Feedback / Suggestions

                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13-06-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 88/2021 ಕಲಂ: 366 ಐಪಿಸಿ ಮತ್ತು 3 (2)(ವಿ) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ -1989 : ಇಂದು ದಿನಾಂಕ 12.06.2021 ರಂದು 4.30 ಪಿಎಮ್ ಕ್ಕೆ ಪಿರ್ಯಾಧಿ ಲಕ್ಷ್ಮಣ್ ತಂದೆ ಹಣಮಂತ ಲೊಂಡೇನವರ ಸಾ||ಗೋಪಾಳಪೂರ ಈತನು ಠಾಣೆಗೆ ಹಾಜರಾಗಿ ಹೇಳಿ ಗಣಕೀಕರಿಸಿದ ಹೇಳಿಕೆಯ ಸಾರಾಂಶವೆನೆಂದರೆ ಪಿರ್ಯಾಧಿಯು ತನ್ನ ಮಗಳಾದ ನರಸಮ್ಮ ಇವಳಿಗೆ ದಿನಾಂಕ:10.06.2021 ರಂದು ಮದುವೆ ಮಾಡಿ ತನ್ನ ಗಂಡನ ಮನೆಗೆ ಕಳುಹಿಸಿ ಮರಳಿ ಕಾರ್ಯಕ್ರಮ ನಿಮಿತ್ಯ ತನ್ನ ಮನೆಗೆ ಅಳಿಯ ಮತ್ತು ಮಗಳನ್ನು ಕರೆದುಕೊಂಡು ಬಂದಿದ್ದು. ಪಿರ್ಯಾಧಿಯ ಮಗಳು ದಿನಾಂಕ;10.06.2021 ರಂದು ಸಾಯಂಕಾಲ 7.00 ಬಹರ್ಿದಸೆಗೆ ಮನೆಯಿಂದ ಹೋಗಿದ್ದು 7.15 ಗಂಟೆಯ ಸುಮಾರಿಗೆ ಗೋಪಾಳಪೂರ ಗ್ರಾಮದ ಹಳ್ಳದ ಹತ್ತಿರ ಇರುವ ಕಾಲುದಾರಿಯಲ್ಲಿ ಆರೋಪಿ ಲಕ್ಷ್ಮಣ್ ತಂದೆ ಸದಾಶಿವ ಈತನು ಕೈಹಿಡಿದು ಎಳೆದುಕೊಂಡು ಅಪಹರಿಸಿಕೊಂಡು ಹೋಗಿದ್ದಾಗಿ ಪಿರ್ಯಾಧಿ ಇತ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:88/2021 ಕಲಂ 366 ಐಪಿಸಿ ಮತ್ತು ಮತ್ತು 3 (2)(ವಿ) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ -1989 ಅಡಿಯಲ್ಲಿ ನಾನು ಖಾಜಾ ಹುಸೇನ ಪಿಐ ಪ್ರಕರಣ ದಾಖಲಿಸಿಕೊಂಡೇನು. 


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 89/2021 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 12.06.2021 ರಂದು ಸಂಜೆ 04:00 ಗಂಟೆಗೆ ತಾತಳಗೇರಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ. ಐ ರವರು ಠಾಣೆ ಎನ್.ಸಿ. ನಂಬರ 13/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಹೆಚ್.ಸಿ-214 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ಸಂಜೆ 6:15 ಗಂಟೆಗೆ ತಂದು ಪಿ.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ಸಂಜೆ 7:00 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವರ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 1730/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಇಂದು ದಿನಾಂಕ 12.06.2021 ರಂದು ಸಮಯ ರಾತ್ರಿ 8:30 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 89/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 87/2021 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ್ : ಇಂದು ದಿನಾಂಕ: 12.06.2021 ರಂದು ಸಮಯ ಬೆಳಿಗ್ಗೆ 08:30 ಗಂಟೆಗೆ ಪಿ.ಐ ಸಾಹೇಬರು ಮತ್ತು ಸಿಬ್ಬಂದಿಯವರು ಠಾಣೆಯಲ್ಲಿದ್ದಾಗ ಆರೋಪಿತನು ಕಮಾಲನಗರ ಬುರ್ಜ ತಾಂಡಾದ ಗೇಟ್ ಹತ್ತಿರ ರೋಡಿನ ಮೇಲೆ ಅಕ್ರಮವಾಗಿ ಕಳ್ಳ ಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ ಸಾಹೇಬರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಬೆಳಿಗ್ಗೆ 09:00 ಗಂಟೆಗೆ ದಾಳಿ ಮಾಡಿದಾಗ ಕುಡಿಯಲು ಮತ್ತು ಕೊಳ್ಳಲು ಬಂದಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮಾರಾಟ ಮಾಡುತ್ತಿದ್ದ ಆರೋಪಿತನನ್ನು ಮತ್ತು ಆತನ ವಶದಲ್ಲಿದ್ದ 04 ಕಳ್ಳಬಟ್ಟಿ ಸಾರಾಯಿಯನ್ನು ಹಾಗೂ ಕಳ್ಳಭಟ್ಟಿ ಸರಾಯಿಯ ಮಾರಾಟದಿಂದ ಬಂದ ನಗದು ಹಣ 110/- ರೂ ಸೇರಿ ಹೀಗೆ ಒಟ್ಟು 1310/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದ ಅದರ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 92/2021, ಕಲಂ. 143, 147, 148, 341, 323, 324, 355, 504. 506 ಸಂ.149 ಐ ಪಿ ಸಿ : ದಿನಾಂಕ: 12-06-2021 ರಂದು ಸಾಯಂಕಾಲ 04-00 ಗಂಟೆಗೆ ದೂರು ಅಜರ್ಿದಾರ ಠಾಣೆಗೆ ಹಾಜರಾಗಿ ನೀಡಿದ ದೂರು ಸಾರಾಂಶವೆನೆಂದರೆ ದಿನಾಂಕ: 08-06-2021 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ದುಪ್ಪಲ್ಲಿ ಸಿಮಾಂತರದ ಜಮೀನು ಸವರ್ೇ ನಂ. 455/ ಆ ನೇದ್ದರಲ್ಲಿ ಆಸ್ತಿಯಲ್ಲಿ ಸಮಪಾಲು ಕೇಳಲು ಹೋದ ದೂರುದಾರನಿಗೆ ಮತ್ತು ಆತನ ಅಣ್ಣನ ಮಕ್ಕಳಾದ ಸಿದ್ದಲಿಂಗಪ್ಪ, ಶಂಕ್ರಪ್ಪನಿಗೆ ಆರೋಪಿತರೆಲ್ಲರು ಸೇರಿ ಅವಾಚ್ಯವಾಗಿ ಬೈದು, ಅಡ್ಡಗಟ್ಟಿ ನಿಂತು. ಕಟ್ಟಿಗೆಯಿಂದ, ಕಲ್ಲಿನಿಂದ, ಕೈಯಿಂದ, ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ ದೂರು ಸಾರಾಂಶ ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 131/2021 ಕಲಂ 279, 337, 338 ಐ.ಪಿ.ಸಿ. : ಇಂದು ದಿನಾಂಕ 12-06-2021 ರಂದು 6:00 ಎ.ಎಮ್.ಕ್ಕೆ ಫಿರ್ಯಾದಿ ಶ್ರೀ ಮಹ್ಮದ ಯುಸೂಫ ತಂದೆ ಅಬ್ದುಲ್ ಹಸನ ಚೌದ್ರಿ ವಯ: 40 ವರ್ಷ ಜಾ: ಮುಸ್ಲೀಂ ಉ: ಆಟೋ ಚಾಲಕ ಸಾ: ಖವಾಸ್ಪೂರ ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪಯೂಟರ ಟೈಪ ಮಾಡಿಸಿದ ಫಿರ್ಯಾದಿ ಹಾಜರು ಪಡಸಿದ್ದು ಸದರಿ ಫಿರ್ಯಾದಿ ಏನಂದರೆ, ನಾನು ನನ್ನ ಉಪಜೀವನಕ್ಕಾಗಿ ಒಂದು ಆಟೋ ನಂ. ಕೆ.ಎ33-ಎ-5001 ನೇದ್ದನ್ನು ಹೊಂದಿದ್ದು ಅದು ನನ್ನ ಹೆಸರಿನಲ್ಲಿ ಮಾಡಿಸಿಕೊಂಡಿರುವುದಿಲ್ಲ. ಸದರಿ ಆಟೋವನ್ನು ಶಹಾಪುರ ನಗರದಲ್ಲಿ ಪ್ರಯಾಣಿಕರನ್ನು ಸಾಗಿಸಿ ಜೀವನ ಸಾಗಿಸುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ:11-06-2021 ರಂದು 11:25 ಎ.ಎಮ್. ಸುಮಾರಿಗೆ ನಮ್ಮ ಓಣಿಯ ಬೀಮಣ್ಣ ತಂದೆ ನರಸಪ್ಪ ಎಂಬುವರನ್ನು ಅವಶ್ಯಕ ಕೆಲಸದ ನಿಮಿತ್ಯ ಕುಳ್ಳಿಸಿಕೊಂಡು ಹೋಗಿ ಶಹಾಪುರದ ಹಳೇ ಬಸ್ ನಿಲ್ದಾಣದ ಮೂಲಕ ವಿದ್ಯಾರಣ್ಯ ಸ್ಕೂಲ ಕಡೆ ಹೊರಟಿದ್ದೆನು. ಹೀಗೆ ಹೊರಟಾಗ ಸ್ವರಾಜ ಟ್ರ್ಯಾಕ್ಟರ ಶೋ ರೂಮ್ ಮುಂದೆ ಹೊರಟಾಗ ಎದುರಿನಿಂದ ಒಂದು ಕಾರ ನಂ, ಕೆ.ಎ. 32-ಪಿ.8154 ನೇದ್ದು ಹೊರಟಿದ್ದು ಅದರ ಚಾಲಕನು ಕಾರನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದವನೇ ನನ್ನ ಆಟೋಕ್ಕೆ ಬಲವಾಗಿ ಡಿಕ್ಕಿಪಡಿಸಿದನು. ಆಗ ನಾನು ಆಟೋ ಸಮೇತ ಕೆಳಗೆ ಬಿದ್ದೆನು. ನನಗೆ ಅದರಿಂದ ಎರಡೂ ಕಾಲುಗಳ ತೊಡೆಗಳಿಗೆ ಭಾರೀ ರಕ್ತಗಯವಾಗಿವೆ. ಎರಡೂ ಕೈಗಳ ಮಣಿಕಟ್ಟಿನ ಹತ್ತಿರ ರಕ್ತಗಾಯವಾಗಿವೆ. ಮತ್ತು ತಲೆಯ ಮಂದೆ ರಕ್ತಗಾಯವಾಗಿದೆ. ನನ್ನ ಆಟೋದಲ್ಲಿ ಕುಳಿತು ಹೊರಟ ಪ್ಯಾಸೆಂಜರ ಭಿಮಣ್ಣ ತಂದೆ ನರಸಪ್ಪ ಸಾ: ಖವಾಸ್ಪೂರ ಈತನಿಗೆ ತಲೆಗೆ, ಎರಡೂ ಮೊಳಕಾಲಿಗೆ ರಕ್ತಗಾಯಗಳಾಗಿವೆ. ನಾವು ಗಾಯಗೊಂಡಾಗ ಅಲ್ಲೆ ರಸ್ತೆಯಲ್ಲಿ ಹೊರಟಿದ್ದ ನಮ್ಮ ಪರಿಚಯದ ರಡ್ಡಿ ಸಗರಕರ ತಂದೆ ಅಮಲಪ್ಪ ಸಗರಕರ್ ಮತ್ತು ಶಿವುಕುಮಾರ ತಂದೆ ಹುಲಗಪ್ಪ ದೊಡ್ಡಮನಿ ಸಾ: ಶಹಾಪುರ ಇವರುಗಳು ಬಂದು ನಮಗೆ ಶಹಾಪುರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇದೆ ಅಫಘಾತವಾದಾಗ ಅದೇ ಸಮಯಕ್ಕೆ ಶಹಾಪುರ ಪೊಲೀಸರು ಕೂಡಾ ಸ್ಥಳಕ್ಕೆ ಬಂದು ಅಫಘಾತಕ್ಕೀಡಾದ ವಾಹನಗಳನ್ನು ಠಾಣೆಗೆ ತಂದಿರುತ್ತಾರೆ. ಸದರಿ ಕಾರ ಚಾಲಕನ ಹೆಸರು ಅಯ್ಯಣ್ಣ ತಂದೆ ಪ್ರಭುಗೌಡ ಮೇಲಿನಮನಿ ಸಾ: ಲಖನಾಪುರ ತಾ: ಜೇವಗರ್ಿ ಅಂತಾ ನಮಗೆ ಗೊತ್ತಾಗಿದೆ. ನಾನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಪೊಲೀಸರು ಬಂದಾಗ ಮಾತನಾಡಲು ಬರುತ್ತಿರಲಿಲ್ಲ ಆದ್ದರಿಂದ ನಾನು ಫಿರ್ಯಾದಿ ನೀಡಿರುವುದಿಲ್ಲ. ಈಗ ಸ್ವಲ್ಪ ಹುಶಾರಾಗಿದ್ದು ಇರುತ್ತದೆ. ಆದ್ದರಿಂದ ಇಂದು ದಿನಾಂಕ:12-06-2021 ರಂದು ಬೆಳಗ್ಗೆ ಠಾಣೆಗೆ ಬಂದು ದೂರು ನೀಡುತಿದ್ದೇನೆ.ಕಾರಣ ನಿನ್ನೆ ದಿನಾಂಕ: 11-06-2021 ಎಂದು ಮುಂಜಾನೆ 11:25 ಗಟೆ ಸುಮಾರಿಗೆ ನಾನು ನನ್ನ ಆಟೋದಲ್ಲಿ ವಿದ್ಯಾರಣ್ಯ ಸ್ಕೂಲ ಹತ್ತಿರ ಸ್ವರಾಜ ಟ್ರ್ಯಾಕ್ಟರ ಶೋ ರೂಮ ಮುಂದೆ ಹೊರಟಾಗ ನಮ್ಮ ಎದುರಿನಿಂದ ತನ್ನ ಕಾರನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಆಟೋಕ್ಕೆ ಡಿಕ್ಕಿ ಪಡಿಸಿ ನನಗೆ ಭಾರಿಗಾಯ ಮಾಡಿದ ಕಾರ ನಂ. ಕೆ.ಎ.32-ಪಿ.8154 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.131/2021 ಕಲಂ. 279, 337, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ :132/2021 ಕಲಂ 87 ಕೆ.ಪಿ ಆಕ್ಟ : ಇಂದು ದಿನಾಂಕ 12/06/2021 ರಾತ್ರಿ 19-50 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚೆನ್ನಯ್ಯ ಎಸ್, ಹಿರೇಮಠ ಪಿ.ಐ. ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ: 12/06/2021 ರಂದು ಸಾಯಂಕಾಲ 7-00 ಗಂಟೆಗೆ ಠಾಣೆಯಲ್ಲಿ ಇದ್ದಾಗ ಹತ್ತಿಗುಡೂರದ ದೇವದುಗರ್ಾ ಕ್ರಾಸ್ ಹತ್ತಿರ ಕೆನಾಲ್ ಪಕ್ಕದಲ್ಲಿ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಏಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಜೂಜಾಟವಾಡುತ್ತಿದ್ದಾರೆ ಅಂತ ಮಾಹಿತಿ ಬಂದಿದ್ದು, ಸದರಿ ಮಾಹಿತಿಯು ಖಚಿತ ಪಡಿಸಿಕೊಂಡು, ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ, ಠಾಣೆಯ ಎನ್ ಸಿ ನಂ 32/2021 ನೇದ್ದು ದಾಖಲಿಸಿದ್ದು ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು 7-30 ಪಿ.ಎಂ.ಕ್ಕೆ ಅನುಮತಿ ನೀಡಿರುತ್ತಾರೆ. ಕಾರಣ ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಡಲಾಗಿದೆ. ಅಂತ ಜ್ಞಾಪನ ಪತ್ರ ನೀಡಿದ ಪ್ರಕಾರ ಠಾಣೆ ಗುನ್ನೆ ನಂಬರ 132/2021 ಕಲಂ 87 ಕೆ.ಪಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಳ್ಳಲಾಗಿದೆ ಸ||ತ|| ಪಿಯರ್ಾದಿಯವರು ನಂತರ ದಾಳಿ ಮಾಡಿ ಜೂಜಾಟ ಆಡುತಿದ್ದ 5 ಜನ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 11300=00 ರೂಪಾಯಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಬಂದು ಜಪ್ತಿ ಪಂಚನಾಮೇಯನ್ನು ಮುಂದಿನ ಕ್ರಮ ಕುರಿತು ಹಾಜರ ಪಡಿಸಿದ್ದು ಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 109/2021 ಕಲಂ: 279, 304(ಎ) ಐಪಿಸಿ : ದಿನಾಂಕಃ 12/06/2021 ರಂದು 12-30 ಪಿ.ಎಮ್ ಕ್ಕೆ ಶ್ರೀ ಲಚಮಣ್ಣ ತಂದೆ ಮುದರಂಗಪ್ಪ ದೊರಿ ಸಾ: ಶೆಳ್ಳಗಿ ಇವರು ಠಾಣೆಗೆ ಹಾಜರಾಗಿ ಫಿಯರ್ಾಧಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ದಿಃ 08/06/2021 ರಂದು ನನ್ನ ಅಕ್ಕನ ಮಗನಾದ ವಿಜಯಕುಮಾರ ಸಾ: ವನದುರ್ಗ ಇತನು ನನ್ನ ತಾಯಿಯಾದ ರಾಯಮ್ಮ ಇವಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದನು. ನಂತರ ಇಂದು ದಿನಾಂಕಃ 12/06/2021 ರಂದು ಮುಂಜಾನೆ ನಾನು ನನ್ನ ಅಕ್ಕ ಭಾಗಮ್ಮ ಇವಳಿಗೆ ಫೋನ್ ಮಾಡಿ ತಾಯಿಯವರಿಗೆ ಕಳಿಸುಕೊಡು ಅಂತ ಹೇಳಿದ್ದೇನು. ನಂತರ ಮುಂಜಾನೆ 8-45 ಗಂಟೆಯ ಸುಮಾರಿಗೆ ನನ್ನ ಅಕ್ಕನ ಮಗ ವಿಜಯಕುಮಾರ ಇತನು ನನಗೆ ಫೋನ್ ಮಾಡಿ ತಿಪ್ಪನಟಗಿ ಕ್ರಾಸ್ ವರೆಗೆ ಅಜ್ಜಿಗೆ ಮೋ.ಸೈಕಲ್ ಮೇಲೆ ಕರೆದುಕೊಂಡು ಬಂದು ಅಲ್ಲಿಂದ ಸುರಪೂರ ಕಡೆಗೆ ಹೊರಟಿದ್ದ ಅಟೋರಿಕ್ಷಾ ನಂಬರ ಕೆ.ಎ 33 ಎ 9365 ನೇದ್ದರಲ್ಲಿ ಕೂಡಿಸಿ ಕಳಿಸಿರುತ್ತೇನೆ ಅಂತ ಹೇಳಿದ್ದನು. ನಂತರ 9-15 ಎ.ಎಮ್ ಸುಮಾರಿಗೆ ನನಗೆ ಪರಿಚಯದ ಮೌನೇಶ ತಂದೆ ಹಣಮಂತರಾಯ ಕವಾಲ್ದಾರ ಸಾ: ತಿಂಥಣಿ ಇತನು ಫೋನ್ ಮಾಡಿ ನನಗೆ ತಿಳಿಸಿದ್ದೆನೆಂದರೆ, ನಾನು ಮತ್ತು ದಿವಳಗುಡ್ಡಾ ಗ್ರಾಮದ ಪರಶುರಾಮ ಇಬ್ಬರೂ ಕೆಂಭಾವಿಯಿಂದ ಮೋ.ಸೈಕಲ್ ಮೇಲೆ ಸುರಪೂರ ಕಡೆಗೆ ಬರುತ್ತಿರುವಾಗ ನಮ್ಮ ಮುಂದುಗಡೆ ಅಟೋರಿಕ್ಷಾ ನಂಬರ ಕೆ.ಎ 33 ಎ 9365 ನೆದ್ದು ಹೊರಟಿದ್ದು, ಸದರಿ ಅಟೋರಿಕ್ಷಾ ಚಾಲಕನು ತನ್ನ ಅಟೋರಿಕ್ಷಾ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ 9-00 ಎ.ಎಮ್ ಸುಮಾರಿಗೆ ಮಾಚಗುಂಡಾಳ ಕ್ರಾಸ್ ದಾಟಿ ಬರುವ ತಿರುವು ರಸ್ತೆಯಲ್ಲಿ ವೇಗದಲ್ಲಿ ಒಮ್ಮೆಲೆ ಅಟೋರಿಕ್ಷಾ ಎಡಕ್ಕೆ ಕಟ್ ಮಾಡಿ ಸೇತುವೆ ಸಮೀಪ ಬ್ರೇಕ್ ಹಾಕಿದ್ದರಿಂದ ಅಟೋರಿಕ್ಷಾದಲ್ಲಿ ಚಾಲಕನ ಹಿಂಭಾಗದ ಸಿಟಿನ ಎಡಭಾಗದಲ್ಲಿ ಕುಳಿತಿದ್ದ ನಿಮ್ಮ ತಾಯಿಯಾದ ರಾಯಮ್ಮ ಇವಳು ಅಟೋರಿಕ್ಷಾದಲ್ಲಿಂದ ಪುಟಿದು ಕೆಳಗಡೆ ಬಿದ್ದ ಪರಿಣಾಮ ಆಕೆಯ ತಲೆಗೆ, ಎಡಮೆಲಕಿಗೆ ಭಾರಿಗಾಯಗಳಾಗಿ ಮೂಗು ಹಾಗು ಎರಡು ಕಿವಿಗಳಿಂದ ರಕ್ತಸ್ರಾವ ಆಗಿ ಪ್ರಜ್ಞೆ ತಪ್ಪಿರುತ್ತಾಳೆ ಅಂತ ತಿಳಿಸಿದನು. ಆಗ ನಾನು ಆತನಿಗೆ ದಯವಿಟ್ಟು ನನ್ನ ತಾಯಿಗೆ ಸುರಪೂರ ಆಸ್ಪತ್ರೆಗೆ ತಗೆದುಕೊಂಡು ಹೋಗಿರಿ, ನಾನು ಬರುತ್ತೇನೆ ಅಂತ ಹೇಳಿದೇನು. ನಾವು ಮನೆಯಿಂದ ಸುರಪೂರ ಸಕರ್ಾರಿ ಆಸ್ಪತ್ರೆಗೆ ಬಂದಾಗ 9-55 ಎ.ಎಮ್ ಸುಮಾರಿಗೆ ಮೌನೇಶ, ಪರಶುರಾಮ ಹಾಗು ಅಪಘಾತ ಪಡಿಸಿದ ಅಟೋರಿಕ್ಷಾ ಚಾಲಕ ಮೂವರು ನನ್ನ ತಾಯಿಯವರಿಗೆ ಒಂದು ಕ್ರೂಜರ್ ಜೀಪಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದು, ಅವರಿಗೆ ವಿಚಾರಿಸಲಾಗಿ ಆಸ್ಪತ್ರೆಗೆ ಬರುವಾಗ ಮಾರ್ಗಮದ್ಯೆ ಸಿದ್ದಾಪೂರ ಗ್ರಾಮದ ಹತ್ತಿರ 9-45 ಎ.ಎಮ್ ಸುಮಾರಿಗೆ ಮೃತಪಟ್ಟಿರುತ್ತಾಳೆ ಅಂತ ತಿಳಿಸಿದರು. ಆಗ ಆಸ್ಪತ್ರೆಯ ಹತ್ತಿರ ಇದ್ದ ಅಟೋರಿಕ್ಷಾ ಚಾಲಕನ ಹೆಸರು ವಿಚಾರಿಸಲಾಗಿ ಭೀಮರಾಯ ತಂದೆ ಚಂದಪ್ಪ ಕಕ್ಕಸಗೇರಾ ಸಾ: ಮಾಲಗತ್ತಿ ತಾ: ಸುರಪೂರ ಅಂತ ತಿಳಿಸಿರುತ್ತಾನೆ. ಕಾರಣ ಅಪಘಾತಪಡಿಸಿದ ಅಟೋರಿಕ್ಷಾ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 109/2021 ಕಲಂ. 279, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಗೋಗಿ ಪೊಲೀಸ್ ಠಾಣೆ
ಕಲಂ: 62/2021 323, 324, 498(ಎ), 504, ಐಪಿಸಿ : ಇಂದು ದಿನಾಂಕ: 12/06/2021 ರಂದು 06.40 ಪಿಎಂ ಕ್ಕೆ ಶ್ರೀಮತಿ. ಮೈತ್ರಮ್ಮ ಗಂಡ ಹಣಮಂತ್ರಾಯ ಸುರಪೂರ ವಯಾ:36 ವರ್ಷ ಉ: ಕೂಲಿ ಕೆಲಸ ಜಾ: ಉಪ್ಪಾರ ಸಾ: ಕಕ್ಕಸಗೇರಾ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಲಿಖಿತ ದೂರು ಅಜರ್ಿ ಹಾಜರ ಪಡೆಸಿದ್ದು ಸದರಿ ಅಜರ್ಿ ಸಾರಂಶ ಏನಂದರೆ, ನನಗೆ ನಮ್ಮ ಸೋಹದರತ್ತೆಯ ಮಗನಾದ ಹಣಮಂತ್ರಾಯ ತಂದೆ ಮಾನಪ್ಪ ಸುರಪೂರ ವಯಾ:40 ವರ್ಷ ಉ: ಕೂಲಿ ಜಾ: ಉಪ್ಪಾರ ಸಾ: ಕಕ್ಕಸಗೇರಾ ತಾ: ಶಹಾಪೂರ ಇವರೊಂದಿಗೆ ಸುಮಾರು 17 ವರ್ಷಗಳ ಹಿಂದೆ ಮದುವೆ ಮಾಡಿದ್ದು, ನಮಗೆ ವಿಜಯಲಕ್ಷ್ಮೀ 14 ವರ್ಷ, ಚನ್ನವೀರೇಶ, 13 ವರ್ಷ ಮತ್ತು ವಿನಯಕುಮಾರ 10 ವರ್ಷ ಹೀಗೆ ಒಟ್ಟು, ಮೂರು ಜನರು ಮಕ್ಕಳಿದ್ದು, ನಾನು, ನನ್ನ ಗಂಡ ಮತ್ತು ನಮ್ಮ ಮಕ್ಕಳು ಬೇರೆಯಾಗಿ ಮನೆ ಮಾಡಿಕೊಂಡು ಉಪಜೀವಿಸುತ್ತಿದ್ದೇವು, ಇಲ್ಲಿಯವರೆಗೆ ನನ್ನ ಗಂಡನು ಸರಿಯಾಗಿ ಇದ್ದನು. ಈಗ ಸುಮಾರು 01 ತಿಂಗಳಿಂದ ನನ್ನ ಗಂಡನು ನನಗೆ ವಿನಾ ಕಾರಣ ಹೊಡೆಯುವದು ಬೈಯುವದು ಮಾಡುತ್ತ ನನಗೆ ಕಿರುಕುಳ ಕೊಡತೊಡಗಿದ್ದಾನೆ, ಈ ಬಗ್ಗೆ ನಾನು ನಮ್ಮ ತಂದೆಯವರಾದ ಶ್ರೀ ಬಸ್ಸಪ್ಪ ತಂದೆ ಹಣಮಂತ್ರಾಯ ಚಂದಲಾಪೂರ ಸಾ: ಕಲ್ಲದೇವನಹಳ್ಳಿ ಮತ್ತು ನಮ್ಮ ತಾಯಿಯವರಾದ ಹಣಮವ್ವ ಗಂಡ ಬಸ್ಸಪ್ಪ ಚಂದಲಾಪೂರ ಸಾ: ಕಲ್ಲದೇವನಹಳ್ಳಿ ಇವರಿಗೆ ನನ್ನ ಗಂಡನು ಹೊಡೆಯುವದು ಬೈಯುವದು ಮಾಡುತ್ತಿದ್ದ ಬಗ್ಗೆ ಹೇಳಿದಾಗ ಅವರುಗಳು ನನ್ನ ಗಂಡನಿಗೆ ತಿಳುವಳಿಕೆ ಹೇಳಿ ನನಗೆ ಸಹಿಸಿಕೊಂಡು ಹೊಗಲು ತಿಳೀಸಿದ್ದರು, ನಂತರ ನನ್ನ ಗಂಡನು ಎರಡು ದಿನಗಳ ವರಗೆ ಸುಮ್ಮನಿದ್ದು, ನಂತರ ಮತ್ತೆ ನನಗೆ ಹೊಡೆಯುವದನ್ನು ಮುಂದುವರೆಸಿದೆನು, ಆದರೂ ನಾನು ತಾಳಿಕೊಂಡು ಇದ್ದೇನು. ಹೀಗಿದ್ದು, ಮೊನ್ನೆ ದಿನಾಂಕ:09/06/2021 ರಂದು ಸಾಯಂಕಾಲ 06 ಪಿಎಂ ಸುಮಾರಿಗೆ ನನ್ನ ಗಂಡನು ಹೊರಗೆ ಹೊಗತೊಡಗಿದನು ಆಗ ನಾನು ಎಲ್ಲಿಗೆ ಹೊಗುತ್ತಿ ಊಟ ಮಾಡಿ ಮಲಗಿಕೊ ಅಂತಾ ಹೇಳಿದಾಗ ನನಗೆ ರಂಡಿ ನೀನು ಕೂಳ ತಿಂದು ಬೀಳು ನನಗೆ ಹೇಳಲಿಕ್ಕೆ ಬರಬೇಡ ಅಂತಾ ಅಂದು ಹೊದನು, ನಂತರ ಬೆಳಗಿನ ಜಾವ ಅಂದರೆ, ದಿನಾಂಕ:10/06/2021 ರಂದು 03.00 ಎಎಂ ಸುಮಾರಿಗೆ ನಾನು ಮಲಗಿದ್ದಾಗ ನನ್ನ ಗಂಡನಾದ ಹಣಮಂತ್ರಾಯ ಸುರಪೂರ ಈತನು ಹೊರಗಡೆಯಿಂದ ಬಂದಾಗ ನಾನು ಇಷ್ಟು ರಾತ್ರಿಯ ವರೆಗೆ ಎಲ್ಲಿಗೆ ಹೊಗಿದ್ದಿ ಪೋನ ಎಲ್ಲಿ ಇಟ್ಟು ಬಂದಿದಿ ಅಂತಾ ಕೇಳಿದ್ದಕ್ಕೆ ನೀನು ಯಾರಲೇ ಸೂಳಿ ನನಗೆ ಕೇಳಲಿಕ್ಕೆ ಅಂತಾ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಬೆನ್ನಿಗೆ ಹೊಡೆದು ನಂತರ ಅಲ್ಲೆ ಬಿದ್ದಿದ್ದ ಒಂದು ಬಡಿಗೆೆಯಿಂದ ನನ್ನ ಎಡಗಡೆಯ ತೊಡೆಗೆ ಹೊಡೆದು ಗುಪ್ತ ಪೆಟ್ಟು ಮಾಡಿದನು. ಆಗ ನಾನು ಮತ್ತು ನನ್ನ ಮಕ್ಕಳಾದ ವಿಜಯಲಕ್ಷ್ಮೀ 14 ವರ್ಷ, ಚನ್ನವೀರೇಶ, 13 ಎಲ್ಲರೂ ಚಿರಾಡುವದನ್ನು ಕೇಳಿ ನಮ್ಮ ಮಕ್ಕದ ಮನೆಯವರಾದ ಭೀಮಣ್ಣ ತಂದೆ ಬಸವರಾಜ ಹೊನ್ನಗುಡಿ ಮತ್ತು ತಿರುಪತಿ ತಂದೆ ರಾಮಣ್ಣ ಸುರಪೂರ ಇವರುಗಳು ಬಂದು ನನ್ನ ಗಂಡನು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡಿರುತ್ತಾರೆ. ನಾನು ನಮ್ಮ ತಂದೆಯವರಿಗೆ ವಿಷಯ ತಿಳಿಸಿ ಅವರು ಬಂದ ನಂತರ ಇಂದು ದಿನಾಂಕ:12/06/2021 ರಂದು ನಮ್ಮ ತಂದೆಯವರ ಜೋತೆಯಲ್ಲಿ ಠಾಣೆಗೆ ಬಂದು ಅಜರ್ಿ ನೀಡಿರುತ್ತೇನೆ.ನನಗೆ ವಿನಾಃ ಕಾರಣ ಅವಾಚ್ಯವಾಗಿ ಬೈಯುತ್ತಾ ಹೊಡೆ ಬಡೆ ಮಾಡುತ್ತಾ ಕಿರುಕುಳ ನೀಡುತ್ತಿರುವ ನನ್ನ ಗಂಡನಾದ ಹಣಮಂತ್ರಾಯ ತಂದೆ ಮಾನಪ್ಪ ಸುರಪೂರ ಸಾ: ಕಕ್ಕಸಗೇರಾ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ತಮ್ಮಲ್ಲಿ ವಿನಂತಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 62/2021 ಕಲಂ, 323, 324, 498(ಎ), 504 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಗೋಗಿ ಪೊಲೀಸ್ ಠಾಣೆ
ಕಲಂ: 63/2021 279, 338 ಐಪಿಸಿ : ಇಂದು ದಿನಾಂಕ: 12/06/2021 ರಂದು 08.30 ಪಿಎಂ ಕ್ಕೆ ಶ್ರೀಮತಿ. ಸಂಗಮ್ಮ ಗಂಡ ದೇವಪ್ಪ @ ದೇವಿಂದ್ರಪ್ಪ ಮಲ್ಲಾಬಾದಿ ವಯಾ:35 ಉ: ಕೂಲಿ ಜಾ: ಮಾದಿಗ ಸಾ: ಗೋಗಿ ಕೆ ತಾ: ಶಹಾಪೂರ ಜಿ: ಯಾದಗಿರಿ. ಇವರು ಠಾಣೆಗೆ ಬಂದು ಲಿಖಿತ ದೂರು ಅಜರ್ಿ ಹಾಜರ ಪಡೆಸಿದ್ದು ಸದರಿ ಅಜರ್ಿ ಸಾರಂಶ ಏನಂದರೆ, ನಾನು ಸಂಗಮ್ಮ ಗಂಡ ದೇವಪ್ಪ @ ದೇವಿಂದ್ರಪ್ಪ ಮಲ್ಲಾಬಾದಿ ವಯಾ:35 ಉ: ಕೂಲಿ ಜಾ: ಮಾದಿಗ ಸಾ: ಗೋಗಿ ಕೆ ತಾ: ಶಹಾಪೂರ ಜಿ: ಯಾದಗಿರಿ. ಇದ್ದು ಮಾನ್ಯರವರಲ್ಲಿ ವಿನಂತಿಸಿಕೊಳ್ಳುವದೆನಂದರೆ, ನಾನು ನನ್ನ ಗಂಡ ಮತ್ತು ಮೂರು ಜನ ಮಕ್ಕಳ ಜೋತೆಯಲ್ಲಿ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ: 26/05/2021 ರಂದು ಬೆಳಿಗ್ಗೆ ಉಕ್ಕನಾಳ ಗ್ರಾಮದಲ್ಲಿ ಇರುವ ನಮ್ಮ ಸಂಬಂದಿಕರಲ್ಲಿ ಕೆಲಸ ಇದ್ದ ಕಾರಣ ಅವರ ಬೇಟಿ ಕುರಿತು ನಾನು ಉಕ್ಕನಾಳಕ್ಕೆ ಹೊಗಬೇಕಾಗಿದ್ದರಿಂದ ನಮ್ಮ ಮನೆಯಲ್ಲಿ ಮೋಟಾರ್ ಸೈಕಲ ಇಲ್ಲದ ಕಾರಣ ಮತ್ತು ಸದ್ಯ ಕರೋನ ರೋಗದ ಕಾರಣ ವಾಹನಗಳ ಸೌಲಭ್ಯ ಇಲ್ಲದ ಕಾರಣ ನಾನು ನಮ್ಮ ಸಹೋದರ ಸಂಬಂದಿಕರಲ್ಲಿ ನಮ್ಮ ತಮ್ಮನಾಗುವ ಮುತ್ತುರಾಜ ತಂದೆ ಹಣಮಂತ ಹೊಸಮನಿ ವಯಾ: 30 ವರ್ಷ ಸಾ: ಗೋಗಿ ಪೇಠ ಇವರಿಗೆ ಉಕ್ಕನಾಳಕ್ಕೆ ಹೊಗಿ ಬರಬೇಕಾಗಿದೆ ನನ್ನ ಜೋತೆಯಲ್ಲಿ ಬರಬೇಕು ಅಂತಾ ಹೇಳಿದ್ದರಿಂದ ಮುತ್ತುರಾಜ ಈತನು ಆಯಿತು ಅಂತಾ ಹೇಳಿ ತನ್ನ ಮೋಟಾರ್ ಸೈಕಲ ನಂಬರ ಕೆಎ-33-ಯು-4953 ನೇದ್ದರ ಮೇಲೆ ದಿನಾಂಕ: 26/05/2021 ರಂದು ಗೋಗಿ ಕೆ ಗ್ರಾಮದಿಂದ 10.00 ಎಎಂ ಸುಮಾರಿಗೆ ಉಕ್ಕನಾಳ ಕ್ಕೆ ಹೊಗುವ ಕುರಿತು ಕರೆದುಕೊಂಡು ಹೊದನು. ನಂತರ ಇಬ್ಬರು ಕೂಡಿ ಹೊಗುವಾಗ ನಾನು ಮೋಟಾರ ಸೈಕಲ್ ಹಿಂದೆ ಕುಳಿತಿದ್ದೇನು, ರಬ್ಬನಳ್ಳಿ ಕ್ರಾಸ್ ದಾಟಿ ಹೊಗುತ್ತಿದ್ದಾಗ ಅಂದಾಜು 10.30 ಎಎಂ ಸುಮಾರಿಗೆ ಮುತುರಾಜ ಈತನು ತನ್ನ ಮೋಟಾರ್ ಸೈಕಲ್ ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತಿದ್ದಾಗ ನಾನು ನಿಧಾನವಾಗಿ ನಡೆಸು ಅಂತಾ ಹೇಳಿದರೂ ಕೇಳದೆ ವೇಗವಾಗಿ ನಡೆಸುತ್ತಾ ರಬ್ಬನಳ್ಳಿ ಕೆನಾಲ ಸಮೀಪದ ಮಾನಪ್ಪನ ದಾಬಾದ ಹತ್ತಿರ ರೋಡಿನಲ್ಲಿ ಸದರಿ ಮೋಟಾರ್ ಸೈಕಲ್ ನಂ: ಕೆಎ-33-ಯು-4953 ನೇದ್ದನ್ನು ಎದುರಿನಿಂದ ಬರುವ ವಾಹನಗಳಿಗೆ ಸೈಡಕೊಡಲು ಹೊಗಿ ಸ್ಕೀಡ್ ಮಾಡಿ ವಾಹನ ಆ ಕಡೆ ಈಕಡೆ ಹೊರಳಾಡಿಸಿದನು ಪರಿಣಾಮವಾಗಿ ನಾನು ಮೊಟಾರ್ ಸೈಕಲ್ ಹಿಂದೆ ಕುಳಿತವಳು ಕೆಳಗೆ ಬಿದ್ದಿದ್ದು, ನನಗೆ ತೆಲೆಗೆ ಹಿಂಬಾಗದಲ್ಲಿ ಭಾರಿ ರಕ್ತಗಾಯ ಆಗಿದ್ದು, ಮುಖಕ್ಕೆ ತರಚಿದ ಗಾಯಗಳಾಗಿದ್ದು ಇರುತ್ತದೆ. ಎರಡು ಮೊಳಕೈಗಳಿಗೆ ಮತ್ತು ಎಡಗಾಲಿನ ಮೊಳಕಾಲಿಗೆ ತರಚಿದ ಗಾಯಗಳಾಗಿದ್ದು ಇರುತ್ತದೆ. ಅಷ್ಟರಲ್ಲಿ ಮೋಟಾರ್ ಸೈಕಲ ಮೇಲೆ ಹೊರಟಿದ್ದ ನಮ್ಮೂರಿನ ಚಂದಪ್ಪ ತಂದೆ ನಿಜಗಪ್ಪ ಡಬ್ಬೇರ ಮತ್ತು ಪರಶುರಾಮ ತಂದೆ ಅಯ್ಯಪ್ಪ ಮುಷ್ಟಳ್ಳಿ ಸಾ: ಗೋಗಿ ಕೆ ಇವರುಗಳು ನೋಡಿ ನನಗೆ ಎಬ್ಬಿಸಿದರು, ನಂತರ ಅವರಿಬ್ಬರೂ ಮತ್ತು ಹಾಗೂ ಮುತ್ತುರಾಜ ಕೂಡಿ ನನಗೆ ಸರಕಾರಿ ಆಸ್ಪತ್ರೆ ಗೋಗಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ನಮ್ಮ ಅಣ್ಣನಾದ ಶೇಖಪ್ಪ ತಂದೆ ಅಂಬಲಪ್ಪ ಕಟ್ಟಿಮನಿ, ಮತ್ತು ಮಾನಪ್ಪ ತಂದೆ ಅಂಬಲ್ಲಪ್ಪ ಮೂಲಿಮನಿ ಇವರು ಬಂದು ಗೋಗಿ ಆಸ್ಪತ್ರೆಯಿಂದ ಅಲ್ಲಿಂದ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ನಾವು ಕಲಬುರಗಿಯಲ್ಲಿ ಉಪಚಾರ ಮಾಡಿಸಿಕೊಂಡು ಊರಿಗೆ ಹೊಗಿದ್ದ ನನ್ನ ಗಂಡನು ಬಂದ ನಂತರ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ:12/06/2021 ರಂದು 08.30 ಪಿಎಂ ಕ್ಕೆ ಠಾಣೆಗೆ ಬಂದು ದೂರು ಅಜರ್ಿ ನೀಡಿರುತ್ತೇವೆ ನನಗೆ ಹಿಂದೆ ಕೂಡಿಸಿಕೊಂಡು ಮೋಟಾರ್ ಸೈಕಲ್ ನಂ: ಕೆಎ-33-ಯು-4953 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊಗಿ ಸ್ಕೀಡ್ ಮಾಡಿ ಅಪಘಾತ ಮಾಡಿ ನನ್ನ ತೆಲೆಗೆ ಭಾರಿಗಾಯ ಮತ್ತು ಮೈಕೈಗಳಿಗೆ ತರಚಿದ ಗಾಯಗಳು ಆಗಲು ಕಾರಣನಾದ ಮುತ್ತುರಾಜ ತಂದೆ ಹಣಮಂತ ಹೊಸಮನಿ ವಯಾ: 30 ವರ್ಷ ಸಾ: ಗೋಗಿ ಪೇಠ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 63/2021 ಕಲಂ, 279, 338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 85/2021 ಕಲಂ: 32 , 34 ಕೆ.ಇ ಕಾಯ್ದೆ : 85/2021 ಕಲಂ: 32 , 34 ಕೆ.ಇ ಕಾಯ್ದೆ : ದಿನಾಂಕ: 12.06.2021 ರಂದು ಸಾಯಂಕಾಲ 5.30 ಪಿ.ಎಂಕ್ಕೆ ಆರೋಪಿತನು ತನ್ನ ಅಂಗಡಿಯಲ್ಲಿ ಮಧ್ಯದ ಪ್ರೇಶರ್ ಸೀಲ್ಡ್ ಪ್ಯಾಕೇಟಗಳನ್ನು ಇಟ್ಟುಕೊಂಡು ಸಕರ್ಾರದ ಪರವಾನಿಗೆ ಪಡೆಯದೇ ಅನಧೀಕೃತವಾಗಿ ಸಾರ್ವಜನಿಕರಲ್ಲಿ ಮಾರಾಟ ಮಾಡುವಾಗ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 1] 330 ಎಂಎಲ್ ದ 15 ಕೆ.ಎಫ್ ಸ್ಟ್ರಾಂಗ್ ಟಿನ್ ಬೀರ ಬಾಟಲಿಗಳು ಒಟ್ಟು ಅಕಿ-1275/- ರೂ , 2] 180 ಎಂ.ಎಲ್ ದ 20 ಓರಿಜಿನಲ್ ಚಾಯಿಸ್ ವಿಸ್ಕಿ ಮಧ್ಯದ ಪ್ರೇಶರ್ ಸೀಲ್ಡ್ ಪ್ಯಾಕೇಟ್ಗಳು ಒಟ್ಟು- 1405.2 / ರೂ , 3] 180 ಎಂ.ಎಲ್. ದ 10 ಬ್ಯಾಗ್ ಪೈಪರ್ ಮಧ್ಯದ ಪ್ಯಾಕೇಟಗಳು ಒಟ್ಟು ಅ.ಕಿ-1062.3/ ರೂ 4] 180 ಎಂಎಲ್. ದ 24 ಓಲ್ಡ್ ಥಾವರೇನ್ ಪ್ರೇಶರ್ ಸೀಲ್ಡ್ ಪ್ಯಾಕೇಟ್ ಗಳು ಅಕಿ-2082/ರೂಗಳು 5] 650 ಎಂ.ಎಲ್.ದ 08 ಕೆ.ಎಫ್ ಸ್ರ್ಟಾಂಗ್ ಬಿಯರ್ ಬಾಟಲಿಗಳು ಅಕಿ-1200/ ರೂ ಹೀಗೇ ಒಟ್ಟು ಮೌಲ್ಯ 7074.05/ ಅ.ಕಿ ಕಿಮ್ಮತ್ತಿನ ವಿವಿಧ ನಮೂನೆಯ ಬಾಟಲಿಗಳು ಮತ್ತು ಪ್ಯಾಕೇಟಗಳು ಜಪ್ತಿ ಮಾಡಿಕೊಂಡಿರುವ ಬಗ್ಗೆ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣವು ದಾಖಲಾಗಿರುತ್ತದೆ.

Last Updated: 14-06-2021 10:56 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080