ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-08-2022

 

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ:: 60/2022 ಕಲಂ: 323, 324, 341, 504, 506, ಸಂಗಡ 34 ಐಪಿಸಿ: ಇಂದು ದಿನಾಂಕ:12.08.2022 ರಂದು 7:30 ಪಿಎಮ್ಕ್ಕೆ ಪಿಯರ್ಾದಿ ಶ್ರೀಮತಿ ಹಣಮಂತಿ ಗಂಡ ಮಲ್ಲನಗೌಡ ಗೌಡಗೇರಿ (ಬಿರಾದಾರ) ವಯ:42 ವರ್ಷ ಉ:ಮನೆಗೆಲಸ ಜಾ:ಹಿಂದೂ ಬೇಡರ ಸಾ:ರಾಯಗೇರಾ ತಾ:ಸುರಪೂರ ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನನ್ನ ತವರೂರು ಹಾಗೂ ಗಂಡನ ಮನೆ ರಾಯಗೇರಿ ಗ್ರಾಮ ಇರುತ್ತದೆ. ನನಗೆ ಸಂಗಣ್ಣ, ಕೃಷ್ಣಪ್ಪ, ಭೀಮಬಾಯಿ, ಯಮನಪ್ಪಗೌಡ ಅಂತಾ ನಾಲ್ಕು ಜನ ಮಕ್ಕಳಿರುತ್ತಾರೆ. ನನ್ನ ಅಣ್ಣನಾದ ಶರಣಪ್ಪ ತಂದೆ ಹಣಮಂತ್ರಾಯ ಮಾಡಬೂಳ ಈತನು ನಮ್ಮೂರ ದೇವದಾಸಿಗೆ ಬಿಟ್ಟ ಮಾಳವ್ವ ಇವಳೊಂದಿಗೆ ಸಂಬಂಧಹೊಂದಿದ್ದು ಇಬ್ಬರೂ ಗಂಡ-ಹೆಂಡತಿಯರಂತೆ ಇರುತ್ತಾರೆ. ನನ್ನ ಅಣ್ಣ ಶರಣಪ್ಪನೊಂದಿಗೆ ಇರುವ ಮಾಳಮ್ಮಳು ಈ ಹಿಂದೆ ನನ್ನ ಗಂಡ ಹಾಗೂ ಮಕ್ಕಳ ಮೇಲೆ ಕೇಸು ಮಾಡಿದ್ದು ನಾವೂ ಕೂಡಾ ಅವರ ಮೇಲೆ ಕೇಸು ಮಾಡಿದ್ದು ಈ ಕೇಸುಗಳು ಆದಾಗಿನಿಂದ ಅವರು ಮತ್ತು ನಮ್ಮ ನಡುವೆ ವೈಶಮ್ಯ ಬೆಳೆದಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ:11.08.2022 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನನ್ನ ಗಂಡ ಮಲ್ಲಣ್ಣ ತಂಧೆ ಕೃಷ್ಣಪ್ಪ ಗೌಡಗೇರಿ ಇವರು ಕಕ್ಕೇರಾ ಬ್ಯಾಂಕಿನಲ್ಲಿ ಕೆಲಸವಿದೆ ಅಂತ ಹೇಳಿ ಮನೆಯಿಂದ ಕಕ್ಕೇರಾಕ್ಕೆ ಹೋಗಿದ್ದು ನಂತರ ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನನ್ನ ಗಂಡನು ನರಳುತ್ತಾ ಮನೆಗೆ ಬಂದಿದ್ದು ನಾನು ನನ್ನ ಗಂಡನಿಗೆ ವಿಚಾರಿಸಲಾಗಿ ನಾನು ಈ ದಿವಸ ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಕಕ್ಕೇರಾ ಪಟ್ಟಣದಲ್ಲಿನ ಚನ್ನಯ್ಯಮುತ್ಯಾ ರವರ ಮಳಿಗೆಯ ಮುಂದಿನ ರಸ್ತೆಯ ಮೇಲಿಂದ ನಡೆದುಕೊಂಡು ಕಕ್ಕೇರಾ ವಾಲ್ಮೀಕಿ ವೃತ್ತದ ಕಡೆಗೆ ಹೋಗುತ್ತಿರುವಾಗ ಎದುರಿನಿಂದ ನಿನ್ನ ಅಣ್ಣನಾದ ಶರಣಪ್ಪ ತಂದೆ ಹಣಮಂತ್ರಾಯ ಮುಡಬೋಳ ಹಾಗೂ ಆತನ ಮಗನಾದ ಸಿದ್ರಾಮ ತಂದೆ ಶರಣಪ್ಪ ಮುಡಬೋಳ ಇಬ್ಬರೂ ಬರುತ್ತಿದ್ದವರೇ ನನ್ನನ್ನು ನೋಡಿ ನನಗೆ ತಡೆದು ನಿಲ್ಲಿಸಿ ಸೂಳೆ ಮಗನೇ ನಿಂದು ಮತ್ತು ನಿನ್ನ ಮಕ್ಕಳದು ತಿಂಡಿ ಬಾಳ ಆಗಿದೆ ಇವತ್ತು ಸಿಕ್ಕಿದಿ ಬೋಸಡೀ ಮಗನೇ ನಮ್ಮ ಮೇಲೆ ನೀನು ದ್ವೇಷ ಸಾಧಿಸುತ್ತಾ ಬಂದಿದಿ ನಿನಗೆ ಒಂದು ಗತಿ ಕಾಣಿಸುತ್ತೇವೆ ಅಂತ ಬೈಯ ಹತ್ತಿದ್ದು ಆಗ ನಾನು ಅವರಿಗೆ ಯಾಕೆ ವಿನಾಕಾರಣ ನನಗೆ ಬೈಯುತ್ತಿರೀ ನಾನೇನು ನಿಮ್ಮ ಮೇಲೆ ಯಾವುದೇ ದ್ವೇಷ ಸಾಧಿಸುತ್ತಿಲ್ಲ ಅಂತ ಅಂದಾಗ ಅವರಲ್ಲಿಯ ಸಿದ್ರಾಮ ತಂದೆ ಶರಣಪ್ಪ ಮುಡಬೋಳ ಇತನು ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಬಲಗೈ ಮುಂಗೈ ಮೇಲ್ಭಾಗದಲ್ಲಿ ಹೊಡೆದಿದ್ದು ಇದರಿಂದ ನನ್ನ ಬಲಗೈ ಮುಂಗೈ ಮೇಲ್ಭಾಗದಲ್ಲಿ ಕಂದುಗಟ್ಟಿದ ಗಾಯವಾಗಿದ್ದು ನಂತರ ಇಬ್ಬರೂ ನನ್ನ ತೆಕ್ಕಗೆ ಬಿದ್ದು ನೆಲಕ್ಕೆ ಕೆಡವಿದ್ದು ಆಗ ನಾನು ನೆಲಕ್ಕೆ ಬಿದ್ದಾಗ ಮಾವ ಶರಣಪ್ಪನು ನನ್ನ ಡುಬ್ಬದ ಮೇಲೆ, ಬೆನ್ನಿನ ಮೇಲೆ ಕಾಲಿನಿಂದ ಒದ್ದು ತುಳಿದು ಒಳಪೆಟ್ಟು ಮಾಡಿದ್ದು ಆಗ ನಾನು ನನ್ನನ್ನು ಬಿಡಿಸಿಕೊಳ್ಳಿರಪ್ಪೋ ಅಂತ ಚೀರಾಡುತ್ತಿದ್ದಾಗ ಅಲ್ಲಿಂದಲೇ ಹೋಗುತ್ತಿದ್ದ ನಮ್ಮೂರ ಸಣ್ಣಪರಮಣ್ಣ ತಂದೆ ಈರಣ್ಣ ಅಳ್ಳಳ್ಳಿ, ಗುತ್ತಪ್ಪಗೌಡ ತಂದೆ ಹಣಮಂತ್ರಾಯ ಮಾಲಿಬಿರಾದಾರ, ಬಸವರಾಜ ತಂದೆ ಹಣಮಂತ್ರಾಯ ಬಿರಾದಾರ ರವರು ಬಂದು ನೋಡಿ ನನಗೆ ಶರಣಪ್ಪ ಮತ್ತು ಸಿದ್ರಾಮ ರವರು ಹೊಡೆಯುವದನ್ನು ಬಿಡಿಸಿದ್ದು ಹೋಗುವಾಗ ಅವರಿಬ್ಬರೂ ನನಗೆ ಸೂಳೇ ಮಗನೇ ಇವತ್ತು ನಿನ್ನದು ನಸೀಬು ಚೊಲೋ ಇದೆ ನಮ್ಮ ಕೈಯಲ್ಲಿ ಉಳಿದುಕೊಂಡಿದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ನಂತರ ನಾನು ಇಲ್ಲಿಗೆ ಬಂದಿರುವದಾಗಿ ತಿಳಿಸಿದ್ದು ನಂತರ ನಾನು ನನ್ನ ಗಂಡನಿಗೆ ನಿನ್ನೆ ದಿನ ಉಪಚಾರಕ್ಕಾಗಿ ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿಕೊಂಡು ನಮ್ಮೂರಿಗೆ ಹೋಗಿದ್ದು ನನ್ನ ಗಂಡನಿಗೆ ಅವಾಚ್ಛ ಶಬ್ಧಗಳಿಂದ ಬೈದು, ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದವರು ನನ್ನ ಅಣ್ಣ ಮತ್ತು ಅಳಿಯನೇ ಇದ್ದುದರಿಂದ ಈ ಬಗ್ಗೆ ವಿಚಾರ ಮಾಡಿ ಇಂದು ತಡವಾಗಿ ಬಂದು ದೂರು ಕೊಡುತ್ತಿದ್ದು ನನ್ನ ಗಂಡನಿಗೆ ಅವಾಚ್ಛ ಶಬ್ಧಗಳಿಂದ ಬೈದು, ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ನನ್ನ ಅಣ್ಣ ಶರಣಪ್ಪ ಹಾಗೂ ಅಳಿಯ ಸಿದ್ರಾಮ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ಪಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:38/2022 ಕಲಂ: 323, 324, 341, 504, 506, ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 129/2022 ಕಲಂ: 379 ಐಪಿಸಿ : ದಿನಾಂಕ 08.08.2022 ರಂದು ರಾತ್ರಿ 21:00 ಗಂಟೆಯಿಂದ ದಿನಾಂಕಃ 09.08.2022 ರಂದು 02:00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿಯರ್ಾದಿ ಮನೆಯ ಮುಂದಿರುವ ಪತ್ರಾಸದಲ್ಲಿ ಕಟ್ಟಿ ಹಾಕಿರುವ ಟಗರು ಅಂದಾಜು ಕಿಮ್ಮತ್ತು 20,000/- ರೂ. ನೇದ್ದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 129/2022 ಕಲಂ. 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 130/2022 ಕಲಂ : 363 ಐಪಿಸಿ:ನಿನ್ನೆ ದಿನಾಂಕ 11.08.2022 ರ ರಾತ್ರಿ 10:30 ಗಂಟೆಯ ಸುಮಾರಿಗೆ ಫೀರ್ಯಾದಿ ಮತ್ತು ಆತನ ಹೆಂಡತಿ ಮಕ್ಕಳೆಲ್ಲಾರು ಮನೆಯಲ್ಲಿ ಊಟ ಮಾಡಿ ಮಲಗಿದ ನಂತರ ದಿನಾಂಕ 12.08.2022 ರ ಬೆಳಿಗಿನ ಜಾವ 4:30 ಗಂಟೆಯ ಸುಮಾರಿಗೆ ಫಿರ್ಯಾದಿಯ ಹೆಂಡತಿಯಾದ ಭೀಮವ್ವಳು ಕಾಲುಮಡಿಯಲು ಎದ್ದಾಗ ಆಕೆಯ ಮಗಳಾದ ಚಂದ್ರಕಲಾಳು ಕಾಣಿಸದೇ ಇದ್ದಾಗ ಆಕೆ ಫೀರ್ಯಾದಿಗೆ ಎಬ್ಬಿಸಿ ತಮ್ಮ ಮಗಳು ಚಂದ್ರಕಲಾಳು ಕಾಣಿಸದೇ ಇದ್ದ ಬಗ್ಗೆ ತಿಳಿಸಿದ ನಂತರ ಫಿರ್ಯಾದಿಯು ಯಾದಗಿರಿಗೆ ಹೋಗಿ ರೈಲ್ವೆ ಸ್ಟೇಷನ್ & ಬಸ್ ನಿಲ್ದಾಣಗಳಲ್ಲಿ ಹುಡುಕಲಾಗಿ ತನ್ನ ಮಗಳು ಪತ್ತೆಯಾಗದೇ ಇದ್ದಾಗ ಪುನಃ ಊರಿಗೆ ಬಂದು ನಂತರ ತಮ್ಮ ಸಂಬಂದಿಕರು ಇರುವ ಕಡೆಗಳಲ್ಲಿ ಫೊನ್ ಮಾಡಿ ವಿಚಾರಿಸಿದಾಗಲೂ ಕೂಡ ತಮ್ಮ ಮಗಳಿ ಎಲ್ಲಿಯೂ ಇಲ್ಲಾ ಅಂತಾ ದೃಢಪಟ್ಟ ಮೇಲೆ ಫಿರ್ಯಾದಿಯು ತನ್ನ ಮನೆಯಲ್ಲಿ ವಿಚಾರ ಮಾಡಿದ ಮೇಲೆ ತಡವಾಗಿ ಇಂದು ದಿನಾಂಕ 12.08.2022 ರ ಸಂಜೆ 5:15 ಗಂಟೆಗೆ ಠಾಣೆಗೆ ಬಂದು ತನ್ನ ಮಗಳನ್ನು ಯಾರೋ ಯಾವುದೋ ಉದ್ದೆಶಕ್ಕೆ ಅಪಹರಣ ಮಾಡಿಕೊಂಡು ಹೋಗಿದ್ದು ಆಕೆಯನ್ನು ಪತ್ತೆ ಮಾಡಿ ಕೊಡಬೇಕೆಂದು ಗಣಕೀಕೃತ ದೂರು ಅಜರ್ಿಯನ್ನು ಸಲ್ಲಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂಬರ 130/2022 ಕಲಂ: 363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 123/2022 ಕಲಂ. ಮಹಿಳೆ ಕಾಣೆ: ದಿನಾಂಕ: 12-08-2022 ರಂದು ಮುಂಜಾನೆ 07-30 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನನಗೆ ಸುಮಾರು 12 ವರ್ಷಗಳ ಹಿಂದೆ ಲಕ್ಷ್ಮಿ ಈಕೆಯ ಜೋತೆ ಮದುವೆಯಾಗಿರುತ್ತದೆ ಈಗ ನಮಗೆ ಒಬ್ಬ ಮಗನಿರುತ್ತಾನೆ, ನಾವು ಇಬ್ಬರು ಅನೂನ್ಯಾದಿಂದ ಇದ್ದು ಗ್ರಾಮದಲ್ಲಿ ಒಕ್ಕಲುತನ ಮಾಡಿಕೊಂಡು ಕುಟುಂಬದೊಂದಿಗೆ ಉಪಜೀವನ ಮಾಡಿಕೊಂಡು ಇರುತ್ತೆವೆ. ಹಿಗಿದ್ದು ದಿನಾಂಕ:10/08/2022 ರಂದು ಬೆಳಗ್ಗೆ 07:30 ಗಂಟೆಯ ಸುಮಾರಿಗೆ ನಾನು, ನನ್ನ ಹೆಂಡತಿ ಹಾಗೂ ನನ್ನ ಮಗ ಈಶಪ್ಪ ಮನೆಯಲ್ಲಿರುವಾಗ ನನ್ನ ಹೆಂಡತಿ ಲಕ್ಷ್ಮಿ ಹೇಳಿದ್ದೆನೆಂದರೆ ರಾಖಿ ಹುಣಿಮೆ ಇದ್ದ ಪ್ರಯುಕ್ತ ನಾನು ನಮ್ಮ ತಮ್ಮಂದಿರಿಗೆ ರಾಖಿ ಕಟ್ಟಿ ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೊದಳು. ನಾನು ಎಂದಿನಂತೆ ಹೊಲಕ್ಕೆ ದೋದೆನು. ನಾನು ಪುನಃ ಸಾಯಂಕಾಲ ಹೊಲದಲ್ಲಿ ದಿನದ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬಂದಾಗ ನನ್ನ ಹೆಂಡತಿ ಲಕ್ಷ್ಮಿ ಉರಿಗೆ ಹೋಗಿ ರಾಖಿ ಕಟ್ಟಿ ಬರುತ್ತೆನೆ ಅಂತಾ ಹೇಳಿ ಹೋದಾಕಿ ಬರದ ಕಾರಣ ನಮ್ಮ ಮಗ ಈಶಪ್ಪನಿಗೆ ಕೆಳಿದಾಗ ಅವ್ವ ಇನ್ನೂ ಬಂದಿಲ್ಲ ಅಂತಾ ಹೇಳಿದನು, ನಂತರ ಬಾಜು ಮನೆಯಲ್ಲಿರುವ ನಮ್ಮ ತಾಯಿ ಮಾಹದೇವಮ್ಮ ಗಂಡ ಮಲ್ಲಯ್ಯ ಮತ್ತು ನಮ್ಮ ಅಣ್ಣ ಭೀಮಾಶಂಕರ ತಂದೆ ಮಲ್ಲಯ್ಯ ಇವರುಗಳಿಗೆ ಕೆಳಲಾಗಿ ಇಲ್ಲ ಬಂದಿರುವದಿಲ್ಲ ಅಂತ ಹೇಳಿದರು ನಂತರ ನನ್ನ ಹೆಂಡತಿ ಲಕ್ಷ್ಮಿ ಹತ್ತಿರ ಇರುವ ಮೊಬೈಲ್ ನಂ.9535919891 ನೆದ್ದಕ್ಕೆ ಹಲವು ಬಾರಿ ಕರೆ ಮಾಡಲಾಗಿ ಸ್ವಿಚ್ ಆಫ್ ಅಂತ ಬಂತು ನಂತರ ನಮ್ಮ ಗ್ರಾಮದ ಶ್ರೀ ಸಾಬರೆಡ್ಡಿ ತಂದೆ ಮಲ್ಲೇಶಪ್ಪ ಅಭೀಸಿಹಾಳ ಇವರನ್ನು ಕರೆದುಕೊಂಡು ಗ್ರಾಮದ ಎಲ್ಲಾ ಕಡೆ ಹುಡುಕಡಿದರು ಸಿಕ್ಕಿರುವದಿಲ್ಲ. ನಂತರ ನನ್ನ ಹೆಂಡತಿ ಗ್ರಾಮವಾದ ಕಾಕಲವಾರ ಗ್ರಾಮದಲ್ಲಿರುವ ನಮ್ಮ ಅತ್ತೆ ಶರಣಮ್ಮ ಗಂಡ ಚಂದ್ರಪ್ಪ ಬೊಡ್ಸೊಳ ಇವರಿಗೆ ಕೂಡಾ ಮೊಬೈಲ್ ಕರೆ ಮಾಡಿ ವಿಚಾರಿಸಲಾಗಿ ಬಂದಿರುವದಿಲ್ಲ ಅಂತಾ ತಿಳಿಸಿರುತ್ತಾರೆ. ಯಾದಗಿರಿಯಲ್ಲಿ ವಾಸವಾಗಿರುವ ಈಶಮ್ಮ ಗಂಡ ಲಕ್ಷ್ಮಣ ಚಿಂತನಳ್ಳಿ ಸದ್ಯ ಲಾಡೆಜ ಗಲ್ಲಿ ಯಾದಗಿರಿ ಇವರಿಗೂ ವಿಚಾರಿಸಿದಾಗ ಲಕ್ಷ್ಮಿ ಬಂದಿರುವದಿಲ್ಲ ಅಂತಾ ತಿಳಿಸಿರುತ್ತಾರೆ. ನಮ್ಮ ಮೇಲೆ ಸಿಟ್ಟಾಗಿ ಬಾಂಬೆಗೆ ಎನಾದರು ಹೋಗಿರಬಹುದು ಅಂತಾ ನಾನು ಬಾಂಬೆಯಲ್ಲಿರುವ ನಮ್ಮ ಸಂಬಂದಿಕರಿಗೆ ಕರೆ ಮಾಡಿ ನನ್ನ ಹೆಂಡತಿ ಲಕ್ಷ್ಮಿ ಬಗ್ಗೆ ವಿಚಾರಿಸಲಾಗಿ ನನ್ನ ಹೆಂಡತಿ ಅಲ್ಲಿ ಕೂಡ ಹೋಗಿರುವದಿಲ್ಲ. ನನ್ನ ಹೆಂಡತಿ ಲಕ್ಷ್ಮಿ ಗಂಡ ಮಲ್ಲಪ್ಪ @ ಮಲ್ಲಿಕಾಜರ್ುನ ಅಭೀಸಿಹಾಳ ವ||28 ವರ್ಷ ಜಾ||ಕಬ್ಬಲಿಗ ಉ||ಹೊಲ ಮನೆಗೆಲಸ ತಾ|| ಜಿ|| ಯಾದಗಿರಿ ಈಕೆಯು ದಿನಾಂಕ: 10-08-2022 ರಂದು ಮುಂಜಾನೆ 07-30 ಗಂಟೆಗೆ ಮನೆಯಿಂದ ಕಾಣೆಯಾಗಿರುತ್ತಾಳೆ ಎರಡು ಮೂರು ದಿನ ಎಲ್ಲಾ ಕಡೆ ಹುಡಕಾಡಿದರು ನನ್ನ ಹೆಂಡತಿ ಲಕ್ಷ್ಮಿ ಈಕೆಯು ಸಿಕ್ಕಿರುವದಿಲ್ಲ. ನನ್ನ ಹೆಂಡತಿ ಲಕ್ಷ್ಮಿ ಈಕೆಯು ಕಾಣೆಯಾದ ಬಗ್ಗೆ ದೂರು ದಾಖಲಿಸಿ ಹುಡಕಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ನೀಡಿದ ದೂರು ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.123/2022 ಕಲಂ.ಮಹಿಳೆ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ : 59/2022 ಕಲಂ: 341, 323, 324, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ:12.08.2022 ರಂದು 11:00 ಎ.ಎಮ್ ಕ್ಕೆ ಪಿಯರ್ಾದಿ ಶ್ರೀ ಸಿದ್ರಾಮ ತಂದೆ ಶರಣಪ್ಪ ಮುಡಬುಳ ವ:35 ವರ್ಷ ಉ:ಒಕ್ಕಲುತನ ಜಾ:ಹಿಂದೂ ಬೇಡರ ಸಾ:ರಾಯಗೇರಾ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನಮ್ಮ ತಂದೆತಾಯಿಗೆ ಬಾಳಪ್ಪ ಮತ್ತು ನಾನು ಇಬ್ಬರು ಗಂಡು ಮಕ್ಕಳಿದ್ದು, ನಮ್ಮಿಬ್ಬರದು ಮದುವೆಯಾಗಿದ್ದು, ನಾವು ಇಬ್ಬರು ನಮ್ಮ ನಮ್ಮ ಕುಟುಂಬದೊಂದಿಗೆ ಬೇರೆ ಬೇರೆ ಇದ್ದು, ನಮ್ಮ ತಂದೆ ಮತ್ತು ತಾಯಿ ಬೇರೆ ಮನೆ ಮಾಡಿಕೊಂಡು ಇದ್ದು, ನನ್ನ ತಂದೆ ಶರಣಪ್ಪನು ನಮ್ಮೂರ ದೇವಿದಾಸಿಯಾದ ಮಾಳಮ್ಮ ತಂದೆ ತಿಪ್ಪಣ್ಣ ಮಾದರ ಇವರೊಂದಿಗೆ ಬಹಳ ವರ್ಷಗಳಿಂದ ಸಂಬಂಧ ಹೊಂದಿದ್ದು, ನನ್ನ ತಂದೆಯ ತಂಗಿಯಾದ ಹಣಮಂತಿ ಇವರಿಗೆ ನಮ್ಮೂರ ಮಲ್ಲಣ್ಣ ತಂದೆ ಕೃಷ್ಣಪ್ಪ ಗೌಡಗೇರಿ ರವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ನಮ್ಮ ಮಾವ ಮಲ್ಲಣ್ಣನು ನನ್ನ ಮೇಲೆ ನಾನು ಮಾಳಮ್ಮನ ಪರವಾಗಿ ಇದ್ದೇನೆ ಅಂತಾ ವಿನಾ ಕಾರಣ ಸಿಟ್ಟಾಗಿ ನನ್ನ ಮೇಲೆ ಈಗ ಮೂರು ತಿಂಗಳುಗಳ ಹಿಂದೆ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿದ್ದು, ನಾನು ಯಾರ ಪರವಾಗಿಯೂ ಇರುವುದಿಲ್ಲ. ಹೀಗಿದ್ದು, ನಿನ್ನೆ ದಿನಾಂಕ:11/08/2022 ರಂದು ಮುಂಜಾನೆ 10:00 ಗಂಟೆ ಸುಮಾರಿಗೆ ನಾನು ನಮ್ಮೂರ ನನ್ನ ಗೆಳೆಯನಾಗಬೇಕಾದ ಮಲ್ಲಣ್ಣ ತಂದೆ ಭೀಮಣ್ಣ ಬಡಿಗೇರ ಇವರೊಂದಿಗೆ ನಮ್ಮೂರಿನಿಂದ ಕಕ್ಕೇರಾಕ್ಕೆ ಭತ್ತದ ಬೆಳೆಗೆ ಗೋಬ್ಬರ ಖರೀದಿಸಲು ಬಂದಿದ್ದು, ನಂತರ ನಿನ್ನೆ ಮಧ್ಯಾಹ್ನ 12:00 ಗಂಟೆ ಸುಮಾರಿಗೆ ಕಕ್ಕೇರಾ ಪಟ್ಟಣದಲ್ಲಿನ ಚೆನ್ನಯ್ಯ ಮುತ್ಯಾರವರ ಮಳಿಗೆ ಮುಂದಿನ ರಸ್ತೆ ಮೇಲಿಂದ ನಾನು ಮತ್ತು ನಮ್ಮೂರ ಮಲ್ಲಣ್ಣ ತಂದೆ ಭೀಮಣ್ಣ ಬಡಿಗೇರ ಇಬ್ಬರು ಕೂಡಿ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ನಮ್ಮೂರ ನನಗೆ ಮಾವನಾಗಬೇಕಾದ ಮಲ್ಲಣ್ಣ ತಂದೆ ಕೃಷ್ಣಪ್ಪ ಗೌಡಗೇರಿ ಈತನು ತನ್ನ ಮಕ್ಕಳಾದ ಸಂಗಣ್ಣ ತಂದೆ ಮಲ್ಲಣ್ಣ ಗೌಡಗೇರಿ, ಕೃಷ್ಣಪ್ಪ ತಂದೆ ಮಲ್ಲಣ್ಣ ಗೌಡಗೇರಿ ಹಾಗೂ ಅವರ ಅಳಿಯನಾದ ಸಣ್ಣಭೀಮಣ್ಣ ತಂದೆ ಹಣಮಂತ್ರಾಯಾ ಬಿರಾದಾರ ರವರಿಗೆ ಕರೆದುಕೊಂಡು ಬಂದವನೇ ನಡೆದುಕೊಂಡು ಹೋಗುತ್ತಿದ್ದ ನನಗೆ ಮತ್ತು ನನ್ನ ಗೆಳೆಯ ಮಲ್ಲಣ್ಣನನಿಗೆ ತಡೆದು ನಿಲ್ಲಿಸಿ ಏ ಬೋಸಡಿ ಮಗನೇ ಸಿದ್ರಾಮ್ಯಾ ಊರಲ್ಲಿ ನಮಗೆ ಬೇಕಾಗಲಾರದ ಮಾಳವ್ವನ ಪರವಾಗಿ ನಮ್ಮ ವಿರುದ್ದ ನೀನು ಕೇಸು ಮಾಡಿಸ್ತಿ ಸೂಳೆ ಮಗನೇ ನಿನ್ನ ಸೊಕ್ಕು ಬಹಳ ಆಗಿದೆ ಇವತ್ತು ಸಿಕ್ಕಿದ್ದಿ ನಿನಗೆ ಒಂದು ಗತಿ ಕಾಣಿಸುತ್ತೇವೆ ಅಂತಾ ಬೈಯಹತ್ತಿದ್ದು, ಆಗ ನಾನು ಮಾವ ಮಲ್ಲಣ್ಣ ಮತ್ತು ಆತನ ಮಕ್ಕಳಿಗೆ ನಾನೇನು ಯಾರ ಪರವಾಗಿಯು ಇಲ್ಲ ನನ್ನಷ್ಟಕ್ಕೆ ನಾನು ಇದ್ದೇನೆ ಅಂತಾ ಅನ್ನುತ್ತಿರುವಾಗಲೇ ಮಾವ ಮಲ್ಲಣ್ಣನು ಅಲ್ಲಿಯ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಬಲಗಿವಿಯ ಮೇಲೆ ಹೊಡೆದಿದ್ದು, ಇದರಿಂದ ನನ್ನ ಬಲಗಿವಿಯ ಮೇಲೆ ರಕ್ತಗಾಯವಾಗಿದ್ದು, ಸಂಗಣ್ಣ ತಂದೆ ಮಲ್ಲಣ್ಣ ಹಾಗೂ ಕೃಷ್ಣಪ್ಪ ತಂದೆ ಮಲ್ಲಣ್ಣ ಇವರಿಬ್ಬರೂ ನನ್ನ ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿದ್ದು, ಆಗ ಕೃಷ್ಣಪ್ಪ ತಂದೆ ಮಲ್ಲಣ್ಣ ಗೌಡಗೇರಿ ಇತನು ನನ್ನ ಎಡಗೈ ಹಸ್ತದ ಕಿರುಬೆರಳು ಹಾಗೂ ಅದರ ಪಕ್ಕದ ಬೆರಳಿಗೆ ಬಾಯಿಯಿಂದ ಕಚ್ಚಿ ರಕ್ತಗಾಯ ಪಡಿಸಿದ್ದು, ಸಂಗಣ್ಣನು ನನ್ನ ಕುತ್ತಿಗೆಯ ಹಿಂಬಾಜುವಿಗೆ ಕಾಲಿನಿಂದ ಒದ್ದು ಒಳಪೆಟ್ಟು ಮಾಡಿದ್ದು ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತಾ ಚೀರಾಡಹತ್ತಿದಾಗ ನನ್ನ ಜೋತೆಗೆ ಇದ್ದ ಮಲ್ಲಣ್ಣ ತಂದೆ ಭೀಮಣ್ಣ ಬಡಿಗೇರ ಈತನು ಬಿಡಿಸಲು ಬಂದಾಗ ಅವನಿಗೆ ಸಣ್ಣಭೀಮಣ್ಣ ತಂದೆ ಹಣಮಂತ್ರಾಯ ಬಿರಾದಾರ ಇತನು ಬೋಸಡಿ ಮಗನೇ ಬಿಡಿಸಲಿಕ್ಕೆ ಬಂದಿಯ್ಯಾ ಅಂತಾ ಅಂದವನೇ ತೆಕ್ಕೆಗೆ ಬಿದ್ದು ನೆಲಕ್ಕೆ ಕೆಡವಿ ಮಲ್ಲಣ್ಣನ ಎಡಗೈ ಹೆಬ್ಬೇರಳಿಗೆ ಬಾಯಿಯಿಂದ ಕಚ್ಚಿ ರಕ್ತಗಾಯ ಪಡಿಸಿದ್ದು ಆಗ ನಾವಿಬ್ಬರೂ ಚಿರಾಡುತ್ತಿರುವಾಗ ಅಲ್ಲಿಯೇ ಇದ್ದ ನಮ್ಮೂರ ತಿಮ್ಮಣ್ಣ ತಂದೆ ಈರಣ್ಣ ದೇಸಾಯಿ, ಯಂಕಪ್ಪ ತಂದೆ ಹಣಮಂತ್ರಾಯ ಚಾಮನಾಳ ಹಾಗೂ ಮಂಜಲಾಪೂರ ಗ್ರಾಮದ ದೇವಪ್ಪ ತಾಯಿ ಪರಮವ್ವ ಹೊಸಮನಿ ಇವರುಗಳು ಬಂದು ನೋಡಿ ನಮಗೆ ಹೊಡೆಯುದನ್ನು ಬಿಡಿಸಿದ್ದು, ಹೋಗುವಾಗ ನಾಲ್ಕು ಜನರು ನನಗೆ ಮತ್ತು ಮಲ್ಲಣ್ಣನಿಗೆ ಸೂಳೆ ಮಕ್ಕಳ್ಯಾ ಇವತ್ತು ನಮ್ಮ ಕೈಯಲ್ಲಿ ಉಳಿದುಕೊಂಡಿರಿ, ಇನ್ನೊಮ್ಮೆ ಸಿಕ್ಕಾಗ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು, ನಿನ್ನೆ ದಿನ ನಾನು ಮತ್ತು ಗೆಳೆಯ ಮಲ್ಲಣ್ಣ ರವರು ಊರಿಗೆ ಹೋಗಿದ್ದು, ನಮಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದವರು ನಮ್ಮ ಸಂಬಂಧಿಕರೆ ಇದ್ದುದ್ದರಿಂದ ವಿಚಾರ ಮಾಡಿ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು ಕಾರಣ ನನಗೆ ಹಾಗೂ ನನ್ನ ಗೆಳೆಯ ಮಲ್ಲಣ್ಣನಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ 4 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:59/2022 ಕಲಂ:341, 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 13-08-2022 01:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080