ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-06-2022


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 92/2022 ಕಲಂ: 143, 147, 148, 323, 324, 326, 354, 504, 506 ಸಂ. 149 ಐಪಿಸಿ: ಇಂದು ದಿನಾಂಕ:12/06/2022 ರಂದು 02:00 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪಿಯರ್ಾದಿದಾರರಾದ ಶ್ರೀಮತಿ ಲಕ್ಷ್ಮೀ ಗಂಡ ಜಟ್ಟೆಪ್ಪ ಮದರ ವ|| 40 ವರ್ಷ ಉ|| ಕೂಲಿ ಕೆಲಸ ಸಾ|| ಬಾದ್ಯಾಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಂಶವೇನೆಂದರೆ, ನನಗೆ 3 ಜನ ಗಂಡುಮಕ್ಕಳು, 2 ಜನ ಹೆಣ್ಣುಮಕ್ಕಳು ಹೀಗೆ ಒಟ್ಟು 5 ಜನ ಮಕ್ಕಳಿರುತ್ತಾರೆ. ನಾವು ನಮ್ಮ ಓಣಿಯಲ್ಲಿ ಹೊಸ ಮನೆ ಕಟ್ಟುತ್ತಿದ್ದು, ಅದರ ಬಾಜು ನಮ್ಮ ಜನಾಂಗದ ಮರೆಪ್ಪ ತಂದೆ ಭೀಮಪ್ಪ ದೊಡ್ಡಮನಿ ಇವರ ತಂಗಿಯಾದ ಯಲ್ಲಮ್ಮ ಗಂಡ ಹಣಮಂತ ಇವರು ಕೂಡ ಹೊಸ ಮನೆ ಕಟ್ಟುತ್ತಿರುತ್ತಾರೆ. ನಮ್ಮ ಹೊಸ ಮನೆ ಮುಂದೆ ಸಿಸಿ ರೋಡ ಹಾದು ಹೋಗಿರುತ್ತದೆ. ಈಗ್ಗೆ ಸುಮಾರು 4-5 ದಿನಗಳ ಹಿಂದೆ ಯಲ್ಲಮ್ಮ ಗಂಡ ಹಣಮಂತ ಇವರು ತಮ್ಮ ಮನೆಯ ಕಂಪೌಂಡ್ ಗೋಡೆಯ ಬುನಾದಿಯನ್ನು ಸಿಸಿ ರೋಡಿನವರೆಗೆ ತೆಗ್ಗು ತೋಡಿದ್ದರಿಂದ ನನ್ನ ಗಂಡನಾದ ಜಟ್ಟೆಪ್ಪನು ಮನೆಯ ಮುಂದಿನ ರೋಡ್ವರೆಗೆ ಯಾಕೆ ತೆಗ್ಗು ತೋಡಿದ್ದೀರಿ, ಸ್ವಲ್ಪ ರೋಡ್ ಬಿಟ್ಟು ಹಿಂದಕ್ಕೆ ತೆಗ್ಗು ತೋಡಿ ಕಂಪೌಂಡ್ ನಿಮರ್ಿಸಿಕೊಳ್ಳಿರಿ ಅಂತ ಹೇಳಿ ಬಂದಿದ್ದ ವಿಷಯ ನಮಗೆ ತಿಳಿಸಿದ್ದನು. ಹೀಗಿದ್ದು, ದಿನಾಂಕ: 10/06/2022 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಾನು, ನನ್ನ ಗಂಡ ಜಟ್ಟೆಪ್ಪ, ನನ್ನ ಮಕ್ಕಳಾದ ಅಯ್ಯಪ್ಪ, ಪರಸಪ್ಪ ಹಾಗೂ ನಮ್ಮ ನಾದಿನಿಯ ಮಕ್ಕಳಾದ ಜಟ್ಟೆಪ್ಪ ತಂದೆ ಹಣಮಂತ್ರಾಯ, ನಾಗಮ್ಮ ಗಂಡ ನಿಂಗಪ್ಪ ಎಲ್ಲರು ಕೂಡಿ ನಮ್ಮ ಹೊಸ ಮನೆಯ ಮುಂದೆ ಇದ್ದಾಗ, ನಮ್ಮ ಓಣಿಯ ನಮ್ಮ ಜನಾಂಗದ 1) ಮರೆಪ್ಪ ತಂದೆ ಭೀಮಪ್ಪ ದೊಡ್ಡಮನಿ 2) ರಂಗಪ್ಪ ತಂದೆ ಮರೆಪ್ಪ ದೊಡ್ಡಮನಿ 3) ಶಿವಪ್ಪ ತಂದೆ ಮರೆಪ್ಪ ದೊಡ್ಡಮನಿ 4) ಅಂಬರೇಶ ತಂದೆ ಮರೆಪ್ಪ ದೊಡ್ಡಮನಿ 5) ಸಂತೋಷ ತಂದೆ ಮರೆಪ್ಪ ದೊಡ್ಡಮನಿ 6) ನಿಂಗಪ್ಪ ತಂದೆ ಭೀಮಪ್ಪ ದೊಡ್ಡಮನಿ 7) ವೀರೇಶ ತಂದೆ ನಿಂಗಪ್ಪ ದೊಡ್ಡಮನಿ 8) ಭೀಮರಾಯ ತಂದೆ ಹಣಮಂತ 9) ರಂಗಪ್ಪ ತಂದೆ ಹಣಮಂತ 10) ಯಲ್ಲಮ್ಮ ಗಂಡ ಹಣಮಂತ 11) ತಾಯಮ್ಮ ಗಂಡ ನಿಂಗಪ್ಪ 12) ಶಿವಮ್ಮ ಗಂಡ ಮರೆಪ್ಪ ಇವರೆಲ್ಲರು ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು, ಬಡಿಗೆ, ರಾಡು ಹಿಡಿದುಕೊಂಡು ಬಂದವರೇ ಏಕಾಏಕಿ ನನ್ನ ಗಂಡನಿಗೆ ಉದ್ದೇಶಿಸಿ ಮರೆಪ್ಪ ಈತನು ಏನಲೇ ಜಟ್ಯಾ ರಂಡಿಮಗನೆ, ನೀ ಯಾವನಲೇ ಕಂಪೌಂಡ್ ಹಿಂದಕ್ಕೆ ಕಟ್ಟಿಕೊರಿ ಅಂತ ಹೇಳಲಿಕ್ಕೆ ನಾವೇನು ನಿಮ್ಮ ಜಾಗದಾಗ ಮನಿ ಕಟ್ಟಿವೇನಲೆ, ನಿನ್ನ ತಿಂಡಿ ಬಾಳ ಆಗ್ಯಾದ ರಂಡಿಮಗನೆ ಅಂತ ಅವಾಚ್ಯವಾಗಿ ಬೈದು, ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ಗಂಡನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿದನು. ರಂಗಪ್ಪ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಗಂಡನ ಎಡಮೆಲಕಿಗೆ ಹೊಡೆದು ರಕ್ತಗಾಯಪಡಿಸಿದನು. ನನ್ನ ಮಗ ಅಯ್ಯಪ್ಪನಿಗೆ, ಭೀಮರಾಯ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದನು, ಶಿವಪ್ಪ ಈತನು ಕೈಯಿಂದ ಅಯ್ಯಪ್ಪನ ತುಟಿಗೆ ಹೊಡೆದು ರಕ್ತಯಾಯ ಪಡಿಸಿ, ಮೂಗಿಗೆ ಹೊಡೆದು ಗುಪ್ತಗಾಯಗೊಳಿಸಿದನು. ಮಗ ಪರಸಪ್ಪನಿಗೆ ಸಂತೋಷ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಬೆನ್ನಿಗೆ ಹೊಡೆದು ಗುಪ್ತಗಾಯಗೊಳಿಸಿದನು. ಆಗ ಅಲ್ಲಿಯೇ ಇದ್ದ ನಾನು, ನಾಗಮ್ಮ ಮತ್ತು ಜಟ್ಟೆಪ್ಪ ಮೂವರು ಬಿಡಿಸಲು ಹೋದಾಗ ನನಗೆ ಯಲ್ಲಮ್ಮ ಇವಳು ಕೈಯಿಂದ ಬೆನ್ನಿಗೆ ಗುದ್ದಿ ಒಳಪೆಟ್ಟು ಮಾಡಿದಳು, ತಾಯಮ್ಮ ಇವಳು ಕೈಯಿಂದ ನನ್ನ ಎಡಗೈ ರಟ್ಟೆಗೆ ಗುದ್ದಿ ಒಳಪೆಟ್ಟು ಮಾಡಿದಳು. ನಾಗಮ್ಮ ಇವಳಿಗೆ ಅಂಬರೇಶ ಈತನು ಕೂದಲು ಹಿಡಿದು ಜಗ್ಗಾಡಿ, ಸೀರೆ ಸೆರಗು ಹಿಡಿದು ಎಳೆದಾಡಿ ಅವಮಾನ ಮಾಡಿದನು, ರಂಗಪ್ಪ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನಾಗಮ್ಮಳ ಎಡಕಿವಿಗೆ ಹೊಡೆದು ರಕ್ತಗಾಯಪಡಿಸಿದನು ಮತ್ತು ಶಿವಮ್ಮ ಇವಳು ಕೈಯಿಂದ ನಾಗಮ್ಮಳ ಬೆನ್ನಿಗೆ ಗುದ್ದಿ ಒಳಪೆಟ್ಟು ಮಾಡಿದಳು. ನಾದಿನಿಯ ಮಗನಾದ ಜಟ್ಟೆಪ್ಪನಿಗೆ ನಿಂಗಪ್ಪ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬೆನ್ನಿಗೆ ಹೊಡೆದು ಗುಪ್ತಪೆಟ್ಟು ಮಾಡಿದ್ದು ಅಲ್ಲದೆ ವೀರೇಶ ಈತನು ಕೈಯಿಂದ ಜಟ್ಟೆಪ್ಪನ ಹೆಡಕಿಗೆ ಹೊಡೆದು ಗುಪ್ತಪೆಟ್ಟು ಮಾಡಿದನು. ಆಗ ನಾವೆಲ್ಲರು ಚೀರಾಡುತ್ತಿರುವಾಗ ಅಲ್ಲೇ ಇದ್ದ ಆಜುಬಾಜು ಮನೆಯವರಾದ ಮಲ್ಕಪ್ಪ ತಂದೆ ಮಲ್ಲಪ್ಪ ಕಟ್ಟಿಮನಿ, ಅಂಬರೇಶ ತಂದೆ ಭೀಮಪ್ಪ ಕಟ್ಟಿಮನಿ, ಲಕ್ಷ್ಮೀ ಗಂಡ ಭೀಮರಾಯ ಕೂಚಬಾಳ ಇವರು ಬಂದು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಅವರೆಲ್ಲರು ಹೊಡೆಯುವದನ್ನು ಬಿಟ್ಟು ಮಕ್ಕಳೆ ನಿಮ್ಮ ಜೀವ ಇವತ್ತು ಉಳಿದಾದ ಇನ್ನೊಮ್ಮೆ ಸಿಕ್ಕಾಗ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ನಂತರ ನಾವೆಲ್ಲರು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ಬಂದಿದ್ದು, ನನ್ನ ಗಂಡ ಜಟ್ಟೆಪ್ಪ, ನನ್ನ ಮಕ್ಕಳಾದ ಅಯ್ಯಪ್ಪ, ಪರಸಪ್ಪ ಮತ್ತು ನಾದಿನಿಯ ಮಕ್ಕಳಾದ ಜಟ್ಟೆಪ್ಪ, ನಾಗಮ್ಮ ಇವರು ಚಿಕಿತ್ಸೆ ಪಡೆದುಕೊಂಡಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ನನಗೆ ಅಷ್ಟೇನು ಗಾಯಗಳು ಆಗಿರದಿದ್ದರಿಂದ ನಾನು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ನಾಲ್ಕೂ ಜನರಿಗೆ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಆದ್ದರಿಂದ ನಮಗೆ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ ಭಾರಿ ರಕ್ತಗಾಯ ಮತ್ತು ಗುಪ್ತಗಾಯಪಡಿಸಿ, ಮಾನಭಂಗ ಮಾಡಲು ಪ್ರಯತ್ನಿಸಿ, ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 12 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 92/2022 ಕಲಂ: 143, 147, 148, 323, 324, 326, 354, 504, 506 ಸಂ. 149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 70/2022 ಕಲಂ 323, 324, 504, 506 ಸಂಗಡ 34 ಐಪಿಸಿ: ಸರಕಾರದಿಂದ ಛೇಲೇರಿ ಗ್ರಾಮಕ್ಕೆ ಮಂಜೂರಾದ ಜಲಜೀವನ ಯೋಜನೆ ಕೆಲಸದ ಕಾಂಟ್ಯಾಕ್ಟ ಬಗ್ಗೆ ಛೇಲೇರಿ ಹಳ್ಳದ ಹತ್ತಿರ ನಾಗರೆಡ್ಡಿ ಹಳ್ಳಿ ದಾರಿ ಪಕ್ಕದಲ್ಲಿ ಫಿಯರ್ಾದಿ ಆರೋಪಿತರಿಗೆ ವಿಚಾರಣೆ ಮಾಡುತ್ತಿದ್ದಾಗ ಆರೋಪಿತರಿಬ್ಬರು ಫಿಯರ್ಾದಿಯೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿ ರಕ್ತಗಾಯಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ನೀಡಿದ ಹೇಳಿಕೆ ಪಡೆದು ಮರಳಿ ಇಂದು ಬೆಳಿಗ್ಗೆ 11.00 ಗಂಟೆಗೆ ಠಾಣೆಗೆ ಬಂದು ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 70/2022 ಕಲಂ 323, 324, 504, 506 ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

 
ಭೀ.ಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 55/2022 ಕಲಂ 323, 498(ಎ), 504 ಸಂಗಡ 34 ಐಪಿಸಿ: ಅಣಬಿ ಗ್ರಾಮದ ಮಲ್ಲನಗೌಡ ಇವರೊಂದಿಗೆ ಫಿರ್ಯಾದಿಯು ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ವೈವಾಹಿಕ ಜೀವನ ನಡೆಸಿಕೊಂಡು ಬಂದಿದ್ದು ನಾವು ಮೈಸೂರಿನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದೆವು. ನನ್ನ ಗಂಡನು ಇದ್ದಕ್ಕಿದ್ದಂತೆ ನನ್ನನ್ನು ಮೈಸೂರಿನಲ್ಲಿ ಬಿಟ್ಟು ಅಣಬಿ ಗ್ರಾಮಕ್ಕೆ ಬಂದಿದ್ದಾನೆ ನಾನು ದಿನಾಂಕ: 04/06/2022 ರಂದು ಮೈಸೂರಿನಿಂದ ಅಣಬಿ ಗ್ರಾಮಕ್ಕೆ ಬಂದಿದ್ದು ನನ್ನನ್ನು ಯಾಕೆ ಬಿಟ್ಟು ಬಂದಿದ್ದಿ ಅಂತಾ ಕೇಳಿದಕ್ಕೆ ನನ್ನ ಗಂಡನಾದ ಮಲ್ಲನಗೌಡ ತಂದೆ ಸಾಹೇಬಗೌಡ ಪಾಟೀಲ್, ಮಾವ ಸಾಹೇಬಗೌಡ, ಅತ್ತೆಯಂದಿರಾದ ಶೇಖಮ್ಮ ಗಂಡ ಸಾಹೇಬಗೌಡ, ಗೌರಮ್ಮ ಇವರು ದಿನಾಲು ನನಗೆ ನೀನು ಇಲ್ಲಿ ಯಾಕೆ ಬಂದಿದ್ದಿ ಅಂತಾ ನನಗೆ ಮಾನಸಿಕ ಮತ್ತು ದಹಿಕ ಹಿಂಸೆ ಕೋಡಲಾರಂಬಿಸಿದರು. ನಾನು ಎಲ್ಲವನ್ನೂ ಸಹಿಸಿಕೊಂಡು ಮನೆಯಲ್ಲಿಯೇ ಇದ್ದೆನು.ಆರೋಪಿತರು ದಿನಾಂಕ: 11/06/2022 ರಂದು ರಾತ್ರಿ 11-00 ಪಿ.ಎಮ್ ಮತ್ತೆ ದಹಿಕ ಮತ್ತು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದರಿಂದ ಫಿರ್ಯಾದಿಯ ಅಜರ್ಿಸಾರಾಂಶದ ಮೇಲಿಂದ ಠಾಣೆಗೆ ಗುನ್ನೆ ನಂ: 55/2022 ಕಲಂ 323, 468(ಎ) 504 ಸಂಗಡ 34 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು.


ಯಾದಗಿರಿ ಮಹಿಳಾ ಪೊಲೀಸ್ ಠಾಣೆ:-
ಗುನ್ನೆ ನಂ: 89/2022 ಕಲಂ. ಮಹಿಳೆ ಕಾಣೆ: ದಿನಾಂಕ: 12-05-2022 ರಂದು ಸಾಯಂಕಾಲ 06-30 ಗಂಟೆಗೆ ಪಿಯಾಧಿದಾರನು ಠಾನೆಗೆ ಹಾಜರಾಗಿ ಪಿಯಾಧಿ ನಿಡಿದ ಸಾರಂಶವೆನೆಂದರೆ ನನ್ನ ತಂಗಿ ದೇವಮ್ಮ ಈಕೆಯು ಯಾದಗಿರಿಯ ಸರಕಾರಿ ಪದವಿ ಮಹಿಳಾ ಕಾಲೇಜಿನಲ್ಲಿ ಬಿ.ಎ ನೇ ಸೇಮ್ ನಲ್ಲಿ ಒದುತ್ತಿರುತ್ತಾಳೆ ಆಕೆ ನಮ್ಮೂರಿನಿಂದ ದಿನಾಲೂ ಬೆಳಿಗ್ಗೆ 07-30 ಗಂಟೆಗೆ ಕಾಲೇಜಿಗೆ ಬಂದು ಮಧ್ಯಾಹ್ನ 02-30 ಗಂಟೆ ಸುಮಾರಿಗೆ ಮನೆಗೆ ಬರುತಿದ್ದಳು. ಹೀಗಿದ್ದು ದಿನಾಂಕ: 04-06-2022 ರಂದು ಬೆಳಿಗ್ಗೆ 07-30 ಗಂಟೆಗೆ ನನ್ನ ತಂಗಿ ದೇವಮ್ಮ ಈಕೆಯು ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದಳು. ಮಧ್ಯಾಹ್ನ 02-30 ಗಂಟೆ ಆದರೂ ಕೂಡ ಮನೆಗೆ ಬರಲಿಲ್ಲ ಆಗ ನಾನು ಆಕೆಯ ಮೋಬೈಲಗೆ ಪೊನ್ ಮಾಡಿದಾಗ ಸ್ವೀಚ್ ಆಫ್ ಹೇಳಿತು ಆಗ ನಾನು ಸಾಯಂಕಾಲ ಬರಬಹುದು ಅಂತಾ ಸುಮ್ಮನಾದೆವು ಸಾಯಂಕಾಲ 06-00 ಗಂಟೆಯಾದರು ಕೂಡ ನನ್ನ ತಂಗಿ ದೇವಮ್ಮ ಈಕೆಯು ಮನೆಗೆ ಬರಲಿಲ್ಲ ಆಗ ನಾನು ನಮ್ಮ ತಾಯಿ ಇಬ್ಬರು ಯಾದಗಿರಿಗೆ ಬಂದು ಎಲ್ಲಾ ಕಡೆ ಹುಡಕಡಿದೆವು ಎಲ್ಲಿ ಸಿಗಲಿಲ್ಲ ಎಲ್ಲಾದರು ಹೋಗಿರಬಹುದು ಮರುದಿ ಬರಬಹುದು ಅಂತಾ ಮರಳಿ ಮನೆಗೆ ಹೋದೆವು ಮರುದಿನ ಆದರೂ ಕೂಡ ನನ್ನ ತಂಗಿ ಮನೆಗೆ ಬರಲಿಲ್ಲ ಆಗ ನಾನು ನಮ್ಮ ಬೀಗರ ನೆಂಟರ ಊರುಗಳಿಗೆ ಪೊನ್ ಮಾಡಿ ನಮ್ಮ ತಂಗಿ ದೇವಮ್ಮ ಈಕೆಯು ಬಂದಿದ್ದಾಳೆನು ಅಂತಾ ಕೇಳಲಾಗಿ ಬಂದಿಲ್ಲ ಅಂತಾ ತಿಳಿಸಿದರು. ನಂತರ ನಾನು ನನ್ನ ತಾಯಿ ನಮಗೆ ಗೊತ್ತಿರುವ ಕಡೆ ನಮ್ಮ ತಂಗಿಗಾಗಿ ಎಲ್ಲಾ ಕಡೆ ಹುಡುಕಾಡಿದರು ನನ್ನ ತಂಗಿ ಎಲ್ಲಿ ಸಿಕ್ಕಿರುವದಿಲ್ಲ ಅಂತಾ ಪಿಯರ್ಾಧಿ ಸಾರಂಶ.

 


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 71/2022 ಕಲಂ 323, 324, 504, 506 ಐಪಿಸಿ: ಛೇಲೇರಿ ಗ್ರಾಮಕ್ಕೆ ಜಲಜೀವನ ಯೋಜನೆ ಕೆಲಸ ಸರಕಾರದಿಂದ ಸಂಗಾರೆಡ್ಡಿ ಜೋಳದಡಿಗೆ ಇವರ ಹೆಸರಿಗೆ ಟೆಂಡರ ಆಗಿದ್ದು, ದೂರು ಮತ್ತು ಸಂಗಡಿಗರು ಕೆಲಸ ಮಾಡಿಸುವದನ್ನು ಸಹಿಸದೆ ಆರೋಪಿತನು ಜಗಳ ತೆಗೆದು ದೂರುದಾರ ಮತ್ತು ಆತನ ತಮ್ಮನಿಗೆ ಕೈಯಿಂದ, ಕಟ್ಟಿಗೆಯಿಂದ ಹೊಡೆಬಡೆ ಮಾಡಿ ರಕ್ತಗಾಯಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದರಿಂದ ಸದರಿ ಆರೋಪಿತನ ಮೇಲೆ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕುಅಂತ ನೀಡಿದ ದೂರು ಸಾರಾಂಶ ಇರುತ್ತದೆ.ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 12/2022 ಕಲಂ 107 ಸಿಆರ್ಪಿಸಿ: ಇಂದು ದಿನಾಂಕ: 12/06/2022 ರಂದು ನಾನು ಮತ್ತು ಹನುಮಂತ್ರಾಯ ಸಿಪಿಸಿ-331 ರವರು ಕೂಡಿ ಪೆಟ್ರೋಲಿಂಗ್ ಕುರಿತು ಗೋಗಿ ಪೇಠ ಗ್ರಾಮದಲ್ಲಿ ಹೋದಾಗ 5.30 ಪಿಎಂ ಸುಮಾರಿಗೆ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿರುವದೇನಂದರೆ, ಗ್ರಾಮದ ಪ್ರತಿವಾದಿದಾರರಾದ 1) ನವಾಬ ತಂದೆ ಮಕ್ಸೂದ್ ಹವಾಲ್ದಾರ ವ:27 ವರ್ಷ ಸಂಗಡ 07 ಜನ ಎಲ್ಲರೂ ಸಾ: ಗೋಗಿ ಪೇಠ ತಾ:ಶಹಾಪೂರ ಇವರ ಮತ್ತು ಗ್ರಾಮದ ಅಬ್ದುಲ ಖಯ್ಯೂಮ ತಂದೆ ಅಬ್ದುಲ ರಶೀದ ಸಾಹು ಹಾಗು ಸಂಗಡಿಗರ ಮದ್ಯ ಈಗ ಸುಮಾರು ಒಂದು ವರ್ಷದ ಹಿಂದೆ ಜಗಳಗಳಾಗಿ ಗುನ್ನೆ ಹಾಗು ಪ್ರತಿ ಗುನ್ನೆಗಳು ದಾಖಲಾಗಿರುತ್ತವೆ. ಅಲ್ಲದೆ ಸಾಹು ರವರದ್ದು ಒಂದು ಪಾಟರ್ಿ ಮತ್ತು ಹವಾಲ್ದಾರ ರವರದ್ದು ಒಂದು ಪಾಟರ್ಿಯಾಗಿ ಮಾರ್ಪಟ್ಟಿರುತ್ತದೆ. ಗ್ರಾಮದಲ್ಲಿ ಯಾವುದೇ ಜಗಳಗಳಾದರೂ ಹವಾಲ್ದಾರರ ಪಾಟರ್ಿ ಮತ್ತು ಸಾಹು ರವರ ಪಾಟರ್ಿ ಅಂತ ಎರಡು ಪಾಟರ್ಿ ಕಟ್ಟಿಕೊಂಡು ಜಗಳಕ್ಕೆ ನಿಲ್ಲುತ್ತಾರೆ. ಎರಡೂ ಪಾಟರ್ಿಯ ಜನರು ಒಬ್ಬರ ಮೇಲೊಬ್ಬರು ಮೇಲಾಧಿಕಾರಿಗಳಲ್ಲಿ ಅಜರ್ಿ ಹಾಕುತ್ತ ಒಬ್ಬರಿಂದ ಇನ್ನೊಬ್ಬರಿಗೆ ಜೀವ ಬೆದರಿಕೆ ಇದೆ ಅಂತ ಸುಳ್ಳು ಅಜರ್ಿಗಳನ್ನು ಕೊಡುತ್ತ ಪೊಲೀಸರ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಅಲ್ಲದೆ ಗೋಗಿ ಪೇಠ ಗ್ರಾಮದ ಬಡೀ ಮಸೀದಿ ಹತ್ತಿರ ಇರುವ 20 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಮತ್ತೆ ತಕರಾರುಗಳು ನಡೆದಿದ್ದು ಎರಡೂ ಪಾಟರ್ಿಯ ಜನರು ಪರಸ್ಪರ ವೈಮನಸ್ಸು ಬೆಳೆಸಿಕೊಂಡಿದ್ದು ಮುಂಬರುವ ದಿನಗಳಲ್ಲಿ ಮತ್ತೆ ಜಗಳ ಮಾಡಿಕೊಂಡು ಪ್ರಾಣ ಹಾನಿ ಅಸ್ತಿಹಾನಿ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವದು ಮನಗಂಡು, ಗ್ರಾಮದಲ್ಲಿ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮೇಲಿನ 08 ಜನರ ವಿರುದ್ಧ ಇಂದು ದಿನಾಂಕ: 12/06/2022 ರಂದು 6.30 ಪಿಎಮ್ ಕ್ಕೆ ಠಾಣೆಗೆ ಬಂದು ಠಾಣೆಯ ಪಿ.ಎ.ಆರ್ ನಂ: 12/2022 ಕಲಂ 107 ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪಿ.ಎ.ಆರ್. ದಾಖಲು ಮಾಡಿಕೊಂಡು ಮುಂಜಾಗೃತಾ ಕ್ರಮ ಜರುಗಿಸಿದ್ದು ಇರುತ್ತದೆ.

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 93/2022 ಕಲಂ: 143, 147, 148, 323, 324, 354, 504, 506 ಸಂ. 149 ಐಪಿಸಿ: ಇಂದು ದಿನಾಂಕ:12/06/2022 ರಂದು 08:30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪಿಯರ್ಾದಿದಾರರಾದ ನಿಂಗಪ್ಪತಂದೆ ಮಾರ್ಥಂಡಪ್ಪಕಟ್ಟಿಮನಿ ವ|| 23 ವರ್ಷಸಾ|| ಬಾದ್ಯಾಪೂರಇವರುಠಾಣೆಗೆ ಹಾಜರಾಗಿಕೊಟ್ಟ ಪಿರ್ಯಾದಿ ಅಜರ್ಿ ಸಾರಂಶವೇನೆಂದರೆ, ನಮ್ಮ ಚಿಕ್ಕಮ್ಮಳಾದ ಯಲ್ಲಮ್ಮಗಂಡ ಹಣಮಂತದೊಡ್ಡಮನಿ ಇವಳು ನಮ್ಮಓಣಿಯಲ್ಲಿ ಹೊಸ ಮನೆ ಕಟ್ಟುತ್ತಿದ್ದು, ಅದರ ಬಾಜುಜಟ್ಟೆಪ್ಪತಂದೆ ಮಲ್ಲಪ್ಪ ಮಾದರಇವರುಕೂಡ ಹೊಸ ಮನೆ ಕಟ್ಟುತ್ತಿದ್ದಾರೆ. ನಮ್ಮ ಚಿಕ್ಕಮ್ಮಳಾದ ಯಲ್ಲಮ್ಮಳು ತಮ್ಮ ಮನೆಯ ಸುತ್ತಕಂಪೌಂಡಗೋಡೆ ನಿಮರ್ಿಸುವ ಸಲುವಾಗಿ ತೆಗ್ಗು ತೋಡಿಸಿದ್ದು, ಜಟ್ಟೆಪ್ಪತಂದೆ ಮಲ್ಲಪ್ಪ ಮಾದರ ಹಾಗೂ ಆತನಕಡೆಯವರುತಗ್ಗುತೋಡಿದ ವಿಷಯವಾಗಿತಕರಾರು ಮಾಡಿದ್ದರು. ಆದರೂ ನಮ್ಮ ಚಿಕ್ಕಮ್ಮಳಾದ ಯಲ್ಲಮ್ಮ ಇವಳು ಸುಮ್ಮನೇ ಇದ್ದಳು. ಹೀಗಿದ್ದು, ದಿನಾಂಕ: 10/06/2022 ರಂದು ಸಾಯಂಕಾಲ 6:30 ಗಂಟೆ ಸುಮಾರಿಗೆ ನಾನು, ನಮ್ಮ ಚಿಕ್ಕಮ್ಮಳಾದ ಯಲ್ಲಮ್ಮ, ಅವಳ ಮಗನಾದರಂಗಪ್ಪತಂದೆ ಹಣಮಂತ, ನಮ್ಮ ಮಾವನಾದ ಮರೆಪ್ಪತಂದೆ ಭೀಮಪ್ಪ, ರಂಗಪ್ಪತಂದೆ ಮರೆಪ್ಪಎಲ್ಲರುಕೂಡಿಯಲ್ಲಮ್ಮ ಇವಳ ಹೊಸ ಮನೆಯ ಮುಂದೆಇದ್ದಾಗ, ನಮ್ಮಓಣಿಯ ನಮ್ಮಜನಾಂಗದ 1) ಅಂಬ್ರೇಶತಂದೆ ಭೀಮಪ್ಪ ಕೂಚಬಾಳ 2) ದುರ್ಗಪ್ಪತಂದೆ ಭೀಮಪ್ಪ 3) ಜಟ್ಟೆಪ್ಪತಂದೆ ಮಲ್ಲಪ್ಪ 4) ಅಯ್ಯಪ್ಪತಂದೆಜಟ್ಟೆಪ್ಪ 5) ಪರಸಪ್ಪತಂದೆಜಟ್ಟೆಪ್ಪ 6) ಮಲ್ಲಪ್ಪತಂದೆಜಟ್ಟೆಪ್ಪ 7) ಭಾಗಪ್ಪತಂದೆದುರ್ಗಪ್ಪ 8) ಲಕ್ಷ್ಮೀಗಂಡಜಟ್ಟೆಪ್ಪ 9) ತಾಯಮ್ಮಗಂಡದುರ್ಗಪ್ಪ 10) ಡೊಳ್ಳೆ ಭೀಮಪ್ಪತಾಯಿ ಲಕ್ಷ್ಮೀ 11) ಹಣಮಂತತಂದೆ ಶಿವಪ್ಪ 12) ಜಟ್ಟೆಪ್ಪತಾಯಿ ಹಳ್ಳೆಮ್ಮ 13) ಲಕ್ಷ್ಮೀಗಂಡ ಭೀಮರಾಯ 14) ಮಲ್ಲಮ್ಮಗಂಡ ಭೀಮರಾಯ ಕೂಚಬಾಳ 15) ನಾಗಮ್ಮತಾಯಿ ಹಳ್ಳೆಮ್ಮ ಇವರೆಲ್ಲರು ಗುಂಪು ಕಟ್ಟಿಕೊಂಡುಕೈಯಲ್ಲಿಕಲ್ಲು, ಬಡಿಗೆ ಹಿಡಿದುಕೊಂಡು ಬಂದವರೇ ನಮ್ಮ ಚಿಕ್ಕಮ್ಮಳಾದ ಯಲ್ಲಮ್ಮ ಇವಳಿಗೆ ಏನಲೇ ಸೂಳೆ, ಇಲ್ಲಿಯಾಕೇತೆಗ್ಗು ತೋಡಿಸಿದಿ, ನಮಗೆ ತಿರುಗಾಡಲುತೊಂದರೆಆಗುತ್ತಿದೆ ಬೋಸಡಿಅಂತಾಅವಾಚ್ಯವಾಗಿ ಬೈಯುತ್ತಿದ್ದಾಗಅಲ್ಲೇಇದ್ದ ನಮ್ಮ ಮಾವ ಮರೆಪ್ಪನು ಸುಮ್ಮನೆಯಾಕೇ ಈ ರೀತಿ ನಮ್ಮತಂಗಿಗೆ ಬೈಯುತ್ತಿದ್ದಿರಿ. ಅವಳೇನು ನಿಮ್ಮಜಾಗದಲ್ಲಿತೆಗ್ಗು ತೋಡಿಸಿಲ್ಲ ಅಂತಾಅಂದಾಗಅವರಲ್ಲಿಯಅಂಬ್ರೇಶಈತನುತನ್ನಕೈಯಲ್ಲಿದ್ದ ಬಡಿಗೆಯಿಂದ ನಮ್ಮ ಮಾವ ಮರೆಪ್ಪನತೆಲೆಯ ಹಿಂದುಗಡೆ ಹೊಡೆದುರಕ್ತಗಾಯ ಮಾಡಿದನು. ದುರ್ಗಪ್ಪಈತನುಕೈಯಿಂದ ಬೆನ್ನಿಗೆ ಗುದ್ದಿ ಗುಪ್ತಗಾಯ ಪಡಿಸಿದನು. ಡೊಳ್ಳೆ ಭೀಮಪ್ಪಈತನುತನ್ನಕೈಯಿಂದ ಹಣೆಗೆ ಹೊಡೆದುಗುಪ್ತಗಾಯ ಮಾಡಿದನು. ಜಟ್ಟೆಪ್ಪತಾಯಿ ಹಳ್ಳೆಮ್ಮ ಈತನು ಕಾಲಿನಿಂದ ಸೊಂಟಕ್ಕೆಒದ್ದುಗುಪ್ತಗಾಯ ಮಾಡಿದನು. ಜಟ್ಟೆಪ್ಪತಂದೆ ಮಲ್ಲಪ್ಪಈತನುರಂಗಪ್ಪತಂದೆ ಹಣಮಂತಈತನಿಗೆಕೈಯಿಂದ ಹೊಟ್ಟೆಗೆ ಗುದ್ದಿ ಒಳಪೆಟ್ಟು ಮಾಡಿದನು. ಅಯ್ಯಪ್ಪಈತನುಕೈಯಿಂದ ಬೆನ್ನಿಗೆ ಗುದ್ದಿ ಗುಪ್ತಗಾಯ ಮಾಡಿದನು. ಪರಸಪ್ಪಈತನುತನ್ನಕೈಯಲ್ಲಿದ್ದಕಲ್ಲಿನಿಂದರಂಗಪ್ಪತಂದೆ ಮರೆಪ್ಪಈತನಎಡಗೈರಟ್ಟೆಗೆ ಹೊಡೆದುಗುಪ್ತಗಾಯ ಪಡಿಸಿದ್ದು, ಮಲ್ಲಪ್ಪಈತನುತನ್ನಕೈಯಲ್ಲಿದ್ದ ಬಡಿಗೆಯಿಂದ ಬೆನ್ನಿಗೆ ಹೊಡೆದುಗುಪ್ತಗಾಯ ಪಡಿಸಿದನು. ನಮ್ಮ ಚಿಕ್ಕಮ್ಮಳಾದ ಯಲ್ಲಮ್ಮ ಇವಳಿಗೆ ಭಾಗಪ್ಪಈತನುಕೈಹಿಡಿದು ಎಳೆದಾಡಿದ್ದು, ಹಣಮಂತಈತನು ಸೀರೆ ಸೆರಗು ಹಿಡಿದುಜಗ್ಗಾಡಿಅವಮಾನ ಮಾಡಿ ನೆಲಕ್ಕೆ ಕೆಡವಿದನು. ಆಗ ಲಕ್ಷ್ಮೀಗಂಡಜಟ್ಟೆಪ್ಪ, ತಾಯಮ್ಮ, ಲಕ್ಷ್ಮೀಗಂಡ ಭೀಮರಾಯ, ಮಲ್ಲಮ್ಮ ಗಾಹೂ ನಾಗಮ್ಮಇವರು ಕಾಲಿನಿಂದ ಹೊಟ್ಟೆಗೆ, ಬೆನ್ನಿಗೆಒದ್ದು ಒಳಪೆಟ್ಟು ಮಾಡಿದರು. ಆಗ ಅಲ್ಲೇಇದ್ದ ನಾನು ಮತ್ತುರಮೇಶತಂದೆಯಲ್ಲಪ್ಪ ಸಾ|| ಮಂಡಲಗುಡ್ಡ, ಲಕ್ಷ್ಮೀಗಂಡಕಲ್ಯಾಣಿ, ದುರ್ಗಮ್ಮಗಂಡ ಸಕ್ರೆಪ್ಪಎಲ್ಲರೂಕುಡಿ ಜಗಳವನ್ನು ಬಿಡಿಸಿದೆವು. ಆಗ ಆರೋಪಿತರೆಲ್ಲರುಇವರು ಬಂದು ಬಿಡಿಸದಕ್ಕೆ ಉಳಿದಿರಿ ಸೂಳೆ ಮಕ್ಕಳೇ. ಇನ್ನೊಮ್ಮತಂಟೆಗೆ ಬಂದರೆ ನಿಮ್ಮಜೀವ ಸಹಿತ ಬಿಡುವದಿಲ್ಲ ಅಂತಾಜೀವದ ಬೆದರಿಕೆ ಹಾಕಿ ಹೊರಟು ಹೋದರು. ನಂತರಗಾಯಗೊಂಡ ಮರೆಪ್ಪ, ರಂಗಪ್ಪತಂದೆ ಹಣಮಂತ, ರಂಗಪ್ಪತಂದೆ ಮರೆಪ್ಪ ಮುವರನ್ನುಒಂದು ಕಾಸಗಿ ವಾಹನದಲ್ಲಿ ಹಾಕಿಕೊಂಡು ಸುರಪುರ ಸರಕಾರಿಆಸ್ಪತ್ರೆಗೆತಂದು ಸೇರಿಕೆ ಮಾಡಿದೆನು. ನಂತರ ವೈದ್ಯರ ಸಲಹೆಯಂತೆ ಮವನಾದ ಮರೆಪ್ಪಈತನಿಗೆ ಹೆಚ್ಚಿನಉಪಚಾರಕುರಿತುಯಾದಗಿರಿ ಸರಕಾರಿಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇನೆ. ಗಟನೆಯಲ್ಲಿ ನಮ್ಮಚಿಕ್ಕಮ್ಮಲಾದಯಲ್ಲಮ್ಮ ಇವಳಿಗೆ ಅಷ್ಟೇನು ಗಾಯಗಳು ಆಗಿರದಿದ್ದರಿಂದಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ಮರೆಪ್ಪಈತನಿಗೆಆಸ್ಪತ್ರೆಗೆ ಸೇರಿಕೆ ಮಾಡಿಇಂದುತಡವಾಗಿಠಾಣೆಗೆ ಬಂದು ಈ ದೂರುಅಜರ್ಿ ನೀಡಿದ್ದುಇರುತ್ತದೆ. ಕಾರಣಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿರಕ್ತಗಾಯ ಮತ್ತು ಗುಪ್ತಗಾಯಪಡಿಸಿ, ಮಾನಭಂಗ ಮಾಡಲು ಪ್ರಯತ್ನಿಸಿ, ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 15 ಜನರ ಮೇಲೆ ಸೂಕ್ತ ಕಾನೂನು ಕ್ರಮಜರುಗಿಸಬೇಕುಅಂತಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆ ನಂ. 93/2022 ಕಲಂ: 143, 147, 148, 323, 324, 354, 504, 506 ಸಂ. 149 ಐಪಿಸಿ ನೇದ್ದರಅಡಿಯಲ್ಲಿ ಪ್ರಕರಣದದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಇತ್ತೀಚಿನ ನವೀಕರಣ​ : 13-06-2022 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080