ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-09-2022


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂಬರ 139/2022 ಕಲಂ 143, 147, 323, 324, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 12/09/2022 ರಂದು 5.00 ಪಿಎಮ್ ಕ್ಕೆ ಅಜರ್ಿದಾರರಾದ ತಿಪ್ಪಣ್ಣ ತಂದೆ ಆದಪ್ಪ ಕಟ್ಟಿಮನಿ ವ|| 30ವರ್ಷ ಜಾ|| ಹೊಲೆಯ ಉ|| ಕೂಲಿ ಸಾ|| ಯಾಳಗಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿಯನ್ನು ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಮ್ಮ ಸಂಬಂಧಿಕರಾದ ಯಲ್ಲಮ್ಮ ಗಂಡ ಬಸಪ್ಪ ಚಲುವಾದಿ ಇವರಿಗೂ ಮತ್ತು ಅವರ ಮನೆಯ ಪಕ್ಕದ ಮನೆಯವರಾದ ಮಲ್ಲಪ್ಪ ತಂದೆ ಭೀಮಣ್ಣ ಬಡಿಗೇರ ಇವರಿಗೂ ಮನೆಯ ಮುಂದಿನ ಜಾಗದ ವಿಷಯದಲ್ಲಿ ಬಹಳ ದಿನಗಳ ಹಿಂದಿನಿಂದ ಜಗಳ ನಡೆದಿದ್ದು ಇರುತ್ತದೆ. ಹೀಗಿದ್ದು ದಿನಾಂಕ 08/09/2022 ರಂದು ನಮ್ಮ ಸಂಬಂಧಿಕರಾದ ಲಕ್ಷ್ಮೀಬಾಯಿ ಗಂಡ ಮಲ್ಲಯ್ಯ ಚಲುವಾದಿ ಇವಳು ತೀರಿಕೊಂಡಿದ್ದರಿಂದ ನಾವೆಲ್ಲರೂ ಸಂಬಂಧಿಕರು ಅನೇಕ ಗ್ರಾಮಗಳಿಂದ ರಾಂಪೂರ ಗ್ರಾಮಕ್ಕೆ ಶವ ಸಂಸ್ಕಾರ ಮಾಡುವ ಕುರಿತು ಹೋಗಿದ್ದೆವು. ಅದೇ ದಿನ 4.30 ಪಿಎಂ ಸುಮಾರಿಗೆ ಮೃತ ಲಕ್ಷ್ಮೀಬಾಯಿ ಇವಳ ಶವಸಂಸ್ಕಾರ ಮಾಡಲು ರಾಂಪೂರ ಗ್ರಾಮದ ಸ.ನಂ 16 ರಲ್ಲಿ ಹೋದಾಗ ಶವ ಹೂಳುವ ಕುಣಿಯ ಹತ್ತಿರ ನಾನು ಮತ್ತು ನಮ್ಮ ತಂಗಿಯ ಗಂಡನಾದ ಬಸಪ್ಪ ತಂದೆ ಚಂದ್ರಪ್ಪ ಹರಿಜನ ಸಾ|| ನಾವದಗಿ ಇಬ್ಬರೂ ಮಾತನಾಡುತ್ತಾ ನಿಂತಿದ್ದಾಗ ರಾಂಪೂರ ಗ್ರಾಮದ 1) ಮಲ್ಲಪ್ಪ ತಂದೆ ಭೀಮಪ್ಪ ಬಡಿಗೇರ 2) ದೊಡಪ್ಪ ತಂದೆ ಗುರಪ್ಪ ಬಡಿಗೇರ 3) ಮಾನಪ್ಪ ತಂದೆ ಗುರಪ್ಪ ಬಡಿಗೇರ 4) ಲಕ್ಷ್ಮಣ ತಂದೆ ಪೀರಪ್ಪ ಬಡಿಗೇರ 5) ಶರಣಪ್ಪ ತಂದೆ ಗುರಪ್ಪ ಬಡಿಗೇರ, 6) ಮಹಾಂತೇಶ ತಂದೆ ಪೀರಪ್ಪ ಬಡಿಗೇರ 7) ಕುಶಾಲ ತಂದೆ ಜುಮ್ಮಪ್ಪ ಬಡಿಗೇರ 8) ಗುರುರಾಜ ತಂದೆ ಮಾನಪ್ಪ ಬಡಿಗೇರ 9) ಸೀತಮ್ಮ ಗಂಡ ಕುಶಾಲ ಬಡಿಗೇರ 10) ಸಂಗೀತಾ ಗಂಡ ಲಕ್ಷ್ಮಣ ಬಡಿಗೇರ 11) ಶರಣಮ್ಮ ಗಂಡ ಮಾನಪ್ಪ ಬಡಿಗೇರ 12) ಸಾಬವ್ವ ಗಂಡ ಮಲ್ಲಪ್ಪ ಬಡಿಗೇರ 13) ನೀಲಮ್ಮ ಗಂಡ ದೊಡಪ್ಪ ಬಡಿಗೇರ ಸಾ|| ಎಲ್ಲರೂ ರಾಂಪೂರ ಇವರೆಲ್ಲರೂ ಕೂಡಿ ಬಂದು ನಮ್ಮ ತಂಗಿಯ ಗಂಡನಾದ ಬಸಪ್ಪ ತಂದೆ ಚಂದ್ರಪ್ಪ ಹರಿಜನ ಸಾ|| ನಾವದಗಿ ಇವನೊಂದಿಗೆ ಜಗಳಕ್ಕೆ ಬಿದ್ದು ಏನಲೇ ಬಸಪ್ಪ ನಿಮ್ಮ ಅಕ್ಕಳಾದ ಯಲ್ಲವ್ವನ ಪಾಸ್ತಾರಿ ಹಿಡಿದು ಜಾಗದ ವಿಷಯದಲ್ಲಿ ನಮ್ಮ ವಿರುದ್ದ ಜಗಳ ಮಾಡುತ್ತಿಯಾ ಅಂತಾ ಜಗಳ ತೆಗೆದು ಕೈಯಿಂದ ಕಪಾಳಕ್ಕೆ ಹೊಡೆದರು ಮತ್ತು ಅವರಲ್ಲಿಯ ಶರಣಪ್ಪ ಬಡಿಗೇರ ಈತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ಬಸಪ್ಪನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಮತ್ತು ಅದೇ ಬಡಿಗೆಯಿಂದ ಬಸಪ್ಪನ ಕಾಲಿಗೆ ಹೊಡೆಯುತ್ತಿದ್ದಾಗ ನಾನು ಜಗಳ ಬಿಡಿಸಿಕೊಳ್ಳಲು ಹೋದಾಗ ಮಾನಪ್ಪ ಬಡಿಗೇರ ಈತನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು. ಆಗ ನಮ್ಮ ಸಂಬಂಧಿಕರಾದ ಬಸಪ್ಪ ತಂದೆ ಚಂದ್ರಪ್ಪ ಬೊಮ್ಮನಳ್ಳಿ ಸಾ|| ಯಾಳಗಿ ಮತ್ತು ಶ್ರೀಶೈಲ ತಂದೆ ಪೀರಪ್ಪ ನಾಗರೆಡ್ಡಿ ಸಾ|| ಯಾಳಗಿ ಇವರು ಬಂದು ಜಗಳ ಬಿಡಿಸಿಕೊಂಡರು. ಆಗ ಅವರು ಬಸಪ್ಪ ಹರಿಜನ ಸಾ|| ನಾವದಗಿ ಈತನಿಗೆ ಹೊಡೆಯುವುದನ್ನು ಬಿಟ್ಟು ಇದೊಂದು ಸಲ ಬಿಟ್ಟೀವಿ ಸೂಳೆ ಮಗನೇ ಇನ್ನೊಮ್ಮೆ ನಿಮ್ಮ ಅಕ್ಕಳಾದ ಯಲ್ಲವ್ವನ ಪರವಹಿಸಿಕೊಂಡು ಜಾಗದ ವಿಷಯದಲ್ಲಿ ನಮ್ಮ ತಂಟೆಗೆ ಹೋದರೆ ನಿನಗೆ ಜೀವ ಸಹಿತ ಹೊಡೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ನಮ್ಮ ತಂಗಿಯ ಗಂಡನಾದ ಬಸಪ್ಪನು ದಿನಾಂಕ 08/09/2022 ರಂದು ಕೆಂಭಾವಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿ ಕುರಿತು ತಮ್ಮ ಊರಾದ ನಾವದಗಿ ಗ್ರಾಮಕ್ಕೆ ಹೋಗಿದ್ದು, ಜಗಳವಾದ ಬಗ್ಗೆ ದೂರು ದಾಖಲಿಸುವ ಕುರಿತು ಬಸಪ್ಪನು ವಿಶ್ರಾಂತಿಯಲ್ಲಿದ್ದುದರಿಂದ ನಮ್ಮ ಸಂಬಂಧಿಕರಿಗೆ ವಿಚಾರಿಸಿಕೊಂಡು ತಡವಾಗಿ ಇಂದು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಆದ್ದರಿಂದ ನಮ್ಮ ಸಂಬಂಧಿಕರ ಶವ ಸಂಸ್ಕಾರಕ್ಕೆ ಹೋದಾಗ ನಮ್ಮ ಚಿಕ್ಕಮ್ಮಳಾದ ಯಲ್ಲಮ್ಮ ಗಂಡ ಬಸಪ್ಪ ಚಲುವಾದಿ ಇವರ ಜಾಗದ ವಿಷಯದಲ್ಲಿ ನಮ್ಮ ತಂಗಿಯ ಗಂಡನಾದ ಬಸಪ್ಪ ತಂದೆ ಚಂದ್ರಪ್ಪ ಸಾ|| ನಾವದಗಿ ಈತನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು, ಕೈಯಿಂದ, ಬಡಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದವರ ಮೇಲೆ ಕ್ರಮ ಜರುಗಿಸಬೇಕು ಅಂತ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂಬರ 139/2022 ಕಲಂ 143, 147, 323, 324, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 140/2022 ಕಲಂ: 87 ಕೆಪಿ ಯಾಕ್ಟ : ಇಂದು ದಿನಾಂಕ 12/09/2022 ರಂದು 8.30 ಪಿ ಎಮ್ ಕ್ಕೆ ಮಾನ್ಯ ಹಣಮಂತ ಪಿ ಎಸ್ ಐ ಸಾಹೇಬರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೆಮಾಲು, 6 ಜನ ಆರೋಪಿತರು ಮತ್ತು ಒಂದು ವರದಿ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ 12/09/2022 ರಂದು 6.15 ಪಿಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಏವೂರ ಸಣ್ಣ ತಾಂಡಾದ ಸೇವಾಲಾಲ ಗುಡಿಯ ಹತ್ತಿರ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು, ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎನ್ನುವ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು ಮತ್ತು ಠಾಣೆಯ ಬಲರಾಮ ಎ.ಎಸ್.ಐ, ಜಗದೀಶ ಹೆಚ್.ಸಿ 40, ಬಸವರಾಜ ಪಿಸಿ 363, ಆನಂದ ಪಿಸಿ 43 ಮತ್ತು ರವಿಕುಮಾರ ಎಹೆಚ್.ಸಿ 38 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಮತ್ತು ಮಕ್ತುಮಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 6.25 ಪಿಎಂ ಕ್ಕೆ ಹೊರಟು 6.55 ಪಿಎಂ ಕ್ಕೆ ಏವೂರ ಸಣ್ಣ ತಾಂಡಾದ ಸೇವಾಲಾಲ ಗುಡಿಯ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಶಾಲೆಯ ಹಿಂದಿನ ಬಯಲು ಜಾಗೆಯಲ್ಲಿ ಕೆಲವು ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ್ ಬಾಹರ್ ಎನ್ನುವ ಇಸ್ಪೀಟ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 7.00 ಪಿಎಂ ಕ್ಕೆ ನಾನು, ಮತ್ತು ಸಿಬ್ಬಂದಿ ಜನರು ಕೂಡಿ ಒಮ್ಮೆಲೇ ದಾಳಿ ಮಾಡಿದ್ದು ದಾಳಿಯಲ್ಲಿ 6 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಪರಶುರಾಮ ತಂದೆ ಬಸವರಾಜ ದೊರಿ ವ|| 26 ಜಾ|| ಬೇಡರ ಉ|| ಒಕ್ಕಲುತನ ಸಾ|| ಏವೂರ ತಾ|| ಸುರಪೂರ 2) ದೇಸು ತಂದೆ ಭಾಷು ರಾಠೋಡ ವ|| 32 ಜಾ|| ಲಂಬಾಣಿ ಉ|| ಕೂಲಿ ಸಾ|| ಏವೂರ ಸಣ್ಣ ತಾಂಡಾ ತಾ|| ಸುರಪೂರ 3) ಸಂತೋಷ ತಂದೆ ಪಾಂಡು ಜಾಧವ ವ|| 32 ಜಾ|| ಲಂಬಾಣಿ ಉ|| ಕೂಲಿ ಸಾ|| ಏವೂರ ಸಣ್ಣ ತಾಂಡಾ ತಾ|| ಸುರಪೂರ 4) ಜೆಟ್ಟೆಪ್ಪ ತಂದೆ ನಿಂಗಪ್ಪ ಪೂಜಾರಿ ವ|| 27 ಜಾ|| ಕುರುಬರ ಉ|| ಕುರಿ ಕಾಯುವುದು ಸಾ|| ಏವೂರ ತಾ|| ಸುರಪೂರ 5) ರಾಜು ತಂದೆ ಜೆಟ್ಟೆಪ್ಪ ಹಿಪ್ಪರಗಿ ವ|| 33 ಜಾ|| ಕುರುಬರ ಉ|| ಒಕ್ಕಲುತನ ಸಾ|| ಏವೂರ ತಾ|| ಸುರಪೂರ 6) ಬಸವರಾಜ ತಂದೆ ಶಿವಪ್ಪ ಟಣಕೆದಾರ ವ|| 45 ಜಾ|| ಬೇಡರ ಉ|| ಒಕ್ಕಲುತನ ಸಾ|| ಏವೂರ ತಾ|| ಸುರಪೂರ ಇದ್ದು ಎಲ್ಲರ ಮಧ್ಯ ಕಣದಲ್ಲಿ 5500/- ರೂಪಾಯಿ ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 7.00 ಪಿಎಂ ದಿಂದ 8.00 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿತರು ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಮರಳಿ ಠಾಣೆಗೆ 8.30 ಪಿಎಮ್ ಕ್ಕೆ ಬಂದು ಈ ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ವರದಿಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 140/2022 ಕಲಂ 87 ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ಇತ್ತೀಚಿನ ನವೀಕರಣ​ : 13-09-2022 10:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080