ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-01-2023
ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 02/2023 ಕಲಂ 279, 337, 304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿಎಕ್ಟ್: ಇಂದುದಿನಾಂಕ:12/01/2023 ರಂದು 8.15 ಎ.ಎಮ್. ಸುಮಾರಿಗೆ ಮೃತನುಇತರ ಕೂಲಿ ಜನರೊಂದಿಗೆಆರೋಪಿತನಾದ ಭೀಮರಾಯಈತನಗೂಡ್ಸ್ ವಾಹನ ನಂ:ಕೆಎ-31, 2154 ನೇದ್ದರಲ್ಲಿ ಕುಳಿತು ಶಿರವಾಳ ಸೀಮಾಂತರದ ಸಿ.ಎಸ್.ಪಾಟಿಲ್ ಇವರ ಹೊಲದ ಹತ್ತಿರ ಶಹಾಪೂರ-ಶಿರವಾಳ ರಸ್ತೆಯ ಮೇಲೆ ಶಿರವಾಳ ಕಡೆಗೆ ಸೆಂಟ್ರಿಂಗ್ ಕೆಲಸಕ್ಕೆ ಹೊರಟಾಗಆರೋಪಿತನುತನ್ನಗೂಡ್ಸ್ ವಾಹನವನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿದ್ದರಿಂದ ಗೂಡ್ಸ್ ವಾಹನ ಚಾಲಕನ ನಿಯಂತ್ರಣತಪ್ಪಿರಸ್ತೆಯಎಡಬದಿಯಲ್ಲಿ ಪಲ್ಟಿಯಾಗಿ ಬಿದ್ದುಅಪಘಾತವಾಗಿದ್ದು ಸದರಿಅಪಘಾತದಲ್ಲಿ ಮೃತನಎದೆಗೆ, ಹೊಟ್ಟೆಗೆ ಮತ್ತು ಸೊಂಟಕ್ಕೆ ಭಾರಿ ಗುಪ್ತಗಾಯಗಳಾಗಿ, ಬಾಯಿಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನುಳಿದವರಿಗೆ ಸಾದಾ ಗುಪ್ತಗಾಯಗಳಾಗಿದ್ದು ಆರೋಪಿತನುತನ್ನ ವಾಹನವನ್ನು ಬಿಟ್ಟು ಓಡಿ ಹೋದ ಬಗ್ಗೆ ದೂರು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 11/2023 ಕಲಂ 323, 392, 504, 506 ಸಂಗಡ 34 ಐ.ಪಿ.ಸಿ: ಇಂದು ದಿನಾಂಕ 12/01/2023 ರಂದು ರಾತ್ರಿ 20-15 ಗಂಟೆಗೆ ಅಜರ್ಿದಾರರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 06/01/2023 ರಂದು ಗೌಡುರ ಸೀಮಾಂತರದ ಮರಳು ಡಕ್ಕಾದಲ್ಲಿ ಟಿಪ್ಪರ ನಂ. ಕೆಎ-32-ಎಎ-1460 ನೇದ್ದು ಚಲಾಯಿಸಿಕೊಂಡು ಮರಳು ಲೋಡ ಮಾಡಿಕೊಂಡು ಬರಲು ಹೋಗಿದ್ದು, ಮರಳು ಲೋಡ ಮಾಡದ ಕಾರಣ ಟಿಪ್ಪರ ಡಕ್ಕಾದಲ್ಲಿಯೇ ನಿಲ್ಲಿಸಿ ಟಿಪ್ಪರದಲ್ಲಿ ಮಲಗಿಕೊಂಡಿದ್ದಾಗ, ದಿನಾಂಕ 07/01/2023 ರಂದು ಬೆಳಗಿನ ಜಾವ 03-00 ಗಂಟೆಗೆ ಆರೋಪಿ ನಂ 1 ರಿಂದ 3 ನೇದ್ದವರು ಅಲ್ಲಿಗೆ ಬಂದು ಫಿಯರ್ಾದಿಯ ಟಿಪ್ಪರಗೆ ಬಡಿದು ಎಬ್ಬಿಸಿ ಕೆಳಗಡೆ ಇಳಿಸಿ ಅವಾಚ್ಯ ಶಬ್ದಗಳಿಂದ ಬೈದು ಟಿಪ್ಪರ ಮೇಲೆ ಕೇಸ್ ಆಗಿದೆ ಜೇವಗರ್ಿ ಪಿ.ಎಸ್.ಐ ರವರು ಒದ್ದು ನಿನ್ನನ್ನುಎತ್ತಿಹಾಕಿಕೊಂಡು ಬಾ ಅಂತಾ ಹೇಳಿದ್ದಾರೆ ಅಂತಾ ತಿಳಿಸಿ ಆರೋಪಿ ನಂ 1 ರಿಂದ 3 ನೇದ್ದವರು ಫಿಯರ್ಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಆತನ ಹತ್ತಿರವಿದ್ದ 64,000 ನಗದು ಹಣ ಮತ್ತು ಒಂದು ಮೊಬಾಯಿಲ್, 15 ಗ್ರಾಂ ಬಂಗಾರದ ಚೈನ್ ಅಂ.ಕಿ 75,000-00 ರೂಪಾಯಿ ಮತ್ತು ಟಿಪ್ಪರ ನಂ ಕೆಎ-32-ಎಎ-1460 ನೇದ್ದು ಅಂ.ಕಿ 15,00000-00 ರೂ ಮೌಲ್ಯದ ವಾಹನ ತೆಗೆದುಕೊಂಡು ಹೋಗುವಾಗ ಫಿಯರ್ಾದಿಯವರಿಗೆ ಜೀವ ಬೆದರಿಕೆ ಹಾಕಿರತ್ತಾರೆ ಅಂತಾ ಫಿಯರ್ಾದಿಯವರ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 05/2023 ಕಲಂ 279, 338 ಐಪಿಸಿ: ಇಂದು ದಿನಾಂಕ 12.01.2023 ರಂದು ಮಧ್ಯಾಹ್ನ 2 ಗಂಟೆಗೆ ಅರವಿಂದ ತಂದೆ ಬಲ್ಲು, ವ|| 25 ವರ್ಷ, ಜಾ|| ದನಗರ, ಉ|| ವ್ಯಾಪಾರ, ಸಾ|| 117 ರಿರ್ವಾ ಗ್ರಾಮ, ತಾ|| ಊರೈ, ಜಿ|| ಜಲೌನ್ ಉತ್ತರಪ್ರದೇಶ, ಹಾ||ವ|| ಇಂದ್ರನಗರ ಸೈದಾಪೂರ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 10.01.2023 ರಂದು ಸಂಜೀವ ತಂದೆ ರಾಂಪ್ರಕಾಶ ಈತನು ಗೊಂದಡಗಿ ಕಡೆಯಿಂದ ನನ್ನ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಸೈದಾಪೂರ ಕಡೆಗೆ ಬರುವಾಗ ಮುನಗಲ್ ಗ್ರಾಮ ಸಮೀಪ ರಸ್ತೆಯ ಮೇಲೆ ಸೈದಾಪೂರ ಕಡೆಯಿಂದ ಆಟೋ ಚಲಾಯಿಸಿಕೊಂಡು ಬಾಡಿಯಾಳ ಕಡೆಗೆ ಹೋಗುತ್ತಿದ್ದ ಆಟೋ ಚಾಲಕ ಇಬ್ಬರೂ ತಮ್ಮ ತಮ್ಮ ವಾಹನಗಳನ್ನು ವೇಗವಾಗಿ ಓಡಿಸುತ್ತ ರೋಡಿನ ಮಧ್ಯ ಭಾಗದಲ್ಲಿ ಮುಖಾಮುಖಿ ಆದಿನ ರಾತ್ರಿ 9 ಗಂಟೆ ಸುಮಾರಿಗೆ ಡಿಕ್ಕಿಪಡಿಸಿಕೊಂಡಿರುತ್ತಾರೆ. ಕಾರಣ ಆಟೋ ಚಾಲಕ ದೇವಪ್ಪ ಬಾಡಿಯಾಳ ಮತ್ತು ಮೋಟಾರ್ ಸೈಕಲ್ ಸವಾರ ಸಂಜೀವ ತಂದೆ ರಾಂಪ್ರಕಾಶ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ ಅಂತಾ ವಗೈರೆ ಆಪಾದನೆ.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 06/2023 ಕಲಂ 379 ಐಪಿಸಿ: ಇಂದು ದಿನಾಂಕ 12.01.2023 ರಂದು ಮಧ್ಯಾಹ್ನ 4-30 ಗಂಟೆಗೆ ಗಂಗಮ್ಮ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಮೂಲ ಜಪ್ತಿ ಪಂಚನಾಮೆಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 06/2023 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 03/2023 ಕಲಂ 78(3) ಕೆ.ಪಿ. ಎಕ್ಟ್: ಇಂದು ದಿನಾಂಕ:12/01/2023 ರಂದು 04.00 ಪಿ.ಎಮ್. ಕ್ಕೆ ಭೀ.ಗುಡಿಯ ಬಾಪುಗೌಡಚೌಕ್ ಹತ್ತಿರಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಫಿಯರ್ಾದಿದಾರರಿಗೆ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿಆರೋಪಿತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿಕರೆದು ಬಾಂಬೆ ಕಲ್ಯಾಣ ಮಟಕಾದೈವದ ಆಟ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬರ್ರಿ ನಂಬರ ಬರೆಯಿಸಿರಿ ಅಂತಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿಅವನಿಂದ 1) ನಗದು ಹಣರೂಪಾಯಿ 1200=00, 2) ಒಂದು ಮಟಕಾ ನಂಬರ ಬರೆದಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳು 04.45 ಪಿ.ಎಮ್ ದಿಂದ 05.45 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು 06.00 ಪಿ.ಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 03/2023 ಕಲಂ: 279 ಐಪಿಸಿ: ಇಂದು ದಿನಾಂಕ 12/01/2023 ರಂದು 10.30 ಎಎಂ ಕ್ಕೆ ಅಜರ್ಿದಾರರಾದ ರವಿ ತಂದೆ ಸಿದ್ರಾಮಪ್ಪ ಆಸಂಗಿ ವ|| 27ವರ್ಷ ಜಾ|| ಮಾಲಗಾರ ಉ|| ವ್ಯಾಪಾರ ಸಾ|| ತಾಂಬಾ ತಾ|| ಇಂಡಿ ಜಿ|| ವಿಜಯಪೂರ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನನ್ನದು ಸ್ವಂತ ಗೂಡ್ಸ ವಾಹನ ಕ್ಯಾಂಟರ್ ನಂ ಕೆಎ 28 ಎಎ 1868 ನೇದ್ದು ಇದ್ದು ನನ್ನ ಕ್ಯಾಂಟರನಲ್ಲಿ ವಿವಿಧ ಸರಕು ಮತ್ತು ಸಾಮಾನುಗಳನ್ನು ಬಾಡಿಗೆಗೆ ಸಾಗಿಸುತ್ತಾ ಇದ್ದೇವೆ. ನಮ್ಮ ವಾಹನಕ್ಕೆ ನಮ್ಮ ತಮ್ಮನಾದ ರಾಜಕುಮಾರ ತಂದೆ ಸಿದ್ರಾಮಪ್ಪ ಆಸಂಗಿ ಈತನು ಚಾಲಕನಾಗಿದ್ದು ವಾಹನ ಚಲಾಯಿಸಿಕೊಂಡು ಹೋಗುತ್ತಾನೆ. ಹೀಗಿದ್ದು ದಿನಾಂಕ 08/01/2023 ರಂದು ವಿಜಯಪೂರದಿಂದ ನಿಂಬೆಕಾಯಿ ತುಂಬಿಕೊಂಡು ಗುಜರಾತನ ವಲಶೆಡ್ ಪಟ್ಟಣಕ್ಕೆ ಬಾಡಿಗೆಗೆ ತೆಗೆದುಕೊಂಡು ಹೋಗಿ ನಿಂಬೆಕಾಯಿ ಖಾಲಿ ಮಾಡಿ ಮರಳಿ ಊರಿಗೆ ಬರುವಾಗ ಗುಜರಾತನ ವಿ.ಕೆ ಟ್ರಾನ್ಸಪೋರ್ಟ ಕಂಪನಿಯವರು ತನ್ನ ಟ್ರಾನ್ಸಪೋರ್ಟ ವತಿಯಿಂದ ಕೇಬಲ್ ತೆಗೆದುಕೊಂಡು ಹೋಗಿ ಕನರ್ಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಕಡೇಚೂರ ಗ್ರಾಮಕ್ಕೆ ಹೋಗಬೇಕು ಅಂತಾ ಆರ್ಡರ್ ಕೊಟ್ಟಿದ್ದರಿಂದ ಟ್ರಾನ್ಸಪೋರ್ಟ ಕಂಪನಿಯವರ ವತಿಯಿಂದ ಬಾಡಿಗೆಗೆ ನಮ್ಮ ಕ್ಯಾಂಟರ ವಾಹನವನ್ನು ತೆಗೆದುಕೊಂಡು ಅದರಲ್ಲಿ ಕೇಬಲ್ ಹಾಕಿಕೊಂಡು ದಿನಾಂಕ 10/01/2023 ರಂದು ಗುಜರಾತನ ವಾಪಿಯಿಂದ ಯಾದಗಿರಿ ಜಿಲ್ಲೆಯ ಕಡೇಚೂರ ಗ್ರಾಮಕ್ಕೆ ಹೋಗುವ ಕುರಿತು ವಾಹನದಲ್ಲಿ ಚಾಲಕನಿಗೆ ಸಹಾಯಕ್ಕಾಗಿ ನಾನು ಎಡಗಡೆಗೆ ಕುಳಿತಿದ್ದು ರಾಜಕುಮಾರ ಈತನು ವಾಹನ ಚಲಾಯಿಸುತ್ತಾ ಹೊರಟಿದ್ದು, ನಾವು ಇಬ್ಬರೂ ಕೂಡಿ ವಾಹನ ತೆಗೆದುಕೊಂಡು ನಿನ್ನೆ ದಿನಾಂಕ 11/01/2023 ರಂದು ರಾತ್ರಿ 10.00 ಗಂಟೆಗೆ ತಾಂಬಾಕ್ಕೆ ಬಂದು ಅಲ್ಲಿಂದ ಊಟ ಮಾಡಿ ರಾತ್ರಿ 11.30 ಗಂಟೆಗೆ ಹೊರಟು ಸಿಂದಗಿ ಶಹಾಪೂರ ಮುಖಾಂತರ ಯಾದಗಿರಿ ಕಡೆಗೆ ಹೋಗುತ್ತಿದ್ದಾಗ ಇಂದು ದಿನಾಂಕ 12/01/2023 ರಂದು ಬೆಳಿಗ್ಗೆ 4.00 ಎಎಂ ಸುಮಾರಿಗೆ ಸುರಪೂರ ತಾಲೂಕಿನ ಹದನೂರ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ವಾಹನ ಚಾಲಕನಾದ ರಾಜಕುಮಾರನು ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿದ್ದು ಹದನೂರ ಗ್ರಾಮ ಇನ್ನೂ 200 ಮೀಟರ ಅಂತರದಲ್ಲಿದ್ದಾಗ ರಸ್ತೆಯ ಮೇಲೆ ಒಂದು ನಾಯಿ ಅಡ್ಡ ಬಂದಿದ್ದರಿಂದ ನಾಯಿಗೆ ಹಾಯುವುದನ್ನು ತಪ್ಪಿಸಲು ಹೋಗಿ ನಮ್ಮ ವಾಹನ ನಂ ಕೆಎ 28 ಎಎ 1868 ನೇದ್ದರ ಚಾಲಕನಾದ ರಾಜಕುಮಾರನು ವಾಹನವನ್ನು ಒಮ್ಮೆಲೇ ಕಟ್ ಹೊಡೆದಿದ್ದರಿಂದ ನಮ್ಮ ಗೂಡ್ಸ್ ವಾಹನವು ರಸ್ತೆಯ ಪಕ್ಕದಲ್ಲಿ ಬಲಗಡೆಗೆ ಪಲ್ಟಿಯಾಗಿ ಬಿದ್ದಿದ್ದು ಚಾಲಕನಾದ ರಾಜಕುಮಾರನು ವಾಹನದಿಂದ ಕೆಳಗೆ ಜಿಗಿದಿದ್ದು ಅವನಿಗೂ ಯಾವುದೇ ಗಾಯಗಳಾಗಲಿಲ್ಲ. ವಾಹನದಲ್ಲಿ ಎಡಗಡೆಗೆ ಕುಳಿತಿದ್ದ ನನಗೂ ಅಷ್ಟೊಂದು ಗಾಯಗಳಾಗದ ಕಾರಣ ಆಸ್ಪತ್ರೆಗೆ ತೋರಿಸಿಕೊಂಡಿಲ್ಲ. ಆದರೆ ನಮ್ಮ ವಾಹನವು ಪಲ್ಟಿಯಾಗಿ ಬಲಭಾಗದಲ್ಲಿ ನುಜ್ಜುಗುಜ್ಜಾಗಿ ವಾಹನ ಸ್ವಲ್ಪ ಮಟ್ಟಿಗೆ ಜಖಂಗೊಂಡಂತೆ ಆಗಿರುತ್ತದೆ. ಕಾರಣ ನಮ್ಮ ಟಾಟಾ ಕ್ಯಾಂಟರ ಗೂಡ್ಸ್ ವಾಹನ ನಂ ಕೆಎ 28 ಎಎ 1868 ನೇದ್ದರಲ್ಲಿ ಕೇಬಲ್ ಇಳಿಸಿ ಬರಲು ಯಾದಗಿರಿ ಜಿಲ್ಲೆಯ ಕಡೇಚೂರ ಗ್ರಾಮಕ್ಕೆ ಹೋಗುತ್ತಿದ್ದಾಗ ವಾಹನ ಚಾಲಕನಾದ ರಾಜಕುಮಾರ ತಂದೆ ಸಿದ್ರಾಮಪ್ಪ ಆಸಂಗಿ ಸಾ|| ತಾಂಬಾ ಈತನು ಹದನೂರ ಗ್ರಾಮದ ಹತ್ತಿರ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮೆಲೇ ಕಟ್ ಹೊಡೆದು ಪಲ್ಟಿ ಮಾಡಿದ್ದರಿಂದ ವಾಹನ ಜಖಂಗೊಂಡಂತೆ ಆಗಿದ್ದು ಯಾರಿಗೂ ಗಾಯವಾಗಿಲ್ಲ. ಆದ್ದರಿಂದ ಅಪಘಾತ ಮಾಡಿದ ಗೂಡ್ಸ್ ವಾಹನ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 03/2023 ಕಲಂ 279 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 01/2023 78 (3) ಕೆ.ಪಿ ಯಾಕ್ಟ: ದಿನಾಂಕ:12/01/2023 ರಂದು 16.25 ಪಿ.ಎಮ್ ಕ್ಕೆ, ಶ್ರೀ. ಚಿದಾನಂದ ಸೌದಿ ಪಿಎಸ್ಐ (ಕಾ.ಸು) ಹುಣಸಗಿ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆನಕನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:01/2023 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆನಂತರ ಪಿಎಸ್ಐ ಸಾಹೇಬರು ರವರು 18.45 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 920/- ರೂ.ಗಳು, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ 19.00 ಪಿ.ಎಮ್ ಕ್ಕೆ ಆದೇಶ ನೀಡಿದ್ದು,್ದ ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 02/2023 323, 324, 504, 506 ಸಂಗಡ 34 ಐಪಿಸಿ:ಫಿರ್ಯಾದಿಯ & ಫಿರ್ಯಾದಿಯ ಅಣ್ಣನಾದ ಗೌಡಪ್ಪಗೌಡ (ಆರೋಪಿ ನಂ:1) ಇವರ ನಡುವೆ ಹೊಲ ಹಂಚಿಕೆಯ ಸಂಬಂದ ತಕರಾರು ನಡೆದಿದ್ದು, ನ್ಯಾಯಾಲಯದಲ್ಲಿ ದಾವೆ ನಡೆದಿದ್ದು ಇರುತ್ತದೆ. ನಿನ್ನೆ ದಿನಾಂಕ:11/01/2023 ರಂದು ಫಿರ್ಯಾದಿಗೆ ಗೌಡಪ್ಪಗೌಡ ಈತನು ಹೊಲ ಹಂಚಿಕೆ ಮಾಡಿಕೊಡು ಅಂತಾ ತಕರಾರು ಮಾಡಿದ್ದು, ಫಿರ್ಯಾದಿಯು ನ್ಯಾಯಾಲಯದಲ್ಲಿ ದಾವೆ ನಡೆದಿದೆ, ದಾವೆ ಮುಗಿದ ನಂತರ ಎಲ್ಲ ಅಣ್ಣತಮ್ಮಂದಿರಿಗೆ ಸಮನಾಗಿ ಹಂಚಿಕೆ ಮಾಡೋಣ ಅಂತಾ ಅಂದಿದ್ದು ಇರುತ್ತದೆ. ಇಂದು ದಿನಾಂಕ:12/01/2023 ರಂದು ಬೆಳಿಗ್ಗೆ 8.00 ಗಂಟೆಗೆ ಫಿರ್ಯಾದಿಯು ತನ್ನ ಹಿರಿಯ ಅಣ್ಣನೊಂದಿಗೆ ಹೊಲ ಹಂಚಿಕೆಯ ವಿಷಯವಾಗಿ ಮಾತಾಡುತ್ತಿದ್ದಾಗ ಆರೋಪಿತರೆಲ್ಲರೂ ಸೇರಿ ಫಿರ್ಯಾದಿಗೆ ಮಗನೆ ನಿಂದು ಬಹಳಾಗ್ಯಾದ್ ಅಂತಾ ಅನ್ನುತ್ತಾ ಕೈಯಲ್ಲಿ ಬಡಿಗೆ & ಕಲ್ಲುಗಳು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿಯ ಮಗನಿಗೆ ಬಡಿಗೆಯಿಂದ ಬಲಗೈಗೆ ಹೊಡೆದು ರಕ್ತಗಾಯ ಮಾಡಿದ್ದು, ಅಲ್ಲದೆ ಫಿರ್ಯಾದಿಯ ಅಳಿಯನಿಗೆ ತಲೆಗೆ ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಅಪರಾಧ.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 06/2023 ಕಲಂ: 143, 147, 148, 341, 323, 324, 307, 427, 354, 448, 504, 506 ಸಂಗಡ 149 ಐಪಿಸಿ: ಇಂದು ದಿ: 12/01/23 ರಂದು 10:00 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ನಿಂಗಪ್ಪ ತಂದೆ ಭೀಮಣ್ಣ ಮಟ್ಲರ ವಯಾ|| 45 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಮಟ್ಲರ ಓಣಿ ಲಕ್ಷ್ಮೀಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ಲಕ್ಷ್ಮೀಪುರ ಗ್ರಾಮದ ಸೀಮೆಯಲ್ಲಿ ಬರುವ ಮರಡಿ ಮಲ್ಲಿಕಾಜರ್ುನ ಶ್ರೀಗಿರಿ ಸಂಸ್ಥಾನ ಕಲ್ಯಾಣ ಮಂಟಪದಲ್ಲಿ ಕಳೆದ ದಿನಾಂಕ: 02/01/2023 ರಿಂದ 21 ದಿನಗಳ ಕಾಲ ಪುರಾಣ ಪ್ರವಚನ ಕಾರ್ಯಕ್ರಮಗಳು ನಡೆದಿರುತ್ತವೆ. ಪುರಾಣ ಪ್ರವಚನವು ಪ್ರತಿದಿನ ರಾತ್ರಿ 8 ಗಂಟೆಯಿಂದ 11 ಗಂಟೆಯವರೆಗೆ ನಡೆಯುತ್ತಿದ್ದು, ನಾನು ಕೂಡ ಪುರಾಣ ಕೇಳಲು ಅಲ್ಲಿಗೆ ಹೋಗುತ್ತಿದ್ದೆನು. ಅದರಂತೆ ದಿನಾಂಕ: 10/01/2023 ರಂದು ರಾತ್ರಿ 8 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣತಮಕಿಯ ಅಮಲಯ್ಯ ತಂದೆ ಹಣಮಯ್ಯ ಮಟ್ಲರ, ಹಣಮಯ್ಯ ತಂದೆ ಗುಂಡಪ್ಪ ಮಟ್ಲರ ಎಲ್ಲರು ಕೂಡಿ ಪುರಾಣ ಕೇಳಲು ಹೋಗಿದ್ದೆವು. ಪುರಾಣ ನಡೆದ ಸಮಯದಲ್ಲಿ ಹಾಡು ಹಾಡುವ ವಿಷಯದಲ್ಲಿ ನಮ್ಮ ಜನಾಂಗದ ಯಂಕೋಬ ತಂದೆ ಮುನಿಯಪ್ಪ ಶುಕ್ಲಾ ಈತನಿಗೂ ಹಾಗೂ ನಮ್ಮೂರ ಮಾದಿಗ ಜನಾಂಗದ ಮಲ್ಲಿಕಾಜರ್ುನ ತಂದೆ ಶಿವಪ್ಪ ಕಡಿಮನಿ ಇತನ ಕಡೆಯವರ ಮದ್ಯ ಬಾಯಿ ಮಾತಿನ ತಕರಾರು ನಡೆದಾಗ ನಾವೆಲ್ಲರು ಹೋಗಿ ಬಗೆಹರಿಸಿ ಮನೆಗೆ ಕಳುಹಿಸಿದ್ದೆವು. ಹೀಗಿದ್ದು ನಿನ್ನೆ ದಿನಾಂಕ:11/01/2023 ರಂದು ರಾತ್ರಿ 12-30 ಗಂಟೆ ಸುಮಾರಿಗೆ ನಾನು, ನನ್ನ ಹೆಂಡತಿಯಾದ ದುರ್ಗಮ್ಮ ಇಬ್ಬರು ನಮ್ಮ ಮನೆಯಲ್ಲಿ ಮಲಗಿದ್ದಾಗ ಯಾರೋ ನಮ್ಮ ಮನೆಯ ಬಾಗಿಲು ಬಾರಿಸಿದಾಗ ನಾನು ಮತ್ತು ನನ್ನ ಹೆಂಡತಿ ಇಬ್ಬರು ಎಚ್ಚರಗೊಂಡು ಮನೆಯ ಬಾಗಿಲು ತೆಗೆದಾಗ ನಮ್ಮೂರ ಮಾದಿಗ ಜನಾಂಗದವರಾದ 1) ಮಲ್ಲಿಕಾಜರ್ುನ ತಂದೆ ಶಿವಪ್ಪ ಕಡಿಮನಿ 2) ರಾಯಪ್ಪ ತಂದೆ ಹಣಮಂತ ಚೌಡೇಶ್ವರಿಹಾಳ 3) ಚಿದಾನಂದ ತಂದೆ ಯಲ್ಲಪ್ಪ ಕಡಿಮನಿ 4) ಮಲಕಪ್ಪ ತಂದೆ ಯಲ್ಲಪ್ಪ ಕಡಿಮನಿ 5) ಭೀಮರಾಯ ತಂದೆ ಮರಿಗೆಪ್ಪ ಕಡಿಮನಿ 6) ಲಕ್ಷ್ಮಣ ತಂದೆ ಮಲ್ಲಪ್ಪ ಕಡಿಮನಿ 7) ಗಂಟೆಪ್ಪ ತಂದೆ ಯಲ್ಲಪ್ಪ ಕಡಿಮನಿ 8) ಬಸವರಾಜ ತಂದೆ ಯಲ್ಲಪ್ಪ ಕಡಿಮನಿ 9) ಯಲ್ಲಪ್ಪ ತಂದೆ ಹಣಮಂತ ಕಡಿಮನಿ 10) ಮಲ್ಲಪ್ಪ ತಂದೆ ಯಲ್ಲಪ್ಪ ಕಡಿಮನಿ 11) ಪರಶುರಾಮ ತಂದೆ ತೋಮರೆಪ್ಪ ಕಡಿಮನಿ 12) ಶಿವರಾಜ ತಂದೆ ಕಜ್ಜಪ್ಪ ಕಜ್ಜನೋರ 13) ಮಲ್ಲಿಕಾಜರ್ುನ ತಂದೆ ಹಣಮಂತ ಸೂಗುರ 14) ಗೋಪಾಲ ತಂದೆ ಚಂದಪ್ಪ ಕಡಿಮನಿ 15) ಭೀಮಪ್ಪ ತಂದೆ ಬೋಜಪ್ಪ ಕಡಿಮನಿ 16) ಭೀಮರಾಯ ತಂದೆ ಪಿಚ್ಚೆಮರಿಗೆಪ್ಪ 17) ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಚೌಡೇಶ್ವರಹಾಳ 18) ಆಂಜನೇಯ ತಂದೆ ಯಲ್ಲಪ್ಪ ಕಜ್ಜನೋರ 19) ವಿಶ್ವರಾದ್ಯ ತಂದೆ ಮಾನಪ್ಪ ಸೂಗುರ 20) ಪ್ರವೀಣ ತಂದೆ ಯಲ್ಲಪ್ಪ ಕಡಿಮನಿ 21) ವೆಂಕಟೇಶ ತಂದೆ ಗುಂಡಪ್ಪ ಕಡಿಮನಿ ಈ ಎಲ್ಲರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲು, ಬಡಿಗೆ ಹಿಡಿದುಕೊಂಡು ಬಂದು ನಮ್ಮ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದು, ಅವರಲ್ಲಿಯ ಮಲ್ಲಿಕಾಜರ್ುನ ಈತನು ನನಗೆ ಏನಲೆ ಸೂಳೆಮಗನೆ ನಮ್ಮ ಹುಡುಗರು ಸ್ಟೇಜ ಮೇಲೆ ಹಾಡ ಹಾಡುವ ವಿಷಯದಲ್ಲಿ ಕಿರಿಕಿರಿ ಮಾಡಿಕೊಂಡಾಗ ನೀನು ಯಾಕೆ ಬಗೆಹರಿಸಿ ಕಳುಹಿಸಿದ್ದೀ ಸೂಳೆಮಗನೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಯಾಕೆ ಈ ರೀತಿ ಬೈಯುತ್ತೀರಿ ನಾನೇ ಜಗಳ ಬಿಡಿಸಿ ಕಳುಹಿಸೀನಿ ಅಂತ ಅಂದಾಗ ರಾಯಪ್ಪ ಚೌಡೇಶ್ವರಹಾಳ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಗೆ ಜೋರಾಗಿ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡು ಅಲ್ಲಿಂದ ಹೊರಗೆ ಓಡಿಹೋಗುತ್ತಿದ್ದಾಗ ಚಿದಾನಂದ ಕಡಿಮನಿ, ಮಲಕಪ್ಪ ಕಡಿಮನಿ, ಭೀಮರಾಯ ಕಡಿಮನಿ, ಲಕ್ಷ್ಮಣ ಕಡಿಮನಿ ಎಲ್ಲರು ನನಗೆ ತಡೆದು ನಿಲ್ಲಿಸಿ ನೆಲಕ್ಕೆ ಕೆಡವಿದಾಗ ಗಂಟೆಪ್ಪ ಕಡಿಮನಿ, ಬಸವರಾಜ ಕಡಿಮನಿ, ಯಲ್ಲಪ್ಪ ಕಡಿಮನಿ, ಮಲ್ಲಪ್ಪ ಕಡಿಮನಿ ಇವರು ಕಾಲಿನಿಂದ ನನ್ನ ಹೊಟ್ಟೆಗೆ ಬೆನ್ನಿಗೆ ಒದೆಯುತ್ತಿದ್ದಾಗ ನನ್ನ ಹೆಂಡತಿ ದುರ್ಗಮ್ಮ ಇವಳು ಬಿಡಿಸಲು ಬಂದಾಗ ಪರಶುರಾಮ ಕಡಿಮನಿ ಈತನು ನೀನ್ಯಾಕೆ ನಡಬರಕ ಬರತಿ ರಂಡಿ ಅಂತ ಅವಾಚ್ಯವಾಗಿ ಬೈದನು ಶಿವರಾಜ ಕಜ್ಜನೋರ ಹಾಗು ಮಲ್ಲಿಕಾಜರ್ುನ ಸೂಗುರ ಇವರಿಬ್ಬರು ಕೈಯಿಂದ ನನ್ನ ಹೆಂಡತಿಯ ಹೊಟ್ಟೆಗೆ ಬೆನ್ನಿಗೆ ಹೊಡೆದು ಸೀರೆ ಸೆರಗು ಹಿಡಿದು ಎಳೆದಾಡಿ ಅವಮಾನ ಮಾಡಿದರು. ನಾವು ಚೀರಾಡುವದನ್ನು ಕೇಳಿ ಬಾಜು ಮನೆಯವರಾದ ಅಮಲಯ್ಯ ತಂದೆ ಹಣಮಯ್ಯ ಮಟ್ಲರ, ಹಣಮಯ್ಯ ತಂದೆ ಗುಂಡಪ್ಪ ಮಟ್ಲರ, ತಿಮ್ಮಯ್ಯ ತಂದೆ ಮಾನಪ್ಪ ಗೋನಾಲ, ಯಲ್ಲಪ್ಪ ತಂದೆ ಹಣಮಯ್ಯ ಮಟ್ಲರ ಇವರೆಲ್ಲರು ಬಂದು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಅವರು ಹೊಡೆಯುವದನ್ನು ಬಿಟ್ಟು ಇವತ್ತು ಉಳಿದೀರಿ ಸೂಳೆಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜಿವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಮನೆಯಿಂದ ಹೊರಗೆ ಹೋಗಿದ್ದು ಯಲ್ಲಪ್ಪ ಮಟ್ಲರ ಮತ್ತು ಸಿದ್ದಯ್ಯ ತಂದೆ ಭೀಮರಾಯ ಶುಕ್ಲಾ ಇವರಿಬ್ಬರ ಮನೆಯ ಮುಂದೆ ನಿಲ್ಲಿಸಿದ ಮೋಟರ ಸೈಕಲ್ಗಳಿಗೆ ಗೋಪಾಲ ಕಡಿಮನಿ, ಭೀಮಪ್ಪ ಕಡಿಮನಿ, ಭೀಮರಾಯ ತಂದೆ ಪಿಚ್ಚೆಮರಿಗೆಪ್ಪ, ಮಲ್ಲಿಕಾಜರ್ುನ ಚೌಡೇಶ್ವರಿಹಾಳ, ಆಂಜನೆಯ ಕಜ್ಜನೋರ, ವಿಶ್ವರಾದ್ಯ ಸೂಗುರ, ಪ್ರವೀಣ ಕಡಿಮನಿ ಮತ್ತು ವೆಂಕಟೇಶ ಕಡಿಮನಿ ಈ ಎಲ್ಲರು ಕಲ್ಲು ಎತ್ತಿಹಾಕಿ ಮೋಟರ ಸೈಕಲ್ಗಳನ್ನು ಜಖಂಗೊಳಿಸಿ ಅಲ್ಲಿಂದ ಹೋದರು. ಸದರಿ ಜಗಳವನ್ನು ಲೈಟಿನ ಬೆಳಕಿನಲ್ಲಿ ನೋಡಿ ಗುತರ್ಿಸಿದೆನು. ನನಗೆ ಮತ್ತು ನನ್ನ ಹೆಂಡತಿಗೆ ಅಷ್ಟೇನು ಗಾಯಗಳು ಆಗಿರದ ಕಾರಣ ನಾವು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ಈ ಮೇಲಿನ ಎಲ್ಲರೂ ನಮಗೆ ಕೊಲೆ ಮಾಡುವ ಉದ್ದೇಶದಿಂದ ನಮ್ಮ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ, ಹೊಡೆಬಡೆ ಮಾಡಿ, ಅವಾಚ್ಯವಾಗಿ ಬೈದು, ಜೀವದ ಬೆದರಿಕೆ ಹಾಕಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 06/2023 ಕಲಂ: 143, 147, 148, 341, 323, 324, 307, 427, 354, 448, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.