| ಮುದದೆಬಿಹಾಳ ಅಂತಾ ಗೊತ್ತಾಯಿತು. ನಂತರ ನಮ್ಮ ಶಾಲೆಯ ಮುಖ್ಯ ಗುರುಗಳಾದ ಜಾಕೀರ ಸಾಬ್ ಹಾಗೂ ಅವರ ಪತ್ನಿ ನೂರ್ಜಾನ್ ಬೇಗಂ ಇವರು ಗಾಯಗೊಂಡ ನಮಗೆ ಉಪಚಾರ ಕುರಿತು ಒಂದು ಕಾಸಗಿ ವಾಹನದಲ್ಲಿ ಹಾಕಿಕೊಂಡು ಸುರಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದರು. ನಂತರ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ನಮಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ತಿಳಿಸಿದ್ದರಿಂದ ಸುದ್ಧಿ ತಿಳಿದು ಆಸ್ಪತ್ರೆಗೆ ಬಂದಿದ್ದ ನನ್ನ ತಂದೆ ಮಹ್ಮದ್ ಮಹೆಬೂಬ್ ಹಾಗೂ ನಮ್ಮ ತಮ್ಮ ಮಹ್ಮದ್ ಸೋಹಿಲ್ ಇವರು ನನಗೆ ಕಲಬುರಗಿಯ ಬಾಬಾ ಹೌಸ್ ಸಿಟಿ ಸ್ಕ್ಯಾನಿಂಗ್ ಸೆಂಟರ್ಗೆ ಸೇರಿಕೆ ಮಾಡಿದ್ದು, ನಾನು ಅಲ್ಲಿ ಉಪಚಾರ ಪಡೆದುಕೊಂಡಿದ್ದು, ಮಹ್ಮದ್ ಯೂಸುಫ್ ಈತನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದರಿಂದ ನಾನು ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ಕೆ.ಎಸ್.ಆರ್.ಟಿ.ಸಿ. ಬಸ್ ನಂ. ಕೆಎ-33. ಎಫ್-0349 ನೇದ್ದರ ಚಾಲಕನಾದ ರಾಘವೇಂದ್ರ ತಂದೆ ಲಕ್ಷ್ಮಣ ಸಾ|| ಬೊಮ್ಮನಳ್ಳಿ ತಾ|| ಮುದ್ದೆಬಿಹಾಳ ಈತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಮಗೆ ಅಪಘಾತ ಪಡಿಸಿದ್ದು ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.163/2022 ಕಲಂ:279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

 

ಇತ್ತೀಚಿನ ನವೀಕರಣ​ : 12-12-2022 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080