ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-10-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 232/2021 ಕಲಂ ಮಹಿಳೆ ಕಾಣೆ : ಇಂದು ದಿನಾಂಕ 12/10/2021 ರಂದು 04.00 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀ ಹಣಮಂತ ತಂ. ಕೃಷ್ಣಪ್ಪ ಬಾಯಗೋಳ ವ|| 55 ವರ್ಷ ಉ|| ವ್ಯವಸಾಯ ಜಾ|| ಉಪ್ಪಾರ ಸಾ|| ದೋರನಳ್ಳಿ ತಾ|| ಶಹಾಪೂರ ಜಿ|| ಯಾದಗಿರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ತನ್ನ ಮೂರನೆ ಮಗಳಾದ ಅಂಬಿಕಾ ಇವಳಿಗೆ ಟೊಕಾಪೂರ ಗ್ರಾಮದ ಬೈಲಪ್ಪ ತಂ. ದೇವಿಂದ್ರಪ್ಪ ಪೂಜಾರಿ ವ|| 33 ಜಾ|| ಹಿಂದು ಉಪ್ಪಾರ ಇವನಿಗೆ ಮದುವೆ ಮಾಡಿಕೊಟ್ಟಿದ್ದು ಇವರಿಗೆ ಮಹೇಶ-9, ಮನೋಜ-5 ವರ್ಷದ ಮಕ್ಕಳಿದ್ದು, ಇವರು ಸುಮಾರು 1 ವರ್ಷದ ಹಿಂದೆ ಕೂಲಿ, ವ್ಯವಸಾಯ ಕೆಲಸ ಮಾಡಿಕೊಂಡು ನಮ್ಮೂರಿನಲ್ಲಿ ನಮ್ಮ ಮನೆಯಲ್ಲೆ ನನ್ನ ಮಗಳು ಮತ್ತು ಅಳಿ ಇದ್ದರು. ಹೀಗಿದ್ದು ದಿನಾಂಕ 02/10/2021 ನಮ್ಮ ಅಳಿಗೆ ಬೈಲಪ್ಪ ಈತನು ಟೋಕಾಪೂರಕ್ಕೆ ಹೋಗಿ ಬರುವದಾಗಿ ತಿಳಿಸಿ ಹೋದನು ನಂತರ ನನ್ನ ಮಗನಾದ ಲಕ್ಷ್ಮಣ ಇವನ ಹೆಂಡತಿ ಯಾದ ರೇಣುಕಾ ಇವಳಿಗೆ ಸರಕಾರಿ ಆಸ್ಪತ್ರೆ ಶಹಾಪೂರದಲ್ಲಿ ಹೆರಿಗೆ ಆಗಿದ್ದರಿಂದ ನನ್ನ ಮಗಳಾ ಅಂಬಿಕಾ ಕೂಡಾ ನಾನು ಶಹಾಪೂರ ಸರಕಾರಿ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಬೆಳಿಗ್ಗೆ 10.00 ಗಂಟೆಗೆ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಎಲ್ಲರಿಗೂ ಮಾತನಾಡಿಸಿ ಸಾಯಂಕಾಲ 7.00 ಗಂಟೆ ಸುಮಾರಿಗೆ ನಾವು ಎಲ್ಲರೂ ಅಲ್ಲೆ ಇದ್ದಾಗ ಆಸ್ಪತ್ರೆಯಿಂದ ಕಾಣೆಯಾಗಿರುತ್ತಾಳೆ ನಂತರ ನಾವು ಅವಳನ್ನು ಹುಡುಕಾಡಲಾಗಿ ಅಲ್ಲಿ ಕಾಣಲಿಲ್ಲ ಊರಿಗೆ ಹೋಗಿರ ಬಹುದು ಅಂತ ಸುಮ್ಮ ನಿದ್ದು ಬೆಳಿಗ್ಗೆ ಎದ್ದು ದೋರನಳ್ಳಿಗೆ ನನ್ನ ಮಕ್ಕಳಿಗೆ ಮತ್ತು ಟೋಕಾಪೂರಕ್ಕೆ ನನ್ನ ಅಳಿಯನಿಗೆ ಪೋನ ಮಾಡಿ ಕೇಳಲಾಗಿ ಅಂಬಿಕಾ ಇವಳು ಬಂದಿರುವದಿಲ್ಲ ಅಂತ ತಿಳಿಸಿದರು ನಂತರ ನಮ್ಮ ಸಂಬಂದಿಕರು ಇರುವ ಊರುಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ನನ್ನ ಮಗಳ ಇರುವಿಕೆ ಬಗ್ಗೆ ಮಾಹಿತಿ ಗೊತ್ತಾಗಲಿಲ್ಲ್ಲ. ಆಗಾಗ ನನ್ನ ಮಗಳ ಹತ್ತಿರ ನಮ್ಮೂರಿನ ಮಡಿವಾಳಪ್ಪ ತಂ ನರಸಪ್ಪ @ ಮರೆಪ್ಪ ಜೂಟೆರ ಸಲುಗೆಯಿಂದ ಮಾತನಾಡಿತ್ತಿದ್ದನು ಸದರಿಯವನ ಮೇಲೆ ಸಂಶಯ ಇರುತ್ತದೆ. ಕಾರಣ ಸರಕಾರಿ ಆಸ್ಪತ್ರೆ ಶಹಾಪೂರದಿಂದ ನನ್ನ ಮಗಳು ಶ್ರೀಮತಿ ಅಂಬಿಕಾ ಗಂ. ಬೈಲಪ್ಪ ಪೂಜಾರಿ ವ|| 30 ವರ್ಷ ಜಾ|| ಹಿಂದು ಉಪ್ಪಾರ ಉ|| ಮನೆಕೆಲಸ ಸಾ|| ಟೊಕಾಪೂರ ತಾ|| ಶಹಾಪೂರ ಇವಳನ್ನು ನಮ್ಮ ಸಂಬಂದಿಕರು ಇರುವ ಊರುಗಳಲ್ಲಿ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ಪಿಯರ್ಾದಿ ನೀಡುತ್ತಿದ್ದು ಕಾಣೆಯಾದ ನನ್ನ ಮಗಳ ಮೇಲೆ ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿ.
ಕಾಣೆಯಾದ ನನ್ನ ಮಗ ಚಹರೆ ಪಟ್ಟಿ ಈ ಕೇಳಗಿನಂತಿರುತ್ತವೆ.
ಹೆಸರು ಃ- ಶ್ರೀಮತಿ ಅಂಬಿಕಾ ಗಂ. ಬೈಲಪ್ಪ ಪೂಜಾರಿ
ವಯಸ್ಸು ಃ- 30
ಬಣ್ಣ ಃ- ಸಾದಕಪ್ಪು ಬಣ್ಣ
ಎತ್ತರ ಃ- 4.8 ಫೀಟ್ ಇದ್ದು.
ಭಾಷೆ ಃ- ಕನ್ನಡ
ಧರಿಸಿದ ಬಟ್ಟೆ ಃ- ಒಂದು ಬದಾಮಿ ಬಣ್ಣದ ಸೀರೆ ಮತ್ತು ಬದಾಮಿ ಬಣ್ಣದ ಬ್ಲೌಜ.
ಸದರಿ ಕಾಣೆಯಾದ ಮಗಳನ್ನು ಹುಡುಕಿಕೊಡಬೇಕೆಂದು ವಿನಂತಿ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 232/2021 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

 


ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ: 62/2021 ಕಲಂ: 41(ಡಿ), 102 ಸಿ ಆರ್ ಪಿ ಸಿ ಮತ್ತು 379 ಐಪಿಸಿ : ಇಂದು ದಿನಾಂಕ 12/10/2021 ರಂದು ನಾನು ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ಹಾಗೂ ಠಾಣೆಯ ಸಿಬ್ಬಂದಿಯವರಾದ ಯಲ್ಲಪ್ಪ ಹೆಚ್.ಸಿ-158, ಪ್ರಕಾಶ್ ಹೆಚ್.ಸಿ-143, ದೇವಿಂದ್ರಪ್ಪ ಪಿಸಿ-90, ವಿಶ್ವನಾಥ ಪಿಸಿ-319 ರವರೊಂದಿಗೆ ಇಂದು ದಿನಾಂಕ:12/10/2021 ರಂದು ಬೆಳಗಿನ ಜಾವ ಪೆಟ್ರೊಲಿಂಗ ಕರ್ತವ್ಯದಲ್ಲಿ ಇದ್ದಾಗ ಬೆಳಗಿನ ಜಾವ 5:30 ಗಂಟೆಯ ಸುಮಾರಿಗೆ ನಾರಾಯಣಪೂರ ಗ್ರಾಮದ ಕನಕದಾಸ ವೃತ್ತದ ಹತ್ತಿರ ಹೋಗುತ್ತಿರುವಾಗ ಎದರುನಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ಒಂದು ಹೆಚ್.ಎಪ್ ಡಿಲಕ್ಸ್ ಮೋಟರ ಸೈಕಲ್ದಲ್ಲಿ ಎದುರಿಗೆ ಬರುತ್ತಿದ್ದು, ನಮ್ಮ ಪೊಲೀಸ್ ಜೀಪನ್ನು ನೋಡಿದ ತಕ್ಷಣ ಮೋಟಾರ್ ಸೈಕಲ್ ಸವಾರನು ಗಾಬರಿಯಾಗಿ ಮೋಟಾರ್ ಸೈಕಲ್ನ್ನು ಮರಳಿ ತಿರುಗಿಸಿಕೊಂಡು ಛಾಯಾ ಭಗವತಿ ದೇವಸ್ಥಾನದ ಕಡೆಗೆ ಹೋಗಲು ಪ್ರಯತ್ನಿಸಿದ್ದು, ಆಗ ಸದರಿಯವನ ಮೇಲೆ ನಮಗೆ ಸಂಶಯ ಬಂದು ಸದರಿಯವನು ತನ್ನ ಮೋಟರ ಸೈಕಲ್ನ್ನು ತಿರುಗಿಸುವಷ್ಟರಲ್ಲಿ ನಮ್ಮ ಸಿಬ್ಬಂದಿಯವರಾದ ದೇವಂದ್ರಪ್ಪ ಪಿಸಿ-90 ಹಾಗೂ ಪ್ರಕಾಶ ಹೆಚ್-143 ರವರು ನಮ್ಮ ಜೀಪನಿಂದ ಕೆಳಗೆ ಇಳಿದು ಸದರಿಯವನನ್ನು ಹಿಡಿದುಕೊಂಡಿದ್ದು ನಂತರ ನಾನು ಸದರಿಯವನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರನ್ನು ಮಲ್ಲಪ್ಪ ಕಟ್ಟಿಮನಿ ಸಾ:ತಾಳಿಕೋಟಿ, ಬೀಮಪ್ಪ ಮಾವಿನಮಟ್ಟಿ ಸಾ:ಕೆಂಭಾವಿ ಅಂತಾ ಗೊಂದಲಮಯವಾಗಿ ಹೇಳ ಹತ್ತಿದನು. ಸದರಿಯವನಿಗೆ ಪುನಹ ಹೆಸರನ್ನು ವಿಚಾರಿಸಲು ತನ್ನ ನಿಜವಾದ ಹೆಸರು. ಮೌನೇಶ ತಂದೆ ಗುರಣ್ಣ ಬಡಿಗೇರ ವ:30 ವರ್ಷ ಉ:ಕೂಲಿ ಜಾ:ಹಿಂದು ಬಡಿಗೇರ ಸಾ: ಬಿಳೆಬಾವಿ ತಾ:ತಾಳಿಕೊಟಿ ಅಂತಾ ತಿಳಿಸಿದನು. ಸದರಿಯವನಿಗೆ ಈ ಮೋಟಾರ ಸೈಕಲ್ ಯಾರದು ಅಂತಾ ವಿಚಾರಿಸಲು ನಂದೇ ಇರುತ್ತದೆ ಅಂತಾ ತಿಳಿಸಿದನು. ನಂತರ ನಾನು ಮೋಟರ ಸೈಕಲ್ ಕಾಗದ ಪತ್ರಗಳನ್ನು ಕೇಳಲಾಗಿ ಆಗ ಸದರಿಯವನು ಇದು ಕಳ್ಳತನ ಮಾಡಿದ ಮೋಟಾರ್ ಸೈಕಲ್ ಇರುತ್ತದೆ. ನಾನು ಸದರಿ ಮೊಟರ ಸೈಕಲನ್ನು ಮುದ್ದೆಬಿಹಾಳ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದನ್ನು ದಿನಾಂಕ:01/10/2021 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಕಳವುಮಾಡಿಕೊಂಡು ಬಂದು. ನಮ್ಮ ಮನೆಯಲ್ಲಿಟ್ಟುಕೊಂಡು. ಇಂದು ಈ ಕಡೆಗೆ ಮಾರಟ ಮಾಡಲು ಬರುತ್ತಿರುವಾಗ ನೀವು ನನಗೆ ಹಿಡಿದುಕೊಂಡಿರುತ್ತಿರಿ ಅಂತಾ ತಿಳಿಸಿದ್ದು ನಂತರ ಸದರಿಯವನನ್ನು ವಶಕ್ಕೆ ತಗೆದುಕೊಂಡು ಪಂಚರಾದ ಲಂಕೇಶ ತಂದೆ ನಿಂಗಯ್ಯ ಗುತ್ತೆದಾರ ಹಾಗೂ ಕೃಷ್ಣಾ ತಂದೆ ಭೀಮಪ್ಪ ರಾಠೊಡ ರವರ ಸಮಕ್ಷಮದಲ್ಲಿ 6:30 ಎ.ಎಂ ದಿಂದ 7:30 ಎ.ಎಂ ದ ವರೆಗೆ ಜಪ್ತಿ ಪಂಚನಾಮೆ ಮೂಲಕ ಸದರಿ ಮೋಟರ ಸೈಕಲನ್ನು ಜಪ್ತು ಪಡಿಸಿಕೊಂಡು 8:00 ಎ.ಎಂ ಕ್ಕೆ ಮರಳಿ ಠಾಣೆಗೆ ಬಂದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 62/2021 ಕಲಂ 41(ಡಿ), 102 ಸಿ ಆರ್ ಪಿ ಸಿ ಮತ್ತು 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ, 148/2021 ಕಲಂ: 143, 147, 148, 323, 324, 307, 308, 336, 354, 448, 395,504,506 ಸಂಗಡ 149 ಐಪಿಸಿ : ಇಂದು ದಿನಾಂಕ 12/10/2021 ರಂದು 2.15 ಪಿಎಂ ಕ್ಕೆ ಅಜರ್ಿದಾರರಾದ ಶ್ರೀ ಚಿದಾನಂದ ತಂದೆ ಸಿದ್ದಪ್ಪ ಪೂಜಾರಿ ವಯಾ|| 36 ಜಾ|| ಕುರುಬರ ಉ|| ಒಕ್ಕಲುತನ ಸಾ|| ಅಗತೀರ್ಥ ತಾ|| ಹುಣಸಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿದ ಒಂದು ಅಜರ್ಿಯನ್ನು ತಂದೆ ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಮ್ಮೂರ ಬಾಬುಗೌಡ @ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್ ಇವರು ನಮ್ಮೂರಲ್ಲಿ ಎಲ್ಲರೂ ಅವರು ಹೇಳಿದಂತೆ ನಡೆದುಕೊಳ್ಳಬೇಕು ಅವರ ಮಾತಿಗೆ ವಿರುದ್ದವಾಗಿ ನಡೆದುಕೊಂಡರೆ ಅವರ ಮಾತಿಗೆ ಎದುರಾದವರಿಗೆ ಗುಂಪು ಕಟ್ಟಿಕೊಂಡು ಹಲವಾರು ಜನರೊಂದಿಗೆ ಬಂದು ದೌರ್ಜನ್ಯ ಮಾಡಿ ಭಯ ಹಾಕುತ್ತಾ ಬಂದಿರುತ್ತಾರೆ. ಅದರಂತೆ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಾನು ನನಗೆ ತಿಳಿದಂತೆ ಒಂದು ಪಕ್ಷದಲ್ಲಿ ಗುರುತಿಸಿಕೊಂಡು ಮತ ಚಲಾಯಿಸಿದ್ದು ನಮ್ಮೂರ ಸಾಹೇಬಗೌಡರು ಆ ಸಮಯದಲ್ಲಿ ನನಗೆ ಯಾಕೋ ನಮ್ಮ ಕಡೆಯ ವ್ಯಕ್ತಿಗೆ ಮತ ಹಾಕಿಲ್ಲ ಅಂತಾ ಬಾಯಿ ಮಾತಿನ ಜಗಳ ಮಾಡಿ ಅಂದಿನಿಂದ ಇಂದಿನವರೆಗೂ ಹಗೆತನ ಸಾಧಿಸುತ್ತಾ ಬಂದಿದ್ದರು. ಹೀಗಿದ್ದು ನಿನ್ನೆ ದಿನಾಂಕ 11/10/2021 ರಂದು ರಾತ್ರಿ 9.00 ಗಂಟೆಯ ಸುಮಾರಿಗೆ ನಾನು ಊಟ ಮಾಡಿ ನಮ್ಮ ಮನೆಯಲ್ಲಿ ಮಲಗಿಕೊಂಡಿದ್ದೆನು. ಅದೇ ಸಮಯಕ್ಕೆ ನಮ್ಮೂರ 1)ಬಾಬುಗೌಡ@ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್, 2) ಬಸನಗೌಡ@ ರಾಮನಗೌಡ ತಂದೆ ಸಂಗನಗೌಡ ಪಾಟೀಲ್, 3) ಮಲ್ಲನಗೌಡ ತಂದೆ ಶಾಂತಗೌಡ ಪಾಟೀಲ್, 4) ಸಂಗನಗೌಡ ತಂದೆ ಬಸವಂತ್ರಾಯಗೌಡ ಪಾಟೀಲ್, 5) ಮೌನೇಶ ತಂದೆ ಪರಸಪ್ಪ ಶಖಾಪೂರ, 6) ರಮೇಶ ತಂದೆ ಹಳ್ಳೆಪ್ಪ ಓತಿಹಾಳ ಸಾ|| ಎಲ್ಲರೂ ಅಗತೀರ್ಥ ಹಾಗೂ 7) ಜಗನ್ನಾಥ ತಂದೆ ಚಂದ್ರಕಾಂತ ಮನ್ನೂರ, 8) ಶಿವಲಿಂಗಯ್ಯ ತಂದೆ ಶಾಂತಯ್ಯ ಹಿರೇಮಠ ಸಾ|| ಇಬ್ಬರೂ ಅಗ್ನಿ ಗ್ರಾಮ ಇದ್ದು ಇವರೆಲ್ಲರೂ ಕೂಡಿ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು, ಬಡಿಗೆ, ಕಬ್ಬಿಣದ ರಾಡು ಹಿಡಿದುಕೊಂಡು ನಮ್ಮ ಮನೆಗೆ ಬಂದವರೆ ಎಲೇ ಚಿದ್ಯಾ ಸೂಳೆ ಮಗನೇ ಮನೆಯಲ್ಲಿ ಏನು ಮಾಡತೀ ಹೊರಗೆ ಬಾರಲೇ ಮಗನೇ ನೀನು ನನ್ನ ವಿರುದ್ದ ರಾಜಕೀಯ ಮಾಡುವಷ್ಟು ಸೊಕ್ಕು ಬಂದಿದೆಯಾ ಮಗನೇ ಅನ್ನುತ್ತಾ ಎಲ್ಲರೂ ನಮ್ಮ ಮನೆಯ ಒಳಗೆ ನುಗ್ಗಿ ಬೈಯುತ್ತಿದ್ದಾಗ ನಾನು ಎದ್ದು ಬಂದು ಯಾಕರೀ ಗೌಡರೆ ಏನಾಯಿತು ನಾನು ಏನು ಮಾಡೀನಿ ಅಂತಾ ಕೇಳಿದ್ದಕ್ಕೆ ಒಮ್ಮೆಲೇ ಸಾಹೇಬಗೌಡನು ಕೊಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆ ಹಿಡಿದು ಕೈಯಿಂದ ಹಿಚುಕಿ ಮಗನೇ ಚಿದ್ಯಾ ನೀನು ಇವತ್ತು ನಮ್ಮ ಕೈಯಾಗ ಸಿಕ್ಕೀದಿ ಅಂದ್ರ ನಿನಗ ಬಿಡಲ್ಲ ಅಂತಾ ಕತ್ತು ಹಿಚುಕಿ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾಗ ನಮ್ಮ ಅಣ್ಣನಾದ ಶಿವಲಿಂಗಪ್ಪ ಪೂಜಾರಿ ಇವರು ಬಂದು ನನಗೆ ಕುತ್ತಿಗೆ ಹಿಚುಕುತ್ತಿರುವುದನ್ನು ಬಿಡಿಸಿಕೊಂಡನು. ಆಗ ನಾನು ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಮಲ್ಲನಗೌಡನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಜೋರಾಗಿ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ರಾಮನಗೌಡನು ರಾಡಿನಿಂದ ನನ್ನ ಬಲಗಾಲಿನ ತೊಡೆಗೆ ಹೊಡೆದು ಗುಪ್ತಗಾಯ ಮಾಡಿದನು. ನಂತರ ಉಳಿದ ಎಲ್ಲರೂ ನನಗೆ ಕೈಯಿಂದ ಹೊಡೆಯುತ್ತಿದ್ದಾಗ ಮನೆಯಲ್ಲಿದ್ದ ನನ್ನ ಹೆಂಡತಿಯಾದ ಶ್ರೀದೇವಿ ಗಂಡ ಚಿದಾನಂದ ಇವಳು ಬಿಡಿಸಿಕೊಳ್ಳಲು ಬಂದಾಗ ಅವಳಿಗೆ ಸಂಗನಗೌಡನು ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಆಗ ನಮ್ಮ ಅಣ್ಣನು ಬಿಡಿಸಿಕೊಂಡಿದ್ದು, ನಮಗೆ ಹೊಡೆಯುತ್ತಿದ್ದಾಗ ನಾವು ಭಯ ಬಿದ್ದು ಮನೆಯ ಒಳಗೆ ಹೋಗುತ್ತಿದ್ದಾಗ ನಮಗೆ ಮನೆಯಿಂದ ಹೊರಗೆ ದಬ್ಬಿ ಅವರೆಲ್ಲರೂ ಮನೆಯ ಒಳಗಡೆ ನುಗ್ಗಿ ನನಗೆ ಒಬ್ಬನಿಗೆ ದಬ್ಬಿಕೊಂಡು ಬೆಡ್ ರೂಮಿನಲ್ಲಿ ಕರೆದುಕೊಂಡು ಹೋಗಿ ನನ್ನ ಜೇಬಿನಲ್ಲಿದ್ದ 50000/-(ಐವತ್ತು ಸಾವಿರ) ರೂಪಾಯಿ ಕಸಿದುಕೊಂಡು ಕೇಕೆ ಹಾಕುತ್ತಾ ಬಿಡಬ್ಯಾಡರೀ ಈ ಸೂಳೆ ಮಕ್ಕಳಿಗೆ ಅನ್ನುತ್ತಾ ಹೊಡೆಯುತ್ತಿರುವ ಸಪ್ಪಳ ಕೇಳಿ ಸಿದ್ದನಗೌಡ ತಂದೆ ಗೌಡಪ್ಪಗೌಡ ಬಿರಾದಾರ ಮತ್ತು ರಮೇಶ ತಂದೆ ಗೌಡಪ್ಪಗೌಡ ಬಿರಾದಾರ ಇವರು ಬಂದು ಜಗಳ ಬಿಡಿಸಿದರು. ಆಗ ಅವರೆಲ್ಲರೂ ಇವತ್ತು ಉಳಿಸೀವಿ ಈ ಮಕ್ಕಳಿಗೆ ಇನ್ನೊಮ್ಮೆ ನಮ್ಮ ವಿರುದ್ದ ರಾಜಕೀಯ ಮಾಡಿದರೆ ಖಲಾಸ ಮಾಡಿ ಬಿಡೋಣ ಅನ್ನುತ್ತಾ ಮನೆಯ ಮುಂದೆ ರೋಡಿನಲ್ಲಿ ನಿಂತು ನಾವು ಮನೆಯಲ್ಲಿದ್ದ ಸಲುವಾಗಿ ನಮಗೆ ಹಾನಿ ಮಾಡುವ ಸಲುವಾಗಿ ಮನೆಯ ಮೇಲೆ ಕಲ್ಲು ತೂರಾಟ ಮಾಡಿದರು, ಅದರಲ್ಲಿ ಒಂದು ಕಲ್ಲು ನಮ್ಮ ಅಣ್ಣನಿಗೆ ಬಡಿದು ಗುಪ್ತಗಾಯವಾಗಿದ್ದು ಇರುತ್ತದೆ. ನಾವು ರಾತ್ರಿ ಸಮಯದಲ್ಲಿ ಠಾಣೆಗೆ ದೂರು ನೀಡಲು ಬಂದರೆ ಮತ್ತೆ ನಮಗೆ ಹೊಡೆಯಬಹುದು ಅಂತಾ ಅಂಜಿ ಮನೆಯಲ್ಲಿಯೇ ಇದ್ದು ಇಂದು ದಿನಾಂಕ 12/10/2021 ರಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿಯನ್ನು ನೀಡಿದ್ದು ನಮಗೆ ಕತ್ತು ಹಿಚುಕಿ ಕೊಲೆ ಮಾಡಲು ಪ್ರಯತ್ನಿಸಿ, ಕಲ್ಲು ಬಡಿಗೆ, ರಾಡಿನಿಂದ ಹೊಡೆದು ಗುಪ್ತಗಾಯ ಮಾಡಿ, ಜಗಳ ಬಿಡಿಸಲು ಬಂದ ನನ್ನ ಪತ್ನಿಗೆ ಮಾನಭಂಗ ಮಾಡಲು ಪ್ರಯತ್ನಿಸಿ ನನ್ನ ಹತ್ತಿರವಿದ್ದ 50 ಸಾವಿರ ರೂಪಾಯಿ ಕಸಿದುಕೊಂಡು ನಮ್ಮ ಮೇಲೆ ಹಾಗೂ ಮನೆಯ ಮೇಲೆ ಕಲ್ಲು ತೂರಾಟ ಮಾಡಿ ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ 8 ಜನರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ಫಿರ್ಯಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 148/2021 ಕಲಂ 143, 147, 148, 448, 323, 324, 354, 336, 307, 308, 395, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 76/2021 ಕಲಂ. 279, 337 338 ಐಪಿಸಿ : ದಿ:10/10/2021 ರಂದು ಸಾಯಂಕಾಲ 3.30 ಗಂಟೆಯ ಸುಮಾರಿಗೆ ಫಿರ್ಯಾದಿ ಹಾಗೂ ಗಾಯಾಳು ಕೂಡಿ ಕಚಕನೂರ ಗ್ರಾಮದ ವಾಲ್ಮಿಕಿ ಚೌಕ್ ಹತ್ತಿರ ಹೊರಟಾಗ ಆರೋಪಿತನು ತನ್ನ ಮಾಲೀಕನ ಮೋಟಾರ್ ಸೈಕಲ್ ಕೆಎ-33 ಎಕ್ಸ್-1402 ನೇದ್ದನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗಾಯಾಳುವಿಗೆ ಹಿಂದಿನಿಂದ ಜೊರಾಗಿ ಡಿಕ್ಕಿ ಕೊಟ್ಟಿದ್ದು, ಗಾಯಾಳುವಿಗೆ ಎಡಗಡೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಕೆಳಗೆ ಬಿದ್ದಿದ್ದು, ಎಡಗಾಲ ತೊಡೆಯಲ್ಲಿ ಕಾಲು ಮುರಿದಿದ್ದು, & ಎಡಗೈ ಮುಂಗೈ ಹತ್ತಿರ ಮುರಿದಿದ್ದು ಇರುತ್ತದೆ. ನಂತರ ಫಿರ್ಯಾದಿ ಹಾಗೂ ಗಾಯಾಳುವಿಗೆ ಕರೆದುಕೊಂಡು ಒಂದು ಖಾಸಗಿ ವಾಹನದಲ್ಲಿ ಹುಣಸಗಿ ಬಂದು ಖಾಸಗಿ ಆಸ್ಪತ್ರೆಗೆ ತೋರಿಸಿ ನಂತರ ಹೆಚ್ಚಿನ ಉಪಚಾರಕ್ಕೆಂದು ವಿಜಯಪೂರ ಭಾಗ್ಯವಂತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಕೈಗೆ ಶಸ್ತ್ರ ಚಿಕಿತ್ಸೆ ಮಾಡಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ ಬಗ್ಗೆ ದೂರು ಇದೆ.

ಇತ್ತೀಚಿನ ನವೀಕರಣ​ : 13-10-2021 10:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080