ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-01-2022

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ: 07/2022 ಕಲಂ: 406, 409, 420 ಐಪಿಸಿ : ಇಂದು ದಿನಾಂಕ 12.01.2022 ರಂದು 09.15 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಕಾಶಿಪತಿ ತಂದೆ ಭೀಮರಾಯ ಕಂಬಾರ ವ|| 45 ಜಾ|| ಹಿಂದು ಹೊಲೆಯ ಉ|| ಒಕ್ಕಲುತನ ಸಾ|| ಮಾಲಗತ್ತಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಏನಂದರೆ ಈ ವರ್ಷ ನಾನು 500 ಚೀಲ ಭತ್ತ ಬೆಳೆದಿದ್ದು ನನ್ನಂತೆ ನಮ್ಮೂರ ಸೋಮಣ್ಣ ಸಾಹೂಕಾರ ಇವರು ಸಹ 600 ಚೀಲ ಭತ್ತ ಬೆಳೆದಿದ್ದು ಇಬ್ಬರೂ ಕೂಡಿ ಎಲ್ಲಿಯಾದರೂ ಒಳ್ಳೆಯ ಬೆಲೆಯುಳ್ಳ ವ್ಯಕ್ತಿಯ ಹತ್ತಿರ ಕೊಟ್ಟರಾಯಿತು ಅಂತ ವಿಚಾರಿಸುತ್ತಿದ್ದಾಗ ನಮಗೆ ಪರಿಚಯದವರಾದ ಭತ್ತ ಖರೀದಿದಾರರಾದ ಶ್ರೀ ದೇವಪ್ಪ ತಂದೆ ನಿಂಗಪ್ಪ ಹುಜರತ್ತಿ ಸಾ|| ಕೂಡಲಗಿ ಈತನು ನಮಗೆ ಪರಿಚಯದವನಾಗಿದ್ದು ಆತನಿಗೆ ಕೊಟ್ಟರಾಯಿತು ಅಂತ ಸುಮ್ಮನಿದ್ದೆವು. ನಾವಿಬ್ಬರೂ ನಮ್ಮ ಭತ್ತದ ರಾಶಿಯನ್ನು ನಮ್ಮೂರಲ್ಲಿ ಹಾಕಿದ್ದೆವು. ಹೀಗಿದ್ದು ದಿನಾಂಕ 28.11.2021 ರಂದು ಬೆಳಿಗ್ಗೆ 07.49 ಗಂಟೆಗೆ ಬಂದು ನಮ್ಮೂರಿಗೆ ಭತ್ತ ಖರೀದಿದಾರರಾದ ಶ್ರೀ ದೇವಪ್ಪ ತಂದೆ ನಿಂಗಪ್ಪ ಹುಜರತ್ತಿ ಸಾ|| ಕೂಡಲಗಿ ಈತನು ನಮ್ಮ ಹತ್ತಿರ ಬಂದು ನಿಮ್ಮ ಭತ್ತ ಇದ್ದರೆ ಕೊಡಿ ನಾನು ಖರೀದಿ ಮಾಡುತ್ತೇನೆ ಎಂದು ಕೇಳಿದಾಗ ನಾವು ಇಬ್ಬರೂ ಸದರಿಯವನಿಗೆ ನಂಬಿ ನನ್ನ ಹತ್ತಿರ ಇರುವ 500 ಚೀಲ ಭತ್ತ ಹಾಗು ನಮ್ಮೂರ ಸೋಮಣ್ಣ ಸಾಹುಕಾರ ಇವರ ಹತ್ತಿರ ಇದ್ದ 600 ಚೀಲ ಭತ್ತದವನ್ನು ಮಾರಾಟ ಮಾಡಿರುತ್ತೇವೆ. ಸದರ ಖರೀದಿದಾರನು ಭತ್ತ ಖರೀದಿ ಮಾಡಿ ಸುಮಾರು ಒಂದು ತಿಂಗಳು ಕಳೆದರೂ ನಮಗೆ ಮರಳಿ ಯಾವದೇ ಹಣ ಕೊಡದೇ ಪೋನ ಮಾಡಿದರೆ ಪೋನ ಸ್ವಚ್ಛ ಆಫ್ ಮಾಡಿ ಪರಾರಿಯಾದ ಬಗ್ಗೆ ಗೊತ್ತಾಯಿತು. ಸದರ ವ್ಯಕ್ತಿಯ ಸುಳಿವಿಗಾಗಿ ಆತನ ಸ್ವಂತ ಗ್ರಾಮ ಕೂಡಲಗಿಗೆ ಹೋಗಿ ಕೇಳಲಾಗಿ ಅಲ್ಲಿರುವ ಜನರು ಆತನು ಸುಮಾರು ಒಂದು ತಿಂಗಳಿನಿಂದ ಗ್ರಾಮದಲ್ಲಿ ಇರುವದಿಲ್ಲವೆಂದು ತಿಳಿಸಿದರು. ನಂತರ ನಾವಿಬ್ಬರೂ ಗಾಬರಿಯಾಗಿ ಅಲ್ಲಿ-ಇಲ್ಲಿ ಕೇಳಿದರೂ ಕೂಡಾ ಯಾವದೇ ಪತ್ತೆ ಹತ್ತಿರುವದಿಲ್ಲ. ಭತ್ತ ಬೆಳೆಯುವದಕ್ಕೆ ಲಕ್ಷಾಂತರ ರೂಪಾಯಿ ಖಚರ್ು ಮಾಡಿ ಸಾಲದ ಬಾಧೆಯಾದರೆ, ಇನ್ನೊಂದು ಕಡೆ ಖರೀದಿದಾರನು ಭತ್ತ ಖರೀದಿ ಮಾಡಿದ ಹಣ ಕೊಡದೇ ಪರಾರಿಯಾಗಿದ್ದು ಇರುತ್ತದೆ. ಆದರೆ ಖರೀದಿದಾರನು ನಮ್ಮ ಹತ್ತಿರ ಭತ್ತ ಖರೀದಿ ಮಾಡಿಕೊಂಡು ಹೋಗುವಾಗ ಸದರಿ ಭತ್ತದ ಮೂಟೆಗಳನ್ನು ಲಾರಿ ನಂಬರ ಕೆಎ-28 ಡಿ-5438 ಹಾಗು ಕೆಎ-22 ಡಿ 5361 ನೇದ್ದವುಗಳಲ್ಲಿ ಲೋಡ ಮಾಡಿಕೊಂಡು ಹೋಗಿ ಮಿಲ್ಲಿಗೆ ಮಾರಾಟ ಮಾಡಿ ಮಿಲ್ಲಿನವರಿಂದ ಹಣವನ್ನು ಕೂಡಾ ಪಡೆದುಕೊಂಡು ನಮಗೆ ಮೋಸ ಮಾಡಿ ಹೋಗಿರುತ್ತಾನೆ. ಈತನ ಪತ್ತೆ ಕುರಿತು ನಾವು ಸುಮಾರು ಕಡೆ ಹುಡುಕಾಡಲಾಗಿ ಎಲ್ಲಿಯೂ ಸಿಕ್ಕಿರುವದಿಲ್ಲ. ಸದರಿಯವನು ಆತನು ಹೆಂಡತಿಯಾದ ಬಸಮ್ಮ ಇವಳ ಮನೆಯಾದ ಸಿಂದಗಿ ತಾಲೂಕಿನ ಯಲಗೋಡ ಅಥವಾ ಅವರ ತಮ್ಮನಾದ ಸೋಮು ತಂದೆ ನಿಂಗಪ್ಪ ಹುಜರತ್ತಿ ಈತನು ಗೋವಾದಲ್ಲಿದ್ದು ಈತನ ಹತ್ತಿರ ಇರಬಹುದಾಗಿ ಮಾಹಿತಿ ಇರುತ್ತದೆ. ಭತ್ತ ಖರೀದಿದಾರನಾದ ದೇವಪ್ಪ ಹುಜರತ್ತಿ ಈತನ ಮೋಬೈಲ್ ನಂಬರ 9980375771,9972168382 ಆಗಿರುತ್ತವೆ. ಆದ್ದರಿಂದ ದಯಾಳುಗಳಾದ ತಾವುಗಳು ಸದರ ವ್ಯಕ್ತಿಯನ್ನು ಪತ್ತೆ ಹಚ್ಚಿ ನಮ್ಮ ಭತ್ತ ಖರೀದಿ ಮಾಡಿಕೊಂಡು ನಮಗೆ ಹಣ ಕೊಡದೇ ಮೋಸ ಮಾಡಿ ಹೋಗಿದ್ದು ಕಾರಣ ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 07/2022 ಕಲಂ 406,409,420 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 01/2022 ಕಲಂ: 323, 324 354, 354(ಬಿ), 504, 506 ಸಂ: 34 ಐಪಿಸಿ : ಇಂದು ದಿನಾಂಕ: 12/01/2022 ರಂದು 07.30 ಪಿಎಂ ಕ್ಕೆ ಗೋಗಿ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುವ ನಾಗಪ್ಪ ಸಿಪಿಸಿ-167 ರವರು ಕೋರ್ಟ ಕರ್ತವ್ಯ ಮುಗಿಸಿಕೊಂಡು ಮರಳಿ ಠಾಣೆಗೆ ಬಂದು ಮಾನ್ಯ ನ್ಯಾಯಾಲಯದಿಂದ ವಸೂಲಾದ ಒಂದು ಖಾಸಗಿ ಪಿಯರ್ಾದಿ ಸಂ: 139/2021 ನೇದ್ದನ್ನು ತಂದು ಹಾಜರ ಪಡೆಸಿದ್ದು, ಸದರಿ ಖಾಸಗಿ ಪಿಯರ್ಾದಿ ಸಾರಂಶ ಏನಂದರೆ, ದಿನಾಂಕ: 05/12/2021 ರಂದು ಬೆಳಿಗ್ಗೆ 10.00 ಗಂಟೆಗೆ ಫಿರ್ಯಾದಿಯು ಮನೆಯಲ್ಲಿ ಊಟ ಮಾಡುತ್ತಿರುವಾಗ ಮನೆಯ ಹೊರಗಡೆ ಶಬ್ದ ಕೇಳಿ ಬಂದು ನೋಡಿದಾಗ ಆರೋಪಿ ನಂ:1 ಇಲಿಯಾಸ ತಂದೆ ಅಬ್ದುಲ್ ಗಫೂರ ಆರೋಪಿ ನಂ: 2 ಇಮ್ರಾನ ತಂದೆ ಅಬ್ದುಲ ಗಫೂರ ಖಾನ್ ಆರೋಪಿ ನಂ:3 ್ನಸಾ ಬೇಗಂ ತಂದೆ ಮಹ್ಹಮದ ಇಬ್ರಾಹಿಂ ಖಾನ್ ಗಂಡ ಅಬ್ದುಲ್ ಗಫೂರಖಾನ್ ಇವರು ನಮ್ಮ ಮನೆಯ ಮುಂದೆ ಬಂದು ಮೂರು ಜನರು ಕೂಗಾಡುತ್ತಿದ್ದರು ನಮ್ಮ ಮನೆಯ ಮುಂದೆ ಯಾಕೆ ನೀವು ಕೂಗಾಡುತ್ತಿರಾ ಅಂಥ ನಾನು ಕೇಳಿದಾದ ನನಗೆ ಮನೆಯ ಬಾಗಿಲಿನಿಂದ ಹೊರಗಡೆ ಎಳೆದು ಬೋಸುಡಿ ನಿನ್ನ ಗಂಡ ಎಲ್ಲಿದ್ದಾನೆ ಅವನಿಗೆ ಕರಿ ಇವತ್ತು ನಾವು ಖಲಾಸ್ ಮಾಡುತ್ತೇವೆ ಅಂಥ ಹೇಳಿ ನನ್ನ ಕೂದಲು ಹಿಡಿದು ಆರೋಪಿ ಸಂಖ್ಯೆ 1 ಇಲಿಯಾಸ್ ತಂದೆ ಅಬ್ದುಲ ಗಫೂರ ತನ್ನ ಕೈಯಿಂದ ನನ್ನ ಎದೆಯ ಭಾಗಕ್ಕೆ ಗುದ್ದಿದನು, ಆರೋಪಿ ಸಂಖ್ಯೆ 2 ಇಮ್ರಾನ ತಂದೆ ಅಬ್ದುಲ್ ಗಫೂರ ತನ್ನ ಕೈಯಿಂದ ನನ್ನ ಬೆನ್ನಿಗೆ ಅಲ್ಲೆ ಬಿದ್ದಿದಂತಹ ಕಟ್ಟಿಗೆ ಇಂದ ಹೊಡೆದೆನು ಹಾಗೂ ಆರೋಪಿ ಸಂಖ್ಯೆ 3 ಬೇಗಂ ತನ್ನ ಕೈಯಿಂದ ಮುಖಕ್ಕೆ ಹಾಗೂ ಕುತ್ತಿಗೆಗೆ ಒಡೆದು ಗುಪ್ತಗಾಯ ಮಾಡಿದಳು ಮೂರು ಜನರು ನನಗೆೆ ರಸ್ತೆಯ ಕೆಳಗಡೆ ಹಾಕಿ ಒದೆಯಲು ಪ್ರಾರಂಭ ಮಾಡಿದರು ಮತ್ತು ನನಗೆ ಒದ್ದು ನಿನಗೆ ಇವತ್ತು ಬಿಡುವುದಿಲ್ಲಾ ಅಂಥ ಹೇಳಿ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ನಗ್ನಗೊಳಿಸುವ ದೃಷ್ಟಿಯಿಂದ ನನ್ನ ಸೀರೆ ಬಿಚ್ಚಲು ಪ್ರಯತ್ನ ಮಾಡಿದರು ಅಷ್ಟರಲ್ಲೆ ಅದೇ ಸಮಯದಲ್ಲಿ ನನ್ನ ಮನೆಯ ಮುಂದಿನಿಂದ ಹೋಗುತ್ತಿದ್ದ ಸಿದ್ದಿಕಿ ಬಾಬ ತಂದೆ ಪಾಶ ವಯ: 56 ಸಾ|| ಗೋಗಿ.ಕೆ ಹಾಗೂ ಬಡೆಸಾಬ ತಂದೆ ಸೊಫಿಸಾಬ ವಯ|| 40 ಸಾ|| ಗೋಗಿ.ಕೆ ಇವರು ಬಂದು ಅವರನ್ನು ಬಿಡಿಸಿದರು, ಮತ್ತು ಮೂರು ಜನರು ನನ್ನ ಕಡೆ ನೋಡಿ ನಿನ್ನ ಗಂಡನಿಗೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದರು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 01/2021 ಕಲಂ, 323, 324, 354, 354(ಬಿ), 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಶೋರಾಪೂರ ಪೊಲೀಸ್ ಠಾಣೆ
ಇಂದು ದಿನಾಂಕ: 12/01/2022 ರಂದು 6:30 ಪಿ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಸುನೀಲ್ ಮೂಲಿಮನಿ ಪಿಐ ಸುರಪೂರ ಪೊಲೀಸ್ ಠಾಣೆ ರವರು ಮುದ್ದೇಮಾಲು ಸಮೇತ ಹಾಜರಾಗಿ ವರದಿ ಕೊಟ್ಟಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ:12/01/2021 ರಂದು 03:00 ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ಲಾಪುರ ಹನುಮಾನ ದೇವರ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ರಾಹುಲ್ ಪವಾಡೆ ಪಿ.ಎಸ್.ಐ (ಪ್ರೋಬೇಶನರಿ) ಮತ್ತು ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಹೊನ್ನಪ್ಪ ಸಿಪಿಸಿ-427 2) ಶ್ರೀ ಸಿದ್ರಾಮರೆಡ್ಡಿ ಸಿಪಿಸಿ-423 3) ಶ್ರೀ ಮಲ್ಲಯ್ಯ ಸಿಪಿಸಿ-51 4) ವಿರೇಶ ಸಿಪಿಸಿ-374 ಇವರೆಲ್ಲರಿಗೂ ವಿಷಯ ತಿಳಿಸಿ, ಹೊನ್ನಪ್ಪ ಸಿಪಿಸಿ-427 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಹೊನ್ನಪ್ಪ ಪಿಸಿ ಇವರು ಇಬ್ಬರು ಪಂಚರಾದ 1) ಹಣಮಂತ್ರಾಯ ತಂದೆ ವೆಂಕಟೇಶ ಕಲ್ಲೋಡಿ ವ|| 19 ವರ್ಷ ಜಾ|| ಬೇಡರ ಉ|| ಕೂಲಿ ಸಾ|| ಕಬಾಡಗೇರಾ, ಸುರಪುರ 2) ಮುಬಾರಕ್ ತಂದೆ ಶಿಲಾರುದ್ದೀನ ಖುರೇಷಿ ವ|| 23 ವರ್ಷ ಜಾ|| ಮುಸ್ಲಿಂ ಉ|| ಮೆಕ್ಯಾನಿಕ್ ಸಾ|| ಆಸಾರ ಮೊಹಲ್ಲಾ ಶಹಾಪುರ ಹಾ.ವ|| ದಖನಿ ಮೊಹಲ್ಲಾ ಸುರಪುರ ಇವರನ್ನು 03:15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡರು. ನಂತರ ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 3:30 ಪಿ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33 ಜಿ-0238 ನೇದ್ದರಲ್ಲಿ ಠಾಣೆಯಿಂದ ಹೊರಟು 4:25 ಪಿ.ಎಂ ಕ್ಕೆ ಚಂದ್ಲಾಪುರ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಶ್ರೀ ಹನುಮಾನ ದೇವರ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ 5-6 ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 4:30 ಪಿ.ಎಂ.ಕ್ಕೆ ದಾಳಿ ಮಾಡಲಾಗಿ, ಸದರಿಯವರೆಲ್ಲರು ನಮ್ಮನ್ನು ನೋಡಿ ಓಡಿಹೊಗಿದ್ದು, ಅವರನ್ನು ಬೆನ್ನಟ್ಟಿದರೆ ಅವರು ಎಲ್ಲಿಯಾದರೂ ಬಿದ್ದು ಪ್ರಾಣಕ್ಕೆ ಏನಾದರೂ ಆಗಬಹುದು ಅಂತಾ ತಿಳಿದು ಸ್ಥಳಕ್ಕೆ ಬಂದು ನೋಡಲಾಗಿ ಸ್ಥಳದಲ್ಲಿ ಪಣಕ್ಕೆ ಇಟ್ಟ ಹಣ 1130/- ರೂ. ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು, ಅಲ್ಲದೆ ಸ್ಥಳದಲ್ಲಿ ಐದು ಮೋಟರ್ ಸೈಕಲ್ಗಳು ಇದ್ದು, ಅವುಗಳು ಒಂದೊಂದಾಗಿ ಪರಿಶೀಲಿಸಲಾಗಿ 1) ಹಿರೋ ಸ್ಪ್ಲೆಂಡರ ಪ್ಲಸ್ ಮೋಟರ್ ಸೈಕಲ್ ನಂ. ಕೆಎ-33 ಆರ್-3274 ಅ.ಕಿ 15,000/- ರೂ. ನೇದ್ದರ ಮಾಲಿಕ, 2) ಹಿರೋ ಹೊಂಡಾ ಸ್ಪ್ಲೆಂಡರ ಪ್ರೋ ಮೋಟರ್ ಸೈಕಲ್ ನಂ. ಕೆಎ-33 ವಾಯ್-1846 ಅ.ಕಿ 15,000/- ರೂ. ನೇದ್ದರ ಮಾಲಿಕ, 3) ಸಿಟಿ-100 ಮೋಟರ್ ಸೈಕಲ್ ನಂ. ಕೆಎ-51 ಇ-6137 ಅ.ಕಿ 10,000/- ರೂ/. ನೇದ್ದರ ಮಾಲಿಕ, 4) ಹೊಂಡಾ ಶೈನ್ ಮೋಟರ್ ಸೈಕಲ್ ನಂ. ಕೆಎ-33 ಇಎ-0677 ಅ.ಕಿ 25,000/- ರೂ. ನೇದ್ದರ ಮಾಲಿಕ, 5) ಹಿರೋ ಸ್ಪ್ಲೆಂಡರ ಪ್ಲಸ್ ಮೋಟರ್ ಸೈಕಲ್ ನಂ. ಕೆಎ-09 ಹೆಚ್ಎಕ್ಷ-7546 ಅ.ಕಿ 20,000/- ರೂ. ನೇದ್ದರ ಮಾಲಿಕ. ಇವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 4:30 ಪಿ.ಎಮ್ ದಿಂದ 5:30 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ ಐದು ಮೋಟರ್ ಸೈಕಲ್ ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರ ಮೋಟರ್ ಸೈಕಲ್ ಮಾಲಿಕರ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಬೆಕು ಅಂತ ಇದ್ದ ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 06/2022 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 07/2022 ಕಲಂ: 279, 338 ಐಪಿಸಿ : ಇಂದು ದಿ: 12/01/22 ರಂದು 7:30 ??ಎಮ್ಕ್ಕೆ ಶ್ರೀ ಪಿಳ್ಳಯ್ಯ ತಂದೆ ಚಂದ್ರಾಮ ಬೆವಿನಾಳ ವ|| 18 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಚಂದ್ಲಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೇನೆಂದರೆ, ದಿನಾಂಕ:11/12/2021 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಮ್ಮ ಸಂಬಂದಿಯಾದ ಭೀಮಾಶಂಕರ ತಂದೆ ಭೀಮರಾಯ ಬುಕ್ಕನವರ ವ|| 18 ವರ್ಷ ಇತನು ತನ್ನ ಖಾಸಗಿ ಕೆಲಸ ನಿಮಿತ್ಯ ಸುರಪುರಕ್ಕೆ ಹೊಗಿ ಬರೋಣ ನನ್ನ ಜೊತೆಗೆ ನೀನು ಬಾ ಅಂತಾ ಕರೆದಿದ್ದಕ್ಕೆ ನಾನು ಆಯಿತು ಹೊಗೋಣ ಅಂತಾ ಹೇಳಿ ಭೀಮಶಂಕರನ ಸ್ಪ್ಲೆಂಡರ ಪ್ರೋ ಮೋಟರ್ ಸೈಕಲ್ ನಂ. ಕೆಎ-51 ಇಕೆ-2748 ನೇದ್ದರ ಮೇಲೆ ಕುಳಿತುಕೊಂಡಿದ್ದು ಮೋಟರ್ ಸೈಕಲ್ನ್ನು ಭೀಮಾಶಂಕರ ಇತನು ನಡೆಸುತ್ತಿದ್ದನು. ಭೀಮಾಶಂಕರನು ರೋಡಿನ ಎಡಬಾಗದಲ್ಲಿ ನಿದಾನವಾಗಿ ಚಲಾಯಿಸುತ್ತಾ ಸುರಪುರ-ಚಂದ್ಲಾಪುರ ರಸ್ತೆಯ ಚಂದ್ಲಾಪುರ ಹಳ್ಳದ ಹತ್ತಿರ 7:15 ಗಂಟೆ ಸುಮಾರಿಗೆ ಹೊರಟಾಗ ಸುರಪುರ ಕಡೆಯಿಂದ ಎದರಿನಿಂದ ಒಂದು ಬೋಲೋರೋ ವಾಹನ ನಂ. ಕೆಎ-36 ಬಿ-1049 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ್ ಸೈಕಲ್ಗೆ ಡಿಕ್ಕಿ ಪಡಿಸಿದ್ದು ಆಗ ನಾವು ಮೋಟರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದೆವು. ನನಗೆ ಬಲಗಾಲ ಮೋಳಕಾಲ ಮುರಿದಂತಾಗಿ ಸಂಪೂರ್ಣ ಪಾದದವರೆಗೆ ನುಜ್ಜುಗುಜ್ಜಾಗಿದ್ದು ಮತ್ತು ಬಲಗಡೆ ಬಾಯಿ ಹತ್ತಿರ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಭೀಮಾಶಂಕರನಿಗೆ ನೊಡಲಾಗಿ ಬಲಗಾಲ ಮೊಳಕಾಲ ಮುರಿದಂತಾಗಿ ಪಾದದ ಬಳಿ ನುಜ್ಜುಗುಜ್ಜಾಗಿ ಪಾದದ ಬೆರಳು ಕಟ್ಟಾಗಿದ್ದವು, ತಲೆಯ ಹಿಂಬಾಗದಲ್ಲಿ ಭಾರಿ ಒಳಪೆಟ್ಟಾಗಿರುತ್ತದೆ. ಅಲ್ಲೆ ಹೊರಟಿದ್ದ ರಾಜು ತಂದೆ ಹನಮಂತ ಗುಜ್ಜಲ್ ಮತ್ತು ಮರಲಿಂಗ ತಂದೆ ಸೀನಪ್ಪಗೌಡ ಬಿರಾದಾರ ಇಬ್ಬರು ಕೂಡಿ ನಮ್ಮ ಹತ್ತಿರ ಬಂದು ನಮ್ಮನ್ನು ನೊಡಿ ನನ್ನ ತಂದೆಗೆ ಪೋನ ಮಾಡಿ ಅಪಘಾತವಾದ ವಿಷಯ ತಿಳಿಸಿದರು. ಬೊಲೇರೋ ವಾಹನದ ಚಾಲಕನ ಹೆಸರು ಪರಶುರಾಮ ತಂದೆ ಭೀಮಪ್ಪ ಪುಜಾರಿ ಸಾ|| ಸೂಗುರ ಅಂತಾ ಗೊತ್ತಾಯಿತು. ನಂತರ ನನ್ನ ತಂದೆ ಮತ್ತು ಗುರುರಾಜ ತಂದೆ ಮಲ್ಲಪ್ಪ ಗುಜ್ಜಲ್ ಇಬ್ಬರು ಒಂದು ಖಾಸಗಿ ವಾಹನ ತಗೆದುಕೊಂಡು ನಮ್ಮ ಬಳಿ ಬಂದು ನಮ್ಮನ್ನು ಅದೇ ವಾಹನದಲ್ಲಿ ಸುರಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ನಂತರ ವೈದ್ಯರ ಸಲಹೇಯಂತೆ ಕಲಬುರಿಗಿಯ ಕಾಮರೆಡ್ಡಿ ಆಸ್ಪತ್ರೆಗೆ ದಾಖಲಿಸಿದ್ದು ಉಪಚಾರ ಪಡೆದುಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲಿಸಿರುತ್ತೇನೆ. ಕಾರಣ ಅಪಘಾತ ಪಡಿಸಿದ ಬೊಲೆರೋ ವಾಹನ ನಂ. ಕೆಎ-36 ಬಿ-1049 ನೇದ್ದರ ಚಾಲಕ ಪರಶುರಾಮ ತಂದೆ ಭೀಮಪ್ಪ ಪುಜಾರಿ ಸಾ|| ಸೂಗುರ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 07/2022 ಕಲಂ: 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 13-01-2022 05:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080