Feedback / Suggestions

                                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/03/2021

ಶಹಾಪೂರ ಪೊಲೀಸ್ ಠಾಣೆ:- 53/2021 ಕಲಂ ಕಲಂ 143, 147, 148, 332, 504, 353 ಸಂಗಡ 149 ಐಪಿಸಿ ಮತ್ತು 3, 4 ಪಿ.ಡಿ.ಪಿ.ಪಿ ಯಾಕ್ಟ 1984 : ಇಂದು ದಿ|| 12/03/2021 ರಂದು 4.00 ಎ.ಎಂ.ಕ್ಕೆ ಸಕರ್ಾರಿ ತಪರ್ೆ ಫಿಯರ್ಾದಿ ಶ್ರೀ ಚಂದ್ರ್ರಕಾಂತ ಪಿ.ಎಸ್.ಐ(ಕಾ.ಸು) ಶಹಾಪುರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜಾರಾಗಿ ಸಲ್ಲಿಸಿದ ಕನ್ನಡದಲ್ಲಿ ಟೈಪ್ ಮಾಡಿದ ದೂರಿನ ಸಾರಾಂಶ ಏನೆಂದರೆ, ನಿನ್ನೆ ದಿನಾಂಕ: 11/03/2021 ರಂದು ದೋರನಹಳ್ಳಿ ಗ್ರಾಮದ ಶ್ರೀ ಮಹಾಂತೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಸಾಮೂಹಿಕ ವಿವಾಹ ಮಹೋತ್ಸೋವದ ಬಂದೋಬಸ್ತ ಕರ್ತವ್ಯ ಕುರಿತು ಮಾನ್ಯ ಪಿ.ಐ ಸಾಹೇಬರೊಂದಿಗೆ ನಾನು ಮತ್ತು ಠಾಣೆಯ ಶ್ರೀ ಶಾಮಸುಂದರ ಪಿ.ಎಸ್.ಐ(ಅ.ವಿ), ಶ್ರೀ ಸೊಂದಪ್ಪ ಎಎಸ್ಐ, ಶ್ರೀ ಮಲ್ಲಣ್ಣ ಹೆಚ್.ಸಿ-79, ಶ್ರೀ ಬಾಬು ಹೆಚ್.ಸಿ-162, ಶ್ರೀ ನಾರಾಯಣ ಹೆಚ್.ಸಿ-49, ಶ್ರೀ ಗೋಕಲ್ ಹುಸೇನ್ ಪಿಸಿ-172, ಶ್ರೀ ಲಕ್ಕಪ್ಪ ಪಿಸಿ-163, ಶ್ರೀ ದೇವರಾಜ ಪಿಸಿ-282, ಶ್ರೀ ಭೀಮನಗೌಡ ಪಿಸಿ-402 ಎಲ್ಲರೂ ಶ್ರೀ ಮಹಾಂತೇಶ್ವರ ದೇವಸ್ಥಾನಕ್ಕೆ ಹೋಗಿದ್ದಾಗ ಸಾಯಂಕಾಲ 7.15 ಪಿ.ಎಂ. ಸುಮಾರಿಗೆ ದೋರನಹಳ್ಳಿ ಗ್ರಾಮದ ಯುವಕನೊಬ್ಬ ಧಾಮರ್ಿಕ ಅವಹೇಳನವುಳ್ಳ ಫೋಟೊವನ್ನು ಮೊಬೈಲ್ ಸ್ಟೇಟಸ್ನಲ್ಲಿ ಹಾಕಿದ್ಧರಿಂದ ದೋರನಹಳ್ಳಿ ಗ್ರಾಮದ ಕೆಲವು ಜನರು ಶಹಾಪುರ-ಯಾದಗಿರಿ ಮುಖ್ಯರಸ್ತೆಯಲ್ಲಿರುವ ಶ್ರೀ ಅಂಬಿಗರ ಚೌಡಯ್ಯ ಮೂತರ್ಿಯ ಹತ್ತಿರ ರಸ್ತೆ ಮಾಡುತ್ತಿರುವ ಮಾಹಿತಿ ಬಂದಿದ್ಧರಿಂದ ಪಿ.ಐ ಸಾಹೇಬರು ಸಂಗಡ ಶ್ರೀ ಮಲ್ಲಣ್ಣ ಹೆಚ್.ಸಿ-79, ಶ್ರೀ ಬಾಬು ಹೆಚ್.ಸಿ-162 ರವರಿಗೆ ಕರೆದುಕೊಂಡು ದೋರನಹಳ್ಳಿಗೆ ಹೋದರು. ನಂತರ 7.30 ಪಿ.ಎಂ. ಸುಮಾರಿಗೆ ಪಿ.ಐ ಸಾಹೇಬರು ನಮಗೆ ದೋರನಹಳ್ಳಿಗೆ ಬರಲು ಫೋನ್ ಮಾಡಿ ತಿಳಿಸಿದಾಗ ನಾವು ಎಲ್ಲರೂ ಕೂಡಿ 8.00 ಪಿ.ಎಂ. ಸುಮಾರಿಗೆ ದೋರನಹಳ್ಳಿ ಗ್ರಾಮದ ಶ್ರೀ ಅಂಬಿಗರ ಚೌಡಯ್ಯ ಮೂತರ್ಿಯ ಹತ್ತಿರ ಹೋದಾಗ ರಸ್ತೆ ತಡೆ ಮಾಡುತ್ತಿದ್ಧ ಸಾರ್ವಜನಿಕರಿಗೆ ಪಿ.ಐ ಸಾಹೇಬರು ಅಪರಾಧ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಬೇಡಿ ಅಂತಾ ತಿಳುವಳಿಕೆ ನೀಡುತ್ತಿದ್ದರು. ಆಗ ಅಲ್ಲಿದ್ದ ದೋರನಹಳ್ಳಿಯ ಜನರು ನಮ್ಮ ಮಾತನ್ನು ಕೇಳದೆ ಲೇ ಪೊಲೀಸ್ ಸೂಳೆ ಮಕ್ಕಳೆ ನೀವು ಅಪರಾಧಿಗಳಿಗೆ ಸಹಾಯ ಮಾಡುತ್ತಿದ್ದೀರಿ ಅಂತಾ ಅನ್ನುತ್ತ ನಮ್ಮ ಮೇಲೆ ಕಲ್ಲು ತೂರಾಟ ಮಾಡಿ ಎಲ್ಲರೂ ಸೇರಿ ದಲಿತ ಓಣಿಯ ಕಡೆಗೆ ಹೊರಟರು. ಆಗ ನಾನು ಮತ್ತು ಶ್ರೀ ನಾರಾಯಣ ಹೆಚ್.ಸಿ-49, ಶ್ರೀ ಲಕ್ಕಪ್ಪ ಪಿಸಿ-163 ಮೂರು ಜನರು ಕೂಡಿ ಗ್ರಾಮದ ಅಂಬಾಭವಾನಿ ಮಂದಿರದ ಹತ್ತಿರ ಹೋಗಿ ಸಾರ್ವಜನಿಕರಿಗೆ ಮುಂದೆ ಹೋಗದಂತೆ ತಿಳುವಳಿಕೆ ನೀಡುತ್ತಿದ್ದಾಗ ಅಲ್ಲಿದ್ದ ಹಣಮಂತ ತಂ/ ಸಾಯಬಣ್ಣ ಗುಂಡಳ್ಳಿ, ಯಮನಪ್ಪಗೌಡ ತಂ/ ದೇವಿಂದ್ರಪ್ಪ ಲಕಶೆಟ್ಟಿ, ಮಲ್ಲಿಕಾಜರ್ುನ ಪೊಲೀಸ್ ಪಾಟೀಲ್, ಮಹಾಂತೇಶ ತಂ/ ಬಸಯ್ಯ ಸ್ವಾಮಿ ಸ್ಥಾವರಮಠ ಹಾಗೂ ಇತರೆ 20 ರಿಂದ 25 ಜನರು ರವರು ನಮ್ಮ ಮೇಲೆ ಕಲ್ಲು ತೂರಾಟ ಮಾಡಿದ್ಧರಿಂದ ನನಗೆ ತಲೆಗೆ, ಬೆನ್ನಿಗೆ ಒಳಪೆಟ್ಟು, ಮತ್ತು ನಾರಾಯಣ ಹೆಚ್.ಸಿ-49 ರವರಿಗೆ ಬಲಗೈ ರಟ್ಟೆಗೆ, ಬೆನ್ನಿಗೆ ಒಳಪೆಟ್ಟಾಗಿರುತ್ತದೆ. ಹಾಗೂ ಶ್ರೀ ಲಕ್ಕಪ್ಪ ಪಿಸಿ-163 ರವರಿಗೆ ಬೆನ್ನಿಗೆ ಒಳಪೆಟ್ಟಾಗಿರುತ್ತದೆ. ಮತ್ತು ಶ್ರೀ ಅಂಬಿಗರ ಚೌಡಯ್ಯ ಮೂತರ್ಿಯ ಹತ್ತಿರ ಜರುಗಿದ ಕಲ್ಲು ತೂರಾಟದಲ್ಲಿ ಶ್ರೀ ಶಾಮಸುಂದರ ಪಿ.ಎಸ್.ಐ(ಅ.ವಿ) ರವರ ಸರಕಾರಿ ಜೀಪ್.ನಂ.ಕೆಎ-02 ಜಿ-302 ನೇದ್ಧರ ಬಲಭಾಗದ ಹೆಡ್ ಲೈಟ್ ಮತ್ತು ಬಲ ಮತ್ತು ಎಡ ಭಾಗದ ಕನ್ನಡಿಗಳು ಜಖಂಗೊಂಡಿರುತ್ತವೆ. ಘಟನೆಯು 8.00 ಪಿ.ಎಂ. ಇಂದ 8.30 ಪಿ.ಎಂ. ವರೆಗೆ ಜರುಗಿರುತ್ತದೆ. ದೋರನಳ್ಳಿಯಲ್ಲಿ ಬಂದೋಬಸ್ತ ಕರ್ತವ್ಯ ನಿರ್ವಹಿಸಿ ಪರಸ್ಥಿತಿ ಶಾಂತಗೊಂಡ ನಂತರ ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ನಮ್ಮ ಮೇಲೆ ಕಲ್ಲು ತೂರಾಟ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಸಕರ್ಾರಿ ಕರ್ತವ್ಯದಲ್ಲಿ ಅಡೆತಡೆಯನ್ನುಂಟು ಮಾಡಿ ಸ್ವತ್ತನ್ನು ನಾಶಪಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 53/2021 ಕಲಂ ಕಲಂ 143, 147, 148, 332, 504, 353 ಸಂಗಡ 149 ಐಪಿಸಿ ಮತ್ತು 3, 4 ಪಿ.ಡಿ.ಪಿ.ಪಿ ಯಾಕ್ಟ 1984 ನೇದ್ಧರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಗುರಮಿಠಕಲ್ ಪೊಲೀಸ್ ಠಾಣೆ:- 32/2021 ಕಲಂ 379 ಐಪಿಸಿ : ಇಂದು ದಿನಾಂಕ 12.03.2021 ರಂದು ಸಮಯ ಬೆಳಿಗ್ಗೆ 08:00 ಗಂಟೆಗೆ ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನು ಟ್ರ್ಯಾಕ್ಟರ ನಂಬರ ಕೆಎ-33-ಟಿಬಿ-3553 ನೇದ್ದರ ಟ್ರ್ಯಾಲಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸದರಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರ ಚಾಲಕ ಮತ್ತು ಸಂಬಂಧಪಟ್ಟ ಮಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 32/2021 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ:- 34/2021  :  7 ವರ್ಷಗಳ ಹಿಂದೆ ಕಾಣೆಯಾದ ದೇವಿಂದ್ರಮ್ಮಳ ಮದುವೆ ಚಂದಾಪೂರ ಗ್ರಾಮದ ಕಾಸಪ್ಪ ಮಾಲ ಎಂಬಾತನೊಂದಿಗೆ ಆಗಿತ್ತು. ಅವರ ದಾಂಪತ್ಯ ಜೀವನದಲ್ಲಿ ಇನ್ನು ಮಕ್ಕಳಾಗಿರುವುದಿಲ್ಲ. ನಂತರ ಯಕ್ಲಾಸಪೂರ ಜಾತ್ರೆಯ ಪ್ರಯುಕ್ತ ಫಿರ್ಯಾದಿಯು ತನ್ನ ಮಗಳನ್ನು ಕರೆದುಕೊಂಡು ಬಂದು ದಿನಾಂಕ 27.02.2021 ರಂದು ಜಾತ್ರೆಗೆ ಹೋಗಿ ಬಂದ ನಂತರ ದಿನಾಂಕ 28.02.2021 ರಂದು ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ದೇವಿಂದ್ರಮ್ಮಳು ಬಹರ್ಿದೆಸೆಗೆ ಹೋಗಿ ಬರುತ್ತೇನೆ ಅಂತಾ ತಂಬಿಗೆ ತಗೊಂಡು ಹೋಗಿ ನಂತರ ಮರಳಿ ಮನೆಗೆ ಬಾರದೇ ಇರುವುದರಿಂದ ಅಲ್ಲಿಂದ ಇಲ್ಲಿಯ ವರೆಗೆ ಹುಡುಕಾಡಿದ ನಂತರ ತಡವಾಗಿ ಠಾಣೆಗೆ ಬಂದು ತನ್ನ ಮಗಳು ಕಾಣೆಯಾಗಿದ್ದ ಬಗ್ಗೆ ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 34/2021 ಕಲಂ: 00 ಒಕ ಕಅ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಯಾದಗಿರ ನಗರ ಪೊಲೀಸ್ ಠಾಣೆ:- 31/2021 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ; 12/03/2021 ರಂದು 7-30 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.12/03/2021 ರಂದು 5-00 ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬೇಡ್ಕರ ಚೌಕದಲ್ಲಿ ಪೋಸ್ಟ ಆಫೀಸ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ. ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 7-20 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 7-30 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.31/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

 
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಯಾದಗಿರಿ:- ಯು.ಡಿ.ಆರ್ ನಂ: 04/2021 ಕಲಂ 174 ಸಿ.ಆರ್.ಪಿ.ಸಿ : ಇಂದು ದಿನಾಂಕ 12-03-2021 ರಂದು 9-40 ಎ.ಎಮ್ ಕ್ಕೆ ಫಿರ್ಯಾಧಿದಾರರು ನೀಡಿದ ಹೇಳಿಕೆೆ ಎನೆಂದರೆ ತನ್ನ ತಮ್ಮನಾದ ವಿಠಲ್ ವಯಾ; 26 ವರ್ಷ ಇತನು ತಮ್ಮ ಜೋತೆಯಲ್ಲಿಯೇ ಒಕ್ಕಲುತನ ಕೆಲಸ ಮಾಡುತ್ತಿದ್ದನು. ಅವನಿಗೆ ಇನ್ನೂ ಮದುವೆಯಾಗಿಲ್ಲಾ. ಅವನು ಕಳೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ತಮ್ಮ ತಾಂಡಾದಿಂದ ಅವಿರೋಧವಾಗಿ ಆಯ್ಕೇಯಾಗಿರುತ್ತಾನೆ. ವಿಠಲನು ತಮ್ಮ ತಾಂಡಾದಲ್ಲಿ ಎಲ್ಲರೊಂದಿಗೆ ಮತ್ತು ಮನೆಯಲ್ಲಿಯೂ ಕೂಡಾ ಎಲ್ಲರೊಂದಿಗೆ ಅನ್ಯೂನ್ಯವಾಗಿ ಇರುತ್ತಿದ್ದನು. ಹೀಗಿದ್ದು ನಿನ್ನೆ ದಿನಾಂಕ 11-03-2021 ರಂದು ಬೆೆಳಗ್ಗೆ ಮೃತ ವಿಠಲ ಇತನು ಹೋಲಕ್ಕೆ ಹೋಗಿ ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಮನೆಗೆ ಬಂದನು. ಸಾಯಂಕಾಲ 4 ಗಂಟೆ ಸುಮಾರಿಗೆ ತನ್ನ ತಾಯಿಯ ಕಡೆಯಿಂದ ನೂರು ರೂಪಾಯಿ ಇಸಿದುಕೊಂಡು ಒಂದು ಕಲ್ಲಂಗಡಿ ಹಣ್ಣನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಅದರಲ್ಲಿ ಅರ್ಧದಷ್ಟು ಹಣ್ಣನ್ನು ತಾನೇ ತಿಂದು ನಂತರ ತಮ್ಮ ಮನೆಯ ಹಿಂದುಗಡೆ ಇರುವ ಕೋಣೆಗೆ ಹೋಗಿ ಸಾಯಂಕಾಲ 4-30 ಗಂಟೆ ಸುಮಾರಿಗೆ ಅಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ನಮಗೆ ಯಾರ ಮೇಲೆಯೂ ಯಾವುದೇ ತರಹದ ಸಂಶಯ ಇರುವುದಿಲ್ಲಾ. ಅಂತಾ ಫಿರ್ಯಾಧಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 

ಶೋರಾಪೂರ ಗ್ರಾಮೀಣ ಪೊಲೀಸ್ ಠಾಣೆ :- 06/2021 ಕಲಂ. 107 ಸಿಆರ್ಪಿಸಿ : ಮಾನ್ಯರವರ ಬಳಿಗೆ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಸಾಹೇಬಗೌಡ ಎಮ್ ಪಾಟೀಲ್ ಪಿಐ ಶೋರಾಪೂರ ಪೊಲೀಸ ಠಾಣೆ ಆದ ನಾನು ಸರಕಾರಿ ತಪರ್ೆ ಫಿರ್ಯಾದಿ ಬರೆದುಕೊಡುವುದೇನೆಂದರೆ, ಇಂದು ದಿನಾಂಕ: 12/03/2021 ರಂದು ಮಂಜಾನೆ ಸುಮಾರಿಗೆ ಠಾಣೆಯ ಸಿಬ್ಬಂಧಿಯಾದ ಶ್ರೀ ಮಂಜುನಾಥ ಹೆಚ್ಸಿ-176, ಶ್ರೀ ಮಂಜುನಾಥ ಸಿಪಿಸಿ-271 ರವರನ್ನು ಸಂಗಡ ಕರೆದುಕೊಂಡು ಹಳ್ಳಿ ಬೇಟಿ ಕುರಿತು ಚಂದ್ಲಾಪೂರ ಗ್ರಾಮಕ್ಕೆ 11 ಎ.ಎಂ ಕ್ಕೆ ಬೇಟಿ ನಿಡಿದಾಗ ತಿಳಿದು ಬಂದ ಮಾಹಿತಿ ಏನೆಂದರೆ ಗ್ರಾಮದ ಕುರುಬ ಜನಾಂಗದವರಾದ ಹವಳಪ್ಪ ತಂದೆ ಮಲ್ಲಪ್ಪ ನಿಲವಂಜಿ ಮತ್ತು ಅಯ್ಯಪ್ಪ ತಂದೆ ಶಿವರಾಯ ನೀಲವಂಜಿ ಇವರ ನಡುವೆ ದಿನಾಂಕ:15/02/2021 ರಂದು 10:15 ಎ.ಎಂ ಸುಮಾರಿಗೆ ಹಳೇ ವೈಶಮ್ಯದಿಂದ ಒಬ್ಬರಿಗೊಬ್ಬರು ಗುಂಪು ಕಟ್ಟಿಕೊಂಡು ಜಗಳ ಮಾಡಿಕೊಂಡು ಎರಡು ಪಾಟರ್ಿಗಳ ಮೇಲೆ ಗುನ್ನೆ ಪ್ರತಿಗುನ್ನೆ ಜರಗಿದ್ದು ಅಂದಿನಿಂದ ಎರಡು ಪಾಟರ್ಿಯವರು ತಮ್ಮ ತಮ್ಮಲ್ಲಿ ವೈಮನಸ್ಸು ಮಾಡಿಕೊಂಡು ಒಂದು ಕೈ ನೊಡೆ ಬಿಡೋಣ ಅಂತಾ ಊರಲ್ಲಿ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದು ಸದರಿಯವರನ್ನು ಹೀಗೆ ಬಿಟ್ಟರೆ ಇಂದಿಲ್ಲ ನಾಳೆ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆ ಭಂಗ ಉಂಟುಮಾಡುವ ಸಾಧ್ಯತೆ ಇರುವ ಬಗ್ಗೆ ಕಂಡು ಬಂದಿದ್ದರಿಂದ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮರಳಿ ಠಾಣೆಗೆ ಬಂದು ಮುಂಜಾಗ್ರತಾ ಕ್ರಮವಾಗಿ ಸದರಿಯವರ ವಿರುದ್ಧ ಠಾಣಾ ಪಿ.ಎ.ಆರ್ ನಂಬರ 07/2021 ಕಲಂ:107 ಸಿಆರ್ಪಿಸಿ ನೇದ್ದರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಶಹಾಪೂರ ಪೊಲೀಸ್ ಠಾಣೆ:- 16/2021 ಕಲಂ 87 ಕೆ.ಪಿ ಯಾಕ್ಟ : ದಿನಾಂಕ:12/03/2021 ರಂದು 18.55 ಗಂಟೆಗೆ ಹುಣಸಗಿ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ ಬಾಪುಗೌಡ ಪಾಟೀಲ ಪಿಎಸ್ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಸಾರಾಂಶವೆನೆಂದರೆ ಕೊಳಿಹಾಳ ತಾಂಡಾದ ಹತ್ತಿರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದಿದ್ದು, ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:16/2021 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ. ನಂತರ ಮಾನ್ಯ ಪಿಎಸ್ಐ ಸಾಹೇಬರಾದ ಶ್ರೀ ಬಾಪುಗೌಡ ಪಾಟೀಲ ರವರು ಠಾಣೆಗೆ 21.30 ಗಂಟೆಗೆ ಮರಳಿ ಠಾಣೆಗೆ ಬಂದು 10 ಜನ ಆರೋಪಿತರು & ನಗದು ಹಣ 25200/- ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಹಾಜರಪಡಿಸಿದ್ದು ಇರುತ್ತದೆ. ಆರೋಪಿತರ ಹೆಸರು ಈ ರೀತಿ ಇದೆ, 1) ಬಸವರಾಜ ತಂದೆ ಯಂಕಣ್ಣ ಕಟ್ಟಿಮನಿ ವಯಾ-42 ವರ್ಷ, ಜಾ:ಉಪ್ಪಾರ ಉ:ಒಕ್ಕಲುತನ ಸಾ:ದೇವಾಪೂರ(ಜೆ), 2) ದೊಡ್ಡಪ್ಪಗೌಡ ತಂದೆ ದೇವಿಂದ್ರಪ್ಪ ಕೊಳೂರ ವಯಾ-26 ವರ್ಷ, ಜಾ:ಲಿಂಗಾಯತ ಉ:ಒಕ್ಕಲುತನ ಸಾ:ಆಶ್ರಯ ಕಾಲೋನಿ ತಾಳಿಕೋಟಿ ರೋಡ ಹುಣಸಗಿ 3) ಮಹಾಂತೇಶ ತಂದೆ ಬಸವರಾಜ ಗೋಗಿ ವಯಾ-32 ವರ್ಷ, ಜಾ:ಲಿಂಗಾಯತ ಉ:ಪೇಂಟರ್ ಕೆಲಸ ಸಾ:ಹುಣಸಗಿ 4) ನಿಂಗಣ್ಣ ತಂದೆ ಸಾಯಬಣ್ಣ ಬಿರಾದಾರ ವಯಾ-30 ವರ್ಷ, ಜಾ:ವಬೇಡರ ಉ:ಒಕ್ಕಲುತನ ಸಾ:ಹುಣಸಗಿ 5) ಈಶ್ವರ ತಂದೆ ಸೀತುನಾಯಕ ಚವ್ಹಾಣ ವಯಾ-35 ವರ್ಷ, ಜಾ:ಲಂಬಾಣಿ ಉ:ಅಟೋ ಚಾಲಕ ಸಾ:ಕೊಳಿಹಾಳ ದೊಡ್ಡ ತಾಂಡಾ, 6) ಭೀಮರಾಯ ತಂದೆ ಬಸಪ್ಪ ಹಳಿಮನಿ ವಯಾ-40 ವರ್ಷ, ಜಾ:ಮಾದರ ಉ:ಗೌಂಡಿ ಕೆಲಸ ಸಾ:ಕೊಳಿಹಾಳ, 7) ಸಾಬಣ್ಣ ತಂದೆ ಹಣಮಂತ್ರಾಯ ಮಲ್ಲಾಬಾದಿ ವಯಾ-45 ವರ್ಷ, ಜಾ:ಉಪ್ಪಾರ ಉ:ಒಕ್ಕಲುತನ ಸಾ:ಹುಣಸಗಿ, 8)ಬಾಲಾಜಿ ತಂದೆ ಯಂಕಪ್ಪ ಉಕನಾಳ ವಯಾ-35 ವರ್ಷ, ಜಾ:ಉಪ್ಪಾರ ಉ:ಡ್ರೈವಿಂಗ್ ಕೆಲಸ ಸಾ:ಹುಣಸಗಿ, 9) ಭೀಮಣ್ಣ ತಂದೆ ಹಣಮಂತ್ರಾಯ ಕಾಳೆ ವಯಾ-27 ವರ್ಷ, ಜಾ:ಮರಾಠ ಉ:ಗೌಂಡಿ ಕೆಲಸ ಸಾ:ಕೊಳಿಹಾಳ, 10) ಬಸವರಾಜ ತಂದೆ ಬಲವಂತ್ರಾಯ ಜಾಧವ ವಯಾ-40 ವರ್ಷ, ಜಾ:ಮರಾಠ ಉ:ಡ್ರೈವಿಂಗ್ ಕೆಲಸ ಸಾ:ಕೊಳಿಹಾಳ ಈ ರೀತಿಯಾಗಿ ಇರುತ್ತದೆ

 


ಶಹಾಪೂರ ಪೊಲೀಸ್ ಠಾಣೆ:- 54/2021 ಕಲಂ 295(ಎ) 505(2) ಐ.ಪಿ.ಸಿ : ಇಂದು ದಿನಾಂಕ 12/03/2021 ರಂದು 3.00 ಪಿಎಂ ಕ್ಕೆ ಫಿಯರ್ಾದಿ ಶ್ರೀ ಶಿವರಾಜ ತಂದೆ ಭೀಮರಾಯ ಶಿರವಾಳ ವ|| 25ವರ್ಷ ಜಾ|| ಹಿಂದೂ ಮಾದಿಗ ಉ|| ಕೂಲಿ ಮತ್ತು ಅಧ್ಯಕ್ಷರು ಶ್ರೀರಾಮ ಸೇನೆ ತಾಲೂಕಾ ಘಟಕ ಶಹಾಪೂರ ಸಾ|| ಗುತ್ತಿಪೇಠ ಶಹಾಪೂರ ತಾ|| ಶಹಾಪೂರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಸಂಘಟನೆಯ ಲೆಟರ ಪ್ಯಾಡಿನಲ್ಲಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಸಾಮಾಜಿಕ ಜಾಲತಾಣವಾದ ಪೇಸ್ಬುಕ್ನಲ್ಲಿ ಒಚಿಟಿರಿಣ ಎಃ ಎಂಬ ಪ್ರೋಪೈಲ್ನಿಂದ ದಿನಾಂಕ 11/03/2021 ರಂದು 11.20 ಎಎಂಕ್ಕೆ ಹಿಂದೂ ಧಮರ್ೀಯರ ಪವಿತ್ರ ಹಬ್ಬವಾದ ಮಹಾಶಿವರಾತ್ರಿ ಅಂಗವಾಗಿ ಚಿತ್ರೀಕರಿಸಿದ ಶಿವಲಿಂಗದ ಭಾವಚಿತ್ರದೊಂದಿಗೆ ಮಹಾಶಿವರಾತ್ರಿ ಹಬ್ಬದ ಹಾದರ್ಿಕ ಶುಭಾಶಯಗಳು ಎಂಬ ಭಾವಚಿತ್ರಕ್ಕೆ ಎಡಿಟ್ ಮಾಡಿ ಹಿಂದೂ ಧಮರ್ೀಯರ ಪವಿತ್ರ ದೇವರಾದ ಶಿವಲಿಂಗದ ಚಿತ್ರದ ಮೇಲೆ ಚಪ್ಪಲಿ ಹಾಕಿಕೊಂಡ ಕಾಲು ಮೇಲಿಟ್ಟು ಹ್ಯಾಪಿ ಬರ್ತಡೇ ಕಳ್ಳ ಶಿವ, ಯಾ ಶಿವ ಇಲ್ಲ ಶಿವರಾತ್ರಿ ಇಲ್ಲ ಠಟಿಟಥಿ....ಎ ಃ ಅಂತಾ ಎಡಿಟ್ ಮಾಡಿದ ಪೋಸ್ಟರನ್ನು ಸಾಮಾಜಿಕ ಜಾಲತಾಣವಾದ ಪೇಸಬುಕ್ನಲ್ಲಿ ಮತ್ತು ವ್ಯಾಟ್ಸಪ್ ಸ್ಟೇಟಸ್ನಲ್ಲಿ ಭಿತ್ತರಿಸಿ ಅವಹೇಳನಕಾರಿ ಕಾಮೆಂಟ್ ಮಾಡಿ ಜಾತಿ, ಜಾತಿಗಳ ನಡುವೆ ದ್ವೇಷ, ವೈರತ್ವ ಬಿತ್ತಿ ಮತೀಯ ನಂಬಿಕೆಗಳನ್ನು ಅಪಮಾನಗೊಳಿಸಿ ಸೌಹಾರ್ದತೆಗೆ ಧಕ್ಕೆಯುಂಟು ಮಾಡಿ ಮೇಲೆ ಇರುವ ಕೋಟ್ಯಾಂತರ ಹಿಂದೂಗಳು ಧಾಮರ್ಿಕ ಭಾವನೆಗಳಿಗೆ ಧಕ್ಕೆ ಬರುವ ಉದ್ದೇಶದಿಂದ ಬುದ್ದಿಪೂರ್ವಕವಾಗಿ ಪೇಸ್ಬುಕ್ನಲ್ಲಿ ಪೋಸ್ಟ್ ಎಡಿಟ್ ಮಾಡಿ ವ್ಯಾಟ್ಸಪ್ ಸ್ಟೇಟಸ್ ಇಟ್ಟು ಫೇಸ್ಬುಕ್ನಲ್ಲಿ ಹಾಕಿರುವ ಪೋಸ್ಟನ್ನು ಬಗ್ಗೆ ಸ್ಕ್ರೀನ್ ಶಾಟ್ ಮಾಡಿ ನಮ್ಮ ಸ್ನೇಹಿತರಾದ ರಮೇಶ ಗಂಗಾನಗರ ಇವರು ನಮ್ಮ ಸಂಘದ ವ್ಯಾಟ್ಸಪ್ ಗ್ರೂಪ್ ಆಗಿರುವ ಶ್ರೀರಾಮ ಸೇನಾ ಶಹಾಪೂರ ಗ್ರೂಪಿನಲ್ಲಿ ಕಳುಹಿಸಿ ಮಾಹಿತಿ ತಿಳಿಸಿದ್ದರಿಂದಾಗಿ ನಾನು ನನ್ನ ಮೊಬೈಲ್ ವ್ಯಾಟ್ಸಪ್ ಗ್ರೂಪಿನಲ್ಲಿ ಇಂದು ದಿನಾಂಕ 12/03/2021 ರಂದು 7.19 ಎಎಂ ಸುಮಾರಿಗೆ ನೋಡಿರುತ್ತೇನೆ. ನೋಡುವಾಗ ನನ್ನ ಜೊತೆಯಲ್ಲಿದ್ದ ಮಲ್ಲಿಕಾಜರ್ುನ ಮಮದಾಪೂರ, ಚಂದ್ರು ಶಿರವಾಳ, ವಿಶ್ವನಾಥ ಶಿರವಾಳ, ಮಲ್ಲಣ್ಣಗೌಡ ಮಲ್ಲಾಬಾದಿ ರವರು ಸದರಿ ಪೋಸ್ಟನ್ನು ನನ್ನ ಮೋಬೈಲ್ನಲ್ಲಿ ನೋಡಿರುತ್ತಾರೆ. ಹಾಗೂ ಸದರಿ ಪೋಸ್ಟ್ ಬಗ್ಗೆ ನನ್ನೊಂದಿಗೆ ಇದ್ದವರೊಂದಿಗೆ ಚಚರ್ೆ ಮಾಡಿ ನಂತರ ನಮ್ಮ ಸಮಾಜದ ಹಿರಿಯರಿಗೆ ವಿಚಾರಿಸಿಕೊಂಡು ಪೋಸ್ಟ್ ಮಾಡಿದ ವ್ಯಕ್ತಿ ಹೆಸರು ವಿಳಾಸ ತಿಳಿದುಕೊಳ್ಳಲಾಗಿ ಮಲ್ಲು ತಂದೆ ನಿಂಗಪ್ಪ ರಡ್ಡಿ ವ|| 19ವರ್ಷ ಜಾ|| ಹಿಂದೂ ಹೊಲೆಯ ಸಾ|| ದೋರನಳ್ಳಿ ತಾ|| ಶಹಾಪೂರ ಅಂತ ತಿಳಿದು ಬಂದಿರುತ್ತದೆ. ಸದರಿ ವ್ಯಕ್ತಿಯ ಹೆಸರು ವಿಳಾಸ ತಿಳಿದುಕೊಂಡು ಹಿರಿಯರಿಗೆ ವಿಚಾರಿಸಿಕೊಂಡು ಬರಲು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಸಾಮಾಜಿಕ ಜಾಲತಾಣ ವ್ಯಾಟ್ಸಪ್ ಮತ್ತು ಪೇಸ್ಬುಕ್ನಲ್ಲಿ ಒಚಿಟಿರಿಣ ಎಃ ಎಂಬ ಪ್ರೋಪೈಲ್ ಹೊಂದಿದ ಮಲ್ಲು ತಂದೆ ನಿಂಗಪ್ಪ ರಡ್ಡಿ ವ|| 19ವರ್ಷ ಜಾ|| ಹಿಂದೂ ಹೊಲೆಯ ಸಾ|| ದೋರನಳ್ಳಿ ತಾ|| ಶಹಾಪೂರ ಈ ವ್ಯಕ್ತಿಯ ವಿರುದ್ದ ಸಮಸ್ತ ಹಿಂದೂ ಜನರ ಪರವಾಗಿ ಈ ದೂರನ್ನು ಸಲ್ಲಿಸುತ್ತಿದ್ದು ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 54/2021 ಕಲಂ 295(ಎ), 505(2) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

 


ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ :-34/2021 ಕಲಂ: 379 ಐಪಿಸಿ : ದಿನಾಂಕ: 12/03/2021 ರಂದು 7-45 ಪಿಎಮ್ ಕ್ಕೆ ಶ್ರೀ ಲಿಂಗರಾಜ ಭೂ ವಿಜ್ಞಾನಿ ಗಣಿ ಮತ್ತು ಭೂ-ವಿಜ್ಞಾನ ಇಲಾಖೆ ಯಾದಗಿರಿ ರವರು ಹಾಜರಾಗಿ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಸುರೇಶ ಅಂಕಲಗಿ ಮಾನ್ಯ ತಹಸೀಲ್ದಾರರು ವಡಗೇರಾ ಬರ ಹೇಳಿದಂತೆ ನಾವು 4-30 ಪಿಎಮ್ ತಹಸೀಲ ಕಾರ್ಯಲಯಕ್ಕೆ ಬಂದು ಹಾಜರಿದ್ದೇವು. ತಹಸೀಲ ಸಾಹೇಬರೊಂದಿಗೆ ಶ್ರೀ ಲಿಂಗರಾಜ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಯ ವಡಗೇರಾ ವಲಯದ ಕಂದಾಯ ನಿರೀಕ್ಷಕರಾದ ಸಂಜೀವಕುಮಾರ ಹಾಗೂ ಮಲ್ಲಿಕಾಜರ್ುನ ಗ್ರಾಮ ಲೇಖಾಪಾಲಕರು ಶಿವಪೂರ ಮತ್ತು ಶ್ರೀ ಸೈದಪ್ಪ ಗ್ರಾಮ ಸಹಾಯಕ ಶಿವಪೂರ ಹಾಗೂ ವಡಗೇರಾ ಪೊಲೀಸ್ ಠಾಣೆಯ ಮಹೇಂದ್ರ ಪಿಸಿ 254 ಮತ್ತು ಶಹಾಪೂರ ಲೊಪಕೊಪಯೋಗಿ ಇಲಾಖೆಯ ಶ್ರೀ ಆನಂದಕುಮಾರ ಸಹಾಯಕ ಇಂಜನಿಯರ ಎಲ್ಲರೂ ತಹಸೀಲ ಕಾಯರ್ಾಲಯದಲ್ಲಿ ಹಾಜರಿದ್ದು, ಶ್ರೀ ಸುರೇಶ ಅಂಕಲಗಿ ತಹಸೀಲ್ದಾರ ಸಾಹೇಬರು ನಮಗೆ ಎಲ್ಲರಿಗೂ ವಿಷಯ ತಿಳಿಸಿದ್ದೇನಂದರೆ ವಡಗೇರಾ ತಾಲೂಕಿನ ಶಿವಪೂರ ಗ್ರಾಮದ ಸೀಮಾಂತರದಲ್ಲಿ ಯಾರೋ ಕೃಷ್ಣಾ ನದಿಯಿಂದ ಕಳ್ಳತನದಿಂದ ನೈಸಗರ್ಿಕ ಮರಳನ್ನು ತುಂಬಿಕೊಂಡು ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿರುತ್ತಾರೆ ಅಂತಾ ಮಾಹಿತಿ ಇದ್ದ ಮೇರೆಗೆ ನಾವು ಎಲ್ಲರೂ ದಾಳಿ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದ್ದು, ಕಾರಣ ದಾಳಿ ಕಾಲಕ್ಕೆ ಪಂಚರು ಒಪ್ಪಿಕೊಂಡಿದ್ದು, ನಂತರ ನಾವು ಎಲ್ಲರೂ ತಹಸೀಲ್ದಾರರು ಸಾಹೇಬರೊಂದಿಗೆ ಕೂಡಿ ತಮ್ಮ ತಮ್ಮ ಇಲಾಖಾ ವಾಹನಗಳಲ್ಲಿ ಕುಳಿತುಕೊಂಡು ವಡಗೇರಾ ತಹಸೀಲ್ ಕಾರ್ಯಲಯದಿಂದ ಸಾಯಂಕಾಲ 4-45 ಪಿಎಮ್ ಕ್ಕೆ ಹೊರಟು ಶಿವಪೂರ ಗ್ರಾಮಕ್ಕೆ ಸಾಯಂಕಾಲ 5-30 ಪಿಎಮ್ ಕ್ಕೆ ತಲುಪಿದೆವು. ಆಗ ಶಿವಪೂರ ಸೀಮಾಂತರದ ಜಮೀನು ಸವರ್ೆ ನಂ. 132 ಇದ್ದು, ಅದರ ಪಟ್ಟೆದಾರರಾದ ವೆಂಕಟೇಶ ತಂದೆ ಸಾಯಬಣ್ಣ, ಸುರೇಶ ತಂದೆ ಸೂಗಪ್ಪ, ಬಸವರಾಜ ತಂದೆ ಸಂಗನಬಸಪ್ಪ ಸಾ:ಶಿವಪೂರ ಇರುತ್ತಾರೆ. ಸದರಿ ಜಮೀನಿನಲ್ಲಿ ಶೇಖರಣೆ ಮಾಡಿದ ಅಕ್ರಮ ಮರಳನ್ನು ಲೊಕೊಪಯೋಗಿ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅಳತೆ ಮಾಡಿ ಸದರಿ ಜಮೀನಿನಲ್ಲಿ ಒಟ್ಟು 195 ಘನ ಮೀಟರ ಮರಳು ಇದ್ದು, ಅದರ ಅಂಕಿ ಅಂಶ 2,73,000/- ರೂ. ಗಳಾಗುತ್ತದೆ. ಸದರಿ ಜಮೀನಿನ ಚೆಕ್ಕಬಂದಿ ಈ ಕೆಳಗಿನಂತೆ ಇರುತ್ತದೆ. ಪೂರ್ವಕ್ಕೆ:-ಬಸವರಾಜ ತಂದೆ ಸಂಗನಬಸಪ್ಪ ಇವರ ಜಮೀನು, ಪಶ್ಚಿಮಕ್ಕೆ:-ಶರಣಪ್ಪ ತಂದೆ ಮಹಾದೇವಪ್ಪ ಇವರ ಜಮೀನು, ಉತ್ತರಕ್ಕೆ:-ಗಂಗಪ್ಪ ತಂದೆ ಸಂಗಪ್ಪ ಇವರ ಹೊಲ, ದಕ್ಷಿಣಕ್ಕೆ:-ಸುಶೀಲಾದೇವಿ ಗಂಡ ಬಸಯ್ಯ ಸ್ವಾಮಿ ಇವರು ಹೊಲ ಇರುತ್ತದೆ. ಸದರಿ ಜಮೀನಿನ ಸವರ್ೆ ನಂ. ಪಟ್ಟೆದಾರರ ಹೆಸರು ಹಾಗೂ ಚೆಕ್ಕಬಂದಿಯನ್ನು ಕಂದಾಯ ಇಲಾಖೆಯ ಗ್ರಾಮ ಲೇಖಾಪಾಲಕರು ಮತ್ತು ಕಂದಾಯ ನಿರೀಕ್ಷಕರು ದೃಢಪಡಿಸಿರುತ್ತಾರೆ. ಸದರಿ ಜಮಿನಿನಲ್ಲಿ ಅಕ್ರಮ ಮರಳು ಸಂಗ್ರಹಿಸಿದ ಪಂಚನಾಮೆಯನ್ನು 5-30 ರಿಂದ 6 ಗಂಟೆ ಪಿಎಮ್ ವರೆಗೂ ಜಪ್ತಿ ಮಾಡಿಕೊಂಡೆವು. ಹೀಗೆ ಒಟ್ಟು 195 ಘನ ಮೀಟರ್ ಮರಳು ಇದ್ದು, ಅದರ ಅಂಕಿ ಅಂಶ 2,73,000/- ರೂ. ಬೆಲೆ ಬಾಳುವ ಸರಕಾರದ ಸ್ವತ್ತು ಹಾಗೂ ನೈಸಗರ್ಿಕ ಮರಳನ್ನು ಕೃಷ್ಣಾ ನದಿ ತೀರದಿಂದ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸದರಿ ಜಮೀನಿನಲ್ಲಿ ಸಂಗ್ರಹಣೆ ಮಾಡಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ಈ ದೂರು ಸಲ್ಲಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 34/2021 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

Last Updated: 13-03-2021 10:24 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080