ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-02-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 19/2022, ಕಲಂ, 341, 323,324,307, 504.506. ಸಂ.149 ಐ ಪಿ ಸಿ : ದಿನಾಂಕ: 12-02-2022 ರಂದು ಸಾಯಂಕಾಲ 06-30 ಗಂಟೆ ಸುಮಾರಿಗೆ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಎಮ್.ಎಲ್ ಸಿ ಇದೆ ಅಂತಾ ತಿಳಿಸಿದ ಮೇರೆಗೆ ನಾನು ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಗಾಯಾಳುಗಳನ್ನು ವಿಚಾರಿಸಿದ್ದು ಅವರಲ್ಲಿ ಒಬ್ಬ ಪಿಯರ್ಾಧಿ ನೀಡಿದ ಸಾರಂಶವೇನೆಂದರೆ ನಮ್ಮೂರಿನಲ್ಲಿ ನಮ್ಮ ಅಕ್ಕನ ಮಗನಾದ ಮಲ್ಲಿಕಾಜರ್ುನ ತಂದೆ ಮಲ್ಲಯ್ಯ ಇವರದ್ದು ಊರ ಮುಂದೆ ಜಾಗ ಇದ್ದು ಜಾಗದ ಸಂಬಂಧ ನಮ್ಮ ಮಲ್ಲಿಕಾಜರ್ುನ ಮತ್ತು ಆತನ ಅಣ್ಣತಮ್ಮರಾದ ಮಲ್ಲಿಕಾಜರ್ುನ ತಂದೆ ಸಾಬಣ್ಣ, ಹಾಗೂ ಚಂದ್ರು ತಂದೆ ಸಾಬಣ್ಣ ಇವರಿಗೆ ಆಗಾಗ ಬಾಯಿ ಮಾತಿನ ಜಗಳ ಆಗುತಿತ್ತು, ಈ ಹಿಂದೆ ನಮಗೆ ಯಾರನ್ನೊ ಕರೆಯಿಸಿ ಬೇದರಿಕೆ ಹಾಕಿಸಿದ್ದರು, ಅದಕ್ಕೆ ನಾವು ಅಂಜಿ ಜಗಳ ಮಾಡುವದು ಬೇಡ ಅಂತಾ ಊರಲ್ಲಿ ಬುದ್ದಿವಂತರನ್ನು ಕರೆಯಿಸಿ ಕುಳಿತು ಮಾತಾಡಿಕೊಂಡು ಬಗೆಹರಿಸಿಕೊಂಡರಾಯಿತು ಅಂತಾ ಹೇಳಿದ್ದೆವು ಅದಕ್ಕೆ ಅವರು ಒಪ್ಪಿಕೊಂಡಿರಲಿಲ್ಲ. ಇಂದು ದಿನಾಂಕ: 12-02-2022 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾವು ಊರಲ್ಲಿ ಬುದ್ದಿವಂತರನ್ನು ಕರೆಯಿಸಿ ಜಾಗಕ್ಕೆ ಹೋಗಿ ನಮ್ಮಗೆ ಬರುವಂತ ಜಾಗದಲ್ಲಿ ಕಲ್ಲು ಹಾಕಿ ಬಗೆಹಿರಿಸಿಕೊಂಡಿದ್ದು ಇರುತ್ತದೆ. ಇಂದು ದಿನಾಂಕ: 12-02-2022 ರಂದು ಸಾಯಂಕಾಲ 04-00 ಗಂಟೆಗೆ ನಾನು ಮತ್ತು ನಮ್ಮ ಅಕ್ಕನ ಮಗ ಮಲ್ಲಿಕಾಜರ್ುನ ತಂದೆ ಮಲ್ಲಯ್ಯ ಬ್ಯಾಗರ ಇಬ್ಬರು ಕೂಡಿ ಯಾದಗಿರಿಯಲ್ಲಿ ಮನಗೆ ಸಂತೆ ಮಾಡಿಕೊಂಡು ಹೋದರಾಯಿತು ಅಂತಾ ಮಲ್ಲಿಕಾಜರ್ುನ ಆಟೋದಲ್ಲಿ ಯಾದಗಿರಿಗೆ ಬರುತಿದ್ದೆವು ನಾವು ಸಾಯಂಕಾಲ 04-30 ಗಂಟೆ ಸುಮಾರಿಗೆ ಪಗಲಾಪೂರ ಹಳ್ಳದ ಬ್ರೀಜ್ ಮೇಲೆ ಬರುತ್ತಿರುವಾಗ ನಮ್ಮ ಎದರುಗಡೆಯಿಂದ ಒಂದು ಕೆಂಪು ಕಾರಿನಲ್ಲಿ 4 ಜನರು ಬಂದು ನಾವು ಹೋಗುವ ಆಟೋಕ್ಕೆ ಕಾರು ಅಡ್ಡಗಟ್ಟಿ ನಿಲ್ಲಿಸಿ ಇಳಿರಿ ಇಳಿರಿ ಪಟ್ಟಂತಾ ಅಂತಾ ಅಂದರು ಆಗ ನಾವು ಯಾಕೆ ಅಂತಾ ಕೇಳಿದ್ದಕ್ಕೆ ನಮಗೆ ಎನ ಕೇಳುತ್ತರಲೆ ಸೂಳೆ ಮಕ್ಕಳೆ ಅಂತಾ ಅಂದು ನಮ್ಮ ಮಲ್ಲಿಕಾಜರ್ುನ ಈತನ ಎದೆಯ ಮೇಲಿನ ಅಂಗಿ ಹಿಡಿದು ಎಳದು ಆ 4 ಜನರು ಕೈಯಿಂದ ಹೊಟ್ಟೆಗೆ ಬೆನ್ನಿಗೆ ಗುದ್ದಿದರು. ಆಗ ನಾನು ಬಿಡರಿ ಬಿಡರಿ ಅಂತಾ ಅಂದಾಗ ನನಗೂ ಕೂಡ ಅವರು ಕೈಯಿಂದ ಎಡಭುಜಕ್ಕೆ ಹೊಡೆದು ಗುಪ್ತ ಪೇಟ್ಟು ಮಾಡಿದರು ಆಗ ನಾನು ಕೊಸರಿಕೊಂಡ ಅವರಿಂದ ತಪ್ಪಿಸಿಕೊಂಡೆ ಆಗ ಅವರು ಮಲ್ಲಿಕಾಜರ್ುನ ಈತನಿಗೆ ಕೋಲೆ ಮಾಡಬೇಕೆಂಬ ಉದ್ದೇಶ ಆತನಿಗೆ ಹಿಡಿ ಗಾತ್ರದ ಕಲ್ಲು ತೆಗೆದುಕೊಂಡು ತೆಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿ ಕೈಯಿಂದ ಮನ ಬಂದಂತೆ ಹೊಡೆದು ಕಾಲಿನಿಂದ ಹೊಟ್ಟೆಗೆ ಬೆನ್ನಿಗೆ ಒದ್ದು ಗುಪ್ತ ಪೆಟ್ಟು ಮಾಡಿ ಆತನಿಗೆ ಎಳದಾಡುತಿದ್ದರು ಆಗ ನಾನು ಬುಡರಪ್ಪೋ ಬುಡರಪ್ಪೋ ಅಂತಾ ಚೀರಾಡುತ್ತಿರುವಾಗ ಲೇ ಸೂಳೆ ಮಕ್ಕಳೆ ಇನ್ನೊಂದು ಸಲ ಎನಾದರು ಜಾಗದ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಮಕ್ಕಳೆ ಅಂತಾ ಜೀವದ ಬೇದರಿಕೆ ಹಾಕಿ ಕಾರಿನಲ್ಲಿ ಯಾದಗಿರಿ ಕಡೆಗೆ ಹೋದರು ಅದು ಕೆಂಪು ಬಣ್ಣದ ಕಾರು ಇದ್ದು ಅದರ ನಂಬರ ಕೆಎ-01 ಎಮ್ ಎಮ್-1851 ಅಂತಾ ಇರುತ್ತದೆ. ಮಲ್ಲಿಕಾಜರ್ುನ ಈತನಿಗೆ ಎಬ್ಬಿಸಿದೆ ಆತನು ಮಾತಾಡುತ್ತಿರಲಿಲ್ಲ ತಲೆಯಿಂದ ರಕ್ತ ಸೋರುತಿತ್ತು, ಆಗ ನಾನು ಆತನಿಗೆ ನಮ್ಮ ಆಟೋದಲ್ಲಿ ಹಾಕಿಕೊಂಡು ಯಾದಗಿರಿ ಆಸ್ಪತ್ರೆಗೆ ಕರೆದುಕೊಂಡು ಕುಲೂರ ಗ್ರಾಮದ ಹತ್ತಿರ ಬರುತ್ತಿರುವಾಗ ಎದರುಗಡೆ ಅಂಬುಲೆನ್ಸ ಬಂತು ಆಗ ಆತನಿಗೆ ಅಂಬುಲೆನ್ಸದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಚಂದ್ರು ಮತ್ತು ಮಲ್ಲಿಕಾಜರ್ುನ ಹಾಗೂ ನಮ್ಮ ನಡುವೆ ಪ್ಲಾಟ ಸಂಬಂಧ ಸಮಸ್ಯೆ ಇರುವದರಿಂದ ಚಂದ್ರು ಇವರೆ ಯಾರೋ 4 ಜನರನ್ನು ಕರೆಯಿಸಿ ಹೊಡೆಸಿರುತ್ತಾರೆ.

 


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 14/2022 ಕಲಂ 3 & 7 ಇ.ಸಿ ಯ್ಯಾಕ್ಟ : ಫಿಯರ್ಾದಿದಾರರಿಗೆ ಭೀ.ಗುಡಿ ಕಡೆಯಿಂದ ಚಾಮನಾಳ ಕಡೆಗೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಂದು ದಿನಾಂಕ 12/02/2022 ರಂದು 6-00 ಎ.ಎಮ್.ಕ್ಕೆ ಫಿಯರ್ಾದಿದಾರರು ಪಿ.ಎಸ್.ಐ, ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಗೋಗಿಯ ಅಂಬೇಡ್ಕರ್ ಚೌಕ್ ಹತ್ತಿರ ನಿಂತಾಗ ಆರೋಪಿತನು ಭೀ.ಗುಡಿ ಕಡೆಯಿಂದ ಭಾರತ್ ಬೆಂಜ್ ಟಾವರೆಸ್ ಲಾರಿ ನಂ: ಜಿಜೆ-7633 ನೇದ್ದರಲ್ಲಿ 760 ಚೀಲಗಳಲ್ಲಿ 380 ಕ್ವಿಂಟಲ್ ಪಡಿತರ ಅಕ್ಕಿ ಅ.ಕಿ. 8,36,000=00 ನೇದ್ದನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಫಿಯರ್ಾದಿದಾರರು ಪಿ.ಎಸ್.ಐ ಮತ್ತು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಪಡಿತರ ಅಕ್ಕಿ ಹಾಗೂ ಭಾರತ್ ಬೆಂಜ್ ಟಾವರೆಸ್ ಲಾರಿ ನಂ: ಜಿಜೆ-36 ವಿ-7633 ನೇದ್ದನ್ನು 6-00 ಎಎಮ್ ದಿಂದ 7-00 ಎಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 7-15 ಎಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ವರದಿ ನೀಡಿದ್ದರಿಂದ ಠಾಣೆ ಗುನ್ನೆ ನಂ: 14/2022 ಕಲಂ 3 & 7 ಇ.ಸಿ ಎಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 13-02-2022 12:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080