ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/02/2021

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 10/2021 ಕಲಂ: 354, 447, 504, 506 ಐಪಿಸಿ : ಇಂದು ದಿನಾಂಕ 13/02/2021 ರಂದು ರಾತ್ರಿ 7:00 ಪಿ.ಎಂ ಕ್ಕೆ ಶ್ರೀಮತಿ ನೀಲಮ್ಮ ಗಂಡ ಸಾಹೇಬಣ್ಣ ಮೇಟಿ ವ:40 ವರ್ಷ ಉ:ಹೊಲಮನೆ ಕೆಲಸ ಜಾ:ಹಿಂದು ಕುರಬರ ತಾ:ಹುಣಸಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರು ಪಡಿಸಿದ್ದು ಅದರ ಸಾರಾಶವೆನೆಂದರೆ ನಮ್ಮದು ಯಣ್ಣಿವಡಗೇರಾ ಸೀಮಾಂತರದಲ್ಲಿ ಹೊಲ ಸವರ್ೇ ನಂ 73 ರಲ್ಲಿ 1 ಎಕರೆ 29 ಗುಂಟೆ ಜಮೀನು ಇದ್ದು ಈ ಜಮೀನು ನನ್ನ ಗಂಡನ ಅಣ್ಣ ಬಸಪ್ಪ ತಂದೆ ಜುಮ್ಮಣ್ಣ ಮೇಟಿ ರವರ ಹೆಸರಿನಲ್ಲಿ ಇದ್ದು ಅದರಲ್ಲಿ ನನ್ನ ಗಂಡ ಸಾಹೇಬಣ್ಣನದ್ದು ಜೆಂಟಿ ಇರುತ್ತದೆ ನನ್ನ ಗಂಡನ ಅಣ್ಣನಾದ ಬಸಪ್ಪನು ನಮಗೆ ಹೊಲದ ಕ್ಯಾನಲ್ ರೊಕ್ಕ ಬರುತ್ತವೆ ಅಂತಾ ಹೇಳಿ ನನಗೆ ಮತ್ತು ನನ್ನ ಗಂಡ ಸಾಹೇಬಣ್ಣನಿಗೆ ಹಾಗೂ ನನ್ನ ಮಗಳು ಬಸಮ್ಮಳಿಗೆ ಈಗ ಸುಮಾರು 4 ತಿಂಗಳ ಹಿಂದೆ ಸುರಪೂರ ತಹಶಿಲ್ ಆಪೀಸ್ಗೆ ಕರೆದುಕೊಂಡುಹೋಗಿ ನಮ್ಮದು ಸಹಿ ಮಾಡಿಸಕೊಂಡಿರುತ್ತಾನೆ ನಂತರ ದಿನಾಂಕ 05/02/2021 ರಂದು ನಾನು ಹಾಗೂ ನನ್ನ ಗಂಡ ಸಾಹೇಬಣ್ಣ ಹಾಗೂ ನನ್ನ ಮಗಳು ಬಸಮ್ಮ ರವರು ನಮ್ಮ ಹೊಲಕ್ಕೆ ಹೋದಾಗ ಮುಂಜಾನೆ 11:00 ಗಂಟೆಯ ಸುಮಾರಿಗೆ ನನ್ನ ಗಂಡನ ಅಣ್ಣನಾದ ಬಸಪ್ಪನು ನಮ್ಮ ಹೊಲದಲ್ಲಿ ಗಳೆ ಹೊಡೆಯುತ್ತಿದ್ದು ನಾವು ಹೊಲದಲ್ಲಿ ಹೋದಾಗ ನೀವು ಈ ಹೊಲದಲ್ಲಿ ಬರಬೇಡರಿ ಇದು ಹೊಲ ನಂದು ನೀವು ಅಲ್ಲೆ ನಿಲ್ಲರಿ ಅಂತಾ ನಮ್ಮನ್ನು ಹೊಲದಲ್ಲಿ ಬರದಂತೆ ತಡೆದು ನಿಲ್ಲಿಸಿದನು. ನಂತರ ನಾನು ಯಾಕಪ ಮಾಮ ಈ ಹೊಲದಲ್ಲಿ ನಮ್ಮದು ಪಾಲು ಇರುತ್ತದೆ ಅಂತಾ ಅಂದೆನು, ಅದಕ್ಕೆ ಅವನು ಇದು ಹೊಲ ನಂದು ಈ ಹೊಲವನ್ನು ನೀವು ನನಗೆ ಮಾರಿದ್ದಿರಿ ಅಂತಾ ಅಂದನು, ಅದಕ್ಕೆ ನಾನು ನಾವು ಹೊಲವನ್ನು ಮಾರಿರುವದಿಲ್ಲ ಅಂತಾ ಅಂದಾಗ ಬೋಸುಡಿ ಸೂಳಿ ಮೊನ್ನೆ ಮೂರು ಲಕ್ಷ ರೂಪಾಯಿ ತಗೆದುಕೊಂಡು ಹೊಲವನ್ನು ನನಗೆ ಮಾರಿ ಈಗ ಮತ್ತೆ ತಿರುಗಿ ಮಾತನಾಡುತ್ತಿಯಾ ಅಂತಾ ಅಂದು ನನಗೆ ಅವಾಚ್ಯವಾಗಿ ಮಾತನಾಡತೊಡಗಿದನು. ಆಗ ನಾನು ಈ ಹೊಲ ನಮ್ಮದು ನಾನು ಹೊಲ ಬಿಟ್ಟು ಹೊಗುವದಿಲ್ಲ ಅಂತಾ ಅಂದಾಗ ನನ್ನ ಗಂಡನ ಅಣ್ಣ ಬಸಪ್ಪನು ನನ್ನ ಸೀರೆ ಹಿಡಿದು ಎಳೆದಾಡಿ ಈ ಹೊಲವನ್ನು ಬಿಟ್ಟುಹೋಗು ಅಂತಾ ನನಗೆ ಅವಮಾನ ಮಾಡಿದ್ದು ಆಗ ನಾನು ಚೀರಾಡಲು ಅಲ್ಲಿಯೆ ಇದ್ದ ನನ್ನ ಗಂಡ ಸಾಹೆಬಣ್ಣ ಹಾಗೂ ನನ್ನ ಮಗಳು ಬಸಮ್ಮ ಹಾಗೂ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬೀಮಣ್ಣ ಚಲುವಾದಿ ರವರು ಬಂದು ಬಿಡಿಸಿದ್ದು ಆವಾಗ ನನ್ನ ಗಂಡನ ಅಣ್ಣನಾದ ಬಸಪ್ಪ ತಂದೆ ಜುಮ್ಮಣ್ಣ ಮೇಟಿ ರವರು ನನಗೆ ಬೋಸುಡಿ ಮಕ್ಕಳೆ ಇದು ಹೊಲ ನಂದು ಈ ಹೊಲದಲ್ಲಿ ಇನ್ನೊಮ್ಮೆ ನೀವು ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೊಗಿರುತ್ತಾನೆ. ಆದ ಕಾರಣ ನಮಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಸಿರೆ ಹಿಡಿದು ಎಳೆದಾಡಿ ಅವಮಾನ ಮಾಡಿ ಜೀವದ ಬೆದರಿಕೆ ಹಾಕಿದ ನನ್ನ ಗಂಡನ ಅಣ್ಣ ಬಸಪ್ಪ ತಂದೆ ಜುಮ್ಮಣ್ಣ ಮೇಟಿ ಈತನ ಮೇಲೆ ಕೇಸು ಮಾಡಬೇಕು ಈ ಜಗಳದಲ್ಲಿ ನನಗೆ ಯಾವುದೆ ಗಾಯಪೆಟ್ಟು ಆಗಿರುವದಿಲ್ಲ ನಾನು ಆಸ್ಪತ್ರೆಗೆ ಹೊಗುವದಿಲ್ಲ ನಾನು ಜಗಳದ ವಿಷಯವನ್ನು ನಮ್ಮ ಮನೆಯಲ್ಲಿ ವಿಚಾರಮಾಡಿಕೊಂಡು ಇಂದು ತಡವಾಗಿ ಬಂದು ಅಜರ್ಿ ನೀಡಿದ್ದು ಇರುತ್ತದೆ.ನೀಡಿದ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 10/2021 ಕಲಂ 354, 447, 504, 506. ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 32/2021 ಕಲಂ 109, 366 ಸಂ 149 ಐ.ಪಿ.ಸಿ : ಇಂದು ದಿನಾಂಕ 13/02/2021 ರಂದು ಸಂಜೆ 19-30 ಗಂಟೆಗೆ ಫಿಯರ್ಾದಿ ಶ್ರೀ ಶೇಖಪ್ಪ ತಂದೆ ಬಸಣ್ಣ ನಾಯ್ಕೋಡಿ ವಯ 45 ವರ್ಷ ಜಾತಿ ಕಬ್ಬಲಿಗ ಉಃ ಒಕ್ಕಲುತನ ಕೆಲಸ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ತನ್ನ ಮಗಳು ಶಿವಲೀಲಾ ವಯ 20 ವರ್ಷ ಇವಳು 10 ನೇ ತರಗತಿವರೆಗೆ ಓದಿಕೊಂಡು ಶಾಲೆ ಬಿಟ್ಟು ಹೊಲ ಮನೆ ಕೆಲಸ ಮಾಡಿಕೊಂಡು ತಮ್ಮ ಜೊತೆಯಲ್ಲಿರುತ್ತಾಳೆ. ಕೆಲವು ದಿನಗಳ ಹಿಂದೆ ಶಿವಲೀಲಾ ಇವಳು 2021 ನೇ ಸಾಲಿನ ಜನೆವರಿ ಕೊನೆಯ ವಾರದಲ್ಲಿ ನಮ್ಮ ಮುಂದೆ ಹೇಳಿದ್ದೇನೆಂದರೆ, ನಾನು ಹೊಲಕ್ಕೆ ಮತ್ತು ಬಟ್ಟೆ ತೊಳೆಯಲು ಹೋಗುತಿದ್ದಾಗ ಓಣಿಯ ನಮ್ಮ ಜಾತಿಯ ಮುದಕಪ್ಪ ತಂದೆ ಮಹಾದೇವಪ್ಪ ಕಟ್ಟಿಮನಿ ಇವನು ನಾನು, ನಿನ್ನನ್ನು ಪ್ರೀತಿಸುತಿದ್ದೇನೆ. ನೀನು ನನ್ನನ್ನು ಪ್ರೀತಿ ಮಾಡು, ನಿನ್ನನ್ನು ಮದುವೆಯಾಗುತ್ತೇನೆ ಅಂತ ಸತಾಯಿಸುತಿದ್ದಾನೆ ಅಂತ ಹೇಳಿದ್ದಳು, ಆಗ ನಾವು ವಿಚಾರಿಸುತ್ತೇವೆ ಅಂತ ಹೇಳಿ ತಮ್ಮ ಮಗಳಿಗೆ ಸಮಾಧನ ಪಡಿಸಿ ಕೆಲವು ದಿನಗಳ ವರೆಗೆ ಸುಮ್ಮನೇ ಇದ್ದರು. ಕುಮಾರಿ ಶಿವಲೀಲಾ ಇವಳು ದಿನಾಂಕ 06/02/2021 ರಂದು, ಸಾಯಂಕಾಲ 6-00 ಗಂಟೆಯ ಸುಮಾರಿಗೆ ತನ್ನ ಅಕ್ಕ ಲಕ್ಷ್ಮೀ ಇವಳೊಂದಿಗೆ ಮನೆಯ ಹಿಂದೆ ಇರುವ ಶೌಚಾಲಯಕ್ಕೆ ಹೋದಾಗ ನಮ್ಮ ಓಣಿಯ ಮುದಕಪ್ಪ ತಂದೆ ಮಹಾದೇವಪ್ಪ ಕಟ್ಟಿಮನಿ ಇವನು ತನ್ನ ಗೆಳೆಯ ಪರಶುರಾಮ ಈತನೊಂದಿಗೆ ಆಟೋ ನಂಬರ ಕೆಎ-33-ಎ-8990 ನೇದ್ದರಲ್ಲಿ ಬಂದು ತನ್ನ ಮಗಳು ಶಿವಲೀಲಾ ಇವಳಿಗೆ ಪ್ರೀತಿ ಮಾಡುವ ನೆಪವೊಡ್ಡಿ ಮದುವೆಯಾಗುತ್ತೇನೆಅಂತ ಹೇಳಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ತನ್ನ ಮಗಳು ಅಪಹರಣವಾಗಲು ಮುದಕಪ್ಪ ಮತ್ತು ಅವನಿಗೆ ಕುಮ್ಮಕ್ಕು ನೀಡಿದ ಅವನ ಕುಟುಂಬ ಮತ್ತು ಗೆಳೆಯರ ವಿರುದ್ದ ಕ್ರಮ ಕೈಕೊಂಡು ಅಪಹರಣಕ್ಕೀಡಾದ ತನ್ನ ಮಗಳು ಶಿವಲೀಲಾ ಇವಳನ್ನು ಪತ್ತೆ ಮಾಡಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 32/2021 ಕಲಂ 109, 366 ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಇತ್ತೀಚಿನ ನವೀಕರಣ​ : 14-02-2021 07:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080