ಅಭಿಪ್ರಾಯ / ಸಲಹೆಗಳು

                                                              ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-11-2021
ಶಹಾಪೂರ ಪೊಲೀಸ ಠಾಣೆ
238/2021 ಕಲಂ. 143, 147, 148, 323, 324, 504, 506, ಸಂಗಡ 149 ಐ.ಪಿ.ಸಿ. : ಇಂದು ದಿನಾಂಕ:12-11-2021 ರಂದು 1:00 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಚನ್ನಪ್ಪ ತಂದೆ ಹಣಮಂತ ಕೂಲೇರ ವಯ:37 ವರ್ಷ ಜಾ: ಬೇಡರ ಉ: ಕೂಲಿ ಕೆಲಸ ಸಾ:ಹತ್ತಿಗೂಡೂರ ತಾ: ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ, ನಿನ್ನೆ ದಿನಾಂಕ: 11-11-2021 ರಂದು ನಮ್ಮ ಅಣ್ಣನ ಮಗನಾದ ಸಂತೋಷ ತಂದೆ ಮಾನಯ್ಯ ಕೂಲೇರ ಈತನು ಸಾಯಂಕಾಲ 7:00 ಗಂಟೆ ಸುಮಾರಿಗೆ ತನ್ನ ಮೊಟಾರ ಸೈಕಲ್ ಮೇಲೆ ಹೊರಟಾಗ ನಂದಳ್ಳಿ ದಾರಿಯಲ್ಲಿ ಹೊರಟಾಗ ನಮ್ಮ ಜನಾಂಗದ ನಮ್ಮ ಸಂಭಂದಿಕ ಮಲ್ಲಿಕಾಜರ್ುನ ತಂದೆ ಬಸಪ್ಪ ಕೊಳ್ಳೂರ ರವರ ಮಗಳಾದ ನಾಗಮ್ಮ ಎಂಬುವವಳಿಗೆ ಮೊಟಾರ ಸೈಕಲ್ ಮೈಮೇಲೆ ಬಂದಂತೆ ನಡೆಸಿಕೊಂಡು ಹೋಗಿದ್ದು ಸದರಿ ಇಷಯ ತಿಳಿದು ನಮ್ಮ ಅಣ್ಣನ ಮಗ ಸಂತೋಷನಿಗೆ ಅವಳ ಸಂಭಂದಿಕರು ಮತ್ತು ನಾವು ಕೂಡಿ ಬೈದು ಬುದ್ದಿವಾದ ಹೇಳಿದ್ದೆವು. ಆ ಸಮಯದಲ್ಲಿ ಎರಡೂ ಮನೆಯವರ ನಡುವೆ ಬಾಯಿಮಾತಿನ ತಕರಾರು ಆಗಿತ್ತು. ನಂತರ ಇಂದು ದಿನಾಂಕ: 12-11-2021 ರಂದು ಮುಂಜಾನೆ 7:00 ಗಂಟೆಗೆ ನಾನು ನಮ್ಮ ಅಣ್ಣನಾದ ಭೀಮರಾಯ ತಂದೆ ಹಣಮಂತ ಕೂಲೇರ, ನಮ್ಮ ಅಣ್ಣನ ಮಕ್ಕಳಾದ ಸಂತೋಷ ತಂದೆ ಮಾನಯ್ಯ ಕೂಲೇರ, ಆಕಾಶ ತಂದೆ ಮಾನಯ್ಯ ಕೂಲೇರ, ಮತ್ತು ನಮ್ಮ ತಮ್ಮನಾದ ಶಿವರಾಜ ತಂದೆ ಹಣಮಂತ ಕೂಲೇರ ಎಲ್ಲರೂ ಮನೆಯಲ್ಲಿದ್ದಾಗ ನಮ್ಮೂರ 1) ಮಾನಯ್ಯ ತಂದೆ ರಾಮಣ್ಣ ಹಳ್ಳಿಗೌಡರ 2) ವೆಂಕಟೇಶ ತಂದೆ ರಾಮಣ್ಣ ಹಳ್ಳಿಗೌಡರ 3) ಅಂಬ್ರೇಶ ತಂದೆ ರಾಮಣ್ಣ ಹಳ್ಳಿಗೌಡರ, 4) ರಾಮಣ್ಣ ತಂದೆ ನಂದಪ್ಪ ಹಳ್ಳಿಗೌಡರ ಮತ್ತು 5) ಮಲ್ಲಿಕಾಜರ್ುನ ತಂದೆ ಬಸಪ್ಪ ಕೊಳ್ಳೂರ ಮತ್ತು 6) ದೇವಮ್ಮ ಗಂಡ ಮಲ್ಲಿಕಾಜರ್ುನ ಕೊಳ್ಳೂರ ಎಲ್ಲರೂ ಕೂಡಿ ತಮ್ಮ ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಏ ಸೂಳೆ ಮಕ್ಕಳೆ ಎಲ್ಲಿದ್ದಾನೆ ಸಂತ್ಯಾ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಮ್ಮ ತಮ್ಮನಾದ ಶಿವರಾಜನು ಏಕೆ ಒದರಾಡುತ್ತೀರಿ ಕುಳಿತು ಮಾತನಾಡೋಣ ಇದು ಸರಿಯಲ್ಲ ಎಂದು ಹೇಳಿದನು. ಆಗ ಅವರೆಲ್ಲರೂ ಹೊಡಿರೆಲೇ ಈ ಸೂಳಿ ಮಕ್ಕಳೇ ಮಕ್ಕಳಿಗೆ ಅಂತಾ ಅಂದು ಎಲ್ಲರೂ ಕೂಡಿ ತಮ್ಮ ಕೈಯಲ್ಲಿನ ಕಲ್ಲುಗಳಿಂದ ನಮಗೆ ಹೊಡೆದಿದ್ದು ಮಾನಯ್ಯ ತಂದೆ ರಾಮಣ್ಣ ಹಳ್ಳಿಗೌಡರ ಈತನು ನಮ್ಮ ತಮ್ಮನಾದ ಶಿವರಾಜನಿಗೆ ತನ್ನ ಕೈಯಲ್ಲಿನ ಕಲ್ಲು ತೆಗೆದುಕೊಂಡು ಮೂಗಿಗೆ ಹೊಡೆದನು. ವೆಂಕಟೇಶ ತಂದೆ ರಾಮಣ್ಣ ಹಳ್ಳಿಗೌಡರ ಈತನು ಶಿವರಾಜನಿಗೆ ಹಿಂದಿನಿಂದ ಕಲ್ಲಿನಿಂದ ತಲೆಗೆ ಹೊಡೆದಿದ್ದು ಅದು ಕಿವಿಗೆ ತಾಕಿದ್ದು ಶಿವರಾಜನು ಕೆಳಗೆ ಬಿದ್ದು ರಕ್ತಗಾಯವಾಗಿ ಕಿವಿಯಲ್ಲಿ ರಕ್ತ ಬರುತ್ತಿತು. ಅಂಬ್ರೇಶನು ಬಡಿಗೆಯಿಂದ ನನಗೆ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಕಾಲಿಗೆ ಹೊಡೆದು ಗುಪ್ತಗಾಯ ಮಾಡಿದನು. ರಾಮಣ್ಣ ತಂದೆ ನಂದಪ್ಪ ಈತನು ಆಕಾಶನಿಗೆ ಹೊಡೆದಿದ್ದಾನೆ . ಮಲ್ಲಿಕಾಜರ್ುನನು ನಮ್ಮ ಅಣ್ಣನ ಮಗನಾದ ಸಂತೋಷನಿಗೆ ಬಡಿಗೆಯಿಂದ ಹೊಡೆದು ಕಾಲಿಗೆ ಗುಪ್ತಗಾಯ ಮಾಡಿರುತ್ತಾನೆ. ಆಗ ನಾನು ಮತ್ತು ನಮ್ಮ ಮನೆಯ ಹೆಣ್ಣುಮಕ್ಕಳಾದ ಮಲ್ಲಮ್ಮ ಗಂಡ ಮಾನಯ್ಯ ಮಾಸ್ತಿ, ಲಕ್ಷ್ಮೀ ಗಂಡ ಮಾನಪ್ಪ ಕೂಲೇರ ಕೂಡಿ ನಮಗೆ ಹೊಡೆಯುವುದನ್ನು ಬಿಡಿಸಿಕೊಂಡಿರುತ್ತೇವೆ. ದೇವಮ್ಮು ನಮ್ಮ ಅತ್ತಿಗೆ ಲಕ್ಷ್ಮೀ ಇವಳಿಗೆ ಕೈಯಿಂದ ಹೊಡೆದಿದ್ದಾಳೆ ಆಗ ಮಾನಯ್ಯ ಹಳ್ಳಿಗೌಡರ ಈತನು ಮಕ್ಕಳೆ ಇವತ್ತು ಉಳಿದೀರಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ನಮ್ಮ ಕೈಯಲ್ಲಿದೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ . ಜಗಳದಲ್ಲಿ ಅವರಿಗೂ ಗಾಯಗಳಾಗಿವೆ. ಗಾಯಗೊಂಡ ನಮ್ಮ ಶಿವರಾಜನಿಗೆ ಶಹಾಪುರದ ಸರಕಾರಿ ಆಸ್ಪತ್ರಗೆ ತಂದೆ ಸೇರಿಕೆ ಮಾಡಿರುತ್ತೇವೆ. ಆದ್ದರಿಂದ ಚಿಕ್ಕ ವಿಷಯಕ್ಕಾಗಿ ಮೇಲಿನ 6 ಜನರು ಕೂಡಿ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ನಮ್ಮ ಮನೆಯ ಮುಂದೆ ಬಂದು ನನಗೆ ನಮ್ಮ ಮನೆಯವರಿಗೆ ಹೊಡೆದು ಗಾಯ ಮಾಡಿ ಜೀವದ ಬೆದರಿಕೆ ಹಾಕಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.238/2021 ಕಲಂ. 143, 147, 148, 323, 324, 504, 506, ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

 


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 239/2021.ಕಲಂ, 143,147,148,323,324,504,506ಸಂ,149. ಐ.ಪಿ.ಸಿ. : ಮಾನ್ಯರೆ ಇಂದು ದಿನಾಂಕ 12/11/2021 ರಂದು ಮದ್ಯಾಹ್ನ 14-30 ಗಂಟೆಗೆ ಪಿಯರ್ಾದಿ ಶ್ರೀಮತಿ, ಹಣಮಂತಿ ಗಂಡ ರಾಮಣ್ಣ ಹಳ್ಳಿಗೌಡರ್ ವ|| 58 ವರ್ಷ, ಜಾ|| ಬೇಡರ ಉ|| ಮನೆಕೆಲಸ ಸಾ|| ಹತ್ತಿಗುಡೂರ ತಾ|| ಶಹಾಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ೀ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ. ಹೀಗಿದ್ದು ದಿನಾಂಕ 11/11/2021 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ನಮ್ಮೂರ ನಂದೇಳ್ಳಿ ರೋಡಿನ ಪಕ್ಕದಲ್ಲಿ ಇರುವ ದಗರ್ಾದ ಹ್ತತಿರ ನನ್ನ ಮೊಮ್ಮಗಳು ನಾಗಮ್ಮ ತಂದೆ ಮಲ್ಲಿಕಾಜರ್ುನ ಮಾಸ್ತಿ ಇವಳು ನಡೆದುಕೊಂಡು ತಮ್ಮ ಮನೆಯ ಕಡೆಗೆ ಹೊಗುತ್ತಿರುವಾಗ ನಮ್ಮ ಅಣ್ಣತಮಕಿಯ ಸಂತೋಷ ತಂದೆ ಮಾನಪ್ಪ ಕೂಲೇರ ಈತನು ತಮ್ಮ ಮೋಟರ್ ಸೈಕಲ್ನ್ನು ಒಮ್ಮಲೇ ನಾಗಮ್ಮಳ್ಳ ಮೇಲೆ ತಂದ ಹಾಗೆ ಮಾಡಿದಾಗ ನಾಗಮ್ಮಳು ಯಾಕೊ ಸಂತೋಷ ಮೈಮ್ಯಾಲೆ ಮೋಟರ್ ಸೈಕಲ್ ತರತ್ತಿಯಲ್ಲ ಅಂದಾಗ ಇಬ್ಬರಿಗು ಬಾಯಿ ಮಾತಿನ ತಕರಾರು ಆಗಿದ್ದು ಇರುತ್ತದೆ. ಅಂತ ನಾಗಮ್ಮಳು ಮನೆಗೆ ಬಂದು ನಮಗೆ ತಿಳಿಸಿದ್ದು. ನಾವು ಮುಂಜಾನೆ ವಿಚಾರ ಮಾಡಿದರಾಯಿತು ಅಂತ ಹೇಳಿ ಸುಮ್ಮನಾಗಿದ್ದೆವು. ಹೀಗಿದ್ದು ದಿನಾಂಕ 12/11/2021 ರಂದು ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡನಾದ ರಾಮಣ್ಣ ತಂದೆ ನಂದಪ್ಪ ಹಳ್ಳಿಗೌಡರ, ನನ್ನ ಮಕ್ಕಳಾದ ವೆಂಕಟೇಶ ತಂದೆ ರಾಮಣ್ಣ ಹಳ್ಳಿಗೌಡರ, ಮಾನಯ್ಯ ತಂದೆ ರಾಮಣ್ಣ ಹಳ್ಳಿಗೌಡರ, ನನ್ನ ಮಗಳು ದೇವಮ್ಮ ಗಂಡ ಮಲ್ಲಿಕಾಜರ್ುನ್ ಮಾಸ್ತಿ ನನ್ನ ಮೊಮ್ಮಗಳು ನಾಗಮ್ಮ ತಂದೆ ಮಲ್ಲಿಜಾರ್ಉನ್ ಮಾಸ್ತಿ, ನನ್ನ ಅಳಿಯ ಮಲ್ಲಿಕಾಜರ್ುನ್ ತಂದೆ ಬಸಪ್ಪ ಮಾಸ್ತಿ, ಎಲ್ಲರು ಕೂಡಿ ಸಂತೋಷ ತಂದೆ ಮಾನಪ್ಪನ ಮನೆಗೆ ಕೆಳಲು ಹೋದಾಗ ಸಂತೋಷನ ಮನೆಯ ಹತ್ತಿರ ಹೊಗಿ ನನ್ನ ಗಂಡ ರಾಮಣ್ಣನು ಯಾಕೊ ಸಂತೋಷ ನಿನ್ನೆ ನಾಗಮ್ಮಳ ಮೈಮೇಲೆ ಮೋಟರ್ ಸೈಕಲ್ ತಂದಹಾಗೆ ಮಾಡಿ ತಕರಾರು ಮಾಡಿದ್ದಿ ಅಂತ ಕೇಳಿದಾಗ ಅಲ್ಲೆ ನಿಂತಿದ್ದ 1] ಮಹೇಶ ತಂದೆ ಮಾನಪ್ಪ ಕೂಲೇರ, 2] ಸಂತೋಷ ತಂದೆ ಮಾನಪ್ಪ ಕೂಲೇರ 3] ಶಿವಪ್ಪ ತಂದೆ ಹಣಮಂತ ಕೂಲೆರ, 4] ಚೆನ್ನಪ್ಪ ತಂದೆ ಹಣಮಂತ ಕೂಲೇರ, 5] ಭೀಮರಾಯ ತಂದೆ ಹಣಮಂತ ಕೂಲೇರ 6] ಮಾನಪ್ಪ ತಂದೆ ಹಣಮಂತ ಕೂಲೇರ, 7] ಮಲ್ಲಮ್ಮ ಗಂಡ ಮಾನಪ್ಪ ಮಾಸ್ತಿ, 8] ಲಕ್ಷ್ಮೀ ಗಂಡ ಮಾನಪ್ಪ ಕೂಲೇರ, ಇವರೆಲ್ಲರು ಕೂಡಿಕೊಂಡು ಕೈಯಲ್ಲಿ ಬಡಿಗೆ ಹಿಡಿದುಕೊಂಡು ನಮ್ಮ ಹತ್ತಿರ ಬಂದವರೆ ನಮಗೆಲ್ಲರಿಗು ಸೂಳಿ ಮಕ್ಕಳೆ ನಿನ್ನೆ ನಾಗಮ್ಮಳ್ಳೊಂದಿಗೆ ನಮ್ಮ ಸಂತೋಷ ತಕರಾರು ಮಾಡಿದ್ದಕ್ಕೆ ಕೆಳಲು ಬಂದಿರೆನು ಅಂತ ಅವಾಶ್ಚವಾಗಿ ಬೈದರು. ಅವರಲ್ಲಿ ಮಹೇಶ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಗಂಡನಾದ ರಾಮಣ್ಣನ ತಲೆಗೆ, ಎಡಗಡೆ ಹಣೆಗೆ ಹೋಡೆದು ರಕ್ತಗಾಯ ಮಾಡಿದನು. ಅದೆ ಬಡಿಗೆಯಿಂದ ಬಲಗೈ ಮೋಳಕೈಗೆ ಹೊಡೆದು ಗುಪ್ತಗಾಯ ಮಾಡಿದನು. ಶಿವಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ವೆಂಕಟೇಶನ ಎಡಗಡೆ ತಲೇಗೆ, ಎಡಗಡೆ ಕಣ್ಣಿನ ಹತ್ತಿರ ಹೋಡೆದು ರಕ್ತಗಾಯ ಮಾಡಿದನು. ತನ್ನ ಕೈಯಿಂದ ವೆಂಕಟೇಶನ ಎದೆಗೆ ಗುದ್ದಿ ಗುಪ್ತಗಾಯ ಮಾಡಿದನು. ಸಂತೋಷನು ಅಲ್ಲೆ ಬಿದ್ದಿದ್ದ ಕುರಿಪಿಯನ್ನು ತೆಗೆದುಕೊಂಡು ಮಾನಯ್ಯನ ಎಡಗೈ ಉಂಗುರ ಬೆರಳಿಗೆ ಮತ್ತು ಕಿರಿಬೆರಳಿನ ಮದ್ಯೆ ಹೋಡೆದು ರಕ್ತಗಾಯ ಮಾಡಿದನು. ಚೆನ್ನಪ್ಪ ಮತ್ತು ಭೀಮರಾಯ, ಹಾಗೂ ಮಾನಪ್ಪ, ಮೂರು ಜನರು ಕೂಡಿ ಮಾನಯ್ಯನಿಗೆ ನೆಲಕ್ಕೆ ಹಾಕಿ ತಮ್ಮ ಕಾಲಿನಿಂದ ಬಲಗಾಲು ತೋಡಿಗೆ ಒದ್ದು ಗುಪ್ತಗಾಯ ಮಾಡಿದರು. ಮಲ್ಲಮ್ಮಳು ತನ್ನ ಕೈಯಿಂದ ದೇವಮ್ಮಳ ಎದೆಗೆ ಗುದ್ದಿ ಗುಪ್ತಗಾಯ ಮಾಡಿದಳು. ಮಲ್ಲಮ್ಮ ಮತ್ತು ಲಕ್ಷ್ಮೀ ಇಬ್ಬರು ಕೂಡಿ ನಾಗಮ್ಮಳಿಗೆ ನೆಲಕ್ಕೆ ಹಾಕಿ ಎಳೆದಾಡಿದ್ದರಿಂದ ಎಡಗಾಲಿಗೆ ತರಚಿದ ಗಾಯವಾಗಿದ್ದು ಇರುತ್ತದೆ. ಮಲ್ಲಮ್ಮ ಮತ್ತು ಲಕ್ಷ್ಮೀ ಇಬ್ಬರು ಕೂಡಿ ನನಗೆ ನೆಲಕ್ಕೆ ಹಾಕಿ ಎಳೆದಾಡಿದ್ದರಿಂದ ಎಡಗೈ ಉಂಗುರ ಬೆರಳಿಗೆ ತರಚಿದ ಗಾಯ ವಾಗಿದು ಇರುತ್ತದೆ. ಅಲ್ಲೆ ಇದ್ದ ಮಲ್ಲಿಕಾಜರ್ುನ್ ತಂದೆ ಬಸಪ್ಪ ಮಾಸ್ತಿ, ಆಗ ಅಲ್ಲಿಗೆ ಬಂದ್ದ ನನ್ನ ಮಗ ಅಂಬ್ರೀಶ ತಂದೆ ರಾಮಣ್ಣ, ಅಲ್ಲೆ ಹೊರಟಿದ್ದ ರಾಮಣ್ಣ ತಂದೆ ಶಿವಲಿಂಗಪ್ಪ ಮಡಿವಾಳ ಇವರು ಬಂದು ಜಗಳ ನೋಡಿ, ಜಗಳ ಬಿಡಿಸಿಕೊಂಡರು. ಈ ಮೇಲಿನ 8 ಜನರು ನಮಗೆ ಇವತ್ತು ಉಳಿದುಕೊಂಡಿರಿ ಮಕ್ಕಳೆ ಇನ್ನೋಮ್ಮಿ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವಸಹಿತ ಬಿಡುವದಿಲ್ಲಾ ಅಂತ ಜೀವಬೆದರಿಕೆ ಹಾಕಿದರು, ಸದರಿ ಜಗಳವು ಸಂತೋಷ ಇವರ ಮನೆಯ ಮುಂದೆ ರಸ್ತೆಯ ಮೇಲೆ ಬೇಳಿಗ್ಗೆ 7-00 ಗಂಟೆಗೆ ಜರುಗಿರುತ್ತದೆ. ಆಗ ಅಂಬ್ರೀಶ, ಮಲ್ಲಿಕಾಜರ್ುನ ಇಬ್ಬರು ಕೂಡಿ ನನಗೆ ಮತ್ತು ರಾಮಣ್ಣನಿಗೆ. ವೆಂಕಟೇಶನಿಗೆ, ಮಾನಯ್ಯನಿಗೆ, ದೇವಮ್ಮಳಿಗೆ, ನಾಗಮ್ಮಳಿಗೆ, ಒಂದು ವಾಹನಗಲ್ಲಿ ಕರೆದುಕೊಂಡು ಬಂದು ಶಹಾಪುರದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿದರಿಂದ ಉಪಚಾರ ಪಡೆದಿರುತ್ತೆವೆ ನಮಗೆ ಉಪಚಾರ ಮಾಡಿದ ವ್ಯದ್ಯಾಧಿಕಾರಿಗಳು ರಾಮಣ್ಣನಿಗೆ, ವೆಂಕಟೇಶನಿಗೆ, ಮಾನಯ್ಯನಿಗೆ, ದೇವಮ್ಮಳಿಗೆ, ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಮಲ್ಲಿಕಾಜರ್ುನ್ ಈತನು ಅಂಬುಲೇನ್ಸದಲ್ಲಿ ಕರೆದುಕೊಂಡು ಕಲಬುರಗಿಯ ಯುನಿಟೇಡ್ ಆಸ್ಪತ್ರೆಗೆ ಕರೆದುಕೊಂಡು ಹೋದನು. ಕಾರಣ ನಮಗೆ ಹೊಡೆಬಡೆ ಮಾಡಿ ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ನಿಡಿದ್ದು ಇರುತ್ತದೆ, ಸದರಿ ದೂರಿನ ಸಾರಾಂಶದ ಮೆಲಿಂದ ಠಾಣೆಯ ಗುನ್ನೆ ನಂ 239/2021 ಕಲಂ 143,147,148,323,324,504,506,ಸಂ,149 ಐ,ಪಿ,ಸಿ, ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಗೆ ಕೈಕೊಂಡೆನು.

 

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 172/2021 ಕಲಂ: 143, 147, 323, 324, 354, 447, 504, 506 ಸಂ. 149 ಐಪಿಸಿ : ಇಂದು ದಿನಾಂಕ:12/11/2021 ರಂದು 1.00 ಪಿ.ಎಂಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿ ಶಂಕ್ರೆಮ್ಮ ಗಂಡ ಬಲಭೀಮರಾಯ ಬನ್ನೆಟ್ಟಿ ವ|| 30 ವರ್ಷ ಜಾ|| ಕುರಬರ ಉ|| ಹೊಲಮನೆಗೆಲಸ ಸಾ|| ಬೈರಿಮಡ್ಡಿ ಇವರ ಠಾಣೆಗೆ ಬಂದು ಒಂದು ಗಣಕಿಕರಿಸಿದ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ನನಗೆ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು ಒಟ್ಟು 03 ಮಕ್ಕಳಿರುತ್ತಾರೆ. ನಮ್ಮೂರ ಸಿಮಾಂತರದ ನಮ್ಮ ಮೈದುನನಾದ ದೇವಿಂದ್ರಪ್ಪ ತಂದೆ ಭಗವಂತಪ್ಪ ರವರ ಹೆಸರಿನಲ್ಲಿ ಹೊಲ ಸವರ್ೇ ನಂ.61 ರಲ್ಲಿ 4 ಎಕರೆ 20 ಗುಂಟೆ ಜಮೀನು ಇದ್ದು ಮತ್ತು ನಮ್ಮ ಮಾವನಾದ ಭಗವಂತಪ್ಪ ಬನ್ನೆಟ್ಟಿ ಇವರ ಹೆಸರಿನಲ್ಲಿ ಹೊಲ ಸವರ್ೇ ನಂ. 55 ರಲ್ಲಿ 7 ಎಕರೆ 10 ಗುಂಟೆ ಜಮೀನು ಇರುತ್ತದೆ. ಈ ಎರಡು ಹೊಲಗಳ ಮದ್ಯದಲ್ಲಿ ದಿ. ಮಾಳಪ್ಪ ತಂದೆ ರಾಯಪ್ಪ ಬನ್ನೆಟ್ಟಿ, ಸಿದ್ದಮ್ಮ ಗಂಡ ರಾಯಪ್ಪ ಬನ್ನೆಟ್ಟಿ ಇವರ ಹೊಲ ಇದ್ದು ಮೊದಲಿನಿಂದಲು ನಮ್ಮ ಹೊಲಗಳಿಗೆ ಹೊಗ ಬೇಕಾದರೆ ಅವರ ಹೊಲದಲ್ಲಿ ದಾರಿ ಇದ್ದುದರಿಂದ ಅಲ್ಲಿ ಹಾದು ಹೊಗುತ್ತಿದ್ದೇವು. ಈಗ ಸುಮಾರು 6 ತಿಂಗಳ ಹಿಂದೆ ನಮ್ಮ ಹೊಲದಲ್ಲಿ ದಾರಿ ಇರುವುದಿಲ್ಲ ನೀವು ಬೇರೆ ಕಡೆಗೆ ಹಾದು ಹೊಗಿರಿ ಅಂತಾ ಅಂದಿದಕ್ಕೆ ನಾವು ಸುಮ್ಮನಾಗಿ ಬಾಜು ಹೊಲದಲ್ಲಿ ಹಾದು ಹೊಗುತ್ತಿದ್ದೇವು. ಆದರೂ ನಮ್ಮ ಜೊತೆ ಸಣ್ಣ ಪುಟ್ಟ ವಿಷಯಕ್ಕೆ ಜಗಳ ಮಾಡುತ್ತಾ ಬಂದ್ದಿದ್ದರು ನಾವು ಸುಮ್ಮನೆ ಇರುತ್ತದ್ದೇವು. ಹಿಗಿದ್ದು ದಿನಾಂಕ:09/11/2021 ರಂದು ಮುಂಜಾನೆ 7 ಗಂಟೆಗೆ ನಾನು ಮತ್ತು ನನ್ನ ಗಂಡ ಬಲಭೀಮರಾಯ ವ|| 35 ವರ್ಷ ನಮ್ಮ ಮೈದುನ ದೇವಿಂದ್ರಪ್ಪ ವ|| 30 ವರ್ಷ ಎಲ್ಲರು ಕೂಡಿ ನಮ್ಮ ಹೊಲ ಸವರ್ೆ ನಂ.1/2 ನೇದ್ದರಲ್ಲಿ ಕವಳಿ ಸಸಿ ಮಡಿಗೆ ನೀರು ಬಿಡಲು ಹೊದಾಗ ನಮ್ಮೂರ ನಮ್ಮ ಜನಾಂಗದರವಾರ 1) ಹಣಮಂತ ತಂದೆ ಬಸಣ್ಣ ಸಣ್ಣಮಲ್ಲಪ್ಪರ್ 2) ಭೀಮಣ್ಣ ತಂದೆ ಬಸಣ್ಣ ಸಣ್ಣಮಲ್ಲಪ್ಪರ್ 3) ಸಾಯಬಣ್ಣ ತಂದೆ ಬಸಣ್ಣ ಸಣ್ಣಮಲ್ಲಪ್ಪರ್ 4) ಮೌನೇಶ ತಂದೆ ಭೀಮಣ್ಣ ಸಣ್ಣಮಲ್ಲಪ್ಪರ್ 5) ವಗ್ಗಪ್ಪ ತಂದೆ ಮಲ್ಲಪ್ಪ ಮುಡಬೂಳ 6) ಗೌರಮ್ಮ ಗಂಡ ವಗ್ಗಪ್ಪ ಮುಡಬೂಳ, 7) ಅಯ್ಯಮ್ಮ ಗಂಡ ವಗ್ಗರಾಯಪ್ಪ ಬನ್ನೆಟ್ಟಿ, 8) ಸಿದ್ದಮ್ಮ ಗಂಡ ಮಾಳಪ್ಪ ಬನ್ನೆಟ್ಟಿ 9) ಹಣಮಂತಿ ಗಂಡ ಹಣಮಂತ ಸಣ್ಣಮಲ್ಲಪ್ಪರ 10) ಮಲ್ಲಮ್ಮ ಗಂಡ ಭೀಮಣ್ಣ ಸಣ್ಣಮಲ್ಲಪ್ಪರ, ಎಲ್ಲರುಕೂಡಿ ಅಕ್ರಮಕೂಟ ರಚಿಸಿಕೊಂಡು ನಮ್ಮ ಹೊಲದಲ್ಲಿ ಹಾದು ತಮ್ಮ ಹೊಲಕ್ಕೆ ಹೊಗುವಾಗ ನಾನು ಹನಮಂತ ಸಣ್ಣಪ್ಪಲ್ಲಪರ್ ಇತನಿಗೆ ನೀವು ಯಾಕೆ ನಮ್ಮ ಹೊಲದಲ್ಲಿ ಹಾದು ಹೊಗುತ್ತಿರಿ, ನೀವು ನಿಮ್ಮ ಹೊಲದಲ್ಲಿಂದ ನಮ್ಮ ಹೊಲಕ್ಕೆ ಹೊಗಲು ದಾರಿ ಇರುವುದಿಲ್ಲ ಅಂತಿರಿ ಅಂತಾ ಕೇಳಿದಕ್ಕೆ ಏಲೇ ಬೊಸಡಿ ಸೂಳಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಹಣಮಂತ ಇತನು ನನಗೆ ತನ್ನ ಕೈಯಿಂದ ಹೊಟ್ಟೆಗೆ ಎದೆಗೆ ಹೊಡೆದು ಸೀರೆ ಸೇರಗ ಹಿಡಿದು ಎಳೆದಾಡಿ ಅವಮಾನಗೊಳಿಸಿದನು, ಮೌನೇಶ ಇತನು ನನ್ನ ಕುದಲು ಹಿಡಿದು ಎಳೆದಾಡಿ, ಅಯ್ಯಮ್ಮ, ಮಲ್ಲಮ್ಮ ಇವರು ಕೈಯಿಂದ ಹೊಟ್ಟೆಗೆ, ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದರು. ಬಡಿಸಲು ಬಂದ ನನ್ನ ಗಂಡ ಬಲಭೀಮರಾಯ ಇತನಿಗೆ ಭೀಮಣ್ಣ ಇತನು ಅಲ್ಲೆ ಬಿದ್ದ ಒಂದು ಬಡಿಗೆಯಿಂದ ತೆಲೆಗೆ, ಬಲ ಬುಜಕ್ಕೆ, ಎಡಗೈ ರಟ್ಟೆಗೆ ಹೊಡೆದು ಗುಪ್ತಗಾಯ ಮಾಡಿದನು, ಸಾಯಬಣ್ಣ ಇತನು ಅಲ್ಲೆ ಬಿದ್ದ ಒಂದು ಹಿಡಿ ಗಾತ್ರದ ಕಲ್ಲು ತಗೆದುಕೊಂಡು ಮೂಗಿಗೆ ಹೊಡೆದು ರಕ್ತಗಾಯ ಮಾಡಿ ಕೈಯಿಂದ ಹೊಟ್ಟೆಗೆ, ಎದೆಗೆ, ಹೊಡೆದು ಗುಪ್ತಗಾಯ ಮಾಡಿದನು, ಸಿದ್ದಮ್ಮ ಇವಳು ಕಾಲಿನಿಂದ ಹೊಟ್ಟೆಗೆ ಒದ್ದಳು. ಬಿಡಿಸಲು ಬಂದ ನನ್ನ ಮೈದುನನಾದ ದೇವಿಂದ್ರಪ್ಪ ಇತನಿಗೆ ವಗ್ಗಪ್ಪ ಇತನು ನೆಲಕ್ಕೆ ಕಡೆವಿ ಅಲ್ಲೆ ಬಿದ್ದು ಒಂಡು ದೊಡ್ಡ ಗಾತ್ರ ಕಲ್ಲು ತಗೆದುಕೊಂಡು ಬೆನ್ನಿನ ಮೇಲೆ ಎತ್ತಿ ಹಾಕಿ ರಕ್ತಗಾಯ ಮಾಡಿದನು, ಗೌರಮ್ಮ ಇವಳು ಕೈಯಿಂದ ಪಕ್ಕಡಿಗೆ ಹೊಡೆದಳು, ಹಣಮಂತಿ ಇವಳು ಕಾಲನಿಂದ ಸೊಂಟಕ್ಕೆ ಹೊಡೆದು ಗುಪ್ತಗಾಯ ಮಾಡಿದರು. ಆಗ ಅಲ್ಲೆ ಆಜು ಬಾಜು ಹೊಲದವರು ಮತ್ತು ತಮ್ಮ ತಮ್ಮ ಹೊಲಗಳಿಗೆ ಹೊರಟಿದ್ದ ವೆಂಕಟೇಶ ತಂದೆ ವೆಂಕಪ್ಪ ನಾಯ್ಕೋಡಿ, ಹೊನ್ನಮ್ಮ ಗಂಡ ಹಣಮಂತ ಮಾಲಗತ್ತಿ, ರಂಗಪ್ಪ ತಂದೆ ಪಾಂಡುರಂಗ ದೋರೆ, ಮಲ್ಲಮ್ಮ ಗಂಡ ಬಸವರಾಜ ಹುಂಡೆಕಲ್ ಎಲ್ಲರು ಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ಅವರೆರಲ್ಲು, ಇವರು ಬಂದು ಜಗಳ ಬಿಡಿಸಿದ್ದಾರೆ ಅಂತಾ ಇವತ್ತು ನಿಮಗೆ ಬಿಟ್ಟಿವಿ ಸೂಳೆ ಮಕ್ಕಳೆ ಇಲ್ಲದಿದ್ದರೆ ನಿಮ್ಮ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಅಲ್ಲಿಂದ ಹೊರಟು ಹೊದರು. ಗಾಯಗೊಂಡ ನಾವು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರದಲ್ಲಿ ಸೇರಿಕೆ ಆದೇವು. ಹೆಚ್ಚಿನ ಉಪಚಾರ ಕುರಿತು ನಮಗೆ ಯಾದಗಿರಿ ಸರಕಾರಿ ಆಸ್ಪತ್ರೆಗೆ ಹೊಗಲು ಹೇಳಿದ್ದರಿಂದ ನಾವು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಯಾದಗಿರಿಗೆ ಹೊಗಿ ಸೇರಿಕೆಯಾಗಿ ಉಪಚಾರ ಪಡೆದುಕೊಂಡೇವು, ನನ್ನ ಗಂಡ ಮತ್ತು ಮೈದುನ ಇನ್ನೂ ಉಪಚಾರ ಪಡೆಯುತ್ತಿದ್ದು, ನನಗೆ ಬಿಡುಗಡೆಗೊಳಿಸಿದ್ದರಿಂದ ನಾನು ನನ್ನ ಗಂಡನ ಜೊತೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ನೀಡಿರುತ್ತೇನೆ. ಕಾರಣ ನನಗೆ ಕೈಯಿಂದ ಹೊಡೆದು ನನ್ನೆ ಸೀರೆ ಸೇರಗ ಹಿಡಿದು ಎಳೆದಾಡಿ ಅವಮಾನ ಮಾಡಿದಲ್ಲದೇ, ನನ್ನ ಗಂಡ ಬಲಭೀಮರಾಯ, ಮೈದುನ ದೇವವಿಂದ್ರಪ್ಪ ಇವರಿಗೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಬಡಿಗೆಯಿಂದ, ಕಲ್ಲಿನಿಂದ, ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ವಿನಂತಿ ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 172/2021 ಕಲಂ: 143, 147, 323, 324, 354, 447, 504, 506 ಸಂ.149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 13-11-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080