ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13-07-2021

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ 72/2021 ಕಲಂ 420, 380 ಐಪಿಸಿ : ಯರ್ಾದಿ ಸಾರಾಂಶವೇನೆಂದರೆ, ನಮ್ಮ ಮನೆಯಲ್ಲಿ ನಾನು ಮತ್ತು ನಮ್ಮ ತಾಯಿ ತಿರುಮಲ ನಮ್ಮ ಅಜ್ಜಿ ಕಸ್ತೂರೆಮ್ಮ, ಇರುತ್ತೇವೆ. ಇಂದು ದಿನಾಂಕ 12/07/2021 ರಂದು ಮೈಲಾಪೂರದಲ್ಲಿ ನನ್ನ ಅಣ್ಣನ ಮಗನ ಜವಳಾ ಕಾರ್ಯಕ್ರಮ ಇರುವುದ್ದರಿಂದ, ನಮ್ಮ ಮನೆಯಲ್ಲಿ ನಮ್ಮ ಅಜ್ಜಿ ಕಸ್ತೂರೆಮ್ಮ ಇವರಿಗೆ ಬಿಟ್ಟು ಉಳಿದವರೆಲ್ಲರು ಇಂದು ಬೆಳಿಗ್ಗೆ 10-30 ಗಂಟೆಗೆ ಮೈಲಾಪೂರಕ್ಕೆ ಹೋದೆವು. ನಂತರ ಜವಳಾ ಕಾರ್ಯಕ್ರಮ ಮುಗಿಸಿಕೊಂಡು ಇಂದು ಮಧ್ಯಾಹ್ನ 04-00 ಗಂಟೆಯ ಸುಮಾರಿಗೆ ನಾವು ಮನೆಗೆ ಬಂದೆವು. ನಮ್ಮ ತಾಯಿ ತನ್ನ ಮೈ ಮೇಲಿನ ಬಂಗಾರದ ಆಭರಣಗಳನ್ನು ಬಿಟ್ಟಿಟ್ಟರಾಯಿತು ಅಂತಾ ಬೆಡ್ ರೂಮಿನ ಅಲಮರಿ ಹತ್ತಿರ ಹೋದಾಗ ಅಲಮರಿ ತೆಗೆದಿದ್ದು, ಒಳಗಿನ ಲಾಕರ್ ಕೂಡ ತೆರೆದಿದ್ದು ನೋಡಲಾಗಿ ಅದರಲ್ಲಿ ಇದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ ಇರಲಿಲ್ಲ. ನಂತರ ನಮ್ಮ ತಾಯಿಗೆ ಅನುಮಾನ ಬಂದು ಮನೆಯಲ್ಲಿ ಇದ್ದ ಅಜ್ಜಿ ಕಸ್ತೂರಿಬಾಯಿಗೆ ಕೇಳಿದಾಗ ಅಜ್ಜಿ ಇವರು ಹೇಳಿದ್ದೇನೆಂದರೆ, ಇಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಯಾರೂ ಇಬ್ಬರು ಗಂಡು ಮಕ್ಕಳು ನಮ್ಮ ಮನೆಗೆ ಬಂದು ಅಜ್ಜಿ, ಅಜ್ಜಿ ಅಂತಾ ಕೂಗಿದಾಗ, ನಾನು ಹೊರಗಡೆ ಬಂದು ನೋಡಿದೆನು. ಅವರು ನಾವು ಮುನ್ಸಿಪಾಲ್ಟಿಯವರು, ನಿಮ್ಮ ಮನೆಯಲ್ಲಿಯ ಬಾತ್ ರೂಮ್ ಹಾಗೂ ಶೌಚಾಲಯ ಸವರ್ೆ ಮಾಡಲು ಬಂದಿದ್ದೇವೆ, ಅಂತಾ ಅಂದು ಕೊಳ್ಳುತ್ತಾ ಒಬ್ಬನು ಮನೆ ಒಳಗೆ ಬಂದನು. ನನಗೆ ನಿಮ್ಮ ಮನೆಯ ಬಾತ್ ರೂಮ್ ಎಲ್ಲಿದೆ ತೋರಿಸು ಅಂತಾ ಹೇಳಿ ಬಾತ್ ರೂಮ್ ಒಳಗೆ ಕರೆದುಕೊಂಡು ಹೋಗಿ ನನ್ನ ಕೈಯಲ್ಲಿ ಟೇಪ್ ಕೊಟ್ಟು ರೂಮ್ ಅಳತೆ ಮಾಡುತ್ತಿದ್ದೆವು. 10-15 ನಿಮಿಷದ ನಂತರ ಅವರು ಸವರ್ೆ ಮಾಡಿಕೊಂಡು ಹೋದರು. ನಾವು ಬಾತ್ ರೂಮಿನಲ್ಲಿ ಹೋದಾಗ ಇನ್ನೊಬ್ಬನು ಬೆಡ್ ರೂಮಿನಲ್ಲಿ ಹೋಗಿ ಅಲಮರಿ ತೆಗೆದು ಕಳ್ಳತನ ಮಾಡಿರಬಹುದು, ಅಂತಾ ತಿಳಿಸಿದಾಗ ನಾವು ಗಾಭರಿಯಾಗಿ, ಅಲಮರಿ ಚೆಕ್ ಮಾಡಿದಾಗ ಅದರಲ್ಲಿ ಇದ್ದ 1] ಒಂದು 20. ಗ್ರಾಂ. ಬಂಗಾರದ ನಾನ್ ಚೈನ್, ಅ.ಕಿ 90,000/- ರೂ||, 2] ತಲಾ 10. ಗ್ರಾಂ.ದ 4 ಬಂಗಾರದ ಉಂಗುರ 1,80,000/-ರೂ|| ಮತ್ತು 3] ನಗದು ಹಣ 50,000/- ರೂ|| ಗಳು, ಹೀಗೆ ಒಟ್ಟು 3,20,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಆಭರಣಗಳು ಮತ್ತು ನಗದು ಹಣ ಕಾಣಲಿಲ್ಲ. ಅಲಮರಿ ಚಾವಿ ಕೀಲಿ ಹಾಕದೆ ಮೇಲಿನ ಕಾನಿಯಲ್ಲಿ ಬಟ್ಟೆಗಳ ಕೆಳಗಿ ಇಟ್ಟಿದ್ದು ಅವರ ಕೈಗೆ ಸಿಕ್ಕಿದ್ದರಿಂದ ಅವರು ಚಾವಿ ತೆಗೆದು ಕಳ್ಳತನ ಮಾಡಿರುತ್ತಾರೆ. ನಂತರ ನಾವು ಅವರ ಬಗ್ಗೆ ಅಜ್ಜಿಗೆ ವಿಚಾರಿಸಲು ನೋಡಲು ಅವರು ಪ್ಯಾಂಟ್ ಶಟರ್್ ಧರಿಸಿದ್ದು, ಮುಖಕ್ಕೆ ಮಾಸ್ಕ ಹಾಕಿದ್ದರು, ಹಾಗೂ ಇಬ್ಬರು ತಲೆಯ ಮೇಲೆ ಕ್ಯಾಪ್ ಹಾಕಿದ್ದರು, ಅವರ ವಯಸ್ಸು ಅಂದಾಜು 25 ರಿಂದ 30 ವರ್ಷ ಇರಬಹುದು ಅಂತಾ ತಿಳಿಸಿದಳು. ಕಾರಣ ಇಂದು ನಮ್ಮ ಸಂಬಂಧಿಕರ ಜವಳ ಕಾರ್ಯಕ್ರಮ ಮೈಲಾಪೂರದಲ್ಲಿ ಇದ್ದು, ನಾವು ನಮ್ಮ ಅಜ್ಜಿ ಒಬ್ಬಳಿಗೆ ಮನೆಯಲ್ಲಿ ಬಿಟ್ಟು ಮೈಲಾಪೂರಕ್ಕೆ ಹೋದಾಗ ವಯಸ್ಸಾದ ಅಜ್ಜಿಯನ್ನು ನೋಡಿ ಯಾರೋ ಇಬ್ಬರು ನಮ್ಮ ಮನೆ ಒಳಗೆ ನಾವು ಮುನ್ಸಿಪಾಲ್ಟಿಯವರು ಅಂತಾ ಹೇಳಿಕೊಂಡು ಬಂದು, ಒಬ್ಬನು ಅಜ್ಜಿಯೊಂದಿಗೆ ಬಾತ್ರೂಮ್ & ಶೌಚಾಲಯ ಅಳತೆ ಮಾಡುವಾಗ ಮತ್ತೊಬ್ಬನು ಮನೆ ಒಳಗೆ ಬಂದು, ಅಜ್ಜಿಯ ಗಮನ ಬೇರೆಡೆ ಸೆಳೆದು, ಅಜ್ಜಿಗೆ ಗೊತ್ತಾಗದಂತೆ ಅಲಮರಿಯಲ್ಲಿ ಇದ್ದ ಹಣ & ಬಂಗಾರದ ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 72/2021 ಕಲಂ 420, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ:71/2021 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ.12/07/2021 ರಂದು 7-30 ಪಿಎಂಕ್ಕೆ ಶ್ರೀ ಸೋಮಶೇಖರ ಎಸ್.ಕೆಂಚರೆಡ್ಡಿ ಸಿಪಿಐ ಯಾದಗಿರಿ ವೃತ್ತ ರವರು ಒಬ್ಬ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಒಂದು ಜ್ಞಾಪನಾ ಪತ್ರವನ್ನು ಒಪ್ಪಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 12/07/2021 ರಂದು 3:30 ಪಿ.ಎಮ್. ಸುಮಾರಿಗೆ ಯಾದಗಿರಿಯ ಶಾಂತಿನಗರದ ದುಗರ್ಾದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಮಟಕಾ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಕೈಗೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ ಹೋಗಿ 6-00 ಪಿ.ಎಮ್.ಕ್ಕೆ ದಾಳಿ ಕೈಗೊಂಡು ಮಟಕಾ ಜೂಜಾಟ ಆಡಿಸುತ್ತಿದ್ದ 1) ಜಾವೀದ್ ತಂದೆ ಅಬ್ದುಲ ಹಸನಸಾಬ ನಾಲ್ವಾರ ವ;28 ಜಾ; ಮುಸ್ಲಿಂ ಉ; ಕೂಲಿಕೆಲಸ ಸಾ; ಶಾಂತಿನಗರ ಯಾದಗಿರಿ ಈತನಿಗೆ ವಶಕ್ಕೆ ಪಡೆದುಕೊಂಡು ಇನ್ನೊಬ್ಬ ಬುಕ್ಕಿ ಅಬ್ದುಲ ಹಸನಸಾಬ ತಂದೆ ಬುರಾನೊದ್ದೀನ್ ನಾಲ್ವಾರ ಈತನು ಓಡಿ ಹೋಗಿರುತ್ತಾನೆ. ಆರೋಪಿ ಜಾವೀದ್ ಈತನಿಂದ 1)ನಗದು ಹಣ ರೂ.3,150/-, 2)ಎರಡು ಮಟಕಾ ಅಂಕಿಗಳ ಚೀಟಿಗಳು, 3)ಎರಡು ಬಾಲ್ಪೆನ್ ದೊರೆತಿದ್ದು ಈ ಬಗ್ಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕೈಕೊಂಡಿದ್ದು ಇರುತ್ತದೆ. ಮೇಲ್ಕಂಡ ಆರೋಪಿ ಹಾಗೂ ಜಪ್ತಿ ಪಂಚನಾಮೆಯನ್ನು ಮುದ್ದೆಮಾಲಿನೊಂದಿಗೆ ಈ ಕೂಡ ತಮಗೆ ಒಪ್ಪಿಸಿದ್ದು, ಆರೋಪಿತರಾದ 1) ಜಾವೀದ್ ತಂದೆ ಅಬ್ದುಲ ಹಸನಸಾಬ ನಾಲ್ವಾರ ವ;28 ಜಾ; ಮುಸ್ಲಿಂ ಉ; ಕೂಲಿಕೆಲಸ ಸಾ; ಶಾಂತಿನಗರ ಯಾದಗಿರಿ 2) ಅಬ್ದುಲ ಹಸನಸಾಬ ತಂದೆ ಬುರಾನೊದ್ದೀನ್ ನಾಲ್ವಾರ ಸಾ; ಶಾಂತಿನಗರ ಯಾದಗಿರಿ ಇವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಲಾಗಿದೆ. ಅಂತಾ ಕೊಟ್ಟ ಜ್ಞಾಪನ ಪತ್ರ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ.71/2021 ಕಲಂ.78(3) ಕೆಪಿ ಆ್ಯಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 38/2021 ಕಲಂ 279, 337, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 12/07/2021 ರಂದು ಮದ್ಯಾಹ್ನ ಸಮಯ 01-00 ಪಿ.ಎಂ.ದ ಸುಮಾರಿಗೆ ಯಾದಗಿರಿ-ಶಹಾಪುರ ಬೈಪಾಸ್ ರಸ್ತೆ ಬೀಮಾ ನದಿಯ ಬ್ಯಾರೇಜ್ ಕಂ ಬ್ರಿಡ್ಜ್ ಹತ್ತಿರ ಮುಖ್ಯ ರಸ್ತೆಯ ಮೇಲೆ ಈ ಕೇಸಿನ ಗಾಯಾಳುಗಳು ಇಬ್ಬರು ಮೋಟಾರು ಸೈಕಲ್ ನಂ. ಕೆಎ-04, ಜೆ.ಎಕ್ಸ್-8213 ನೇದ್ದರ ಮೇಲೆ ಯಾದಗಿರಿ ಕಡೆಯಿಂದ ಗುರುಸುಣಗಿ ಕಡೆಗೆ ಹೋಗುತ್ತಿದ್ದಾಗ ರಿನೌಲ್ಟ್ ಕ್ವಿಡ್ ಕಾರ್ ಕೆಂಪು ಬಣ್ಣದ್ದು, ಕಾರ ನೇದ್ದರ ಚಾಲಕನು ತನ್ನ ಕಾರನ್ನು ಗುರುಸುಣಗಿ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೆದ್ದಕ್ಕೆ ನೇರವಾಗಿ ಡಿಕ್ಕಿಕೊಟ್ಟಿದ್ದರಿಂದ ಅಪಘಾತ ಜರುಗಿದ್ದು, ಈ ಅಪಘಾತದಲ್ಲಿ ಮೋ.ಸೈಕಲ್ ಹಿಂಬದಿ ಸವಾರನಿಗೆ ತಲೆಗೆ ಭಾರೀ ಒಳಪೆಟ್ಟಾಗಿ ರಕ್ತವು ಕಿವಿಗಳಿಂದ ಹೊರಬಂದು ಪ್ರಜ್ಞೆ ತಪ್ಪಿರುತ್ತಾನೆ. ಮೋಟಾರು ಸೈಕಲ್ ಸವಾರ ಮರೆಪ್ಪ ಈತನಿಗೆ ಮುಖಕ್ಕೆ, ಬಲಗಾಲಿನ ಪಾದಕ್ಕೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತದೆ. ಅಪಘಾತಪಡಿಸಿದ ಕಾರ್ ನೇದ್ದರ ಚಾಲಕನು ಕಾರ ಸಮೇತ ಘಟನಾ ಸ್ಥಳದಿಂದ ಓಡಿ ಹೋಗಿದ್ದು ಕಾರ್ ನಂಬರ ಮತ್ತು ಚಾಲಕನ ಹೆಸರು, ವಿಳಾಸ ತಿಳಿದು ಬಂದಿರುವುದಿಲ್ಲ, ಕಾರ ಚಾಲಕನ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 38/2021 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 119/2021 ಕಲಂ 379 ಐ.ಪಿ.ಸಿ. ಮತ್ತು ಕಲಂ. 44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ 1994 : ಇಂದು ದಿನಾಂಕ:212-07-2021 ರಂದು 11 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪ್ರಕಾಶ ಯಾತನೂರ ಪಿಐ ಡಿಎಸ್ಬಿ ಘಟಕ ಯಾದಗಿರಿ ಇವರು ನಾಲ್ಕು ಮರಳು ತುಂಬಿದ ಟ್ಯಾಕ್ಟರಗದೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ಸಾರಾಂಶವೆನೆಂದರೆ, ಇಂದು ದಿನಾಂಕ:12-07-2021 ರಂದು ಬೆಳಿಗಿನ ಜಾವ 5 ಗಂಟೆ ಸುಮಾರಿಗೆ ಯಾದಗಿರಿಯಲ್ಲಿರುವಾಗ ಮಾನ್ಯ ಎಸ್ಪಿ ಸಾಹೇಬರ ಮಾರ್ಗದರ್ಶನದಂತೆ ಸುರಪೂರ ತಾಲೂಕಿನಲ್ಲಿ ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಹೆಮನೂರ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಮರಳನ್ನು ಕಳ್ಳತನದಿಂದ ಟ್ಯಾಕ್ಟರಗಳಲ್ಲಿ ತುಂಬಿಕೊಂಡು ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಮೇರೆಗೆ ಯಾದಗಿರಿಯಿಂದ ನಮ್ಮ ಸರಕಾರಿ ಜೀಪ ನಂಬರ ಕೆಎ-33 ಜಿ-0100 ನೇದ್ದರಲ್ಲಿ ನಮ್ಮ ಸಿಬ್ಬಂಧಿಯವರಾದ ಶ್ರೀ ಮಹ್ಮದ ಗೌಸ ಸಿಹೆಚ್ಸಿ-112, ಶ್ರೀ ರವಿಕುಮಾರ ಸಿಪಿಸಿ-381 ಹಾಗೂ ಜೀಪ ಚಾಲಕನಾದ ವಿಶ್ವನಾಥ ಎಹೆಚ್ಸಿ-21 ಇವರನ್ನು ಸಂಗಡ ಕರೆದುಕೊಂಡು ಯಾದಗಿರಿಯಿಂದ ಬೆಳಿಗ್ಗೆ 6 ಗಂಟೆಗೆ ಯಾದಗಿರಿಯಿಂದ ಹೊರಟು ಸುರಪೂರದ ಅರಕೇರಾ ಕೆ ಕ್ರಾಸ ಹತ್ತಿರ ಬೆಳಿಗ್ಗೆ 7 ಗಂಟೆಗೆ ಬಂದು ಇಬ್ಬರು ಪಂಚರಾದ 1) ಶ್ರೀ ಮಹ್ಮದ ನಭಿ ತಂದೆ ಮಹಿಬೂಬಸಾಬ ಮುಲ್ಲಾ ವಯಾ:34 ವರ್ಷ ಉ:ವ್ಯಾಪಾರ ಜಾತಿ:ಮುಸ್ಲಿಂ ಸಾ:ಅರಕೇರಾ ಕೆ ಲಕ್ಷ್ಮಿಪೂರ 2) ನಿಂಗಪ್ಪ ತಂದೆ ಹಣಮಂತ ಸುರಪೂರಕರ ವಯಾ:35 ವರ್ಷ ಉ:ಒಕ್ಕಲುತನ ಜಾತಿ:ಕುರುಬರ ಸಾ:ಅರಕೇರಾ ಕೆ ಲಕ್ಷ್ಮಿಪೂರ ಇವರನ್ನು ಅರಕೇರಾ ಕ್ರಾಸ ಹತ್ತಿರ 07-15 ಎ.ಎಂ.ಕ್ಕೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಎಲ್ಲರೂ ಕೂಡಿ ನಮ್ಮ ಜೀಪಿನಲ್ಲಿ ಕುಳಿತುಕೊಂಡು ಹೊರಟು 07-45 ಎ.ಎಂ.ಕ್ಕೆ ಹೆಮನೂರ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಹೋಗುತ್ತಿರುವಾಗ ನದಿಯ ರಸ್ತೆಯ ಕಡೆಯಿಂದ ನಾಲ್ಕು ಟ್ಯಾಕ್ಟರ ಚಾಲಕರು ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿರುವದನ್ನು ನೋಡಿ ನಾವು ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಅವರಿಗೆ ಕೈ ಮಾಡಿ ಟ್ಯಾಕ್ಟರಗಳನ್ನು ನಿಲ್ಲಿಸಲು ಸೂಚಿಸಿದಾಗ ಸದರಿ ಟ್ಯಾಕ್ಟರ ಚಾಲಕರು ಟ್ಯಾಕ್ಟರಗಳನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿದವರೆ ಟ್ಯಾಕ್ಟರ ಇಳಿದು ಓಡಿ ಹೋದರು. ನಂತರ ನಾವೆಲ್ಲರೂ ಸದರಿ ಟ್ಯಾಕ್ಟರಗಳ ಹತ್ತಿರ ಹೋಗಿ ಪರೀಸಿಲಿಸಿ ನೋಡಲು1) ಒಂದು ಮಹೇಂದ್ರ ಕಂಪನಿಯ ಟ್ಯಾಕ್ಟರ ನಂಬರ ಕೆಎ-33 ಟಿಎ-4699 ಹಾಗೂ ಅದರ ಟ್ರಾಲಿ ನಂಬರ ಕೆಎ-33 ಟಿಎ-6383 ಇದ್ದು ಸದರಿ ಟ್ರಾಲಿಯಲ್ಲಿ ಅಂದಾಜು 2 ಘನ ಮೀಟರ ಮರಳು ತುಂಬಿದ್ದು ಅದರ ಅ.ಕಿ 1600/- ರೂಗಳಾಗುತ್ತದೆ.2) ಒಂದು ಸ್ವರಾಜ್ಯ ಕಂಪನಿಯ ಟ್ಯಾಕ್ಟರ ನಂಬರ ಕೆಎ-33 ಟಿಬಿ-1128 ಹಾಗೂ ಅದರ ಟ್ರಾಲಿ ನಂಬರ ಕೆಎ-33 ಟಿಬಿ-1370 ಇದ್ದು ಸದರಿ ಟ್ರಾಲಿಯಲ್ಲಿ ಅಂದಾಜು 2 ಘನ ಮೀಟರ ಮರಳು ತುಂಬಿದ್ದು ಅದರ ಅ.ಕಿ 1600/- ರೂಗಳಾಗುತ್ತದೆ.3) ಒಂದು ಸ್ವರಾಜ್ಯ 735 ಘಿಖಿ ಕಂಪನಿಯ ಟ್ಯಾಕ್ಟರ ಇದ್ದು ಅದರ ಇಂಜಿನ ನಂಬರ 39.1357/ಖಗಕ13516 ಚೆಸ್ಸಿ ನಂಬರ ಘಙಖಿಂ28432118720 ಇದ್ದು ಟ್ರಾಲಿಗೆ ನಂಬರ ಇರುವದಿಲ್ಲ ಸದರಿ ಟ್ರಾಲಿಯಲ್ಲಿ ಅಂದಾಜು 2 ಘನ ಮೀಟರ ಮರಳು ತುಂಬಿದ್ದು ಅದರ ಅ.ಕಿ 1600/- ರೂಗಳಾಗುತ್ತದೆ.4) ಒಂದು ಸ್ವರಾಜ್ಯ 735 ಘಿಖಿ ಕಂಪನಿಯ ಟ್ಯಾಕ್ಟರ ಇದ್ದು ಅದರ ಇಂಜಿನ ನಂಬರ 39.1357/ಖಆಂ01045 ಚೆಸ್ಸಿ ನಂಬರ ಒಃಓಂಕ48ಂಆಒಖಿಂ15129 ಇದ್ದು ಟ್ರಾಲಿಗೆ ನಂಬರ ಇರುವದಿಲ್ಲ ಸದರಿ ಟ್ರಾಲಿಯಲ್ಲಿ ಅಂದಾಜು 2 ಘನ ಮೀಟರ ಮರಳು ತುಂಬಿದ್ದು ಅದರ ಅ.ಕಿ 1600/- ರೂಗಳಾಗುತ್ತದೆ. ಸದರಿ ನಾಲ್ಕು ಟ್ಯಾಕ್ಟರಗಳಲ್ಲಿಯ ಒಟ್ಟು 8 ಘನ ಮೀಟರ ಮರಳು ಅ.ಕಿ 6400/- ರೂಗಳ ಮರಳು ತುಂಬಿದ ಟ್ಯಾಕ್ಟರಗಳನ್ನು ಪಂಚರ ಸಮಕ್ಷಮ 07:45 ಎ.ಎಮ್ ದಿಂದ 09:15 ಎ.ಎಮ್. ದವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಸದರಿ ಮರಳು ತುಂಬಿದ ಟ್ಯಾಕ್ಟರಳನ್ನು ಜಪ್ತಿ ಮಾಡಿ ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಟ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕೃಷ್ಣಾ ನದಿ ತೀರದಿಂದ ಕಳ್ಳತನದಿಂದ ಮರಳನ್ನು ಟ್ಯಾಕ್ಟರಗಳಲ್ಲಿ ತುಂಬಿಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಖಾಸಗಿ ಚಾಲಕನ ಸಹಾಯದಿಂದ ಠಾಣೆಗೆ ಬೆಳಿಗ್ಗೆ 11 ಗಂಟೆಗೆ ಬಂದು ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ನಿಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ.

 


ಭೀಗುಡಿ ಪೊಲೀಸ ಠಾಣೆ
ಗುನ್ನೆ ನಂ: 49/2021 ಕಲಂ 11(ಡಿ) ಪ್ರಾಣಿ ಹಿಂಸೆ ಪ್ರತಿಬಂಧಕಕಾಯ್ದೆ 1964 ಸಂಗಡ177ಐ.ಎಮ್.ವಿ ಎಕ್ಟ್ : ದಿನಾಂಕ:12/07/2021 ರಂದು 8 ಎ.ಎಮ್ ಸುಮಾರಿಗೆಆರೋಪಿತರುತಮ್ಮ ಅಶೋಕ ಲೈಲಂಡ್ಗೂಡ್ಸ್ ವಾಹನ ನಂ:ಕೆಎ-33, ಎ-2726, ಟಾಟಾ ಏಸಿ ಗೂಡ್ಸ್ ವಾಹನ ನಂ:ಕೆಎ-33, ಎ-3946 ನೇದ್ದವುಗಳಲ್ಲಿ 09 ಜಾನುವಾರುಗಳು ಒಟ್ಟು ಅ.ಕಿ 57000 ರೂ ನೇದ್ದವುಗಳನ್ನು ಇಕ್ಕಟ್ಟಾದ ಸ್ಥಳದಲ್ಲಿ ಅವುಗಳಿಗೆ ಹಿಂಸೆಯಾಗುವರೀತಿಯಲ್ಲಿತೆಗೆದುಕೊಂಡುಯಾವುದೇಅಧಿಕೃತ ಪರವಾನಿಗೆಇಲ್ಲದೇ ಸಾಗಾಣಿಕೆ ಮಾಡುತ್ತಿರುವಾಗ ಫಿಯರ್ಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದುಆರೋಪಿತರ ವಿರುಧ್ಧ ಕಾನೂನು ಕ್ರಮಜರುಗಿಸುವಂತೆದೂರು ಸಲ್ಲಿಸಿದ್ದು ಇರುತ್ತದೆ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂಬರ 105/2021 ಕಲಂ: 354(ಡಿ), 504, 506 ಸಂಗಡ 34 ಐಪಿಸಿ. : ಇಂದು ದಿನಾಂಕ 12.07.2021 ರಂದು ಸಂಜೆ 7:15 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ ಸುನಿತಾ ಗಂಡ ಅನೀಲಕುಮಾರ ಬೇವಿನಾಳ ವ|| 28 ವರ್ಷ ತಾ||ಗುರುಮಠಕಲ್ ಜಿ||ಯಾದಗಿರಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೇಂದರೆ ಈ ಮೇಲೆ ಕಾಣಿಸಿದ ವಿಷಯಕ್ಕೆ ಸಂಬಂದಿಸಿದಂತೆ ಮಾನ್ಯರಲ್ಲಿ ವಿನಂತಿಸಿಕೊಳ್ಳುವುದೆನೇಂದೆ ಶ್ರೀಮತಿ ಸುನಿತಾ ಗಂಡ ಅನೀಲ ಗಾಜರಕೊಟ್ ಆದ ನಾನು ಎಮ್.ಎ ಸ್ನಾತಕೋತ್ತರ ಪದವಿಯಲ್ಲಿ ಅಭ್ಯಾಸ ಮಾಡುತ್ತಿರುವಾಗ ಚಿರಂಜೀವಿ ಎಂಬ ಹುಡುಗನೊಂದಿಗೆ ಗೆಳೆತನವಿದ್ದು ನಾವು ಸಲುಗೆಯಿಂದ ಇದ್ದು ಆತನ ಮೊಬೈಲ್ನಲ್ಲಿ 87479715 ನಮ್ಮಿಬ್ಬರ ಖಾಸಗಿ ಫೋಟೊ ಮತ್ತು ವೀಡಿಯೊಗಳಿದ್ದವು. ಮದುವೆಯಾಗುವ ತನಕ ಸುಮ್ಮನಿದ್ದವನು ಮದುವೆಯಾದ ಮೇಲೆ ಫೋಟೋಗಳನ್ನೆಲ್ಲ ವಾಟ್ಸಪ್ ಹಾಕಿ ಮತ್ತು ಫೋನ್ ಮುಖಾಂತರ ಮಾತನಾಡಿ ನನ್ನ ಬ್ಲಾಕ್ ಮೇಲೆ ಮಾಡಿ ನೀನು ನನ್ನ ಜೊತೆ ಮೊದಲು ಹೇಗೆ ಇದ್ದಿಯೋ ಹಾಗೆ ಇರಬೇಕು. ಇಲ್ಲದಿದ್ದರೆ ನಿನ್ನ ಅಶ್ಲೀಲ ಪೋಟೋ ಹಾಗೂ ಎಲ್ಲಾ ಸಾಮಾಜೀಕ ಜಾಲತಾಣಗಳಲ್ಲಿ ಹಾರಿಬಿಟ್ಟು ನಿನ್ನ ಮಾನ ಮಯರ್ಾದೆ ಹಾಳು ಮಾಡುತ್ತೇನೆಂದು ಹಿಂಸಿಸುತ್ತಿದ್ದ. ಈ ವಿಷಯ ನನ್ನ ಗಂಡ ಮತ್ತು ಅಣ್ಣನಿಗೆ ಗೊತ್ತಾಗಿ ಆತನಿಗೆ ಎಚ್ಚರಿಕೆ ನೀಡಿದಾಗ ಆತ ಇಷ್ಟು ದಿನ ಸುಮ್ಮನಿದ್ದ. ನನ್ನ ಮದುವೆಕಿಂತ ಮೊದಲು ನನ್ನ ಗಂಡ ಮತ್ತು ಕೃಷ್ಣ ಹೋಂ ಗಾಡರ್್ ಗಾಜರಕೊಟ್ ಇವರಿಬ್ಬರ ನಡುವೆ ಜಗಳವಾಗಿದ್ದರಿಂದ ಠಾಣೆಗೆ ಕರೆಯಿಸಿ ಇಬ್ಬರಿಗೆ ರಾಜಿ ಮಾಡಿದ್ದು ಇದೆ. ನಾನು ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟು ಹೋದ ಮೇಲೆ ನನಗೆ ಬೇರೆಯವರಿಂದ ತಿಳಿದ ವಿಷಯವೆನೆಂದರೆ, ಕೃಷ್ಣ ಹೊಂ ಗಾಡರ್್ ಗಾಜರಕೊಟ್ ಮತ್ತು ಉಮಾಕಾಂತ ತಂದೆ ಸಾಬಣ್ಣ ಕೊಟಗೇರಿ ಇವರಿಬ್ಬರು ಸೇರಿ ಹಳೆಯ ವೈಮನಿಸಿನಿಂದ ನನ್ನ ಗೆಳೆಯ ಸಿದ್ದಾರ್ಥ (ಸಿದ್ದಲಿಂಗಪ್ಪ) ನನ್ನ ಹತ್ತಿರ ಕರೆದು 01.07.2021 ರಂದು ರಾತ್ರಿ 9:00 ಗಂಟೆಗೆ ಗಾಜರಕೊಟ್ನಲ್ಲಿ ನನ್ನ ಗಂಡನ ಬಗ್ಗೆ ಅವಹೇಳನ ಮಾತಾಡಿ ಜೀವ ಬೆದರಿಕೆ ನೀಡಿದ್ದಾರೆ. ಅದೇನೇಂದರೆ ಅವ ಏನ್ ಮಾಡತಾನ ಅನೀಲನನ್ನು ಮದುವೆಯ ಮೊದಲು ಬಾಹಳ ಅಂಜಿಸಿವಿ ಅವನಿಗೆ ಒಬ್ಬನು ಊರಿನಲ್ಲಿ ನಾಯಿ ಕೇಳಲ್ಲ ನೀ ಊರಿಗೆ ಬಾ ನಿಮ್ಮಿಬ್ಬರ ಫೋಟೋಗಳನ್ನು ವಾಟ್ಸಪ್ಗೆ ಹಾಕೋಣ ಈ ವಿಷಯ ತಿಳಿದ ನಂತರ ಆ ಹುಡುಗಿಯನ್ನು ಬಿಟ್ಟು ಬಿಡುತ್ತಾರೆ. ನಿನ್ನ ಲವರನ ಕರೆದುಕೊಂಡು ಹೋಗು ನೀನು ಊರಿಗೆ ಬಾ ನನ್ನ ಫೂಲ್ ಸಪೋಟರ್್ ನಿನಗೆ ಇದೆ ಪೊಲೀಸ ಸ್ಟೇಷನ್ ನನ್ನ ಕೈಯಲ್ಲಿವೆ. ಅನೀಲಗೆ ಹೊಡೆಯಲು ಪ್ಲಾನ್ ಮಾಡುತ್ತಿದ್ದೆವೆ ಸಿದ್ದಲಿಂಗಪ್ಪ ನೀನು ಅಡ್ಡ ಬರಬ್ಯಾಡ ಅಂತಾ ಹೇಳಿ ಕೃಷ್ಣನು ತಮ್ಮ ಮೊಬೈಲ್ನಲ್ಲಿರುವ ನನ್ನ ಮತ್ತು ಚಿರಂಜೀವಿ ಫೋಟೋಗಳನ್ನು ತೊರಿಸಿದ್ದಾರೆ. ಈದಾದ 2-3 ದಿನಗಳ ನಂತರ ಸುಮ್ಮನಿದ್ದ ಚಿರಂಜೀವಿ ಅಶ್ಲೀಲ ಫೋಟೊಗಳನ್ನು ತನ್ನ 87479715ನಿಂದ ಜುಲೈ 6 ರಂದು ಸುಮಾರು ರಾತ್ರಿ 11:00 ರಿಂದ 12:00 ಗಂಟೆ ಒಳಗೆ ನನ್ನ ಮಾವನ ಫೋನಿಗೆ 8454082089 ನಂಬರಿಗೆ ವಾಟ್ಸಪ್ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ಹಾರಿ ಬಿಟ್ಟಿದ್ದಾನೆ. ಇವೆಲ್ಲಾ ಗಮನಿಸಿದರೆ ಕಪಟ ಸೂತ್ರದಾರಿ ಕೃಷ್ಣ ಹೋಮ್ ಗಾಡರ್್ ಈತನ ಮೊಬೈಲ್ ನಂಬರ 88614237 ಈತನ ಪಾತ್ರ ಬಹಳವಾಗಿದೆ. ಹೀಗೆ ನನ್ನ, ನನ್ನ ಗಂಡನ ಮಾನಸೀಕ ನೆಮ್ಮದಿ ಹಾಳು ಮಾಡಿದ ಕೃಷ್ಣ ಇದಕ್ಕಿಂತ ಮುಂಚೆ ಗುಂಡಾಗಳನ್ನು ಕರೆಯಿಸಿ ನನ್ನ ಗಂಡನ ಹೊಡೆಯಲು ಕಳುಹಿಸಿದ್ದಾನಂತೆ. ಈ ವಿಷಯದ ಬಗ್ಗೆ ಪೊಲೀಸ್ ಪೊಲೀಸ್ ಠಾಣೆಯಲ್ಲಿ ವಿಚಾರಿಸಿ ರಾಜಿ ಮಾಡಿಸಲಾಗಿದಂತೆ, ಈ ಎಲ್ಲಾ ಗಮನಿಸಿದಾಗ ನನಗೆ & ನನ್ನ ಗಂಡನಿಗೆ ನೆಮ್ಮದಿಯ ಜೀವನ ಮಾಡಲು ಬಿಡುವುದಿಲ್ಲ ಎಂಬಂತೆ ಕಾಣುತ್ತಿವೆ. ಚಿರಂಜೀವಿ, ಕೃಷ್ಣ, ಉಮಾಕಾಂತ ಮತ್ತು ಮೂವರಿಂದ ಜೀವ ಬೆದರಿಕೆ ಇದೆ. ಹೀಗಿದ್ದಾಗ ನಾವು ಸಮಾಜದಲ್ಲಿ ಹೆಗೆಂಬುದು ಗೊತ್ತಾಗುತ್ತಿಲ್ಲ. ಚಿರಂಜೀವಿಯು ತನ್ನ ತಂದೆ ತಾಯಿ ಜೊತೆಗೆ ಅಣ್ಣ ಬೆಂಬಲವಿದೆ ನೀನು ಏನು ಬೇಕಾದರು ಮಾಡಿ ಕುಟುಂಬದವರು ಹೇಳಿದ ಮಾತನ್ನು ದಿನಾಂಕ 07.07.2021 ಸುಮಾರು ರಾತ್ರಿ 7:00 ರಿಂದ 8:00 ಗಂಟೆಯ ನಡುವೆ ನಮ್ಮ ಮನೆಯಲ್ಲಿದ್ದಾಗ ನಾನು ಸವಿತಾಗ 96639180 ಗೆ ಕಾಲ್ ಮಾಡಿ ಮಾತಾಡಿ (ನನ್ನ ನಂಬರ 82968668) ಫೋನಿನಲ್ಲಿ ತಿಳಿಸಿರುತ್ತಾನೆ. ಅದಕ್ಕಾಗಿ ನನಗೆ ಮತ್ತು ನನ್ನ ಗಂಡನಿಗೆ ಏನಾದರೂ ಜೀವಕ್ಕೆ ಅಪಾಯವಾದರೆ ಜಿರಂಜೀವಿ, ಕೃಷ್ಣಾ, ಉಮಾಕಾಂತ ಮತ್ತು ಚಿರಂಜೀವಿ ಕುಟುಂಬದವರೇ ಕಾರಣರಾಗುತ್ತಾರೆ. ಅದಕ್ಕಾಗಿ ಮಾನ್ಯರು ಇವರ ಬಗ್ಗೆ ತನಿಖೆ ಮಾಡಿ ಅವರಿಗೆ ಕಠೀಣ ಶೀಕ್ಷೆ ಮಾಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 13-07-2021 10:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080