ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-03-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 35/2022 ಕಲಂ 379 ಐಪಿಸಿ : ಇಂದು ದಿನಾಂಕ 12.03.2022 ರಂದು 01.00 ಗಂಟೆಗೆ ವಿಜಯಕುಮಾರ ಪಿಐ ಸಾಹೇಬ ಸೈದಾಪೂರ ಠಾಣೆ ರವರು ಠಾಣೆಗೆ ಬಂದು ರಾಂಪೂರ ಹಳ್ಳದಲ್ಲಿ ಮರಳು ತುಂಬಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಇಂಜನ್ ಚಾಸ್ಸಿಸ್ ಸಂಖ್ಯೆ: ಚಏಃಅ05134 ಮತ್ತು ಯಾವುದೇ ನೊಂದಣೆ ಸಂಖ್ಯೆ ಇಲ್ಲದ ಇಂಜನಗೆ ಜೋಡಿಸಿದ ಟ್ರ್ಯಾಲರ್ ವಾಹನವನ್ನು ಜಪ್ತಿ ಪಂಚನಾಮೆದೊಂದಿಗೆ ನನಗೆ ಒಪ್ಪಿಸಿ ಮುಂದಿನ ಕಾನೂನು ಕ್ರಮಕೈಕೊಳ್ಳುವಂತೆ ಜ್ಞಾಪನ ಪತ್ರದ ಮೂಲಕ ಸೂಚಿಸಿರುತ್ತಾರೆ. ಸದರಿ ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ನಾನು ಬಸಪ್ಪ ಕುಂಬಾರ ಸಿ.ಹೆಚ್.ಸಿ-142 ಸೈದಾಪೂರ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 35/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 21/2022 ಕಲಂ: 279, 337, 338 ಐಪಿಸಿ : ಇಂದು ದಿನಾಂಕ: 12/03/2022 ರಂದು 07.30 ಪಿ.ಎಮ್ ಸುಮಾರಿಗೆ ಗಂಗಪ್ಪ ತಂದೆ ಭೀರಪ್ಪ ಕಾಚೂರ ವಯಾ: 60 ಉ: ಒಕ್ಕಲುತನ ಜಾ: ಕುರುಬರ ಸಾ: ದರ್ಶನಾಪೂರ ತಾ: ಶಹಾಪೂರ ಜಿ: ಯಾದಗಿರಿ ಇವರು ಒಂದು ಲಿಖಿತ ಅಜರ್ಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ:09/03/2022 ರಂದು 08.10 ಪಿಎಂ ಸುಮಾರಿಗೆ ನಮ್ಮೂರಿನ ನಾಗಪ್ಪ ತಂದೆ ಮಲ್ಲಪ್ಪ ಪೂಜಾರಿ ಇವರು ಪೋನ ಮಾಡಿ ವಿಷಯ ತಿಳಿಸಿದ್ದೇನಂದರೆ, ನಾನು ಮತ್ತು ಸಿದ್ದಪ್ಪ ತಂದೆ ಕೆರೆಪ್ಪ ಮಕಾಶಿ ಇಬ್ಬರು ದರ್ಶನಾಪೂರ ಕ್ರಾಸ್ ದಿಂದ ಊರಲ್ಲಿ ಬರುತ್ತಿದ್ದಾಗ ನಮ್ಮಗಿಂತಲು ಸ್ವಲ್ಪ ಮುಂದೆ ನಿಮ್ಮ ಮಗನಾದ ಭೀರಪ್ಪ ತಂದೆ ಗಂಗಪ್ಪ ಕಾಚೂರ ವಯಾ:30 ಉ: ಒಕ್ಕಲುತನ ಜಾ: ಕುರುಬರ ಸಾ: ದರ್ಶನಾಪೂರ ತಾ: ಶಹಾಪೂರ ಜಿ: ಯಾದಗಿರಿ ಈತನು ನಡೆದುಕೊಂಡು ದರ್ಶನಾಪೂರ ಕ್ರಾಸ್ ದಿಂದ ಊರಲ್ಲಿ ಬರುತ್ತಿದ್ದ, ಅಂದಾಜು 08.00 ಪಿಎಂ ಸುಮಾರಿಗೆ ನಮ್ಮುರಿನ ಹತ್ತಿರ ಮೇನ್ ಕೆನಾಲ ದಾಟಿ ಅಂದಾಜು 100 ಮೀಟರ್ ಮುಂದೆ ಉತ್ತರದ ಕಡೆಗೆ ರೋಡಿನಲ್ಲಿಯ ಒಂದು ಸಣ್ಣ ಪೂಲ್ ಹತ್ತಿರ ಹೋಗುತ್ತಿದ್ದಾಗ, ನಮ್ಮ ಹಿಂದಿನಿಂದ ಅಂದರೆ ದರ್ಶಪೂರ ಕ್ರಾಸ್ ಕಡೆಯಿಂದ ಬಂದ ಒಂದು ಮೋಟಾರ್ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲ್ ಅನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರೋಡಿನಲ್ಲಿ ಸೈಡಿಗೆ ನಡೆದುಕೊಂಡು ಹೋಗುತ್ತಿದ್ದ ನಿಮ್ಮ ಮಗನಾದ ಭೀರಪ್ಪನಿಗೆ ಡಿಕ್ಕಿ ಪಡೆಸಿದ ಪರಿಣಾಮವಾಗಿ ನಿಮ್ಮ ಮಗನಾದ ಭೀರಪ್ಪನು ರೋಡಿನಲ್ಲಿ ಬಿದ್ದಿದ್ದು, ಆತನ ಎರಡು ಕಾಲುಗಳ ಪಾದದ ಮೇಲೆ ಮುರಿದ ಭಾರಿ ಗುಪ್ತಗಾಯಗಳಾಗಿದ್ದು, ತೆಲೆಗೆ ಮತ್ತು ಬೆನ್ನಿಗೆ ಗುಪ್ತ ಪೆಟ್ಟಾಗಿರುತ್ತವೆ. ಮೈ ಕೈಗಳಿಗೆ ತರಚಿದ ಗಾಯಗಳಾಗಿದ್ದು, ಅಪಘಾತ ಮಾಡಿದ ಮೋಟಾರ್ ಸೈಕಲ್ ಚಾಲಕನು ಕೂಡ ರೋಡಿನಲ್ಲಿ ಬಿದ್ದಿದ್ದು, ನೋಡಲಾಗಿ ಸದರಿಯವನು ನಮ್ಮೂರಿನ ಹಣಮಂತ ತಂದೆ ಮಹಾದೇವಪ್ಪ ಭಜಂತ್ರಿ ವಯಾ: 30 ವರ್ಷ ಇದ್ದು, ಆತನಿಗೂ ಕೂಡ ತುಟಿಗೆ ರಕ್ತಗಾಯವಾಗಿದ್ದು, ಎಡಕಿವಿಯ ಹಿಂದೆ ರಕ್ತಗಾಯವಾಗಿದ್ದು, ಮೈ, ಕೈಗಳಿಗೆ ತರಚಿದ ಗಾಯಗಳಾಗಿದ್ದು, ಕುತ್ತಗೆಯ ಹಿಂದೆ ಗುಪ್ತ ಪೆಟ್ಟಾಗಿರುತ್ತದೆ. ಮೋಟಾರ್ ಸೈಕಲ್ ನಂ: ಕೆಎ-36-ಇಡಬ್ಲೂ-5533 ಅಂತಾ ಇರುತ್ತದೆ. ನೀವು ಕೂಡಲೆ ಬನ್ನಿ ಅಂತಾ ತಿಳಿಸಿದರು. ಆಗ ನಾನು ಮತ್ತು ನಮ್ಮ ಸಣ್ಣ ಮಗನಾದ ಬಸವರಾಜ ತಂದೆ ಗಂಗಪ್ಪ ಕಾಚೂರ ಇಬ್ಬರು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗನಾದ ಭೀರಪ್ಪನಿಗೆ ಮತ್ತು ಅಪಘಾತ ಮಾಡಿದ ಮೋಟಾರ್ ಸೈಕಲ್ ಚಾಲಕ ಹಣಮಂತ ಭಜಂತ್ರಿ ಇವರಿಗೆ ಗಾಯ ಪೆಟ್ಟುಗಳಾಗಿದ್ದವು. ನಂತರ ಎಲ್ಲರೂ ಕೂಡಿ ಇಬ್ಬರು ಗಾಯಾಳುದಾರರಿಗೆ ಶಹಾಪೂರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ಸೇರಿಸಿ ನಂತರ ನಮ್ಮ ಮಗನಿಗೆ ಹೆಚ್ಚಿನ ಉಪಚಾರಕ್ಕೆ ಮಿರಜದ ಜಿ.ಎಸ್. ಕುಲಕಣರ್ಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ಹಣಮಂತ ಭಜಂತ್ರಿ ಈತನಿಗೆ ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿರುತ್ತಾರೆ. ನಮ್ಮ ಮಗನಿಗೆ ಆಸ್ಪತ್ರೆಗೆ ಸೇರಿಕೆ ಮಾಡಿ ತಡವಾಗಿ ಇಂದು ದಿನಾಂಕ: 12/03/2022 ರಂದು ಠಾಣೆಗೆ ಬಂದು ಈ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನಮ್ಮ ಮಗನಿಗೆ ಅಪಘಾತ ಮಾಡಿದ ಮೋಟಾರ್ ಸೈಕಲ್ ನಂ:ಕೆಎ-36-ಇಡಬ್ಲೂ-5533 ನೇದ್ದರ ಚಾಲಕ ಹಣಮಂತ ತಂದೆ ಮಹಾದೇವಪ್ಪ ಭಜಂತ್ರಿ ವಯಾ: 30 ವರ್ಷ ಸಾ: ದರ್ಶನಾಪೂರ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ. ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 21/2022 ಕಲಂ: 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 13/2022 ಕಲಂ: 279, 337, 338 ಐಪಿಸಿ ಸಂಗಡ 187 ಐಎಮ್ವಿ ಕಾಯ್ದೆ : ಇಂದು ದಿನಾಂಕ:12/03/2022 ರಂದು 3:00 ಪಿ.ಎಮ್ ಗಂಟೆಗೆ ಫಿರ್ಯಾದಿ ದಾದಾಫಿರ್ ತಂದೆ ಮಿಯಾಸಾಬ್ ಹವಾಲ್ದಾರ್, ವಯ:31 ವರ್ಷ, ಜಾ:ಮುಸ್ಲಿಂ, ಉ:ಕೂಲಿ ಕೆಲಸ, ಸಾ:ಈಚನಾಳ, ತಾ:ಲಿಂಗಸೂರು, ಜಿ:ರಾಯಚೂರ್ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು, ಹೇಳಿಕೆ ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ:09/03/2022 ರಂದು ನಾನು ನಮ್ಮ ಊರು ಈಚನಾಳದಲ್ಲಿ ನಮ್ಮ ಮನೆಯಲ್ಲಿ ಇದ್ದಾಗ ಬೆಳಿಗ್ಗೆ 10:15 ಎ.ಎಮ್ ಸುಮಾರಿಗೆ ನಮ್ಮೂರಿನ ದುರ್ಗಪ್ಪ ತಂದೆ ಬಸಪ್ಪ ಮಡಿವಾಳರ ಸಾ:ಈಚನಾಳ ಈತನು ನನ್ನ ಮೊಬೈಲ್ ಗೆ ಕಾಲ್ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನಿಮ್ಮ ಅಣ್ಣನಾದ ಖಾಜಾವಲಿ ತಂದೆ ಮಿಯಾಸಾಬ್ ಹವಾಲ್ದಾರ್ ಇಬ್ಬರೂ ಕೂಡಿಕೊಂಡು ನಮಗೆ ಪರಿಚಯದವರ ಹಿರೋ ಹೊಂಡಾ ಸಿ.ಡಿ ಡಿಲಕ್ಷ ಮೋಟಾರು ಸೈಕಲ್ ನಂಬರ ಕೆ.ಎ-36 ಎಕ್ಷ್-8271 ನೇದ್ದನ್ನು ತೆಗೆದುಕೊಂಡು ಕೊಡೆಕಲ್ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಹೋಗಬೇಕೆಂದು ಹೊರಟು ಈಚನಾಳದಿಂದ ಮೊಟಾರು ಸೈಕಲ್ ನಿಮ್ಮ ಅಣ್ಣ ಖಾಜಾವಲಿ ನಡೆಸುತ್ತಿದ್ದು, ದಿನಾಂಕ:09.03.2022 ರಂದು 10:00 ಎ.ಎಮ್. ಸುಮಾರಿಗೆ ನಾರಾಯಣಪೂರ ಕೊಡೆಕಲ್ ರಸ್ತೆ ಮೇಲೆ ಜೋಗುಂಡಬಾವಿ ಗ್ರಾಮದ ಶ್ರೀ ಕನಕದಾಸ ವೃತ್ತದ ಹತ್ತಿರ ನಾವು ಹೋಗುತ್ತಿದ್ದಾಗ ನಮ್ಮ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ್ನ್ನು ಅದರ ಚಾಲಕನು ಅತೀ ವೇಗ ಹಾಗು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರು ಸೈಕಲ್ಗೆ ಡಿಕ್ಕಿ ಪಡಿಸಿ ಟ್ರ್ಯಾಕ್ಟರ್ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಟ್ರ್ಯಾಕ್ಟರ್ನ್ನು ನೋಡಲಾಗಿ ಅದರ ನಂಬರ ಕೆಎ-33, ಟಿ.ಎ-4570 ಮೆಸ್ಸಿ ಫಗ್ಯರ್ುಶನ್ ಇದ್ದು, ಅಲ್ಲಿ ನೆರೆದವರಲ್ಲಿ ಓಡಿ ಹೋದ ಚಾಲಕನ ಹೆಸರು ವಿಚಾರಿಸಲಾಗಿ ಮಾಳಿಂಗರಾಯ ತಂದೆ ಬಸಣ್ಣ ಸಾ:ಜೋಗುಂಡಬಾವಿ ಅಂತಾ ತಿಳಿದು ಬಂದಿರುತ್ತದೆ. ಈ ಅಪಘಾತದಲ್ಲಿ ನನಗೆ ಯಾವುದೇ ಗಾಯಗಳು ಆಗಿರುವದಿಲ್ಲ. ನಿಮ್ಮ ಅಣ್ಣ ಖಾಜಾವಲಿ ಬಿದ್ದಲ್ಲಿ ಹೋಗಿ ನೋಡಲಾಗಿ ಅವನಿಗೆ ಬಲಗಾಲು ಮುರಿದಿದ್ದು, ಹಣೆಗೆ, ಬಲಗೈ ಮೊಳಕೈಗೆ ಭಾರಿ ರಕ್ತಗಾಯಗಳಾಗಿದ್ದು, ಎದೆಯ ಬಲಭಾಗಕ್ಕೆ ಒಳಪೆಟ್ಟಾಗಿದ್ದು, ಎಡಗೈ ಮೊಳಕೈಗೆ ಹಾಗು ಎಡಗಾಲಿಗೆ ತರಚಿದ ಗಾಯಗಳಾಗಿರುತ್ತವೆ. ಅಂತಾ ಹೇಳಿದನು. ಆಗ ನಾನು ಒಂದು ಕಾರ್ ತೆಗೆದುಕೊಂಡು ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ಅಣ್ಣನಾದ ಖಾಜಾವಲಿಯು ಅಪಘಾತವಾಗಿ ಬಿದ್ದಿದ್ದನು. ನಾನು ತೆಗೆದುಕೊಂಡು ಹೋದ ಕಾರಿನಲ್ಲಿ ಅವನಿಗೆ ಹಾಕಿಕೊಂಡು ಉಪಚಾರ ಕುರಿತು ಬಾಗಲಕೋಟೆಯ ಡಾ|| ಗುಳೇಧ್ ಅಥರ್ೋ ಹಾಸ್ಪಿಟಲ್ಗೆ ಹೋಗಿ ಸೇರಿಕೆ ಮಾಡಿ ಉಪಚಾರ ಮಾಡಿಸಿ ಹಾಗು ಮನೆಯಲ್ಲಿ ನಮ್ಮ ತಂದೆಯವರಾದ ಮಿಯಾಸಾಬ್ ತಂದೆ ಖಾಜಾಸಾಬ್ ಹವಾಲ್ದಾರ್ ರವರೊಂದಿಗೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಕಾರಣ ಸದರಿ ಅಪಘಾತ ಪಡೆಸಿದ ಟ್ರ್ಯಾಕ್ಟರ್ ನಂಬರ್ ಕೆಎ-33, ಟಿ.ಎ-4570 ಮೆಸ್ಸಿ ಫಗ್ಯರ್ುಶನ್ ನೇದ್ದರ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿಯ ಹೇಳಿಕೆಯ ಸಾರಾಂಶ ಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 50/2022 ಕಲಂ: 143, 147, 148, 323, 324, 498ಎ, 504, 506, 149 ಐಪಿಸಿ : ದಿ: 12/03/2022 ರಂದು 5.00 ಪಿಎಮ್ಕ್ಕೆ ಶ್ರೀಮತಿ ರೇಣುಕಾ ಗಂಡ ಸಕರೆಪ್ಪ ಗೋಸಿ ವಯಾ|| 25 ಜಾ|| ಕುರುಬರ ಉ|| ಕೂಲಿ ಸಾ|| ಚಿಗರಿಹಾಳ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಏನೆಂದರೆ, ನನ್ನ ತಂದೆ ತಾಯಿಯವರು ನನಗೆ 6 ವರ್ಷಗಳ ಹಿಂದೆ ನಮ್ಮೂರ ಸಕರೆಪ್ಪ ತಂದೆ ಹಣಮಂತ ಗೋಸಿ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು ಮದುವೆಯಾದ ಬಳಿಕ ನಾನು ಮತ್ತು ನನ್ನ ಗಂಡ ಇಬ್ಬರೂ 4 ವರ್ಷಗಳ ತನಕ ಚನ್ನಾಗಿ ಸಂಸಾರ ಸಾಗಿಸಿದ್ದು ನಮಗೆ ಮಕ್ಕಳಾಗಿಲ್ಲ. ಆದರೆ ಈಗ 2 ವರ್ಷದ ಹಿಂದಿನಿಂದ ನನ್ನ ಗಂಡನು ತನ್ನ ತಾಯಿ ಹಾಗೂ ಅಣ್ಣ ತಮ್ಮಂದಿರ ಮಾತು ಕೇಳಿ ನನ್ನೊಂದಿಗೆ ಜಗಳ ಮಾಡಿ ತೊಂದರೆ ಕೊಡುತ್ತಾ ಬಂದನು. ನನ್ನ ಗಂಡ ಹಾಗೂ ಅವನ ಮನೆಯವರು ನೀಡಿದ ತೊಂದರೆ ಅನುಭವಿಸುತ್ತಾ ಗಂಡನ ಮನೆಯಲ್ಲಿಯೇ ಇದ್ದೆನು. ನನ್ನ ಸಮಸ್ಯೆ ನಮ್ಮ ತಂದೆ ತಾಯಿಯರಿಗೆ ಹೇಳಿದ್ದರಿಂದ ನಮ್ಮ ತಂದೆ ತಾಯಿಯರು ನನ್ನ ಗಂಡನಿಗೆ ಮತ್ತು ಅವನ ಮನೆಯವರಿಗೆ ನನ್ನೊಂದಿಗೆ ಚನ್ನಾಗಿ ಇರುವಂತೆ ತಿಳಿ ಹೇಳಿದ್ದರೂ ಅವರ ಮಾತು ಕೇಳದೇ ಮತ್ತೆ ನನ್ನ ಜೊತೆಗೆ ಜಗಳ ಮಾಡಲು ಹತ್ತಿದರು. ಆಗ ನನ್ನ ತಂದೆ ತಾಯಿಯರು ನನಗೆ ತವರುಮನೆಗೆ ಕರೆದುಕೊಂಡು ಹೋದರು. ನಾನು ಸುಮಾರು 2 ವರ್ಷಗಳ ಹಿಂದಿನಿಂದ ನನ್ನ ತವರುಮನೆಯಲ್ಲಿಯೇ ಇರುತ್ತೇನೆ. ನನ್ನ ಗಂಡ ಹಾಗೂ ಅವರ ಮನೆಯವರು ನನಗೆ ದೈಹಿಕ ಮತ್ತು ಮಾನಸಿಕ ತೊಂದರೆ ಕೊಡುತ್ತಾ ಬಂದಿದ್ದರಿಂದ ಮತ್ತು ನನ್ನ ಉಪಜೀವನಕ್ಕೆ ತೊಂದರೆಯಾಗುತ್ತಿದ್ದುದರಿಂದ ನಾನು ಕೋಟರ್ಿನಲ್ಲಿ ಮೆಂಟೇನೆನ್ಸ್ ಕೇಸ್ ಹಾಕಿದ್ದೇನೆ. ನಾನು ಹಾಕಿರುವ ಮೆಂಟೇನೆನ್ಸ್ ಕೇಸಿನ ವಿಷಯದಲ್ಲಿ ನನ್ನ ಗಂಡ ಹಾಗೂ ಅವರ ತಮ್ಮನಾದ ಮಾಳಪ್ಪ ಇವರು ನಮ್ಮ ತವರು ಮನೆಗೆ ಬಂದು ನನ್ನೊಂದಿಗೆ ಜಗಳ ಮಾಡಿದ್ದರು. ನಮ್ಮ ತಾಯಿ ಮತ್ತು ನಮ್ಮ ಅಣ್ಣನಾದ ಮಲ್ಲಿಕಾಜರ್ುನ ಇವರು ನೀವು ಯಾಕೆ ನಮ್ಮ ಮನೆಗೆ ಬಂದು ತೊಂದರೆ ಕೊಡುತ್ತಿದ್ದೀರಿ ಸುಮ್ಮನೆ ಹೋಗಿರಿ ಅಂತಾ ಹೇಳಿದಾಗ ಅವರು ರೇಣುಕಾ ಹಾಕಿರುವ ಕೇಸ್ ವಾಪಸ್ ಪಡೆದುಕೊಳ್ಳದಿದ್ದರೆ ಅವಳಿಗೆ ಸುಮ್ಮನೆ ಬಿಡುವುದಿಲ್ಲ ಅನ್ನುತ್ತಾ ಅಲ್ಲಿಂದ ಹೋದರು. ಆದರೆ ನಾನು ಹಾಕಿರುವ ಕೇಸಿನ ಸಿಟ್ಟಿನಿಂದ ದಿನಾಂಕ 10/03/2022 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ನಾನು, ನಮ್ಮ ತಾಯಿಯಾದ ತಿಪ್ಪವ್ವ ಮತ್ತು ನಮ್ಮ ಅಣ್ಣನಾದ ಮಲ್ಲಿಕಾಜರ್ುನ ಮೂರು ಜನರು ನಮ್ಮ ಮನೆಯ ಮುಂದೆ ಕುಳಿತಿದ್ದಾಗ 1) ಸಕರೆಪ್ಪ ತಂದೆ ಹಣಮಂತ ಗೋಸಿ 2) ಮಾಳಪ್ಪ ತಂದೆ ಹಣಮಂತ ಗೋಸಿ 3) ಭೀಮಣ್ಣ ತಂದೆ ಹಣಮಂತ ಗೋಸಿ 4) ಮುದುಕಪ್ಪ ತಂದೆ ಹಣಮಂತ ಗೋಸಿ 5) ಬೀರಪ್ಪ ತಂದೆ ಹಣಮಂತ ಗೋಸಿ 6) ನಿಂಗಮ್ಮ ಗಂಡ ಹಣಮಂತ ಗೋಸಿ 7) ಮಲ್ಲವ್ವ ಗಂಡ ಮಾಳಪ್ಪ ಗೋಸಿ 8) ದೇವಿಂದ್ರಮ್ಮ ಗಂಡ ಭೀಮಣ್ಣ ಗೋಸಿ 9) ಸೋಮವ್ವ ಗಂಡ ಮುದುಕಪ್ಪ ಗೋಸಿ 10) ಬಸವ್ವ ಗಂಡ ಮುದುಕಪ್ಪ ಗೋಸಿ 11) ದೇವಮ್ಮ ಗಂಡ ಬೀರಪ್ಪ ಗೋಸಿ 12) ಲಕ್ಷ್ಮೀ ಗಂಡ ಸಕರೆಪ್ಪ ಗೋಸಿ ಇವರೆಲ್ಲರೂ ಕೂಡಿ ಕೈಯಲ್ಲಿ ಬಡಿಗೆ ಹಿಡಿದುಕೊಂಡು ನಾವಿದ್ದಲ್ಲಿಗೆ ಬಂದವರೆ ಏನಲೇ ರೇಣಿ ನಿನಗೆ ಎಷ್ಟು ಸಲ ಹೇಳಬೇಕು ಕೇಸ್ ವಾಪಸ್ ತೊಗೋ ಅಂತಾ ಆದರೂ ನೀನು ನಿನ್ನ ಸೊಕ್ಕಿನಿಂದ ಕೇಸು ನಡೆಸುತ್ತಿದ್ದಿಯಾ ಅಂತಾ ಅವಾಚ್ಯವಾಗಿ ಬೈಯುತ್ತಾ ನನ್ನೊಂದಿಗೆ ಜಗಳ ಮಾಡಲು ಪ್ರಾರಂಭಿಸಿ ನನ್ನ ಗಂಡನಾದ ಸಕರೆಪ್ಪನು ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಮಾಳಪ್ಪನು ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು. ಉಳಿದವರು ಬಿಡಬೇಡರಿ ಹೊಡಿರಿ ಈ ಸೂಳಿಗೆ ಅಂತಾ ಅವಾಚ್ಯವಾಗಿ ಬೈಯುತ್ತಾ ಹೊಡೆಯಲು ಬರುತ್ತಿದ್ದಾಗ ಅಲ್ಲಿಯೇ ಇದ್ದ ನಮ್ಮ ತಾಯಿಯಾದ ತಿಪ್ಪವ್ವ ಮತ್ತು ನಮ್ಮ ಅಣ್ಣನಾದ ಮಲ್ಲಿಕಾಜರ್ುನ ತಂದೆ ಚಳಿಗೆಪ್ಪ ಬುಡುಗಾನವರ, ಮತ್ತು ನಮ್ಮೂರ ಯಂಕಣ್ಣ ತಂದೆ ಭೀಮಣ್ಣ ದೊರಿ, ತಿಮ್ಮಣ್ಣ ತಂದೆ ಬಸಪ್ಪ ಭೋವಿ ಇವರು ಬಂದು ಜಗಳ ಬಿಡಿಸಿಕೊಂಡರು. ಆಗ ಅವರು ನನಗೆ ಹೊಡೆಯುವುದು ಬಿಟ್ಟು ಇದೊಂದು ಸಲ ಉಳಿದೀದಿ ನೀನು ಕೇಸು ತೆಗೆದುಕೊಳ್ಳದಿದ್ದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಭಯ ಹಾಕಿದ್ದು ಇರುತ್ತದೆ. ಈ ವಿಷಯದಲ್ಲಿ ನಮ್ಮ ಮನೆಯಲ್ಲಿ ವಿಚಾರಿಸಿಕೊಂಡು ಇಲ್ಲಿಯವರೆಗೆ ಕಾದು ನಾನು ತಡವಾಗಿ ಇಂದು ಠಾಣೆಗೆ ಬಂದು ಈ ದೂರು ನೀಡಿದ್ದು, ನನಗೆ ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ ಹೊಡೆದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 12 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇತ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 50/2022 ಕಲಂ: 143, 147, 148, 323, 324, 498ಎ, 504, 506, 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 13-03-2022 10:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080