ಅಭಿಪ್ರಾಯ / ಸಲಹೆಗಳು

                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13-05-2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 65/2021 ಕಲಂ 143, 147, 148, 323, 324, 326, 504, 506 ಸಂ 149 ಐ.ಪಿ.ಸಿ : ದಿನಾಂಕ 11/05/2021 ರಂದು ಸಾಯಂಕಾಲ 5-30 ಪಿ.ಎಮ್ ಕ್ಕೆ ಪಿರ್ಯಾಧಿ ಮತ್ತು ಅವನ ಮನೆಯವರೆಲ್ಲರೂ ತಮ್ಮ ಮನೆ ಮುಂದೆ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಹಳೇ ದ್ವೇಶದಿಂದ ಫೀರ್ಯಾಧಿ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು, ಫಿರ್ಯಾಧಿಗೆ ಮತ್ತು ಅವನ ತಮ್ಮನಿಗೆ ಕೊಡಲಿಯಿಂದ, ಪ್ಲಾಸ್ಟಿಕ್ ಪೈಪದಿಂದ ಮತ್ತು ಕಟ್ಟಿಗೆಗಳಿಂದ ಹೊಡೆದು ಭಾರಿ ರಕ್ತಗಾಯ, ಗುಪ್ತಗಾಯ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಪ್ರಕರಣದ ದಾಖಲು ಆಗಿರುತ್ತದೆ.

ವಡಗೇರಾ ಪೊಲೀಸ್ ಠಾಣೆ :- 58/2021 ಕಲಂ: 379 ಐಪಿಸಿ : ಇಂದು ದಿನಾಂಕ: 12/05/2021 ರಂದು 11-30 ಎಎಮ್ ಕ್ಕೆ ಶ್ರೀ ರಾಜಶೇಖರ ಪಾಟೀಲ್ ಪಿಸಿ 177 ವಡಗೇರಾ ಪೊಲೀಸ್ ಠಾಣೆ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ವಡಗೇರಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಎಂದು ದಿನಾಂಕ:02/09/2016 ರಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪ್ರಸ್ತುತ ವಡಗೇರಾ ಪೊಲೀಸ್ ಠಾಣೆಯಲ್ಲಿ 2021 ನೇ ಸಾಲಿನ ಜನೆವರಿ ತಿಂಗಳದಿಂದ ನನಗೆ ಐಕೂರು, ಅನಕಸೂಗೂರು ಮತ್ತು ಕುರಿಹಾಳ ಗ್ರಾಮಗಳ ಬೀಟ್ ಸಂ. 21 ನೇದ್ದನ್ನು ಬೀಟ್ ಕರ್ತವ್ಯ ಕುರಿತು ಹಂಚಿಕೆ ಮಾಡಿರುತ್ತಾರೆ. ದಿನಾಂಕ:29/04/2021 ರಂದು ರಾತ್ರಿ ಐಕೂರು ಸೀಮಾಂತರದ ಕೃಷ್ಣಾ ನದಿ ದಡದ ಪಟ್ಟಾ ಜಮೀನುಗಳಾದ ಸವರ್ೆ ನಂ.1 ಮತ್ತು ಸವರ್ೆ ನಂ. 482 ರಲ್ಲಿ ಅಕ್ರಮವಾಗಿ ಕಳ್ಳತನದಿಂದ ಅಂದಾಜು 170 ಟ್ರ್ಯಾಕ್ಟರ ಮರಳು ಸಂಗ್ರಹಣೆ ಮಾಡಿರುತ್ತಾರೆ. ನಾವು 8-15 ಪಿಎಮ್ ಕ್ಕೆ ಸ್ಥಳಕ್ಕೆ ಭೇಟಿ ನೀಡಿ ದೂರು ಕೊಡಲು ಠಾಣೆಗೆ ಬಂದಿರುತ್ತೇವೆ ಎಂದು ಐಕೂರು ಗ್ರಾಮ ಲೇಖಾಪಾಲಕ ಶ್ರೀ ಅಮರೇಶ ಇವರು ದಿನಾಂಕ:29/04/2021 ರಂದು 10-15 ಪಿಎಮ್ ಕ್ಕೆ ಠಾಣೆಗೆ ಹಾಜರಾಗಿ ಲಿಖಿತ ದೂರು ಕೊಟ್ಟ ಮೇರೆಗೆ ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 52/2021 ಕಲಂ: 379 ಐಪಿಸಿ ದಾಖಲಾಗಿರುತ್ತದೆ. ಸದರಿ ಪ್ರಕರಣ ರಾತ್ರಿ ವರದಿಯಾಗಿದ್ದು, ಮರು ದಿನ ದಿನಾಂಕ:30/04/2021 ರಂದು ಬೆಳಗ್ಗೆ ಗುನ್ನೆ ಸ್ಥಳ ಪಂಚನಾಮೆ ಕುರಿತು ತನಿಖಾಧಿಕಾರಿಗಳು ಭೇಟಿ ನೀಡಿದ್ದು, ನಾನು ಕೂಡಾ ಅವರೊಂದಿಗೆ ಗುನ್ನೆ ಸ್ಥಳಕ್ಕೆ ಹೋದೆನು. ಗುನ್ನೆ ಸ್ಥಳ ಪಂಚನಾಮೆ ಸಮಯದಲ್ಲಿ ಗುನ್ನೆ ನಂ. 52/2021 ರ ಫಿರ್ಯಾಧಿ ಶ್ರೀ ಅಮರೇಶ ಗ್ರಾಮ ಲೇಖಾಪಾಲಕ ಇವರು ಸಂಗ್ರಹಿಸಿದ ಮರಳು ತೋರಿಸಿದ್ದು, ಗುನ್ನೆ ನಂ. 52/2021 ರ ಲಿಖಿತ ದೂರಿನಲ್ಲಿ ಅಂದಾಜು 170 ಟ್ರ್ಯಾಕ್ಟರ ಮರಳು ಎಂದು ತೋರಿಸಿದ್ದು, ಸದರಿ 170 ಟ್ರ್ಯಾಕ್ಟರ ಮರಳು ಅಲ್ಲಲ್ಲಿ ಲಾಟ ಹಾಕಿದ್ದು, ಅವುಗಳಲ್ಲಿ ಕೆಲವೊಂದು ಲಾಟಗಳು ಅರ್ಧ ಅರ್ಧ ಖಾಲಿಯಾಗಿದ್ದವು. ರಾತ್ರಿ ನಾವು ದೂರು ಕೊಡಲು ಠಾಣೆಗೆ ಬಂದಾಗ ಸದರಿ ಜಮೀನುಗಳ ಮಾಲಿಕರ ಕುಮ್ಮಕ್ಕಿನಿಂದ ಯಾರೋ ಕಳ್ಳರು ಸಂಗ್ರಹಿಸಿದ ಮರಳಿನ ಲಾಟಗಳಿಂದ ಅಂದಾಜು 60 ರಿಂದ 70 ಟ್ರ್ಯಾಕ್ಟರ ಮರಳು ಕಳ್ಳತನ ಮಾಡಿಕೊಂಡು ಹೋಗಿರಬಹುದು ಎಂದು ಹೇಳಿದನು. ಕಾರಣ ದಿನಾಂಕ:29/04/2021 ರಂದು ರಾತ್ರಿ ಕಂದಾಯ ಅಧಿಕಾರಿಗಳು 8-15 ಪಿಎಮ್ ಕ್ಕೆ ಸ್ಥಳಕ್ಕೆ ಭೇಟಿ ನೀಡಿ ನಂತರ ದೂರು ಕೊಡಲು ಠಾಣೆಗೆ ಬಂದಾಗ ಸದರಿ ಜಮೀನು ಸವರ್ೆ ನಂ. 1 ರ ಮಾಲಿಕ ಪ್ರಭಾಕರ ತಂದೆ ಶರಣಪ್ಪಗೌಡ ಮಾಲಿಪಾಟಿಲ್ ಮತ್ತು ಸವರ್ೆ ನಂ. 482 ರ ಮಾಲಿಕ ದುಗರ್ಾರಾವ ತಂದೆ ಪನ್ಸಯ್ಯ ಇವರುಗಳ ಕುಮ್ಮಕ್ಕಿನಿಂದ ಯಾರೋ ಕಳ್ಳರು ಮೇಲ್ಕಂಡ ಸಂಗ್ರಹಿಸಿದ ಮರಳನ್ನು ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಠಾಣೆಗೆ ಬಂದು ದೂರು ಕೊಟ್ಟ ಸಂಗ್ರಹಿಸಿದ ಮರಳಿನಲ್ಲಿ ಅಂದಾಜು 60 ರಿಂದ 70 ಟ್ರ್ಯಾಕ್ಟರ ಮರಳು ಅ:ಕಿ:70,000/- ರೂ. ನೇದ್ದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಸದರಿ ಮರಳು ಕಳುವು ಮಾಡಿದ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 58/2021 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ :- 64/2021 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 12.05.2021 ರಂದು 3.35 ಪಿ.ಎಮ್ ಕ್ಕೆ ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದೆನೆಂದರೆ, ಇಂದು ದಿನಾಂಕ: 12.05.2021 ರಂದು ಐನಾಪುರ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸದರಿ ಸ್ಥಳಕ್ಕೆ 2.15 ಪಿಎಮ್ಕ್ಕೆ ಹೋಗಿ ದಾಳಿ ಮಾಡಿದ್ದು ದಾಳಿಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ರವಿಕುಮಾರ ತಂದೆ ಗೊಲ್ಲಾಳಪ್ಪ ಸಾಲೋಡಗಿ ವ|| 22 ಜಾ|| ಬೇಡರ ಉ|| ಒಕ್ಕಲುತನ ಸಾ|| ಐನಾಪುರ ತಾ|| ಸುರಪುರ ಅಂತ ತಿಳಿಸಿದ್ದು ಸದರಿಯವನಿಗೆ ಅಂಗಶೋಧನೆ ಮಾಡಲಾಗಿ ನಗದು ಹಣ 2110/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಸಿಕ್ಕಿದ್ದು ಇವುಗಳನ್ನು 2.15 ಪಿಎಮ್ದಿಂದ 3.15 ಪಿಎಮ್ವರೆಗೆ ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು ಇರುತ್ತದೆ ಅಂತ ವರದಿ ನೀಡಿದ್ದು ಸದರ ವರಧಿ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 64/2021 ಕಲಂ 78(3) ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ:- 65/2021 ಕಲಂ: 143,147,323,326,504,506 ಸಂಗಡ 149 ಐಪಿಸಿ : ಇಂದು ದಿನಾಂಕ 12.05.2021 ರಂದು 7.30 ಪಿಎಮ್ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಭೀಮಣ್ಣ ತಂದೆ ಕೃಷ್ಣಮೂತರ್ಿ ಮಾದರ ವಯಾ|| 28 ಜಾ|| ಮಾದರ ಉ|| ಕೂಲಿಕೆಲಸ ಸಾ|| ಮುದನೂರ ಕೆ ತಾ|| ಹುಣಸಗಿ ತಮ್ಮಲ್ಲಿ ಸಲ್ಲಿಸುವ ಪಿರ್ಯಾದಿ ಅಜರ್ಿ ಏನೆಂದರೆ, ದಿನಾಂಕ: 03/05/2021 ರಂದು ನಾನು ಮನೆಗೆ ಹೋಗುತ್ತಿದ್ದಾಗ ನಮ್ಮ ಜನಾಂಗದ ಸಂಗಪ್ಪ ತಂದೆ ರಾಮಚಂದ್ರಪ್ಪ ದೊಡಮನಿ ಈತನು ನನ್ನ ಮೋಟರ ಸೈಕಲ್ಗೆ ಡಿಕ್ಕಿಪಡಿಸಿದ್ದು, ತಿಳಿಯದೇ ಮಾಡಿರಬಹುದು ಅಂತ ಸುಮ್ಮನಿದ್ದು ನಂತರ ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ನಾನು ಸಂಗಪ್ಪ ತಂದೆ ರಾಮಚಂದ್ರಪ್ಪ ದೊಡಮನಿ ಇವರ ಮನೆಯ ಮುಂದೆ ಹೋಗಿ ಏಕೆ ನಮ್ಮ ಮೋಟರ ಸೈಕಲ್ಗೆ ಡಿಕ್ಕಿಪಡೆಸಿರುವಿ ನೋಡಿ ನಡೆಸಬೇಕು ಅಂತ ಅಂದಾಗ ನಮ್ಮ ಜನಾಂಗದವರೇ ಆದ 1) ಮೌನೇಶ ತಂದೆ ನಿಂಗಪ್ಪ ದೊಡಮನಿ 2) ಮಹಾದೇವಪ್ಪ ತಂದೆ ರಾಮಪ್ಪ ದೊಡಮನಿ 3) ಅಂಬಲಪ್ಪ ತಂದೆ ನಿಂಗಪ್ಪ ದೊಡಮನಿ 4) ಸಂಗಪ್ಪ ತಂದೆ ರಾಮಚಂದ್ರಪ್ಪ ದೊಡಮನಿ 5) ರವಿ ತಂದೆ ದೇವಿಂದ್ರಪ್ಪ ಚನ್ನಪಟ್ಟಣ ಈ ಎಲ್ಲಾ ಜನರು ಗುಂಪುಕಟ್ಟಿಕೊಂಡು ಬಂದವರೇ ಏನಲೆ ಸೂಳೆಮಗನೆ ನಮ್ಮ ಮನೆಯವರೆಗೆ ಬಂದು ಕೇಳುವಷ್ಟು ಸೊಕ್ಕು ಬಂದಿದೆಯಾ ಅಂತ ಅಂದಾಗ ನಾನು ಏನು ತಪ್ಪು ಮಾತನಾಡಿದ್ದೇನೆ ಏಕೆ ಬೈಯುತ್ತೀರಿ ಅಂತ ಅಂದಾಗ ಮೇಲ್ಕಾಣಿಸಿದ 5 ಜನರು ಗುಂಪುಕಟ್ಟಿಕೊಂಡು ನನ್ನ ಹತ್ತಿರ ಬಂದವರೇ ಈ ಸೂಳೆಮಗನ ಸೊಕ್ಕು ಬಹಳ ಆಗಿದೆ ಅಂತ ಬೈಯುತ್ತಾ ಎಲ್ಲರು ಕೈಯಿಂದ ಹೊಡೆಬಡೆ ಮಾಡಿ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅವರಲ್ಲಿಯ ಮೌನೇಶ ತಂದೆ ನಿಂಗಪ್ಪ ದೊಡಮನಿ ಈತನು ಅಲ್ಲಿಯೇ ಇದ್ದ ಬೆಡಗದ ಕಾವಿನಿಂದ ನನ್ನ ಎಡಗೈ ಮೊಳಕೈ ಹತ್ತಿರ ಹಾಗೂ ಚೇರಿಗೆ ಬಲವಾಗಿ ಹೊಡೆದು ಭಾರಿ ಗುಪ್ತಗಾಯಪಡಿಸಿದನು. ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ನಮ್ಮ ಮನೆಯಲ್ಲಿದ್ದ ಅಳಿಯ ಅಂಬ್ರೇಶ ಶೇಖಸಿಂದಿ, ತಾಯಿ ದ್ಯಾಮವ್ವ ಮಾದರ ಹಾಗೂ ಹೆಂಡತಿ ರೂಪಾ ಇವರು ಓಡಿ ಬಂದು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರೆಲ್ಲರು ಹೊಡೆಯುವದನ್ನು ಬಿಟ್ಟು ಸೂಳೆ ಮಗನೆ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾನು ಮನೆಗೆ ಹೋಗಿ ಚೇರ ಬಾವು ಬಂದು ಬಹಳ ತ್ರಾಸ ಆಗುತ್ತಿದ್ದರಿಂದ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ಉಪಚಾರ ಪಡೆದುಕೊಂಡು ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಹೋಗಿ ಉಪಚಾರ ಪಡೆದುಕೊಂಡು ಮರಳಿ ಮನೆಗೆ ಬಂದು ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಅಂತ ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 65/2021 ಕಲಂ 143,147,323,326,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 13-05-2021 10:05 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080