ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-05-2022


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 71/2022 ಕಲಂ 279, ಐಪಿಸಿ: ದಿನಾಂಕ 06.05.2022 ರಂದು ಬೆಳಿಗ್ಗೆ 8:30 ಗಂಟೆಗೆಯ ಸುಮಾರಿಗೆ ಸೇಡಂನ ವಾಸವತ್ತ ಸಿಮೇಂಟ್ ಕಂಪನಿಯಿಂದ ಸಿಮೇಂಟ್ ತುಂಬಿಕೊಂಡು ಬೋರಬಂಡ ಮಾರ್ಗವಾಗಿ ರೇಣುಗುಂಟಾಕ್ಕೆ ಹೋಗುತ್ತಿದ್ದಾಗ ಲಾರಿ ನಂಬರ ಎಪಿ-26-ಟಿ.ಸಿ-7209 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಇಳೀಜಾರಿನ ರಸ್ತೆಯ ಎಡ ತಿರುವಿನಲ್ಲಿ ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಅದರ ಚಾಲಕನು ಲಾರಿಯನ್ನು ಬಿಟ್ಟು ಕೆಳಗೆ ಜಿಗಿದಿದ್ದು. ಸಿಮೇಂಟ್ ತುಂಬಿದ ಲಾರಿಯು ಹಾಗೇ ಮುಂದಕ್ಕೆ ಹೋಗಿ ಕೆಳಗೆ ಬಿದ್ದು ಅಪಘಾತ ಸಂಭವಿಸಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಲಾರಿಯ ಚಾಲಕನಾದ ಆರೋಪನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಆ ಬಗ್ಗೆ ಅಪಘಾತ ಸಂಭವಿಸಿದ್ದನ್ನು ಕಂಡ ಫಿರ್ಯಾದಿಯು ತನ್ನ ಸಂಬಂಧಿಕರ ಮನೆಗೆ ಹೋಗಿ ಮರಳಿ ತಮ್ಮೂರಿಗೆ ಹೋಗುತ್ತಿದ್ದಾಗ ಠಾಣೆಗೆ ಬಂದು ದೂರು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 71/2022 ಕಲಂ: 279 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 72/2022 ಕಲಂ:498(ಎ), 323, 354, 504, 506, 313, 511 ಸಂಗಡ 149 ಐಪಿಸಿ: ದಿನಾಂಕ 28.06.2021 ರಂದು ಫೀರ್ಯಾದಿ ಮತ್ತು ಆರೊಪಿತನಾದ ಸಂಜುಕುಮಾರ ಇವರು ಪ್ರೀತಿಸಿ ಮದುವೆಯಾಗಿರುತ್ತಾನೆ. ಮದುವೆಯಾದ ನಂತರ 4 ತಿಂಗಳುಗಳ ವರೆಗೆ ಅನೂನ್ಯವಾಗಿದ್ದು ಆ ಮೇಲೆ ಆರೋಪಿತರೆಲ್ಲಾರು ಕೂಡಿಕೊಂಡು ಫಿರ್ಯಾದಿದಾರಳಿಗೆ ದೈಹಿಕ ಮತ್ತು ಮಾನಸೀಕವಾಗಿ ಹಿಂಸೆ ನೀಡಿ, ಕೈಯಿಂದ ಹೊಡೆ-ಬಡೆ ಮಾಡಿ, ಕಾಲಿನಿಂದ ಒದ್ದು, ತಲೆಯ ಕೂದಲು ಹಿಡಿದು ಮಾನಭಂಗಕ್ಕೆ ಯತ್ನಿಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದಕರಿಕೆ ಹಾಕಿದ್ದು ಅಲ್ಲದೇ ಆಕೆಯ ಹೊಟ್ಟೆಯಲ್ಲಿರುವ 06 ತಿಂಗಳ ಮಗುವನ್ನು ಗರ್ಭಪಾತ ಮಾಡಲು ಯತ್ನಿಸಿದ ಬಗ್ಗೆ ಫಿರ್ಯಾದಿದಾರಳು ಇಂದು ಸಂಜೆ 7:30 ಗಂಟೆಗೆ ಖೂದ್ದಾಗಿ ಠಾಣೆಗೆ ಬಂದು ಆಕೆಯ ಗಂಡ, ಅತ್ತೆ-ಮಾವ, ಗಂಡನ ಅಣ್ಣ, ನನ್ನ ಗಂಡನ ಅಜ್ಜಿ-ತಾತಾಯವರಾದ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ ಠಾಣೆ ಗುನ್ನೆ ನಂಬರ 72/2022 ಕಲಂ:498(ಎ), 323, 354, 504, 506, 313, 511 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 58/2022 ಕಲಂ 279, 304(ಎ) ಐಪಿಸಿ: ಇಂದು ದಿನಾಂಕ 12.05.2022 ರಂದು ಬೆಳಗ್ಗೆ 7 ಗಂಟೆಗೆ ಶಹೀನ್ ಬೇಗಂ ಗಂಡ ಇಸ್ಮಾಯಿಲ್ ಪಠಾಣ, ವ|| 23 ವರ್ಷ, ಜಾ|| ಮುಸ್ಲಿಂ, ಉ|| ಕೂಲಿಕೆಲಸ, ಸಾ|| ಇಬ್ರಾಹಿಂಪೂರ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ್ದು, ದೂರಿನ ಸಾರಾಂಶವೆನೆಂದರೆ ದಿನಾಂಕ 09-05-2022 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ಊರಲ್ಲಿ ಇದ್ದಾಗ ನಮ್ಮ ತಮ್ಮ ಹಸನಅಲಿ ನನಗೆ ಫೋನ್ ಮಾಡಿ ನನ್ನ ತಾಯಿ ಮತ್ತು ನಮ್ಮ ಚಿಕ್ಕಪ್ಪ ಸೈದಾಪೂರ ಆಸ್ಪತ್ರೆಗೆ ನಮ್ಮ ಚಿಕ್ಕಮ್ಮಳಿಗೆ ಮಾತಾನಾಡಿಸಲು ಹೋಗಿ ಮರಳಿ ನಮ್ಮೂರಿಗೆ ಹೋಗುವ ಕಾಲಕ್ಕೆ ನನ್ನ ತಾಯಿ ಮೋಟಾರ್ ಸೈಕಲ್ ಮೇಲಿಂದ ಬಿದ್ದು ಗಾಯಾಗೊಂಡಿದ್ದರಿಂದ ರಾಯಚೂರ ರೀಮ್ಸ್ ಆಸ್ಪತ್ರೆಗ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದ.
ಕೂಡಲೆ ನಾನು ನನ್ನ ಗಂಡ ರಾಯಚೂರ ರೀಮ್ಸ್ ಆಸ್ಪತ್ರೆಗೆ ಅದೇ ದಿನ ರಾತ್ರಿ ಬಂದು ನನ್ನ ತಾಯಿಗೆ ಆಸ್ಪತ್ರೆಯಲ್ಲಿ ನೋಡಿದೆವು. ನನ್ನ ತಾಯಿ ಕೈಕಾಲುಗಳಿಗೆ ಮತ್ತು ಗದ್ದಕ್ಕೆ ರಕ್ತಗಾಯಗಳು ಆಗಿದ್ದಲ್ಲದೆ ತೆಲೆಯ ಹಿಂಭಾಗದಲ್ಲಿ ಮೂಗ ಪೆಟ್ಟಾಗಿ ಮೂಗು ಮತ್ತು ಕಿವಿಯಿಂದ ರಕ್ತ ಸ್ರಾವ ಆಗಿತ್ತು. ನನ್ನ ತಾಯಿಗೆ ಮಾತನಾಡಿಸಲು ಪ್ರಯತ್ನ ಮಾಡಿದರೂ ಸಹ ಅವಳು ಮಾತನಾಡದೇ ಬೇವಾಶ್ ಆಗಿದ್ದಳು. ಯ್ಯಾಂಗ ಆಗಿದೆ ಅಂತಾ ನನ್ನ ತಮ್ಮನಿಗೆ ವಿಚಾರಿಸಿದಾಗ ನಮ್ಮ ಸಣ್ಣಮ್ಮ ಮೈಬೂಬೀ ಗಂಡ ಮಸೀದಅಲಿ ಇವಳಿಗೆ ಹೆರಿಗೆಯಾದ ಸಂಬಂಧ ಸೈದಾಪೂರ ಸರಕಾರಿ ಆಸ್ಪತ್ರೆಗೆ ನನ್ನ ಚಿಕ್ಕಪ್ಪ ಹಾಜಿಮಲಂಗ ತಂದೆ ಹುಸೇನಸಾಬ ಮತ್ತು ನನ್ನ ತಾಯಿ ಚಾಂದಬೀ ಇಬ್ಬರೂ ಕೂಡಿ ಮೋಟಾರ್ ಸೈಕಲ್ ಮೇಲೆ ಮಾತನಾಡಿಸಲು ಹೋಗಿರುತ್ತಾರೆ. ಆಸ್ಪತ್ರೆಯಿಂದ ಮರಳಿ ಬರುವ ಕಾಲಕ್ಕೆ ನನ್ನ ಚಿಕ್ಕಪ್ಪ ಹಾಜಿಮಲಂಗ ಈತನು ತನ್ನ ಮೋಟಾರ್ ಸೈಕಲ್ ಸಂಖ್ಯೆ ಕೆಎ-33-ಎಕ್ಸ್-3140 ವಾಹನ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಕೂಡ್ಲೂರ ಗೇಟ್ ಸಮೀಪ ರಸ್ತೆಯ ಮೇಲೆ ದಿನಾಂಕ 09-05-2022 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಮೋಟಾರ್ ಸೈಕಲ್ ಒಮ್ಮಂದೊಮ್ಮಿಲೆ ಕಟ್ ಹೊಡೆದಿದ್ದರಿಂದ ಮೋಟಾರ್ ಸೈಕಲ್ ಹಿಂಬದಿ ಸವಾರಳಾದ ನನ್ನ ತಾಯಿ ಆಯಾ ತಪ್ಪಿ ರೋಡಿನ ಮೇಲೆ ಬಿದ್ದಾಗ ಗಾಯಗೊಂಡಿರುತ್ತಾಳೆ ಅಂತಾ ಗೊತ್ತಾಯಿತು.
ಗಾಯಗೊಂಡ ನನ್ನ ತಾಯಿಗೆ ಸೈದಾಪೂರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡು ಹೆಚ್ಚಿನ ಉಪಚಾರ ಕುರಿತು ರಾಯಚೂರ ರೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ರೀಮ್ಸ್ ಆಸ್ಪತ್ರೆಯಲ್ಲಿ ನನ್ನ ತಾಯಿ ಉಪಚಾರ ಹೊಂದುತ್ತಾ ನಿನ್ನೆ ದಿನಾಂಕ 11-05-2022 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾಳೆ. ವಾಹನ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನನ್ನ ತಾಯಿಯ ಸಾವಿಗೆ ಕಾರಣೀಭೂತನಾದ ನನ್ನ ಚಿಕ್ಕಪ್ಪ ಹಾಜಿಮಲಂಗನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ.


ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 63/2022 ಕಲಂ. ಮಹಿಳೆ ಕಾಣೆ ದಿನಾಂಕ: 12-05-2022 ರಂದು ಮಧ್ಯಾಹ್ನ 02-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನನಗೆ ಸನ್ 2019 ನೇ ಸಾಲಿನಲ್ಲಿ ಯಾದಗಿರಿಯ ರೇಣುಕಾ@ಮಮತಾ ಈಕೆಯ ಜೋತೆ ಮದುವೆಯಾಗಿರುತ್ತದೆ ಈಗ ನಮಗೆ 9 ತಿಂಗಳಿನ ಒಬ್ಬ ಗಂಡು ಮಗ ಬೆನ್ನಮಿನ್ ಬಾಬು ಅಂತಾ ಇರುತ್ತಾನೆ, ನಮ್ಮ ತಂದೆ ತಾಯಿ ಇಬ್ಬರು ತೀರಿಕೊಂಡಿರುತ್ತಾರೆ. ಮನೆಯಲ್ಲಿ ನಾನು ನನ್ನ ಹೆಂಡತಿ ಮತ್ತು ನನ್ನ ಮಗ ಮಾತ್ರ ಇರುತ್ತೇವೆ.
ನನ್ನದು ಬಾಂಬೆಯಲ್ಲಿ ಕೆಲಸ ಇದ್ದ ಕಾರಣ ನನ್ನ ಹೆಂಡತಿಗೆ ನಾನು ಬಾಂಬೆಗೆ ಹೋಗುತ್ತೇನೆ ನೀನು ಮನೆಯಲ್ಲಿ ಇರು ಎಲ್ಲಿಗೆ ಹೋಗಬೇಡ ಅಂತಾ ಹೇಳಿ ಆಕೆಗೆ ಖಚರ್ಿಗೆ ಹಣ ಕೊಟ್ಟು ದಿನಾಂಕ: 07-05-2022 ರಂದು ಸಾಯಂಕಾಲ 04-00 ಗಂಟೆ ಸುಮಾರಿಗೆ ನಾನು ನಮ್ಮೂರಿನಿಂದ ಬಾಂಬೆಗೆ ಹೋಗಿರುತ್ತೇನೆ.
ನಾನು ದಿನಾಂಕ: 10-05-2022 ರಂದು ಮದ್ಯಾಹ್ನ 01-00 ಗಂಟೆ ಸುಮಾರಿಗೆ ಬಾಂಬೆಯಿಂದ ನಮ್ಮೂರಾದ ಠಾಣಗುಂದಿಗೆ ಮನೆಗೆ ಬಂದಾಗ ಮನೆ ಕೊಂಡಿ ಹಾಕಿತ್ತು, ಆಗ ನಾನು ನಮ್ಮ ಮನೆಯ ಪಕ್ಕದವರಾದ ಗಂಗಮ್ಮ ಗಂಡ ಯೇಸುರಾಜ ಮತ್ತು ಭೀಮಮ್ಮ ಗಂಡ ಶಾಮ ಇವರಿಗೆ ನನ್ನ ಹೆಂಡತಿ ಎಲ್ಲಿಗ ಹೋಗಿದ್ದಾಳೆ ಅಂತಾ ಕೆಳಲಾಗಿ ಆಕೆ ದಿನಾಂಕ: 08-05-2022 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಆಕೆಯ ತಮ್ಮ ತಾಯಿಯಲ್ಲಿಗೆ ಹೋಗುತ್ತೇನೆ ಅಂತಾ ಹೇಳಿ ಮಗುವಿನ ಸಂಗಡ ಹೋದಳು ಅಂತಾ ತಿಳಿಸಿದರು ಆಗ ನಾನು ಆಕೆಗೆ ಪೊನ್ ಮಾಡಬೇಕೆಂದರೆ ಆಕೆಯಲ್ಲಿ ಪೊನ್ ಇರಲಿಲ್ಲ ಅದಕ್ಕೆ ನಾನು ನೇರವಾಗಿ ಯಾದಗಿರಿಗೆ ನಮ್ಮ ಅತ್ತೆ ಮನೆಗೆ ಬಂದು ಅವರ ಮನೆಯವರಿಗೆ ನನ್ನ ಹೆಂಡತಿ ಬಂದಿದಾಳೆನು ಅಂತಾ ಕೇಳಲಾಗಿ ಆಕೆ ಬಂದಿಲ್ಲಾ ಅಂತಾ ಹೇಳಿದರು. ಆಗ ನಾನು ನಮ್ಮ ಬೀಗರ ನಂಟರ ಊರುಗಳಿಗೆ ಹೋಗಿ ಹುಡಕಾಡಲಾಗಿ ನನ್ನ ಹೆಂಡತಿ ಎಲ್ಲಿ ಸಿಗಲಿಲ್ಲ ನಾನು ನನ್ನ ಹೆಂಡತಿಗಾಗಿ ಅಲಲ್ಲಿ ಹುಡುಕಾಡುತ್ತಿರುವಾಗ ನ್ಯೂಜ್ ಪೇಪರ ಮತ್ತು ಟಿಯಲ್ಲಿ ನನ್ನ ಮಗನನ್ನು ನನ್ನ ಹೆಂಡತಿ ರಾಯಚೂರ ಬಸ್ ನಿಲ್ದಾಣದಲ್ಲಿ ಯಾರೋ ಕೈಯಲ್ಲಿ ಕೊಟ್ಟು ಮುತ್ರ ಮಾಡಿ ಬರುತ್ತೇನೆ ಅಷ್ಟತನ ಎತ್ತಿಕೊಳ್ಳಿ ಅಂತಾ ಹೇಳಿ ಮಗುವನ್ನು ಕೊಟ್ಟು ಹೋಗಿರುತ್ತಾಳೆ ಮಗು ಮೈಸೂರಿನ ಮಕ್ಕಳ ಸಂರಕ್ಷಣಾ ಘಟಕದಲ್ಲಿ ಇರುತ್ತದೆ ಅಂತಾ ಗೋತ್ತಾಗಿರುತ್ತದೆ ನನ್ನ ಹೆಂಡಿ ಕಾಣೆಯಾದ ಬಗ್ಗೆ ದೂರು ಅಂತಾ ಪಿಯರ್ಾಧಿ ಸಾರಂಶ.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 38/2022 ಕಲಂ. 307, 504, 506 ಐಪಿಸಿ:ಫಿರ್ಯಾದಿದಾರರು ಊರಲ್ಲಿ ಬೆಳೆಯುವದನ್ನು ಆರೋಪಿತನಿಗೆ ಸಹಿಸಲಾಗದೆ ಹೊಟ್ಟೆಕಿಚ್ಚಿನಿಂದ ಆಗಾಗ ಕೈ ಸನ್ನೆ ಮಾಡುವದು, & ನಿನ್ನನ್ನು ಮುಗಿಸಿಯೇ ಬಿಡುತ್ತೇನೆ ಎಂದು ಕೈ ತೋರಿಸುವದು ಮಾಡುತ್ತಿದ್ದನು. ಅಲ್ಲದೆ ಈ ಹಿಂದೆ ಒಂದು ಸಲ ಟಿಪ್ಪರ ಹಾಯಿಸಲು ಬಂದು ಕೊಲೆ ಮಾಡಲು ಪ್ರಯತ್ನ ಮಾಡಿದ್ದು ಇರುತ್ತದೆ. ಸದರಿ ಆರೋಪಿತನು ಫಿರ್ಯಾದಿಗೆ ಊರಲ್ಲಿ ನೀನು ಜಾಸ್ತಿ ಬೆಳೆಯುತ್ತಾ ಇದ್ದಿ ಮಗನೆ, ನಿನ್ನನ್ನು ಮುಗಿಸಿಯೇ ತೀರುತ್ತೇನೆ ಎಂದು ದುರುದ್ದೇಶ ಇಟ್ಟುಕೊಂಡು ದಿನಾಂಕ:09/05/2022 ರಂದು ರಾತ್ರಿ 9.00 ಗಂಟೆಯ ಸುಮಾರಿಗೆ ಫಿರ್ಯಾದಿಯು ಶೌಚಾಲಯಕ್ಕೆ ಹೋಗಿ ವಾಪಸು ಮನೆಗೆ ಹೋಗಲು ತನ್ನ ದ್ವೀಚಕ್ರ ವಾಹನದ ಮೇಲೆ ಹೊರಟಾಗ, ಶ್ರೀನಿವಾಸಪುರ ಗ್ರಾಮದ ಸರಕಾರಿ ಆಸ್ಪತ್ರೆ ಹತ್ತಿರ ನಿಲ್ಲಿಸಿದ ಸೊನಾಲಿಕ ಟ್ಯಾಕ್ಟರನ್ನು ಚಾಲು ಮಾಡಿ ಫಿರ್ಯಾದಿಗೆ ಕೊಲೆ ಮಾಡುವ ಉದೇಶದಿಂದ ಫಿರ್ಯಾದಿಗೆ ರಸ್ತೆ ಬಿಡದಂತೆ ಟ್ಯಾಕ್ಟರನ್ನು ದ್ವೀಚಕ್ರವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದು, ದ್ವೀಚಕ್ರ ವಾಹನ ಮುಂಬಾಗ ಡ್ಯಾಮೇಜ್ ಆಗಿದ್ದು, ಫಿರ್ಯಾದಿಯು ಕೆಳಗೆ ಬಿದ್ದಾಗ, ಅವನ ಮೈಮೇಲೆ ಟ್ಯಾಕ್ಟರ್ ಹಾಯಿಸಲು ಪ್ರಯತ್ನಿಸಿದ್ದು, ಫಿರ್ಯಾದಿಯು ಚೀರಾಡಿದಾಗ, ಸಾಕ್ಷಿದಾರರು ಬರುವದು ನೋಡಿ ಆರೋಪಿತನು ಮಗನೆ ಇವತ್ತ ನನ್ನ ಕೈಯಾಗ ಉಳಿದಿ, ನಿನಗೆ ಒಂದಲ್ಲ ಒಂದು ದಿನ ನಿನ್ನನ್ನು ಸಾಯಿಸಿಯೇ ಬಿಡುತ್ತೇನೆ ಅಂತಾ ಅನ್ನುತ್ತಾ ಜೀವದ ಬೆದರಿಕೆ ಹಾಕುತ್ತಾ ಹೋದ ಬಗ್ಗೆ ಅಪರಾಧ.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 64/2022 ಕಲಂ: 279, 337, 338 ಐಪಿಸಿ ಸಂ 187 ಐಎಮ್ವಿ ಎಕ್ಟ್: ಇಂದು ದಿನಾಂಕ:12/05/2022 ರಂದು 7-45 ಪಿಎಮ್ ಕ್ಕೆ ಶ್ರೀ ಜೈರಾಮ ತಂದೆ ಗೋಬ್ರ್ಯಾ ಪವ್ಹಾರ, ವ:45, ಜಾ:ಲಮ್ಮಾಣಿ, ಉ:ಒಕ್ಕಲುತನ ಸಾ:ಮುದ್ನಾಳ ಉಮ್ಲಾನಾಯಕ ತಾಂಡಾ ತಾ:ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮ ಅತ್ತೆಯ ಮಗನಾದ ತುಕಾರಾಮ್ ತಂದೆ ಭೋಜು ರಾಠೋಡ ಸಾ:ಅಚ್ಚೋಲಾ ತಾಂಡಾ ರವರು ಇಂದು ದಿನಾಂಕ:12/05/2022 ಗುರುವಾರದಂದು ಶಹಾಪೂರ ತಾಲೂಕಿನ ಇಬ್ರಾಹಿಂಪೂರ ಮುತ್ಯಾನ (ಅಬ್ದುಲ್ ಬಾಷಾ) ಕೆರೆ ದೇವರು ಮಾಡಿದ್ದರಿಂದ ಸದರಿ ದೇವರಿಗೆ ಊಟ ಮಾಡಿಕೊಂಡು ಬರಲು ಬೆಳಗ್ಗೆ 11-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಾಯಿ ರುಕ್ಮಾಬಾಯಿ ಗಂಡ ಗೋಬ್ರ್ಯಾ ಇಬ್ಬರೂ ನಮ್ಮ ಮೋಟರ್ ಸೈಕಲ್ ನಂ. ಕೆಎ 33 ಎಲ್ 1381 ನೇದ್ದರ ಮೇಲೆ ಇಬ್ರಾಹಿಂಪೂರಕ್ಕೆ ಹೊರಟೇವು. ನಮ್ಮೊಂದಿಗೆ ನಮ್ಮ ಖಾಸ ಅಣ್ಣನ ಮಗನಾದ ಮೋತಿರಾಮ ತಂದೆ ಹರಿಶಂಕರ ಪವ್ಹಾರ ಮತ್ತು ಅವನ ಹೆಂಡತಿ ಮೋತಿಬಾಯಿ ಗಂಡ ಮೋತಿರಾಮ ಪವ್ಹಾರ ಇಬ್ಬರೂ ತಮ್ಮ ಮೋಟರ್ ಸೈಕಲ್ ನಂ. ಕೆಎ 33 ಹೆಚ್ 7724 ನೇದ್ದರ ಮೇಲೆ ಹೊರಟರು. ಇಬ್ರಾಹಿಂಪೂರ ದೇವರಿಗೆ ನಾವೆಲ್ಲರೂ ಹೋಗಿ ಕಾಯಿ ಕಪರ್ೂರ ಕೊಟ್ಟು, ನಮ್ಮ ಬೀಗರ ಹತ್ತಿರ ಹೋಗಿ ಊಟ ಮಾಡಿಕೊಂಡು ಮದ್ಯಾಹ್ನ 3 ಗಂಟೆ ಸುಮಾರಿಗೆ ಮರಳಿ ನಮ್ಮೂರಿಗೆ ನಾವು ತಂದ ನಮ್ಮ ನಮ್ಮ ಮೋಟರ್ ಸೈಕಲಗಳ ಮೇಲೆ ಹೊರಟೇವು. ಗುರುಸಣಗಿ ಕ್ರಾಸದಿಂದ ಬ್ರಿಡ್ಜ ಮೇಲೆ ಬೈಪಾಸ ಹೋಗುವ ರೋಡಿನ ಮೇಲೆ ರೈಸ ಮಿಲ್ ದಾಟಿ ಸ್ವಲ್ಪ ಮುಂದೆ ನಾನು ಮತ್ತು ನಮ್ಮ ತಾಯಿ ನನ್ನ ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದೇವು. ನಮ್ಮ ಮುಂದುಗಡೆ ನಮ್ಮ ಅಣ್ಣನ ಮಗನಾದ ಮೋತಿರಾಮನು ತನ್ನ ಮೋಟರ್ ಸೈಕಲ್ ಮೇಲೆ ಹಿಂದುಗಡೆ ತನ್ನ ಹೆಂಡತಿಗೆ ಕೂಡಿಸಿಕೊಂಡು ನನ್ನಿಂದ ಸ್ವಲ್ಪ ಮುಂದೆ ಹೋಗತ್ತಿದ್ದಾಗ 4 ಪಿಎಮ್ ಸುಮಾರಿಗೆ ನಮ್ಮ ಹಿಂದುಗಡೆಯಿಂದ ಲಾರಿ ನಂ. ಕೆಎ 32 ಬಿ 8879 ನೇದ್ದನ್ನು ಅದರ ಚಾಲಕನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನಗೆ ಓವರಟೇಕ್ ಮಾಡಿಕೊಂಡು ಮುಂದೆ ಹೋಗಿ ನಮ್ಮಣ್ಣನ ಮಗ ಮೋತಿರಾಮ ಮತ್ತು ಸೊಸೆ ಮೋತಿಬಾಯಿಗೆ ಬಲವಾಗಿ ಡಿಕ್ಕಿಪಡಿಸಿದನು. ಅಪಘಾತದಲ್ಲಿ ಮೋತಿರಾಮನಿಗೆ ಬಲಗಾಲ ಹಿಮ್ಮಡಿ ಮತ್ತು ಪಾದದ ಬಳಿ ರಕ್ತಗಾಯವಾಗಿತ್ತು. ಹಿಂದೆ ಕುಂತಿದ್ದ ಸೊಸೆ ಮೋತಿಬಾಯಿಗೆ ಎಡಗಾಲ ತೊಡೆಗೆ ಮತ್ತು ಮೊಳಕಾಲ ಕೆಳಗೆ ಅಲ್ಲಲ್ಲಿ ಭಾರಿ ಹರಿದ ರಕ್ತಗಾಯಗಳಾಗಿದ್ದವು. ಸೊಂಟಕ್ಕೆ ಮತ್ತು ತಲೆ ಎಡಭಾಗಕ್ಕೆ ತರಚಿದ ರಕ್ತಗಾಯಗಳಾಗಿದ್ದವು. ಮೋಟರ್ ಸೈಕಲ್ ರಸ್ತೆ ಪಕ್ಕದಲ್ಲಿ ಹೋಗಿ ಬಿದ್ದಿತ್ತು. ಲಾರಿ ಚಾಲಕನು ಸ್ವಲ್ಪ ಮುಂದೆ ಹೋಗಿ ತನ್ನ ಲಾರಿಯನ್ನು ನಿಲ್ಲಿಸಿ, ಕೆಳಗೆ ಇಳಿದು ಬಂದು ಅಪಘಾತದಲ್ಲಿ ಭಾರಿ ಗಾಯಗೊಂಡವರಿಗೆ ನೋಡಿದನು. ಆಗ ನಾನು ಚಾಲಕನಿಗೆ ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ಹಣಮಪ್ಪ ತಂದೆ ಗ್ಯಾನಪ್ಪ ಸಾ:ಬೇವಿನಮರ ಬುದುನಿ ತಾ:ಲಿಂಗಸ್ಗೂರು ಜಿ:ರಾಯಚೂರು ಎಂದು ಹೇಳಿ ಜನ ಸೇರುವುದನ್ನು ನೋಡಿ ಅಲ್ಲಿಂದ ಓಡಿ ಹೋದನು. ಆಗ ನಾವು ಗಾಯಾಳುಗಳಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ವೈದ್ಯಾಧಿಕಾರಿಗಳು ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗುವಂತೆ ಶಿಫಾರಸ್ಸು ಮಾಡಿದ್ದರಿಂದ ನಮ್ಮ ಸಂಬಂಧಿಕರು ಗಾಯಾಳುಗಳಿಗೆ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಕಾರಣ ಅಪಘಾತಪಡಿಸಿ, ಗಂಭಿರ ಸ್ವರೂಪದ ಗಾಯಪಡಿಸಿದ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 64/2022 ಕಲಂ: 279, 337, 338 ಐಪಿಸಿ ಸಂ 187 ಐಎಮ್ವಿ ಎಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ-77/2022 ಕಲಂ 379 ಐಪಿಸಿ: ಇಂದು ದಿನಾಂಕ:12/05/2022 ರಂದು ಮಧ್ಯಾಹ್ನ 01-15 ಪಿ,ಎಂ ಕ್ಕೆ ಪಿಯರ್ಾದಿ ಶ್ರೀ ಮಹ್ಮದ ಮುಕ್ತಾರ ಅಹಿಮದ ತಂದೆ ಮಹ್ಮದ ಶಹಾಬುದ್ದಿನ ಕುರಕುಂದಿ, ವಯಸ್ಸು 27 ವರ್ಷ, ಜಾತಿ ಮುಸ್ಲೀಂ, ಉ:ವೇಲ್ಡಿಂಗ್ಕೆಲಸ ಸಾಃಸಕರ್ಾರಿ ಆಸ್ಪತ್ರೆ ಹತ್ತಿರ ಮಹ್ಮದಿ ಕಾಲೋನಿ ಶಹಾಪೂರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ ನಾನು ವೇಲ್ಡಿಂಗ್ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ತಮ್ಮ ಮಹ್ಮದ ರಿಯಾಜ ತಂದೆ ಮಹ್ಮದ ಶಹಾಬುದ್ದಿನ ಕುರಕುಂದಿ, ಇವರು ಶಹಾಪೂರ ಪಟ್ಟಣದ ಬೀದರ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗ್ಯಾರೇಜ ಲೈನನಲ್ಲಿ ಅಂದಾಜು 03 ವರ್ಷಗಳಿಂದ ಹೊಟೇಲ ವ್ಯಾಪಾರ ಮಾಡಿಕೊಂಡಿರುತ್ತಾರೆ. ನಾನೂ ಕೂಡಾ ಆಗಾಗ ನಮ್ಮ ಹೋಟೆಲಕ್ಕೆ ಹೊಗುತ್ತಿರುತ್ತೆನೆ. ನಮ್ಮ ಹೋಟೆಲಕ್ಕೆ ಅನಮ ಹೊಟೆಲ ಅಂತಾ ನಾಮ ಫಲಕ ಅಳವಡಿಸಿರುತ್ತದೆ.
ಹೀಗಿರುವಾಗ ದಿನಾಂಕ 11/03/2022 ರಂದು, ನನಗೆ ಮೈ ಹುಷಾರಿಲ್ಲದ ಕಾರಣ ನಾನು ವೇಲ್ಡಿಂಗ್ ಕೆಲಸಕ್ಕೆ ಹೊಗದೇ ಮನೆಯಲ್ಲಿಯೇ ಇದ್ದೆನು. ಅದೇ ದಿನ ರಾತ್ರಿ 10.30 ಪಿ.ಎಂ ಸುಮಾರಿಗೆ ನಾನು ನನ್ನ ಬಜಾಜ ಡಿಸ್ಕವರಿ ಮೋಟರ ಸೈಕಲ್ ನಂಬರ: ಕೆಎ-37 ಎಸ್-7004 ನೇದ್ದರ ಮೇಲೆ ನಾನು ನಮ್ಮ ಗ್ಯಾರೇಜ ಲೈನನಲ್ಲಿರುವ ನಮ್ಮ ಹೊಟೆಲಕ್ಕೆ ಹೋಗಿ ನಮ್ಮ ಹೋಟೆಲ ಮುಂದೆ ನನ್ನ ಮೋಟಾರ ಸೈಕಲ ನಿಲ್ಲಿಸಿ ಹೋಟೆಲ ಒಳಗಡೆ ಹೊಗಿ ಚಹಾ ಕುಡಿದು ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತೆನು. ಆಗ ನನ್ನ ಸ್ನೇಹಿತನಾದ ಮಹ್ಮದ ಯುನುಸ ತಂದೆ ಜೈನುಲಾಬುದ್ದಿನ ಸಾ:ವಿದ್ಯಾನಗರ ಶಹಾಪೂರ ಈತನು ನಮ್ಮ ಹೋಟೆಲಕ್ಕೆ ಬಂದನು, ಆಗ ನಾನು ಮಹ್ಮದ ಯುನುಸನಿಗೆ ನನಗೆ ಬೆಳಗ್ಗೆ ಇಂದ ಸುಸ್ತಾಗಿದೆ ಮೈ ಹುಷಾರಿಲ್ಲ ಆದ್ದರಿಂದ ಹಳೆ ಬಸ್ಸ ನಿಲ್ದಾಣದ ಹತ್ತಿರ ಮೆಡಿಕಲ್ ಶ್ಯಾಪಿಗೆ ಹೊಗಿ ನನಗೆ ಮಾತ್ರೆ ತೆಗೆದುಕೊಂಡು ಬರೋಣ ನಡೆ ಅಂತ ಹೇಳಿ ಆತನಿಗೆ ಕರೆದೆನು ಆಗ ನನ್ನ ಸ್ನೇಹಿತ ಮಹ್ಮದ ಯುನುಸ ನನ್ನ ಮೋಟಾರ ಸೈಕಲ ಮೇಲೆ ಹೋಗೊಣ ಬಾ ಅಂತಾ ಹೇಳಿ ನನಗೆ ಹಳೆ ಬಸ್ ನಿಲ್ದಾಣದ ಹತ್ತಿರ ಇರುವ ಮೈಸೂರ ಮೆಡಿಕಲ್ ಶ್ಯಾಪಿಗೆ ಕರೆದುಕೊಂಡು ಹೊದ ಅಲ್ಲಿ ನಾನು ನನಗೆ ಗುಳುಗೆಗಳನ್ನು ತೆಗೆದುಕೊಂಡು ಅಲ್ಲಿಯೇ ಸ್ವಲ್ಪ ಹೊತ್ತು ನಿಂತು ನಾವಿಬ್ಬರೂ ಮರಳಿ ನನ್ನ ಸ್ನೆಹಿತನ ಮೋಟಾರ ಸೈಕಲ ಮೇಲೆ ಮರಳಿ ನಮ್ಮ ಅನಮ ಹೋಟೆಲ ಹತ್ತಿರ ಬಂದೆವು. ಬಂದ ನಂತರ ನಮ್ಮ ಹೋಟೆಲ ಮುಂದೆ ನಿಲ್ಲಿಸಿದ ನನ್ನ ಮೋಟಾರ ಸೈಕಲ ನೋಡಲಾಗಿ ಅಲ್ಲಿ ಇರಲಿಲ್ಲ. ನಮ್ಮ ತಮ್ಮನಿಗೆ ವಿಚಾರಿಸಲಾಗಿ ನಮ್ಮ ತಮ್ಮ ಹೋಟೆಲ ಬಂದ ಮಾಡಿಕೊಂಡು ನಾನು ಮನೆಗೆ ಬಂದಿದ್ದೆನೆ ಅಂತ ಹೇಳಿದನು. ನಾನು ಗಾಬರಿಯಾಗಿ ನಾನು ಮತ್ತು ನಮ್ಮ ಸ್ನೇಹಿತ ಇಬ್ಬರೂ ಹಳೆ ಬಸ್ ನಿಲ್ದಾಣದ ಸುತ್ತ ಮುತ್ತ ಹುಡುಕಾಡಲಾಗಿ ನನ್ನ ಮೋಟಾರ ಸೈಕಲ ಸಿಗಲಿಲ್ಲ.
ದಿನಾಂಕ 11/03/2022 ರಂದು ರಾತ್ರಿ 10.30 ಗಂಟೆಯಿಂದ ರಾತ್ರಿ 11.30 ರ ಮದ್ಯದ ವೇಳೆಯಲ್ಲಿ ಯಾರೋ ಕಳ್ಳರು ಶಹಾಪೂರ ನಗರದ ಗ್ಯಾರೇಜಲೈನನಲ್ಲಿರು ನಮ್ಮ ಅನಮ ಹೋಟೆಲ ಮುಂದೆ ನಿಲ್ಲಿಸಿದ ನನ್ನ ನನ್ನ ಬಜಾಜ ಡಿಸ್ಕವರಿ ಮೋಟರ ಸೈಕಲ್ ನಂಬರ: ಕೆಎ-37 ಎಸ್-7004 ಮೋಟಾರ ಸೈಕಲ ಅದರ ಅಚಿ ಓಔ: ಒಆ2ಆಖಎಚಚಚಗಘಅ55589, ಇಓಉಓಇ ಓಔ:ಎಚಒಃಗಅ78106 ನೇದ್ದು ಅಂದಾಜು ಕಿಮ್ಮತ 20,000/- ನೇದ್ದು ಯಾರೋ ಕಳ್ಳರು ನಾವು ನಿಲ್ಲಿಸಿ ಹೋದ ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಂಡು, ಕಳ್ಳತನವಾದ ನನ್ನ ಮೋಟರ್ ಸೈಕಲ್ ಮತ್ತು ಕಳ್ಳತನಮಾಡಿದ ಕಳ್ಳರನ್ನು ಪತ್ತೆ ಮಾಡಲು ವಿನಂತಿ. ಅಂತಾ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.77/2022 ಕಲಂ 379 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 78/2022. ಕಲಂ. 279. 338. ಐ.ಪಿ.ಸಿ. ಇಂದು ದಿನಾಂಕ: 12/05/2022 ರಂದು 14-30 ಗಂಟೆಗೆ ಪಿಯರ್ಾದಿ ಶ್ರೀ ದ್ಯಾವಪ್ಪ ತಂದೆ ಸಿದ್ದಪ್ಪ ಹುರಸಗುಂಡಗಿ ವ|| 55 ಜಾ|| ಪ.ಜಾತಿ. ಉ|| ಒಕ್ಕಲುತನ ಸಾ|| ಬಿದರಾಣಿ ತಾ|| ಶಹಾಪೂರ-8861578353. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 09/05/2022 ರಂದು ನಾನು ಮತ್ತು ನನ್ನ ಮಗನಾದ ಸಿದ್ದಪ್ಪ ತಂದೆ ದ್ಯಾವಪ್ಪ ಇಬ್ಬರು ಎತ್ತುಗಳನ್ನು ತೆಗೆದುಕೊಂಡು ಬರಲು ರಸ್ತಾಪೂರಕ್ಕೆ ಹೋಗಿ ಎತ್ತುಗಳನ್ನು ತೆಗೆದುಕೊಂಡು ನಮ್ಮೂರಿಗೆ ಹೋರಟು, ನಾವು ದೋರನಹಳ್ಳಿ ಮೇನ್ ಕೇನಾಲ್ ಹತ್ತಿರ ಹೋಗುತ್ತಿರುವಾಗ. ನನ್ನ ಮಗನಾದ ಆನಂದ ತಂದೆ ದ್ಯಾವಪ್ಪ ಈತನು ನಮ್ಮ ಹತ್ತಿರ ಬಂದು ತಿಳಿಸಿದ್ದೆನೆಂದರೆ. ಇಂದು ಬೆಳಿಗ್ಗೆ ಕಡ್ಲಿ ಮಾರಾಟ ಮಾಡಿಕೊಂಡು ಬರಲು ನನ್ನ ತಾಯಿಯಾದ ನಾಗಮ್ಮ ಗಂಡ ದ್ಯಾವಪ್ಪ ಮತ್ತು ನನ್ನ ಅಣ್ಣನಾದ ಶರಣಬಸವ ಇಬ್ಬರು ಕೂಡಿಕೊಂಡು ನಮ್ಮೂರ ಸಿದ್ರಾಮ ತಂದೆ ನಾಗಪ್ಪ ವಿಬೂತಿಹಳ್ಳಿ ಈತನ ಟಾಟಾ ಎ.ಸಿ.ಇ. ನಂ ಕೆಎ-33 ಬಿ-3144 ನೇದ್ದರ ವಾಹನದಲ್ಲಿ ಕಡ್ಲಿ ಚಿಲಗಳನ್ನು ಹಾಕಿಕೊಂಡು ಶಹಾಪೂರಕ್ಕೆ ಹೋದರು. ನಂತರ ನನ್ನ ಅಣ್ಣ ಶರಣಬಸವ ಈತನು ನನಗೆ ಫೊನ ಮಾಡಿ ತಿಳಿಸಿದ್ದೆನೆಂದರೆ. ಸಿದ್ರಾಮನ ಟಾಟಾ ಎ.ಸಿ.ಇ ವಾಹನದಲ್ಲಿ ನಾನು ಮತ್ತು ನನ್ನ ತಾಯಿಯಾದ ನಾಗಮ್ಮ ಇಬ್ಬರು ಟಾಟಾ ಎ.ಸಿ.ಇ. ನಂ ಕೆಎ-33 ಬಿ-3144 ನೇದ್ದಲ್ಲಿ ಕುಳಿತುಕೊಂಡು ನಮ್ಮೂರಿನಿಂದ ಹೋರಟು. ಚಾಲಕ ಸಿದ್ರಾಮನ ಪಕ್ಕದಲ್ಲಿ ನನ್ನ ತಾಯಿ ನಾಗಮ್ಮಳು ಕುಳಿತು ಕೊಂಡಿದ್ದಳು. ನನ್ನ ತಾಯಿ ನಾಗಮ್ಮಳ ಪಕ್ಕದಲ್ಲಿ ನಾನು ಕುಳಿತುಕೊಂಡಿದ್ದೆನು. ಬಿದರಾಣಿ-ದೋರನಳ್ಳಿ ಮುಖ್ಯ ರಸ್ತೆಯ ಮೇಲೆ ಗೌಡ್ಸಾನಿ ಗಡ್ಡಿ ಹತ್ತಿರ 11-00 ಹೋಗುತ್ತಿರುವಾಗ ಸಿದ್ರಾಮನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೆ ಎಡಕ್ಕೆ ಕಟ್ಟ್ ಮಾಡಿದ್ದರಿಂದ ರಸ್ತೆಯ ಕೆಳಗಡೆ ಇರುವ ತೆಗ್ಗಿಗೆ ಗುದ್ದಿ ಅಪಘಾತ ಮಾಡಿ ಟಾಟಾ ಎ.ಸಿ.ಇ. ವಾಹನ ನಂ ಕೆಎ-33 ಬಿ-3144 ಪಲ್ಟಿ ಯಾಗಿರುತ್ತದೆ. ಸದರಿ ಅಪಘಾತದಲ್ಲಿ ನನ್ನ ತಾಯಿಗೆ ನಾಗಮ್ಮಳಿಗೆ ತಲೆಗೆ, ಎದೆಗೆ, ಪಕ್ಕಿಗೆ, ಭಾರಿ ಗುಪ್ತಗಾಯವಾಗಿದ್ದು. ನನಗೆ ಸಣ್ಣ ಪುಟ್ಟ ಗುಪ್ತಗಾಯವಾಗಿರುತ್ತದೆ. ಸಿದ್ರಾಮನಿಗೆ ಯಾವುದೆ ಗಾಯಗಳು ಆಗಿರುವುದಿಲ್ಲಾ. ಅಂತ ತಿಳಿಸಿದ್ದರಿಂದ. ನಾನು ಅಪಘಾತವಾದ ಸ್ಥಳಕ್ಕೆ ಬಂದು ನೋಡಿ ವಿಚಾರಿಸಿದ್ದು. ನನ್ನ ತಾಯಿಯಾದ ನಾಗಮ್ಮಳಿಗೆ ಭಾರಿ ಗಾಯಗಳು ಆಗಿದ್ದರಿಂಧ ನಾನು ಮತ್ತು ನನ್ನ ಅಣ್ಣ ಶರಣಬಸವ ಇಬ್ಬರು ಕೂಡಿ ಅಲ್ಲೆ ಹೋರಟಿದ್ದ ಒಂದು ಆಟೋ ನಿಲ್ಲಿಸಿ ಅದರಲ್ಲಿ ನನ್ನ ಅಣ್ಣ ಶರಣಬಸವ ಈತನು ನನ್ನ ತಾಯಿ ನಾಗಮ್ಮಳಿಗೆ ಉಪಚಾರ ಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾನೆ. ನಾನು ಆಸ್ಪತ್ರೆಗೆ ಹೋರಟಿರುತ್ತೇನೆ. ಅಂತ ತಿಳಿಸಿದ್ದರಿಂದ ನಾನು ಮತ್ತು ಆನಂದ ಇಬ್ಬರು ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ನಾಗಮ್ಮಳಿಗೆ ನೋಡಿ ಶರಣಬಸವ ಈತನಿಗೆ ವಿಚಾರಿಸಿದ್ದು ಇರುತ್ತದೆ. ನಾಗಮ್ಮಳಿಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ. ನಾನು ಮತ್ತು ಶರಣಬಸವ ಇಬ್ಬರು ಕೂಡಿ ನಾಗಮ್ಮಳಿಗೆ ಅಂಬುಲೇನ್ಸದಲ್ಲಿ ಕರೆದುಕೊಂಡು ಕಲಬುರಗಿಗೆ ಹೋಗಿ ಎ.ಎಸ್.ಎಂ. ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದರಿಂದ ಉಪಚಾರ ಪಡೆಯುತ್ತಿದ್ದು ಇರುತ್ತದೆ. ನನ್ನ ಮಗ ಶರಣಬಸವ ಈತನಿಗೆ ಸಣ್ಣ ಪುಟ್ಟ ಪೆಟ್ಟಾದ್ದರಿಂದ ಉಪಚಾರ ಮಾಡಿಸಿಕೊಂಡಿರುವುದಿಲ್ಲಾ. ಸದರಿ ಅಪಘಾತವು ಗೌಡ್ಸಾನಿ ಗಡ್ಡಿ ಹತ್ತಿರ ಬೆಳಿಗ್ಗೆ 11-00 ಗಂಟೆಗೆಯ ಸುಮಾರಿಗೆ ಜರುಗಿರುತ್ತದೆ. ನನ್ನ ಹೆಂಡತಿ ನಾಗಮ್ಮಳಿಗೆ ಉಪಚಾರ ಮಾಡಿಸುವುದು ಅವಶ್ಯಕವಾಗಿದ್ದರಿಂದ ಮತ್ತು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರುನಿಡಿದ್ದು ಇರುತ್ತದೆ.
. ಕಾರಣ ನನ್ನ ಹೆಂಡತಿ ನಾಗಮ್ಮ ಮತ್ತು ನನ್ನ ಮಗ ಶರಣಬಸವ ಇವರು ಕುಳಿತುಕೊಂಡು ಹೊರಟ ಟಾಟಾ ಎ.ಸಿ.ಇ ವಾಹನ ನಂ ಕೆಎ-33 ಬಿ-3144 ನೇದ್ದರ ಚಾಲಕನಾದ ಸಿದ್ರಾಮ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 78/2022 ಕಲಂ: 279, 338, ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. .

 

ಇತ್ತೀಚಿನ ನವೀಕರಣ​ : 13-05-2022 11:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080