ಅಭಿಪ್ರಾಯ / ಸಲಹೆಗಳು

 ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-11-2022

ಯಾದಗಿರಿ ಮಹಿಳಾ ಪೊಲೀಸ್ ಠಾಣೆ

ಗುನ್ನೆ ನಂ: 55/2022 ಕಲಂ: 363 ಐ.ಪಿ.ಸಿ : ಇಂದು ದಿನಾಂಕ: 12.11.2022 ರಂದು ಸಂಜೆ 7.30 ಗಂಟೆಗೆ ಶ್ರೀ ಜಿತೇಂದ್ರ ತಂದೆ ಲಕ್ಷ್ಮಣ ರಾಠೋಡ್ ವಯಾ-27 ವರ್ಷ ಜಾತಿ- ಲಮ್ಹಾಣಿ ಸಾ-ಮುದ್ನಾಳ ದೊಡ್ಡ ತಾಂಡಾ (ಗೃಹ ಪಾಲಕನ ಬಾಲಕರ ಬಾಲ ಮಂದಿರ ಯಾದಗಿರಿ )ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಫ್ ಮಾಡಿರುವ ದೂರನ್ನು ಹಾಜರಪಡಿಸಿದ್ದು, ಅದರ ಸಾರಂಶವೇನೆಂದರೆ, ದಿನಾಂಕ: 05.11.2022 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಯಾದಗಿರಿ ಹೊಸ ಬಸ್ ನಿಲ್ದಾಣದ ಹತ್ತಿರ ಒಬ್ಬ  ಹುಡಗನು ತಿರುಗಾಡುತ್ತಿದ್ದಾಗ 1098 ಚೈಲ್ಡ್ ಲೈನ್ ಸಿಬ್ಬಂದಿಯವರಾದ 1. ನಾಗಪ್ಪ ಗಮಗ, 2. ಮಂಜಮ್ಮ ಸಾಮಾಜಿಕ ಕಾರ್ಯಾಕರ್ತರು ಡಿ.ಸಿ.ಪಿ.ಓ ಯಾದಗಿರಿ, 3] ಶರಣಪ್ಪ .ಕೆ. ಮಕ್ಕಳ ಸಹಾಯವಾಣಿ ಯಾದಗಿರಿ 4] 112 ವಾಹನದ ಸಿಬ್ಬಂದಿಯಾದ ಬುಗ್ಗಪ್ಪ ಸಿ.ಪಿ.ಸಿ-283  ರವರು ಕಾರ್ಯಚರಣೆ ಮಾಡುವ ವೇಳೆಯಲ್ಲಿ ಬಾಲಕನು ಸಿಕ್ಕಿದ್ದು, ಅವನನ್ನು ಹಿಡಿದು ವಿಚಾರಣೆ ಮಾಡಲಾಗಿ ಸದರಿಯವನು ತನ್ನ ಹೆಸರು  ಪವ್ಹನ್ ತಂದೆ  ಠಾಕ್ರ್ಯಪ್ಪ ವಯಾ-14 ವರ್ಷ ಸಾ-ಲಿಂಗಸೂಗುರು ತಾಲೂಕಿನ ಕಾಳಪೂರ ತಾಂಡ ಅಂತ ಹೇಳಿರುತ್ತಾನೆ. ಬಾಲಕನು ತನ್ನ ವಿಳಾಸವನ್ನು ಸರಿಯಾಗಿ ಹೇಳದೆ ಇದ್ದುದ್ದರಿಂದ ಆತನನ್ನು ಮಕ್ಕಳ ಸಹಾಯವಾಣಿ ಕೇಂದ್ರದವರು ವಶಕ್ಕೆ ಪಡೆದುಕೊಂಡು  ಯಾದಗಿರಿಯ ಬಾಲಕರ ಬಾಲಮಂದಿರಕ್ಕೆ ಅದೇ ದಿನ ಬೆಳಿಗ್ಗೆ 11.00 ಗಂಟೆಗೆ CMC ಯಾದಗಿರಿ ರವರ  ಮುಂದೆ ಹಾಜರಪಡಿಸಿದ್ದು, ಸದರಿ ಮಗುವಿಗೆ ವಿಚಾರಿಸಿದಾಗ ನಾನು ಕೆಂಬಾವಿಗೆ ನನ್ನ ಅಕ್ಕಳ ಹತ್ತಿರ ಹೋಗುತ್ತಿರುವುದಾಗಿ ಹೇಳಿರುತ್ತಾನೆ. ಬಾಲಕನು ಸರಿಯಾದ ವಿಳಾಸ ಮತ್ತು ಆತನ ಇರುವಿಕೆಯ ಬಗ್ಗೆ ಕೌನ್ಸಲಿಂಗನಲ್ಲಿ ಸರಿಯಾಗಿ ಸ್ಪಂದಿಸದೇ ಇದ್ದುದ್ದರಿಂದ ಆತನ ಸರಿಯಾದ ವಿಳಾಸ ಪತ್ತೆ ಹಚ್ಚುವವರೆಗೆ, ಸದರಿ ಬಾಲಕನನ್ನು ನಮ್ಮಲ್ಲಿ ಅಂದರೆ ಬಾಲಕರ ಬಾಲ ಮಂದಿರದಲ್ಲಿ ಇಟ್ಟುಕೊಳ್ಳಲು ರವರು ತಿಳಿಸಿದ್ದರು. ಅದರಂತೆ ನಾವು ಆತನನ್ನು ಇಟ್ಟುಕೊಂಡಿದ್ದೇವು. ಸದರಿ ಬಾಲಕ ಪವ್ಹನ್ ತಂದೆ ಠಾಕ್ರ್ಯಾಪ್ಪ ಈತನು ದಿನಾಂಕ: 05.11.2022 ರಿಂದ ದಿನಾಂಕ: 10.11.2022 ರವರಗೆ ಬಾಲಕರ ಬಾಲ ಮಂದಿರದಲ್ಲಿ ಇದ್ದು, ದಿನಾಂಕ: 10.11.2022 ರಂದು ಬೆಳಿಗ್ಗೆ 6.00 ಗಂಟೆಗೆ ಯಾರಿಗೂ ಹೇಳದೆ ಕೇಳದೆ ಬಾಲಕರ ಬಾಲ ಮಂದಿರದಿಂದ ಕಾಣೆಯಾಗಿರುತ್ತಾನೆ. ಬಾಲಕರ ಮಂದಿರದ ಸಿ.ಸಿ ಟಿ.ವಿಯಲ್ಲಿ ಪರಿಶೀಲಿಸಿದ್ದು, ಬಿಲ್ಡಿಂಗದಿಂದ ಕೆಳಗಡೆ ಇಳಿದು ಯಾವುದೋ ಒಂದು ಸ್ಕೋಟಿ ವಾಹನದವರಿಗೆ ನಿಲ್ಲಿಸಿ ಡ್ರಾಫ್ ಕೇಳಿ ಅದರ ಮೇಲೆ ಕುಳಿತುಕೊಂಡು ಹೋಗಿರುತ್ತಾನೆ. ನಂತರ ಸಿ.ಸಿ. ಟಿ.ವಿಯಲ್ಲಿ ಸೆರೆಯಾಗಿದ್ದ ಸ್ಕೋಟಿ ವಾಹನದ ಮಾಲೀಕರನ್ನು ಪತ್ತೆ ಮಾಡಿ ವಿಚಾರಿಸಿದ್ದು, ಬಾಲಕನು ತಾನೂ ಟಿವ್ಹೀಶನ್ ಗೆ ಹೋಗುತ್ತಿದ್ದೇನೆ ಹಳೆ ಬಸ್ ನಿಲ್ದಾಣದ ಹತ್ತಿರ ಬಿಡಲು ಹೇಳಿದ್ದು, ಆತನು ನನಗೆ  10 ರೂ ಕೊಡುವಂತೆ ಕೇಳಿದನು. ಆಗ ನಾನು ಬಾಲಕನಿಗೆ  50 ರೂ ಕೊಟ್ಟು ಹಳೆ ಬಸ್ ನಿಲ್ದಾಣದ ಹತ್ತಿರ ಬಿಟ್ಟು ಹೋಗಿರುತ್ತೇನೆ ಅಂತ ತಿಳಿಸಿರುತ್ತಾರೆ. ಸ್ಕೋಟಿ ವಾಹನದ ಮಾಲೀಕರ ಹೆಸರು ನಂತರ ತಿಳಿದುಕೊಂಡು ಹೇಳುತ್ತೇನೆ.  ಆತನು ಆ ದಿನ ಹೋಗುವಾಗ ಜೀನ್ಸ ಪ್ಯಾಂಟು, ಮತ್ತು ಎಂಬ್ರಾಡರಿ ಮಾಡಿದ ಜೀನ್ಸ್ ಶರ್ಟ ಹಾಕಿಕೊಂಡಿರುತ್ತಾನೆ. ಸದರಿ ಬಾಲಕನು ಕನ್ನಡ, ಹಿಂದಿ, ತೆಲಗು, ಇಂಗ್ಲೀಷ, ಮರಾಠಿ ಬೋಜಪೂರಿ ಭಾಷೆ ಮಾತನಾಡುತ್ತಾನೆ. ಸದರಿ ಬಾಲಕನು ದುಂಡು ಮುಖ, ಸದೃಡವಾದ ಮೈಕಟ್ಟು ಹೊಂದಿದ್ದು ಎತ್ತರ 4’ 2’’ ಇಂಚಿನಷ್ಟು ಇರುತ್ತಾನೆ. ಕಾಣೆಯಾದ ಬಾಲಕನನ್ನು ಎಲ್ಲಾ ಕಡೆ ಹುಡುಕಾಡಲಾಗಿ ಸಿಗದೇ ಇದ್ದುದ್ದರಿಂಧ ಈ ದಿನ ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ಧೇನೆ. ದಿನಾಂಕ: 05.11.2022 ರಂದು ಬೆಳಿಗ್ಗೆ 10.00 ಗಂಟೆಗೆ ಯಾದಗಿರಿ ಹೊಸ ಬಸ್ ನಿಲ್ದಾಣದಲ್ಲಿ ತಿರುಗಾಡುತ್ತಿದ್ದ ಬಾಲಕ ಪವ್ಹನ್ ತಂದೆ ಠಾಕ್ರ್ಯಪ್ಪ ಈತನನ್ನು ಮಕ್ಕಳ ಸಹಾಯವಾಣಿ ಕೇಂದ್ರದವರು ಹಿಡಿದು ತಂದು ನಮ್ಮ ಬಾಲಕರ ಬಾಲ ಮಂದಿರಕ್ಕೆ ಒಪ್ಪಿಸಿದ್ದು, ಸದರಿ ಬಾಲಕನು ಬಾಲಕರ ಬಾಲ ಮಂದಿರದಿಂದ ಯಾರಿಗೂ ಹೇಳದೇ ಕೇಳದೆ ದಿನಾಂಕ: 10.11.2022 ರಂದು ಬೆಳಿಗ್ಗೆ 6.00 ಗಂಟೆಗೆ ಹೋಗಿ ಕಾಣೆಯಾಗಿದ್ದು, ಸದರಿ ಬಾಲಕನನ್ನು ಪತ್ತೆ ಮಾಡಿಕೊಡಲು ಈ ಮೂಲಕ ವಿನಂತಿ ಅಂತ ಕೊಟ್ಟ ದೂರಿನ ಸಾರಂಶದ ಆಧಾರದ ಮೇಲಿಂದ ಠಾಣೇ ಗುನ್ನೆ ನಂ:  55/2022 ಕಲಂ:  363 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 14-11-2022 11:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080